All posts by nagaraj11081993

‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಮಾಡಲು ಬಿಡಲ್ಲ: ವಾಟಾಳ್ ಕ್ಯಾತೆ – Kannada News

ಪ್ಯಾನ್ ಇಂಡಿಯಾ (Pan India) ಜಮಾನಾನಲ್ಲಿ ಒಂದು ರಾಜ್ಯದ ಸಿನಿಮಾ ಮತ್ತೊಂದು ರಾಜ್ಯದಲ್ಲಿ ಬಿಡುಗಡೆ ಆಗುವುದು ಸಾಮಾನ್ಯ ವಿಷಯ ಎಂದಾಗಿದೆ. ಕರ್ನಾಟಕವಂತೂ ಪ್ಯಾನ್ ಇಂಡಿಯಾ ಮಾರುಕಟ್ಟೆಯ ಬಲು ಪ್ರಮುಖ ನಗರವಾಗಿದೆ. ಐಪಿಎಲ್ ಮುಗಿದಿದ್ದು, ಸಾಲು-ಸಾಲು ಸಿನಿಮಾಗಳು ಬಿಡುಗಡೆಗೆ ತಯಾರಾಗುತ್ತಿವೆ. ಅವುಗಳಲ್ಲಿ ಕೆವಿಎನ್ ನಿರ್ಮಾಣದ ತಮಿಳುನಾಡಿ ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಹ ಒಂದು. ಆದರೆ ಇದೀಗ ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್ ಮಾತನಾಡಿ, ತಾವು ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಬಿಡುಗಡೆಗೆ ತಡೆಯುತ್ತೇವೆ ಎಂದಿದ್ದಾರೆ.

ಇಂದು (ಜೂನ್ 05) ಮಾಧ್ಯಮಗಳ ಜೊತೆಗೆ ಮಾತನಾಡಿದ ವಾಟಾಳ್ ನಾಗರಾಜ್, ‘ಈಗಿನ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ನಟರಾಗಿದ್ದವರು ಈಗ ಅಧಿಕಾರಕ್ಕೆ ಬಂದಿದ್ದಾರೆ. ನಟನೆ ಮಾಡುವುದು ಸುಲಭ ಆದರೆ ಅಧಿಕಾರ ನಡೆಸುವುದು ಕಷ್ಟ. ಮೇಕೆದಾಟಿಗೆ ವಿರೋಧ ಮಾಡಿದರೆ ಕರ್ನಾಟಕದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ’ ಎಂದು ವಾಟಾಳ್ ಹೇಳಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಪಾತ್ರದ ಬಗ್ಗೆ ಟೀಕೆ ಏಕೆ?

ಈಗಾಗಲೇ ಕಮಲ್ ಹಾಸನ್ ಅವರ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲು ಯಶಸ್ವಿ ಆಗಿದ್ದೇವೆ. ಕಮಲ್ ಹಾಸನ್, ಕನ್ನಡದ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದನ್ನು ವಿರೋಧಿಸಿ ಅವರಿಗೆ ಬುದ್ಧೀ ಕಲಿಸಿದ್ದೇವೆ. ಅದೇ ರೀತಿ, ಮೇಕೆದಾಟಿಗೆ ವಿರೋಧ ಮಾಡುತ್ತಿರುವ ತಮಿಳುನಾಡು ಸಿಎಂ ಅವರಿಗೂ ನಾವು ಬುದ್ಧಿ ಕಲಿಸುತ್ತೇವೆ’ ಎಂದು ವಾಟಾಳ್ ಹೇಳಿದ್ದಾರೆ. ವಿಜಯ್ ಅವರು ಸಿಎಂ ಆದ ಬಳಿಕ ಮೇಕೆದಾಟು ವಿವಾದದ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಪುನರ್​​ಪರಿಶೀಲನೆ ಅರ್ಜಿ ಹಾಕಿದ್ದಾರೆ. ಅಲ್ಲದೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆದಾಗ ಮೇಕೆದಾಟು ಬಗ್ಗೆ ಪ್ರಸ್ತಾಪಿಸಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರ ಈ ಕರ್ನಾಟಕ ವಿರೋಧಿ ಚಿಂತನೆ ಕನ್ನಡಪರ ಸಂಘಟನೆಗಳನ್ನು ಕೆರಳಿಸಿದೆ.

ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗುವ ಸಾಧ್ಯತೆ ಇದೆ. ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈ ವರೆಗೆ ಬಿಡುಗಡೆ ಆಗಿಲ್ಲ. ಕೆವಿಎನ್ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದೆ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದಲ್ಲಿ ನಿರ್ಮಾಪಕರಿಗೆ ಭಾರಿ ದೊಡ್ಡ ನಷ್ಟವೇ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಇಲ್ಲ: ಕಡ್ಡಿ ಮುಂರಿದಂತೆ ಹೇಳಿದ ಹೈಕಮಾಂಡ್ – Kannada News

ಬೆಂಗಳೂರು, (ಜೂನ್ 05): ಸರ್ಕಾರ ರಚನೆಯಾಗಿ ಎರಡು ದಿನವಾಯ್ತು. 48 ಗಂಟೆ ಕಳೆಯೊವಷ್ಟರಲ್ಲೇ ಅಸಮಾಧಾನದ ಬಾಂಬ್ ಸಿಡಿದಿದೆ. ಕೊಟ್ಟ ಮಾತು, Word Power is World Power ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದ ಮಾತನ್ನ ಉಲ್ಲೇಖಿಸಿ ರಾಮಲಿಂಗಾರೆಡ್ಡಿ  (DK Shivakumar)  ಬೆಂಬಲಿಗರು ರಾಂಗ್ ಆಗಿದ್ರೆ, ಇನ್ನೊಂದೆಡೆ ಬೆಂಗಳೂರಿನ ಪವರ್ ಫುಲ್ ರಾಜಕಾರಣಿ ರಾಮಲಿಂಗಾರೆಡ್ಡಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೌದು…ಸರ್ಕಾರಕ್ಕೆ ಬಂಗಾರದ ಖಜಾನೆ, ಸರ್ಕಾರದ ಆರ್ಥಿಕತೆಯ ಪವರ್ ಹೌಸ್ ಇದೇ ಪವರ್ ಹೌಸ್‌ಗಾಗಿ ಡಿಕೆ ಸರ್ಕಾರದಲ್ಲಿ ಹಗ್ಗಜಗ್ಗಾಟ ನಡೀತಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಿಗುತ್ತೆಂಬ ನಿರೀಕ್ಷೆಯಲ್ಲಿದ್ದ ಸೌಮ್ಯ ಸ್ವಭಾದ ರಾಜಕಾರಣಿ, ಬೆಂಗಳೂರಲ್ಲಿ ಹಿಡಿತ ಹೊಂದಿರುವ ನಾಯಕ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದು, ನೀವು ಕೊಟ್ಟ ಜಲಸಂಪನ್ಮೂಲ ಸಚಿವ ಸ್ಥಾನ ನನಗೆ ಬೇಡ. ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಆಗಲ್ಲ ಅಂತಾ ಮಂತ್ರಿ ಸ್ಥಾನ ತೊರೆದಿದ್ದಾರೆ. ಇದರಿಂದ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಸಿಎಂ ಡಿಕೆ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಹೈಕಮಾಂಡ್ ಮಾತ್ರ ಯಾವುದೇ ಕಾರಣಕ್ಕೂ ಖಾತೆ ಬದಲಾವಣೆ ಇಲ್ಲ ಎಂದು ಕಡ್ಡಿ ಮುಂರಿದಂತೆ ಹೇಳಿದೆ.

ಮಾತುಕತೆ ಮೂಲಕ ರಾಮಲಿಂಗಾರೆಡ್ಡಿ ಮನವೊಲಿಸುವಂತೆ ಸಿಎಂ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿದೆ. ಆದ್ರೆ, ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಮಾಡಿ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲು ಹೈಕಮಾಂಡ್ ನಿರಾಕರಿಸಿದೆ. ಯಾಕಂದ್ರೆ, ಒಬ್ಬರ ಬೇಡಿಕೆಗೆ ಸ್ಪಂದಿಸಿದರೆ ಇತರೆ ಸಚಿವರು ಸಹ ತಮ್ಮ ಖಾತೆ ಬದಲಾವಣೆ ಮಾಡುವಂತೆ ಒತ್ತಡದ ಹೇರುವ ಸಾಧ್ಯತೆಗಳಿವೆ. ಈಗ ಮಾತ್ರವಲ್ಲ ಮುಂದೆ ಸಂಪುಟ ವಿಸ್ತರಣೆ ವೇಳೆಯೂ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆಗೆ ಹೈಕಮಾಂಡ್ ಒಪ್ಪಿಗೆ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು: ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಂಚನೆ – Kannada News

ಬೆಂಗಳೂರು, ಜೂನ್​ 05: ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಅಪರಿಚಿತರಿಬ್ಬರು ವಂಚನೆ (fraud) ಮಾಡಿದ್ದಾರೆ. ಜೀರಿಗೆ ಕಷಾಯ ಕುಡಿಸಿ 70 ಸಾವಿರ ರೂ ಹಣ ಪಡೆದು ಪರಾರಿಯಾಗಿರುವಂತಹ ಘಟನೆ ಬೆಂಗಳೂರು (bengaluru) ಚಂದ್ರಾಲೇಔಟ್ ವ್ಯಾಪ್ತಿಯ ಕಲ್ಯಾಣನಗರದಲ್ಲಿ ನಡೆದಿದೆ. ಸದ್ಯ ಮೋಸ ಹೋಗಿರುವ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರ ಸೆರೆಗೆ ಖಾಕಿ ಬಲೆ ಬೀಸಿದೆ.

ಮುಖ್ಯಾಂಶಗಳು

  • ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಕಿರಾತಕರು
  • 20 ದಿನದಲ್ಲಿ ಎದ್ದು ಓಡಾಡ್ತೀರಿ ಅಂತ ಪುಂಗಿದ್ದರು ವಂಚಕರು
  • ಜೀರಿಗೆ ಕಷಾಯ ಕುಡಿಸಿ 70 ಸಾವಿರ ಪೀಕಿದರು

ಅಪರಿಚಿತರಿಬ್ಬರಿಂದ ವಂಚನೆ

ಬೆಂಗಳೂರಿನ ಚಂದ್ರಾಲೇಔಟ್ ಬಳಿಯ ಕಲ್ಯಾಣನಗರ ನಿವಾಸಿ ಲಕ್ಷ್ಮಣ್​ ಎಂಬುವವರಿಗೆ ಅಪರಿಚಿತರಿಬ್ಬರು ವಂಚನೆ ಮಾಡಿದ್ದಾರೆ. ಲಕ್ಷ್ಮಣ್ ಎಂಬುವವರು ಸುಮಾರು ವರ್ಷಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಏನು ಪ್ರಯೋಜನ ಆಗಿರಲಿಲ್ಲ. ಹೀಗಿರುವಾಗ ಅದೊಂದು ವಂಚನೆಯ ಗ್ಯಾಂಗ್ ಇವರ ಬೆನ್ನು ಬಿದ್ದಿದ್ದಾರೆ. ಲಕ್ಷ್ಮಣ್​​ರವರ ಮಾಹಿತಿ ಪಡೆದು ಸಂಪರ್ಕ ಮಾಡಿದ ಐನಾತಿಗಳು ಪಾರ್ಶ್ವವಾಯುಗೆ ಚಿಕಿತ್ಸೆ ಕೊಡುತ್ತೇವೆ ಅಂತ ಹೇಳಿದ್ದಾರೆ. ಇವರ ಮಾತು ನಂಬಿದ ಲಕ್ಷ್ಮಣ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಪಾಕ್ ಉಗ್ರನ ಜತೆ ಯುವಕರಿಬ್ಬರ ನಂಟು ಬೆಸಿದಿದ್ಹೇಗೆ? ಇಲ್ಲಿದೆ ಕರ್ನಾಟಕ-ಪಾಕ್ ಜಾಲದ ರಹಸ್ಯ

ಪಾರ್ಶ್ವವಾಯುಗೆ ಗುಣಪಡಿಸುವುದಾಗಿ ಲಕ್ಷ್ಮಣ್ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರು, ಮೊದಲಿಗೆ ಮಲ್ಲೇಶ್ವರಂನ ಸಿದ್ದಾಶ್ರಮದಿಂದ ಬಂದಿರುವುದಾಗಿ ಹೇಳಿದ್ದಾರೆ. ನಂತರ ಲಕ್ಷಣ್ ಅವರ ಮನೆಯಲ್ಲೇ ಒಂದು ಗ್ಲಾಸ್​ನಲ್ಲಿ ಜೀರಿಗೆ ಕಷಾಯ ರೆಡಿ ಮಾಡಿ ಕುಡಿಸಿದ್ದಾರೆ. ಕಷಾಯ ಕುಡಿದ ನಂತರ ಈ ಕಿರಾತಕರು, ಇನ್ನು 20 ಇಪ್ಪತ್ತು ದಿನಗಳಲ್ಲಿ ನೀವು ಎದ್ದು ಓಡಾಡುತ್ತೀರಿ ಅಂತ ಪುಂಗಿದ್ದಾರೆ.  ಅಲ್ಲದೆ ಇದಕ್ಕೆ 70 ರೂ ಸಾವಿರ ಖರ್ಚಾಗತ್ತೆ ಅಂತ ಹೇಳಿದ್ದಾರೆ.

70 ಸಾವಿರ ರೂ ಹಣ ಪಡೆದು ಎಸ್ಕೇಪ್

ನಾಳೆಯಿಂದ ನಿಮ್ಮ ಮನೆಗೆ ಬಂದು ನಾವೇ ಮಸಾಜ್ ಮಾಡುತ್ತೇವೆ ಅಂತ ನಂಬಿಸಿದ್ದಾರೆ. ಕೇವಲ ಒಂದು ಲೋಟ ಕಷಾಯ ಕೊಟ್ಟು 70 ಸಾವಿರ ರೂ ಹಣ ಪಡೆದು ವಂಚಕರು ಎಸ್ಕೇಪ್ ಆಗಿದ್ದಾರೆ. ಇದಾದನಂತರ, ಯಾವುದೇ ಚಿಕಿತ್ಸೆಯನ್ನ ನೀಡದೆ, ಫೋನ್ ಸ್ವಿಚ್ ಆಫ್ ಮಾಡ್ಕೊಂಡು ಕಳ್ಳಾಟವಾಡಿದ್ದಾರೆ. ಇತ್ತ ಅನುಮಾನಗೊಂಡ ಲಕ್ಷ್ಮಣ್ ಮಲ್ಲೇಶ್ವರಂನ ಸಿದ್ದಾಶ್ರಮದ ಬಳಿ ಹೋಗಿ ವಿಚಾರಿಸಿದ್ದಾರೆ. ಆವಾಗ ಬಂದಿರುವವರು ವಂಚಕರು ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ

ಹಣ ಕೊಟ್ಟು ಮೋಸ ಹೋದ ಲಕ್ಷ್ಮಣ್, ಕೂಡಲೇ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕೆಲವು ವೈದ್ಯರು ಕೊಡುವ ಔಷಧಿಗಳಿಂದಲೇ ಕಾಯಿಲೆ ವಾಸಿಯಾಗುವುದಿಲ್ಲ. ಹೀಗಿರುವಾಗ ಜೀರಿಗೆ ನೀರು ಕುಡಿದರೆ ವಾಸಿಯಾಗುತ್ತಾ. ಇಂತಹ ಐನಾತಿಗಳ ಮಾತನ್ನ ನಂಬುವ ಮುಂಚೆ ಹುಷಾರಾಗಿರಿ. ಇಲ್ಲಾ ಅಂದರೆ ನೀವು ಸಾವಿರಾರ ರೂ ಕಳೆದುಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:24 pm, Fri, 5 June 26

Source link

ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಜಾಗದ ಮೇಲೆ ಕಣ್ಣಾಕಿದ ಕೇಂದ್ರ ಸರ್ಕಾರ! – Kannada News

ಬೆಂಗಳೂರು, (ಜೂನ್ 05): ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ (Karnataka Universities)  ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಪ್ರಮುಖವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. 1200 ಎಕರೆ ಜಾಗದಲ್ಲಿ ಸ್ಥಾಪನೆಯಾದ ಬೆಂಗಳೂರು ವಿಶ್ವವಿದ್ಯಾಲ ಕ್ರಮೇಣ ಕಿರಿದಾಗಿದ್ದು,  ಈಗಾಗಲೇ 300ಕ್ಕೂ ಹೆಚ್ಚು ಎಕರೆ ಜಾಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಸ್ಥೆಗಳಿಗೆ ಬಿಟ್ಟುಕೊಡಲಾಗಿದೆ. ಈ ವಿಚಾರಕ್ಕೆ ವಿರೋಧವಿದ್ದು,  ಇದರ ಮಧ್ಯೆ ಇದೀಗ ಮತ್ತೆ ಜ್ಞಾನಭಾರತಿ ಆವರಣದ ಮೇಲೆ  ಕೇಂದ್ರದ ಕಣ್ಣು ಬಿದ್ದಿದೆ. ಒಲಿಂಪಿಕ್ಸ್ ಟ್ರೈನಿಂಗ್ ಸೆಂಟರ್​ಗೆ 100 ಎಕರೆ ಜಾಗ ಬೇಕು ಎಂದು ಕೇಂದ್ರ ಸರ್ಕಾರ ಬೇಡಿಕೆ ಇಟ್ಟಿದೆ. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಮುಖ್ಯಾಂಶಗಳು

  • ಬೆಂಗಳೂರು ವಿಶ್ವವಿದ್ಯಾಲಯದ 100 ಎಕರೆ ಜಾಗಕ್ಕೆ ಕೇಂದ್ರ ಸರ್ಕಾರ ಬೇಡಿಕೆ
  • ಒಲಿಂಪಿಕ್ಸ್ ಟ್ರೈನಿಂಗ್ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪ್ಲಾನ್
  • ವಿಶ್ವವಿದ್ಯಾಲ ಕ್ಯಾಂಪಸ್​ನಲ್ಲಿ ಜಾಗ ಕೊಡಲ್ಲ ಎಂದ ವಿವಿ ಆಡಳಿತ
  • ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಕೇಂದ್ರ ನಡೆಗೆ ವಿರೋಧ

ಕ್ಯಾಂಪಸ್​ನಲ್ಲಿ ಜಾಗ ಕೊಡಲ್ಲ ಎಂದ ವಿವಿ ಆಡಳಿತ

ಸದ್ಯದ ಮಾಹಿತಿ ಪ್ರಕಾರ ಈಗಾಗಲೇ ಕ್ಯಾಂಪಸ್ ಕಿರಿದಾಗಿದ್ದು, ಶೈಕ್ಷಣಿಕ ವಾತಾವರಣ ಕ್ಷೀಣಿಸುತ್ತಿದೆ. ಹೀಗಾಗಿ ಕೇಂದ್ರ ಈ ಪ್ರಸ್ತಾವನೆಯನ್ನ ನಿರಾಕರಿಸಲು ಬೆಂಗಳೂರು ವಿಶ್ವವಿದ್ಯಾಲಯ ಆಡಳಿತ ನಿರ್ಧರಿಸಿದೆ. ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕ್ಯಾಂಪಸ್​ನ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?

ಸದ್ಯ ಕ್ಯಾಂಪಸ್​ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಯಾಂಪಸ್​ಗೆ ಹೊಂದಿಕೊಂಡಂತೆ ಇರುವ 100 ಎಕರೆ ಜಾಗ ಬೇಕು ಅಂತಾ ರಾಜ್ಯ ಉನ್ನತ ಶಿಕ್ಷಣ ಪರಿಷತ್​ಗೆ ಕೇಂದ್ರ ಬೇಡಿಕೆ ಇಟ್ಟಿದೆ. ಮುಂದಿನ ದಿನಗಳಲ್ಲಿ ವಿಶಾಲವಾದ ಜ್ಞಾನಭಾರತಿ ಆವರಣ ಉಳಿಯುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

Source link

ಹೆಚ್ಚು ಬೆವರುತ್ತೀರಾ? ಈ ರೀತಿಯಾಗುವುದಕ್ಕೆ ಕಾರಣ ಏನ್ ಗೊತ್ತಾ? – Kannada News

ಬೆವರುವುದು (Excessive Sweating) ದೇಹದ ಸಹಜ ಪ್ರಕ್ರಿಯೆಯಾಗಿದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬೆವರು ಸಹಾಯ ಮಾಡುತ್ತದೆ. ಬಿಸಿಲು, ವ್ಯಾಯಾಮ ಅಥವಾ ಒತ್ತಡದ ಸಂದರ್ಭಗಳಲ್ಲಿ ಬೆವರು ಬರುವುದು ಸಾಮಾನ್ಯ. ಆದರೆ ಕೆಲವರಿಗೆ ಯಾವುದೇ ಹೆಚ್ಚು ಶಾರೀರಿಕ ಕೆಲಸವಿಲ್ಲದೇ ಹೆಚ್ಚು ಬೆವರು ಬರುವ ಸಮಸ್ಯೆ ಕಾಣಿಸಬಹುದು. ಇದನ್ನು ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೆಚ್ಚು ಬೆವರುವುದು ಕೆಲವೊಮ್ಮೆ ದೈನಂದಿನ ಜೀವನ, ಕೆಲಸದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಮಂದಿಗೆ ಕೈಗಳ ತಳಭಾಗ, ಕಾಲುಗಳು, ಮುಖ ಅಥವಾ ಸಂಪೂರ್ಣ ದೇಹದಲ್ಲೇ ಅಧಿಕ ಬೆವರು ಕಾಣಿಸಬಹುದು. ಆದ್ದರಿಂದ ಇದರ ಹಿಂದೆ ಇರುವ ಕಾರಣಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಹಾಗಾದರೆ ಹೆಚ್ಚು ಬೆವರು ಬರುವ ಪ್ರಮುಖ ಕಾರಣಗಳೇನು, ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು ಮತ್ತು ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆಚ್ಚು ಬೆವರು ಬರುವುದಕ್ಕೆ ಪ್ರಮುಖ ಕಾರಣಗಳು:

ಅಧ್ಯಯನಗಳ ಪ್ರಕಾರ, ದೇಹದ ತಾಪಮಾನ ನಿಯಂತ್ರಣಕ್ಕೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚು ಬೆವರು ಬರುವ ಸ್ಥಿತಿಯನ್ನು “ಹೈಪರ್‌ಹೈಡ್ರೋಸಿಸ್” ಎಂದು ಕರೆಯಲಾಗುತ್ತದೆ. ಕೆಲವರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿರಬಹುದು. ಮತ್ತೊಂದೆಡೆ ಕೆಲವು ಆರೋಗ್ಯ ಸಮಸ್ಯೆಗಳೂ ಇದಕ್ಕೆ ಕಾರಣವಾಗಿರಬಹುದು. ಥೈರಾಯ್ಡ್ ಸಮಸ್ಯೆ, ಡಯಾಬಿಟೀಸ್, ಸೋಂಕುಗಳು, ಹಾರ್ಮೋನ್ ಬದಲಾವಣೆ, ಅತಿಯಾದ ತೂಕ ಹಾಗೂ ನರ ವ್ಯವಸ್ಥೆಯ ಸಮಸ್ಯೆಗಳು ಹೆಚ್ಚು ಬೆವರು ಬರುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಕೆಲವು ಔಷಧಿಗಳ ಪರಿಣಾಮವೂ ಇದಕ್ಕೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇನ್ನೂ ಕೆಲವು ಅಧ್ಯಯನಗಳಲ್ಲಿ ಹೆಚ್ಚು ಬೆವರು ಬರುವವರಲ್ಲಿ ವಿಟಮಿನ್ D ಮತ್ತು ಮ್ಯಾಗ್ನೀಷಿಯಂ ಕೊರತೆ ಕಂಡುಬಂದಿದೆ. ಆದರೆ ವಿಟಮಿನ್ D ಕೊರತೆಯೇ ನೇರ ಕಾರಣ ಎಂದು ಇನ್ನೂ ದೃಢಪಟ್ಟಿಲ್ಲ. ಈ ಸಂಬಂಧ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಊಟ ಮಾಡುವಾಗ ಬೆವರು ಬರುವುದಕ್ಕೆ ಕಾರಣವೇನು? ಇದು ಯಾವ ಕಾಯಿಲೆಯ ಲಕ್ಷಣ?

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

  • ತೂಕ ಕಡಿಮೆಯಾಗುವುದು
  • ನಿರಂತರ ದೌರ್ಬಲ್ಯ
  • ಹೃದಯ ಬಡಿತ ವೇಗವಾಗುವುದು
  • ತಲೆ ಸುತ್ತುವುದು
  • ಜ್ವರ
  • ಉಸಿರಾಟದ ತೊಂದರೆ
  • ರಾತ್ರಿ ವೇಳೆ ಅತಿಯಾಗಿ ಬೆವರುವುದು

ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬೇಕು?

ಪ್ರತಿದಿನ ಸಾಕಷ್ಟು ನೀರು ಕುಡಿಯಬೇಕು ಮತ್ತು ದೇಹವನ್ನು ಹೈಡ್ರೇಟ್ ಆಗಿಡಬೇಕು. ಹಗುರವಾದ ಹಾಗೂ ಆರಾಮದಾಯಕ ಬಟ್ಟೆಗಳನ್ನು ಧರಿಸುವುದು ಉತ್ತಮ. ಅತಿಯಾದ ಬಿಸಿಯ ವಾತಾವರಣದಲ್ಲಿ ಹೆಚ್ಚು ಸಮಯ ಇರುವುದನ್ನು ತಪ್ಪಿಸಬೇಕು. ಸಮತೋಲನ ಆಹಾರ ಸೇವನೆ, ಒತ್ತಡ ನಿಯಂತ್ರಣ ಮತ್ತು ನಿಯಮಿತ ವ್ಯಾಯಾಮ ಆರೋಗ್ಯಕ್ಕೆ ಸಹಾಯಕವಾಗಬಹುದು. ಹೆಚ್ಚು ಬೆವರುವುದು ಪದೇಪದೇ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆದು ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದ ಪ್ರಧಾನಿ ಮೋದಿ

ನವದೆಹಲಿ, ಜೂನ್ 5: ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಇದೇ ವೇಳೆ ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಶ್ರಮಿಸುತ್ತಿರುವ ಎಲ್ಲರನ್ನೂ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹಾಗೇ, ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದ್ದಾರೆ. ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಎಲ್ಲರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. ಪರಿಸರ ಸಂರಕ್ಷಣೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪ್ರತಿಯೊಬ್ಬರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪರಿಸರವನ್ನು ರಕ್ಷಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ದಿನ ಇದಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ; ಹೇಗಿರಲಿದೆ ಪಿಚ್ ಹಾಗೂ ಪ್ಲೇಯಿಂಗ್ 11? – Kannada News

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ತಂಡಗಳು ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಈ ಎರಡೂ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ 2018 ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 262 ರನ್‌ಗಳಿಂದ ಸೋಲಿಸಿತು. ಈಗ ಎರಡೂ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯವು ನ್ಯೂ ಚಂಡೀಗಢದ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಈ ಪಂದ್ಯದ ವೇಳೆ ಹವಾಮಾನ ಹೇಗಿರಲಿದೆ. ಪಿಚ್ ಹೇಗಿರಲಿದೆ ಎಂಬುದನ್ನು ನೋಡೋಣ..

ಪಿಚ್ ಹೇಗಿರಲಿದೆ?

ನ್ಯೂ ಚಂಡೀಗಢದ ಮಹಾರಾಜ ಯಾದವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದತು ಪಿಚ್ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಮಾನವಾಗಿ ನೆರವಾಗುವ ನಿರೀಕ್ಷೆಯಿದೆ. ಈ ಪಿಚ್ ಕಪ್ಪು ಮಣ್ಣಿನಿಂದ ಮಾಡಲ್ಪಟ್ಟಿದ್ದು, ಪಂದ್ಯದ ಆರಂಭದಲ್ಲಿ ಬೌಲರ್‌ಗಳಿಗೆ ಬೌನ್ಸ್ ಸಿಗಲಿದ್ದು, ಮೇಲುಗೈ ಸಾಧಿಸಲು ಅವಕಾಶ ಸಿಗುತ್ತದೆ. ಆಟ ಮುಂದುವರೆದಂತೆ, ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗುತ್ತದೆ. ಆದಾಗ್ಯೂ, ಪಂದ್ಯ ಮುಂದುವರೆದಂತೆ ಪಿಚ್ ನಿಧಾನವಾಗಬಹುದು. ಇದರಿಂದ ಸ್ಪಿನ್ನರ್‌ಗಳಿಗೂ ಸಹಾಯ ಸಿಗಬಹುದು.

ಪಂದ್ಯಕ್ಕೆ ಮಳೆ ಅಡ್ಡಿ

ಮುಲ್ಲನ್‌ಪುರದಲ್ಲಿ ಟೆಸ್ಟ್ ಪಂದ್ಯದ ಮೊದಲ ದಿನದಂದು ಮಳೆ ಬರುವ ಸಾಧ್ಯತೆಗಳಿವೆ. ಆದಾಗ್ಯೂ ಮಧ್ಯಾಹ್ನ ತಾಪಮಾನವು 38C ತಲುಪಬಹುದು, ಆದರೆ ಆರ್ದ್ರತೆಯು ಸುಮಾರು 32% ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬೆಳಿಗ್ಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ, ಆದರೆ ದಿನ ಮುಂದುವರೆದಂತೆ ಪರಿಸ್ಥಿತಿಗಳು ಸುಧಾರಿಸುವ ನಿರೀಕ್ಷೆಯಿದೆ. ಪಂದ್ಯದ ಬಹುಪಾಲು ಹವಾಮಾನವು ಸ್ಪಷ್ಟ ಮತ್ತು ಮೋಡ ಕವಿದ ವಾತಾವರಣದಲ್ಲಿ ಉಳಿಯುವ ನಿರೀಕ್ಷೆಯಿದೆ, ಬೆಳಿಗ್ಗೆ ಒಂದೆರಡು ಗಂಟೆಗಳನ್ನು ಹೊರತುಪಡಿಸಿ ದಿನವಿಡೀ ಮಳೆ ಬರುವ ಯಾವುದೇ ಸೂಚನೆಗಳಿಲ್ಲ.

IND vs AFG: ಭಾರತ- ಅಫ್ಘನ್ ಟೆಸ್ಟ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಯಾವ ಚಾನೆಲ್​ನಲ್ಲಿ ನೇರಪ್ರಸಾರ?

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ ಅಥವಾ ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸೇದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಉಮರ್ಜಾಯ್, ಶರಫುದ್ದೀನ್ ಅಶ್ರಫ್, ನಂಗ್ಯಾಲ್ ಖರೋತೈ, ಕೈಸ್ ಅಹ್ಮದ್, ಬಿಲಾಲ್ ಸಮಿ, ಸಲೀಮ್ ಸಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬರುತ್ತಿದೆ ‘ಅಗ್ನಿಸಾಕ್ಷಿ’ ಧಾರಾವಾಹಿ: ಶಮಂತ್ ಗೌಡ ಹೇಳಿದ್ದೇನು?

ಈ ಹಿಂದೆ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಲ್ಲಿ (Serial) ನಟಿಸಿದ್ದ ಮಾಜಿ ಬಿಗ್​​ಬಾಸ್ ಸ್ಪರ್ಧಿ ಶಮಂತ್ ಇದೀಗ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಪ್ರಸಾರವಾಗಿದ್ದ ‘ಅಗ್ನಿಸಾಕ್ಷಿ’ ಧಾರಾವಾಹಿ ಸಖತ್ ಹಿಟ್ ಆಗಿತ್ತು, ಲಕ್ಷಾಂತರ ಮನೆ ಮಂದಿಯ ಮನ ಗೆದ್ದಿತ್ತು. ಇದೀಗ ಅದೇ ಹೆಸರಿನಲ್ಲೇ ಧಾರಾವಾಹಿ ಮತ್ತೆ ಬರುತ್ತಿದೆ. ಈ ಬಾರಿ ಒಬ್ಬ ಅಹಂಕಾರಿ ನಾಯಕ ಹಾಗೂ ಸ್ವಾಭಿಮಾನಿ ನಾಯಕಿಯ ನಡುವೆ ನಡೆಯುವ ಕತೆಯನ್ನು ಒಳಗೊಂಡಿದೆ. ಶಮಂತ್, ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಧಾರಾವಾಹಿ ಬಗ್ಗೆ ಅವರೇನು ಹೇಳಿದರು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿಗೆ ರಾಜೀನಾಮೆ ನೀಡಿ ಬಂದ ಅಣ್ಣಾಮಲೈಗೆ ಭರ್ಜರಿ ಸ್ವಾಗತ, ಫ್ಯಾನ್ಸ್ ಹರ್ಷೋದ್ಘಾರ ಹೇಗಿದೆ ನೋಡಿ – Kannada News

ಚೆನ್ನೈ, (ಜೂನ್ 05): ಕಡೆಗೂ ಸಿಂಗಂ ಖ್ಯಾತಿಯ ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ನೀಡಿರುವ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹಗ್ಗ-ಜಗ್ಗಾಟ ಅಂತ್ಯಗೊಂಡಿದೆ. ಆದರೆ ಅಣ್ಣಾಮಲೈ ಪಕ್ಷ ತೊರೆಯುತ್ತಿದ್ದಂತೇ, ಬಿಜೆಪಿ ನಾಯಕರು ಭಿನ್ನ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ. “ಅಣ್ಣಾಮಲೈ ಹೊರಹೋಗುವುದರಿಂದ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್‌ ನಾಗೇಂದ್ರನ್‌ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ರಾಜೀನಾಮೆ ಅಂಗೀಕರಿಸುತ್ತಿದ್ದಂತೆಯೇ ದೆಹಲಿಯಿಂದ ಚೆನ್ನೈಗೆ ಆಗಮಿಸಿದ ಅಣ್ಣಾಮಲೈ ಭರ್ಜರಿ ಸ್ವಾಗತ ಸಿಕ್ಕಿದೆ. ಬಿಜೆಪಿಗೆ ರಾಜೀನಾಮೆ ನೀಡಿದ್ದರಿಂದ ಸಂತಸಗೊಂಡಿರುವ ಬೆಂಬಲಿಗರು ಹಾಗೂ ಅಭಿಮಾನಿಗಳು ಅಣ್ಣಾಮಲೈ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

Source link

ಬಿಎಂಟಿಸಿ ಪ್ರಯಾಣಿಕರಿಗೆ ಗುಡ್​ನ್ಯೂಸ್​​: ಮೆಟ್ರೋ ಮಾದರಿಯಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ಪ್ಲ್ಯಾನ್​​ – Kannada News

ಬೆಂಗಳೂರು, ಜೂನ್​​ 05: ಶಕ್ತಿ ಯೋಜನೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಪಡುತ್ತಿರುವ ಪ್ರಯಾಣಿಕರ ಕಷ್ಟಕ್ಕೆ ಮುಕ್ತಿ ಹಾಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಮ್ಮ ಮೆಟ್ರೋ ಮಾದರಿಯಲ್ಲೇ ಆನ್‌ಲೈನ್ ಕ್ಯೂಆರ್ (QR) ಟಿಕೆಟ್ ಖರೀದಿಸುವ ಹೊಸ ಪ್ಲ್ಯಾನ್​ ಜಾರಿಗೆ ಮುಂದಾಗಿದೆ.​ ಇದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿಯಲ್ಲೂ ಆನ್‌ಲೈನ್ ಟಿಕೆಟ್ ಖರೀದಿಸಲು ಅವಕಾಶ
  • ಬಿಎಂಟಿಸಿ ಬಸ್ ಹತ್ತುವ ಮುನ್ನವೇ ಮೊಬೈಲ್ ಮೂಲಕ ಕ್ಯೂಆರ್ ಟಿಕೆಟ್ ಬುಕಿಂಗ್​​
  • ಕ್ಯಾಶ್‌ಲೆಸ್ ಹಾಗೂ ಟಿಕೆಟ್‌ಲೆಸ್ ಪ್ರಯಾಣದತ್ತ ಹೆಜ್ಜೆ ಇಟ್ಟ ಬಿಎಂಟಿಸಿ

ಮೆಟ್ರೋ ಮಾದರಿಯಲ್ಲಿ ಆನ್ಲೈನ್​​ನಲ್ಲಿ ಟಿಕೆಟ್: ಪ್ರಯಾಣಿಕರು ಸಂತಸ

ಬಿಎಂಟಿಸಿಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೆಚ್ಚಿನ ಜನಸಂದಣಿ ಹಿನ್ನೆಲೆ​ ಟಿಕೆಟ್ ಖರೀದಿ ಮಾಡಲು ತುಂಬಾ ಕಷ್ಟ ಆಗುತ್ತದೆ. ಕೆಲವೊಮ್ಮೆ ಟಿಕೆಟ್ ಖರೀದಿಸಲು ಆಗದೆ ಟಿಕೆಟ್ ಚೆಕ್ಕಿಂಗ್ ವೇಳೆ ಸಿಕ್ಕಿಬಿದ್ದು ದಂಡ ಕಟ್ಟಿರುವ ಉದಾಹರಣೆಗಳಿವೆ. ಮತ್ತೊಂದೆಡೆ ಪ್ರಯಾಣಿಕರು ನೀಡಿದ ಹಣವನ್ನು ಕೆಲ ಕಿಲಾಡಿ ಕಂಡಕ್ಟರ್​ಗಳು ತಮ್ಮ ಯುಪಿಐ ಸ್ಕ್ಯಾನರ್​ಗಳಿಗೆ ಹಾಕಿಸಿಕೊಂಡಿರುವುದು ಇದೆ. ಇದಕೆಲ್ಲಾ ಬ್ರೇಕ್ ಹಾಕಲು ಇದೀಗ ಬಿಎಂಟಿಸಿ ಮುಂದಾಗಿದ್ದು, ನಮ್ಮ ಮೆಟ್ರೋ ಮಾದರಿಯಲ್ಲಿ ಇನ್ಮುಂದೆ ಆನ್ಲೈನ್​​ನಲ್ಲಿ ಟಿಕೆಟ್ ಖರೀದಿಸಿ ಬಸ್​​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಸಂಪೂರ್ಣ ಕ್ಯಾಶ್ ಲೆಸ್, ಟಿಕೆಟ್ ಲೆಸ್ ಆಗಲು ಬಿಎಂಟಿಸಿ ಮುಂದಾಗಿದ್ದು, ಸದ್ಯದಲ್ಲೇ ಬಿಎಂಟಿಸಿಯಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಈಗಾಗಲೇ ಶೇ 50% ರಷ್ಟು ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡುವ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ

ಸುಮಾರು 20 ಲಕ್ಷದಷ್ಟು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದರೆ, ಉಳಿದ ಪುರುಷ ಪ್ರಯಾಣಿಕರು ಹಣವನ್ನು ಕೊಟ್ಟು ಪ್ರಯಾಣ ಮಾಡುತ್ತಿದ್ದಾರೆ. ಈಗಾಗಲೇ ಇದಕ್ಕಾಗಿ 11 ಸಾವಿರ ಇಟಿಎಂ ಮೆಷಿನ್​ಗಳನ್ನು ಖರೀದಿ ಮಾಡಲಾಗಿದೆ. ಇದರ ಜೊತೆಗೆ ಬಿಎಂಟಿಸಿ ಬಸ್​​ನಲ್ಲಿ ಎನ್ಎಂಸಿ ಕಾರ್ಡ್ ಮೂಲಕ ಪ್ರಯಾಣ ಮಾಡಲು ಅವಕಾಶ ನೀಡಲಾಗ್ತಿದೆ. ಅಂದರೆ ಎನ್ಸಿಎಂಸಿ ಕಾರ್ಡ್ ಮೂಲಕ ನಮ್ಮ ಮೆಟ್ರೋ ಮತ್ತು ‌ಬಿಎಂಟಿಸಿ ಬಸ್​ನಲ್ಲೂ ಪ್ರಯಾಣ ಮಾಡುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್: ಟ್ರಾಫಿಕ್ ಫೈನ್ ಪಾವತಿಗೆ ಮತ್ತೆ ಶೇ 50 ವಿನಾಯಿತಿ

ಒಟ್ಟಿನಲ್ಲಿ ಬಿಎಂಟಿಸಿ ಸದ್ಯದಲ್ಲೇ ನಮ್ಮ ಮೆಟ್ರೋ ಮಾದರಿಯ ಟಿಕೆಟ್ ಖರೀದಿ ವ್ಯವಸ್ಥೆಗೆ ಮುಂದಾಗ್ತಿದ್ದು, ಇದಕ್ಕೆ ಪ್ರಯಾಣಿಕರು ಮಾತ್ರ ಫುಲ್ ಖುಷ್ ಆಗ್ತಿರೋದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link