Headlines

nagaraj11081993

Kedarnath Yatra: ಭಕ್ತರ ಗಮನಕ್ಕೆ; ಭಾರೀ ಮಳೆಯಿಂದ ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ! – Kannada News

ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತImage Credit source: Pinterest ಉತ್ತರಾಖಂಡದ ಪವಿತ್ರ ಕೇದಾರನಾಥ ಧಾಮಕ್ಕೆ ತೆರಳಲು ಯೋಜನೆ ಮಾಡಿಕೊಂಡಿದ್ದ ಭಕ್ತರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಯಾತ್ರಾ ಮಾರ್ಗಗಳಲ್ಲಿ ಭೂಕುಸಿತದ ಅಪಾಯ ಹೆಚ್ಚಾಗಿದ್ದು, ಕೆಲವೆಡೆ ರಸ್ತೆ ಸಂಪರ್ಕಕ್ಕೂ ಹಾನಿಯಾಗಿದೆ. ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಆಡಳಿತ, ವಿಪತ್ತು ನಿರ್ವಹಣಾ…

Read More

ಮರ ಬಿದ್ದು ಸಾವು-ನೋವಿಗೆ ಬ್ರೇಕ್: ದುರ್ಬಲ ಮರಗಳ ಪತ್ತೆಗೆ ಮಾನವ ದೇಹದ ಸ್ಕ್ಯಾನಿಂಗ್ ಮಾದರಿ ತಂತ್ರಜ್ಞಾನಕ್ಕೆ ಜಿಬಿಎ ಮುಂದು! – Kannada News

ರಸ್ತೆಯಲ್ಲಿ ಮರ ಬಿದ್ದಿರುವುದು (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜೂನ್ 5: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಳೆ ಹಾಗೂ ಬಿರುಗಾಳಿಯ ಸಂದರ್ಭದಲ್ಲಿ ರಸ್ತೆಬದಿಯ ಮರಗಳು ಮತ್ತು ರೆಂಬೆಗಳು ಹಠಾತ್ತನೆ ಉರುಳಿ ಬಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಹಾಗೂ ಆಸ್ತಿ ಪಾಸ್ತಿ ನಷ್ಟವಾಗುತ್ತಿರುವುದು ನಿರಂತರವಾಗಿ ವರದಿಯಾಗುತ್ತಿದೆ. ಈ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈಗ ವಿನೂತನ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ನಗರದ ದುರ್ಬಲ ಹಾಗೂ ಅಪಾಯಕಾರಿ…

Read More

ತುಮಕೂರು: ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ – Kannada News

ತುಮಕೂರು, ಜೂನ್ 5: ವಿದೇಶಿ ಭಯೋತ್ಪಾದಕ ಸಂಘಟನೆ, ಭಯೋತ್ಪಾದಕನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಹಾಗೂ ದೇಶದ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ತುಮಕೂರಿನಲ್ಲಿ (Tumakur) ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ರಹಸ್ಯ ಹಾಗೂ ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತುಮಕೂರು ನಗರ ಪೊಲೀಸರು ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ದೇಶದ ಆಂತರಿಕ ಬೆಳವಣಿಗೆಗಳ ಕುರಿತು ಪ್ರಚೋದನಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ. ಮುಖ್ಯಾಂಶಗಳು ಕೇಂದ್ರ ತನಿಖಾ ಸಂಸ್ಥೆಗಳ…

Read More

International Tolerance Award 2026: ಅಬುಧಾಬಿಯಲ್ಲಿರುವ ಹಿಂದೂ ದೇವಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ – Kannada News

ಅಬುಧಾಬಿಯಲ್ಲಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ (BAPS) ಹಿಂದೂ ಮಂದಿರವು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಪ್ರತಿಷ್ಠಿತ ‘2026 ಅಂತರರಾಷ್ಟ್ರೀಯ ಸಹಿಷ್ಣುತೆ ಪ್ರಶಸ್ತಿ’ (Tolerance Award)ಗೆ ಭಾಜನವಾಗಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ, ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಮಾನವ ಏಕತೆಯನ್ನು ಉತ್ತೇಜಿಸುವಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಗೌರವವನ್ನು ಅಂತರರಾಷ್ಟ್ರೀಯ ನಾಗರಿಕತೆಗಳು ಮತ್ತು ಸಹಿಷ್ಣುತೆ ಸಮ್ಮೇಳನ (IDCT 2026) ಸಂದರ್ಭದಲ್ಲಿ ಘೋಷಿಸಲಾಯಿತು. ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಸಮುದಾಯಗಳ ನಡುವೆ ಸಾಮರಸ್ಯದ…

Read More

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಜೆಟ್ ಮತ್ತು ತಾರಾಗಣದ ಸಂಭಾವನೆ ವಿವರ ಇಲ್ಲಿದೆ – Kannada News

ಜೂನ್ 4ರಂದು ಭಾರಿ ನಿರೀಕ್ಷೆಗಳ ನಡುವೆ ‘ಪೆದ್ದಿ’ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಕ್ರೀಡಾ ಸಾಹಸ ಪ್ರಧಾನ ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿದ್ದು, ಚಿತ್ರಕ್ಕೆ ಮೊದಲ ದಿನದ ಬೆಳಗಿನ ಪ್ರದರ್ಶನದಿಂದಲೇ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಅದ್ಭುತ ಯಶಸ್ಸಿನ ಸಂದರ್ಭದಲ್ಲಿ, ಚಿತ್ರದ ಒಟ್ಟು ಬಜೆಟ್ ಮತ್ತು ಕಲಾವಿದರ ಸಂಭಾವನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ…

Read More

ನಿರ್ಮಾಣ ಹಂತದ ಫ್ಲೈಓವರ್ ಬಳಿ ಕಾರ್ಮಿಕರ ಮೇಲೆ ಕುಸಿದ ಕ್ರೇನ್, ಮೂವರು ಸಾವು – Kannada News

ಫರೀದಾಬಾದ್, ಜೂನ್ 05: ಹರಿಯಾಣದ ಫರೀದಾಬಾದ್​ನ ಜೆವರ್ ಎಕ್ಸ್​​ಪ್ರೆಸ್​ವೇನಲ್ಲಿ ನಿರ್ಮಾಣ ಹಂತದ ಫ್ಲೈಓವರ್ ಬಳಿ ಕ್ರೇನ್(Crane) ಕುಸಿದ ಪರಿಣಾಮ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಅತ್ಯಂತ ಕ್ಷಿಪ್ರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಭಾರಿ ಮಳೆಯಿಂದಾಗಿ ಉಂಟಾಗಿದ್ದ ಕೆಸರಿನ ಸವಾಲಿನ ನಡುವೆಯೂ ರಕ್ಷಣಾ ತಂಡಗಳು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಕ್ರೇನ್ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಯಶಸ್ವಿಯಾಗಿ ಹೊರತೆಗೆದಿವೆ. ಗುರುವಾರ ಸಂಜೆ ಫ್ಲೈಓವರ್ ನಿರ್ಮಾಣದ ವೇಳೆ…

Read More

Bengaluru Air Quality: ಮುಂಗಾರು ಮಳೆಗೆ ತಂಪಾದ ಬೆಂಗಳೂರು, ಎಲ್ಲೆಡೆ ವಾಯು ಗುಣಮಟ್ಟ ಉತ್ತಮ – Kannada News

ಬೆಂಗಳೂರು, ಜೂನ್ 05: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಬಹುತೇಕ ಉತ್ತಮ ಹಾಗೂ ಸಾಧಾರಣ ಮಟ್ಟದಲ್ಲಿದೆ. ಇತ್ತೀಚಿನ ಮಳೆಯ ಪ್ರಭಾವದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯು ಮಾಲಿನ್ಯದ ಮಟ್ಟ ನಿಯಂತ್ರಣದಲ್ಲಿದೆ. ಮುಖ್ಯಾಂಶಗಳು ಮಳೆಯ ಕಾರಣದಿಂದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಉತ್ತಮ ಮಟ್ಟದಲ್ಲಿದೆ. ಧಾರವಾಡ ನಗರದಲ್ಲಿ ಧೂಳಿನ ಕಣಗಳ ಹೆಚ್ಚಳದಿಂದ ವಾಯು ಗುಣಮಟ್ಟ ಕಳಪೆಯಾಗಿದೆ. ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ ದಾಖಲಾಗಿದೆ. ಬೆಂಗಳೂರಿನ ಇಂದಿನ ವಾಯು ಗುಣಮಟ್ಟ…

Read More

300 ಕೋಟಿ ಗಳಿಸಿದ ಮೇಲೆ ‘ಕರುಪ್ಪು’ ವಿವಾದ; ಸೂರ್ಯಗೆ ಅವಮಾನ

ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕಾಲಿವುಡ್ ಸ್ಟಾರ್ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ (Karuppu Movie) ಈಗ ಹೊಸದೊಂದು ವಿವಾದಕ್ಕೆ ಸಿಲುಕಿದೆ. ಚಿತ್ರದ ನಿರ್ದೇಶಕ ಹಾಗೂ ಎಡಿಟರ್ ನೀಡಿದ ಕೆಲವು ಹೇಳಿಕೆಗಳು ಸೂರ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ನಟ ಸೂರ್ಯ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿದೆ. ಏನಿದು ವಿವಾದ?: ‘ಕರುಪ್ಪು’ ಚಿತ್ರದ ಪ್ರಚಾರದ…

Read More

Daily Devotional: ಮನೆ ಗೋಡೆಗಳಲ್ಲಿ ಈ ಗಿಡ ಚಿಗುರಿದರೆ ತಕ್ಷಣ ಕಿತ್ತು ಹಾಕಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ! – Kannada News

ಕಾಂಪೌಂಡ್ ಒಳಗೆ ಅಥವಾ ಚಾವಣಿ ಮೇಲೆ ಗಿಡImage Credit source: Pinterest ಮನೆಯ ಗೋಡೆಗಳ ಮೇಲೆ, ಕಾಂಪೌಂಡ್ ಒಳಗೆ ಅಥವಾ ಚಾವಣಿಯ ಮೇಲೆ ತಾನಾಗಿಯೇ ಬೆಳೆಯುವ ಕೆಲವು ವೃಕ್ಷಗಳ ಬಗ್ಗೆ ಧರ್ಮಶಾಸ್ತ್ರ ಮತ್ತು ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಎಲ್ಲ ಮರಗಳಲ್ಲ, ಆದರೆ ಅಶ್ವತ್ಥ (ಅರಳಿ), ಬೇವಿನ ಮತ್ತು ನಿಂಬೆ ಮರಗಳು ಇಂತಹ ಸ್ಥಳಗಳಲ್ಲಿ ಬೆಳೆದರೆ ಅವುಗಳ ಫಲ ಮತ್ತು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ವೃಕ್ಷಗಳು ಇಂತಹ ಅನಿರೀಕ್ಷಿತ ಸ್ಥಳಗಳಲ್ಲಿ ಬೆಳೆದಾಗ ಅದು ಶುಭವೋ ಅಶುಭವೋ ಎಂಬುದನ್ನು…

Read More

Video: ಲುಫ್ಥಾನ್ಸಾ ಬೋಯಿಂಗ್ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿತ, ಹಲವರಿಗೆ ಗಾಯ – Kannada News

ಬರ್ಲಿನ್, ಜೂನ್ 05: ಲುಫ್ಥಾನ್ಸಾ ಬೋಯಿಂಗ್ ವಿಮಾನ(Flight)ದ  ಲ್ಯಾಂಡಿಂಗ್ ಗೇರ್ ಕುಸಿದುಬಿದ್ದ ಪರಿಣಾಮ ಹಲವರು ಗಾಯಗೊಂಡಿರುವ ಘಟನೆ ಜರ್ಮನಿಯ ಫ್ರಾಂಕ್​ಫರ್ಟ್​ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಏರ್‌ಲೈನ್ಸ್ ಸಿಬ್ಬಂದಿ ತೋರಿದ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಲಾಸ್ ಏಂಜಲೀಸ್‌ಗೆ ಹಾರಲು ಸಜ್ಜಾಗಿ ನಿಂತಿದ್ದ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನವು ಪಾರ್ಕಿಂಗ್ ಮೋಡ್‌ನಲ್ಲಿದ್ದಾಗ ಈ ಘಟನೆ ನಡೆದಿದೆ. ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ…

Read More