ಹೊಸ ಕಾರು ಖರೀದಿ ಮಾಡಿದ ಮಲ್ಲಮ್ಮ; ಅನೇಕರಿಗೆ ಮಾದರಿಯಾದ ಬಿಬ್ ಬಾಸ್ ಸ್ಪರ್ಧಿ – Kannada News
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ ಅವರು (Mallama) ತಮ್ಮ ಸಾಧನೆಯ ಮುಕುಟಕ್ಕೆ ಮತ್ತೊಂದು ಹೊಸ ಗರಿ ಸೇರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ನಂತರ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅವಕಾಶ ಪಡೆದರು. ಇದರ ಮೂಲಕ ಮನೆಮಾತಾಗಿರೋ ಮಲ್ಲಮ್ಮ ಈಗ ಹೊಸ ಕಾರೊಂದನ್ನು ಖರೀದಿಸುವ ಮೂಲಕ ತಮ್ಮ ಹೊಸ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಈ ಸಂತಸದ ಕ್ಷಣವನ್ನು ಮಲ್ಲಮ್ಮ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಖರೀದಿ…