ಬೇಸಿಗೆಯಲ್ಲಿ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಈ ಹಣ್ಣುಗಳನ್ನು ಪ್ರತಿನಿತ್ಯ ಸೇವನೆ ಮಾಡಿ
ಬೇಸಿಗೆ (summer) ಸಮಯದಲ್ಲಿನ ವಿಪರೀತ ಉರಿ ಬಿಸಿಲು ನಮ್ಮನ್ನು ಹೈರಾಣಾಗಿಸಿ ಬಿಡುತ್ತದೆ. ಈ ಸಮಯದಲ್ಲಿ ದೇಹವನ್ನು ಎಷ್ಟು ಪ್ರಮಾಣದಲ್ಲಿ ತಂಪಾಗಿ ಮತ್ತು ಚೈತನ್ಯಭರಿತವಾಗಿ ಇಟ್ಟುಕೊಂಡರೂ ಸಾಲದು. ಹೌದು ಉರಿ ಬಿಸಿಲಿನ ಬೇಗೆಗೆ ಬೆವರು ನೀರಿನಂತೆ ಹರಿದು ಹೋಗುತ್ತಾ ಇರುತ್ತದೆ. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯಿಂದ ಪಾರಾಗಲು ಜನ ನೀರಿನ ಜೊತೆಗೆ ಫ್ರೂಟ್ಸ್ ಜ್ಯೂಸ್‌ಗಳನ್ನು ಸಹ ಸೇವನೆ ಮಾಡುತ್ತಾರೆ. ಇವುಗಳ ಜೊತೆಗೆ ಈ ಒಂದಷ್ಟು ಹಣ್ಣುಗಳನ್ನು ಸೇವನೆ ಮಾಡುವ ಮೂಲಕವೂ ದೇಹದಲ್ಲಿ ಸಾಕಷ್ಟು…