ಬೆಂಗಳೂರಿನಲ್ಲಿ ಹಳೇ ಕಾಲದ ‘ಬಾಯ್ಲರ್ ಚಹಾ’ ಕುಡಿಯಬೇಕೇ?: ಹಾಗಾದ್ರೆ ವಸಂತನಗರದ ಈ ಸ್ಪಾಟ್‌ಗೆ ಒಮ್ಮೆ ವಿಸಿಟ್ ಕೊಡಿ! – Kannada News
ಬೆಂಗಳೂರು, ಜೂ.3: ಆಧುನಿಕ ಕೆಫೆಗಳು ಮತ್ತು ಕೃತಕ ಟೀ ಮೇಕರ್‌ಗಳ ಹಾವಳಿಯ ನಡುವೆ, ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಟೀ ಬಾಯ್ಲರ್‌ನಲ್ಲಿ (Traditional Tea Boiler) ಹದವಾಗಿ ಕುದಿಸಿದ ಚಹಾದ ಅಪ್ಪಟ ರುಚಿಯನ್ನು ಹುಡುಕುವುದು ಈಗ ನಿಜಕ್ಕೂ ಅಪರೂಪದ ಸಂಗತಿಯಾಗಿದೆ. ಆದರೆ, ಹಳೇ ಕಾಲದ ಆ ಅದ್ಭುತ ರುಚಿ ಮತ್ತು ಫೀಲ್ ಅನ್ನು ಇಂದಿಗೂ ಯಥಾವತ್ತಾಗಿ ಉಳಿಸಿಕೊಂಡು ಬಂದಿದೆ ಬೆಂಗಳೂರಿನ ವಸಂತನಗರದಲ್ಲಿರುವ ಪ್ರಸಿದ್ಧ ‘ಮುರುಗನ್ ಟೀ ಸ್ಟಾಲ್’. ಚಹಾ ಪ್ರಿಯರ ಪ್ರಕಾರ, ನಾರ್ಮಲ್ ಪಾತ್ರೆಯಲ್ಲಿ ಮಾಡುವ ಚಹಾಕ್ಕಿಂತಲೂ, ತಾಮ್ರ ಅಥವಾ…