Headlines

nagaraj11081993

‘ಧುರಂಧರ್ 2’ ಹಣ ಮಾಡಿದ್ದು ನೋಡಿ ಬದಲಾದ ರಾಜಮೌಳಿ; ಎರಡು ಭಾಗದಲ್ಲಿ ‘ವಾರಣಾಸಿ’

‘ಧುರಂಧರ್ 2’ ಸಿನಿಮಾ (Dhurandhar 2) ಸೂಪರ್ ಹಿಟ್ ಆಗಿದೆ. ಮೊದಲ ಭಾಗ ಅಬ್ಬರಿಸಿತ್ತು. ಇದು ಎರಡನೇ ಪಾರ್ಟ್​​ ಹಿಟ್ ಆಗು ಸಹಕಾರಿ ಆಗಿದೆ. ಇಷ್ಟು ದಿನಗಳ ಕಾಲ ಮೊದಲ ಪಾರ್ಟ್ ರಿಲೀಸ್ ಆಗಿ ಬಹು ಸಮಯದ ಬಳಿಕ ಎರಡನೇ ಪಾರ್ಟ್ ಬರುತ್ತಿತ್ತು. ಆದರೆ, ‘ಧುರಂಧರ್ 2’ ವಿಷಯದಲ್ಲಿ ಆ ರೀತಿ ಆಗಿಲ್ಲ. ‘ಧುರಂಧರ್’ ರಿಲೀಸ್ ಆಗಿ ಕೇವಲ ಮೂರೇ ತಿಂಗಳಲ್ಲಿ ‘ಧುರಂಧರ್ 2’ ಸಿನಿಮಾ ತೆರೆಗೆ ಬಂದಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಈಗ ಇದರಿಂದ…

Read More

ಪೋಷಕರೇ ಎಚ್ಚರ: ಬೆಂಗಳೂರಿನ ಸ್ಕೂಲ್ ಬಸ್​ಗಳ ಚಾಲಕರ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಿದ ಪೊಲೀಸರೇ ಶಾಕ್!

ಬೆಂಗಳೂರು, ಮಾರ್ಚ್ 28: ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕಳುಹಿಸುತ್ತಿದ್ದೇವೆ ಎಂದು ಭಾವಿಸಿರುವ ಪೋಷಕರಿಗೆ ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಾಲಾ ವಾಹನಗಳ ಚಾಲಕರೇ ಕುಡಿದು ಬಸ್ ಚಲಾಯಿಸುತ್ತಾ (Drunk and Drive) ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಶುಕ್ರವಾರ (ಮಾರ್ಚ್​​ 27) ಬೆಳ್ಳಂಬೆಳಗ್ಗೆ ಬೆಂಗಳೂರು ಸಂಚಾರ ಪೊಲೀಸರು (Bangalore Traffic Police) ನಡೆಸಿದ ವಿಶೇಷ ಡ್ರಂಕ್ ಆ್ಯಂಡ್ ಡ್ರೈವ್ ಕಾರ್ಯಾಚರಣೆಯಲ್ಲಿ ಭರ್ಜರಿ ಬೇಟೆ ನಡೆದಿದೆ. ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ಕಿಂಗ್:…

Read More

IPL 2026: ಮೊದಲ ಪಂದ್ಯಕ್ಕೆ RCB ತಂಡದ ಮೂವರು ಅಲಭ್ಯ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿಗೆ ಇಂದು (ಮಾ.28) ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಆರ್​ಸಿಬಿ ತಂಡದ ಮೂವರು ಅಲಭ್ಯರಾಗಿದ್ದಾರೆ. ಅವರೆಂದರೆ… ಜೋಶ್ ಹೇಝಲ್​ವುಡ್: ಆರ್​ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಝಲ್​​ವುಡ್ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಫಿಟ್​​ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಇಂದು ಅವರು ಕಣಕ್ಕಿಳಿಯುವುದಿಲ್ಲ…

Read More

Daily Devotional: ದೋಷ ನಿವಾರಣೆಗೆ ಹೋಮಗಳನ್ನ ಎಲ್ಲಿ ಮಾಡಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದೋಷ ನಿವಾರಣೆಗೆ ಹೋಮಗಳನ್ನು ಮನೆಯಲ್ಲಿ ಮಾಡಬೇಕೇ, ದೇವಸ್ಥಾನದಲ್ಲಿ ಮಾಡಬೇಕೇ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಬದುಕಿನಲ್ಲಿ ಸಂಕಷ್ಟಗಳು ಎದುರಾದಾಗ, ದಿಕ್ಕು ತೋಚದಾದಾಗ, ಸಾಡೇಸಾತಿ, ಅರ್ಧಾಷ್ಟಮ, ಕರ್ಮ ಫಲಗಳಂತಹ ಸಮಸ್ಯೆಗಳಿಂದ ಬಳಲುತ್ತಿರುವಾಗ, ಅಥವಾ ಯಾವುದೇ ವೈಫಲ್ಯಗಳು ಕಾಡಿದಾಗ, ಮನುಷ್ಯ ದೈವಿಕ ಕಾರ್ಯಗಳತ್ತ ಮುಖ ಮಾಡುತ್ತಾನೆ. ಹೋಮ, ಹವನ, ಪೂಜೆಗಳು ಇದಕ್ಕೆ ಪರಿಹಾರ ಎಂಬ ನಂಬಿಕೆ ಇದೆ. ಆದರೆ, ಹೋಮಗಳನ್ನು ಮನೆಯಲ್ಲಿ ಮಾಡಿಸುವುದು ಉತ್ತಮವೇ ಅಥವಾ ದೇವಸ್ಥಾನಗಳಲ್ಲಿ ಮಾಡಿಸುವುದು ಶ್ರೇಷ್ಠವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವಿಸುತ್ತದೆ ಎಂದು…

Read More

Horoscope Today: ಇಂದು ಈ ರಾಶಿಯವರು ಹಣಕಾಸು ವಿಚಾರದಲ್ಲಿ ಎಚ್ಚರ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 28​, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ದಶಮಿ ತಿಥಿಯಾಗಿದೆ. ಇಂದು ರಾಹುಕಾಲ ಬೆಳಿಗ್ಗೆ 9:21 ರಿಂದ 10:53 ರವರೆಗೆ ಇರಲಿದ್ದು, ಸರ್ವಸಿದ್ಧಿ ಕಾಲ ಮಧ್ಯಾಹ್ನ 1:56 ರಿಂದ 3:28 ರವರೆಗೆ ಇರುತ್ತದೆ. ಶನಿ ಭಗವಾನ್, ಹನುಮಾನ್ ಮತ್ತು ಶ್ರೀ ವೆಂಕಟೇಶ್ವರ…

Read More

ಹತ್ತೇ ದಿನದಲ್ಲಿ ‘KGF 2’ ಲೈಫ್​​ ಟೈಮ್ ಕಲೆಕ್ಷನ್ ಬ್ರೇಕ್ ಮಾಡಲಿದೆ ‘ಧುರಂಧರ್ 2’

‘ಧುರಂಧರ್ 2’ ಸಿನಿಮಾ (Dhurandhar 2 Movie) ಬಾಕ್ಸ್ ಆಫೀಸ್​​​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಸಿನಿಮಾ ಒಂದೇ ವಾರಕ್ಕೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇನ್ನು 10 ದಿನಕ್ಕೆ ‘ಕೆಜಿಎಫ್ 2’ ಲೈಫ್​​ಟೈಮ್ ದಾಖಲೆಯನ್ನು ಬ್ರೇಕ್ ಮಾಡುವ ಎಲ್ಲಾ ಸೂಚನೆ ಸಿಕ್ಕಿದೆ. ಹೀಗೆಯೇ ಗಳಿಕೆ ಮುಂದುವರಿದರೆ ಸಿನಿಮಾ ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ. ‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದಲ್ಲಿ…

Read More

IPL 2026: ಐಪಿಎಲ್​​ನಿಂದ 9 ಆಟಗಾರರು ಔಟ್..!

IPL 2026: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನಿಂದ (ಮಾ.28) ಶುರುವಾಗಲಿದೆ. ಹತ್ತು ತಂಡಗಳ ನಡುವಣ ಈ ಕ್ರಿಕೆಟ್​​ ಕದನದಿಂದ ಕೆಲ ಆಟಗಾರರು ಹಿಂದೆ ಸರಿದಿದ್ದಾರೆ. ಹೀಗೆ ಐಪಿಎಲ್​ಗೆ ಆಯ್ಕೆಯಾಗಿ ಟೂರ್ನಿಯಿಂದ ಹೊರಬಿದ್ದ ಹಾಗೂ ಹಿಂದೆ ಸರಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ… ಆಕಾಶ್ ದೀಪ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಬಲಗೈ ವೇಗಿ ಆಕಾಶ್ ದೀಪ್ ಐಪಿಎಲ್ 2026 ರಿಂದ ಹೊರಗುಳಿದಿದ್ದಾರೆ. ಬೆನ್ನು ನೋವಿನ ಸಮಸ್ಯೆಯ ಕಾರಣ ಅವರು ಟೂರ್ನಿಯಿಂದ ಹಿಂದೆ…

Read More

ಇಂದಿನಿಂದ ಐಪಿಎಲ್​, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ತಡರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ

ಬೆಂಗಳೂರು, ಮಾರ್ಚ್ 28: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ (BMRCL) ಮೆಟ್ರೋ ರೈಲು ಸೇವಾ ಅವಧಿಯನ್ನು ವಿಸ್ತರಿಸಿದೆ. ಕ್ರಿಕೆಟ್ ಪ್ರೇಕ್ಷಕರಿಗೆ ಸುಗಮ ಪ್ರಯಾಣ ಕಲ್ಪಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರೇಕ್ಷಕರು ಹೆಚ್ಚು ಮೆಟ್ರೋ ಸೇವೆಯನ್ನೇ ಬಳಸಿಕೊಳ್ಳುವಂತೆ ಸಂಚಾರಿ ಪೊಲೀಸರೂ ಸಹ ಮನವಿ ಮಾಡಿದ್ದಾರೆ. ಪಂದ್ಯದ ದಿನದಂದು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ…

Read More

ದಿನ ಭವಿಷ್ಯ: ಇಂದು ಈ ರಾಶಿಯವರು ಪ್ರೀತಿಪಾತ್ರರನ್ನು ಬಿಟ್ಟಕೊಡಲಾರರು

ಮೇಷ ರಾಶಿ: ಇಂದು ಬರುವ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಪಿತ್ರಾರ್ಜಿತ ಆಸ್ತಿಯನ್ನು ದೊರಕಿಸಿಕೊಳ್ಳುವ ಸಂಭವವಿದೆ. ಮಕ್ಕಳ‌ ಜೊತೆ ಸಂತಸದ ದಿನವಾಗಿರುವುದು. ಬಂಧು ಮಿತ್ರರ ಆಗಮನ ಸಾಧ್ಯತೆಯೂ ಕಂಡುಬರುವುದು. ವೈವಾಹಿಕ ಜೀವನವು ಒತ್ತಡದಿಂದ ಇರಲಿದೆ. ನಿಮ್ಮ ಪ್ರೀತಿಪಾತ್ರರ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಔದಾರ್ಯವು ಅಧಿಕವಾಗಿ ಬೇಡ. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡುವುದಿಲ್ಲ. ವೃಷಭ ರಾಶಿ: ಯಾವುದಕ್ಕೂ ಮಿತಿ ಇರಲಿ, ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡವರಿಗೆ ಯಶಸ್ಸು. ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸ. ಸರ್ಕಾರಿ…

Read More

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 28ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1); ಈ ದಿನ ನೀವು ಹೇಳಿದ್ದೇ ಸರಿ, ಮಾಡಿದ್ದೇ ಸರಿ ಎಂಬಂತೆ ಸುತ್ತಮುತ್ತ ಇರುವವರು ಹೇಳಲಿಕ್ಕೆ ಶುರು ಮಾಡಲಿದ್ದಾರೆ. ಇದರಿಂದ ನಿಮಗೂ ಖುಷಿ ಆಗಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಕಾಡು- ಬೆಟ್ಟ, ಗುಡ್ಡ ಪ್ರದೇಶಗಳಿಗೆ ತೆರಳುವ ಯೋಗ ಇದೆ. ಮಿಡ್ಲ್ ಮ್ಯಾನೇಜ್ ಮೆಂಟ್ ಹುದ್ದೆಗಳಲ್ಲಿ ಇಷ್ಟು ಸಮಯ ಕೆಲಸ ಮಾಡುತ್ತಿರುವ ಕೆಲವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿ, ಟಾಪ್ ಮ್ಯಾನೇಜ್ ಮೆಂಟ್…

Read More