ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ಸುತ್ತಿಕೊಂಡ ಹಾವು, 4 ತಾಸು ನರಕಯಾತನೆ – Kannada News
ಬೌಧ್, ಜೂನ್ 02: ವ್ಯಕ್ತಿಯೊಬ್ಬರ ತಾಳ್ಮೆ ಹಾಗೂ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ವ್ಯಕ್ತಿಯ ಕೈಗೆ ವಿಷಕಾರಿ ಹಾವೊಂದು ಸುತ್ತಿಕೊಂಡ ಪರಿಣಾಮ ಸುಮಾರು ನಾಲ್ಕು ಗಂಟೆಗಳ ಕಾಲ ನರಕಯಾತನೆ ಅನುಭವಿಸಬೇಕಾಯಿತು. ಆದರೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಒಡಿಶಾದ ಬೌಧ್ ಜಿಲ್ಲೆಯ ಹರಭಂಗ ಬ್ಲಾಕ್ನ ಅದೇನಿಗಢ ಗ್ರಾಮದಲ್ಲಿ ಪಾರ್ಶ್ವವಾಯು (Paralysis) ಪೀಡಿತರಾಗಿ ಚಲನಶೀಲತೆ ಕಳೆದುಕೊಂಡಿದ್ದ ಕೃಷ್ಣ ಚಂದ್ರ ಸಾಹು ಎಂಬ ವ್ಯಕ್ತಿಗೆ ಮಲಗಿದ್ದ ಹಾಸಿಗೆಗೆ ವಿಷಕಾರಿ ಹಾವು ನುಗ್ಗಿತ್ತು. ಕಿಟಕಿಯಿಂದ ನುಗ್ಗಿದ ಯಮಸ್ವರೂಪಿ…