Headlines

nagaraj11081993

Petrol-Diesel: ಭಾರತ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ್ದೇಕೆ? ಇಂಧನ ಬೆಲೆ ಅಗ್ಗವಾಗುತ್ತಾ?

ನವದೆಹಲಿ, ಮಾರ್ಚ್​ 27: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದು ದೇಶದ ತೈಲ ಮಾರುಕಟ್ಟೆ ಕಂಪನಿಗಳ ಮೇಲೆ ಭಾರಿ ಒತ್ತಡ ಬೀರಿತ್ತು. ಅವುಗಳ ನಷ್ಟ ಹೆಚ್ಚುತ್ತಿತ್ತು. ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ(Excise Duty) ವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ತೈಲ ಕಂಪನಿಗಳು ನಿಟ್ಟುಸಿರು ಬಿಡುವಂತಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಉಂಟಾದ ಇಂಧನ ಬಿಕ್ಕಟ್ಟಿನ ಮಧ್ಯೆ, ಸರ್ಕಾರವು ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಮಾರ್ಚ್ 26 ರಂದು ಹಣಕಾಸು ಸಚಿವಾಲಯ ಹೊರಡಿಸಿದ…

Read More

ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ? ಅಕ್ರಮ ಸಂಬಂಧಕ್ಕೆ ಕೊಲೆಯಾದ ರಂಜಿತ್ ತಾಯಿ ಅಳಲು

ಆನೇಕಲ್, ಮಾರ್ಚ್ 27: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯಲ್ಲಿ ಭಾವನೇ ಬಾಮೈದನ ಕೊಲೆ ಮಾಡಿರುವ ಘಟನೆ ಸಂಬಂಧ ಇದೀಗ ಮೃತ ರಂಜಿತ್ ತಾಯಿ ಪ್ರತಿಕ್ರಿಯಿಸಿದ್ದಾರೆ. ಅಳಿಯ ಶ್ರೀನಿವಾಸನೇ ಮಗ ರಂಜಿತ್​​ನನ್ನು ಕೊಲೆ ಮಾಡಿದ್ದಾನೆ ಎಂದಿರುವ ಅವರು, ‘ನಮ್ಮ ಮಗ 24 ವರ್ಷದವನು, ಅವನಿಗೆ ಜ್ಞಾನ ಇರಲಿಲ್ಲ. ಆದರೆ ಆಕೆಗೆ (ಶ್ರೀನಿವಾಸ್ ತಂಗಿ) ಇಬ್ಬರು ಮಕ್ಕಳಿದ್ದರೂ ಆಕೆ ಆತನ ಹಿಂದೆ ಓಡಿಬಂದಳು. ಬುದ್ಧಿಹೇಳಿದರೂ ಕೇಳಲಿಲ್ಲ. ಅವರು ಅವರ ಹುಡುಗಿಯನ್ನು ಹುಷಾರಾಗಿ ಇಟ್ಟುಕೊಳ್ಳಬೇಕಿತ್ತು’ ಎಂದು ಅಳಲು ತೋಡಿಕೊಂಡಿದ್ದಾರೆ. ರಂಜಿತ್​​ನ…

Read More

ರಾಷ್ಟ್ರಮಟ್ಟದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡುಗೇರಿಸಿಕೊಂಡ ಕೆಎಸ್​ಆರ್​ಟಿಸಿ!

ಬೆಂಗಳೂರು, ಮಾರ್ಚ್​ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ್ನು ತೋರಿದೆ. ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಅವಾರ್ಡ್​ಸ್​ನಲ್ಲಿ (Elets Mobility Excellence Awards 2026) ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇನೋವೇಶನ್ ಇನ್ ಸಿಟಿಜೆನ್ ಎಂಗೇಜ್​ಮೆಂಟ್ ಆ್ಯಂಡ್ ಇನ್ಕ್ಲೂಸಿವ್ ಮೊಬಿಲಿಟಿ ಅಂದರೆ ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಧ್ವನಿ ಸ್ಪಂದನ…

Read More

Earth Hour 2026: ಒಂದು ಗಂಟೆ ದೀಪ ಆರಿಸುವುದರಿಂದ ಪರಿಸರಕ್ಕಷ್ಟೇ ಅಲ್ಲ, ನಿಮ್ಮ ಮೆದುಳಿಗೂ ಇದೆ ಲಾಭ!

ಬೆಂಗಳೂರು, ಮಾ.27: ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ ಕೊನೆಯ ಶನಿವಾರದಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಒಂದು ಗಂಟೆಯ ಕಾಲ ದೀಪಗಳನ್ನು ಆರಿಸುವ ಮೂಲಕ ‘ಅರ್ಥ್ ಅವರ್’ ಆಚರಿಸಲಿದ್ದಾರೆ. 2007ರಲ್ಲಿ ಡಬ್ಲ್ಯೂಡಬ್ಲ್ಯೂಎಫ್ (WWF) ಆರಂಭಿಸಿದ ಈ ಅಭಿಯಾನವು ಇಂದು ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದ್ದು, ಹವಾಮಾನ ಬದಲಾವಣೆಯ ವಿರುದ್ಧದ ಅತಿದೊಡ್ಡ ಆಂದೋಲನವಾಗಿ ಬೆಳೆದಿದೆ. ನಾವು ನಮ್ಮ ದೇಹವನ್ನು ಹೇಗೆ ನಡೆಸಿಕೊಳ್ಳುತ್ತೇವೆಯೋ, ಪರಿಸರವೂ ಹಾಗೆಯೇ ಇರುತ್ತದೆ. ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ಅತಿಯಾದ ಸ್ಕ್ರೀನ್ ಟೈಮ್ ಮತ್ತು ದೈಹಿಕ ಚಟುವಟಿಕೆಯ…

Read More

World Theatre Day 2026: ಮಾರ್ಚ್‌ 27 ರಂದೇ ವಿಶ್ವ ರಂಗಭೂಮಿ ದಿನವನ್ನು ಆಚರಿಸುವುದೇಕೆ?

ರಂಗಭೂಮಿ (Theatre) ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ. ಹೀಗಾಗಿ ಈ ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಹೋದ ಅದೆಷ್ಟೋ ಕಲಾವಿದರು ಇದ್ದಾರೆ. ಪ್ರಾಚೀನ ಕಾಲದ ಕಲಾ ಪ್ರಕಾರಗಳಲ್ಲಿ ಒಂದಾದ ಈ ರಂಗಭೂಮಿ  ಹಿಂದಿನಿಂದಲೂ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲಿದೆ. ಈ ಹಿನ್ನಲೆಯಲ್ಲಿ ರಂಗಭೂಮಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಮಾರ್ಚ್ 27. ಈ ದಿನದಂದು ವಿಶ್ವ ರಂಗಭೂಮಿ ದಿನವನ್ನು (World Theatre Day) ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ರಂಗಭೂಮಿ ದಿನದ ಇತಿಹಾಸವೇನು? ವಿಶ್ವ ರಂಗಭೂಮಿ ದಿನದ ಇತಿಹಾಸದತ್ತ ಕಣ್ಣಾಯಿಸಿದರೆ…

Read More

ನಟಿ ಸಂಜನಾ ಬುರ್ಲಿಗೆ ತಾಳಿ ಕಟ್ಟಿ ಪ್ರೀತಿಯಿಂದ ಕೆನ್ನೆಗೆ ಮುತ್ತಿಟ್ಟ ಸಮರ್ಥ್

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದ ಸಂಜನಾ ಬುರ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮರ್ಥ್ ಅವರ ಜೊತೆ ಸಂಜನಾ ಮದುವೆ ನಡೆದಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಸಂಜನಾ ಬುರ್ಲಿ ಹಾಗೂ ಸಮರ್ಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಮಾರ್ಚ್ 25ರಂದು ಇವರ ಮದುವೆ ನಡೆದಿದೆ ಎಂದು ಹೇಳಲಾಗುತ್ತಾ ಇದೆ. ರೆಸಾರ್ಟ್ ಒಂದರಲ್ಲಿ ಮದುವೆ ನಡೆದಿದೆ. ತಾಳಿ ಕಟ್ಟಿದ ಬಳಿಕ ಸಮರ್ಥ್ ಅವರು ಸಂಜನಾ ಬುರ್ಲಿ ಅವರಿಗೆ…

Read More

ತುಳಸಿ ಕಟ್ಟೆಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು? ಪ್ರತೀ ಸುತ್ತಿನ ಹಿಂದಿನ ಮಹತ್ವ ಇಲ್ಲಿ ತಿಳಿಯಿರಿ

ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಸ್ಥಾನಮಾನವಿದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಮಾತು ಮರಗಳ ಸಂರಕ್ಷಣೆ ಮತ್ತು ಅದರ ಪ್ರಯೋಜನಗಳನ್ನು ಸಾರುತ್ತದೆ. ಆಹಾರ, ನೆರಳು, ವಾಸಕ್ಕೆ ಸಹಕಾರಿ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ವೃಕ್ಷಗಳ ಜೊತೆಗೆ, ಕೆಲವು ವೃಕ್ಷಗಳನ್ನು ಪೂಜನೀಯ ಭಾವದಿಂದ ಕಾಣಲಾಗುತ್ತದೆ. ಅವುಗಳಲ್ಲಿ ಅರಳೀ ಮರದ ಜೊತೆಗೆ ತುಳಸಿ ಗಿಡವು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರಲೇಬೇಕು ಎಂಬ ನಂಬಿಕೆಯಿದೆ. ತುಳಸಿ ಗಿಡವನ್ನು ಕೇವಲ ಬೆಳೆಸುವುದು, ನೀರು ಹಾಕುವುದು, ಅಥವಾ ವಿವಾಹ…

Read More

ಇನ್ನು ಡೀಸೆಲ್​ಗಿಲ್ಲ ಅಬಕಾರಿ ಸುಂಕ! ಪೆಟ್ರೋಲ್ ಸುಂಕ ಭಾರಿ ಕಡಿತ: ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ

ನವದೆಹಲಿ, ಮಾರ್ಚ್​ 27: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು  ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್‌ ಸುಂಕ ಶೂನ್ಯಕ್ಕೆ ಇಳಿದಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಹೇರಿದ ದಿಗ್ಬಂಧನದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುವ ಭೀತಿಯ ಮಧ್ಯೆ ಈ ಕಡಿತ ಮಾಡಲಾಗಿದೆ. ಪೆಟ್ರೋಲ್: ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಹಾರ್ಮುಜ್…

Read More

‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

‘ಧುರಂಧರ್ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು. ಪಾರ್ವತಮ್ಮ ರಾಜ್​​​ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು….

Read More

20 ಬಾರಿ ಬೇಯಿಸಿದರೂ ಮಾಂಸ ಬೆಂದಿಲ್ಲ ಎಂದು ಕುಕ್ಕರ್ ಹಿಡಿದು ಪೊಲೀಸ್ ಠಾಣೆಗೆ ಹೋದ ವ್ಯಕ್ತಿ

ಆಂಧ್ರಪ್ರದೇಶ, ಮಾರ್ಚ್​ 27: ಮಾಂಸ(Meat) ಬೇಯಲಿಲ್ಲ ಎಂದ್ರೆ ಯಾರಾದ್ರೂ ಪೊಲೀಸ್ ಠಾಣೆಗೆ ಹೋಗ್ತಾರಾ ಎಂದು ನೀವು ಪ್ರಶ್ನೆ ಕೇಳಬಹುದು. ಇಲ್ಲೊಬ್ಬ ವ್ಯಕ್ತಿ  ಇಪ್ಪತ್ತು ಬಾರಿ ಬೇಯಿಸಿದರೂ ಬೇಯದ ಮಾಂಸವಿರುವ ಕುಕ್ಕರ್ ಹಿಡಿದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಎನ್​ಡಿಟಿವಿ ವರದಿ ಪ್ರಕಾರ,  ತಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಲ ಹಾಜಿ ಸ್ಥಳೀಯ ಮಾರಾಟಗಾರರಿಂದ ಮೇಕೆ ತಲೆಯ ಮಾಂಸವನ್ನು ಖರೀದಿಸಿದ್ದರು. ಸ್ಥಳೀಯವಾಗಿ ತಲಾಕುರ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ತಲೆ ಮಾಂಸದ ಕರಿಯನ್ನು ತಯಾರಿಸಲು ಉತ್ಸುಕರಾಗಿದ್ದ…

Read More