ನವದೆಹಲಿ, ಮಾರ್ಚ್ 27: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಹೇರಿದ ದಿಗ್ಬಂಧನದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುವ ಭೀತಿಯ ಮಧ್ಯೆ ಈ ಕಡಿತ ಮಾಡಲಾಗಿದೆ.
ಪೆಟ್ರೋಲ್: ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಮತ್ತು ಅಮೆರಿಕ-ಇರಾನ್ ಯುದ್ಧದ ಬೆದರಿಕೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 114 ಡಾಲರ್ಗಿಂತ ಹೆಚ್ಚಿದ್ದವು. ಡೀಸೆಲ್ ಮೇಲಿನ ಸುಂಕ 10 ರೂ.ನಿಂದ ಶೂನ್ಯಕ್ಕೆ ಇಳಿಕೆಯಾಗಿದೆ.
‘ಧುರಂಧರ್ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು.
ಪಾರ್ವತಮ್ಮ ರಾಜ್ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್, ವಿಜಯಲಕ್ಷ್ಮೀ, ಶ್ರೀನಾಥ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿ ಮೂರು ದಶಕ ಕಳೆಯುತ್ತಾ ಬಂದಿದೆ. ಈ ಸಿನಿಮಾ ಸಂಪೂರ್ಣವಾಗಿ ಭಯೋತ್ಪಾದನೆಯ ಮೇಲೆ ಇದೆ. ಈ ಚಿತ್ರದ ದೃಶ್ಯವೊಂದು ಈಗ ವೈರಲ್ ಆಗಿದೆ.
ಸಿಬಿಐ ಮುಖ್ಯಸ್ಥ (ಶ್ರೀನಾಥ್) ಗುರು (ರಾಘವೇಂದ್ರ ರಾಜ್ಕುಮಾರ್) ಬಳಿ ಬಂದು ಭಯೋತ್ಪಾದಕ ಜೊತೆ ಸೇರುವಂತೆ ಕೋರುತ್ತಾನೆ. ಭಯೋತ್ಪಾದಕರ ಜೊತೆ ಸೇರಿ ಅವರಲ್ಲಿ ಒಬ್ಬರಾಗಿ ಭಯೋತ್ಪಾದಕ ಪ್ಲ್ಯಾನ್ ನಾಶ ಮಾಡುವಂತೆ ಸಿಬಿಐ ಮುಖ್ಯಸ್ಥ ಕೋರಿಕೆ ಇಡುತ್ತಾನೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಅನೇಕರು ‘ಧುರಂಧರ್’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ.
In 1998, I think this is the first movie related to national security, infiltration and terr0r!sts. The story plot was so GOATed and everyone were shocked about the climax just like #Dhurandhar2TheRevenge
Swastik remains as one of the cult movies from KFI. It deserved IH status https://t.co/wPFML6hOoT
ಧುರಂಧರ್ ಸಿನಿಮಾದಲ್ಲೂ ರಣವೀರ್ ಸಿಂಗ್ ಬಳಿ ಬರುವ ಆರ್ ಮಾಧವನ್ ಇದೇ ರೀತಿಯ ಬೇಡಿಕೆ ಇಡುತ್ತಾನೆ. ಈ ದೃಶ್ಯಕ್ಕೆ ಹೋಲಿಕೆ ಇರುವುದರಿಂದ ಅನೇಕರು ‘ಸ್ವಸ್ತಿಕ್’ ಚಿತ್ರವನ್ನು ‘ಧುರಂಧರ್’ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ‘ಸ್ವಸ್ತಿಕ್’ ಚಿತ್ರದಲ್ಲಿ ಸೇನಾ ಮುಖ್ಯಸ್ಥನೇ ವಿಲನ್ ಆಗಿರುತ್ತಾನೆ. ಉಗ್ರರ ಜೊತೆ ಸೇರಿ ಆತನೇ ಕೆಟ್ಟ ಕೆಲಸ ಮಾಡುತ್ತಾ ಇರುತ್ತಾನೆ. ಆದರೆ,‘ಧುರಂಧರ್ 2’ ಚಿತ್ರದಲ್ಲಿ ಆ ರೀತಿ ಆಗುವುದಿಲ್ಲ.
ಈಗ ಧುರಂಧರ್ ರಿಲೀಸ್ ಬೆನ್ನಲ್ಲೇ ಈ ಸಿನಿಮಾದ ಕ್ಲಿಪ್ ವೈರಲ್ ಆಗುತ್ತಿದೆ. ಸುಮಾರು 30 ವರ್ಷಗಳ ಹಿಂದೆಯೇ ಉಪೇಂದ್ರ ಅವರು ಅಷ್ಟು ಬ್ರಿಲಿಯಂಟ್ ಆಗಿ ಸಿನಿಮಾ ಮಾಡಿದ್ದರು ಎಂದು ಅನೇಕರು ಹೇಳಿದ್ದಾರೆ.
ಆಂಧ್ರಪ್ರದೇಶ, ಮಾರ್ಚ್ 27: ಮಾಂಸ(Meat) ಬೇಯಲಿಲ್ಲ ಎಂದ್ರೆ ಯಾರಾದ್ರೂ ಪೊಲೀಸ್ ಠಾಣೆಗೆ ಹೋಗ್ತಾರಾ ಎಂದು ನೀವು ಪ್ರಶ್ನೆ ಕೇಳಬಹುದು. ಇಲ್ಲೊಬ್ಬ ವ್ಯಕ್ತಿ ಇಪ್ಪತ್ತು ಬಾರಿ ಬೇಯಿಸಿದರೂ ಬೇಯದ ಮಾಂಸವಿರುವ ಕುಕ್ಕರ್ ಹಿಡಿದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಎನ್ಡಿಟಿವಿ ವರದಿ ಪ್ರಕಾರ, ತಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಲ ಹಾಜಿ ಸ್ಥಳೀಯ ಮಾರಾಟಗಾರರಿಂದ ಮೇಕೆ ತಲೆಯ ಮಾಂಸವನ್ನು ಖರೀದಿಸಿದ್ದರು.
ಸ್ಥಳೀಯವಾಗಿ ತಲಾಕುರ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ತಲೆ ಮಾಂಸದ ಕರಿಯನ್ನು ತಯಾರಿಸಲು ಉತ್ಸುಕರಾಗಿದ್ದ ಹಾಜಿ, ಮಾಂಸವನ್ನು ಬೇಯಿಸಲು ಪ್ರಾರಂಭಿಸಿದರು. ಸುಮಾರು 20 ಪ್ರಯತ್ನಗಳ ನಂತರವೂ, ಮಾಂಸವು ಗಟ್ಟಿಯಾಗಿಯೇ ಉಳಿದಿತ್ತು. ಗೊಂದಲಕ್ಕೊಳಗಾದ ಮತ್ತು ಹತಾಶನಾದ ಹಾಜಿ, ಇಡೀ ಅಡುಗೆ ಪಾತ್ರೆಯನ್ನು ಸಾಕ್ಷಿಯಾಗಿ ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಒಮ್ಮೆ ಈ ದೂರಿನ ಬಗ್ಗೆ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಆಶ್ಚರ್ಯಚಕಿತರಾದರು ಆದರೆ ಸಮಸ್ಯೆಯನ್ನು ತನಿಖೆ ಮಾಡಲು ಒಪ್ಪಿಕೊಂಡರು.
ಮಾಂಸ ಮಾರಾಟಗಾರರೊಂದಿಗೆ ನಡೆದ ಚರ್ಚೆ ಬಳಿಕ, ಪಟ್ಟಣ ವೃತ್ತ ನಿರೀಕ್ಷಕ ಆನಂದ ರಾವ್ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿದರು.ಮಾರಾಟಗಾರರು ಅದೇ ಪ್ರಮಾಣದ ತಾಜಾ, ಖಾದ್ಯ ಮಟನ್‌ನೊಂದಿಗೆ ಬದಲಿಯನ್ನು ಒದಗಿಸಲು ಒಪ್ಪಿಕೊಂಡರು.
ಆ ಮಾಂಸವು ಕತ್ತರಿಸಿಟ್ಟು ಬು ಸಮಯ ಕಳೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಇದು ಅನೇಕ ಪ್ರಯತ್ನಗಳ ಹೊರತಾಗಿಯೂ ಅದು ಗಟ್ಟಿಯಾಗಿ ಮತ್ತು ಬೇಯಿಸದೆ ಇರುವುದಕ್ಕೆ ಕಾರಣವಾಗಿರಬಹುದು. ಮಾರಾಟಗಾರರು ಸ್ಪಷ್ಟ ವಿವರಣೆಯನ್ನು ನೀಡಲಿಲ್ಲ, ಆದರೆ ಪ್ರಾಣಿಯ ವಯಸ್ಸು ಕಾರಣ ಎಂದು ಹೇಳಲಾಗುತ್ತಿದೆ.
ರಾಯಚೂರು, ಮಾರ್ಚ್ 27: ನಯಾರಾ ಕಂಪನಿಯ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಇದೀಗ ಆ ಕಂಪನಿ ಬಂಕ್ಗಳತ್ತ ಗ್ರಾಹಕರೇ ಸುಳಿಯುತ್ತಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆಯಾಗಿದೆ. ಈ ಏಕಾಏಕಿ ದರ ಹೆಚ್ಚಳದಿಂದಾಗಿ ಬೈಕ್ ಸವಾರರು ನಯಾರಾ ಪೆಟ್ರೋಲ್ ಬಂಕ್‌ಗಳಿಂದ ದೂರ ಸರಿಯುತ್ತಿದ್ದಾರೆ. ಬಂಕ್‌ನತ್ತ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ನಯಾರಾ ಪೆಟ್ರೋಲ್ ಬಂಕ್‌ಗಳಿಗೆ ಹೆದ್ದಾರಿ ಮಾರ್ಗವಾಗಿ ಹೋಗುವವರು ಮಾತ್ರ ಭೇಟಿ ನೀಡುತ್ತಿದ್ದಾರೆ. ಉಳಿದ ಬೈಕ್ ಸವಾರರು ನಗರದೊಳಗಿನ ಇತರ ಪೆಟ್ರೋಲ್ ಬಂಕ್‌ಗಳ ಕಡೆಗೆ ಮುಖ ಮಾಡಿದ್ದು, ಅಲ್ಲಿ ಸಂದಣಿ ಹೆಚ್ಚಾಗಿದೆ. 300 ರೂಪಾಯಿಗೆ 3 ಲೀಟರ್ ಪೆಟ್ರೋಲ್ ಸಿಗುತ್ತಿದ್ದ ಜಾಗದಲ್ಲಿ, ಈಗ 315 ರೂಪಾಯಿಗೆ ಕೇವಲ 2.8 ಲೀಟರ್ ಸಿಗುತ್ತಿದೆ ಎಂದು ಬೈಕ್ ಸವಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 27: ಚಿನ್ನದ ಬೆಲೆಯಲ್ಲಿ (Gold rate) ನಿರಂತರ ಏರುಪೇರು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗೋಲ್ಡ್ ಕಾಯಿನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. 2, 4, 6 ಹಾಗೂ 8 ಗ್ರಾಂ ಗೋಲ್ಡ್ ಕಾಯಿನ್‌ಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಜನರ ಬೇಡಿಕೆ ಪೂರೈಸಲು ಮಳಿಗೆಗಳು ಪರದಾಡುವ ಸ್ಥಿತಿ ಎದುರಾಗಿದೆ.
ಉತ್ತಮ ಲಾಭ ಪಡೆಯುವ ನಿರೀಕ್ಷೆ
ನಗರದ ಬಂಗಾರದ ಮಳಿಗೆಗಳಲ್ಲಿ ಗ್ರಾಹಕರು ಅಂಗಡಿಗೆ ಪ್ರವೇಶಿಸುತ್ತಿದ್ದಂತೆಯೇ ಗೋಲ್ಡ್ ಕಾಯಿನ್‌ಗಳನ್ನು ಕೇಳುತ್ತಿರುವುದರಿಂದ ಬೆಳಗ್ಗೆ ಅಂಗಡಿಗೆ ತರಲಾಗುವ ಕಾಯಿನ್‌ಗಳು ಮಧ್ಯಾಹ್ನದ ವೇಳೆಗೇ ಮಾರಾಟವಾಗುತ್ತಿವೆ. ವಿಶೇಷವಾಗಿ 2 ಮತ್ತು 4 ಗ್ರಾಂ ಗೋಲ್ಡ್ ಕಾಯಿನ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಉತ್ತಮ ಲಾಭ ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಜನರು ಹೂಡಿಕೆಗಾಗಿ ಕಾಯಿನ್‌ಗಳನ್ನು ಖರೀದಿಸುತ್ತಿದ್ದಾರೆ.
ಚಿನ್ನದ ದರದಲ್ಲಿ ಅಸ್ಥಿರತೆ
ಇನ್ನೊಂದೆಡೆ, ಕಳೆದ ಮೂರು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಅಸ್ಥಿರತೆ ಕಂಡುಬಂದಿದೆ. ನಿನ್ನೆ ಒಂದೇ ದಿನ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,450 ರೂಪಾಯಿ ಏರಿಕೆಯಾಗಿದೆ. ಮಾರ್ಚ್ 23ರಂದು 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,635 ರೂಪಾಯಿಯಾಗಿದ್ದು, ಎರಡು ದಿನಗಳಲ್ಲಿ 345 ರೂಪಾಯಿ ಏರಿಕೆಯಾಗಿದೆ. ಆದರೆ, ಇಂದು ಮಾರುಕಟ್ಟೆ ಆರಂಭದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,465 ರೂಪಾಯಿಯಾಗಿದ್ದು, ಸಂಜೆ ವೇಳೆಗೆ 215 ರೂಪಾಯಿ ಇಳಿಕೆಯಾಗಿ 13,250 ರೂಪಾಯಿಗೆ ತಲುಪಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗಬಹುದು ಎಂಬ ಭಯದಲ್ಲಿ ಗ್ರಾಹಕರು ಕಡಿಮೆ ದರದಲ್ಲಿ ಚಿನ್ನ ಖರೀದಿಸಲು ಮುಂದಾಗಿದ್ದಾರೆ. ಆಭರಣಗಳಿಗಿಂತ ಗೋಲ್ಡ್ ಕಾಯಿನ್‌ಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಗಮನಾರ್ಹವಾಗಿದೆ.
‘ಬಾಸ್’ ಹೆಸರಿನ ಚಿತ್ರವನ್ನು ಮಾಡಲಾಗಿದೆ. ಇದು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯವಾಗಿ ಪ್ರಥಮ್ ಮಾಡಿದ್ದಾರೆ. ‘ನನಗೆ ಕೋಪ ಬಂದಾಗ ಕೆಲವು ಮಾತುಗಳನ್ನು ಆಡಿದ್ದೇನೆ. ಹಾಗಂತ ಅವರ ಮೇಲೆ ವೈಯಕ್ತಿಕವಾಗಿ ಏನೋ ಇದೆ ಎಂದಲ್ಲ. ಯಾರೇ ಸಿನಿಮಾ ಮಾಡಿದರೂ ಮತ್ತೊಬ್ಬರಿಗೆ ನೋವಾಗಂದತೆ ಮಾಡಲಿ’ ಎಂದು ಪ್ರಥಮ್ ಕೋರಿಕೊಂಡಿದ್ದಾರೆ.
ಇಂದೋರ್, ಮಾರ್ಚ್ 27: ವಸತಿ ಪ್ರದೇಶದಲ್ಲಿ ಪೆಂಟ್ಹೌಸ್ಗಳ ವಾಣಿಜ್ಯ ಬಳಕೆಯ ಕುರಿತು ನಡೆದ ವಿವಾದ ಕೊನೆಗೆ ಮಾರಣಾಂತಿಕವಾಯಿತು. ವ್ಯಕ್ತಿಯೊಬ್ಬ ಅಪಾರ್ಟ್ಮೆಂಟ್ ನಿವಾಸಿಗಳ ಮೇಲೆ ಕಾರಿ ಹತ್ತಿಸಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳಾ ಟೆಕ್ಕಿ ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಹತ್ತರಿಂದ ಹದಿನೈದು ಮಂದಿ ನಿವಾಸಿಗಳು ಅಲ್ಲಿದ್ದರು.
ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಟ್ರಾಫಿಕ್ ಮತ್ತು ವಾಯುಮಾಲಿನ್ಯದ ಸಮಸ್ಯೆಗೆ ಮುಕ್ತಿ ನೀಡಲು ಬಿಎಂಆರ್‌ಸಿಎಲ್ (BMRCL) ತನ್ನ ಜಾಲ ವಿಸ್ತರಣೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಮೆಟ್ರೋ ಮಾರ್ಗಗಳಿಗಾಗಿ ಅತ್ಯಾಧುನಿಕ ಚಾಲಕರಹಿತ (Driverless Train) ರೈಲುಗಳು ಶೀಘ್ರದಲ್ಲೇ ಆಗಮಿಸಲಿವೆ. ಬೆಂಗಳೂರಿನ ಬಿಇಎಂಎಲ್ (BEML) ಕಾರ್ಖಾನೆಯಿಂದ ಈ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಒಟ್ಟು ನಾಲ್ಕು ಹೊಸ ರೈಲು ಸೆಟ್‌ಗಳು ಬಿಎಂಆರ್‌ಸಿಎಲ್ ಕೈಸೇರಲಿವೆ.
ಮೇ ತಿಂಗಳಲ್ಲಿ ಪಿಂಕ್ ಲೈನ್ ಭಾಗಶಃ ಆರಂಭ ಸಾಧ್ಯತೆ
ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ವಿಶೇಷವಾಗಿ ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಒಟ್ಟು ಆರು ಮೆಟ್ರೋ ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಈ ಮಾರ್ಗಕ್ಕಾಗಿ ಈಗಾಗಲೇ 5 ರೈಲುಗಳು ಬಂದಿದ್ದು, ಏಪ್ರಿಲ್ ವೇಳೆಗೆ ಮತ್ತೊಂದು ರೈಲು ಆಗಮಿಸಲಿದೆ. ಇದರಿಂದ ದಕ್ಷಿಣ ಬೆಂಗಳೂರಿನ ಜನರಿಗೆ ಟ್ರಾಫಿಕ್ ಕಿರಿಕಿರಿಯಿಂದ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ.
ಏರ್ ಪೋರ್ಟ್ ಮಾರ್ಗಕ್ಕೂ ಸಜ್ಜಾಗುತ್ತಿದೆ ಬ್ಲೂ ಲೈನ್
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 59 ಕಿ.ಮೀ ಉದ್ದದ ಬ್ಲೂ ಲೈನ್ ಮಾರ್ಗವು ಬೆಂಗಳೂರಿನ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.
ಸಿಲ್ಕ್ ಬೋರ್ಡ್ ಟು ಕೆ.ಆರ್. ಪುರ: 19.75 ಕಿ.ಮೀ (13 ನಿಲ್ದಾಣಗಳು)
ಕೆ.ಆರ್. ಪುರ ಟು ಏರ್ ಪೋರ್ಟ್: 38 ಕಿ.ಮೀ ವಿಸ್ತೀರ್ಣ
ಈ ಬೃಹತ್ ಮಾರ್ಗಕ್ಕಾಗಿ ಒಟ್ಟು 38 ಚಾಲಕರಹಿತ ರೈಲುಗಳಿಗೆ ಬಿಇಎಂಎಲ್‌ಗೆ ಆರ್ಡರ್ ನೀಡಲಾಗಿದೆ. ಇದರ ಮೊದಲ ಹಂತವಾಗಿ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಎರಡು ರೈಲುಗಳು ಬರಲಿವೆ ಎಂದು ತಿಳಿದುಬಂದಿದೆ.
ಮೆಟ್ರೋ ಮಾರ್ಗಗಳ ವಿಸ್ತರಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ ಎರಡನೇ ಅತಿದೊಡ್ಡ ಟ್ರಾಫಿಕ್ ಸಿಟಿ ಎಂಬ ಕುಖ್ಯಾತಿ ಹೊಂದಿರುವ ಬೆಂಗಳೂರಿನಲ್ಲಿ ಮೆಟ್ರೋ ಒಂದೇ ಸರಿಯಾದ ಪರಿಹಾರ. ಪಿಂಕ್ ಲೈನ್ ಬೇಗ ಆರಂಭವಾದರೆ ತಾವರೆಕೆರೆ ಮತ್ತು ಸಿಲ್ಕ್ ಬೋರ್ಡ್ ಭಾಗದ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಪ್ರಯಾಣಿಕರು ಆಶಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರು ಪೆದ್ದಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕಡೆಯಿಂದ ಇಂದು ಏನಾದರೂ ಅಪ್ಡೇಟ್ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಅವರ ಬರ್ತ್ಡೇ ಸಂದರ್ಭದಲ್ಲಿ ಅವರ ಸಂಭಾವನೆ ಹಾಗೂ ಅವರ ಐಷಾರಾಮಿ ಜೀವನದ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ವಿವರ.
ರಾಮ್ ಚರಣ್ ಅವರ ಪ್ರತಿ ತಿಂಗಳ ಗಳಿಕೆ 3 ಕೋಟಿ ರೂಪಾಯಿ. ವಿವಿಧ ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರ ಆಸ್ತಿ 1400 ಕೋಟಿ ರೂಪಾಯಿ. ‘ಆರ್ಆರ್ಆರ್’ ಚಿತ್ರಕ್ಕಾಗಿ ಅವರು ಬರೋಬ್ಬರಿ 45 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು ಎನ್ನಲಾಗಿದೆ. ರಾಮ್ ಚರಣ್ ಅವರು ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಅವರು ಒಂದಲ್ಲ ಎರಡಲ್ಲ 34 ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ ಎಂದರೆ ನಂಬಲೇಬೇಕು. ಪೆಪ್ಸಿ, ಅಪೊಲೋ ಜಿಯಾ, ಫ್ರೂಟಿ ಮೊದಲಾದ ಬ್ರ್ಯಾಂಡ್ಗಳನ್ನು ಅವರು ಪ್ರಮೋಟ್ ಮಾಡುತ್ತಾರೆ.
ಅವರ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಜುಬ್ಲಿ ಹಿಲ್ಸ್ನಲ್ಲಿ 25 ಸಾವಿರ ಚದರ ಅಡಿಯ ಜಾಗ ಹೊಂದಿದ್ದು, ಐಷಾರಾಮಿ ಮನೆ ಇದೆ. ಇದರ ಬೆಲೆ 38 ಕೋಟಿ ರೂಪಾಯಿ ಎನ್ನಲಾಗಿದೆ. ಮುಂಬೈನಲ್ಲಿ ಮನೆ ಹೊಂದಿರುವ ಕೆಲವೇ ಕೆಲವು ದಕ್ಷಿಣದ ಸ್ಟಾರ್ಗಳಲ್ಲಿ ರಾಮ್ ಚರಣ್ ಹೆಸರೂ ಇದೆ. ಅವರು ಮುಂಬೈನಲ್ಲಿ ದುಬಾರಿ ಪೆಂಟ್ಹೌಸ್ ಹೊಂದಿದ್ದಾರೆ. ಮುಂಬೈ ಹೋದಾಗ ಇಲ್ಲಿ ವಾಸಿಸುತ್ತಾರೆ.
ರಾಮ್ ಚರಣ್ ಬಳಿ ದುಬಾರಿ ಕಾರು ಹಾಗೂ ಜೆಟ್ಗಳಿವೆ. TRUJet ಹೆಸರಿನ ಏರ್ಲೈನ್ಸ್ನ ರಾಮ್ ಚರಣ್ ಹೊಂದಿದ್ದರು. ಇವರ ಬಳಿ ಪ್ರೈವೆಟ್ ಜೆಟ್ ಕೂಡ ಇದೆ. ಇದರ ಜೊತೆಗೆ ಮರ್ಸಿಡೀಸ್ಬೆಂಜ್ ಮೇಬ್ಯಾಷ್ ಜಿಎಲ್ಎಸ್ 600 ಇದೆ. ಇದರ ಬೆಲೆ 4 ಕೋಟಿ ರೂಪಾಯಿಗೂ ಅಧಿಕವಾಗಿದೆ. ಆಡಿ, ರೋಲ್ಸ್ ರಾಯ್ಸ್ ಪ್ಯಾಂಟಂ, ರೇಂಜ್ ರೋವರ್ ಆಟೋಬಯೋಗ್ರಫಿ, ಆಸ್ಟನ್ ಮಾರ್ಟಿನ್, ಫೆರಾರಿ ಕಾರುಗಳ ಒಡೆಯ ಅವರಾಗಿದ್ದಾರೆ.
ರಾಮ್ ಚರಣ್ ಅವರು ಪತ್ನಿ ಉಪಾಸನಾ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಕ್ಲಿನ್ಕಾರಾ ಹೆಸರಿನ ಮಗಳು ಕೂಡ ಇದ್ದಾಳೆ. ಈಗ ಅವಳಿ ಮಕ್ಕಳು ಜನಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ರಾಮ್ ಚರಣ್ ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಸೋಲಿನ ಬೇಸರದಲ್ಲಿದ್ದಾರೆ. ಪೆದ್ದಿ ಚಿತ್ರದಲ್ಲಿ ಅವರು ಬ್ಯುಸಿ ಇದ್ದಾರೆ.
ರಾಮ್ ಚರಣ್ ಅವರಿಗೆ (Ram Charan) ಇಂದು (ಮಾರ್ಚ್ 27) ಜನ್ಮದಿನ. ಈ ಬಾರಿ ಅವರಿಗೆ ಖುಷಿ ಹಾಗೂ ದುಃಖ ಎರಡೂ ಇದೆ. ಅವರ ಬಾಳಲ್ಲಿ ಅವಳಿ ಮಕ್ಕಳ ಆಗಮನ ಆಗಿದೆ. ಇದೇ ವೇಳೆ ಶೂಟಿಂಗ್ ವೇಳೆ ಅವರಿಗೆ ಗಾಯ ಆಗಿದೆ. ರಾಮ್ ಚರಣ್ ಅವರ ಆಸ್ತಿ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಒಟ್ಟೂ ಆಸ್ತಿ ಬರೋಬ್ಬರಿ 1,400 ಕೋಟಿ ರೂಪಾಯಿ ಅಷ್ಟಿದೆ. ಇದಕ್ಕೆ ಕಾರಣಾಗಿದ್ದು ಉದ್ಯಮ. ಹೌದು, ರಾಮ್ ಚರಣ್ ಕೇವಲ ಹೀರೋ ಮಾತ್ರವಲ್ಲ, ಅವರು ಯಶಸ್ವಿ ಉದ್ಯಮಿ ಕೂಡ ಹೌದು. ಆ ಬಗ್ಗೆ ಇಲ್ಲಿದೆ ವಿವರ.
ರಾಮಚರಣ್ ಸಿನಿಮಾಗೆ ಕಾಲಿಟ್ಟಿದ್ದು ‘ಚಿರುತಾ’ ಸಿನಿಮಾ ಮೂಲಕ. ಈ ಚಿತ್ರ 2007ರಲ್ಲಿ ತೆರೆಗೆ ಬಂತು. ರಾಮ್ ಚರಣ್ ತಂದೆ ಚಿರಂಜೀವಿ ಸ್ಟಾರ್ ಹೀರೋ. ಹೀಗಾಗಿ, ಚಿತ್ರದಲ್ಲಿ ನಟಿಸಲು ಸುಲಭದಲ್ಲಿ ಅವಕಾಶ ಸಿಕ್ಕಿತು. 19 ವರ್ಷಗಳಲ್ಲಿ ರಾಮ್ ಚರಣ್ ಮಾಡಿದ್ದು ಕೇವಲ 15 ಸಿನಿಮಾ ಮಾತ್ರ.
ರಾಮ್ ಚರಣ್ ಬಣ್ಣ ಹಚ್ಚಿದ ಸಿನಿಮಾಗಳ ಪೈಕಿ ದೊಡ್ಡ ಗೆಲುವು ಕಂಡಿದ್ದು ಕಡಿಮೆ. ‘ಮಗಧೀರ’, ‘ರಂಗಸ್ಥಳಂ’, ‘ಆರ್ಆರ್ಆರ್’ ಚಿತ್ರಗಳು ಸೂಪರ್ ಡೂಪರ್ ಹಿಟ್ ಆದವು. ‘ಬ್ರೂಸ್ಲಿ’ ಚಿತ್ರವು ಸಾಧಾರಣ ಗೆಲುವು ಕಂಡಿತು. ಉಳಿದ ಸಿನಿಮಾಗಳು ಅಂದುಕೊಂಡಂತೆ ಯಶಸ್ಸು ಕಂಡಿಲ್ಲ ಎಂದರೂ ತಪ್ಪಾಗಲಾರದು. ರಾಮ್ ಚರಣ್ ಅವರು ಉದ್ಯಮದಿಂದ ಹೆಚ್ಚು ಹಣ ಮಾಡುತ್ತಾ ಇದ್ದಾರೆ.
ರಾಮ್ ಚರಣ್ ಅವರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್ ಪೋಲೋ ರೈಡಿಂಗ್ ಕ್ಲಬ್ ಅವರ ಹೆಸರಲ್ಲಿ ಇದೆ. ರಾಮ್ ಚರಣ್ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ‘ಖಿಲಾಡಿ ನಂಬರ್ 150’ (2017), ‘ಸೈರಾ ನರಸಿಂಹ ರೆಡ್ಡಿ’ (2019), ‘ಆಚಾರ್ಯ’ (2022) ಸಿನಿಮಾಗಳನ್ನು ನಿರ್ಮಿಸಿದ್ದಾರೆ.
ರಾಮ್ ಚರಣ್ ಅವರು ಏರ್ಲೈನ್ಸ್ ಹೊಂದಿದ್ದರು. ಇದಕ್ಕೆ ಟ್ರ್ಯೂಜೆಟ್ ಎನ್ನುವ ಹೆಸರನ್ನು ಕೂಡ ಇಡಲಾಗಿತ್ತು. ಆದರೆ, ಇತ್ತೀಚೆಗೆ ಇದು ಆಪರೇಷನ್ ನಿಲ್ಲಿಸಿದೆ. ರಾಮ್ ಚರಣ್ ಅವರು ಅಪೊಲೋ ಆಸ್ಪತ್ರೆಯಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನು ಅವರ ಪತ್ನಿ ಉಪಾಸನಾ ತಾತ ಪ್ರತಾಪ್ ಚಂದ್ರ ರೆಡ್ಡಿ ಆರಂಭಿಸಿದ್ದರು. ಇದರ ಜೊತೆ ಸಿನಿಮಾಗಳಿಗೆ ರಾಮ್ ಚರಣ್ ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ.