ಬೆಂಗಳೂರು ವಾತಾವರಣದಲ್ಲಿ ಬದಲಾವಣೆ: ಮಕ್ಕಳಲ್ಲಿ ಹೆಚ್ಚಿದ ಸಾಂಕ್ರಾಮಿಕ ರೋಗಗಳ ಭೀತಿ
ಪ್ರಾತಿನಿಧಿಕ ಚಿತ್ರImage Credit source: gettyimages ಬೆಂಗಳೂರು, ಜೂನ್ 01: ಸಿಲಿಕಾನ್ ಸಿಟಿಯಲ್ಲಿ (bangaluru) ಕಳೆದ ಕೆಲವು ದಿನಗಳಿಂದ ಕಂಡುಬರುತ್ತಿರುವ ಮಳೆ ಮತ್ತು ಅತಿಯಾದ ಸೆಕೆಯ ವಾತಾವರಣವು ಸಾರ್ವಜನಿಕರನ್ನು, ಅದರಲ್ಲೂ ಮುಖ್ಯವಾಗಿ ಪುಟಾಣಿ ಮಕ್ಕಳನ್ನು (Children) ಹೈರಾಣಾಗಿಸಿದೆ. ಹವಾಮಾನ ವೈಪರೀತ್ಯದ ಬೆನ್ನಲ್ಲೇ ರಾಜಧಾನಿಯಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಡೆಂಗ್ಯೂ ಸೇರಿ ವೈರಾಣು ಜ್ವರಗಳ ಪ್ರಕರಣಗಳು ತೀವ್ರವಾಗಿ ಉಲ್ಬಣಿಸುತ್ತಿದ್ದು, ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸುವಂತೆ ಪೋಷಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಮುಖ್ಯಾಂಶಗಳು ಬೆಂಗಳೂರಿನಲ್ಲಿ ಬದಲಾವಣೆ ಹವಾಮಾನದಿಂದ…