Headlines

nagaraj11081993

ಪೆಟ್ರೋಲ್ ಡೀಸೆಲ್ ದರ ಏರಿಕೆ: ನಯಾರಾ ಪೆಟ್ರೋಲ್ ಬಂಕ್​ನತ್ತ ಸುಳಿಯದ ವಾಹನ ಸವಾರರು

ರಾಯಚೂರು, ಮಾರ್ಚ್ 27: ನಯಾರಾ ಕಂಪನಿಯ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಇದೀಗ ಆ ಕಂಪನಿ ಬಂಕ್​ಗಳತ್ತ ಗ್ರಾಹಕರೇ ಸುಳಿಯುತ್ತಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆಯಾಗಿದೆ. ಈ ಏಕಾಏಕಿ ದರ ಹೆಚ್ಚಳದಿಂದಾಗಿ ಬೈಕ್ ಸವಾರರು ನಯಾರಾ ಪೆಟ್ರೋಲ್ ಬಂಕ್‌ಗಳಿಂದ ದೂರ ಸರಿಯುತ್ತಿದ್ದಾರೆ. ಬಂಕ್‌ನತ್ತ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ನಯಾರಾ ಪೆಟ್ರೋಲ್ ಬಂಕ್‌ಗಳಿಗೆ ಹೆದ್ದಾರಿ ಮಾರ್ಗವಾಗಿ ಹೋಗುವವರು ಮಾತ್ರ ಭೇಟಿ…

Read More

Gold Coin: ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಗೋಲ್ಡ್ ಕಾಯಿನ್​ಗೆ ಭಾರೀ ಬೇಡಿಕೆ!

ಬೆಂಗಳೂರು, ಮಾರ್ಚ್​ 27: ಚಿನ್ನದ ಬೆಲೆಯಲ್ಲಿ (Gold rate) ನಿರಂತರ ಏರುಪೇರು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗೋಲ್ಡ್ ಕಾಯಿನ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. 2, 4, 6 ಹಾಗೂ 8 ಗ್ರಾಂ ಗೋಲ್ಡ್ ಕಾಯಿನ್‌ಗಳನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಜನರ ಬೇಡಿಕೆ ಪೂರೈಸಲು ಮಳಿಗೆಗಳು ಪರದಾಡುವ ಸ್ಥಿತಿ ಎದುರಾಗಿದೆ. ಉತ್ತಮ ಲಾಭ ಪಡೆಯುವ ನಿರೀಕ್ಷೆ ನಗರದ ಬಂಗಾರದ ಮಳಿಗೆಗಳಲ್ಲಿ ಗ್ರಾಹಕರು ಅಂಗಡಿಗೆ ಪ್ರವೇಶಿಸುತ್ತಿದ್ದಂತೆಯೇ ಗೋಲ್ಡ್ ಕಾಯಿನ್‌ಗಳನ್ನು ಕೇಳುತ್ತಿರುವುದರಿಂದ ಬೆಳಗ್ಗೆ ಅಂಗಡಿಗೆ ತರಲಾಗುವ ಕಾಯಿನ್‌ಗಳು ಮಧ್ಯಾಹ್ನದ ವೇಳೆಗೇ ಮಾರಾಟವಾಗುತ್ತಿವೆ. ವಿಶೇಷವಾಗಿ…

Read More

ಯಾರಿಗೂ ನೋವಾಗದಂತೆ ಸಿನಿಮಾ ಮಾಡಲಿ; ‘ಬಾಸ್’ ಚಿತ್ರದ ಬಗ್ಗೆ ಪ್ರಥಮ್ ರಿಯಾಕ್ಷನ್

‘ಬಾಸ್’ ಹೆಸರಿನ ಚಿತ್ರವನ್ನು ಮಾಡಲಾಗಿದೆ. ಇದು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯವಾಗಿ ಪ್ರಥಮ್ ಮಾಡಿದ್ದಾರೆ. ‘ನನಗೆ ಕೋಪ ಬಂದಾಗ ಕೆಲವು ಮಾತುಗಳನ್ನು ಆಡಿದ್ದೇನೆ. ಹಾಗಂತ ಅವರ ಮೇಲೆ ವೈಯಕ್ತಿಕವಾಗಿ ಏನೋ ಇದೆ ಎಂದಲ್ಲ. ಯಾರೇ ಸಿನಿಮಾ ಮಾಡಿದರೂ ಮತ್ತೊಬ್ಬರಿಗೆ ನೋವಾಗಂದತೆ ಮಾಡಲಿ’ ಎಂದು ಪ್ರಥಮ್ ಕೋರಿಕೊಂಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

Video: ಸಣ್ಣ ವಿವಾದ, ಅಪಾರ್ಟ್​ಮೆಂಟ್ ನಿವಾಸಿಗಳ ಮೇಲೆ ಕಾರು ಹತ್ತಿಸಿದ ವ್ಯಕ್ತಿ, ಮಹಿಳಾ ಟೆಕ್ಕಿ ಸಾವು

ಇಂದೋರ್, ಮಾರ್ಚ್​ 27: ವಸತಿ ಪ್ರದೇಶದಲ್ಲಿ ಪೆಂಟ್​ಹೌಸ್​ಗಳ ವಾಣಿಜ್ಯ ಬಳಕೆಯ ಕುರಿತು ನಡೆದ ವಿವಾದ ಕೊನೆಗೆ ಮಾರಣಾಂತಿಕವಾಯಿತು. ವ್ಯಕ್ತಿಯೊಬ್ಬ ಅಪಾರ್ಟ್​​ಮೆಂಟ್ ನಿವಾಸಿಗಳ ಮೇಲೆ ಕಾರಿ ಹತ್ತಿಸಿರುವ ಘಟನೆ ಇಂದೋರ್​ನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳಾ ಟೆಕ್ಕಿ ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಹತ್ತರಿಂದ ಹದಿನೈದು ಮಂದಿ ನಿವಾಸಿಗಳು ಅಲ್ಲಿದ್ದರು.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  Source link

Read More

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಪಿಂಕ್ ಮತ್ತು ಬ್ಲೂ ಲೈನ್‌ಗೆ ಬರಲಿವೆ 4 ಚಾಲಕರಹಿತ ರೈಲುಗಳು!

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಟ್ರಾಫಿಕ್ ಮತ್ತು ವಾಯುಮಾಲಿನ್ಯದ ಸಮಸ್ಯೆಗೆ ಮುಕ್ತಿ ನೀಡಲು ಬಿಎಂಆರ್‌ಸಿಎಲ್ (BMRCL) ತನ್ನ ಜಾಲ ವಿಸ್ತರಣೆಗೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮತ್ತು ಬ್ಲೂ ಲೈನ್ ಮೆಟ್ರೋ ಮಾರ್ಗಗಳಿಗಾಗಿ ಅತ್ಯಾಧುನಿಕ ಚಾಲಕರಹಿತ (Driverless Train) ರೈಲುಗಳು ಶೀಘ್ರದಲ್ಲೇ ಆಗಮಿಸಲಿವೆ. ಬೆಂಗಳೂರಿನ ಬಿಇಎಂಎಲ್ (BEML) ಕಾರ್ಖಾನೆಯಿಂದ ಈ ತಿಂಗಳು ಮತ್ತು ಮುಂದಿನ ತಿಂಗಳಲ್ಲಿ ಒಟ್ಟು ನಾಲ್ಕು ಹೊಸ ರೈಲು ಸೆಟ್‌ಗಳು ಬಿಎಂಆರ್‌ಸಿಎಲ್ ಕೈಸೇರಲಿವೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಭಾಗಶಃ ಆರಂಭ…

Read More

ರಾಮ್ ಚರಣ್ ವರ್ಷದ ಆದಾಯದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು

ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರು ಪೆದ್ದಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕಡೆಯಿಂದ ಇಂದು ಏನಾದರೂ ಅಪ್​​​ಡೇಟ್ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಅವರ ಬರ್ತ್​​ಡೇ ಸಂದರ್ಭದಲ್ಲಿ ಅವರ ಸಂಭಾವನೆ ಹಾಗೂ ಅವರ ಐಷಾರಾಮಿ ಜೀವನದ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ವಿವರ. ರಾಮ್ ಚರಣ್ ಅವರ ಪ್ರತಿ ತಿಂಗಳ ಗಳಿಕೆ 3 ಕೋಟಿ ರೂಪಾಯಿ. ವಿವಿಧ ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರ ಆಸ್ತಿ 1400 ಕೋಟಿ…

Read More

ರಾಮ್ ಚರಣ್ ಒಟ್ಟೂ ಆಸ್ತಿ ಎಷ್ಟು? ಗಳಿಕೆ ಹೇಗೆಲ್ಲ ಆಗುತ್ತೆ?

ರಾಮ್ ಚರಣ್ ಅವರಿಗೆ (Ram Charan) ಇಂದು (ಮಾರ್ಚ್​ 27) ಜನ್ಮದಿನ. ಈ ಬಾರಿ ಅವರಿಗೆ ಖುಷಿ ಹಾಗೂ ದುಃಖ ಎರಡೂ ಇದೆ. ಅವರ ಬಾಳಲ್ಲಿ ಅವಳಿ ಮಕ್ಕಳ ಆಗಮನ ಆಗಿದೆ. ಇದೇ ವೇಳೆ ಶೂಟಿಂಗ್ ವೇಳೆ ಅವರಿಗೆ ಗಾಯ ಆಗಿದೆ. ರಾಮ್ ಚರಣ್ ಅವರ ಆಸ್ತಿ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಒಟ್ಟೂ ಆಸ್ತಿ ಬರೋಬ್ಬರಿ 1,400 ಕೋಟಿ ರೂಪಾಯಿ ಅಷ್ಟಿದೆ. ಇದಕ್ಕೆ ಕಾರಣಾಗಿದ್ದು ಉದ್ಯಮ. ಹೌದು, ರಾಮ್ ಚರಣ್ ಕೇವಲ ಹೀರೋ ಮಾತ್ರವಲ್ಲ,…

Read More

Madhya Pradesh: ಸಿಎಂ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ಬಸ್ ಅಪಘಾತ, ಹತ್ತು ಮಂದಿ ಸಾವು

ಚಿಂದ್ವಾರ, ಮಾರ್ಚ್​ 27: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಭಾಗವಹಿಸಿದ್ದ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದ ಬಸ್ ಅಪಘಾತ(Accident)ಕ್ಕೀಡಾಗಿದ್ದು, ಮೂವರು ಮಹಿಳೆಯರು ಸೇರಿ 10 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಚಿಂದ್ವಾರದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ನಾಗ್ಪುರ ರಸ್ತೆಯ ಸಿಮಾರಿಯಾ ಬಳಿ ಬಸ್ ಪಿಕ್-ಅಪ್ ವಾಹನಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ 47 ಪ್ರಯಾಣಿಕರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಮೃತರಲ್ಲಿ ಆರು ಪುರುಷರು, ಮೂವರು ಮಹಿಳೆಯರು ಮತ್ತು ಒಂದು…

Read More

ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ

ಪಾಕಿಸ್ತಾನ ಸೂಪರ್ ಲೀಗ್ (PSL) ಆರಂಭ ಆಗಿದೆ. ಮಾರ್ಚ್ 26ರಂದು ಓಪನಿಂಗ್ ಮ್ಯಾಚ್ ನಡೆದಿದೆ. ಆದರೆ, ಈ ಪಂದ್ಯವನ್ನು ನೋಡಲು ಒಬ್ಬೇ ಒಬ್ಬರೂ ಬಂದಿರಲಿಲ್ಲ. ಹಾಗಂತ ಇದರ ಮೇಲೆ ಯಾರೊಬ್ಬರಿಗೂ ಆಸಕ್ತಿ ಇಲ್ಲ ಎಂದಲ್ಲ. ಇದಕ್ಕೆ ಕಾರಣ ಆಗಿದ್ದು ಇಸ್ರೇಲ್​-ಅಮೆರಿಕ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ. ಈ ಯುದ್ಧ ಪಿಎಸ್​​​ಎಲ್​ ಮೇಲೆ ನೇರ ಪರಿಣಾಮ ಬೀರಿದೆ. ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಒಟ್ಟೂ 8 ತಂಡಗಳು ಆಡುತ್ತಿವೆ. ಮಾರ್ಚ್ 26ರಿಂದ ಆರಂಭ ಆಗಿ ಮೇ 3ರಂದು ಫೈನಲ್…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದ ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ; 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ಬೆಂಗಳೂರು, ಮಾರ್ಚ್​ 27: ರಾಜ್ಯದ ಹಲವೆಡೆ ಕಳೆದ ಮೂರು-ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗಿದೆ. ಇಂದೂ ಸಹ ಹಲವೆಡೆ ಮಳೆಯಾಗುವ (Weather Forecast) ಸೂಚನೆಯಿದ್ದು, ಹವಾಮಾನ ಇಲಾಖೆ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದ್ದು, ಗುಡುಗು, ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಈ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು-ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್​ ನೀಡಲಾಗಿದೆ….

Read More