All posts by nagaraj11081993

Ram Navami 2026: ರಾಮ ನವಮಿ ಬಳಿಕ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ

Ram Navami 2026: ರಾಮ ನವಮಿ ಬಳಿಕ ಈ ಎರಡು ರಾಶಿಗಳಿಗೆ ಶುಭ ದಿನಗಳು ಆರಂಭ

ಇಂದು ದೇಶಾದ್ಯಂತ ಶ್ರೀ ರಾಮ ನವಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನದಂದು ಒಂದು ಅಪರೂಪದ ಗ್ರಹಗಳ ಸಂಯೋಗ ಸಂಭವಿಸುತ್ತಿದೆ. ಈ ಜ್ಯೋತಿಷ್ಯ ವಿದ್ಯಮಾನವು 12 ರಾಶಿಗಳ ಮೇಲೆ ಪ್ರಭಾವ ಬೀರಿದರೂ, ವಿಶೇಷವಾಗಿ ಎರಡು ರಾಶಿಚಕ್ರದವರಿಗೆ ಇದು ಸುವರ್ಣ ಕಾಲವನ್ನು ಹೊತ್ತು ತರಲಿದೆ. ಕಳೆದ ಕೆಲವು ಸಮಯದಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದ ಈ ರಾಶಿಗಳ ಜನರಿಗೆ ಶ್ರೀರಾಮನ ಆಶೀರ್ವಾದದಿಂದ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಈ ರಾಮ ನವಮಿಯು ಜೀವನದ ಹೊಸ ಅಧ್ಯಾಯಕ್ಕೆ ದಾರಿಯಾಗಲಿದೆ. ಎಷ್ಟೇ ಕಷ್ಟ ಬಂದರೂ ಎದೆಗುಂದದ ನಿಮ್ಮ ಸ್ವಭಾವಕ್ಕೆ ಈಗ ತಕ್ಕ ಪ್ರತಿಫಲ ಸಿಗಲಿದೆ. ದಂಪತಿಗಳ ನಡುವೆ ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ದೂರವಾಗಿ, ಪ್ರೀತಿ ಮತ್ತು ವಿಶ್ವಾಸ ಚಿಗುರಲಿದೆ.ದೀರ್ಘಕಾಲದ ಆರ್ಥಿಕ ಬಿಕ್ಕಟ್ಟುಗಳು ಬಗೆಹರಿಯಲಿವೆ. ಸಾಲದ ಬಾಧೆಯಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿದ್ದು, ನಿರೀಕ್ಷೆಗೂ ಮೀರಿ ಲಾಭ ಗಳಿಸುವಿರಿ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮೇಷ ರಾಶಿ:

ಶ್ರೀರಾಮನ ಕೃಪಾಕಟಾಕ್ಷದಿಂದ ಮೇಷ ರಾಶಿಯವರ ಸ್ಥಗಿತಗೊಂಡಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ವಿದೇಶಕ್ಕೆ ಹೋಗುವ ಹಂಬಲವಿದ್ದವರಿಗೆ ವೀಸಾ ಸಮಸ್ಯೆಗಳು ಬಗೆಹರಿದು ಶುಭ ಸುದ್ದಿ ಸಿಗಲಿದೆ. ಹಳೆಯ ಆಸ್ತಿ ಅಥವಾ ಜಮೀನಿನ ಮಾರಾಟದಿಂದ ನಿರೀಕ್ಷಿತ ಬೆಲೆ ದೊರೆತು ಹಠಾತ್ ಹಣದ ಹರಿವು ಹೆಚ್ಚಾಗಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ಮನ್ನಣೆ ಸಿಗಲಿದ್ದು, ಕೀರ್ತಿ ಹೆಚ್ಚಾಗಲಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉರುಳು ಸೇವೆಯ ಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹತ್ತಾರು ಕಾರ್ಯಕರ್ತರು!

ದಾವಣಗೆರೆ, ಮಾರ್ಚ್​ 27: ದಾವಣಗೆರೆ ನಗರದಲ್ಲಿ ರಾಜಕೀಯ ಬೆಳವಣಿಗೆಯೊಂದು ಗಮನ ಸೆಳೆದಿದೆ. ಹತ್ತಾರು ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಕಾರ್ಯಕರ್ತರು ದುರ್ಗಾಂಬಿಕಾ ದೇವಿಗೆ ಉರುಳು ಸೇವೆ ಸಲ್ಲಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿ ಪಕ್ಷ ಬದಲಾವಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಭಾವಚಿತ್ರವನ್ನು ಹಿಡಿದುಕೊಂಡು, ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Rama Navami: ರಾಮನವಮಿ ಇಂದು ಏಕೆ ಆಚರಿಸಲಾಗುತ್ತದೆ? ಪಂಚಾಂಗ ಹೇಳುವುದೇನು?

ಶ್ರೀರಾಮ ನವಮಿಯ ಮಹತ್ವ ಮತ್ತು ಅದರ ಆಚರಣೆಯ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶ್ರೀರಾಮ ನವಮಿಯೂ ಒಂದು. ತ್ರೇತಾಯುಗದಲ್ಲಿ ಶ್ರೀ ಮಹಾವಿಷ್ಣು ಮರ್ಯಾದಾ ಪುರುಷೋತ್ತಮನಾಗಿ ಅವತರಿಸಿದ ದಿನವೇ ಈ ಶ್ರೀರಾಮ ನವಮಿ. ರಾಮ ನವಮಿಯನ್ನು ಮಾರ್ಚ್ 26 ರಂದು ಆಚರಿಸಲಾಗುವುದು, ಆದರೆ ಮಹಾ ನವಮಿಯನ್ನು ಮಾರ್ಚ್ 27 ರಂದು ಆಚರಿಸಲಾಗುವುದು. ಅದು ಯಾಕೆ ಅಷ್ಟಮಿ ದಿನ ರಾಮನವಮಿಯನ್ನು ಆಚರಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಇಂದು ಶ್ರೀರಾಮ ನವಮಿ ಆಚರಣೆ ಏಕೆ?

ಪಂಚಾಂಗದ ಪ್ರಕಾರ, ನಿನ್ನೆ ರಾತ್ರಿ 11 ಗಂಟೆ 48 ನಿಮಿಷಕ್ಕೆ ನವಮಿ ಪ್ರಾರಂಭವಾಗಿ, ಇಂದು ಬೆಳಿಗ್ಗೆ 10 ಗಂಟೆ 6 ನಿಮಿಷಕ್ಕೆ ಮುಕ್ತಾಯಗೊಂಡರೂ, ಸೂರ್ಯೋದಯದಲ್ಲಿ ಯಾವ ತಿಥಿ ಇರುತ್ತದೆಯೋ, ಅಂದೇ ಆ ಸಂಪೂರ್ಣ ದಿನವನ್ನು ಆಚರಿಸುವ ಸಂಪ್ರದಾಯವಿದೆ. ಹಾಗಾಗಿ ಇಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಅಲ್ಲದೆ, ಇಂದು ಮಧ್ಯಾಹ್ನ 3 ಗಂಟೆ 24 ನಿಮಿಷದ ತನಕ ಪುನರ್ವಸು ನಕ್ಷತ್ರವೂ ಇರುವುದು ವಿಶೇಷ. ಇದು ಸಾಕ್ಷಾತ್ ಶ್ರೀರಾಮಚಂದ್ರರ ಜನ್ಮದಿನ.

ಶ್ರೀರಾಮ ನವಮಿ ಆಚರಣೆಗಳು ಹಳ್ಳಿಗಳಿಂದ ಹಿಡಿದು ದೇಶಾದ್ಯಂತ ವಿವಿಧ ರೂಪಗಳಲ್ಲಿ ನಡೆಯುತ್ತವೆ. ಈ ಸಂದರ್ಭದಲ್ಲಿ ಪಾನಕ, ಹೆಸರುಬೇಳೆ, ಪ್ರಸಾದ, ನೈವೇದ್ಯಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತದೆ. ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಅಭಿಷೇಕ ಹಾಗೂ ಕಲ್ಯಾಣೋತ್ಸವಗಳನ್ನು ನಡೆಸಲಾಗುತ್ತದೆ. ಈ ಆಚರಣೆಗಳು ಬಾಂಧವ್ಯಗಳನ್ನು ಬಲಪಡಿಸುತ್ತವೆ. ಅಲ್ಲದೆ, ಪಾನಕ ಮತ್ತು ಹೆಸರುಬೇಳೆಯಂತಹ ಆಹಾರ ಪದಾರ್ಥಗಳು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.

ಚೈತ್ರ ಮಾಸದ ಶುಕ್ಲಪಕ್ಷದ ಒಂಬತ್ತನೇ ದಿನವನ್ನು ಶ್ರೀರಾಮಚಂದ್ರರ ನವಮಿ ಎಂದು ಆಚರಿಸಲಾಗುತ್ತದೆ. ಇದು ಧರ್ಮದ ವಿಜಯದ ದಿನ. ಶ್ರೀರಾಮಚಂದ್ರರು ಸದಾ ಧರ್ಮ ಮಾರ್ಗದಲ್ಲಿಯೇ ನಡೆದ ಅದ್ಭುತ ಭಗವಂತನ ಸ್ವರೂಪವಾಗಿದ್ದರಿಂದ, ಅವರ ಆದರ್ಶ ಪಾಲನೆ ಈ ಹಬ್ಬದ ಮುಖ್ಯ ಉದ್ದೇಶ. ವಸಂತ ನವರಾತ್ರಿಯ ಮುಕ್ತಾಯವನ್ನೂ ಸಹ ಈ ದಿನ ಸೂಚಿಸುತ್ತದೆ. ಭಾರತದಾದ್ಯಂತ ಈ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವರು ರಾಮಾಯಣ ಪಾರಾಯಣ ಮಾಡಿದರೆ, ಇನ್ನು ಕೆಲವರು ಭಜನೆಗಳನ್ನು ನಡೆಸುತ್ತಾರೆ.

ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ಮಂತ್ರವನ್ನು ಪಠಿಸುವುದು ಈ ದಿನದ ಪ್ರಮುಖ ಆಚರಣೆಗಳಲ್ಲಿ ಒಂದು. ಈ ಮಹಾಮಂತ್ರವನ್ನು ಎಷ್ಟು ಹೆಚ್ಚಾಗಿ ಪಠಿಸುತ್ತೇವೆಯೋ, ಅಷ್ಟು ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ನೆಮ್ಮದಿ, ಶತ್ರುಕಾಟ, ಗ್ರಹಕಾಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಕೇವಲ ಈ ಮಹಾಮಂತ್ರವನ್ನು ಪಠಿಸುವುದರಿಂದ ವಿಷ್ಣು ಸಹಸ್ರನಾಮವನ್ನು ಸಂಪೂರ್ಣವಾಗಿ ಓದಿದ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ: ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ, ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕೆಲವು ಕಡೆ ಸೀತಾರಾಮ ಕಲ್ಯಾಣೋತ್ಸವಗಳನ್ನು, ವಿಶೇಷವಾಗಿ ರಾಮಾ-ಸೀತಾ ವಿವಾಹ ಮಹೋತ್ಸವಗಳನ್ನು ಆಚರಿಸಲಾಗುತ್ತದೆ. ಪಾನಕ, ಹೆಸರುಬೇಳೆ, ಮಜ್ಜಿಗೆ (ಬೆಲ್ಲ ಮತ್ತು ಒಣಶುಂಠಿ ಸೇರಿಸಿದ ನೀರು ಮಜ್ಜಿಗೆ) ದಾನ ಮಾಡುವುದು ಸಹ ಪುಣ್ಯ ಕಾರ್ಯವೆಂದು ನಂಬಲಾಗಿದೆ. ಇತರರ ಆರೋಗ್ಯದ ಬಗ್ಗೆ ಗಮನ ನೀಡಿದಾಗ, ಅದರ ಸತ್ಫಲ ನಮಗೆ ದ್ವಿಗುಣವಾಗಿ ದೊರೆಯುತ್ತದೆ.

ಕೆಲವು ಪ್ರದೇಶಗಳಲ್ಲಿ ಶೋಭಾಯಾತ್ರೆಗಳನ್ನು ಆಯೋಜಿಸಲಾಗುತ್ತದೆ. ರಾಮನ, ಸೀತೆಯ, ಲಕ್ಷ್ಮಣನ, ಹನುಮನ ವೇಷಧಾರಿಗಳು ಮೆರವಣಿಗೆಗಳಲ್ಲಿ ಪಾಲ್ಗೊಂಡು ಭಕ್ತರನ್ನು ರಂಜಿಸುತ್ತಾರೆ. ಈ ಹಬ್ಬದ ಮುಖ್ಯ ಉದ್ದೇಶ ಸತ್ಯತೆ, ತಾಳ್ಮೆ, ಸಹನೆ, ಇವೆಲ್ಲವನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ಶ್ರೀರಾಮಚಂದ್ರರ ಆದರ್ಶಗಳನ್ನು ಪಾಲಿಸುವುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮನೆ ಹುಡುಕುವುದು ಈಗ ‘ಮಿಷನ್ ಇಂಪಾಸಿಬಲ್’! ಬ್ಯಾಚುಲರ್ಸ್ ಸಂಕಷ್ಟ ಕೇಳೋರು ಯಾರು?

ಬೆಂಗಳೂರು, ಮಾ.27: ನಗರದಲ್ಲಿ ಮನೆಗಳು ಬಾಡಿಗೆಗೆ ಸಿಗುವುದು ತುಂಬಾ ಕಷ್ಟ, ಅದರಲ್ಲೂ ಬ್ಯಾಚುನರ್ಲ್​​​ಗಳಿಗೆ ಮನೆ ನೀಡಲು ಯೋಚನೆ ಮಾಡುತ್ತಾರೆ. ಮತ್ತು ಅವರ ಬಜೆಟ್​​ ಕೂಡ 10 ಸಾವಿರದ ಒಳಗೆ ಇರುತ್ತದೆ. ಆದರೆ ಇದೀಗ 10 ಸಾವಿರಕ್ಕೆ ಮನೆ ಸಿಗುವುದು ಕಷ್ಟವಾಗಿದೆ. ಈ ಬಗ್ಗೆ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೆಲೆಸುವ ಕನಸು ಹೊತ್ತು ಬರುವವರಿಗೆ ಈಗ ‘ಬಾಡಿಗೆ ಮನೆ’ ಎನ್ನುವುದು ಮರೀಚಿಕೆಯಾಗುತ್ತಿದೆ. ನಗರದ ಐಟಿ ಹಬ್‌ಗಳ ಸುತ್ತಮುತ್ತಲಷ್ಟೇ ಅಲ್ಲದೆ, ಸಾಮಾನ್ಯ ಪ್ರದೇಶಗಳಲ್ಲೂ ಬಾಡಿಗೆ ದರ ಗಗನಕ್ಕೇರಿದ್ದು, ಬಜೆಟ್ ಸ್ನೇಹಿ ಮನೆಗಳನ್ನು ಹುಡುಕುವುದು ಒಂದು ದೈನಂದಿನ ಹೋರಾಟವಾಗಿ ಮಾರ್ಪಟ್ಟಿದೆ.

ನಗರಕ್ಕೆ ಹೊಸದಾಗಿ ಕೆಲಸಕ್ಕೆ ಸೇರುವವರು ಅಥವಾ ವೃತ್ತಿಜೀವನ ಆರಂಭಿಸುವವರಿಗೆ 10,000 ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಕನಿಷ್ಠ ಸೌಲಭ್ಯವಿರುವ 1 BHK ಮನೆ ಸಿಗುವುದು ಅಸಾಧ್ಯವಾಗಿದೆ. ಯುವತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಂತೆ, ವಸತಿ ಪಡೆಯಲು ಕೇವಲ 7 ದಿನಗಳು ಬಾಕಿ ಇದ್ದರೂ ಸೂಕ್ತ ಮನೆ ಸಿಗದೆ ಆತಂಕ ಎದುರಿಸುತ್ತಿದ್ದಾರೆ. ಸತತ ಪ್ರಯತ್ನಗಳ ಹೊರತಾಗಿಯೂ ಅಗತ್ಯಕ್ಕೆ ತಕ್ಕ ಮನೆ ದೊರೆಯುತ್ತಿಲ್ಲ.

ಇದನ್ನೂ ಓದಿ: ರಾಜ್ಯದ ಈ ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ; 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಆನ್‌ಲೈನ್ ಪಟ್ಟಿಗಳ ಮೂಲಕ ಅಂತ್ಯವಿಲ್ಲದ ಬ್ರೌಸಿಂಗ್, ದಲ್ಲಾಳಿಗಳ ಕಾಟ, ಮತ್ತು ಹೆಚ್ಚಿನ ಬಾಡಿಗೆ ಅಥವಾ ಠೇವಣಿ ಕಾರಣದಿಂದ ಎದುರಾಗುವ ನಿರಾಕರಣೆಗಳು ಬಾಡಿಗೆದಾರರನ್ನು ಹತಾಶೆಗೊಳಿಸುತ್ತಿವೆ. ಸ್ಥಳ, ಸೌಕರ್ಯಗಳು ಮತ್ತು ವಿಸ್ತೀರ್ಣದ ವಿಚಾರದಲ್ಲಿ ರಾಜಿ ಮಾಡಿಕೊಂಡ ನಂತರವೂ ಬಜೆಟ್‌ನಲ್ಲಿ ಮನೆ ಹುಡುಕುವುದು ಸಮಯದ ವಿರುದ್ಧದ ಓಟದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತೊಕ್ಕೊಟ್ಟು ಫ್ಲೈಓವರ್‌ ಬಳಿ ರೌಡಿಶೀಟರ್‌ ಭೀಕರ ಹತ್ಯೆ: ಗ್ಯಾಂಗ್​ವಾರ್​ಗೆ ಹೋಯ್ತಾ ಜೀವ?

ಮಂಗಳೂರು, ಮಾರ್ಚ್​ 27: ನಗರದ (Mangalore) ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಶುಕ್ರವಾರ ನಸುಕಿನ ಜಾವ ರೌಡಿಶೀಟರ್‌ನೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮೃತರನ್ನು ತಲಪಾಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ (46) ಎಂದು ಗುರುತಿಸಲಾಗಿದೆ. ಕೊಲೆಗೆ ನೈಜ ಕಾರಣವೇನೆಂಬುದು ತಿಳಿಯಬೇಕಿದೆ.

ಆರಿಫ್ ಬೈಕ್​ಗೆ ಕಾರಿನಿಂದ ಡಿಕ್ಕಿ

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿಶೀಟರ್ ಆಗಿದ್ದ ಆರಿಫ್, ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಹಲ್ಲೆಗೊಳಗಾಗಿದ್ದಾನೆ. ಆರಿಫ್ ತೆರಳುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ರಸ್ತೆ ಮೇಲೆ ಬಿದ್ದಾಗ, ಕಾಯುತ್ತಾ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಯ ಭಾಗಕ್ಕೆ ಕಡಿದು ಕೊಲೆಗೈದಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಇದನ್ನೂ ಓದಿ ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ? ಅಕ್ರಮ ಸಂಬಂಧಕ್ಕೆ ಕೊಲೆಯಾದ ರಂಜಿತ್ ತಾಯಿ ಅಳಲು

ಈ ಮೊದಲೂ ನಡೆದಿತ್ತು ಕೊಲೆ ಯತ್ನ

ಆರಿಫ್ ವಿರುದ್ಧ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. 2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆತನ ಮೇಲೆ ಕೊಲೆ ಯತ್ನ ನಡೆದಿತ್ತು. ಹೀಗಾಗಿ ಈ ಹತ್ಯೆಗೆ ಗ್ಯಾಂಗ್‌ವಾರ್ ಹಿನ್ನೆಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Petrol-Diesel: ಭಾರತ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ್ದೇಕೆ? ಇಂಧನ ಬೆಲೆ ಅಗ್ಗವಾಗುತ್ತಾ?

ನವದೆಹಲಿ, ಮಾರ್ಚ್​ 27: ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದು ದೇಶದ ತೈಲ ಮಾರುಕಟ್ಟೆ ಕಂಪನಿಗಳ ಮೇಲೆ ಭಾರಿ ಒತ್ತಡ ಬೀರಿತ್ತು. ಅವುಗಳ ನಷ್ಟ ಹೆಚ್ಚುತ್ತಿತ್ತು. ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ(Excise Duty) ವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ತೈಲ ಕಂಪನಿಗಳು ನಿಟ್ಟುಸಿರು ಬಿಡುವಂತಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಉಂಟಾದ ಇಂಧನ ಬಿಕ್ಕಟ್ಟಿನ ಮಧ್ಯೆ, ಸರ್ಕಾರವು ಒಂದು ಪ್ರಮುಖ ಹೆಜ್ಜೆ ಇಟ್ಟಿದೆ.

ಮಾರ್ಚ್ 26 ರಂದು ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕ್ರಮದ ನಂತರ, ಈ ಹಿಂದೆ 13 ರೂಪಾಯಿಗಳಿದ್ದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಈಗ 3 ರೂಪಾಯಿಗಳಿಗೆ ಇಳಿಸಲಾಗಿದೆ ಮತ್ತು ಈ ಹಿಂದೆ 10 ರೂಪಾಯಿಗಳಿದ್ದ ಡೀಸೆಲ್ ಮೇಲಿನ ಅಬಕಾರಿ ಸುಂಕವು ಈಗ ಶೂನ್ಯವಾಗಿದೆ.

ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಕೇವಲ ಎರಡು ಆಯ್ಕೆಗಳಿದ್ದವು, ಇತರ ಎಲ್ಲಾ ರಾಷ್ಟ್ರಗಳು ಮಾಡಿದಂತೆ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸುವುದು ಅಥವಾ ಅಂತಾರಾಷ್ಟ್ರೀಯ ಏರಿಳಿತಗಳಿಂದ ಭಾರತೀಯ ನಾಗರಿಕರನ್ನು ರಕ್ಷಿಸುವ ಸಲುವಾಗಿ ಅದರ ಹಣಕಾಸಿನ ಮೇಲಿನ ಹೊರೆಯನ್ನು ತಾವೇ ಹೊರುವುದು.

ಮತ್ತಷ್ಟು ಓದಿ: ಇನ್ನು ಡೀಸೆಲ್​ಗಿಲ್ಲ ಅಬಕಾರಿ ಸುಂಕ! ಪೆಟ್ರೋಲ್ ಸುಂಕ ಭಾರಿ ಕಡಿತ: ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ

ತೈಲ ಕಂಪನಿಗಳಿಗೆ ದೊಡ್ಡ ಪರಿಹಾರ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯ ಸಮಸ್ಯೆಯನ್ನು ಎದುರಿಸುತ್ತಿರುವ ತೈಲ ಮಾರುಕಟ್ಟೆ ಕಂಪನಿಗಳಾದ HPCL, BPCL ಮತ್ತು IOC ಗಳಿಗೆ ಪರಿಹಾರ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಡಿತವು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ, ಅಂತರರಾಷ್ಟ್ರೀಯ ತೈಲ ಬೆಲೆಗಳು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಿದೆ. ಆದಾಗ್ಯೂ, ಈ ಬಿಕ್ಕಟ್ಟಿನ ಹೊರತಾಗಿಯೂ, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸ್ಥಿರವಾಗಿ ಕಾಯ್ದುಕೊಂಡಿದೆ, ಇದರಿಂದಾಗಿ ದೇಶದ ಇಂಧನ ಮಾರುಕಟ್ಟೆ ಕಂಪನಿಗಳು ಒತ್ತಡದಲ್ಲಿವೆ.

ತೈಲ ಮಾರುಕಟ್ಟೆ ಕಂಪನಿಗಳ ನಷ್ಟವು ಕಡಿಮೆಯಾಗುತ್ತೆ
ಕಚ್ಚಾ ತೈಲದ ಸರಾಸರಿ ಬೆಲೆ ಬ್ಯಾರೆಲ್‌ಗೆ 100-105 ಡಾಲರ್​​ ರಷ್ಟಿದ್ದರೆ, ಇಂಧನ ಕಂಪನಿಗಳು ಪೆಟ್ರೋಲ್‌ಗೆ ಲೀಟರ್‌ಗೆ 11 ರೂ ಮತ್ತು ಡೀಸೆಲ್‌ಗೆ ಲೀಟರ್‌ಗೆ 14 ರೂ ನಷ್ಟವನ್ನು ಅನುಭವಿಸಬಹುದು. ಈ ತಿಂಗಳ ಆರಂಭದಲ್ಲಿ, ಅಂತಾರಾಷ್ಟ್ರೀಯ ತೈಲ ಬೆಲೆಗಳು ಬ್ಯಾರೆಲ್‌ಗೆ 119 ಡಾಲರ್ ತಲುಪಿದ್ದವು, ನಂತರ ಅದು ಬ್ಯಾರೆಲ್‌ಗೆ ಸುಮಾರು 100 ಡಾಲರ್​ಗೆ ಇಳಿದಿದೆ. ಪ್ರಸ್ತುತ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂ ಮತ್ತು ಡೀಸೆಲ್ ಲೀಟರ್‌ಗೆ 87.67 ರೂ.ನಲ್ಲಿ ಸ್ಥಿರವಾಗಿದೆ.

ಭಾರತವು ತನ್ನ ಒಟ್ಟು ಕಚ್ಚಾ ತೈಲದ ಅಗತ್ಯದ ಸುಮಾರು 88 ಪ್ರತಿಶತವನ್ನು ಮತ್ತು ನೈಸರ್ಗಿಕ ಅನಿಲದ ಅರ್ಧದಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ, ಇದರಲ್ಲಿ ಹೆಚ್ಚಿನ ಭಾಗವು ಹಾರ್ಮುಜ್ ಜಲಸಂಧಿಯ ಮೂಲಕ ಬರುತ್ತದೆ. ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ, ಇರಾನ್ ಜಲಸಂಧಿಯನ್ನು ನಿರ್ಬಂಧಿಸಿತು, ವಾಸ್ತವಿಕವಾಗಿ ಟ್ಯಾಂಕರ್ ಸಂಚಾರವನ್ನು ಸ್ಥಗಿತಗೊಳಿಸಿತು.

ನಯಾರಾ ಎನರ್ಜಿ ಬೆಲೆಗಳನ್ನು ಹೆಚ್ಚಿಸಿದೆ. ದೇಶದ 102,075 ಪೆಟ್ರೋಲ್ ಪಂಪ್‌ಗಳಲ್ಲಿ 6,967 ಅನ್ನು ನಿರ್ವಹಿಸುವ ನಯಾರಾ ಎನರ್ಜಿ, ಹೆಚ್ಚಿದ ಕೆಲವು ವೆಚ್ಚಗಳನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿದೆ. ಅದರ ಪಂಪ್‌ಗಳಲ್ಲಿ ಪೆಟ್ರೋಲ್ ಲೀಟರ್‌ಗೆ 100.71 ರೂ. ಮತ್ತು ಡೀಸೆಲ್ ಲೀಟರ್‌ಗೆ 91.31 ರೂ. ಆಗಿದೆ. ಏತನ್ಮಧ್ಯೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಿಪಿಯ ಜಂಟಿ ಇಂಧನ ಚಿಲ್ಲರೆ ವ್ಯಾಪಾರಿ, 2,185 ಔಟ್‌ಲೆಟ್‌ಗಳನ್ನು ಹೊಂದಿರುವ ಜಿಯೋ-ಬಿಪಿ, ಭಾರೀ ನಷ್ಟದ ಹೊರತಾಗಿಯೂ ಇನ್ನೂ ಬೆಲೆಗಳನ್ನು ಹೆಚ್ಚಿಸಿಲ್ಲ. ಮಾರುಕಟ್ಟೆಯ ಸರಿಸುಮಾರು 90 ಪ್ರತಿಶತವನ್ನು ನಿಯಂತ್ರಿಸುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರಸ್ತುತ ಸ್ಥಿರ ಬೆಲೆಗಳನ್ನು ಕಾಯ್ದುಕೊಳ್ಳುತ್ತಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?
ಈಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವೇನೋ ಕಡಿಮೆಯಾಗಿದೆ ಆದರೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗುತ್ತಾ ಎಂಬುದು. ಆದರೆ ಚಿಲ್ಲರೆ ಇಂಧನ ಬೆಲೆಗಳಲ್ಲಿ ಇಳಿಕೆ ಖಚಿತವಾಗಿಲ್ಲ. ಭಾರತದಲ್ಲಿ ಚಿಲ್ಲರೆ ಇಂಧನ ಬೆಲೆಗಳನ್ನು ಸರ್ಕಾರವು ನೇರವಾಗಿ ನಿಯಂತ್ರಿಸುವುದಿಲ್ಲ.ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ನಂತಹ ತೈಲ ಮಾರುಕಟ್ಟೆ ಕಂಪನಿಗಳು ಬೆಲೆಗಳನ್ನು ನಿರ್ಧರಿಸುತ್ತವೆ, ಇವು ಚಿಲ್ಲರೆ ದರಗಳನ್ನು ಪರಿಷ್ಕರಿಸುವ ಮೊದಲು ಜಾಗತಿಕ ಕಚ್ಚಾ ಬೆಲೆಗಳು, ವಿನಿಮಯ ದರಗಳು ಮತ್ತು ತಮ್ಮದೇ ಆದ ಲಾಭಾಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ.

ಬೆಲೆಗಳು ಕಡಿಮೆಯಾಗಲ್ವಾ?
ತಜ್ಞರ ಪ್ರಕಾರ, ಈ ಕಂಪನಿಗಳು ಸುಂಕ ಕಡಿತದ ಲಾಭಾಂಶವನ್ನು ಗ್ರಾಹಕರಿಗೆ ತಕ್ಷಣವೇ ವರ್ಗಾಯಿಸುವ ಸಾಧ್ಯತೆ ಕಡಿಮೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ಬೆಲೆಗಳನ್ನು ತಕ್ಷಣವೇ ಕಡಿತಗೊಳಿಸುವ ಬದಲು ಹಿಂದಿನ ನಷ್ಟಗಳನ್ನು ಸರಿದೂಗಿಸಲು ಪ್ರಯತ್ನಿಸಬಹುದು. ಪ್ರಯೋಜನವು ಗ್ರಾಹಕರಿಗೆ ತಕ್ಷಣವೇ ಸಂಪೂರ್ಣವಾಗಿ ತಲುಪದಿರಬಹುದು.

ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ತೀವ್ರವಾಗಿ ಏರಿದ್ದು, ಪ್ರತಿ ಬ್ಯಾರೆಲ್‌ಗೆ ಸುಮಾರು 70 ಡಾಲರ್​ನಿಂದ ಸುಮಾರು 122 ಡಾಲರ್​ಗೆ ಏರಿದೆ. ಇದರ ಪರಿಣಾಮವಾಗಿ, ಪ್ರಪಂಚದಾದ್ಯಂತ ಇಂಧನ ಬೆಲೆಗಳು ಗಮನಾರ್ಹವಾಗಿ ಏರಿಕೆಯಾಗಿದ್ದು, ಹಲವಾರು ಪ್ರದೇಶಗಳಲ್ಲಿ ಶೇ.30 ರಿಂದ ಶೇ.50 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.

ಇಂಧನ ಬೆಲೆಗಳ ಮೇಲೆ ಪ್ರಭಾವ ಬೀರುವ ಅತಿದೊಡ್ಡ ಅಂಶವೆಂದರೆ ಜಾಗತಿಕ ಕಚ್ಚಾ ತೈಲ. ಬ್ರೆಂಟ್ ಕಚ್ಚಾ ತೈಲವು ಇನ್ನೂ ಬ್ಯಾರೆಲ್‌ಗೆ 100 ಡಾಲರ್​ಗಿಂತ ಹೆಚ್ಚು ವಹಿವಾಟು ನಡೆಸುತ್ತಿದೆ.ಅಬಕಾರಿ ಸುಂಕ ಕಡಿತವು ನೇರ ಬೆಲೆ ಕಡಿತಕ್ಕಿಂತ ಹೆಚ್ಚಾಗಿ ಒಂದು ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ತೈಲ ಕಂಪನಿಗಳಿಗೆ ಚಿಲ್ಲರೆ ದರಗಳಲ್ಲಿ ಇಳಿಕೆಗೆ ಒತ್ತಾಯಿಸುವ ಬದಲು, ಬೆಲೆಗಳನ್ನು ತಕ್ಷಣ ಹೆಚ್ಚಿಸದೆ ವೆಚ್ಚಗಳನ್ನು ನಿರ್ವಹಿಸಲು ಕೆಲವು ನಮ್ಯತೆಯನ್ನು ಒದಗಿಸುತ್ತದೆ.

ಈ ಕ್ರಮವು ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಬೆಲೆಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುವ ಸಾಧ್ಯತೆಯಿದೆ. ಇಂಧನ ಬೆಲೆಗಳಲ್ಲಿ ಅರ್ಥಪೂರ್ಣ ಕಡಿತವು ಒಂದು ಬಾರಿ ತೆರಿಗೆ ಕಡಿತಕ್ಕಿಂತ ಹೆಚ್ಚಾಗಿ ಕಚ್ಚಾ ತೈಲ ಬೆಲೆಗಳಲ್ಲಿ ನಿರಂತರ ಸಮತೋಲನೆ ಕಾಯ್ದುಕೊಳ್ಳಲು ಸಹಾಯ ಮಾಡಬಹುದು.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಂಡ ಮಕ್ಳನ್ನ ಬಿಟ್ಟು ಇವನೇ ಬೇಕಂತ ಯಾಕೆ ಬಂದವ್ಳೇ? ಅಕ್ರಮ ಸಂಬಂಧಕ್ಕೆ ಕೊಲೆಯಾದ ರಂಜಿತ್ ತಾಯಿ ಅಳಲು

ಆನೇಕಲ್, ಮಾರ್ಚ್ 27: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯಲ್ಲಿ ಭಾವನೇ ಬಾಮೈದನ ಕೊಲೆ ಮಾಡಿರುವ ಘಟನೆ ಸಂಬಂಧ ಇದೀಗ ಮೃತ ರಂಜಿತ್ ತಾಯಿ ಪ್ರತಿಕ್ರಿಯಿಸಿದ್ದಾರೆ. ಅಳಿಯ ಶ್ರೀನಿವಾಸನೇ ಮಗ ರಂಜಿತ್​​ನನ್ನು ಕೊಲೆ ಮಾಡಿದ್ದಾನೆ ಎಂದಿರುವ ಅವರು, ‘ನಮ್ಮ ಮಗ 24 ವರ್ಷದವನು, ಅವನಿಗೆ ಜ್ಞಾನ ಇರಲಿಲ್ಲ. ಆದರೆ ಆಕೆಗೆ (ಶ್ರೀನಿವಾಸ್ ತಂಗಿ) ಇಬ್ಬರು ಮಕ್ಕಳಿದ್ದರೂ ಆಕೆ ಆತನ ಹಿಂದೆ ಓಡಿಬಂದಳು. ಬುದ್ಧಿಹೇಳಿದರೂ ಕೇಳಲಿಲ್ಲ. ಅವರು ಅವರ ಹುಡುಗಿಯನ್ನು ಹುಷಾರಾಗಿ ಇಟ್ಟುಕೊಳ್ಳಬೇಕಿತ್ತು’ ಎಂದು ಅಳಲು ತೋಡಿಕೊಂಡಿದ್ದಾರೆ.

ರಂಜಿತ್​​ನ ಅಕ್ಕ ಪವಿತ್ರಾಳನ್ನು ಶ್ರೀನಿವಾಸ್​ಗೆ​​ ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕ ಶ್ರೀನಿವಾಸ್ ತಂಗಿ ಕೋಮಲ್​ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್​​ ಬೇರೊಬ್ಬರೊಂದಿಗೆ ಮದುವೆಯಾಗಿ ಮಕ್ಕಳಿದ್ದರೂ, ಗಂಡನನ್ನು ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.

ಪೂರ್ಣ ವಿವರಗಳಿಗೆ ಓದಿ: ಬಾಮೈದನೊಂದಿಗೆ ತಂಗಿ ಪರಾರಿ: ಕೋಪದಲ್ಲಿ ಬಾವ ಮಾಡಿದ್ದೇನು ಗೊತ್ತಾ?

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಷ್ಟ್ರಮಟ್ಟದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡುಗೇರಿಸಿಕೊಂಡ ಕೆಎಸ್​ಆರ್​ಟಿಸಿ!

ಬೆಂಗಳೂರು, ಮಾರ್ಚ್​ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ್ನು ತೋರಿದೆ. ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಅವಾರ್ಡ್​ಸ್​ನಲ್ಲಿ (Elets Mobility Excellence Awards 2026) ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಇನೋವೇಶನ್ ಇನ್ ಸಿಟಿಜೆನ್ ಎಂಗೇಜ್​ಮೆಂಟ್ ಆ್ಯಂಡ್ ಇನ್ಕ್ಲೂಸಿವ್ ಮೊಬಿಲಿಟಿ ಅಂದರೆ ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಧ್ವನಿ ಸ್ಪಂದನ ಯೋಜನೆ ಪ್ರಶಸ್ತಿ ಪಡೆದಿದೆ. ಅದರೊಂದಿಗೆ ಔಟ್​ಸ್ಟ್ಯಾಂಡಿಂಗ್ ಪಬ್ಲಿಕ್ ಟ್ರಾನ್ಸ್​ಪೋರ್ಟ್​ ಡಿಜಿಟೈಜೇಶನ್ ಇನಿಶಿಯೇಟಿವ್ ಅಂದರೆ ತಂತ್ರಜ್ಞಾನ ಆಧಾರಿತ ಯೋಜನೆಯು ಸಾರ್ವಜನಿಕ ಸಾರಿಗೆಯ ಡಿಜಿಟಲೀಕರಣದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ AWATAR 4.0 ಯೋಜನೆಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಯೋಜನೆ ಯುಪಿಐ ಪಾವತಿ ಸೌಲಭ್ಯವನ್ನು ಹೊಂದಿರುವುದರಿಂದ ಪ್ರಯಾಣಿಕರಿಗೆ ಹೆಚ್ಚು ಉಪಯೋಗಿಯಾಗಿದೆ.

ಧ್ವನಿ ಸ್ಪಂದನ ಯೋಜನೆ

ಮೈಸೂರು ನಗರ ಸಾರಿಗೆ ಬಸ್ಸುಗಳಲ್ಲಿನ ಸುಮಾರು 200 ಬಸ್ಸುಗಳಲ್ಲಿ ಜಾರಿಗೆ ತರಲಾದ ಧ್ವನಿ ಸ್ಪಂದನ ಯೋಜನೆ, ದೃಷ್ಟಿಹೀನ ಪ್ರಯಾಣಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಆನ್‌ಬೋರ್ಡ್ ಗುರುತು ಮತ್ತು ನಾವಿಗೇಶನ್ ವ್ಯವಸ್ಥೆಯಾಗಿದೆ. ಜರ್ಮನಿಯ GIZ ಸಂಸ್ಥೆಯ ಸಹಯೋಗದಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆ, ದೃಷ್ಟಿಹೀನರ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಅವರ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸ್ವತಂತ್ರ ಪ್ರಯಾಣವನ್ನು ಉತ್ತೇಜಿಸಿದೆ ಎಂದು ನಿಗಮ ತಿಳಿಸಿದೆ.

ಇದನ್ನೂ ಓದಿ ಕೆಎಸ್ಆರ್​​ಟಿಸಿ ʻಧ್ವನಿ ಸ್ಪಂದನʼ ಉಪಕ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ

ಏನಿದು AWATAR 4.0?

ಇನ್ನೊಂದೆಡೆ, AWATAR (Anywhere Anytime Advance Reservation) ಯೋಜನೆ KSRTCಯ ಡಿಜಿಟಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಿದ್ದು, ಪ್ರಯಾಣಿಕರು ವೆಬ್ ಹಾಗೂ ಮೊಬೈಲ್ ವೇದಿಕೆಗಳ ಮೂಲಕ ಎಲ್ಲಿಂದ ಬೇಕಾದರೂ, ಯಾವಾಗ ಬೇಕಾದರೂ ಟಿಕೆಟ್ ಕಾಯ್ದಿರಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ. ಒಟ್ಟಾರೆ, ಈ ಎರಡು ಪ್ರಶಸ್ತಿಗಳು KSRTCಯ ನವೀನತೆ ಮತ್ತು ಡಿಜಿಟಲೀಕರಣದ ದಿಸೆಯಲ್ಲಿ ಕೈಗೊಂಡ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಮಾನ್ಯತೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Earth Hour 2026: ಒಂದು ಗಂಟೆ ದೀಪ ಆರಿಸುವುದರಿಂದ ಪರಿಸರಕ್ಕಷ್ಟೇ ಅಲ್ಲ, ನಿಮ್ಮ ಮೆದುಳಿಗೂ ಇದೆ ಲಾಭ!

ಬೆಂಗಳೂರು, ಮಾ.27: ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ ಕೊನೆಯ ಶನಿವಾರದಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಒಂದು ಗಂಟೆಯ ಕಾಲ ದೀಪಗಳನ್ನು ಆರಿಸುವ ಮೂಲಕ ‘ಅರ್ಥ್ ಅವರ್’ ಆಚರಿಸಲಿದ್ದಾರೆ. 2007ರಲ್ಲಿ ಡಬ್ಲ್ಯೂಡಬ್ಲ್ಯೂಎಫ್ (WWF) ಆರಂಭಿಸಿದ ಈ ಅಭಿಯಾನವು ಇಂದು ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದ್ದು, ಹವಾಮಾನ ಬದಲಾವಣೆಯ ವಿರುದ್ಧದ ಅತಿದೊಡ್ಡ ಆಂದೋಲನವಾಗಿ ಬೆಳೆದಿದೆ.

ನಾವು ನಮ್ಮ ದೇಹವನ್ನು ಹೇಗೆ ನಡೆಸಿಕೊಳ್ಳುತ್ತೇವೆಯೋ, ಪರಿಸರವೂ ಹಾಗೆಯೇ ಇರುತ್ತದೆ. ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ಅತಿಯಾದ ಸ್ಕ್ರೀನ್ ಟೈಮ್ ಮತ್ತು ದೈಹಿಕ ಚಟುವಟಿಕೆಯ ಕೊರತೆ ಕೇವಲ ಆರೋಗ್ಯವನ್ನಷ್ಟೇ ಅಲ್ಲ, ಭೂಮಿಯ ಆರೋಗ್ಯವನ್ನೂ ಕೆಡಿಸುತ್ತಿವೆ.ಫ್ಯಾಕ್ಟರಿ ಫಾರ್ಮಿಂಗ್‌ನಿಂದ ಬರುವ ಸಂಸ್ಕರಿಸಿದ ಆಹಾರಗಳು ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾದರೆ, ಅತ್ತ ಪರಿಸರಕ್ಕೆ ಮಾರಕವಾದ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ.

ಅನುಕೂಲಕ್ಕಾಗಿ ನಾವು ಬಳಸುವ ಪ್ಲಾಸ್ಟಿಕ್ ಪ್ಯಾಕೇಜ್ಡ್ ಆಹಾರಗಳು ನಮ್ಮ ಕರುಳಿನ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ಭೂಮಿಯನ್ನೂ ಕಲುಷಿತಗೊಳಿಸುತ್ತಿವೆ. ನಾಳೆ ರಾತ್ರಿ ದೀಪ ಆರಿಸುವುದು ಕೇವಲ ಸಾಂಕೇತಿಕವಲ್ಲ, ಅದು ನಿಮ್ಮ ಮೆದುಳಿಗೂ ಒಳ್ಳೆಯದು.

ಏನಿದು ‘ಅರ್ಥ್ ಅವರ್’?

ಇದು ಹವಾಮಾನ ಬದಲಾವಣೆಯ (Climate Change) ವಿರುದ್ಧ ಹೋರಾಡಲು ಮತ್ತು ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಕೈಗೊಂಡಿರುವ ಅಭಿಯಾನ. ಇದರ ಭಾಗವಾಗಿ, ಪ್ರತಿ ವರ್ಷದ ಮಾರ್ಚ್ ತಿಂಗಳ ಕೊನೆಯ ಶನಿವಾರದಂದು ರಾತ್ರಿ 8:30 ರಿಂದ 9:30 ರವರೆಗೆ ಒಂದು ಗಂಟೆಯ ಕಾಲ ಮನೆಯ ಅಥವಾ ಕಚೇರಿಯ ಅನಗತ್ಯ ವಿದ್ಯುತ್ ದೀಪಗಳನ್ನು ಮತ್ತು ಉಪಕರಣಗಳನ್ನು ಆರಿಸಲಾಗುತ್ತದೆ.

ಇದನ್ನೂ ಓದಿ: ಮಾರ್ಚ್‌ 27 ರಂದೇ ವಿಶ್ವ ರಂಗಭೂಮಿ ದಿನವನ್ನು ಆಚರಿಸುವುದೇಕೆ?

ಕತ್ತಲೆಯಲ್ಲಿದೆ ಆರೋಗ್ಯದ ರಹಸ್ಯ!

ಮೆಲಟೋನಿನ್ ವೃದ್ಧಿ: ಕೃತಕ ಬೆಳಕು, ವಿಶೇಷವಾಗಿ ಸ್ಕ್ರೀನ್‌ಗಳ ‘ಬ್ಲೂ ಲೈಟ್’ ನಿದ್ರೆಗೆ ಪೂರಕವಾದ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಒಂದು ಗಂಟೆಯ ಕತ್ತಲೆ ನಿಮ್ಮ ನಿದ್ರೆಯ ಚಕ್ರವನ್ನು (Circadian Rhythm) ಸುಧಾರಿಸಲು ಸಹಾಯ ಮಾಡುತ್ತದೆ.

ಒತ್ತಡ ನಿವಾರಣೆ: ನಕ್ಷತ್ರಗಳಿರುವ ಕತ್ತಲ ಆಕಾಶದ ಕೆಳಗೆ ಕುಳಿತುಕೊಳ್ಳುವುದು ಅಥವಾ ಶಾಂತತೆಯನ್ನು ಅನುಭವಿಸುವುದು ದೇಹದಲ್ಲಿನ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.

ನಾಳೆ ಅರ್ಥ್ ಅವರ್ ಅನ್ನು ಅನಾನುಕೂಲತೆ ಎಂದು ಭಾವಿಸಬೇಡಿ, ಬದಲಾಗಿ ರಚನಾತ್ಮಕ ವಿರಾಮ, ನಿಮ್ಮ ಸ್ವಂತ ಜೀವನಶೈಲಿಯನ್ನು ಪರಿಶೀಲಿಸಲು ಅಂತರ್ನಿರ್ಮಿತ ಕ್ಷಣ ಎಂದು ಭಾವಿಸಿ. ಮೇಣದಬತ್ತಿಯ ಬೆಳಕಿನಲ್ಲಿ ಆರೋಗ್ಯಕರವಾದ ಹಾಗೂ ಸಸ್ಯಹಾರಗಳನ್ನು ಸೇವನೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Theatre Day 2026: ಮಾರ್ಚ್‌ 27 ರಂದೇ ವಿಶ್ವ ರಂಗಭೂಮಿ ದಿನವನ್ನು ಆಚರಿಸುವುದೇಕೆ?

ರಂಗಭೂಮಿ (Theatre) ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ. ಹೀಗಾಗಿ ಈ ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಹೋದ ಅದೆಷ್ಟೋ ಕಲಾವಿದರು ಇದ್ದಾರೆ. ಪ್ರಾಚೀನ ಕಾಲದ ಕಲಾ ಪ್ರಕಾರಗಳಲ್ಲಿ ಒಂದಾದ ಈ ರಂಗಭೂಮಿ  ಹಿಂದಿನಿಂದಲೂ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲಿದೆ. ಈ ಹಿನ್ನಲೆಯಲ್ಲಿ ರಂಗಭೂಮಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಮಾರ್ಚ್ 27. ಈ ದಿನದಂದು ವಿಶ್ವ ರಂಗಭೂಮಿ ದಿನವನ್ನು (World Theatre Day) ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ರಂಗಭೂಮಿ ದಿನದ ಇತಿಹಾಸವೇನು?

ವಿಶ್ವ ರಂಗಭೂಮಿ ದಿನದ ಇತಿಹಾಸದತ್ತ ಕಣ್ಣಾಯಿಸಿದರೆ 1961 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್ಸ್ಟಿಟ್ಯೂಟ್‌ (ಐಟಿಐ) ಈ ದಿನದ ಆಚರಣೆಯನ್ನು ಪರಿಚಯಿಸಿತು. ವಿಶ್ವ ರಂಗಭೂಮಿ ದಿನದಂದು ಫ್ರೆಂಚ್ ನಾಟಕಕಾರ ಜೀನ್ ಕಾಕ್ಟೋ ಅವರು ಮೊದಲ ಸಂದೇಶವನ್ನು ನೀಡುವ ಕೆಲಸವನ್ನು ಮಾಡಿದರು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 27 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮಾರ್ಚ್‌ 26 ರಂದು ನೇರಳೆ ದಿನವನ್ನು ಆಚರಿಸುವುದೇಕೆ ಗೊತ್ತಾ?

ವಿಶ್ವ ರಂಗಭೂಮಿ ದಿನದ ಮಹತ್ವ, ಆಚರಣೆ ಹೇಗೆ?

ಆಧುನಿಕತೆಗೆ ತೆರೆದು ಕೊಳ್ಳುತ್ತಿದ್ದಂತೆ ಪ್ರಾಚೀನ ಕಲೆಗಳು ಕಣ್ಮರೆಯಾಗುತ್ತಿದೆ. ಈ ಪ್ರಾಚೀನ ಕಲೆಯಾದ ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ರಂಗಭೂಮಿ ಕಲೆಗಳ ಸೌಂದರ್ಯ, ಸಾಂಸ್ಕೃತಿಕ ವಿನಿಮಯ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಆಚರಿಸುವುದು. ಈ ಕಲೆಯನ್ನೇ ನಂಬಿಕೊಂಡಿರುವ ಕಲಾವಿದರನ್ನು ಗೌರವಿಸುವುದು ಈ ದಿನದ ಮಹತ್ವವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಮತ್ತು ನಾಟಕ ಅಕಾಡೆಮಿಗಳು ಈ ದಿನದಂದು ವಿಶೇಷ ರಂಗಚಟುವಟಿಕೆಗಳನ್ನು ಆಯೋಜಿಸುತ್ತವೆ. ನಾಟಕ ಪ್ರದರ್ಶನಗಳು ಹಾಗೂ ಜಾಗೃತಿ ಕಾರ್ಯಾಗಾರಗಳು ನಡೆಯುತ್ತವೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link