All posts by nagaraj11081993

ಇರಾನ್​ಗೆ ತೈಲ ಮಾರಾಟದಿಂದ ದಿನಕ್ಕೆ 7,000 ಕೋಟಿ ರೂ ಆದಾಯ; ಇರಾನ್​ಗೂ ಭರ್ಜರಿ ಆಯಿಲ್ ಬ್ಯುಸಿನೆಸ್

ಇರಾನ್​ಗೆ ತೈಲ ಮಾರಾಟದಿಂದ ದಿನಕ್ಕೆ 7,000 ಕೋಟಿ ರೂ ಆದಾಯ; ಇರಾನ್​ಗೂ ಭರ್ಜರಿ ಆಯಿಲ್ ಬ್ಯುಸಿನೆಸ್

ನವದೆಹಲಿ, ಮಾರ್ಚ್ 26: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಶುರು ಮಾಡಿದ ಯುದ್ಧದಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಆಗುತ್ತಿದೆಯೋ ಸ್ಪಷ್ಟ ಇಲ್ಲ, ಆದರೆ ರಷ್ಯಾ ಮತ್ತು ಇರಾನ್​ನ ಆಯಿಲ್ ಬ್ಯುಸಿನೆಸ್ ಬಹಳ ಜೋರಾಗಿ ನಡೆಯುತ್ತಿದೆ. ಎರಡೂ ದೇಶಗಳು ತೈಲ ಮಾರಾಟದಿಂದ ಸಾವಿರಾರು ಕೋಟಿ ರೂ ಲಾಭ ಮಾಡುತ್ತಿವೆ. ತಂತಮ್ಮ ಯುದ್ಧ ಮುಂದುವರಿಸಲು ಈ ದೇಶಗಳಿಗೆ ಫಂಡಿಂಗ್ ಸಿಕ್ಕಂತಾಗಿದೆ.

ವಿಶ್ವದ ಶೇ. 20ಕ್ಕಿಂತಲೂ ಹೆಚ್ಚು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣವು ಈಗ ಇರಾನ್ ಬಳಿ ಇದೆ. ಈ ಕಿರು ಜಲಮಾರ್ಗದಲ್ಲಿ ಇರಾನ್ ಬಿಟ್ಟು ಬೇರೆ ದೇಶಗಳ ಹಡಗುಗಳು ಸಾಗುತ್ತಿಲ್ಲ. ಯುದ್ಧ ಶುರುವಾದಾಗಿನಿಂದ ತೈಲಕ್ಕೆ ಬಂದಿರುವ ಬೇಡಿಕೆಯು ಇರಾನ್​ಗೆ ಒಳ್ಳೆಯ ಬ್ಯುಸಿನೆಸ್ ತಂದಿದೆ.

ಇದನ್ನೂ ಓದಿ: ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ಇರಾನ್ ಈಗ ದಿನಕ್ಕೆ 16 ಲಕ್ಷ ಬ್ಯಾರಲ್ ಕಚ್ಛಾ ತೈಲವನ್ನು ಮಾರುತ್ತಿದೆ. ಯುದ್ಧಕ್ಕೆ ಮುಂಚೆ ಇರಾನ್​ಗೆ ವಿವಿಧ ನಿಷೇಧಗಳನ್ನು ಹಾಕಿದ್ದ ಅಮೆರಿಕವು ಈಗ ತೈಲ ಮಾರುವಂತೆ ಇರಾನ್​ಗೆ ದುಂಬಾಲು ಬಿದ್ದಿದೆ. ಯುದ್ಧ ಮುಂದುವರಿಸಲು ಬೇಕಾದ ಫಂಡಿಂಗ್ ಅನ್ನು ಇರಾನ್​ಗೆ ಸಿಗುತ್ತಿರಬಹುದು. ಇರಾನ್​ನಿಂದ ಅತಿಹೆಚ್ಚು ತೈಲ ಪಡೆಯುತ್ತಿರುವುದು ಚೀನಾ.

ರಷ್ಯಾ ತೈಲಕ್ಕೆ ಬಹಳ ಡಿಮ್ಯಾಂಡ್

ಇರಾನ್ ಯುದ್ಧ ಶುರುವಾದ ಬಳಿಕ ರಷ್ಯಾ ತೈಲಕ್ಕೆ ವಿಪರೀತ ಬೇಡಿಕೆ ಬಂದಿದೆ. ರಷ್ಯನ್ ತೈಲ ಖರೀದಿಸಲು ಎಲ್ಲಾ ದೇಶಗಳಿಗೂ ಅಮೆರಿಕವೇ ಹಸಿರು ನಿಶಾನೆ ತೋರಿದೆ. ವರದಿ ಪ್ರಕಾರ ರಷ್ಯಾಗೆ ದಿನವೊಂದಕ್ಕೆ 760 ಮಿಲಿಯನ್ ಡಾಲರ್ ಆದಾಯವು ಸಿಗುತ್ತಿದೆ. ಅಂದರೆ, ತೈಲ ಮಾರಾಟದಿಂದ ರಷ್ಯಾ ದಿನಕ್ಕೆ 7,000 ಕೋಟಿ ರೂ ಹಣ ಗಳಿಸುತ್ತಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಉಕ್ರೇನ್ ಯುದ್ಧ ಶುರುವಾದ ಬಳಿಕ ರಷ್ಯಾ ಮೇಲೆ ಅಮೆರಿಕ ನಿಷೇಧ ಹಾಕಿದ ಪರಿಣಾಮ ರಷ್ಯಾ ಕಡಿಮೆ ಬೆಲೆಗೆ ತೈಲ ಪೂರೈಕೆ ಮಾಡುತ್ತಿತ್ತು. ಚೀನಾ ಮತ್ತು ಭಾರತ ಹಾಗೂ ಇನ್ನೂ ಇತರ ಕೆಲ ದೇಶಗಳು ಅಗ್ಗದ ಬೆಲೆಗೆ ರಷ್ಯನ್ ತೈಲ ಪಡೆಯುತ್ತಿದ್ದವು. ಈಗ ತೈಲಕ್ಕೆ ಬೇಡಿಕೆ ಹೆಚ್ಚಿರುವುದರಿಂದ ರಷ್ಯನ್ ತೈಲ ಡಿಸ್ಕೌಂಟ್​ನಲ್ಲಿ ಸಿಗುತ್ತಿಲ್ಲ. ಹೆಚ್ಚುವರಿ ಬೆಲೆಗೆ ರಷ್ಯಾ ತನ್ನ ತೈಲವನ್ನು ಮಾರುತ್ತಿದೆ. ಭಾರತಕ್ಕೆ ಈ ಹಿಂದೆ ಸಿಗುತ್ತಿದ್ದ ಡಿಸ್ಕೌಂಟ್ ಈಗ ಇಲ್ಲ. ಚೀನಾಗೆ ನೀಡಿದ್ದ ಡಿಸ್ಕೌಂಟ್ ಅರ್ಧದಷ್ಟು ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಮುಖಂಡನ ಕೊಲೆಗೆ ಯತ್ನ: ತನಿಖೆ ಚುರುಕು, ನಾಲ್ವರ ಬಂಧನ

ಕಾರವಾರ, ಮಾರ್ಚ್​ 26: ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ (Gopalakrishna Naik) ಹತ್ಯೆ ಯತ್ನ ಘಟನೆಗೆ ಸಂಬಂಧಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈಗಾಗಲೇ ಬಂಧಿತ ನಾಲ್ವರ ವಿಚಾರಣೆ ತೀವ್ರಗೊಂಡಿದೆ. ಈ ನಡುವೆ ಬಂಧಿತರ ಫೋಟೋ ಮತ್ತು ಓಡಾಡುವ ದೃಶ್ಯ ವೈರಲ್ ಆಗಿದ್ದು, ಎಲ್ಲರೂ ಗೋವಾ ಮೂಲದವರಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ಎಂಬುದನ್ನ ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಕೊಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಕೊಲೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಹಾಡಹಗಲೇ ವ್ಯಕ್ತಿ ಓರ್ವನನ್ನ ಅಟ್ಟಾಡಿಸಿ ಹೊಡೆದಿರುವ ದೃಶ್ಯ ನಿಜಕ್ಕೂ ಎದೆ ಝಲ್ ಎಣಿಸುವಂತಹದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಘಟನೆ ಬೆನ್ನಲ್ಲೇ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ದಶಕಗಳ ನಂತರ ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡನೋರ್ವನ ಹತ್ಯೆ ಯತ್ನದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಹೇರ್ ಸಲೂನ್​ಗೆ ಬಂದು ವಾಪಾಸಾಗುತ್ತಿದ್ದ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಅವರ ಮೇಲೆ ಆರೇಳು ಜನರ ಗುಂಪು ಸುತ್ತವರಿದಿದೆ. ಅಲ್ಲದೆ ಅವರ ಹತ್ಯೆಗೆ ಪ್ರಯತ್ನಿಸಿತ್ತು. ಗೋಪಾಲರನ್ನ ರಕ್ಷಿಸಲು ಸಹೋದರ ರಾಘವೇಂದ್ರ ಮುಂದಾಗಿದ್ದರಿಂದ ಅದೃಷ್ಟವಶಾತ್ ಗೋಪಾಲ್ ಅವರು ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಗಾಯಗೊಂಡಿರುವ ಅವರು ಸದ್ಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರ ಬಂಧನ

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿತ್ತು. ದಾಳಿಕೋರರು ಅಂಕೋಲಾದಲ್ಲಿ ಓಡಾಡಿದ ದೃಶ್ಯ ಆಯಾ ಕಡೆಗಳಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಬಂಧಿತರ ಫೋಟೋ ಕೂಡ ವೈರಲ್ ಆಗಿದೆ. ಬಂಧಿತ ನಾಲ್ವರು ಗೋವಾ ಮೂಲದವರಾಗಿದ್ದಾರೆ. ಜಾಕೀರ್, ನೈಜಲ್, ಸದ್ದಾಂ ಹಾಗೂ ಇರ್ಪಾನ್ ಬಂಧಿತರು. ಘಟನೆಗೆ ಸಂಬಂಧಿಸಿದಂತೆ ಎರಡು ಬೈಕ್ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ದೀಪನ್ ಎಂ ಎನ್​ ಹೇಳಿದ್ದಾರೆ.

ಬಂಧಿತರು ಗೋವಾದವರಾಗಿದ್ದು, ಓರ್ವ ಬೌನ್ಸರ್, ಇನ್ನೋರ್ವ ವೆಲ್ಡರ್, ಮತ್ತೋರ್ವ ರಿಯಲ್ ಎಸ್ಟೇಟ್ ಮತ್ತು ಇನ್ನೋರ್ವ ಡ್ರೈವರ್ ಆಗಿದ್ದಾರೆ. ಆದರೆ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ನಾಲ್ಕು ತಂಡಗಳನ್ನ ರಚನೆ ಮಾಡಿದ್ದಾರೆ. ಗೋವಾ ಸೇರಿದಂತೆ ಇತರೆಡೆ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಆಗಾಗ ಅಂಕೋಲಾಕ್ಕೆ ಬಂದು ಹೋಗುತ್ತಿದ್ದರು. ಮೂರು ದಿನಗಳ ಹಿಂದೆ ಇಲ್ಲಿನ ಅಂಕೋಲಾದಲ್ಲಿ ಬೀಡುಬಿಟ್ಟದ್ದು ನಿನ್ನೆ ಬೆಳಗಿನ ವೇಳೆ ಹತ್ಯೆಗೆ ಪ್ರಯತ್ನಿಸಿದ್ದಾರೆ. ಒಟ್ಟಿನಲ್ಲಿ ಹತ್ಯೆಗೆ ಯತ್ನಿಸಿರುವುದು ರಾಜಕೀಯ ಕಾರಣಕ್ಕಾ, ವ್ಯವಹಾರ ಸಂಬಂಧನಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್

ಒಟ್ಟಿನಲ್ಲಿ ಹಾಡಹಗಲೇ ಅಂಕೋಲಾ ಪಟ್ಟಣದಲ್ಲಿ ನಡೆದ ಈ ದಾಳಿ ಎಲ್ಲರನ್ನ ಬೆಚ್ಚಿಬೀಳಿಸಿದೆ. ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ಯುವ ಸಮುದಾಯದ ಸ್ನೇಹವನ್ನ ಗಳಿಸುತ್ತಿದ್ದ ಗೋಪಾಲಕೃಷ್ಣ ಅವರಿಗೆ ಸಹಿಸಲಾಗದವರು ಅಥವಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡವರಿಂದ ಈ ಕೃತ್ಯ ನಡೆದಿದೆಯಾ ಎಂಬುದು ಗೊತ್ತಾಗಬೇಕಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆಯನ್ನ ಚುರುಕುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯಾವ ಸಂಬಂಧ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆಯಲ್ಲಿ ತಣ್ಣಗಾಗದ ಅಸಮಾಧಾನ, ಅಖಾಡದಲ್ಲೇ ಉಳಿದ ಪೈಲ್ವಾನ್, ಕಾಂಗ್ರೆಸ್​​ಗೆ ಟೆನ್ಷನ್

ದಾವಣಗೆರೆ , (ಮಾರ್ಚ್ 26): ದಾವಣಗೆರೆ ದಕ್ಷಿಣ ಕ್ಷೇತ್ರ (Davanagere South ) ಶಾಮನೂರು ಕುಟುಂಬದ ಭದ್ರಕೋಟೆ. ಕಳೆದ 30 ವರ್ಷಗಳಿಂದ್ಲೂ ಶಾಮನೂರು ಕುಟುಂಬದ ಕೈಯಲ್ಲಿಯೇ ಇಲ್ಲಿನ ಆಡಳಿತ. ಆದ್ರೆ ಶಾಮನೂರು ಶಿವಶಂಕರಪ್ಪನವರ ನಿಧನ ಬಳಿಕ ಈ ಕ್ಷೇತ್ರ ತೆರವಾಗಿದ್ದು, ತಂದೆಯ ಸ್ಥಾನವನ್ನ ಮಗನಿಗೆ ಕೊಡಿಸುವಲ್ಲಿ ಸಚಿವ SS ಮಲ್ಲಿಕಾರ್ಜುನ ಸಫಲರಾಗಿದ್ದಾರೆ. ಆದ್ರೆ,ನಮಗೆ ಟಿಕೆಟ್ ಕೊಡಿ ಎಂದಿದ್ದ ಮುಸ್ಲಿಂ ಸಮುದಾಯ ಕಾಂಗ್ರೆಸ್ (Congress) ವಿರುದ್ಧ ಬಂಡಾಯ ಸಾರಿದೆ. ಹೌದು..ಕೈ ಹೈಕಮಾಂಡ್ ತಮ್ಮ ಸಮುದಾಯವನ್ನ ಬಿಟ್ಟು ಶಾಮನೂರು ಕುಟುಂಬಕ್ಕೆ ಮಣೆ ಹಾಕಿರುವುದ ವಿರುದ್ಧ ಸೆಟೆದು ನಿಂತಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಕೈ ಪಡೆ ಕೂಡ ಬಂಡಾಯ ಶಮನದ ಸಹಜ ಪ್ರಯತ್ನ ನಡೆಸಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಸಾದಿಕ್ ಮನವೊಲಿಕೆಗೆ ಯತ್ನಿಸಿದ್ರು. ಕಳೆದ ರಾತ್ರಿ ಕರೆ ಮಾಡಿ ಮಾತನಾಡಿದ್ರು. ಆದ್ರೆ ಪೈಲ್ವಾನ್ ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ.

ಪೈಲ್ವಾನ್ ಮನವೊಲಿಸುವ ಯತ್ನ ವಿಫಲ

ಮುಸ್ಲಿಮರನ್ನು ಮನವೊಲಿಸಲು ಕಾಂಗ್ರೆಸ್​ನ ಅಲ್ಪಸಂಖ್ಯಾತ ನಾಯಕರು ಇವತ್ತು ದಾವಣಗೆರೆಗೆ ಎಂಟ್ರಿ ಕೊಟ್ಟಿದ್ದು, ಸಾದಿಕ್ ಮನೆಗೆ ಬಂದು ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಸಾದಿಕ್ ಬೆಂಬಲಿಗರು ಗೋ ಬ್ಯಾಕ್ ಘೋಷಣೆ ಕೂಗಿದ್ದಾರೆ. ಹೀಗಾಗಿ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ವಾಪಸ್ ಆಗಿದ್ದಾರೆ. ಆದರೆ ಮನವೊಲಿಸುವ ತಮ್ಮ ಆತ್ಮವಿಶ್ವಾಸವನ್ನ ಮಾತ್ರ ಬಿಡುತ್ತಿಲ್ಲ. ನಾಮಪತ್ರ ವಾಪಸ್ ಪಡೆಯುವ ಅವಧಿ ಮುಗಿದರೂ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಬೈಎಲೆಕ್ಷನ್: ಕಾಂಗ್ರೆಸ್‌ಗೆ 1983ರ ಇತಿಹಾಸ ಮರುಕಳಿಸುವ ಭೀತಿ! ಅಂದೇನಾಗಿತ್ತು ಗೊತ್ತೇ?

ಅಂತರ ಕಾಯ್ದುಕೊಂಡ ಜಮೀರ್

ಮತ್ತೊಂದ್ಕಡೆ ಸಾದಿಕ್, ಕ್ಷೇತ್ರದಲ್ಲಿ ನಿರ್ಣಾಯಕವಾಗಿರೋ ಮುಸ್ಲಿಂ ಮತದಾರರು ತಮ್ಮ ಕೈ ಹಿಡಿಯುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಸಮುದಾಯ ನನ್ನ ಹಿಂದೆ ಇದೆ, ನಾನು ಹಿಂದೆ ಸರಿಯಲ್ಲ ಎಂದು ಮಿನಿ ಸಮರದಲ್ಲಿ ಕದನದಲ್ಲಿ ಧೂಳೆಬ್ಬಿಸಿದ್ದಾರೆ. ಇನ್ನು ಸಚಿವ ಜಮೀರ್ ಅಹ್ಮದ್ ಅವರು ಟಿಕೆಟ್ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಹರಿದಾಡ್ತಿವೆ. ಈ ಕಾರಣಕ್ಕೆ ಅಂತರ ಕಾಪಾಡಿಕೊಳ್ಳುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಇಂಬು ನೀಡುವಂತೆ ನಿನ್ನೆ (ಮಾರ್ಚ್ 25) ಸಿಎಂ ನಿವಾಸದಲ್ಲಿ ನಡೆದಿದ್ದ ಮುಸ್ಲಿಂ ಸಚಿವರು, ಶಾಸಕರು, MLCಗಳ ಸಭೆಗಳಿಗೆ ಜಮೀರ್ ಗೈರಾಗಿದ್ದರು. ಅಲ್ಲದೇ ಪೈಲ್ವಾನ್ ಮನವೊಲಿಸುವ ಪ್ರಯತ್ನ ಸಹ ಮಾಡಿಲ್ಲ.

ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳ

ಏಪ್ರಿಲ್ 9ರಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಒಟ್ಟು 36 ಅಭ್ಯರ್ಥಿಗಳ ನಾಮಪತ್ರ ಸಿಂಧು ಆಗಿದ್ದವು. ಈ ಪೈಕಿ ಇಂದು (ಮಾರ್ಚ್ 26) 11 ಅಭ್ಯರ್ಥಿಗಳು ನಾಮಪತ್ರ ವಾಪಸ್​ ಪಡೆದಿದ್ದಾರೆ. ಇದರೊಂದಿಗೆ ಅಂತಿಮವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25 ಅಭ್ಯರ್ಥಿಗಳ ಪೈಕಿ ಓರ್ವ ಮಹಿಳಾ ಅಭ್ಯರ್ಥಿ ಕಣದಲ್ಲಿದ್ದಾರೆ. ಸಾದಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿ ಆಗಿ ಉಳಿದುಕೊಂಡಿದ್ದಾರೆ . ಇದರೊಂದಿಗೆ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಆದ್ರೆ, ಮುಸ್ಲಿಂ ಅಭ್ಯರ್ಥಿಗಳು ಸಾಧಿಕ್ ಪೈಲ್ವಾನ್ ಅವರಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್​​ಗೆ ಟೆನ್ಷನ್ ಶುರುವಾಗಿದೆ.

ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಈ ಬಗ್ಗೆ ಮಾತನಾಡಿದ ಸಾದಿಕ್‌ ಪೈಲ್ವಾನ್‌, ಮೊದಲೇ ರಾಜ್ಯ ನಾಯಕರು ಬಂದು ನಮ್ಮ ಅಹಿಂದ ಮುಖಂಡರು ಹಾಗೂ ನನ್ನ ಜೊತೆ ಸಭೆ ನಡೆಸಬೇಕಿತ್ತು. ನಾವು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದು ಪ್ರತಿಸ್ಪರ್ಧಿ ಅಲ್ಲ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇನೆ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಸವಾಲು ಎಸೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: 1000 ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್​ ಬಂಕ್​ಗೆ ಬಂದ ‘ಬಾಹುಬಲಿ’

ಹರೈಯಾ, ಮಾರ್ಚ್​ 26: ವ್ಯಕ್ತಿಯೊಬ್ಬರು ಸಾವಿರ ಲೀಟರ್ ಟ್ಯಾಂಕ್ ಹಿಡಿದು ಪೆಟ್ರೋಲ್ ಬಂಕ್​ಗೆ ಬಂದಿರುವ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಉತ್ತರ ಪ್ರದೇಶದ ಹರೈಯಾದಲ್ಲಿ ನಡೆದಿದೆ. ಘಟನೆ NH-28 ರ ಭದವಾಲ್ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ. ಪೆಟ್ರೋಲ್ ತುಂಬಿಸಲು ಒಬ್ಬ ವ್ಯಕ್ತಿ 1,000 ಲೀಟರ್ ದೊಡ್ಡ ಟ್ಯಾಂಕ್‌ನೊಂದಿಗೆ ಅಲ್ಲಿಗೆ ಬಂದಿದ್ದರು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಆ ಯುವಕ ತನ್ನ ಹೆಗಲ ಮೇಲೆ ಭಾರವಾದ ಟ್ಯಾಂಕ್ ಅನ್ನು ಪೆಟ್ರೋಲ್ ಪಂಪ್‌ಗೆ ಹೊತ್ತುಕೊಂಡು ಹೋಗಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜಸ್ಥಾನ್​ ಮಾರಾಟ ಒಪ್ಪಂದವನ್ನು ರದ್ದುಗೊಳಿಸುವಂತೆ ಬಿಸಿಸಿಐ ಮೊರೆ ಹೋದ ರಾಜ್ ಕುಂದ್ರಾ

15000 ಕೋಟಿ ರೂಗೆ ಮಾರಾಟವಾಗಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ದುಬಾರಿ ತಂಡ ಎಂಬ ದಾಖಲೆ ಬರೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ವ್ಯಾಪಾರ ಒಪ್ಪಂದವನ್ನು ಕೂಡಲೇ ರದ್ದುಗೊಳಿಸುವಂತೆ ತಂಡದ ಮಾಜಿ ಮಾಲೀಕ ರಾಜ್ ಕುಂದ್ರಾ, ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿರುವ ನನ್ನ 11.7% ಪಾಲನ್ನು ಇತ್ಯರ್ಥಪಡಿಸುವವರೆಗೆ ಫ್ರಾಂಚೈಸಿಯ ಮಾಲೀಕರು ಬದಲಾಗಲು ಸಾಧ್ಯವಿಲ್ಲ. ತಂಡವನ್ನು ಯಾರಿಗೂ ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಪ್ಪಂದವನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿ ರಾಜ್ ಕುಂದ್ರಾ ಈಗ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ರಾಜ್ ಕುಂದ್ರಾ ಅವರ ಆರೋಪವೇನು?

ವಾಸ್ತವವಾಗಿ ರಾಜ್ ಕುಂದ್ರಾ 2009 ರಲ್ಲಿ ರಾಜಸ್ಥಾನ್ ರಾಯಲ್ಸ್‌ನಲ್ಲಿ 11.7% ಪಾಲನ್ನು ಖರೀದಿಸಿದ್ದರು. ಆ ಸಮಯದಲ್ಲಿ ಅವರು ತಂಡದ ಮೇಲೆ ಸುಮಾರು 70-75 ಕೋಟಿ ಹೂಡಿಕೆ ಮಾಡಿ ಮಾಲೀಕರ ಪೈಕಿ ಒಬ್ಬರಾಗಿದ್ದರು. ಉಳಿದಂತೆ ಆ ಸಮಯದಲ್ಲಿ, ಸುರೇಶ್ ಚೆಲ್ಲಾರಾಮ್ ಬಳಿ ತಂಡದ 44.2% ಷೇರು ಹೊಂದಿದ್ದರೆ, ಮನೋಜ್ ಬಡಾಲೆ 32.4% ಷೇರು ಹೊಂದಿದ್ದರು. ಆದರೆ 2013 ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿಕೊಂಡಿದ್ದ ರಾಜ್ ಕುಂದ್ರಾ, ಆ ನಂತರ ತಂಡದಿಂದ ಹೊರಹೋಗಬೇಕಾಯಿತು. ಆದಾಗ್ಯೂ ರಾಜ್ ಕುಂದ್ರಾ ತಂಡದಲ್ಲಿರುವ ತನ್ನ 11.7% ಪಾಲನ್ನು ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಕಾನೂನುಬದ್ಧವಾಗಿ, ಇದು ಬಗೆಹರಿಯುವವರೆಗೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಬೇರೊಬ್ಬರಿಗೆ ಮಾರಾಟ ಮಾಡದಂತೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ.

ರಾಜ್ ಕುಂದ್ರಾಗೆ ಐಪಿಎಲ್​ನಿಂದ ನಿಷೇಧ

2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದವು. ಅದರಂತೆ ದೆಹಲಿ ಪೊಲೀಸರ ವಿಚಾರಣೆಯ ಸಮಯದಲ್ಲಿ ರಾಜ್ ಕುಂದ್ರಾ ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸಿರುವುದು ಖಚಿತವಾಗಿತ್ತು. ಇದರ ನಂತರ, ಬಿಸಿಸಿಐ ತಕ್ಷಣವೇ ರಾಜ್ ಕುಂದ್ರಾ ಅವರನ್ನು ಐಪಿಎಲ್​ನಿಂದ ಅಮಾನತುಗೊಳಿಸಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಇತರ ಮಾಲೀಕರು, ಒಂದು ವೇಳೆ ರಾಜ್ ಕುಂದ್ರಾ ಈ ಪ್ರಕರಣದಲ್ಲಿ ತಪ್ಪಿತಸ್ಥರೆಂಬುದು ಸಾಭೀತಾದರೆ ಅವರ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆ ವಿಚಾರಣೆಯ ಬಳಿಕ2015 ರಲ್ಲಿ ಲೋಧಾ ಸಮಿತಿಯು ಕುಂದ್ರಾ ತಪ್ಪಿತಸ್ಥರೆಂದು ತೀರ್ಪು ನೀಡಿತ್ತು. ಇದರ ನಂತರ, ಬಿಸಿಸಿಐ ರಾಜ್ ಕುಂದ್ರಾ ಅವರನ್ನು ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಸುಡು ಬೇಸಿಗೆಯಲ್ಲಿ ಅನಾನಸ್‌ ಜ್ಯೂಸ್‌ ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಅನಾನಸ್‌ (pineapple) ಬೇಸಿಗೆಯ ಸೀಸನ್‌ನಲ್ಲಿ ಹೇರಳವಾಗಿ ಸಿಗುವಂತಹ ಹಣ್ಣು. ಹೊರಗಿನಿಂದ ಒರಟಾಗಿ ಮತ್ತು ಮುಳ್ಳಿನಿಂದ ಕೂಡಿರುವ ಈ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಸಖತ್‌  ಪ್ರಯೋಜನಕಾರಿ. ಹೌದು ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು,  ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.  ಅನಾನಸ್ ತಿನ್ನುವುದಕ್ಕಿಂತ ಹೆಚ್ಚಾಗಿ  ಅದರ ಜ್ಯೂಸ್ ಕುಡಿಯಲು ಬಹುತೇಕ ಹೆಚ್ಚಿನವರು ಇಷ್ಟಪಡುತ್ತಾರೆ. ಸುಡು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಈ ಜ್ಯೂಸ್‌ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಬೇಸಿಗೆಯಲ್ಲಿ ಅನಾನಸ್‌ ಜ್ಯೂಸ್‌ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಅನಾನಸ್‌ ಜ್ಯೂಸ್‌ ಕುಡಿಯುವುದರಿಂದ ಲಭಿಸುವ ಪ್ರಯೋಜನಗಳೇನು?

ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ:  ಈ ಸುಡು ಬೇಸಿಗೆಯಲ್ಲಿ ಆಗಾಗ್ಗೆ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತಿರುತ್ತವೆ. ಹೀಗಿರುವಾಗ ಅನಾನಸ್ ಜ್ಯೂಸ್  ದೇಹದಲ್ಲಿನ ನೀರಿನ ಕೊರತೆಯನ್ನುನೀಗಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ನೀರಿನ ಅಂಶ ಹೇರಳವಾಗಿದ್ದು, ಇದು ಬೇಸಿಗೆಯ ಶಾಖದಲ್ಲಿ ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹ ಶಕ್ತಿಯನ್ನು ಕಾಪಾಡಿಕೊಳ್ಳಲೂ ಸಹಕಾರಿಯಾಗಿದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಅನಾನಸ್ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅತಿಸಾರ, ಹೊಟ್ಟೆ ನೋವು, ಮಲಬದ್ಧತೆ ಅಥವಾ‌ ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿದ್ದರೆ, ಅನಾನಸ್ ಜ್ಯೂಸ್‌ ಕುಡಿಯಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಅನಾನಸ್‌ ಜ್ಯೂಸ್‌  ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ನಮ್ಮನ್ನು ಆರೋಗ್ಯವಾಗಿಡುತ್ತದೆ. ಅನಾನಸ್ ಜ್ಯೂಸ್‌ನಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕಾಲೋಚಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ: ಬೇಸಿಗೆಯಲ್ಲಿ ಟ್ಯಾನಿಂಗ್ ಮತ್ತು ಕಲೆಗಳು ಸಾಮಾನ್ಯ. ಈ ಸಮಸ್ಯೆಯಿಂದ ಮುಕ್ತಿ ನೀಡಲು ಅನಾನಸ್‌ ಜ್ಯೂಸ್‌ ತುಂಬಾನೇ ಸಹಕಾರಿ. ಅನಾನಸ್ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ತ್ವಚೆಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದಲೂ ತಯಾರಿಸಬಹುದು ಬಗೆ ಬಗೆಯ ತಿನಿಸು

ತೂಕ ಇಳಿಕೆಗೆ ಸಹಕಾರಿ: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅನಾನಸ್ ಜ್ಯೂಸ್‌ ನಿಮಗೆ ತುಂಬಾನೇ ಪ್ರಯೋಜನಕಾರಿ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಫೈಬರ್ ಅಧಿಕವಾಗಿದ್ದು, ಇದು ಹಸಿವನ್ನು ನಿಯಂತ್ರಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ದೃಷ್ಟಿ ತೀಕ್ಷ್ಣವಾಗುತ್ತದೆ: ಅನಾನಸ್ ಜ್ಯೂಸ್ ನಲ್ಲಿ ವಿಟಮಿನ್ ಎ ಇದ್ದು, ಇದು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಅನಾನಸ್ ಜ್ಯೂಸ್ ನೀಡುವುದರಿಂದ ಅವರ ದೃಷ್ಟಿ ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋರಬ್ ಬೇಡಿ ಜೊತೆಗಿನ ಡೇಟಿಂಗ್ ವದಂತಿಗೆ ಸ್ಪಷ್ಟನೆ ನೀಡಿದ ಮಲೈಕಾ ಅರೋರಾ

ಬಾಲಿವುಡ್‌ನ ಸ್ಟೈಲಿಶ್ ನಟಿ ಮಲೈಕಾ ಅರೋರಾ (Malaika Arora) ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವೈಯಕ್ತಿಕ ಜೀವನ, ಒಂಟಿತನ ಮತ್ತು ಹರಿದಾಡುತ್ತಿರುವ ಡೇಟಿಂಗ್ ವದಂತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಯಾರ ಜೊತೆ ಕಂಡರೂ ಲಿಂಕ್-ಅಪ್ ವದಂತಿಗಳು ಹರಡುವುದು ಸಾಮಾನ್ಯ. ಇತ್ತೀಚೆಗೆ ಮಲೈಕಾ ಅವರು ಸೋರಬ್ ಬೇಡಿ (Sorab Bedi) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈಗ ಇವೆಲ್ಲವೂ ಕಿರಿಕಿರಿ ಎನಿಸುತ್ತದೆ. ನಾನು ಇವುಗಳನ್ನು ಕೇವಲ ಒಂದು ಜೋಕ್ ಎಂದು ಪರಿಗಣಿಸುತ್ತೇನೆ’ ಎಂದಿದ್ದಾರೆ.

ಅಚ್ಚರಿಯ ವಿಷಯವೆಂದರೆ, ಈ ವದಂತಿಗಳನ್ನು ನೋಡಿ ಮಲೈಕಾ ಮತ್ತು ಅವರ ಪುತ್ರ ಅರ್ಹಾನ್ ಖಾನ್ ಇಬ್ಬರೂ ಒಟ್ಟಾಗಿ ನಗುತ್ತಾರಂತೆ. ‘ಅರ್ಹಾನ್ ಮತ್ತು ನಾನು ಇಂತಹ ವಿಷಯಗಳ ಬಗ್ಗೆ ಸಾಕಷ್ಟು ತಮಾಷೆ ಮಾಡುತ್ತೇವೆ’ ಎಂದು ಮಲೈಕಾ ಅರೋರಾ ಅವರು ಹೇಳಿದ್ದಾರೆ. ಈಗಾಗಲೇ ಸೋರಬ್ ಬೇಡಿ ಕೂಡ ‘ನಾವು ಜಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಬ್ಬ ಸಿಂಗಲ್ ಮದರ್ ಆಗಿ ಹೊಸ ಸಂಗಾತಿಯನ್ನು ಹುಡುಕುವುದು ಕಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಲೈಕಾ, ‘ಯಾರೋ ಒಬ್ಬ ಪುರುಷ ನನ್ನ ಜೀವನಕ್ಕೆ ಬಂದು ನನ್ನ ಅಸ್ತಿತ್ವವನ್ನು ಸಾಬೀತುಪಡಿಸುವ ಅಗತ್ಯವಿಲ್ಲ. ಮೊದಲು ನಾನು ಒಬ್ಬ ವ್ಯಕ್ತಿಯಾಗಿ ನನ್ನನ್ನು ನಾನು ಕಂಡುಕೊಳ್ಳಬೇಕು. ನನ್ನ ಎಲ್ಲಾ ಸಂಬಂಧಗಳು ನನ್ನದೇ ಆದ ರೀತಿಯಲ್ಲಿ ಇರಬೇಕು’ ಎಂದು ತಿಳಿಸಿದ್ದಾರೆ.

ಮಲೈಕಾ ಅರೋರಾ ಅವರು ಅರ್ಬಾಜ್ ಖಾನ್ ಅವರೊಂದಿಗೆ 19 ವರ್ಷಗಳ ವೈವಾಹಿಕ ಜೀವನದ ನಂತರ 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ನಟ ಅರ್ಜುನ್ ಕಪೂರ್ ಜೊತೆ 6 ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಆದರೆ 2024ರಲ್ಲಿ ಇವರಿಬ್ಬರೂ ಬೇರ್ಪಟ್ಟಿದ್ದಾರೆ ಎಂಬುದು ಖಚಿತವಾಯಿತು. ಈಗ ಮಲೈಕಾ ಸಿಂಗಲ್ ಆಗಿದ್ದಾರೆ. ಹಾಗಾಗಿ ಅವರು ಯಾರ ಜೊತೆ ಕಾಣಿಸಿಕೊಂಡರೂ ಸುದ್ದಿ ಆಗುತ್ತದೆ.

ಇದನ್ನೂ ಓದಿ: ಮಲೈಕಾ ಅರೋರಾ ಜೊತೆ ಇರೋ ಈ ಹೊಸ ಹುಡುಗ ಯಾರು?

ಮಲೈಕಾ ಅರೋರಾ ಅವರಿಗೆ ಈಗ 52 ವರ್ಷ ವಯಸ್ಸು. ಅವರಿಗೆ ಇಷ್ಟ ವಯಸ್ಸು ಆಗಿದೆ ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಅವರು ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಚಿತ್ರರಂಗದಲ್ಲಿ ಈಗಲೂ ಬೇಡಿಕೆ ಇದೆ. ಅನೇಕ ಬ್ರ್ಯಾಂಡ್​ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಸ್ನಾನ ಮಾಡಿಸ್ತೀನಿ ಅಂದದ್ದಕ್ಕೆ ಅಮ್ಮನಿಗೆ ವಾರ್ನಿಂಗ್ ಕೊಟ್ಟ ಪುಟಾಣಿ

ಈಗಿನ ಮಕ್ಕಳು (children) ಎಷ್ಟು ಜಾಣರೋ, ಅಷ್ಟೇ ತುಂಟರು ಕೂಡ. ಮಕ್ಕಳ ಮುಂದೆ ಏನಾದರೂ ಹೇಳಿದರೆ ಸಾಕು, ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಒಂದೇ ಒಂದು ಮಾತಿನಲ್ಲಿ ಹೆತ್ತವರ ಬಾಯಿ ಮುಚ್ಚಿಸಿ ಬಿಡುತ್ತಾರೆ. ಆದರೆ ಇಲ್ಲೊಂದು ಪುಟಾಣಿಯೂ (little kid) ಅದೇ ರೀತಿ ಮಾಡಿದೆ. ನಾನು ಸ್ನಾನ ಮಾಡಿಸ್ತೀನಿ ಎಂದು ತಾಯಿ ಹೇಳುತ್ತಿದ್ದಂತೆ ತನ್ನದೇ ಭಾಷೆಯಲ್ಲಿ ಬೈಯಲು ಶುರು ಮಾಡಿದ್ದು ವಾರ್ನಿಂಗ್ ಕೊಟ್ಟಿದೆ. ಈ ಪುಟ್ಟ ಕಂದಮ್ಮ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪೂಜಾ ಶೆಟ್ಟಿ (Pooja Shetty) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಮಗುವೊಂದು ಬಾತ್ ರೂಮ್‌ನಲ್ಲಿ ನೀರಿನಲ್ಲಿ ಆಟ ಆಡುತ್ತಿದೆ. ಇತ್ತ ತಾಯಿ ಬಿಟ್ಟು ಬಾರೆ ಸಾಕು, ನಾನು ಸ್ನಾನ ಮಾಡಿಸ್ತೀನಿ ಎನ್ನುತ್ತಿದ್ದಂತೆ ತಾಯಿಗೆ ತನ್ನ ಭಾಷೆಯಲ್ಲಿ ಬೈಯಲು ಶುರು ಮಾಡಿರುವುದನ್ನು ಕಾಣಬಹುದು. ಆ ಬಳಿಕ ಅಮ್ಮ ನೀನು ಸುಮ್ನೆ ಇರ್ತಿಯಾ ಎನ್ನುವಂತೆ ವಾರ್ನಿಂಗ್ ನೀಡಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

 

ಇದನ್ನೂ ಓದಿ: ಸ್ಕೂಲ್ ಅಸೆಂಬ್ಲಿಯಲ್ಲಿ ಕಣ್ಣು ಮುಚ್ಚಿಕೊಂಡೇ ಲಾಲಿ ಪಾಪ್ ಸವಿಯುತ್ತಾ ನಿಂತ ಪುಟಾಣಿ

ಈ ವಿಡಿಯೋ ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಯಪ್ಪಾ ಇಷ್ಟೊಂದು ಕೆಟ್ಟ ಮಾತು ಎಂದಿದ್ದಾರೆ. ಇನ್ನೊಬ್ಬರು, ಮತ್ತೆ ನನ್ನ ಸೊಸೆ ಅಂದ್ಮೇಲೆ ಗಾಂರ್ಭಿಯ ಬೇಡ್ವಾ. ನೀನು ಮಾಡು ಕಂದಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಣ್ಮಕ್ಕಳೇ ಹಾಗೆ, ಸಾಧ್ಯನೇ ಇಲ್ಲ ವಾದ ಮಾಡೋಕೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಬಂಗಲೆಯಲ್ಲಿ ಟ್ರಾನ್ಸ್​ಜೆಂಡರ್ ಜತೆ ಸಿಕ್ಕಿಬಿದ್ದ ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್

ಮುಂಬೈ, ಮಾರ್ಚ್​ 26: ಮಹಾರಾಷ್ಟ್ರ ರಾಜಕಾರಣದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಸಚಿವರೊಬ್ಬರು ತೃತೀಯಲಿಂಗಿ(Transgender) ಜತೆ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದೆ. ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನರಹರಿ ಜಿರ್ವಾಲ್ ತಮ್ಮ ಬಂಗಲೆಯಲ್ಲಿ ಟ್ರಾನ್ಸ್​ಜೆಂಡರ್ ಜತೆ ಇದ್ದ ವಿಡಿಯೋ ವೈರಲ್ ಆಗಿದೆ. ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಎರಡು ತಿಂಗಳಲ್ಲಿ ನರಹರಿ ಹುಟ್ಟು ಹಾಕಿದ ಎರಡನೇ ವಿವಾದವಿದು. ಸಚಿವಾಲಯದಲ್ಲಿ 35 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಎಸಿಬಿ ರೆಡ್ ಹ್ಯಾಂಡ್ ಆಗಿ ಹಿಡಿದಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಎನ್‌ಸಿಪಿ ಅಧ್ಯಕ್ಷೆಯೂ ಆಗಿರುವ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರಿಗೆ ಸಚಿವರು ವಿವರಣೆ ನೀಡಿದ್ದರು ಎಂದು ತಿಳಿದುಬಂದಿದೆ.

ನಾಸಿಕ್ ಜಿಲ್ಲೆಯ ದಿಂಡೋರಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮತ್ತು ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಉಪಸಭಾಪತಿಯಾಗಿದ್ದ ಜಿರ್ವಾಲ್ (66), ದಿ.ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರ ಆಪ್ತರಾಗಿದ್ದರು.

ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ದುರಂತ ಸಾವಿನ ನಂತರ, ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷೆಯಾಗಿ ಸುನೇತ್ರಾ ಪವಾರ್ ಅವರ ಹೆಸರು ಪ್ರಸ್ತಾಪಿಸಲಾಗಿತ್ತು. ಜೂನ್ 2022 ರಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಉರುಳಿಸಿದಾಗ, ಅವರು ಹಂಗಾಮಿ ಸ್ಪೀಕರ್ ಆಗಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಜಿರ್ವಾಲ್ ಅವರ ಅಶ್ಲೀಲ ವಿಡಿಯೋ ಮಹಾರಾಷ್ಟ್ರ ರಾಜಕೀಯದಲ್ಲಿನ ನೈತಿಕ ಕುಸಿತಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಮುಖ್ಯಮಂತ್ರಿಗಳು ತಕ್ಷಣವೇ ಜಿರ್ವಾಲ್ ಅವರನ್ನು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಹೇಳಿದ್ದಾರೆ.

ಟ್ರಾನ್ಸ್​​ಜೆಂಡರ್ ಯಾರು?
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ತೃತೀಯಲಿಂಗಿಯನ್ನು ಪವನ್ ಯಾದವ್ ಎಂದು ಗುರುತಿಸಲಾಗಿದೆ. ಆತನ ಸಹೋದರ ಮತ್ತು ವಕೀಲರಾದ ರವಿ ಯಾದವ್ ಪ್ರಕಾರ, ಪವನ್ ಜನರನ್ನು ಮರುಳಾಗಿಸಿ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಟ್ರೇಡಿಂಗ್ ಆ್ಯಪ್​ಗಳಿಗೆ ವೆರಿಫೈಡ್ ಲೇಬಲ್; ವಂಚಕರನ್ನು ದೂರ ಇಡಲು ಸೆಬಿ ಹೊಸ ಕ್ರಮ

ನವದೆಹಲಿ, ಮಾರ್ಚ್ 26: ಆನ್​ಲೈನ್​ನಲ್ಲಿ ಸಾಕಷ್ಟು ವಂಚನೆಗಳಾಗುತ್ತವೆ. ವಾಟ್ಸಾಪ್, ಟೆಲಿಗ್ರಾಮ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್​ಫಾರ್ಮ್​ಗಳಲ್ಲಿ ವಂಚಕ ವೆಬ್​ಸೈಟ್​ಗಳಿಗೆ ದಾರಿ ಕೊಡುವ ನಕಲಿ ಲಿಂಕ್​ಗಳನ್ನು ಹಾಕಿ ಯಾಮಾರಿಸುವವರು ಬಹಳ ಇದ್ದಾರೆ. ಹಾಗೆಯೇ, ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮೂಲಕ ಅದ್ಬುತವಾಗಿ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸಿ, ನಕಲಿ ಟ್ರೇಡಿಂಗ್ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವಂತೆ ಮಾಡಲಾಗುತ್ತದೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವುದುಂಟು. ಇವಕ್ಕೆ ಕಡಿವಾಣ ಹಾಕಲು ಮತ್ತು ಹೂಡಿಕೆದಾರರನ್ನು ವಂಚಕರಿಂದ ರಕ್ಷಿಸಲು ಸೆಬಿ (SEBI) ಹೊಸ ಉಪಾಯ ಮಾಡಿದೆ. ಷೇರು ಟ್ರೇಡಿಂಗ್ ಆ್ಯಪ್​ಗಳನ್ನು ಸುಲಭವಾಗಿ ಗುರುತಿಸಬಲ್ಲಂತಹ ಉಪಾಯ ಇದು.

ಸೆಬಿಯಿಂದ ಮಾನ್ಯತೆ ಹೊಂದಿರುವ ಷೇರು ಟ್ರೇಡಿಂಗ್ ಆ್ಯಪ್​ಗಳಿಗೆ ಗೂಗಲ್ ಪ್ಲೇಸ್ಟೋರ್​ನಲ್ಲಿ ವೆರಿಫೈ ಲೇಬಲ್ ಹಾಕುವ ಕ್ರಮವನ್ನು ಸೆಬಿ ಜಾರಿಗೆ ತಂದಿದೆ. ಷೇರು ಮಾರುಕಟ್ಟೆಯ ಬ್ರೋಕರ್ ಎಂದು ಹೇಳಿ ಜನರನ್ನು ವಂಚಿಸುತ್ತಿರುವ ಸಮಸ್ಯೆ ನಿವಾರಿಸಲು ಈ ಪ್ರಯತ್ನ ನಡೆದಿದೆ.

ಇದನ್ನೂ ಓದಿ: Petrol Diesel Prices: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಇತ್ತೀಚಿನ ವರ್ಷಗಳಲ್ಲಿ ಪ್ಲೇಸ್ಟೋರ್​ನಲ್ಲಿ ನಕಲಿ ಟ್ರೇಡಿಂಗ್ ಆ್ಯಪ್​ಗಳ ಸಂಖ್ಯೆ ಬಹಳ ಹೆಚ್ಚಿದೆ. ಗ್ರೋ, ಝಿರೋಧ ಕೈಟ್, ಏಂಜೆಲ್ ಒನ್ ಇತ್ಯಾದಿ ಅಧಿಕೃತ ಪ್ಲಾಟ್​ಫಾರ್ಮ್​ಗಳನ್ನು ಹೋಲುವ ರೀತಿಯ ನಕಲಿ ಆ್ಯಪ್​ಗಳನ್ನು ತಯಾರಿಸಿ ಅಮಾಯಕ ಜನರನ್ನು ಸೆಳೆಯಲಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆತಂಕ ಮೂಡಿಸುತ್ತಿವೆ.

ಈ ಕಾರಣಕ್ಕೆ ಸೆಬಿ ನೊಂದಾಯಿತ ಟ್ರೇಡಿಂಗ್ ಆ್ಯಪ್​ಗಳಿಗೆ ಪ್ಲೇ ಸ್ಟೋರ್​ನಲ್ಲಿ ವೆರಿಫೈಡ್ ಟ್ಯಾಗ್ ಕಾಣುವಂತೆ ಇಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಸೆಬಿ ಮತ್ತು ಗೂಗಲ್ ಕೈಜೋಡಿಸಿವೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಸೆಬಿ ಸಿವಿವಿ ಸೇಫ್ಟಿ ಫ್ರೇಮ್​ವರ್ಕ್

ಹೂಡಿಕೆದಾರರನ್ನು ರಕ್ಷಿಸಲು ಸೆಬಿ ಸಿವಿವಿ ಅಥವಾ ಚೆಕ್, ವ್ಯಾಲಿಡೇಟ್ ಮತ್ತು ವೆರಿಫೈ, ಈ ವಿಧಾನವನ್ನು ಅನುಸರಿಸುವಂತೆ ಸಲಹೆ ಕೊಟ್ಟಿದೆ. ಈ ಸಿವಿವಿ ವಿಧಾನಗಳು ಹೀಗಿವೆ:

  1. ಚೆಕ್ (ಪರಿಶೀಲನೆ): ಸಾರಥಿ ಆ್ಯಪ್​ನಲ್ಲಿ (Saa₹thi) ಸೆಬಿ ಚೆಕ್ ಫೀಚರ್ ಬಳಸಿ ಬ್ಯಾಂಕ್ ಅಕೌಂಟ್​ಗಳನ್ನು ವೆರಿಫೈ ಮಾಡಿ.
  2. ವ್ಯಾಲಿಡೇಟ್: ಯುಪಿಐ ಐಡಿಗಳು ಸೆಬಿ ಟೂಲ್​ಗಳಲ್ಲಿ ‘Valid’ ಪದ ಹೊಂದಿದೆಯಾ ಖಚಿತಪಡಿಸಿಕೊಳ್ಳಿ.
  3. ವೆರಿಫೈ: ಟ್ರೇಡಿಂಗ್ ಆ್ಯಪ್​ಗಳಲ್ಲಿ ವೆರಿಫೈಡ್ ಲೇಬಲ್ ಇದೆಯಾ ಗಮನಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link