‘ಆ್ಯಂಡಿ ಫ್ಲವರ್’ನಲ್ಲಿ ಅರಳಿದ RCB | TV9 Kannada
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂಬುದು ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದೊಂದು ಭಾವನೆ. ಕಳೆದ 19 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಹಣೆಬರಹವನ್ನು ಬದಲಾಯಿಸಲು ಸಾರಥಿಗಳಾಗಿ ಬಂದಿದ್ದು ಬರೋಬ್ಬರಿ 8 ಹೆಡ್ ಕೋಚ್‌ಗಳು! ಆದರೆ 7 ಕೋಚ್ಗಳಿಂದ ಆರ್ಸಿಬಿ ಅಭಿಮಾನಿಗಳಿಗೆ ಸಿಕ್ಕಿದ್ದು ‘ಈ ಸಲ ಕಪ್ ನಮ್ದಲ್ಲ’ ಎನ್ನುವ ಡೈಲಾಗ್ ಮಾತ್ರ. ಅದರಲ್ಲೂ 2023 ರಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚೈತನ್ಯ ನೀಡಿದ್ದು ಝಿಂಬಾಬ್ವೆ ತಂಡದ ಮಾಜಿ ನಾಯಕ…