nagaraj11081993

Phone Hijack Scam: ಫೋನ್ ಹೈಜಾಕ್ ಹಗರಣ ಎಂದರೇನು?: ಲಕ್ಷಾಂತರ ಹಣ ಕಳೆದುಕೊಳ್ಳುವ ಮುನ್ನ ಎಚ್ಚರ

ಬೆಂಗಳೂರು (ಏ. 01): ಸೈಬರ್ ಅಪರಾಧಿಗಳು (Cyber Attack) ಜನರನ್ನು ವಂಚಿಸಲು ನಿರಂತರವಾಗಿ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಡಿಜಿಟಲ್ ಬಂಧನದ ನಂತರ, ಹೊಸ ರೀತಿಯ ವಂಚನೆಗಳು ಇದೀಗ ಚಾಲ್ತಿಯಲ್ಲಿದೆ. ಹ್ಯಾಕರ್‌ಗಳು ಬಳಕೆದಾರರ ಫೋನ್‌ಗಳನ್ನು ಹೈಜಾಕ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹ್ಯಾಕರ್‌ಗಳು ಮಹಿಳೆಯೊಬ್ಬರಿಗೆ 13 ರೂಪಾಯಿ ಪಾವತಿಸಲು ಕೇಳಿದರು. ಇದರ ಬೆನ್ನಲ್ಲೇ ಹ್ಯಾಕರ್ಸ್ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ಇದು ನಿಮಗೆ ಆಗದಂತೆ ತಡೆಯಲು, ನೀವು ಏನೆಲ್ಲ ಎಚ್ಚರವಹಿಸಬೇಕು ಎಂಬುದನ್ನು ನಾವು ಹೇಳುತ್ತೇವೆ. ಫೋನ್ ಅನ್ನು ಹೇಗೆ ಹೈಜಾಕ್…

Read More

Gold Rates: ಗ್ರಾಮ್​ಗೆ 200 ರೂ ಏರಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 1: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್​ಗೆ 185 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು ಬುಧವಾರ 200 ರೂ ಏರಿದೆ. ಎರಡು ದಿನದಲ್ಲಿ ಬಹುತೇಕ 400 ರೂಗಳಷ್ಟು ಹೆಚ್ಚಳ ಆಗಿದೆ. ಅಪರಂಜಿ ಚಿನ್ನದ ಬೆಲೆ (Gold Rates) 15,000 ರೂ ಗಡಿದಾಟಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ನಿನ್ನೆಯಂತೆ ಇವತ್ತೂ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ…

Read More

ಮತ್ತೆ ಬಂದ ‘ಕೆಇಬಿ’ ಈ ಬಾರಿ ಸಿನಿಮಾ, ಡಾಲಿಯದ್ದೇ ಬಂಡವಾಳ

ಈಗ ಕನ್ನಡದಲ್ಲಿ ಹಲವಾರು ಯೂಟ್ಯೂಬರ್​​ಗಳಿದ್ದಾರೆ, ಆದರೆ ಕೋವಿಡ್​​ಗೆ ಮುಂಚೆ ಕನ್ನಡದಲ್ಲಿ ಇಷ್ಟೋಂದು ಯೂಟ್ಯೂಬರ್​​ಗಳು (YouTube) ಇರಲಿಲ್ಲ. ಇದ್ದರೂ ಒಳ್ಳೆಯ ಕಂಟೆಂಟ್​​ಗಳನ್ನೇನೂ ನೀಡುತ್ತಿರಲಿಲ್ಲ. ಎಲ್ಲೋ ಕೆಲವು ಯೂಟ್ಯೂಬರ್​​ಗಳು ಅಥವಾ ಯೂಟ್ಯೂಬ್ ಚಾನೆಲ್​​ಗಳು ಮಾತ್ರವೇ ಒಳ್ಳೆಯ ಕಂಟೆಂಟ್​​ ಅನ್ನು ಕೊಡುತ್ತಿದ್ದವು. ಅವುಗಳಲ್ಲಿ ‘ಕೆಇಬಿ’ (ಕರ್ನಾಟಕ ಎಂಟರ್ಟೈನ್​​ಮೆಂಟ್ ಬೋರ್ಡ್) ಸಹ ಒಂದು. ಡಾಲಿ ಧನಂಜಯ್ ಮತ್ತು ಗೆಳೆಯರು ಪ್ರಾರಂಭಿಸಿದ್ದ ಯೂಟ್ಯೂಬ್ ಚಾನೆಲ್ ಇದಾಗಿತ್ತು. ಈ ಯೂಟ್ಯೂಬ್ ಚಾನೆಲ್​​ನಲ್ಲಿ ಕೆಲಸ ಮಾಡಿದ್ದ ಹಲವರು ಈಗ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದಾರೆ. ಆದರೆ…

Read More

ಚೇಸಿಂಗ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ನ್ಯೂಝಿಲೆಂಡ್

ಮಹಿಳಾ ಏಕದಿನ ಅಂತರಾಷ್ಟ್ರೀಯ (ODI) ಕ್ರಿಕೆಟ್ ಇತಿಹಾಸದಲ್ಲಿ ನ್ಯೂಝಿಲೆಂಡ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ವೆಲ್ಲಿಂಗ್ಟನ್​ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ಮಹಿಳಾ ತಂಡವು 347 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಈ ವಿಶ್ವ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟ್ ಮಾಡಿ 6 ವಿಕೆಟ್ ನಷ್ಟಕ್ಕೆ 346 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತ್ತು. ಇದನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ತಂಡವು ಕೇವಲ…

Read More

Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

ಬೆಂಗಳೂರು (ಏ. 01): ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ವರದಿಯ ಪ್ರಕಾರ, 2026 ರ ಮೊದಲ ಒಂಬತ್ತು ವಾರಗಳಲ್ಲಿ (ಮಾರ್ಚ್ ಮೊದಲ ವಾರದವರೆಗೆ) ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇ. 9 ರಷ್ಟು ಕಡಿಮೆಯಾಗಿದೆ. ಫೋನ್ ಮಾರಾಟದಲ್ಲಿನ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಮೆಮೊರಿ ಘಟಕಗಳ ಬೆಲೆಗಳ ಏರಿಕೆ ಎಂದು ಹೇಳಲಾಗುತ್ತದೆ. ಮೆಮೊರಿಯ ಬೆಲೆ ಏರಿಕೆಯಿಂದಾಗಿ, ವಿವೋ (Vivo) ಮತ್ತು ಒಪ್ಪೋದಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಅಸ್ತಿತ್ವದಲ್ಲಿರುವ ಮಾದರಿಗಳ ಬೆಲೆಗಳನ್ನು…

Read More

Bank recruitment 2026: ಈ ಬ್ಯಾಂಕ್‌ನಲ್ಲಿ ಬರೋಬ್ಬರಿ 1,000 ಹುದ್ದೆಗಳಿಗೆ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಒಂದು ಸಿಹಿ ಸುದ್ದಿ ನೀಡಿದೆ. ಪ್ರಸ್ತುತ ಬ್ಯಾಂಕ್‌ನಲ್ಲಿ ಖಾಲಿ ಇರುವ ‘ಸ್ಥಳೀಯ ಬ್ಯಾಂಕ್ ಅಧಿಕಾರಿ’ (Local Bank Officer – LBO) ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 1,000 ಹುದ್ದೆಗಳು ಲಭ್ಯವಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ…

Read More

ಅನುಷ್ಕಾ ಜೊತೆ ಪ್ರಭಾಸ್ ಇನ್ನೂ ಎಷ್ಟು ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ ನೋಡಿ

ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಪರಸ್ಪರ ಪ್ರೀತಿ ಮಾಡಿದರು ನಂತರ ಬೇರೆ ಆದರು, ಈಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವುದಿಲ್ಲ, ಅನುಷ್ಕಾ ಮೋಸ ಮಾಡಿದರು.. ಹೀಗೆ ವದಂತಿಗಳ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ. ಆದರೆ, ಯಾವುದಕ್ಕೂ ಇವರು ಸ್ಪಷ್ಟನೆ ನೀಡಿಲ್ಲ. ಈಗ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಗೆಳೆತನ ಹೇಗಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಕ್ಕಿದೆ. ಇಬ್ಬರೂ ಒಳ್ಳೆಯ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅನುಷ್ಕಾ ಶೆಟ್ಟಿ ಅವರು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಬಳಿಕ ಅಪಾರ…

Read More

ಬೆಂಗಳೂರು ಪೊಲೀಸರಿಂದ ‘ಉಚಿತ ಐಪಿಎಲ್ ಟಿಕೆಟ್’; ಒಮ್ಮೆ ಲಿಂಕ್ ಓಪನ್ ಮಾಡಿ ನೋಡಿ

ಬೆಂಗಳೂರು, ಏ.1: ಬೆಂಗಳೂರು ಸಿಟಿ ಪೊಲೀಸ್ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ “FREE IPL TICKETS” ಎಂಬ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಆದರೆ, ಇದು ನಿಜವಾದ ಆಫರ್ ಅಲ್ಲ, ಬದಲಾಗಿ ಸಾರ್ವಜನಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಹೂಡಿರುವ ಒಂದು ತಂತ್ರವಾಗಿದೆ. ಇಂದು ಏಪ್ರಿಲ್ 1, ಅಂದರೆ ಏಪ್ರಿಲ್ ಫೂಲ್ ದಿನ. ಇದನ್ನೇ ಬಳಸಿಕೊಂಡಿರುವ ಬೆಂಗಳೂರು ನಗರ ಪೊಲೀಸರು, ಐಪಿಎಲ್ ಕ್ರೇಜ್ ನಡುವೆ ಸಾರ್ವಜನಿಕರಿಗೆ ಹೇಗೆ ಸೈಬರ್ ವಂಚಕರು ಗಾಳ ಹಾಕುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ….

Read More

Oracle Layoffs: ಒರೇಕಲ್​ನ ಭಾರತೀಯ ಉದ್ಯೋಗಿಗಳಿಗೆ ಶಾಕ್; ಮುನ್ಸೂಚನೆ ಇಲ್ಲದೇ 12,000 ಮಂದಿ ಲೇ ಆಫ್

ನವದೆಹಲಿ, ಏಪ್ರಿಲ್ 1: ವಿಶ್ವದ ಪ್ರಮುಖ ಸಾಫ್ಟ್​ವೇರ್ ಕಂಪನಿಗಳಲ್ಲಿ ಒಂದಾದ ಒರೇಕಲ್ ತನ್ನ ಉದ್ಯೋಗಿಗಳ ಸಂಖ್ಯೆಗೆ ಭಾರೀ ಕತ್ತರಿ (Oracle Layoffs) ಹಾಕಿದೆ. ಜಾಗತಿಕವಾಗಿ 30,000 ಉದ್ಯೋಗಿಗಳನ್ನು ಒರೇಕಲ್ ಲೇ ಆಫ್ ಮಾಡಿದೆ. ಭಾರತವೊಂದರಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಒರೇಕಲ್ ಕಂಪನಿ 30,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 12,000 ಮಂದಿ ಎಂದರೆ ಶೇ. 40ರಷ್ಟು ಲೇ ಆಫ್ ಆದಂತಾಗುತ್ತದೆ. ಒರೇಕಲ್ ಸಂಸ್ಥೆಯಿಂದ ಈ ಉದ್ಯೋಗ ಕಡಿತದ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ. ಬೇರೆ…

Read More

ಅಭಿವೃದ್ಧಿ ಹೊಂದಿದ ಭಾರತ, ಅಭಿವೃದ್ಧಿ ಹೊಂದಿದ ಅಸ್ಸಾಂ ನಿರ್ಮಿಸಲು ಈ ಚುನಾವಣೆ: ಪ್ರಧಾನಿ ಮೋದಿ

ಧೇಮಾಜಿ, ಏಪ್ರಿಲ್ 1: ಕಳೆದ ಹತ್ತು ವರ್ಷಗಳಲ್ಲಿ ಅಸ್ಸಾಂನಲ್ಲಿ ಸಾಕಷ್ಟು ಅಭಿವೃದ್ಧಿಗಳನ್ನು ಮಾಡಲಾಗಿದೆ. ಮೊದಲು ಸರ್ಬಾನಂದ ಸೋನೋವಾಲ್ ನಂತರ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ, ಅಸ್ಸಾಂ ಕಳೆದ 10 ವರ್ಷಗಳಲ್ಲಿ ಸೇವೆ ಮತ್ತು ಉತ್ತಮ ಆಡಳಿತದ ಹೊಸ ಯುಗಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಅಸ್ಸಾಂ ನಿರ್ಮಿಸುವ ಚುನಾವಣೆ ಇದಾಗಿದೆ. ಈ ಬಾರಿ ಅಸ್ಸಾಂನಲ್ಲಿ ಎನ್​ಡಿಎ ಹ್ಯಾಟ್ರಿಕ್​ಗೆ ಸಜ್ಜಾಗಿದೆ ಎಂದರು.   ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…

Read More