Video: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ – Kannada News | The elephant imitated its owner who was limping, video goes viral
ಪ್ರಾಣಿಗಳ (Animals) ಪ್ರೀತಿ ನಿಷ್ಕಲ್ಮಷವಾದದ್ದು. ತಮ್ಮನ್ನು ಸಾಕಿದ ಮಾಲೀಕರಿಗೆ ಪ್ರೀತಿಯನ್ನು ತೋರಿಸುತ್ತವೆ. ಆಟ ತುಂಟಾಟಗಳ ಜತೆಗೆ ತನ್ನನ್ನು ಕಾಳಜಿ ವಹಿಸುವವರ ಜತೆಗೆ ಮಕ್ಕಳಾಗಿ ಬಿಡುತ್ತವೆ. ಈ ದೃಶ್ಯ ನೋಡಿದ್ರೆ ನಿಮಗೂ ಹಾಗೆ ಅನಿಸುವುದು ಸಹಜ. ಆನೆಯೊಂದು (elephant) ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಿಸಿದೆ. ಗಜರಾಜನ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಇಂಡಿಯಾ ಟ್ರೆಂಡ್ಸ್ (India Trends) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆನೆಯೊಂದು ಮಾಲಕಿಯನ್ನು ಅನುಕರಿಸುವುದನ್ನು ಕಾಣಬಹುದು. ಈ…