All posts by nagaraj11081993

ಮೇಕೆದಾಟು ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ – Kannada News | Tamil Nadu Assembly Opposes Mekedatu Dam Project Unanimously, Demands Centre Stop DPR Review

ಚೆನ್ನೈ, ಜೂನ್ 19: ಕರ್ನಾಟಕ ಸರ್ಕಾರವು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು(Mekedatu) ಅಣೆಕಟ್ಟು ಯೋಜನೆಗೆ ತಮಿಳುನಾಡು ರಾಜ್ಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜೂನ್ 19ರ ಶುಕ್ರವಾರದಂದು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಡಿಸಿದ ಮೇಕೆದಾಟು ವಿರೋಧಿ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.

ಈ ಯೋಜನೆಗೆ ಯಾವುದೇ ರೀತಿಯ ತಾಂತ್ರಿಕ ಅಥವಾ ಪರಿಸರ ಇಲಾಖೆಯ ಅನುಮತಿಯನ್ನು ನೀಡಬಾರದು ಎಂದು ತಮಿಳುನಾಡು ಸರ್ಕಾರವು ಈ ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ತಮಿಳುನಾಡು ಸರ್ಕಾರದ ವಾದವೇನು?
ನ್ಯಾಯಾಲಯದ ಆದೇಶಗಳ ಉಲ್ಲಂಘನೆ: ಕಾವೇರಿ ಜಲ ವಿವಾದ ನ್ಯಾಯಮಂಡಳಿಯ 2007ರ ಅಂತಿಮ ಆದೇಶ ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸದೇ ಕರ್ನಾಟಕವು ಏಕಪಕ್ಷೀಯವಾಗಿ ಅಣೆಕಟ್ಟು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ವಿಜಯ್ ಆರೋಪಿಸಿದ್ದಾರೆ.

ಇತರ ರಾಜ್ಯಗಳ ಒಪ್ಪಿಗೆಯಿಲ್ಲ: ಕಾವೇರಿ ನದಿ ನೀರಿನ ಜಲಾನಯನ ಪ್ರದೇಶವು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಲಭ್ಯವಿರುವ ನೀರನ್ನು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಇತರ ಜಲಾನಯನ ರಾಜ್ಯಗಳ ಒಪ್ಪಿಗೆಯಿಲ್ಲದೆ ಕರ್ನಾಟಕ ಯಾವುದೇ ಹೊಸ ಯೋಜನೆ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಓದಿ: ಮೇಕೆದಾಟು ವಿವಾದ: ಮತ್ತೆ ತಮಿಳುನಾಡು ಕ್ಯಾತೆ; ಮಾತುಕತೆಗೆ ಸಿದ್ದ ಎಂದ ಕರ್ನಾಟಕ ಸಿಎಂ ಡಿಕೆಶಿ

ಡಿಪಿಆರ್ ಪರಿಶೀಲಿಸದಂತೆ ಆಗ್ರಹ: ಮೇಕೆದಾಟು ಯೋಜನೆಗಾಗಿ ಕರ್ನಾಟಕ ಸಲ್ಲಿಸಿರುವ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರ ಜಲ ಆಯೋಗವು ಯಾವುದೇ ಕಾರಣಕ್ಕೂ ಪರಿಶೀಲಿಸಬಾರದು ಎಂದು ತಮಿಳುನಾಡು ಒತ್ತಾಯಿಸಿದೆ.

ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮಿಳುನಾಡಿನ ಆಡಳಿತ ಮತ್ತು ವಿರೋಧ ಪಕ್ಷಗಳು ಈ ವಿಷಯದಲ್ಲಿ ಒಟ್ಟಾಗಿ ನಿಂತಿವೆ.

ಡಿಎಂಕೆ ಬೆಂಬಲ: ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಸರ್ಕಾರದ ನಿರ್ಣಯಕ್ಕೆ ಡಿಎಂಕೆ (DMK) ಪಕ್ಷದ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ತಮಿಳುನಾಡಿನ ಕಾವೇರಿ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಎಐಎಡಿಎಂಕೆ ಖಂಡನೆ: ಎಐಎಡಿಎಂಕೆ (AIADMK) ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮಾತನಾಡಿ, ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಗೆ ಏಕಪಕ್ಷೀಯವಾಗಿ ಹಣ ಮೀಸಲಿಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು ಹಾಗೂ ಈ ಹಿಂದೆ ತಮ್ಮ ಸರ್ಕಾರವೂ ಈ ಯೋಜನೆಯನ್ನು ಕಾನೂನಾತ್ಮಕವಾಗಿ ತಡೆದಿತ್ತು ಎಂದರು.

ಮುಂದಿನ ನಡೆ: ಪ್ರಧಾನಿ ಭೇಟಿಗೆ ಕರೆ
ಮುಖ್ಯಮಂತ್ರಿ ವಿಜಯ್ ಅವರು ತಮಿಳುನಾಡಿನ ಎಲ್ಲಾ ಪಕ್ಷಗಳ ಶಾಸಕರು ಮತ್ತು ಸಂಸದರನ್ನೊಳಗೊಂಡ ಒಂದು ಜಂಟಿ ನಿಯೋಗವನ್ನು ನವದೆಹಲಿಗೆ ಕರೆದೊಯ್ದು, ಪ್ರಧಾನಮಂತ್ರಿಯವರನ್ನು ಖುದ್ದಾಗಿ ಭೇಟಿ ಮಾಡಿ ರಾಜ್ಯದ ಬೇಡಿಕೆಯನ್ನು ಸಾಮೂಹಿಕವಾಗಿ ಮಂಡಿಸಬೇಕು ಎಂದು ಸದನದಲ್ಲಿ ಕರೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಕಾಕ್‌ಟೇಲ್ 2’ ಪ್ರದರ್ಶನದಲ್ಲಿ ಶ್ರದ್ಧಾ ಕಪೂರ್ ದರ್ಶನ; ‘ಈಥಾ’ ಟೀಸರ್ ನೋಡಿ ಫ್ಯಾನ್ಸ್ ಫಿದಾ – Kannada News | Shraddha Kapoor’s ‘Eetha’ Teaser Surprise: New Biopic Role and Release Date Revealed

ಬಾಲಿವುಡ್ ನಟ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಸನೋನ್ ಅಭಿನಯದ ‘ಕಾಕ್‌ಟೇಲ್ 2’ ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆದರೆ, ಥಿಯೇಟರ್‌ಗಳಲ್ಲಿ ಈ ಚಿತ್ರವನ್ನು ವೀಕ್ಷಿಸಲು ಬಂದ ಪ್ರೇಕ್ಷಕರಿಗೆ ಬಾಲಿವುಡ್‌ನ ಸ್ಟಾರ್ ನಟಿ ಶ್ರದ್ಧಾ ಕಪೂರ್ (Shradhdha Kapoor) ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ಹೌದು, ‘ಕಾಕ್‌ಟೇಲ್ 2’ ಚಿತ್ರದ ಪ್ರದರ್ಶನದ ಜೊತೆಗೆ ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಈಥಾ’ ಚಿತ್ರದ ಅಧಿಕೃತ ಟೀಸರ್ ಅನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

ಸೆನ್ಸಾರ್ ಮಂಡಳಿಯಿಂದ U/A 13+ ರೇಟಿಂಗ್ ಪಡೆದುಕೊಂಡಿರುವ ಈ ಟೀಸರ್ 2 ನಿಮಿಷ 18 ಸೆಕೆಂಡ್‌ಗಳ ಅವಧಿಯನ್ನು ಹೊಂದಿದೆ. ಸಿನಿಮಾ ಆರಂಭವಾಗುತ್ತಿದ್ದಂತೆ ಥಿಯೇಟರ್‌ಗಳಲ್ಲಿ ಶ್ರದ್ಧಾ ಕಪೂರ್ ಅವರ ಹೊಚ್ಚ ಹೊಸ ಅವತಾರವನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

ಸಂಪೂರ್ಣ ವಿಭಿನ್ನ ಅವತಾರದಲ್ಲಿ ಶ್ರದ್ಧಾ ಕಪೂರ್

ಮರಾಠಿಯ ಪ್ರಸಿದ್ಧ ತಮಾಶಾ ಕಲಾವಿದೆ ವಿಠಾಬಾಯಿ ನಾರಾಯಣ ಗಾಂವ್ಕರ್ ಅವರ ಜೀವನ ಆಧಾರಿತ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ‘ಈಥಾ’ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಇಂತಹ ಸಿನಿಮಾಗಳಲ್ಲಿ ನಾಯಕಿಯ ಮಾಸ್ ಎಂಟ್ರಿಯನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಈ ಟೀಸರ್‌ನಲ್ಲಿ ಶ್ರದ್ಧಾ ಕಪೂರ್ ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ವಿಭಿನ್ನವಾಗಿ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತಾರೆ.

ತಮ್ಮ ವೃತ್ತಿಜೀವನದಲ್ಲಿ ಹಲವು ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿರುವ ಶ್ರದ್ಧಾ, ಈ ಚಿತ್ರಕ್ಕಾಗಿ ಸಂಪೂರ್ಣವಾಗಿ ಮರಾಠಿ ಶೈಲಿಯ ನೃತ್ಯ ಮತ್ತು ಹಾವಭಾವಗಳನ್ನು ಕರಗತ ಮಾಡಿಕೊಂಡಿರುವುದು ಟೀಸರ್‌ನಲ್ಲಿ ಎದ್ದು ಕಾಣುತ್ತಿದೆ. ಲಕ್ಷ್ಮಣ್ ಉತೇಕರ್ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯ್ಯುಬ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ರಕ್ಷಾಬಂಧನದ ಹಬ್ಬದ ಪ್ರಯುಕ್ತ ಆಗಸ್ಟ್ 28 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರೆಗ್ನೆಂಟ್ ಲೇಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಶ್ರದ್ಧಾ ಕಪೂರ್, ನೋರಾ ಫತೇಹಿಗೆ ಬಿಗ್ ರಿಲೀಫ್; ಪೊಲೀಸರಿಗೆ ಸಿಗಲೇ ಇಲ್ಲ ಸಾಕ್ಷಿ

ಶ್ರದ್ಧಾ ಕಪೂರ್ ಅವರಿಗೆ ಈ ಹಿಂದೆ ಬಂದಿದ್ದ ‘ಸ್ತ್ರೀ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿತ್ತು. ಸಿನಿಮಾ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿತ್ತು. ಈಗ ‘ಸ್ತ್ರೀ 2’ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಶ್ರದ್ಧಾ ಸಂಪೂರ್ಣ ಕಮರ್ಷಿಯಲ್ ಲೀಗ್‌ನಿಂದ ಹೊರಬಂದು, ಈ ರೀತಿಯ ಸಾಂಪ್ರದಾಯಿಕ ಹಾಗೂ ಐತಿಹಾಸಿಕ ಹಿನ್ನೆಲೆಯ ‘ಈಥಾ’ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಅವರ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್ – Kannada News | Meta brings new features in Instagram and Threads to give users more control on the feed

ನವದೆಹಲಿ, ಜೂನ್ 19: ಮೆಟಾ ಕಂಪನಿಯು ತನ್ನ ಇನ್‌ಸ್ಟಾಗ್ರಾಮ್ (Instagram) ಮತ್ತು ಥ್ರೆಡ್ಸ್ ಆಪ್‌ಗಳಲ್ಲಿ (Threads app) ಬಳಕೆದಾರರಿಗೆ ತಮ್ಮ ಫೀಡ್‌ಗಳನ್ನು ನಿಯಂತ್ರಿಸಲು ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದರಿಂದ ನೀವು ಇನ್​ಸ್ಟಾ ಸ್ಕ್ರೋಲ್ ಮಾಡುವಾಗ ನೀವು ಆಯ್ದುಕೊಂಡ ರೀತಿಯ ಕಂಟೆಂಟ್​ಗಳೇ ಬರುತ್ತಿರುತ್ತವೆ.

ಥ್ರೆಡ್ಸ್‌ನಲ್ಲಿ “ಯುವರ್ ಆಲ್ಗೋ”: ಥ್ರೆಡ್ಸ್ ಆಪ್‌ನಲ್ಲಿ ಯುವರ್ ಆಲ್ಗೋ (Your Algo) ಮೂಲಕ ಬಳಕೆದಾರರು ತಮಗೆ ಯಾವ ವಿಷಯಗಳು ಹೆಚ್ಚು ಬೇಕು ಅಥವಾ ಬೇಡ ಎಂಬುದನ್ನು ಖಾಸಗಿಯಾಗಿ ವಿನಂತಿಸಬಹುದು. ಉದಾಹರಣೆಗೆ, ಕ್ರೀಡೆಗೆ ಸಂಬಂಧಿಸಿದ ಪೋಸ್ಟ್‌ಗಳು ಹೆಚ್ಚು ಬರಲಿ ಮತ್ತು ಒತ್ತಡ ತರುವ ಸುದ್ದಿಗಳು ಕಡಿಮೆಯಾಗಲಿ ಎಂದು ಸೆಟ್ ಮಾಡಬಹುದು. ಈ ಆಯ್ಕೆಯು ಒಂದು ದಿನದಿಂದ ಒಂದು ವಾರದವರೆಗೆ ಸಕ್ರಿಯವಾಗಿರುತ್ತದೆ.

ಇದನ್ನೂ ಓದಿ: ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ

ಇನ್‌ಸ್ಟಾಗ್ರಾಮ್‌ನಲ್ಲಿ “ಯುವರ್ ಆಲ್ಗಾರಿದಮ್”: ಇನ್‌ಸ್ಟಾಗ್ರಾಮ್ ಯಾವ ವಿಷಯಗಳ ಆಧಾರದ ಮೇಲೆ ನಿಮಗೆ ಪೋಸ್ಟ್‌ಗಳನ್ನು ತೋರಿಸುತ್ತಿದೆ ಎಂಬುದನ್ನು ಯುವರ್ ಆಲ್ಗಾರಿದಮ್ (Your Algorithm) ಈ ವೈಶಿಷ್ಟ್ಯದ ಮೂಲಕ ನೀವು ನೋಡಬಹುದು. ಆಸಕ್ತಿ ಇಲ್ಲದ ವಿಭಾಗಗಳನ್ನು ನೀವೇ ನೇರವಾಗಿ ಬದಲಾಯಿಸಬಹುದು. ಇದು ಫೀಡ್, ಎಕ್ಸ್‌ಪ್ಲೋರ್ ಮತ್ತು ರೀಲ್ಸ್ ಮೂರಕ್ಕೂ ಅನ್ವಯಿಸುತ್ತದೆ.

ಇದುವರೆಗೆ ಸೋಶಿಯಲ್ ಮೀಡಿಯಾ ಆಪ್‌ಗಳು ನೀವು ಲೈಕ್ ಮಾಡಿದ ಅಥವಾ ನೋಡಿದ ಹಳೆಯ ಡೇಟಾವನ್ನು ಇಟ್ಟುಕೊಂಡು ತಾವೇ ಪೋಸ್ಟ್‌ಗಳನ್ನು ಶಿಫಾರಸು ಮಾಡುತ್ತಿದ್ದವು. ಆದರೆ ಇನ್ನು ಮುಂದೆ ಬಳಕೆದಾರರು ನೇರವಾಗಿ ತಮಗೆ ಬೇಕಾದ ಆಸಕ್ತಿಗಳನ್ನು ನಿರ್ಧರಿಸಬಹುದು.

ಇದನ್ನೂ ಓದಿ: ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ

ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ (Adam Mosseri) ಹೇಳುವಂತೆ, ಈ ಎಐ ತಂತ್ರಜ್ಞಾನದಿಂದಾಗಿ ಆಲ್ಗಾರಿದಮ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದು ಬಳಕೆದಾರರಿಗೆ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಗೊಂದಲಗಳು ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ, ನಿಮ್ಮ ಸೋಶಿಯಲ್ ಮೀಡಿಯಾ ಫೀಡ್‌ನಲ್ಲಿ ಏನು ಬರಬೇಕು ಎಂಬುದನ್ನು ಇನ್ನು ಮುಂದೆ ನೀವೇ ನಿರ್ಧರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೊನೆ ಕ್ಷಣದಲ್ಲಿ ಅಮೆರಿಕ ಜತೆಗಿನ ಒಪ್ಪಂದದಿಂದ ಹಿಂದೆ ಸರಿದ ಇರಾನ್ – Kannada News | Iran Abruptly Halts US Peace Deal: Hardliners and Khamenei’s Death Fuel Last Minute Retreat

ಡೊನಾಲ್ಡ್​ ಟ್ರಂಪ್-ಮೊಜ್ತಬಾ Image Credit source: NDTV

ಟೆಹ್ರಾನ್, ಜೂನ್ 19: ಇನ್ನೇನು ಅಮೆರಿಕ-ಇರಾನ್(Iran) ನಡುವಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕು ಅನ್ನುವಷ್ಟರಲ್ಲಿ ಸಂಧಾನವೇ ಮುರಿದು ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು (ಜೂನ್ 19, 2026) ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆಕ್ಷಣದಲ್ಲಿ ಹಿಂದೆ ಸರಿದಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್‌ಗೆ ನಿಕಟವಾಗಿರುವ ಮೂಲಗಳ ಪ್ರಕಾರ, ಅಮೆರಿಕ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದೊಳಗೆ ತೀವ್ರ ಜನಾಕ್ರೋಶ ವ್ಯಕ್ತವಾಗಬಹುದು ಎಂದು ತೀವ್ರಗಾಮಿಗಳು ಎಚ್ಚರಿಸಿದ ಹಿನ್ನೆಲೆಯಲ್ಲಿ ಇರಾನ್ ಈ ನಿರ್ಧಾರ ಕೈಗೊಂಡಿದೆ. ಇತ್ತ ಶ್ವೇತಭವನ ಕೂಡ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸಿದೆ.

ಇರಾನ್ ಹಿಂದೆ ಸರಿಯಲು ಅಸಲಿ ಕಾರಣಗಳೇನು?
ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಅಮೆರಿಕದ ಅಧಿಕಾರಿಗಳೊಂದಿಗೆ ಹಸ್ತಲಾಘವ ಮಾಡುವ ಅಥವಾ ಟಿವಿ ಕ್ಯಾಮೆರಾಗಳ ಮುಂದೆ ನಗುತ್ತಾ ನಿಲ್ಲುವ ಚಿತ್ರಗಳು ಹೊರಬಂದರೆ, ಅದು ಸಂಘರ್ಷದಲ್ಲಿ ಮಡಿದವರಿಗೆ ಮಾಡುವ ದ್ರೋಹ ಎಂದು ಇರಾನ್‌ನ ಜನ ಭಾವಿಸುತ್ತಾರೆ ಎಂದು ತೀವ್ರಗಾಮಿ ಬಣಗಳು ಎಚ್ಚರಿಸಿದ್ದವು. ಇರಾನಿಯನ್ನರು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆಯೇ ಹೊರತು ಸಾರ್ವಜನಿಕ ಸ್ನೇಹದ ಪ್ರದರ್ಶನವನ್ನಲ್ಲ ಎಂದು ಮೂಲಗಳು ತಿಳಿಸಿವೆ.

ಇರಾನ್ ಒಪ್ಪಂದದಿಂದ ಹಿಂದೆ ಸರಿಯುತ್ತಿರುವ ಬೆನ್ನಲ್ಲೇ, ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿ ರಾತ್ರಿಯಿಡೀ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಹೆಜ್ಬೊಲ್ಲಾ ವರದಿ ಮಾಡಿದೆ.

ಮತ್ತಷ್ಟು ಓದಿ: ವಾಸ್ತವವನ್ನು ಅರ್ಥಮಾಡಿಕೊಳ್ಳಿ: ಇರಾನ್ ಒಪ್ಪಂದ ಟೀಕಿಸಿದ ಇಸ್ರೇಲ್​ಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಎಚ್ಚರಿಕೆ

ಸಾರ್ವಜನಿಕ ಸಮಾರಂಭ ರದ್ದಾಗಿದ್ದರೂ ಒಪ್ಪಂದ ಸಂಪೂರ್ಣ ಮುರಿದುಬಿದ್ದಿಲ್ಲ. ಇನ್ನು ಯಾವುದೇ ಉನ್ನತ ನಾಯಕರು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣಿಸುವುದಿಲ್ಲ. ಬದಲಿಗೆ ಅಮೆರಿಕ, ಇರಾನ್, ಕತಾರ್ ಮತ್ತು ಪಾಕಿಸ್ತಾನದ ತಾಂತ್ರಿಕ ತಂಡಗಳು ಜ್ಯೂರಿಚ್‌ನಲ್ಲಿ ಬೀಡುಬಿಟ್ಟಿದ್ದು, ಮುಂದಿನ 60 ದಿನಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದದ ವಿವರಗಳನ್ನು ಸಿದ್ಧಪಡಿಸಲಿವೆ.

ಇರಾನ್‌ನ ಬಳಿ ಇನ್ನೂ ನೂರಾರು ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಇರುವುದರಿಂದ ಈ ಒಪ್ಪಂದ ಎಷ್ಟು ಯಶಸ್ವಿಯಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಈಗಾಗಲೇ ಅಮೆರಿಕವು ಇರಾನ್ ಮೇಲಿನ ಕರಾವಳಿ ನೌಕಾ ದಿಗ್ಬಂಧನವನ್ನು ತೆಗೆದುಹಾಕುವ ಮೂಲಕ ಒಪ್ಪಂದದ ಮೊದಲ ಹೆಜ್ಜೆಯನ್ನು ಇಟ್ಟಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು! – Kannada News | Bizarre Incident in Bengaluru: Mobile Snatcher Fleeing on Scooter Suffers Sudden Heart Attack and Dies

ಬೆಂಗಳೂರು, ಜೂನ್​​ 19: ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಕ್ಷಣ ಮಾತ್ರದಲ್ಲಿ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜುನೈದ್ ಎಂಬಾತ ವ್ಯಕ್ತಿಯೋರ್ವರ ಮೊಬೈಲ್​​ ಕಸಿದು ಸ್ಕೂಟಿಯಲ್ಲಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರ್ಮಿಕ ಈತನತ್ತ ಮೂಟೆಯನ್ನು ಎಸೆದಿದ್ದು, ನಿಯಂತ್ರಣ ತಪ್ಪಿ ಬಿದ್ದ ಜುನೈದ್​​ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆದರೆ ಫುಟ್​​ಪಾತ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೃದಯ ಸಂಬಂಧಿ ಸಮಸ್ಯೆಯಿಂದ ಜುನೈದ್ ಬಳಲುತ್ತಿದ್ದ ಎನ್ನಲಾಗಿದ್ದು, ಮತ್ತೋರ್ವ ಆರೋಪಿ ಅರ್ಬಾಜ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನಾ ಹೆಲಿಕಾಪ್ಟರ್‌ ಬಳಕೆ – Kannada News | NEET UG 2026: Re Examination Details, Security Measures, and Student Concerns

ಜೂನ್ 21ರಂದು ದೇಶಾದ್ಯಂತ ನೀಟ್ ಯುಜಿ (NEET UG) ಮರು ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಜ್ಜಾಗಿದೆ. ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ, ಈ ಬಾರಿ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ 2:30 ರಿಂದ ಸಂಜೆ 5:15 ರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ 15 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ.

552 ನಗರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನೆಯ ಹೆಲಿಕಾಪ್ಟರ್‌ ಮತ್ತು ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಸಿಆರ್‌ಪಿಎಫ್ (CRPF) ಮತ್ತು ಸಿಐಎಸ್‌ಎಫ್ (CISF) ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಾಗಿಸಿ, ಅವುಗಳನ್ನು ಸಂಗ್ರಹಿಸುವ ಸ್ಥಳಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ. ನಕಲಿ ಅಭ್ಯರ್ಥಿಗಳನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಭಾಗಿಯಾದ ಪ್ರೊಫೆಸರ್‌ಗಳಿಗೆ ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ಎಲ್ಲಾ ಕ್ರಮಗಳು ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶ ಹೊಂದಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾ ಇಂಟಿ ಬಂಗಾರಂ’ ಮ್ಯಾಜಿಕ್ ಮಾಡಿದರಾ ಸಮಂತಾ, ನೆಟ್ಟಿಗರು ಹೇಳಿದ್ದೇನು? – Kannada News | Samantha Ruth Prabhu starrer Maa Inti Bangaram movie twitter review

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣದ ಕೆಲವೆಡೆ ಬೆಳಿಗ್ಗೆ ಶೋಗಳು ಪ್ರದರ್ಶನಗೊಂಡಿವೆ. ವಿದೇಶದಲ್ಲೂ ಸಹ ಭಾರತಕ್ಕಿಂತಲೂ ಮುಂಚಿತವಾಗಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಹೇಗನ್ನಿಸಿತು, ಅವರಿಗೆ ಇಷ್ಟವಾಯ್ತಾ? ಇಲ್ಲವಾ? ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ….

ವೆಂಕಿ ರಿವ್ಯೂಸ್ ಎಂಬ ಟ್ವಿಟ್ಟರ್ ಚಾನೆಲ್ ‘ಮಾ ಇಂಟಿ ಬಂಗಾರಂ’ ಒಂದು ಸಾಧಾರಣ ಸಿನಿಮಾ ಎಂದಿದೆ. ‘ಫ್ಯಾಮಿಲಿ ಸ್ಟೋರಿಯನ್ನು ಕೆಟ್ಟದಾಗಿ ತೆರೆ ತರಲಾಗಿದೆ. ಆರಂಭದಿಂದ ಅಂತ್ಯದವರೆಗೆ ಬಹಳ ಸಾಧಾರಣ ರೀತಿಯಲ್ಲಿ ನಿರೂಪಿತವಾದ ಹಾಗೂ ಸುಲಭವಾಗಿ ಊಹಿಸಬಹುದಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ವೇಗ ಪಡೆದುಕೊಂಡರೂ, ಪರಿಣಾಮಕಾರಿಯಲ್ಲದ ಬ್ಯಾಕ್ ಸ್ಟೋರಿ, ದುರ್ಬಲ ಖಳನಾಯಕನ ಪಾತ್ರ ಮತ್ತು ಟ್ವಿಸ್ಟ್​​ಗಳ ಕೊರತೆ ಸಿನಿಮಾನಲ್ಲಿದೆ. ಸಿನಿಮಾದ ಎಮೋಷನ್ ಸೀನ್​​ಗಳು ಸಹ ಸರಿಯಾಗಿ ಟಚ್ ಆಗುವುದಿಲ್ಲ, ಸಮಂತಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಳಪೆ ಹಿನ್ನೆಲೆ ಸಂಗೀತ ಮತ್ತು ಕಳಪೆ ನಿರೂಪಣೆಯು ಚಿತ್ರವು ಹೆಚ್ಚಿನ ಪ್ರಭಾವ ಬೀರದಂತೆ ತಡೆಯುತ್ತದೆ’ ಎಂದಿದ್ದಾರೆ.

ದೀಪಕ್​ಸಿಂಗ್ ಅವರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಷ್ಟವಾಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಯನ್ನು ಅವರು ನೀಡಿದ್ದಾರೆ. ‘ಟಾಲಿವುಡ್​​ಗೆ ಅಗತ್ಯವಾಗಿದ್ದ ಹಿಟ್ ಅನ್ನು ಸಮಂತಾ ನೀಡಿದ್ದಾರೆ. ಸಮಂತಾ ಅವರು ರಾಣಿಯಂತೆ ಸಿನಿಮಾನಲ್ಲಿ ಮಿಂಚಿದ್ದಾರೆ. ಇಡೀ ಸಿನಿಮಾದ ಹೈಲೆಟ್ ಸಮಂತಾ ಅವರೇ ಎಂದಿದ್ದಾರೆ.

ಐತೇ ಎಂಟಿ ಎಂಬ ಟ್ವಿಟ್ಟರ್ ಪೇಜ್​​ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ‘ಸಿನಿಮಾದ ಮೊದಲಾರ್ಧ ಚೆನ್ನಾಗಿದೆ ಒಳ್ಳೆಯ ಕಾಮಿಡಿ ಇದೆ. ಆದರೆ ಇಂಟರ್ವೆಲ್ ಬಳಿಕ ಸಿನಿಮಾ ಸಪ್ಪೆಯಾಗಿದೆ. ಸಿನಿಮಾದ ಎಡಿಟಿಂಗ್ ಅಂತೂ ಬಹಳ ಕೆಟ್ಟದಾಗಿದೆ. ತಮ್ಮ ಮನಸ್ಸಿಗೆ ಬಂದಂತೆ ದೃಶ್ಯಗಳನ್ನು ಕಟ್ ಮಾಡಿ ಜೋಡಿಸಿದ್ದಾರೆ. ಒಂದು ನಿಯಮಿತ ಕ್ರಮವೇ ಇಲ್ಲ’ ಎಂದು ಅವರು ದೂರಿದ್ದಾರೆ.

ದಿಲೀಪ್ ಕುಮಾರ್ ಎಂಬುವರು ಟ್ವೀಟ್ ಮಾಡಿ, ಕುಟುಂಬ ಪ್ರೇಕ್ಷಕರು ಆರಾಮವಾಗಿ ಬಂದು ನೋಡಬಹುದಾದ ಸಿನಿಮಾ ‘ಮಾ ಇಂಟಿ ಬಂಗಾರಂ’. ಸಿನಿಮಾದ ಕತೆ ಹಿಡಿದಿಟ್ಟುಕೊಳ್ಳುತ್ತದೆ. ವಿಶೇಷವಾಗಿ ಸಿನಿಮಾದ ಆಕ್ಷನ್ ಸೀನ್​​ಗಳು ಅದ್ಭುತವಾಗಿವೆ. ಸಮಂತಾ ಅದ್ಭುತವಾಗಿ ಆಕ್ಷನ್ ಮಾಡಿದ್ದಾರೆ. ಈ ಸಿನಿಮಾದ ಬಳಿಕ ಸಮಂತಾಗೆ ಲೇಡಿ ಸೂಪರ್ ಸ್ಟಾರ್ ಟ್ಯಾಗ್ ಕೊಡಬಹುದು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಟಾಗಿ ಮದುವೆ ಆದ್ರಾ ಸಾರಾ ಅಲಿ ಖಾನ್? ವೈರಲ್ ಆಯ್ತು ಫೋಟೋ – Kannada News | Did Sara Ali Khan Get Married Secretly? Truth Behind Her Viral Photo With Henry Cavill

ವೈರಲ್ ಆಗಿರುವ ಫೋಟೋದಲ್ಲಿ ಇಬ್ಬರ ಉಡುಪುಗಳು ಪ್ರೇಕ್ಷಕರಲ್ಲಿ ದೊಡ್ಡ ಗೊಂದಲ ಮೂಡಿಸಿವೆ. ಸಾರಾ ಅಲಿ ಖಾನ್ ಬಿಳಿ ಬಣ್ಣದ ಫಾರ್ಮಲ್ ಸ್ಕರ್ಟ್ ಸೂಟ್ ಧರಿಸಿ, ತಲೆಗೆ ನೆಟ್ ಮಾದರಿಯ ಬಿಳಿ ಹ್ಯಾಟ್ ಧರಿಸಿದ್ದರೆ, ಹೆನ್ರಿ ಕ್ಯಾವಿಲ್ ಸೂಟ್ ಮತ್ತು ಹ್ಯಾಟ್ ಧರಿಸಿ ಕ್ಲಾಸಿಕ್ ಬ್ಲ್ಯಾಕ್ ಅಂಡ್ ವೈಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕ್ರಿಶ್ಚಿಯನ್ ಸಂಪ್ರದಾಯದ ವಧು-ವರರಂತೆ ಕಾಣಿಸುತ್ತಿರುವುದರಿಂದ, ಅನೇಕ ಅಭಿಮಾನಿಗಳು ಸಾರಾ ಅಲಿ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದೇ ತಪ್ಪಾಗಿ ಭಾವಿಸಿದರು.

Source link

ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ – Kannada News | Karnataka Traffic Fine Rebate: Over 5 Crore E Challan Cases Pending; 50 percent Discount Scheme to begin from June 21

ಸಾಂದರ್ಭಿಕ ಚಿತ್ರ (ಕೃಪೆ: ಹೆಚ್​ಎಎಲ್ ಏರ್ಪೋರ್ಟ್ ಟ್ರಾಫಿಕ್ ಪೊಲೀಸ್)Image Credit source: @halairporttrfps

ಬೆಂಗಳೂರು, ಜೂನ್ 19: ಕರ್ನಾಟಕದಲ್ಲಿ (Karnataka) ವಾಹನ ಸವಾರರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಒಂದೆಡೆಯಾದರೆ, ನಿಯಮ ಉಲ್ಲಂಘನೆಗೆ ವಿಧಿಸಲಾದ ದಂಡದ (Traffic Fine) ಹಣವನ್ನು ಪಾವತಿಸದೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಐದು ಬಾರಿ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆಯನ್ನು ಪ್ರಕಟಿಸಿದ್ದರೂ ಸಹ, ಕೋಟ್ಯಂತರ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಇವೆ. ಪ್ರಸ್ತುತ ರಾಜ್ಯಾದ್ಯಂತ 5 ಕೋಟಿಗೂ ಅಧಿಕ ಇ-ಚಲನ್ ಪ್ರಕರಣಗಳು ಬಾಕಿ ಇದ್ದು, ಸವಾರರಿಂದ ಬರೋಬ್ಬರಿ 2,727.38 ಕೋಟಿ ರೂಪಾಯಿ ದಂಡದ ಬಾಕಿ ಹಣ ವಸೂಲಾಗಬೇಕಿದೆ.

ಮುಖ್ಯಾಂಶಗಳು

  • 5 ಕೋಟಿಗೂ ಅಧಿಕ ಟ್ರಾಫಿಕ್ ಇ-ಚಲನ್ ಬಾಕಿ.
  • 2,727 ಕೋಟಿ ರೂ. ದಂಡ ಕಟ್ಟದ ಸವಾರರು.
  • ಬೆಂಗಳೂರಿನಲ್ಲಿ ಜೂನ್ 21 ರಿಂದ 12 ವಿಶೇಷ ಕೌಂಟರ್.

ದಂಡ ರಿಯಾಯಿತಿ ಯೋಜನೆಗೆ ತಜ್ಞರ, ಐಪಿಎಸ್ ಅಧಿಕಾರಿಗಳ ತೀವ್ರ ವಿರೋಧ

ಸರ್ಕಾರ ಪದೇ ಪದೇ ದಂಡದಲ್ಲಿ ರಿಯಾಯಿತಿ ನೀಡುತ್ತಿರುವುದಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಸಾರಿಗೆ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ವಿಳಂಬ ಮಾಡುವವರಿಗೆ ಹೆಚ್ಚುವರಿ ದಂಡ ವಿಧಿಸುವ ಬದಲು, ಪದೇ ಪದೇ ರಿಯಾಯಿತಿ ನೀಡುವುದು ತಪ್ಪು. ಇದು ತಪ್ಪು ಮಾಡಿದವರಿಗೆ ಬಹುಮಾನ ನೀಡಿದಂತಾಗುತ್ತದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಆಕ್ರೋಶ ಹೊರಹಾಕಿರುವುದಾಗಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇಂತಹ ರಿಯಾಯಿತಿ ಯೋಜನೆಗಳು ಸಾರ್ವಜನಿಕರಲ್ಲಿ ದಂಡ ಮತ್ತು ಕಾನೂನಿನ ಮೇಲಿರುವ ಭಯವನ್ನು ಕಡಿಮೆ ಮಾಡುತ್ತವೆ. ಇದು ಪರೋಕ್ಷವಾಗಿ ನಿಯಮ ಉಲ್ಲಂಘನೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸಾರಿಗೆ ತಜ್ಞ ಹಾಗೂ ಐಐಎಸ್‌ಸಿ (IISc) ಪ್ರೊಫೆಸರ್ ಆಶಿಶ್ ವರ್ಮಾ ಅಭಿಪ್ರಾಯಪಟ್ಟಿರುವುದನ್ನೂ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಉಲ್ಲೇಖಿಸಿದೆ. ಕಳೆದ 8 ವರ್ಷಗಳಲ್ಲಿ ರಾಜ್ಯದಲ್ಲಿ ರಸ್ತೆ ಅಪಘಾತಗಳಿಗೆ 83,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂಬ ಕಠೋರ ವಾಸ್ತವದ ನಡುವೆಯೂ ಈ ಉದಾಸೀನತೆ ಮುಂದುವರಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದಂಡ ಪಾವತಿ ಬಾಕಿಯಲ್ಲಿ ಬೆಂಗಳೂರೇ ನಂಬರ್ 1

ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 2019 ರಿಂದ 2026 ರ ಏಪ್ರಿಲ್ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 7.46 ಕೋಟಿಗೂ ಅಧಿಕ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 3,605.93 ಕೋಟಿ ರೂ. ದಂಡ ವಿಧಿಸಲಾಗಿತ್ತು. ಇದರಲ್ಲಿ ಕೇವಲ 878.55 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನುಳಿದ 5,05,74,348 ಪ್ರಕರಣಗಳ ದಂಡದ ಹಣ ಇನ್ನೂ ಬಾಕಿ ಉಳಿದಿದೆ. ಈ ಪೈಕಿ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ ಅತ್ಯಧಿಕ ಅಂದರೆ 3,37,79,608 ಪ್ರಕರಣಗಳು ಬಾಕಿ ಇದ್ದು, 1,843 ಕೋಟಿ ರೂಪಾಯಿ ದಂಡ ವಸೂಲಾಗಬೇಕಿದೆ. ಬೆಂಗಳೂರಿನ ನಂತರ ಮೈಸೂರು ಹಾಗೂ ಬೆಳಗಾವಿ ನಗರಗಳು ಅತಿ ಹೆಚ್ಚು ಬಾಕಿ ಹೊಂದಿರುವ ಪಟ್ಟಿಯಲ್ಲಿ ಮುಂದಿವೆ. ಜಿಲ್ಲಾವಾರು ಪಟ್ಟಿಯಲ್ಲಿ ಮೈಸೂರು, ಬೆಂಗಳೂರು ಗ್ರಾಮಾಂತರ (ಹಳೆಯ ರಾಮನಗರ) ಹಾಗೂ ಮಂಡ್ಯ ಜಿಲ್ಲೆಗಳು ಮುಂಚೂಣಿಯಲ್ಲಿವೆ.

ಜೂನ್ 21 ರಿಂದ ಮತ್ತೆ ರಿಯಾಯಿತಿ: ಬೆಂಗಳೂರಲ್ಲಿ 12 ವಿಶೇಷ ಕೌಂಟರ್

ರಾಜ್ಯ ಸರ್ಕಾರವು ಜೂನ್ 21 ರಿಂದ ಜುಲೈ 10, 2026 ರವರೆಗೆ ಆರನೇ ಬಾರಿಗೆ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಬೆಂಗಳೂರು ಸಂಚಾರಿ ಪೊಲೀಸರು (BTP) ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ 12 ಜಂಕ್ಷನ್‌ಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸುತ್ತಿದ್ದಾರೆ. ಅವುಗಳ ವಿವರ ಇಲ್ಲಿದೆ;

  1. ಹೆಣ್ಣೂರು ಜಂಕ್ಷನ್, ರಿಂಗ್ ರೋಡ್
  2. ದೇವಸಂದ್ರ ಜಂಕ್ಷನ್, ಹಳೇ ಮದ್ರಾಸ್ ರಸ್ತೆ
  3. ಕುಂದಲಹಳ್ಳಿ ಜಂಕ್ಷನ್, ಹಳೇ ವಿಮಾನ ನಿಲ್ದಾಣ ರಸ್ತೆ
  4. ಮೈಸೂರು ಬ್ಯಾಂಕ್ ಜಂಕ್ಷನ್, ಕೆ.ಜಿ. ರಸ್ತೆ
  5. ಸುಮ್ಮನಹಳ್ಳಿ ಜಂಕ್ಷನ್, ಮಾಗಡಿ ರಸ್ತೆ
  6. ಮೆಟ್ರೋ (BHEL), ಮೈಸೂರು ರಸ್ತೆ
  7. ಆರ್‌ಟಿಒ ಕಚೇರಿ ಹತ್ತಿರ, 12ನೇ ಮುಖ್ಯ ರಸ್ತೆ (ರಾಜಾಜಿನಗರ)
  8. ಜಾಲಹಳ್ಳಿ ಕ್ರಾಸ್ ಜಂಕ್ಷನ್, ತುಮಕೂರು ರಸ್ತೆ
  9. ಹೆಬ್ಬಾಳ ಜಂಕ್ಷನ್, ಬಳ್ಳಾರಿ ರಸ್ತೆ
  10. ಸಾಗರ್ ಜಂಕ್ಷನ್, ಕೆ.ಜಿ. ರಸ್ತೆ
  11. ಹೊಸ ರಸ್ತೆ ಜಂಕ್ಷನ್, ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆ
  12. ಗೊಟ್ಟಿಗೆರೆ ಜಂಕ್ಷನ್, ಬನ್ನೇರುಘಟ್ಟ ರಸ್ತೆ

ಸವಾರರು ಈ ಕೌಂಟರ್‌ಗಳಲ್ಲದೆ, ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್, ಬಿಟಿಪಿ ಆಸ್ಟ್ರಾಂ (BTP ASTraM) ಆ್ಯಪ್, ಹತ್ತಿರದ ಸಂಚಾರಿ ಪೊಲೀಸ್ ಠಾಣೆ, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಹಾಗೂ ಕರ್ನಾಟಕ ಒನ್ ವೆಬ್‌ಸೈಟ್ ಮತ್ತು ಕೇಂದ್ರಗಳ ಮೂಲಕ ಅರ್ಧದಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಖುಲಾಸೆಗೊಳಿಸಿಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:01 am, Fri, 19 June 26

Source link

ಅಕ್ಷಯ್ ಕುಮಾರ್, ಹಣದಾಸೆ ಇರುವ ನಟರೇ? ಇತಿಹಾಸ ಏನು ಹೇಳುತ್ತದೆ? – Kannada News | Akshay Kumar said he is not money minded actor gives examples

ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್​​ನ ಬಲು ಬ್ಯುಸಿ ನಟ. ಸ್ಟಾರ್ ನಟ ಆಗಿರುವವರು ವರ್ಷಕ್ಕೆ ಒಂದು ಸಿನಿಮಾ ಸಹ ಮಾಡುತ್ತಿಲ್ಲ, ಆದರೆ ಅಕ್ಷಯ್ ಕುಮಾರ್ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಾರೆ. ಸ್ಟಾರ್ ನಟರಾಗಿಯೂ ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಏಕೈಕ ವ್ಯಕ್ತಿ ಅಕ್ಷಯ್ ಕುಮಾರ್. ಆದರೆ ಅಕ್ಷಯ್ ಕುಮಾರ್ ಬಗ್ಗೆ ಚಿತ್ರರಂಗದಲ್ಲಿ ಒಂದು ಋಣಾತ್ಮಕ ಅಭಿಪ್ರಾಯವೂ ಇದೇ. ಅಕ್ಷಯ್ ಕುಮಾರ್ ಕೇವಲ ಹಣದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಕತೆಯ ಕಾರಣಕ್ಕಾಗಿ ಅಲ್ಲದೆ ಹಣಕ್ಕಾಗಿಯೇ ಅವರು ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಶೂಟಿಂಗ್, ಅಡ್ವಾನ್ಸ್ ಇನ್ನಿತರೆ ವಿಷಯಗಳಲ್ಲಿಯೂ ಸಹ ಅವರು ಪ್ರತಿ ಗಂಟೆಗೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬೆಲ್ಲ ಸುದ್ದಿ ಚಾಲ್ತಿಯಲ್ಲಿದೆ.

ಸ್ವತಃ ಅಕ್ಷಯ್ ಕುಮಾರ್ ಸಹ ಕೆಲ ಸಂದರ್ಶನಗಳಲ್ಲಿ ತಮಾಷೆಯಾಗಿ ತಮಗೆ ಹಣ ಮುಖ್ಯ, ಹಣ ಬಾಕಿ ಉಳಿಸಿಕೊಂಡಿದ್ದ ನಿರ್ಮಾಪಕನ ಮನೆಗೆ ನುಗ್ಗಿ ದೊಡ್ಡ ಮ್ಯೂಸಿಕ್ ಸಿಸ್ಟಮ್ ಎತ್ತಿಕೊಂಡು ಬಂದಿದ್ದ ಘಟನೆಗಳನ್ನು ಹೇಳಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರು ಸೆಟ್​​ಗೆ ಕಾಲಿಡುತ್ತಿದ್ದಂತೆ ಅವರ ಸಂಭಾವನೆಯ ಮೀಟರ್ ಶುರು ಆಗುತ್ತದೆ. ಸಂಜೆ ಐದು ಗಂಟೆ ಆಗುತ್ತಿದ್ದಂತೆ ಮೀಟರ್ ನಿಲ್ಲುತ್ತದೆ ಎಂದೆಲ್ಲ ಅವರ ಸಹ ನಟರು ಸಹ ಕೆಲವು ಬಾರಿ ಹೇಳಿದ್ದಿದೆ. ಇದೆಲ್ಲ ಕಾರಣಗಳಿಂದ ಅಕ್ಷಯ್ ಕುಮಾರ್ ಅವರನ್ನು ಮನಿ ಮೈಂಡೆಂಡ್ ನಟ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು.

ಆದರೆ ಆ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಅದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ‘ನನ್ನನ್ನು ನೆಗೆಟಿವ್ ಆಗಿ ಬಿಂಬಿಸಲಾಗಿದೆ. ನಾನು ನನ್ನ ವೃತ್ತಿ ಜೀವನದಲ್ಲಿ ನನ್ನ ಸಿನಿಮಾಗಳಿಗೆ ನಾನೇ ಹಣ ಕೊಟ್ಟು ಸಿನಿಮಾ ಪೂರ್ತಿಗೊಳಿಸಲು ಸಹಾಯ ಮಾಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದು ದಶಕಗಳಾಯ್ತು. ನನ್ನ ಒಂದೇ ಒಂದು ಸಿನಿಮಾ ಸಹ ಶುರುವಾದ ಬಳಿಕ ನಿಂತಿದ್ದೇ ಇಲ್ಲ. ರಿಲೀಸ್ ಮಾಡಲು ನಿರ್ಮಾಪಕರ ಬಳಿ ಹಣ ಇಲ್ಲ ಎಂದಾಗ ನಾನೇ ಹಣ ಕೊಟ್ಟು ರಿಲೀಸ್ ಮಾಡಿಸಿದ್ದೀನಿ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ:1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಮುಂದುವರೆದು ಮಾತನಾಡಿ, ‘ನಾನು ಈ ವರೆಗೆ ಹಲವಾರು ಸಿನಿಮಾ ನಿರ್ಮಾಪಕರುಗಳ ಜೊತೆಗೆ ಕೆಲಸ ಮಾಡಿದ್ದೀನಿ. ನನ್ನ ಸಿನಿಮಾಗಳು ಸೋತಾಗ ಖುದ್ದು ನಾನೇ ನಿರ್ಮಾಪಕರಿಗೆ ಕರೆ ಮಾಡಿ ಮಾತನಾಡುತ್ತೇನೆ. ಹೆದರಬೇಡಿ, ಮತ್ತೆ ಸಿನಿಮಾ ಮಾಡೋಣ ಎನ್ನುತ್ತೇನೆ ಮಾತ್ರವಲ್ಲದೆ ಸಿನಿಮಾ ಫ್ಲಾಪ್ ಆದರೆ ಬಾಕಿ ಹಣ ಕೊಡಬೇಡಿ ಎಂದು ಹೇಳುವ ಏಕೈಕ ನಟ ನಾನೇ. ನೀವು ಯಾವ ನಿರ್ಮಾಪಕರನ್ನಾದರೂ ಕೇಳಬಹುದು’ ಎಂದು ಅಕ್ಷಯ್ ಕುಮಾರ್ ಸವಾಲು ಹಾಕಿದ್ದಾರೆ.

ಅಕ್ಷಯ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಭೂತ್ ಬಂಗ್ಲ’ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೀಗ ‘ವೆಲ್​​ಕಮ್ ಟು ಜಂಗಲ್’ ಸಿನಿಮಾ ಬಿಡುಗಡೆ ಹಂತದಲ್ಲಿದೆ. ‘ಹೈವಾನ್’ ಹೆಸರಿನ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ಗೋಲ್​​ಮಾಲ್ 5’ ಸಿನಿಮಾನಲ್ಲಿ ನಟಿಸಲಿದ್ದಾರೆ. ಮಹಾರಾಜ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಜೀಮ್ ಬಾಜ್ಮಿ ನಿರ್ದೇಶನದ ಹೊಸ ಸಿನಿಮಾನಲ್ಲಿಯೂ ಅಕ್ಷಯ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link