All posts by nagaraj11081993

ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ – Kannada News | CM D.K. Shivakumar and Wife Offer Prayers at Tirupati Timmappa Temple

ತಿರುಪತಿ, ಜೂ.19: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ತಿರುಪತಿಗೆ ಭೇಟಿ ನೀಡಿ, ಬೆಳ್ಳಂಬೆಳಿಗ್ಗೆ ತಿಮ್ಮಪ್ಪನ ದರ್ಶನ ಪಡೆದರು. ನೂತನ ಸಚಿವ ಸಂಪುಟದ ವಿಸ್ತರಣೆಯ ನಂತರ ಡಿ.ಕೆ. ಶಿವಕುಮಾರ್ ಅವರ ಈ ಭೇಟಿಯು ಮಹತ್ವ ಪಡೆದುಕೊಂಡಿದೆ. ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ಮುಂಜಾನೆಯ ದರ್ಶನದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ. ಶಿವಕುಮಾರ್ ಅವರ ಮೊದಲ ತಿರುಪತಿ ಭೇಟಿ ಇದಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೆಂಕಿ ಚಿತ್ರಕ್ಕೆ ಇಬ್ಬರು ಸ್ಟಾರ್ ಹೀರೋಯಿನ್ಸ್; ಮುಹೂರ್ತದ ಕಲರ್​​ಫುಲ್ ಫೋಟೋಸ್ – Kannada News | Venkatesh Anil Ravipudi Film Launched: Grand Pooja for Sankranti Release

ಖ್ಯಾತ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಅವರು ಚಿತ್ರದ ಅಧಿಕೃತ ಚಿತ್ರಕಥೆಯನ್ನು ತಂಡಕ್ಕೆ ಹಸ್ತಾಂತರಿಸಿದರು. ಮುಹೂರ್ತದ ಮೊದಲ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರು. ಈ ಸಿನಿಮಾದಲ್ಲಿ ಕೃತಿ ಶೆಟ್ಟಿ, ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

Source link

ತೆಲುಗಿನಲ್ಲಿ ಹೊಸ ಸಿನಿಮಾ ಘೋಷಿಸಿದ ಕೆವಿಎನ್ – Kannada News | KVN production announce new Telugu movie with young hero

ಕೆವಿಎನ್ ಪ್ರೊಡಕ್ಷನ್ಸ್ (KVN Production) ಭಾರತದ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಹಲವು ಸಿನಿಮಾಗಳ ಮೇಲೆ ಹೂಡಿಕೆ ಮಾಡುತ್ತಿದೆ. ‘ಟಾಕ್ಸಿಕ್’, ‘ಜನ ನಾಯಗನ್’ ಅಂಥಹಾ ಭಾರಿ ಬಜೆಟ್​​ ಸಿನಿಮಾಗಳ ಮೇಲೆ ಹೂಡಿಕೆ ಮಾಡಿ, ಬಿಡುಗಡೆ ತಡವಾಗಿದ್ದರೂ ಸಹ ಸಿನಿಮಾ ನಿರ್ಮಾಣದಲ್ಲಿ ಹಿಂದುಳಿಯುತ್ತಿಲ್ಲ, ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ಬೆಂಬಲವಾಗಿ ನಿಲ್ಲುತ್ತಿದೆ. ಇದೀಗ ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಕೆವಿಎನ್ ಘೋಷಣೆ ಮಾಡಿದೆ.

‘ಮ್ಯಾಡ್’, ‘ಆಯ್’ ಮತ್ತು ‘ಮ್ಯಾಡ್ ಸ್ಕ್ವೇರ್’ ಚಿತ್ರಗಳ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಯುವ ನಟ ನರ್ನೆ ನಿತಿನ್ ನಟನೆಯ ಹೊಸ ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡಲಿದೆ. ಪ್ರೇಮಕತೆಯುಳ್ಳ ‘ಜೂನಿಯರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ #NN5 ಎಂದು ಸಿನಿಮಾವನ್ನು ಕರೆಯಲಾಗುತ್ತಿದೆ. ಈ ಘೋಷಣೆಯನ್ನು ನರ್ನೆ ನಿತಿನ್ ಅವರ ಹುಟ್ಟುಹಬ್ಬದ ದಿನದಂದು ಬಹಳ ವಿಭಿನ್ನವಾಗಿ ಮಾಡಲಾಗಿದೆ. ಚಿತ್ರತಂಡವು ಸಾಮಾಜಿಕ ಜಾಲತಾಣದ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಪೋಸ್ಟರ್ ಮೂಲಕ ಸಿನಿಮಾವನ್ನು ಪರಿಚಯಿಸಿದೆ.

ಪೋಸ್ಟರ್​​ನಲ್ಲಿ ‘ಆಕಾಶದಲ್ಲಿರುತ್ತೆ ಮೂನ್.. ನೀವೇ ನನ್ನ ಲೈಫ್‌ಗೆ ಕ್ವೀನ್’ ಎಂದು ಬರೆಯಲಾಗಿದೆ. ಸಿನಿಮಾದ ನಾಯಕ ಅಥವಾ ನಾಯಕಿಯ ಮುಖ ಬಹಿರಂಗಪಡಿಸಿಲ್ಲ. ಪೋಸ್ಟರ್‌ನಲ್ಲಿರುವ ಗಮನಾರ್ಹ ಅಂಶವೆಂದರೆ ಜೂನಿಯರ್ ಎನ್‌ಟಿಆರ್ ಅವರು ಪೋಸ್ಟ್​​ಗೆ ಲೈಕ್ ಮಾಡಿರುವ ರೀತಿ ಪೋಸ್ಟರ್​​ನಲ್ಲಿ ಡಿಸೈನ್ ಮಾಡಲಾಗಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ರಾಮ ಮಾರುತಿ ಎಂ, ಸಂಕಲನಕಾರ ನಿರಂಜನ್ ದೇವರಮನೆ ಮತ್ತು ಕಲಾ ನಿರ್ದೇಶಕ ಶಿವ ಕಮೇಶ್ ಡಿ. ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ

ಕೆವಿಎನ್ ಇದೇ ವಾರ ಕನ್ನಡದಲ್ಲಿ ಗಿಲ್ಲಿ ನಟ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಘೋಷಿಸಿದೆ. ಅದರ ಬೆನ್ನಲ್ಲೆ ಇದೀಗ ತೆಲುಗು ಸಿನಿಮಾ ಒಂದನ್ನು ಘೋಷಣೆ ಮಾಡಿರುವುದು ವಿಶೇಷ. ಕೆವಿಎನ್​​ ಈಗಾಗಲೇ ಒಂದು ತೆಲುಗು ಸಿನಿಮಾ ಘೋಷಣೆ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡುತ್ತಿದೆ. ಇತ್ತೀಚೆಗೆ ಆ ಸಿನಿಮಾದ ಮುಹೂರ್ತವೂ ನಡೆದಿದೆ. ಅದರ ಬೆನ್ನಲ್ಲೆ ಇದೀಗ ಎರಡನೇ ತೆಲುಗು ಸಿನಿಮಾ ಘೋಷಣೆ ಮಾಡಿದೆ.

ಕೆವಿಎನ್​​ ನಿರ್ಮಾಣದ ‘ಜನ ನಾಯಗನ್’, ‘ಟಾಕ್ಸಿಕ್’ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಮಲಯಾಳಂನ ‘ಬಾಲನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಅಕ್ಷಯ್ ಕುಮಾರ್ ನಟನೆಯ ‘ಹೈವಾನ್’ ಹಿಂದಿ ಸಿನಿಮಾ ಚಿತ್ರೀಕರಣವಾಗುತ್ತಿದೆ. ಕನ್ನಡದಲ್ಲಿ ಶಿವಣ್ಣ ನಟನೆಯ ‘ಬೇಲ್’ ಸಿನಿಮಾ ನಿರ್ಮಾಣವಾಗುತ್ತಿದೆ. ಜೊತೆಗೆ ಇತ್ತೀಚೆಗಷ್ಟೆ ಗಿಲ್ಲಿ ನಟನ ಸಿನಿಮಾ ಸಹ ಘೋಷಣೆಯಾಗಿದೆ. ಚಿರಂಜೀವಿ ಮತ್ತು ನರ್ನೆ ನಿತಿನ್ ನಟನೆಯ ಸಿನಿಮಾಗಳು ಸಹ ಚಿತ್ರೀಕರಣ ಹಂತದಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವುಹಾನ್ ಲ್ಯಾಬ್​ಗೆ ಅಮೆರಿಕದ ಹಣ, ಕೊರೊನಾ ಸೃಷ್ಟಿಸಿದ ಚೀನಾ ಪ್ರಯೋಗಾಲಯಕ್ಕೆ ಫೌಸಿ ನೆರವು, ತುಳಸಿ ಗಬ್ಬಾರ್ಡ್ ಆರೋಪ – Kannada News | Fauci Funded Wuhan Lab: Tulsi Gabbard Alleges US Money Behind COVID 19 Origin

ತುಳಸಿ ಗಬ್ಬಾರ್ಡ್​ Image Credit source: X Account-Tulsi Gabbard

ವಾಷಿಂಗ್ಟನ್, ಜೂನ್ 19: ಕೊರೊನಾ ವೈರಸ್ ಉಗಮದ ಕುರಿತು ಅಮೆರಿಕದ ರಾಜಕೀಯ ವಲಯದಲ್ಲಿ ಭಾರಿ ಬಾಂಬ್ ಸಿಡಿದಿದೆ. ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್(Tulsi Gabbard)​ ರಾಜೀನಾಮೆ ನೀಡಿ ಹೊರ ಹೋಗುವ ಮುನ್ನ ಅಮೆರಿಕದ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಾಗತಿಕ ಸಾಂಕ್ರಾಮಿಕಕ್ಕೆ ಕಾರಣವಾದ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆದ ಅಪಾಯಕಾರಿ ಸಂಶೋಧನೆಗೆ ಫೌಸಿ ಅವರು ಅಮೆರಿಕದ ತೆರಿಗೆದಾರರ ಹಣವನ್ನು ಒದಗಿಸಿದ್ದರು ಎಂದು ಗಬ್ಬಾರ್ಡ್ ಬಹಿರಂಗಪಡಿಸಿದ್ದಾರೆ.

ಗುಪ್ತಚರ ನಿರ್ದೇಶಕಿಯಾಗಿ ತಮ್ಮ ಕೊನೆಯ ಕೆಲಸದ ದಿನದಂದು ಗಬ್ಬಾರ್ಡ್ ಅವರು ಅಧಿಕೃತ ಇಲಾಖಾ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳು ಮತ್ತು ಪತ್ರವ್ಯವಹಾರಗಳ ಆಧಾರದ ಮೇಲೆ ಈ ಮಾಹಿತಿ ನೀಡಿದ್ದಾರೆ.

ಡಾ. ಫೌಸಿ ಮುಖ್ಯಸ್ಥರಾಗಿದ್ದ ಅಮೆರಿಕದ ‘ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ’ (NIAID) ಮೂಲಕ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಬಾವಲಿ ಹಾಗೂ ಕೊರೊನಾ ವೈರಸ್‌ಗಳ ಕುರಿತು ನಡೆಸಲಾಗುತ್ತಿದ್ದ ಅಪಾಯಕಾರಿ ‘ಗೇನ್ ಆಫ್ ಫಂಕ್ಷನ್’ಸಂಶೋಧನೆಗೆ ಲಕ್ಷಾಂತರ ಅಮೆರಿಕನ್ ಡಾಲರ್ ಹಣವನ್ನು ನೀಡಲಾಗಿತ್ತು.

ತಾವು ಮಾಡಿದ ತಪ್ಪನ್ನು ಮುಚ್ಚಿಡಲು ಫೌಸಿ ಅವರು ಗುಪ್ತಚರ ಇಲಾಖೆಯೊಳಗಿನ ಕೆಲವು ರಾಜಕೀಯ ಪ್ರಭಾವಿ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದರು ಮತ್ತು ಅಮೆರಿಕದ ಸಂಸತ್ತಿಗೆ ಪ್ರಮಾಣವಚನ ಸ್ವೀಕರಿಸಿ ಸುಳ್ಳು ಹೇಳಿದ್ದರು ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.

ಮತ್ತಷ್ಟು ಓದಿ: Tulsi Gabbard Resigns: ಟ್ರಂಪ್ ಸರ್ಕಾರದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ ರಾಜೀನಾಮೆ

ಮಾಹಿತಿ ಸೋರಿಕೆ ಮಾಡಿದವರ ವಜಾ: ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ವುಹಾನ್ ಲ್ಯಾಬ್ ಸೋರಿಕೆಯ ಸತ್ಯವನ್ನು ಗುಪ್ತಚರ ಇಲಾಖೆಗೆ ತಿಳಿಸಲು ಮುಂದೆ ಬಂದ ಮಾಹಿತಿ ದಾರರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿತ್ತು.

‘ಗೇನ್ ಆಫ್ ಫಂಕ್ಷನ್’ ಸಂಶೋಧನೆ ಎಂದರೇನು?
ವೈರಸ್ ಶಕ್ತಿ ಹೆಚ್ಚಿಸುವ ಪ್ರಯೋಗ: ಇದು ವಿಜ್ಞಾನಿಗಳು ಒಂದು ಜೀವಿಯ ಅಥವಾ ವೈರಸ್‌ನ ಜೈವಿಕ ಕಾರ್ಯಗಳನ್ನು, ಅದರ ರೋಗ ಹರಡುವ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸಲು ತಳೀಯವಾಗಿ (Genetically) ಮಾರ್ಪಡಿಸುವ ಸಂಶೋಧನೆಯಾಗಿದೆ. ವುಹಾನ್ ಪ್ರಯೋಗಾಲಯದಲ್ಲಿ ನಡೆದ ಇಂತಹದೇ ಅಪಾಯಕಾರಿ ಪ್ರಯೋಗದ ಅಚಾತುರ್ಯದ ಸೋರಿಕೆಯಿಂದಲೇ ಕೋವಿಡ್ ಜಗತ್ತನ್ನು ಆವರಿಸಿತು ಎಂದು ನಂಬಲಾಗಿದೆ.

ವಿಡಿಯೋ

ಕೋವಿಡ್ ವೈರಸ್ ಚೀನಾದ ವೆಟ್ ಮಾರುಕಟ್ಟೆಯಿಂದ ಹರಡಿದೆ ಎಂದು ಈ ಮುಂಚೆ ವಿಜ್ಞಾನಿಗಳು ಬಿಂಬಿಸಿದ್ದರು. ಆದರೆ ಈಗ ಸತ್ಯ ಹೊರಬರುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿರುವ ತುಳಸಿ ಗಬ್ಬಾರ್ಡ್, ಇದೊಂದು ಉದ್ದೇಶಪೂರ್ವಕ ಸಂಚು ಎಂದು ಬಿಂಬಿಸುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಬೆಳವಣಿಗೆಯು ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್​ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ – Kannada News | Accenture effect, Indian stock market dragged down as investors lose Rs 2 lakh crore on June 19th

ನವದೆಹಲಿ, ಜೂನ್ 19: ಕಳೆದ ಐದು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಷೇರು ಮಾರುಕಟ್ಟೆಯ (Stock Market) ಓಟಕ್ಕೆ ಶುಕ್ರವಾರ ಬ್ರೇಕ್ ಬಿದ್ದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಮುಂಜಾನೆಯ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 750 ರಿಂದ 786 ಪಾಯಿಂಟ್‌ಗಳಷ್ಟು ಭಾರಿ ಕುಸಿತ ಕಂಡು 76,624 ರ ಮಟ್ಟಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ ಕೂಡ 200 ಕ್ಕೂ ಹೆಚ್ಚು ಪಾಯಿಂಟ್‌ಗಳನ್ನು ಕಳೆದುಕೊಂಡು 24,000 ರ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಐಟಿ ಸಂಸ್ಥೆಯಾದ ಅಕ್ಸೆಂಚರ್ ಕೊಟ್ಟ ಅದರ ಗೈಡೆನ್ಸ್ ರಿಪೋರ್ಟ್ (ಆದಾಯ ಮುನ್ನೋಟ) ಭಾರತದ ಷೇರು ಬಜಾರಿನಲ್ಲಿ ಅಲ್ಲೋಲಕಲ್ಲೋಲವನ್ನೇ ತಂದಿಟ್ಟಿದೆ. ಟೆಲಿಕಾಂ, ಇಂಡಸ್ಟ್ರಿಯಲ್ಸ್, ಬ್ಯಾಂಕಿಂಗ್ ಇತ್ಯಾದಿ ಸೆಕ್ಟರ್ ಕಂಪನಿಗಳು ಪಾಲಿಸಿಟಿವ್ ಆದರೂ ಐಟಿ ಕಂಪನಿಗಳ ಮಹಾಕುಸಿತವು ಇಡೀ ಮಾರುಕಟ್ಟೆಯನ್ನು ಕೆಳಗೆ ಎಳೆದಿದೆ. ಶುಕ್ರವಾರ ಒಂದೇ ದಿನ ಮಾರುಕಟ್ಟೆಯಲ್ಲಿನ ಹೂಡಿಕೆದಾರರಿಗೆ ಬರೋಬ್ಬರಿ ಎರಡು ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ.

ಅಕ್ಸೆಂಚರ್ ಎಫೆಕ್ಟ್; ಮನಬಂದಂತೆ ಬಿಕರಿಯಾಗುತ್ತಿರುವ ಐಟಿ ಷೇರುಗಳು

ಜಾಗತಿಕ ಐಟಿ ದೈತ್ಯ ಕಂಪನಿಯಾದ ಅಕ್ಸೆಂಚರ್ (Accenture) ತನ್ನ ಆದಾಯದ ಬೆಳವಣಿಗೆಯ ಮುನ್ಸೂಚನೆಯನ್ನು (Revenue Growth Guidance) ಕಡಿತಗೊಳಿಸಿದೆ. ಇದು ಜಾಗತಿಕವಾಗಿ ತಂತ್ರಜ್ಞಾನದ ಮೇಲಿನ ವೆಚ್ಚ ಮತ್ತು ಬೇಡಿಕೆ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ. ಇದರಿಂದಾಗಿ ಭಾರತೀಯ ಐಟಿ ಕಂಪನಿಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರಿದ್ದು, ನಿಫ್ಟಿ ಐಟಿ ಸೂಚ್ಯಂಕವು ಶೇಕಡಾ 5-6 ರಷ್ಟು ಕುಸಿತ ಕಂಡಿದೆ.

ಇದನ್ನೂ ಓದಿ: ಇನ್ಸ್​ಟಾ ಸ್ಕ್ರೋಲ್ ಮಾಡುವಾಗ ಬೇಡದ್ದು ಬರುತ್ತಿವೆಯಾ? ನೀವಿಚ್ಛಿಸುವವೇ ಫೀಡ್​ನಲ್ಲಿ ಬರುವಂತೆ ಮಾಡುತ್ತದೆ ಈ ಹೊಸ ಮೆಟಾ ಫೀಚರ್

ಐಟಿ ಷೇರುಗಳು ಶೇ. 8ರವರೆಗೂ ಕುಸಿತ ಕಂಡಿವೆ. ಇನ್ಫೋಸಿಸ್ (Infosys) ಶೇ. 8 ರಷ್ಟು, ಟೆಕ್ ಮಹೀಂದ್ರಾ ಶೇ. 6.3 ರಷ್ಟು, ಟಿಸಿಎಸ್ (TCS) ಶೇ. 6 ರಷ್ಟು ಮತ್ತು ಎಚ್‌ಸಿಎಲ್ ಟೆಕ್ ಶೇ. 5.3 ರಷ್ಟು ಕುಸಿದವು. ಐಟಿ ಕಂಪನಿಗಳು ಇರುವ ಹೆಚ್ಚಿನ ಸೂಚ್ಯಂಕಗಳು ನೆಗಟಿವ್ ರಿಟರ್ನ್ ಕೊಟ್ಟಿವೆ. ಇವೆಲ್ಲವೂ ನಿಫ್ಟಿ50 ಸೂಚ್ಯಂಕದ ಭಾಗಗಳಾಗಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಮಾರಾಟ

ಶುಕ್ರವಾರ ಷೇರು ಮಾರುಕಟ್ಟೆ ಭಾರೀ ಕುಸಿಯಲು ಐಟಿ ಮಾತ್ರವೇ ಅಲ್ಲ, ಇನ್ನೂ ಕೆಲ ಕಾರಣಗಳಿವೆ. ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ತಮ್ಮ ಹಣವನ್ನು ಮತ್ತೆ ಹಿಂಪಡೆಯತೊಡಗುತ್ತಿದ್ದಾರೆ.

ಜಾಗತಿಕ ಮಾರುಕಟ್ಟೆಯ ನಕಾರಾತ್ಮಕ ಸಂಕೇತಗಳು

ಅಮೆರಿಕದ ಷೇರು ಮಾರುಕಟ್ಟೆಯ ಫ್ಯೂಚರ್ಸ್ (ವಿಶೇಷವಾಗಿ ನಾಸ್‌ಡಾಕ್ ಫ್ಯೂಚರ್ಸ್ ಶೇ. 0.71 ರಷ್ಟು) ಕುಸಿತದ ಹಾದಿಯಲ್ಲಿದ್ದುದು ಭಾರತೀಯ ಮಾರುಕಟ್ಟೆಯ ಮೇಲೆಯೂ ಇದು ನಕಾರಾತ್ಮಕ ಒತ್ತಡವನ್ನು ಉಂಟುಮಾಡಿತು.

ಇದನ್ನೂ ಓದಿ: ಭಾರತದ ಡಿಫೆನ್ಸ್ ಸೆಕ್ಟರ್​ನಲ್ಲಿ ದಾಖಲೆಯ ₹1.78 ಲಕ್ಷ ಕೋಟಿ ಮೌಲ್ಯದ ಉತ್ಪಾದನೆ; ರಫ್ತು ಕೂಡ ಭರ್ಜರಿ ಏರಿಕೆ

ಮಾರುಕಟ್ಟೆಯ ಭಯದ ಸೂಚ್ಯಂಕ ಎಂದೇ ಕರೆಯಲ್ಪಡುವ ‘ಇಂಡಿಯಾ ವಿಐಎಕ್ಸ್’ ಶೇ. 6 ರಷ್ಟು ಏರಿಕೆಯಾಗಿ 13.26 ಕ್ಕೆ ತಲುಪಿದೆ. ಇದು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಏರಿಳಿತಗಳು ಮತ್ತು ಅನಿಶ್ಚಿತತೆ ಇರಬಹುದು ಎಂಬುದನ್ನು ತೋರಿಸುತ್ತದೆ.

ಇಡೀ ಮಾರುಕಟ್ಟೆ ನಷ್ಟದಲ್ಲಿದ್ದರೂ ಫಾರ್ಮಾ (Pharma) ವಲಯದ ಕೆಲವು ಷೇರುಗಳು ಹಾಗೂ ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್ ಮತ್ತು ಪವರ್ ಗ್ರಿಡ್ ಕಂಪನಿಗಳು ಮಾತ್ರ ಶುಕ್ರವಾರ ಲಾಭ ಗಳಿಸುವಲ್ಲಿ ಯಶಸ್ವಿಯಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Samvardhan Fellowship: ಯುವ ಪರಿಸರ ಪ್ರೇಮಿಗಳಿಗೆ ಸುವರ್ಣಾವಕಾಶ; ‘ಸಂವರ್ಧನ್ ಫೆಲೋಶಿಪ್’ಗೆ ಅರ್ಜಿ ಆಹ್ವಾನ, 3 ಲಕ್ಷ ರೂ. ನೆರವು! – Kannada News | Samvardhan Fellowship: Empowering India’s Youth in Biodiversity Conservation and Environment

ಸಂವರ್ಧನ್ ಫೆಲೋಶಿಪ್Image Credit source: samvardhan.dasra.org

ಭಾರತದ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಮುಂದಿನ ಪೀಳಿಗೆಯ ಪರಿಸರ ನಾಯಕರನ್ನು ಬೆಳೆಸಲು ‘ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್’ (RNP) ಮತ್ತು ‘ದಸ್ರಾ’ ಸಂಸ್ಥೆಗಳು ಕೈಜೋಡಿಸಿವೆ. ದೇಶಾದ್ಯಂತ ಇರುವ ಯುವ ಪರಿಸರ ಸಂರಕ್ಷಕರು ಹಾಗೂ ಸಂಶೋಧಕರಿಗಾಗಿ ವಿಶಿಷ್ಟವಾದ ‘ಸಂವರ್ಧನ್ ಬಯೋಡೈವರ್ಸಿಟಿ ಮತ್ತು ಕನ್ಸರ್ವೇಶನ್ ಫೆಲೋಶಿಪ್’ ಅನ್ನು ಘೋಷಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಏನಿದು ಸಂವರ್ಧನ್ ಫೆಲೋಶಿಪ್?

ಇದು ಯುವ ಮತ್ತು ಉದಯೋನ್ಮುಖ ಪರಿಸರ ಸಂರಕ್ಷಕರಿಗೆ ಸಮಗ್ರ ಬೆಂಬಲ ನೀಡಲು ರೂಪಿಸಲಾದ 12 ತಿಂಗಳ (ಒಂದು ವರ್ಷ) ವಿಶೇಷ ಫೆಲೋಶಿಪ್ ಕಾರ್ಯಕ್ರಮವಾಗಿದೆ. ವಿಶೇಷವಾಗಿ ಸೌಲಭ್ಯ ವಂಚಿತ ಹಿನ್ನೆಲೆಯ, ಗ್ರಾಮೀಣ ಭಾಗದ ಮತ್ತು ಪ್ರಮುಖ ನಗರಗಳಿಂದ ದೂರವಿರುವ ಯುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಸೂಕ್ತ ಮಾರ್ಗದರ್ಶನ (Mentorship) ಹಾಗೂ ವೃತ್ತಿಪರ ನೆಟ್‌ವರ್ಕ್ ಒದಗಿಸುವುದು ಈ ಫೆಲೋಶಿಪ್‌ನ ಮುಖ್ಯ ಉದ್ದೇಶವಾಗಿದೆ.

ಫೆಲೋಶಿಪ್‌ನ ಪ್ರಮುಖ 3 ಪ್ರಯೋಜನಗಳು:

  • 3 ಲಕ್ಷ ರೂ. ಧನಸಹಾಯ: ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಾಯೋಗಿಕ ಅಥವಾ ಪರಿಶೋಧನಾತ್ಮಕ ಕೆಲಸಗಳಿಗಾಗಿ ಪ್ರತಿಯೊಬ್ಬ  ಅಭ್ಯರ್ಥಿಗೆ 3 ರೂ. ಲಕ್ಷಗಳ ‘ಸೀಡ್ ಗ್ರಾಂಟ್’ (Seed Grant) ನೀಡಲಾಗುತ್ತದೆ.
  • ತಜ್ಞರ ಮಾರ್ಗದರ್ಶನ: ಪರಿಸರ ಕ್ಷೇತ್ರದಲ್ಲಿ ದಶಕಗಳ ಅನುಭವವಿರುವ ಪ್ರಮುಖ ತಜ್ಞರಿಂದ ವರ್ಷಪೂರ್ತಿ ವೈಯಕ್ತಿಕ ಮಾರ್ಗದರ್ಶನ ಮತ್ತು ಸಲಹೆಗಳು ಸಿಗಲಿವೆ.
  • ಸಹಪಾಠಿ ಕಲಿಕೆ (Peer Learning): ಫೆಲೋಶಿಪ್ ಪಡೆದ ಇತರ ಯುವಕರೊಂದಿಗೆ ಒಟ್ಟಾಗಿ ಕಲಿಯಲು, ಕಾರ್ಯಾಗಾರಗಳಲ್ಲಿ ಭಾಗವಹಿಸಲು ಮತ್ತು ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆ ಸಿಗುತ್ತದೆ.

ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್ ನ ಅಧ್ಯಕ್ಷರಾದ ರೋಹಿಣಿ ನಿಲೇಕಣಿ ಹೇಳುವಂತೆ, “ಭಾರತದಲ್ಲಿ ಅತ್ಯಂತ ಪ್ರಮುಖವಾದ ಪರಿಸರ ಸಂರಕ್ಷಣಾ ಕೆಲಸಗಳು ಯಾವುದೇ ಪ್ರಚಾರವಿಲ್ಲದೆ, ತಳಮಟ್ಟದಲ್ಲಿ ಶಾಂತಿಯುತವಾಗಿ ನಡೆಯುತ್ತಿವೆ. ಸಮುದಾಯಗಳು ಮತ್ತು ಪರಿಸರ ವ್ಯವಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಯುವಕರಿಗೆ ಆಳವಾದ ಜ್ಞಾನ ಮತ್ತು ಬದ್ಧತೆ ಇರುತ್ತದೆ, ಆದರೆ ಪ್ರೋತ್ಸಾಹ ಇರುವುದಿಲ್ಲ. ಅಂತಹ ಯುವಕರಿಗೆ ನಂಬಿಕೆ, ಸಮಯ ಮತ್ತು ಮುಕ್ತವಾಗಿ ಕಲಿಯುವ ಸ್ವಾತಂತ್ರ್ಯವನ್ನು ನೀಡಲು ‘ಸಂವರ್ಧನ್ ಫೆಲೋಶಿಪ್’ ಅನ್ನು ಆರಂಭಿಸಲಾಗಿದೆ.”

ಅರ್ಜಿ ಸಲ್ಲಿಸಲು ಯಾರು ಅರ್ಹರು?

ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಆರಂಭಿಕ ಹಂತದ ವೃತ್ತಿಪರರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 35 ವರ್ಷದೊಳಗಿರಬೇಕು. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಪರಿಸರ ಸಂಶೋಧನೆ, ಸಮುದಾಯ ಆಧಾರಿತ ಕೆಲಸ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸಕ್ರಿಯರಾಗಿರಬೇಕು. ಯಾವುದೇ ನಿರ್ದಿಷ್ಟ ಉನ್ನತ ಶಿಕ್ಷಣದ ಹಿನ್ನೆಲೆ ಕಡ್ಡಾಯವಿಲ್ಲ. ತಳಮಟ್ಟದ ಸಮುದಾಯಗಳು ಮತ್ತು ದೇಶದ ವಿವಿಧ ಭಾಗಗಳ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಅಧಿಕೃತ ವೆಬ್‌ಸೈಟ್ ಲಿಂಕ್: samvardhan.dasra.org
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 12

ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿರುವ ಯುವಜನತೆಗೆ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಅತ್ಯುತ್ತಮ ವೇದಿಕೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪೊಲೀಸ್ ಜೀಪ್‌ನಲ್ಲೇ ಬಂದು ದರೋಡೆ! ಕೇರಳ ಉದ್ಯಮಿಗಳಿಗೆ 20 ಲಕ್ಷ ರೂ. ಪಂಗನಾಮ ಹಾಕಿದ ಸಿಐಡಿ ಇನ್ಸ್‌ಪೆಕ್ಟರ್ – Kannada News | Bengaluru: CID Inspector Mahesh Kanakagiri Forms Gang, Roobs Rs 20 Lakh from Kerala Men Using Police Jeep

ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಪೊಲೀಸ್ ಜೀಪ್Image Credit source: tv9

ಬೆಂಗಳೂರು, ಜೂನ್ 19: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ರಕ್ಷಕರೇ ಭಕ್ಷಕರಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಸಿಐಡಿ (CID) ವಿಭಾಗದ ಇನ್ಸ್‌ಪೆಕ್ಟರ್ ಒಬ್ಬರು ಸ್ವತಃ ತಾವೇ ಗ್ಯಾಂಗ್ ಕಟ್ಟಿಕೊಂಡು, ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಈ ಇಡೀ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ಸದ್ಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾರೆ.

ಮುಖ್ಯಾಂಶಗಳು

  • ಖಾಕಿ ಜೀಪ್‌ನಲ್ಲೇ ಬಂದು ಭರ್ಜರಿ ದರೋಡೆ.
  • ಸಿಐಡಿ ಇನ್ಸ್‌ಪೆಕ್ಟರ್‌ನಿಂದಲೇ ಕ್ರಿಮಿನಲ್ ಸ್ಕೆಚ್.
  • ಗ್ಯಾಂಗ್‌ನ ಓರ್ವ ಆರೋಪಿ ಸದ್ಯ ಸೆರೆ.

ಪೊಲೀಸ್ ಐಡಿ ಕಾರ್ಡ್ ತೋರಿಸಿ ಬೆದರಿಕೆ

ಟ್ರೇಡಿಂಗ್ (ವ್ಯಾಪಾರ) ಉದ್ದೇಶಗಳಿಗಾಗಿ ಹಣ ಹಿಡಿದುಕೊಂಡು ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಪ್ಲಾನ್ ಮಾಡಿದ್ದರು. ಯೋಜನೆಯಂತೆ ಹೋಟೆಲ್ ಮುಂಭಾಗ ಅಧಿಕೃತ ಸಿಐಡಿ ಪೊಲೀಸ್ ಜೀಪ್ ನಿಲ್ಲಿಸಿ ಇನ್ಸ್‌ಪೆಕ್ಟರ್ ಒಳಗೇ ಕುಳಿತಿದ್ದರು. ಅವರ ಗ್ಯಾಂಗ್‌ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರೆಂದು ಇನ್ಸ್‌ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ (ID Card) ತೋರಿಸಿ, ‘ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ’ ಎಂದು ಉದ್ಯಮಿಗಳನ್ನು ತೀವ್ರವಾಗಿ ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂಪಾಯಿ ನಗದನ್ನು ಕಸಿದುಕೊಂಡು, ಹೊರಗೆ ನಿಂತಿದ್ದ ಪೊಲೀಸ್ ಜೀಪ್‌ನಲ್ಲೇ ಇಡೀ ಗ್ಯಾಂಗ್ ಪರಾರಿಯಾಗಿದೆ.

ಠಾಣೆಗೆ ದೂರು ನೀಡುತ್ತಿದ್ದಂತೆ ಇನ್ಸ್‌ಪೆಕ್ಟರ್ ಎಸ್ಕೇಪ್

ಆರಂಭದಲ್ಲಿ ಹೆದರಿದ್ದ ಕೇರಳದ ವ್ಯಕ್ತಿಗಳಿಗೆ ನಂತರದ ಬೆಳವಣಿಗೆಗಳಿಂದ ದರೋಡೆಯ ಬಗ್ಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಾಂಭೀರ್ಯತೆ ಅರಿತು ತಕ್ಷಣವೇ ತನಿಖೆಗೆ ಇಳಿದ ಮಡಿವಾಳ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ದರೋಡೆ ಗ್ಯಾಂಗ್‌ನಲ್ಲಿದ್ದ ಕುಪೇಂದ್ರ ಎಂಬಾತನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ ಇಡೀ ದರೋಡೆ ಪ್ರಕರಣದ ಅಸಲಿ ಕಿಂಗ್‌ಪಿನ್ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಆಘಾತಕಾರಿ ಸತ್ಯ ಬಾಯ್ಬಿಟ್ಟಿದ್ದಾನೆ.

ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿ ಕುಪೇಂದ್ರ ಮತ್ತು ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಖಾಕಿ ಅಧಿಕಾರಿ ಸೇರಿದಂತೆ ನಾಲ್ವರಿಗಾಗಿ ಬಲೆ ಬೀಸಿದ್ದಾರೆ.

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಳೆ ಇಲ್ಲದೆ ಕಾವೇರಿ ನದಿ ಪಾತ್ರ ಬಣಬಣ: ಮೇಕೇದಾಟು ಕ್ಯಾತೆ ನಡುವೆಯೇ ಕರ್ನಾಟಕಕ್ಕೆ ಮತ್ತೊಂದು ತಲೆಬಿಸಿ – Kannada News | Cauvery Basin Runs Dry Amid Monsoon Deficit, Adding to Karnataka’s Woes Over Tamil Nadu’s Mekedatu Stance

ಬರಿದಾಗಿರುವ ಕಾವೇರಿ ಒಡಲುImage Credit source: Tv9 Kannada

ಬೆಂಗಳೂರು, ಜೂನ್​​ 19: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ನೀರು ಹಂಚಿಕೆ ಸೇರಿ ಮೇಕೆದಾಟು ಯೋಜನೆಗೆ ನೆರೆ ರಾಜ್ಯದಿಂದ ಕ್ಯಾತೆ ನಡೆದುಕೊಂಡೇ ಬಂದಿದ್ದು, ಈ ನಡುವೆ ಮಳೆಯ ತೀವ್ರ ಅಭಾವದ ಕಾರಣ ಕಾವೇರಿ ನದಿ ಒಡಲು ಸಂಪೂರ್ಣ ಬರಿದಾಗಿರೋದು ಕರ್ನಾಟಕಕ್ಕೆ ಟೆನ್ಷನ್​​ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಮಿಳುನಾಡಿಗೆ ನೀರು ನೀಡೋದು ಹಾಗಿರಲಿ ಮೈಸೂರು, ಬೆಂಗಳೂರಿನಲ್ಲಿಯೇ ಕುಡಿಯುವ ನೀರಿಗೂ ಪರದಾಟ ನಡೆಸಬೇಕಾದ ಸ್ಥಿತಿ ಬರಬಹುದೆಂಬ ಆತಂಕ ಶುರುವಾಗಿದೆ.

ಕಾವೇರಿ ನದಿ ಸಂಪೂರ್ಣ ಖಾಲಿ ಖಾಲಿ

ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿ ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್ ಮತ್ತು ಹಾರಂಗಿ ಸಹ ತುಂಬದೆ ಇರುವುದರಿಂದ ಮುಂಬರುವ ದಿನಗಳಲ್ಲಿ ಜಲಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮೇಕೆದಾಟು ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ

ಡ್ಯಾಂಗಳ ಸದ್ಯದ ಸ್ಥಿತಿಗತಿ

ಜಲಾಶಯ ಗರಿಷ್ಠ ಸಾಮರ್ಥ್ಯ ಈಗಿರುವ ನೀರು
ಕೆಆರ್​​ಎಸ್​​ 49 ಟಿಎಂಸಿ 11 ಟಿಎಂಸಿ
ಹಾರಂಗಿ 5.7 ಟಿಎಂಸಿ 2.3 ಟಿಎಂಸಿ
ಕಬಿನಿ 19.52 ಟಿಎಂಸಿ 5.05 ಟಿಎಂಸಿ

ಬರಿದಾಗುತ್ತಿರುವ ಡ್ಯಾಂಗಳು

49 ಟಿಎಂಸಿ ಸಾಮರ್ಥ್ಯ ಹೊಂದಿರುವ ಕೆಆರ್​​ಎಸ್​​ ಡ್ಯಾಂನಲ್ಲಿ ಈಗ ಲಭ್ಯವಿರೋದು ಕೇವಲ 11 ಟಿಎಂಸಿ ಮಾತ್ರ. ಹಾಗೆಯೇ 5.7 ಟಿಎಂಸಿ ಗರಿಷ್ಠ ಸಾಮರ್ಥ್ಯವಿರುವ ಹಾರಂಗಿ ಜಲಾಶಯದಲ್ಲಿ ಈಗ 2.3 ಟಿಎಂಸಿ ಮಾತ್ರ ಲಭ್ಯವಿದ್ದು, ಆ ಪೈಕಿ ಬಳಕೆಗೆ ಸಿಗೋದು 1.3 ಟಿಎಂಸಿ ಮಾತ್ರ. ಜಲಾಶಯದ ಒಳಹರಿವು 255 ಕ್ಯೂಸೆಕ್​​ ಇದ್ದರೆ ಹೊರ ಹರಿವು 180 ಕ್ಯೂಸೆಕ್​​ನಷ್ಟಿದೆ. ಕಳೆದ ವರ್ಷ ಇದರ ಪ್ರಮಾಣ 2853 ಮತ್ತು 3416 ಕ್ಯೂಸೆಕ್​​ಗಳಷ್ಟಿತ್ತು ಎನ್ನುವುದಿಲ್ಲಿ ಗಮನಾರ್ಹ ವಿಷಯವಾಗಿದೆ.

ಮತ್ತೊಂದೆಡೆ ಕಬಿನಿ ಜಲಾಶಯದಲ್ಲಿಯೂ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಶುಕ್ರವಾರ (ಜೂನ್ 19) ಬೆಳಗ್ಗೆ 8 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 53.38 ಅಡಿ ಇದ್ದು, ಒಟ್ಟು 5.05 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 84 ಅಡಿ ಹಾಗೂ ಗರಿಷ್ಠ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದೆ. ಜಲಾಶಯಕ್ಕೆ ಪ್ರಸ್ತುತ 796 ಕ್ಯೂಸೆಕ್ ನೀರು ಮಾತ್ರ ಒಳಹರಿದು ಬರುತ್ತಿದ್ದು, ನದಿಗೆ ಹಾಗೂ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಯಾವುದೇ ನೀರು ಬಿಡುಗಡೆ ಮಾಡಲಾಗುತ್ತಿಲ್ಲ. ಹೀಗಾಗಿ ಒಟ್ಟು ಹೊರಹರಿವು ಶೂನ್ಯ ಕ್ಯೂಸೆಕ್ ಆಗಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಮತ್ತು ಸಂಗ್ರಹ ಎರಡೂ ಗಣನೀಯವಾಗಿ ಕಡಿಮೆಯಾಗಿದೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ನಿರ್ಣಯ

ಕರ್ನಾಟಕ ಸರ್ಕಾರವು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಡಿಸಿದ ಮೇಕೆದಾಟು ವಿರೋಧಿ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಯೋಜನೆಗೆ ಯಾವುದೇ ರೀತಿಯ ತಾಂತ್ರಿಕ ಅಥವಾ ಪರಿಸರ ಇಲಾಖೆಯ ಅನುಮತಿಯನ್ನು ನೀಡಬಾರದು ಎಂದು ತಮಿಳುನಾಡು ಸರ್ಕಾರವು ಈ ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:35 pm, Fri, 19 June 26

Source link

ನಾಯಿ ಜೀವ ಉಳಿಸಲು ಹೋಗಿ ತಾಯಿಯನ್ನು ಕಳೆದುಕೊಂಡ ಮಗ: ಆಸ್ಪತ್ರೆ ಆವರಣದಲ್ಲಿ ಅಮ್ಮನಿಗಾಗಿ ಗೋಳಾಟ – Kannada News | Heartbreaking: Mother dies in Belagavi bike crash saving dog; son devastated

ಬೆಳಗಾವಿ,ಜೂ.19: ಬೆಳಗಾವಿ ನಗರದ ಹೊರವಲಯದಲ್ಲಿ ಕಲ್ಲುಹೃದಯವನ್ನೂ ಕರಗಿಸುವಂತಹ ಅತ್ಯಂತ ಹೃದಯ ವಿದ್ರಾವಕ ರಸ್ತೆ ಅಪಘಾತವೊಂದು ನಡೆದಿದೆ. ರಸ್ತೆಗೆ ಅಡ್ಡ ಬಂದ ನಾಯಿಯ ಪ್ರಾಣ ಉಳಿಸಲು ಹೋಗಿ ಬೈಕ್ ಚಲಾಯಿಸುತ್ತಿದ್ದ ಮಗನೊಬ್ಬ ತನ್ನ ಹೆತ್ತ ತಾಯಿಯನ್ನೇ ಕಳೆದುಕೊಂಡಿರುವ ದಾರುಣ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ (Sambra) ಬಳಿ ನಡೆದಿದೆ.

ಅಪಘಾತದಲ್ಲಿ ಪಂಥಬಾಳೆಕುಂದ್ರಿ ಗ್ರಾಮದ ನಿವಾಸಿ ಶಾಂತವ್ವ ಕಲ್ಮಠ ಎಂಬುವವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಮಗ ಈರಣ್ಣಾ ಕಲ್ಮಠ ಬೈಕ್ ಚಲಾಯಿಸುತ್ತಿದ್ದರು. ತಾಯಿ ಮತ್ತು ಮಗ ಇಬ್ಬರೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಾಂಬ್ರಾ ಬಳಿ ರಸ್ತೆಗೆ ಇದ್ದಕ್ಕಿದ್ದಂತೆ ನಾಯಿಯೊಂದು ಅಡ್ಡ ಬಂದಿದೆ. ಮೂಕ ಪ್ರಾಣಿಯ ಜೀವ ಉಳಿಸಬೇಕೆಂಬ ಆತುರದಲ್ಲಿ ಈರಣ್ಣಾ ಬೈಕ್‌ನ ಹ್ಯಾಂಡಲ್ ನಿಯಂತ್ರಿಸಲು ಯತ್ನಿಸಿದ್ದಾರೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ತಾಯಿ ಶಾಂತವ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಗಾಬರಿಗೊಂಡ ಮಗ ಈರಣ್ಣಾ, ತಾಯಿಯನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ಕರೆತಂದಿದ್ದಾನೆ. ಆದರೆ ಪರೀಕ್ಷಿಸಿದ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಮಗನ ಗೋಳಾಟ ಮುಗಿಲು ಮುಟ್ಟಿದೆ. ತಾಯಿ ಕೊನೆಕ್ಷಣದವರೆಗೂ ಕೈಯಲ್ಲಿ ಹಿಡಿದುಕೊಂಡಿದ್ದ ಬ್ಯಾಗ್ ಅನ್ನು ಎದೆಗೆ ಅಪ್ಪಿಕೊಂಡು ಆಸ್ಪತ್ರೆಯ ಆವರಣದಲ್ಲೇ ಮಗ ಕಣ್ಣೀರಿಟ್ಟ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

ಇದನ್ನೂ ಓದಿ: ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ವಿದ್ಯಾರ್ಥಿ ಸಾವು

ಹೆತ್ತ ತಾಯಿಯನ್ನು ತನ್ನ ಕಣ್ಣೆದುರೇ ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿ ಮುಳುಗಿರುವ ಮಗನ ಸ್ಥಿತಿ ಕಂಡು ಸ್ಥಳೀಯರು ಮತ್ತು ಆಸ್ಪತ್ರೆಯ ಸಿಬ್ಬಂದಿಮರುಗಿದ್ದಾರೆ. ಈ ಕರುಣಾಜನಕ ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭುವನೇಶ್ವರ-ಯಶವಂತಪುರ ವೀಕ್ಲಿ ಸ್ಪೆಷಲ್ ರೈಲುಗಳ ಸಂಚಾರ ಅವಧಿ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ – Kannada News | Bhubaneswar to Yesvantpur Weekly Special Trains Extended Till August: Check Dates and Route Details Here

ಬೆಂಗಳೂರು, ಜೂನ್ 19: ಭುವನೇಶ್ವರ ಮತ್ತು ಬೆಂಗಳೂರಿನ ಯಶವಂತಪುರ ನಿಲ್ದಾಣಗಳ ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ನೈಋತ್ಯ ರೈಲ್ವೆ (SWR) ಮಹತ್ವದ ಶುಭ ಸುದ್ದಿ ನೀಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಈ ಮಾರ್ಗದಲ್ಲಿ ಚಲಿಸುವ ಸಾಪ್ತಾಹಿಕ ಬೇಸಿಗೆ ವಿಶೇಷ ರೈಲುಗಳ (ರೈಲು ಸಂಖ್ಯೆ: 02811/02812) ಸಂಚಾರ (Weekly Summer Special Train) ಅವಧಿಯನ್ನು ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆಯ ಅಧಿಕೃತ ಎಕ್ಸ್ ಖಾತೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಾಂಶಗಳು

  • ಸಾಪ್ತಾಹಿಕ ವಿಶೇಷ ರೈಲುಗಳ ಅವಧಿ ವಿಸ್ತರಣೆ.
  • ಆಗಸ್ಟ್ ಅಂತ್ಯದವರೆಗೆ ರೈಲುಗಳ ಸಂಚಾರ ಲಭ್ಯ.
  • ವೇಳಾಪಟ್ಟಿ ಹಾಗೂ ಬೋಗಿಗಳಲ್ಲಿ ಬದಲಾವಣೆಯಿಲ್ಲ.

ವಿಸ್ತೃತ ವೇಳಾಪಟ್ಟಿಯ ವಿವರ

  • ರೈಲು ಸಂಖ್ಯೆ 02811 (ಭುವನೇಶ್ವರ–ಯಶವಂತಪುರ): ಪ್ರತಿ ಶನಿವಾರ ಭುವನೇಶ್ವರದಿಂದ ಹೊರಡುವ ಈ ವಿಶೇಷ ರೈಲಿನ ಸೇವೆಯನ್ನು ಈ ಹಿಂದೆ ಜೂನ್ 27 ರವರೆಗೆ ನಿಗದಿಪಡಿಸಲಾಗಿತ್ತು. ಇದನ್ನು ಈಗ ಜುಲೈ 4 ರಿಂದ ಆಗಸ್ಟ್ 29 ರವರೆಗೆ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 02812 (ಯಶವಂತಪುರ–ಭುವನೇಶ್ವರ): ಪ್ರತಿ ಸೋಮವಾರ ಯಶವಂತಪುರದಿಂದ ಹೊರಡುವ ಈ ರೈಲು ಈ ಮೊದಲು ಜೂನ್ 29 ರವರೆಗೆ ಸಂಚರಿಸಲಿದೆ ಎನ್ನಲಾಗಿತ್ತು. ಇದನ್ನು ಈಗ ಜುಲೈ 6 ರಿಂದ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.
  • ಈ ರೈಲುಗಳ ನಿಯಮಿತ ವೇಳಾಪಟ್ಟಿ, ನಿಲುಗಡೆ ಹಾಗೂ ಬೋಗಿಗಳ (Coaches) ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನೈಋತ್ಯ ರೈಲ್ವೆ ಎಕ್ಸ್ ಸಂದೇಶ

ಕೆಎಸ್ಆರ್ ಬೆಂಗಳೂರು ಯಾರ್ಡ್ ಕಾಮಗಾರಿ: ಭಾಗಶಃ ಸಂಚಾರ ರದ್ದು

ಪ್ರಯಾಣಿಕರು ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ಕೆಎಸ್ಆರ್ ಬೆಂಗಳೂರು ನಿಲ್ದಾಣದ ಯಾರ್ಡ್‌ನಲ್ಲಿ ನಾನ್-ಇಂಟರ್‌ಲಾಕಿಂಗ್ ತಾಂತ್ರಿಕ ಕಾಮಗಾರಿ ನಡೆಯುತ್ತಿರುವುದರಿಂದ ಈ ರೈಲುಗಳ ಸಂಚಾರದಲ್ಲಿ ಭಾಗಶಃ ಬದಲಾವಣೆ ಇರಲಿದೆ. ಆಗಸ್ಟ್ 29 ರಂದು ಭುವನೇಶ್ವರದಿಂದ ಹೊರಡುವ ರೈಲು (02811) ಯಶವಂತಪುರ ಬದಲಿಗೆ ಯಲಹಂಕ ನಿಲ್ದಾಣದಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ. ಹಾಗೆಯೇ, ಆಗಸ್ಟ್ 31 ರಂದು ಹೊರಡಬೇಕಿರುವ ರೈಲು (02812) ಯಶವಂತಪುರ ಬದಲಿಗೆ ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ. ಹೀಗಾಗಿ ಈ ಎರಡು ದಿನಗಳಂದು ಯಶವಂತಪುರ ಮತ್ತು ಯಲಹಂಕ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link