All posts by nagaraj11081993

IPL 2026: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ? ಆರ್​ಸಿಬಿಗೆ ಯಾವ ಸ್ಥಾನ?

IPL 2026: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ? ಆರ್​ಸಿಬಿಗೆ ಯಾವ ಸ್ಥಾನ?

ಮಾರ್ಚ್ 28 ರಿಂದ ಆರಂಭವಾದ ಐಪಿಎಲ್ 2026 ರಲ್ಲಿ (IPL 2026) ಇದುವರೆಗೆ ನಾಲ್ಕು ಪಂದ್ಯಗಳು ನಡೆದಿವೆ. ಅಂದರೆ 10 ತಂಡಗಳ ಪೈಕಿ 8 ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಇಂದು ನಡೆಯುವ ಲಕ್ನೋ ಸೂಪರ್​ಜೈಂಟ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯದ ಬಳಿಕ ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನು ಆಡಿದಂತಾಗುತ್ತದೆ. ಈಗ ಆಡಿರುವ 8 ತಂಡಗಳ ಪೈಕಿ, 4 ತಂಡಗಳು ಗೆಲುವಿನ ಖಾತೆ ತೆರೆದಿದ್ದರೆ, ಇನ್ನ 4 ತಂಡಗಳು ಸೋಲಿಗೆ ಶರಣಾಗಿವೆ. ಹೀಗಾಗಿ ಗೆದ್ದ 4 ತಂಡಗಳಿಗೆ 2 ಅಂಕಗಳು ಸಿಕ್ಕಿದ್ದರೆ, ಸೋತ ತಂಡಗಳು ಅಂಕಗಳ ಖಾತೆ ತೆರೆದಿಲ್ಲ. ಆದಾಗ್ಯೂ ಗೆದ್ದಿರುವ 4 ತಂಡಗಳ ಪೈಕಿ ಯಾವ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ? ಸೋತ ತಂಡಗಳ ಪೈಕಿ ಯಾವ ತಂಡ ಕೊನೆಯ ಸ್ಥಾನದಲ್ಲಿದೆ ಎಂಬುದನ್ನು ನೋಡುವುದಾದರೆ..

ಈಗ ಮುಗಿದಿರುವ 4 ಪಂದ್ಯಗಳ ಪೈಕಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಗೆಲುವಿನ ಖಾತೆ ತೆರೆದಿವೆ. ಹೀಗಾಗಿ ಈ 4 ತಂಡಗಳಿಗೆ ತಲಾ 2 ಅಂಕಗಳು ಸಿಕ್ಕಿವೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್​, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಮ್ಮ ಮೊದಲ ಪಂದ್ಯಗಳಲ್ಲಿ ಸೋತಿವೆ. ಹೀಗಾಗಿ ಈ 4 ತಂಡಗಳಿಗೆ ಯಾವುದೇ ಅಂಕ ಸಿಕ್ಕಿಲ್ಲ. ಇನ್ನು ಗೆದ್ದ ತಂಡಗಳ ಪೈಕಿ ಯಾವ ತಂಡ ಯಾವ ಸ್ಥಾನದಲ್ಲಿದೆ? ಯಾವ ತಂಡದ ನೆಟ್ ರನ್ ರೇಟ್ ಚೆನ್ನಾಗಿದೆ ಎಂಬುದನ್ನು ನೋಡುವುದಾದರೆ..

ಅಗ್ರಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್

ಗೆಲುವು ಸಾಧಿಸಿರುವ 4 ತಂಡಗಳ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಇದಕ್ಕೆ ಕಾರಣ ತಂಡದ ನೆಟ್ ರನ್ ರೇಟ್ ಇತರ ತಂಡಗಳಿಗೆ ಹೊಲಿಸಿದರೆ ಅಧಿಕವಾಗಿರುವುದು. ಐಪಿಎಲ್‌ನಂತಹ 10 ತಂಡಗಳ ಲೀಗ್‌ನಲ್ಲಿ, ಕೇವಲ ಗೆಲುವು ಮುಖ್ಯವಲ್ಲ. ಬದಲಿಗೆ ನೀವು ಯಾವ ಅಂತರದಲ್ಲಿ ಗೆಲ್ಲುತ್ತೀರಿ ಎಂಬುದು ಸಹ ನಿರ್ಣಾಯಕವಾಗಿದೆ. ಗೆಲುವಿನ ಅಂತರವು ನೆಟ್ ರನ್ ರೇಟ್ ಅನ್ನು ನಿರ್ಧರಿಸುತ್ತದೆ, ಇದು ಪಾಯಿಂಟ್ ಪಟ್ಟಿಯಲ್ಲಿ ತಂಡದ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ.

RCB vs SRH: ತವರಿನಲ್ಲಿ ಶುಭಾರಂಭ; ಆರ್​ಸಿಬಿ ಅಬ್ಬರಕ್ಕೆ ಸುಸ್ತಾದ ಸನ್​ರೈಸರ್ಸ್

ಪಾಯಿಂಟ್ಸ್ ಟೇಬಲ್‌ ಹೀಗಿದೆ

ಐಪಿಎಲ್ 2026 ರಲ್ಲಿ ತಲಾ ಒಂದು ಪಂದ್ಯವನ್ನು ಆಡಿ ಗೆದ್ದ ನಂತರ, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಲಾ ಎರಡು ಅಂಕಗಳನ್ನು ಹೊಂದಿವೆ. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ಇತರ ತಂಡಗಳಿಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ತಂಡದ ನೆಟ್ ರನ್ ರೇಟ್ 4.171 ಆಗಿದ್ದರೆ, ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ನೆಟ್ ರನ್ ರೇಟ್ 2.907 ಆಗಿದೆ. ಇನ್ನ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ 0.687 ಮತ್ತು ಪಂಜಾಬ್ ಕಿಂಗ್ಸ್ ನೆಟ್ ರನ್ ರೇಟ್ 0.509 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Army Recruitment 2026: ಭಾರತೀಯ ಸೇನೆ ಸೇರಲು ಸುವರ್ಣಾವಕಾಶ: 3,806 ಟೆರಿಟೋರಿಯಲ್ ಆರ್ಮಿ ಹುದ್ದೆಗೆ ನೇಮಕಾತಿ

ದೇಶಸೇವೆಯ ಕನಸು ಕಾಣುತ್ತಿರುವ ಯುವಕರಿಗೆ ಭಾರತೀಯ ಟೆರಿಟೋರಿಯಲ್ ಆರ್ಮಿ (ಪ್ರಾದೇಶಿಕ ಸೇನೆ) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಒಟ್ಟು 3,806 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದು ಸೇನೆಗೆ ಸೇರಲು ಬಯಸುವವರಿಗೆ ಒಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿಯು ಪ್ರಮುಖವಾಗಿ ನೇರ ರ್ಯಾಲಿಗಳ ಮೂಲಕ ನಡೆಯಲಿದ್ದು, ಮಾರ್ಚ್ 2026 ರಿಂದಲೇ ವಿವಿಧ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಚಾಲನೆ ಪಡೆದಿದೆ.

ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆಫ್‌ಲೈನ್ ಅರ್ಜಿಗಳ ಮೂಲಕ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನೇಮಕಾತಿ ರ್ಯಾಲಿಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ಅಮೃತಸರ, ಜೈಪುರ, ದೆಹಲಿ ಮತ್ತು ಮೀರತ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ರ್ಯಾಲಿಗಳು ನಡೆಯಲಿದ್ದು, ಆಗಸ್ಟ್ 2026 ರವರೆಗೆ ಮುಂದುವರಿಯಲಿವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೆಪ್ಟೆಂಬರ್ ವರೆಗೂ ರ್ಯಾಲಿಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುವುದು ಒಳಿತು.

ಅರ್ಹತೆಯ ವಿಷಯಕ್ಕೆ ಬಂದರೆ, ಇಲ್ಲಿ ವಿವಿಧ ರೀತಿಯ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯಲ್ಲಿ ಕನಿಷ್ಠ ಶೇ.45 ಅಂಕಗಳನ್ನು ಹೊಂದಿರಬೇಕು. ಸೋಲ್ಜರ್ ಕ್ಲರ್ಕ್ ಹುದ್ದೆಗೆ 12ನೇ ತರಗತಿಯಲ್ಲಿ ಶೇ.60 ಅಂಕಗಳಿರಬೇಕು ಹಾಗೂ ಇಂಗ್ಲಿಷ್ ಮತ್ತು ಗಣಿತ ವಿಷಯಗಳಲ್ಲಿ ಉತ್ತಮ ಹಿಡಿತವಿರಬೇಕು. ಇನ್ನುಳಿದಂತೆ ಟ್ರೇಡ್ಸ್‌ಮನ್ ಹುದ್ದೆಗಳಿಗೆ 8ನೇ ಅಥವಾ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯು 18 ರಿಂದ 42 ವರ್ಷಗಳ ಒಳಗಿರಬೇಕು, ಇದು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಆಯ್ಕೆ ಪ್ರಕ್ರಿಯೆಯು ಅತ್ಯಂತ ಕಠಿಣವಾಗಿದ್ದು, ದೈಹಿಕ ಫಿಟ್ನೆಸ್ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಕನಿಷ್ಠ 160 ಸೆಂ.ಮೀ ಎತ್ತರ ಮತ್ತು 50 ಕೆಜಿ ತೂಕವನ್ನು ಹೊಂದಿರಬೇಕು. ದೈಹಿಕ ಪರೀಕ್ಷೆಯಲ್ಲಿ ಒಂದು ಮೈಲಿ ಓಟ ಮತ್ತು ಪುಲ್-ಅಪ್‌ಗಳನ್ನು ಒಳಗೊಂಡಿದ್ದು, ಇದಕ್ಕೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಓಟವನ್ನು 5 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ದೈಹಿಕ ಪರೀಕ್ಷೆಯ ನಂತರ ಲಿಖಿತ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿದ್ದು, ಅಂತಿಮವಾಗಿ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನೀಡಲಾಗುತ್ತದೆ. ಮಾಸಿಕ 15,500 ರಿಂದ 69,400ರೂ. ವರೆಗೆ ಸಂಬಳದ ಜೊತೆಗೆ ಡಿಎ, ಎಚ್‌ಆರ್‌ಎ ಮತ್ತು ಪಿಎಫ್ ಸೇರಿದಂತೆ ಸರ್ಕಾರದ ಎಲ್ಲಾ ಭತ್ಯೆಗಳು ಲಭ್ಯವಿರುತ್ತವೆ. ಅರ್ಜಿ ಸಲ್ಲಿಸಲು ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದವರಿಗೆ 100ರೂ. ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ದೇಶದ ರಕ್ಷಣೆಗಾಗಿ ಹೋರಾಡಲು ಸಿದ್ಧರಿರುವವರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಲ್ಮಾನ್ ಖಾನ್ ಸಿನಿಮಾ ಸೇರಿದ ಮತ್ತೊಬ್ಬ ದಕ್ಷಿಣದ ಜನಪ್ರಿಯ ನಟ

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಹೆಚ್ಚಾದ ಬಳಿಕ, ದಕ್ಷಿಣದವರ ಮೇಲೆ ಬಾಲಿವುಡ್​ಗೆ ಪ್ರೀತಿ, ಗೌರವ ಉಕ್ಕಿ ಹರಿಯುತ್ತಿದೆ. ಎದುರೇ ಇಲ್ಲದಂತಿದ್ದ ಖಾನ್​ ತ್ರಯರೂ ಸಹ ಸತತ ಸೋಲಿನ ಬಳಿಕ ಗೆಲುವಿಗಾಗಿ ದಕ್ಷಿಣದ ನಿರ್ದೇಶಕರು, ನಟರ ಜೊತೆಗೆ ಕೈಜೋಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ಕಳೆದ ಕೆಲ ವರ್ಷಗಳಿಂದಲೂ ಸತತ ಸೋಲಿನಲ್ಲೇ ಇದ್ದಾರೆ. ಅವರ ಇತ್ತೀಚೆಗಿನ ಕೆಲ ಸಿನಿಮಾಗಳಂತೂ ಧಾರುಣ ಸೋಲು ಕಂಡಿವೆ. ಇದೀಗ ಮತ್ತೊಮ್ಮೆ ಅವರು ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದು, ಈ ಸಿನಿಮಾನಲ್ಲಿ ನಿರ್ದೇಶಕ ಮಾತ್ರವಲ್ಲದೆ, ನಿರ್ಮಾಪಕ, ನಾಯಕಿ, ಮುಖ್ಯ ಪೋಷಕ ನಟ, ವಿಲನ್ ಸಹ ದಕ್ಷಿಣದವರೇ ಆಗಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂಬರುವ ಸಿನಿಮಾವನ್ನು ಟಾಲಿವುಡ್ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾನಲ್ಲಿ ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ನಯನತಾರಾ ನಟಿಸಲಿದ್ದಾರೆ. ನಯನತಾರಾ ಪಾಲಿಗೆ ಇದು ಅವರ ಎರಡನೇ ಹಿಂದಿ ಸಿನಿಮಾ ಆಗಿರಲಿದೆ. ಈ ಹಿಂದೆ ಅವರು ಶಾರುಖ್ ಖಾನ್ ಜೊತೆಗೆ ‘ಜವಾನ್’ ಸಿನಿಮಾನಲ್ಲಿ ನಟಿಸಿದ್ದರು. ಈಗ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ.

ಇದನ್ನೂ ಓದಿ:ಚೈತ್ರಾ ಆಚಾರ್​​ಗೆ ಸಿಕ್ತು ದೊಡ್ಡ ಅವಕಾಶ, ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ

ಇದೀಗ ಈ ಸಿನಿಮಾಕ್ಕೆ ದಕ್ಷಿಣದ ಮತ್ತೊಬ್ಬ ಜನಪ್ರಿಯ ನಟ ಅರವಿಂದ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ‘ರೋಜಾ’, ‘ಬಾಂಬೆ’ ಸೇರಿದಂತೆ ತಮಿಳಿನ ಹಲವು ಕಲ್ಟ್ ಸಿನಿಮಾಗಳಲ್ಲಿ ನಟಿಸಿರುವ ಕ್ಲಾಸ್ ನಟ ಅರವಿಂದ ಸ್ವಾಮಿ, ಇತ್ತೀಚೆಗೆ ಸಹ ‘ಮೇಯಳಗನ್’, ‘ಚೆಕ್ಕ ಚಿವಂತ ವಾನಂ’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅರವಿಂದ ಸ್ವಾಮಿ ಅವರು ಸಲ್ಮಾನ್ ಖಾನ್ ಸಿನಿಮಾನಲ್ಲಿ ನಟಿಸಲಿದ್ದಾರೆ. ಇವರದ್ದು ವಿಲನ್ ಪಾತ್ರ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆ ಬಗ್ಗೆ ಖಾತ್ರಿ ಇಲ್ಲ. ಇನ್ನು ಇದೇ ಸಿನಿಮಾಕ್ಕೆ ಅನಿಲ್ ಕಪೂರ್ ಸಹ ಎಂಟ್ರಿ ಕೊಟ್ಟಿದ್ದು, ಅನಿಲ್ ಅವರದ್ದು ಪ್ರಧಾನ ಪೋಷಕ ಪಾತ್ರವಂತೆ.

ತೆಲುಗಿನ ‘ಮಹರ್ಷಿ’ ತಮಿಳಿನ ‘ವಾರಿಸು’ ಅಂತಹ ಹಿಟ್ ಚಿತ್ರಗಳನ್ನು ನೀಡಿರುವ ವಂಶಿ ಪೈಡಿಪಲ್ಲಿ, ಸಾಮಾಜಿಕ ಸಂದೇಶವುಳ್ಳ ಕಮರ್ಶಿಯಲ್ ಸಿನಿಮಾ ನಿರ್ದೇಶನಕ್ಕೆ ಜನಪ್ರಿಯರು. ಇದೀಗ ಸಲ್ಮಾನ್ ಖಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ದೊಡ್ಡ ಮಟ್ಟದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ದಕ್ಷಿಣದ ಬಲು ಜನಪ್ರಿಯ ನಿರ್ಮಾಪಕ ದಿಲ್ ರಾಜು. ಹಲವಾರು ಬಹುಕೋಟಿ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿಲ್ ರಾಜು ಅವರು ಇದೀಗ ಸಲ್ಮಾನ್ ಖಾನ್ ಸಿನಿಮಾದ ಮೇಲೆ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೆಟ್ ಇಂಧನ: ವಿದೇಶೀ ಏರ್ಲೈನ್ಸ್​ಗೆ ಡಬಲ್ ಬೆಲೆ ಏರಿಕೆ; ದೇಶೀಯ ಫ್ಲೈಟ್​ಗಳಿಗೆ ಶೇ. 8.5 ಏರಿಕೆ

ನವದೆಹಲಿ, ಏಪ್ರಿಲ್ 1: ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಕ್ಕೆ ಬಳಸುವ ಎಟಿಎಫ್ ಅಥವಾ ಜೆಟ್ ಇಂಧನದ ಬೆಲೆ ಏಪ್ರಿಲ್ 1ರಂದು ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಇಂದು ಎಟಿಎಫ್ ಬೆಲೆ (ATF price) ಎರಡು ಪಟ್ಟು ಏರಿಕೆ ಮಾಡಲಾಗಿತ್ತು. ದೆಹಲಿಯಲ್ಲಿ ಕಿಲೋಲೀಟರ್​ಗೆ ಒಂದು ಲಕ್ಷ ರೂಗಿಂತ ಕಡಿಮೆ ಇದ್ದ ಎಟಿಎಫ್ ಇಂಧನದ ಬೆಲೆಯನ್ನು 2.07 ಲಕ್ಷ ರೂಗೆ ಏರಿಸಲಾಯಿತು. ಬಳಿಕ ಸರ್ಕಾರ ಆ ಬೆಲೆ ಕೂಡಲೇ ಪರಿಷ್ಕರಿಸಿ 1.04 ಲಕ್ಷ ರೂಗೆ ಇಳಿಸಿತು. ಇದರೊಂದಿಗೆ ಜೆಟ್ ಫುಯಲ್​ನ ಒಟ್ಟು ಏರಿಕೆ ಶೇ. 8ಕ್ಕೆ ಸೀಮಿತಗೊಂಡಿದೆ.

ಹಂತ ಹಂತವಾಗಿ ಬೆಲೆ ಏರಿಕೆ ಮಾಡಲು ಸರ್ಕಾರ ನಿರ್ಧಾರ

ಏಪ್ರಿಲ್ 1ರಿಂದ ಎಟಿಎಫ್ ಅಥವಾ ಏವಿಯೇಶನ್ ಟರ್ಬೈನ್ ಫುಯಲ್ ಬೆಲೆ ಎರಡು ಪಟ್ಟು ಹೆಚ್ಚುವ ನಿರೀಕ್ಷೆ ಇತ್ತು. ಇದರಿಂದ ಫ್ಲೈಟ್ ಟಿಕೆಟ್ ಬೆಲೆ ವಿಪರೀತ ಏರುವ ಸಾಧ್ಯತೆ ಇತ್ತು. ಹೀಗಾಗಿ, ಒಮ್ಮೆಗೇ ಇಂಧನ ಬೆಲೆಯನ್ನು ಶೇ. 100ರಷ್ಟು ಏರಿಸುವ ಬದಲು ಹಂತ ಹಂತವಾಗಿ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ತೈಲ ಮಾರುಕಟ್ಟೆ ಕಂಪನಿಗಳು ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಚರ್ಚಿಸಿ, ದೇಶೀಯ ಏರ್ಲೈನ್ಸ್ ಕಂಪನಿಗಳಿಗೆ ಶೇ. 8.5ರಷ್ಟು ಮಾತ್ರವೇ ಏರಿಸುವುದು ಎಂದು ತೀರ್ಮಾನಿಸಲಾಯಿತೆನ್ನಲಾಗಿದೆ. ಅಂದರೆ, ಲೀಟರ್​ಗೆ 15 ರೂನಷ್ಟು ಏರಿಕೆ ಮಾಡಲಾಗಿದೆ. ಇದು ದೇಶೀಯ ಫ್ಲೈಟ್​ಗಳಿಗೆ ಮಾತ್ರ. ಅಂದರೆ, ಭಾರತದೊಳಗೆ ಸಂಚರಿಸುವ ವಿಮಾನಗಳಿಗೆ ಮಾತ್ರ ಈ ಅಲ್ಪ ಏರಿಕೆ.

ವಿದೇಶೀ ಏರ್​ಲೈನ್ಸ್ ಸಂಸ್ಥೆಗಳು ಮತ್ತು ಚಾರ್ಟರ್ ಫ್ಲೈಟ್ ಇತ್ಯಾದಿ ಸರ್ವಿಸ್ ನೀಡುವ ನಾನ್ ಶೆಡ್ಯೂಲ್ಡ್ ಆಪರೇಟರ್​ಗಳಿಗೆ ಇಂಧನ ಬೆಲೆ ಪೂರ್ತಿ ಏರಿಕೆ ಆಗುತ್ತದೆ. ಅಂದರೆ ಪೂರ್ವನಿಗದಿಯಂತೆ ಎಟಿಎಫ್ ಬೆಲೆ ಒಂದು ಕೆಎಲ್​ಗೆ 2.07 ಲಕ್ಷ ರೂ ಆಗುತ್ತದೆ. ಎರಡು ಪಟ್ಟು ಹೆಚ್ಚು ಬೆಲೆ ಹೆಚ್ಚಳ ಆದಂತಾಗಿದೆ. ಭಾರತೀಯ ಏರ್ಲೈನ್ಸ್ ವಿಮಾನಗಳಾದರೆ ಸುಮಾರು ಶೇ. 8.5ರಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಮಾನಗಳಿಗೂ ಹಂತ ಹಂತವಾಗಿ ದರ ಹೆಚ್ಚಳ ಮಾಡಲಾಗುತ್ತದೆ.

ಇದನ್ನೂ ಓದಿ: Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ

ದೊಡ್ಡ ಕಮರ್ಷಿಯಲ್ ವಿಮಾನಗಳು ಒಂದು ಗಂಟೆಗೆ ಸುಮಾರು 10 ಟನ್ ಇಂಧನ ವ್ಯಯಿಸುತ್ತವೆ. ಅಂದರೆ ಸುಮಾರು 13,000 ಲೀಟರ್ ಎಟಿಎಫ್ ಖರ್ಚಾಗುತ್ತದೆ. ಪ್ರೈವೇಟ್ ಜೆಟ್​ಗಳಾದರೆ ಗಂಟೆಗೆ ಸುಮಾರು 1,500 ಲೀಟರ್ ಇಂಧನ ಬಳಕೆ ಆಗಬಹುದು. ಇದು ಅಂದಾಜು ಮಾತ್ರ. ಒಂದು ಸಾವಿರ ಲೀಟರ್​ಗೆ 2.07 ಲಕ್ಷ ರೂ ಎಂದರೆ, 13 ಸಾವಿರ ಲೀಟರ್​ಗೆ 27 ಲಕ್ಷ ರೂ ಆಗುತ್ತದೆ. ಒಂದು ಗಂಟೆ ಫ್ಲೈಟ್ ಸಂಚರಿಸಲು ಹೊಸ ಬೆಲೆಯಲ್ಲಿ ಇಂಧನ ವೆಚ್ಚವೇ ಸುಮಾರು 30 ಲಕ್ಷ ರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದ ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ

ಉನಾ, ಏಪ್ರಿಲ್ 1: ಬೇಟೆಗಾಗಿ ಹೊಂಚು ಹಾಕಿ ಹುಡುಕುತ್ತಿದ್ದ ಎರಡು ಸಿಂಹಗಳ ಬಾಯಿಗೆ ಸಿಗದೆ ಅವುಗಳನ್ನು ಧೈರ್ಯವಾಗಿ ಎದುರಿಸಿದ ಬಸವ ಎಲ್ಲರ ಮೆಚ್ಚುಗುಗೆ ಪಾತ್ರನಾಗಿದ್ದಾನೆ. ಗಿರ್ ಸೋಮನಾಥ್ ಜಿಲ್ಲೆಯಿಂದ ಆಘಾತಕಾರಿ ಮತ್ತು ರೋಮಾಂಚಕ ವಿಡಿಯೋವೊಂದು ಹೊರಬಿದ್ದಿದೆ.ಉನಾ ತಾಲೂಕಿನ ಪಟಾಪುರ ಗ್ರಾಮದಲ್ಲಿ ನಡೆದ ಈ ಘಟನೆ ಜಾನುವಾರುಗಳ ನಿರಂತರ ಬದುಕಿನ ಹೋರಾಟಕ್ಕೆ ಜೀವಂತ ಉದಾಹರಣೆಯಂತಿದೆ. ಎರಡೂ ದಿಕ್ಕಿನಿಂದ ಸಿಂಹಗಳು ಬಂದೇ ಬಿಟ್ಟಿದ್ದವು, ಆದರೆ ಧೈರ್ಯಗುಂದದೆ ಆ ಎತ್ತು ಸಿಂಹಗಳನ್ನು ಎದುರಿಸಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಹಲವು ಸಿನಿಮಾಗಳನ್ನು ಉಳಿಸಿತು ಈ ಐಡಿಯಾ; ತಪ್ಪಿತು ಫ್ಯಾನ್ಸ್ ವಾರ್

ಸಿನಿಮಾಗಳನ್ನು ನಿರ್ಮಾಣ ಮಾಡುವುದು, ಅದನ್ನು ತೆರೆಗೆ ತರುವುದು ದೊಡ್ಡ ಚಾಲೆಂಜ್. ಅದೇ ರೀತಿ ಆ ಸಿನಿಮಾನ ಥಿಯೇಟರ್​​​ನಲ್ಲಿ ಉಳಿಸಿಕೊಂಡು ಹೋಗೋದು ಇನ್ನೂ ದೊಡ್ಡ ಸವಾಲು. ಸ್ಟಾರ್ ಸಿನಿಮಾ ಆದರಂತೂ ಪೈರಸಿಗಳ ಕಾಟಕ್ಕೆ ಚಿತ್ರ ನಲುಗಿ ಹೋಗುತ್ತದೆ. ಇದರ ಜೊತೆಗೆ, ಫ್ಯಾನ್ಸ್ ವಾರ ಕೂಡ ಸಿನಿಮಾನ ಬಲಿ ಪಡೆಯುತ್ತದೆ. ಈಗ ಚಿತ್ರರಂಗದಲ್ಲಿ ಆಗುತ್ತಿರುವ ಒಂದು ಬದಲಾವಣೆಯಿಂದ ಸಾಕಷ್ಟು ಸಿನಿಮಾಗಳು ಉಳಿದುಕೊಂಡಿವೆ.

ಮೊದಲೆಲ್ಲ ಸುದ್ದಿ ಪತ್ರಿಕೆಯಲ್ಲಿ ಬರುವ ವಿಮರ್ಶೆ ನೋಡಿ ಚಿತ್ರವನ್ನು ನೋಡಬೇಕೋ ಅಥವಾ ಬೇಡವೋ ಎಂದು ಜನರು ನಿರ್ಧಾರ ಮಾಡುತ್ತಿದ್ದರು. ಆದರೆ, ಈಗ ರೇಟಿಂಗ್ ಕಾಲ. ಕೈಬೆರಳ ತುದಿಯಲ್ಲಿ ರೇಟಿಂಗ್ ಸಿಗುತ್ತದೆ. ಸಿನಿಮಾಗೆ ಎಷ್ಟು ರೇಟಿಂಗ್ ಸಿಕ್ಕಿದೆ ಎಂಬುದನ್ನು ಆಧರಿಸಿ ಸಿನಿಮಾ ನೋಡಬೇಕೋ ಅಥವಾ ಇಲ್ಲವೋ ಎಂಬುದನ್ನು ಪ್ರೇಕ್ಷಕ ನಿರ್ಧಾರ ಮಾಡುತ್ತಾನೆ. ಆದರೆ, ಫ್ಯಾನ್ಸ್ ವಾರ್​ಗಳ ಕಾರಣಕ್ಕೆ ಈ ರೇಟಿಂಗ್ ಅನ್ನು ಕೂಡ ನಂಬುವ ಹಾಗಿಲ್ಲ. ಈಗ ರೇಟಿಂಗ್​​​ನೇ ಆಫ್ ಮಾಡಿಸುವ ಟ್ರೆಂಡ್ ಜೋರಾಗಿದ್ದು, ಇದು ಅನೇಕ ಸಿನಿಮಾಗಳನ್ನು ಉಳಿಸಿದೆ.

ದರ್ಶನ್ ನಟನೆಯ ‘ದಿ: ಡೆವಿಲ್’ ಸಿನಿಮಾಗೆ ಕೆಲವರು ಉದ್ದೇಶಪೂರ್ವಕವಾಗಿ ನೆಗೆಟಿವ್ ವಿಮರ್ಶೆ ನೀಡಬಹುದು ಎಂಬ ಭಯ ಇತ್ತು. ಈ ಕಾರಣದಿಂದ ಕೋರ್ಟ್​​ನಿಂದ ಆದೇಶ ತರುವ ಮೂಲಕ ರೇಟಿಂಗ್ ಕೊಡೋದನ್ನು ತಡೆಯಲಾಯಿತು. ನಂತರ ಸುದೀಪ್ ನಟನೆಯ ‘ಮಾರ್ಕ್’, ಮಲ್ಟಿ ಸ್ಟಾರರ್ ಸಿನಿಮಾ ‘45’ ಸಿನಿಮಾ ಕೂಡ ಇದೇ ತಂತ್ರ ಉಪಯೋಗಿಸಿದವು. ಕನ್ನಡದಲ್ಲಿ ಈ ಪ್ರಯೋಗ ಯಶಸ್ಸು ಕಂಡ ಬಳಿಕ ತೆಲುಗಿನವರು ಕೂಡ ಇದೇ ಮಾದರಿಯ ಮೊರೆ ಹೋದರು. ‘ಮನ ಶಂಕರ ವರಪ್ರಸಾದ ಗಾರು’, ‘ನಾರಿ ನಾರಿ ನಡುಮ ಮುರಾರಿ’, ‘ಅನಗನಗ ಒಕರಾಜು’ ತಂಡಗಳು ಕೂಡ ಇದೇ ಮಾದರಿಯನ್ನು ಅನುಸರಿಸಿದವು. ಈ ತಂತ್ರವನ್ನು ಮೊದಲು ಕಂಡು ಹಿಡಿದಿದ್ದು ಬೆಂಗಳೂರಿನ ಆ್ಯಂಟಿ ಪರೈಸಿ ಸಂಸ್ಥೆ ಐಪ್ಲೆಕ್ಸ್ ಅನ್ನೋದು ವಿಶೇಷ.

‘ಮೊದಲ ಮೂರು ದಿನ ಆನ್​​ಲೈನ್ ಅಲ್ಲಿ ವಿಮರ್ಶೆ ಹಂಚಿಕೊಳ್ಳಬಾರದು’, ‘ಥಿಯೇಟರ್​ ಹೊರ ಭಾಗದಲ್ಲಿ ಯೂಟ್ಯೂಬರ್​​ಗಳು ವಿಮರ್ಶೆ ಪಡೆಯದಂತೆ ಮಾಡಬೇಕು’ ಎಂಬಿತ್ಯಾದಿ ನಿಯಮ ತರಲು ಕೆಲ ಚಿತ್ರರಂಗದವರು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಿಲ್ಲ. ಟಿಕೆಟ್ ಬುಕ್ ಮಾಡಲು ಎಲ್ಲರೂ ಬಹುವಾಗಿ ಅವಲಂಬಿತವಾಗಿರುವ ‘ಬುಕ್ ಮೈ ಶೋ’ ರೇಟಿಂಗ್ ಅನ್ನೇ ಬಂದ್ ಮಾಡಿಸೋ ಮೂಲಕ ಕೆಲವು ಸಿನಿಮಾಗಳು ಬಚಾವ್ ಆಗಿವೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಅಭಿಪ್ರಾಯ.

ಇದನ್ನೂ ಓದಿ: ‘ಡೆವಿಲ್’ಗೆ ರೇಟಿಂಗ್ ಕೊಡಂಗಿಲ್ಲ; ಕೋರ್ಟ್​ನಿಂದ ಆರ್ಡರ್ ತಂದಿದ್ದಕ್ಕೆ ಕಾರಣ ತಿಳಿಸಿದ ದಿನಕರ್

ಇನ್ನು, ‘ನಮ್ಮ ಸಿನಿಮಾಗೆ ಆ ಹೀರೋ ಅಭಿಮಾನಿಗಳು ನಗೆಟಿವ್ ವಿಮರ್ಶೆ ಕೊಟ್ಟರು, ಈ ಹೀರೋಗಳು ನೆಗೆಟಿವ್ ವಿಮರ್ಶೆ ಕೊಟ್ಟರು’ ಎಂಬ ದೂರು ಬರೋದಿಲ್ಲ. ಹೀಗಾಗಿ, ಈ ಕ್ರಮದಿಂದ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ವಾರ ಕೂಡ ನಿಂತಿದೆ. ಮುಂದಿನ ದಿನಗಳಲ್ಲಿ ಹಲವು ಸಂಸ್ಥೆಗಳು ಇದೇ ತಂತ್ರ ಬಳಸಬಹುದು. ಅಲ್ಲದೆ, ಮಲಯಾಳಂ, ತಮಿಳು ಹಾಗೂ ಹಿಂದಿ ಚಿತ್ರರಂಗದವರೂ ಇದೇ ಮಾದರಿಯನ್ನು ಜಾರಿಗೆ ತರಲು ಹೆಚ್ಚು ಉತ್ಸುಕರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PSL 2026: ಪಾಕ್ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಭಾರೀ ಬಿರುಗಾಳಿ: ಕಂಟ್ರೋಲ್ ತಪ್ಪಿ ಏನೆಲ್ಲ ಆಯಿತು ನೋಡಿ

ಬೆಂಗಳೂರು (ಏ. 01): ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಪ್ರೀಮಿಯರ್ ಲೀಗ್ 2026 ರ (Pakistan Premier League) ಏಳನೇ ಪಂದ್ಯವು ಪ್ರಕೃತಿಯ ಕೋಪಕ್ಕೆ ಸಾಕ್ಷಿಯಾಯಿತು. ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯಕ್ಕೆ ಸ್ವಲ್ಪ ಮೊದಲು, ಗಡಾಫಿ ಕ್ರೀಡಾಂಗಣದಲ್ಲಿ ಭೀಕರ ಬಿರುಗಾಳಿ ಮತ್ತು ಮಳೆಯು ಆಟವನ್ನು ಸ್ಥಗಿತಗೊಳಿಸಿದ್ದಲ್ಲದೆ, ಮೈದಾನದ ಸಿಬ್ಬಂದಿಯ ಜೀವಕ್ಕೂ ಅಪಾಯವನ್ನುಂಟುಮಾಡಿತು. ಇದರ ಬೆನ್ನಲ್ಲೇ, ಪಾಕಿಸ್ತಾನದ ಕ್ರಿಕೆಟ್ ಮೂಲಸೌಕರ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.

ಪಿಎಸ್​ಎಲ್ ಪಂದ್ಯದ ವೇಳೆ ಭಾರೀ ಬಿರುಗಾಳಿ

ಮಂಗಳವಾರ ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯಕ್ಕೆ ಟಾಸ್ ಪ್ರಕ್ರಿಯೆ ನಡೆಯುವ ಮುನ್ನ ಗಡಾಫಿ ಕ್ರೀಡಾಂಗಣದಲ್ಲಿ ಭೀಕರ ಬಿರುಗಾಳಿ ಮತ್ತು ಧಾರಾಕಾರ ಮಳೆ ಸುರಿಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ವೀಡಿಯೊಗಳು ಗಾಳಿ ಎಷ್ಟು ಬಲವಾಗಿ ಬೀಸುತ್ತಿದೆಯೆಂದರೆ ಪಿಚ್ ಹೊದಿಕೆಗಳು ಗಾಳಿಪಟಗಳಂತೆ ಹಾರಲು ಪ್ರಾರಂಭಿಸಿದವು.

ಈ ಕವರ್‌ಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ, ಹಲವಾರು ಮೈದಾನದ ಸಿಬ್ಬಂದಿ ಗಾಳಿಯ ವೇಗಕ್ಕೆ ಸಿಲುಕಿ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದರು. ಧಾರಾಕಾರ ಮಳೆಯಿಂದಾಗಿ ಹೊರಾಂಗಣ ಸಂಪೂರ್ಣವಾಗಿ ಒದ್ದೆಯಾಗಿತ್ತು ಮತ್ತು ಸಂಜೆ 6:30 ಕ್ಕೆ ನಿಗದಿಯಾಗಿದ್ದ ಟಾಸ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಈ ಘಟನೆಯಿಂದ ಪಾಕಿಸ್ತಾನಿ ಕ್ರಿಕೆಟ್ ಪ್ರಪಂಚದಾದ್ಯಂತ ನಗೆಪಾಟಲಿಗೆ ಈಡಾಗುತ್ತಿದೆ.

ಪಿಎಸ್​ಎಲ್​ ಪಂದ್ಯದ ವೇಳೆ ಬಿರುಗಾಳಿ ಬೀಸಿದ ವೀಡಿಯೊ:

 

ಕೆಲ ಸಮಯ ಕಾದರೂ ಮಳೆ ಕಡಿಮೆಯಾಗದ ಪರಿಣಾಮ ಅಂತಿಮವಾಗಿ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದರು. ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಈ ಫಲಿತಾಂಶದೊಂದಿಗೆ, ಪೇಶಾವರ್ ಝಲ್ಮಿ ತಂಡವು ಎರಡು ಪಂದ್ಯಗಳಿಂದ ಮೂರು ಅಂಕಗಳನ್ನು ಗಳಿಸಿ, ಲಾಹೋರ್ ಖಲಂದರ್ ಮತ್ತು ಮುಲ್ತಾನ್ ಸುಲ್ತಾನ್ಸ್‌ಗಿಂತ ಮುಂದಿರುವ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಏತನ್ಮಧ್ಯೆ, ಇಸ್ಲಾಮಾಬಾದ್ ಯುನೈಟೆಡ್ ತಂಡವು ಋತುವಿನ ತಮ್ಮ ಮೊದಲ ಪಾಯಿಂಟ್ ಅನ್ನು ದಾಖಲಿಸಿ ಆರನೇ ಸ್ಥಾನಕ್ಕೆ ಏರಿತು.

IND vs ZIM: ಜಿಂಬಾಬ್ವೆ ತೆರಳಲಿದೆ ಟೀಮ್ ಇಂಡಿಯಾ: ಬಿಸಿಸಿಐಯಿಂದ ಟಿ20 ಸರಣಿಯ ವೇಳಾಪಟ್ಟಿ ಪ್ರಕಟ

ಫಖರ್ ಜಮಾನ್​ಗೆ ನಿಷೇಧ:

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪಿಎಸ್‌ಎಲ್ ಚೆಂಡು ವಿರೂಪ ವಿವಾದದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ನಂತರ, ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಅವರಿಗೆ ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ. “ಭಾನುವಾರ ನಡೆದ ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ ಪಂದ್ಯದ ಸಂದರ್ಭದಲ್ಲಿ ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗೆ ಅನ್ವಯವಾಗುವ ನೀತಿ ಸಂಹಿತೆಯ ಆರ್ಟಿಕಲ್ 2.14 ಅನ್ನು ಉಲ್ಲಂಘಿಸಿದ್ದಕ್ಕಾಗಿ ಲೆವೆಲ್ 3 ಅಪರಾಧದಲ್ಲಿ ಫಖರ್ ಜಮಾನ್ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರನ್ನು ಎರಡು HBL PSL ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ” ಎಂದು PSL ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸಕ್ಕೆಂದು ಸಿದ್ಧಗಂಗಾ ಮಠಕ್ಕೆ ಬಂದಿದ್ದ ಭಕ್ತ ಸಾವು

ತುಮಕೂರು, (ಏಪ್ರಿಲ್.01): ಡಾ. ಶಿವಕುಮಾರ ಸ್ವಾಮೀಜಿಗಳ (Dr Shivakumar Swamiji) 119ನೇ ಜನ್ಮದಿನೋತ್ಸಕ್ಕೆಂದು ತುಮಕೂರಿನ (Tumakuru) ಸಿದ್ದಗಂಗಾ ಮಠಕ್ಕೆ (siddaganga mutt) ಬಂದಿದ್ದ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ಮೈಸೂರಿನಿಂದ (Mysuru) ಸ್ನೇಹಿತರ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟರಾಜು(60) ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಾಯೂರು ನಿವಾಸಿ ನಟರಾಜ್ ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಯಾಗಿದ್ದಾರೆ. ಇದರಿಂದ ಪ್ರತಿ ವರ್ಷ ಶಿವಕುಮಾರ್ ಸ್ವಾಮೀಜಿ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಆದ್ರೆ, ಈ ಬಾರಿ ಮಠದಲ್ಲೇ ಅಸುನೀಗಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಾಯೂರು ನಿವಾಸಿ ನಟರಾಜ್, ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿ. ಹೀಗಾಗಿ ಪ್ರತಿ ವರ್ಷವೂ ಸಹ ಡಾ. ಶಿವಕುಮಾರ ಸ್ವಾಮೀಜಿಗಳ ಜನ್ಮದಿನೋತ್ಸಕ್ಕೆಂದು ಬರುತ್ತಿದ್ದರು. ಅದರಂತೆ ಶ್ರೀಗಳ 119ನೇ ಜನ್ಮದಿನೋತ್ಸ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ನಿನ್ನೆ (ಮಾರ್ಚ್ 31) ರಾತ್ರಿ ಸಿದ್ಧಗಂಗಾ ಮಠಕ್ಕೆ ಬಂದಿದ್ದರು. ಆದ್ರೆ, ದುರದೃಷ್ಟವಶಾತ್ ಇಂದು (ಏಪ್ರಿಲ್ 01) ಶೌಚಾಲಯಕ್ಕೆ ಹೋಗಿ ಬರುವಾಗ ಶಿವಕುಮಾರ ಶ್ರೀಗಳ ಗದ್ದುಗೆ ಹಿಂಭಾಗದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಸಿದ್ಧಗಂಗಾ ಮಠದ ಗುಣಗಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಪ್ರತಿವರ್ಷ ಶಿವಕುಮಾರ ಶ್ರೀಗಳ ಕಾರ್ಯಕ್ರಮಕ್ಕೆ ಬರುತ್ತಿದ್ದ ನಟರಾಜ್ ಅವರಿಗೆ ಕೆಲ ದಿನಗಳ ಹಿಂದೆ ಹಾರ್ಟ್​ ಸರ್ಜರಿತಾಗಿತ್ತು ಎಂದು ತಿಳಿದುಬಂದಿದೆ. ಇನನ್ಉ ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಂಟ್ವಾಳ: ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ, ಮೈಜುಂ ಎನ್ನಿಸೋ ವಿಡಿಯೋ ವೈರಲ್

ಮಂಗಳೂರು, ಏಪ್ರಿಲ್ 1: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿಯಾದ ಭೀಕರ ಅಪಘಾತ ಸಂಭವಿಸಿದೆ. ಘಟನೆ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈ ಜುಂ ಎನ್ನುವಂತಿದೆ. ನಡೆದಿದ್ದೇನು? ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂಬುವವರೇ ಗಾಯಗೊಂಡ ಮಹಿಳೆ. ಇವರು ಬೆಳಗ್ಗೆ ಮಗಳು ದೀಪಶ್ರೀ ಅವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಹಾಕುವ ಸಲುವಾಗಿ ಬಂದಿದ್ದರು. ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಿ ರಸ್ತೆಯ ಅಂಚಿಗೆ ತಲುಪುತ್ತಿದ್ದಂತೆ, ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಭಾರತಿ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ಜಿಂಬಾಬ್ವೆ ತೆರಳಲಿದೆ ಟೀಮ್ ಇಂಡಿಯಾ: ಬಿಸಿಸಿಐಯಿಂದ ಟಿ20 ಸರಣಿಯ ವೇಳಾಪಟ್ಟಿ ಪ್ರಕಟ

ಬೆಂಗಳೂರು (ಏ. 01): ಭಾರತ ಕ್ರಿಕೆಟ್ ತಂಡದ (Indian Cricket Team) ಆಟಗಾರರು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಬಿಸಿಸಿಐ, ಭಾರತ ತಂಡವು ಜುಲೈ 2026 ರಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದೆ ಎಂದು ಘೋಷಿಸಿದೆ. ಇದು 2024 ರಲ್ಲಿ ಐದು ಪಂದ್ಯಗಳನ್ನು ಆಡಿದ ನಂತರ ಅವರ ಮೊದಲ ಭೇಟಿಯಾಗಿದೆ. ಸರಣಿಯು ಜುಲೈ 23 ರ ಗುರುವಾರ ಹರಾರೆಯಲ್ಲಿ ಮೊದಲ ಟಿ20 ಯೊಂದಿಗೆ ಆರಂಭಗೊಳ್ಳಲಿದೆ. ಜುಲೈ 19 ರಂದು ಮುಕ್ತಾಯಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ವೈಟ್-ಬಾಲ್ ಸರಣಿ ಬಳಿಕ ಭಾರತ ತಂಡ ಜಿಂಬಾಬ್ವೆಗೆ ತೆರಳಲಿದೆ. ಈ ಸರಣಿಯಲ್ಲಿ ಒಟ್ಟು ಮೂರು ಟಿ20 ಪಂದ್ಯ ನಡೆಯಲಿದೆ.

ಈ ಸರಣಿಯು ಯುವ ಮತ್ತು ಉದಯೋನ್ಮುಖ ಭಾರತೀಯ ಆಟಗಾರರಿಗೆ ಅವಕಾಶಗಳನ್ನು ನೀಡಬಹುದು. ಜೊತೆಗೆ ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಯುವ ಆಟಗಾರರ ಪ್ರದರ್ಶನದ ಮೇಲೆ ಬಿಸಿಸಿಐ ಗಮನ ಕೊಡಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ, ಪ್ರವಾಸಕ್ಕೆ ಕರೆ ಬರುವ ನಿರೀಕ್ಷೆಯಿದೆ. ಅತ್ತ ಜಿಂಬಾಬ್ವೆ ಬಲಿಷ್ಠ ಪ್ರವಾಸಿ ತಂಡದ ವಿರುದ್ಧ ತವರು ನೆಲದಲ್ಲಿ ಆಡುವುದನ್ನು ಸದುಪಯೋಗಪಡಿಸಿಕೊಳ್ಳಲು ನೋಡುತ್ತದೆ.

ಜುಲೈನಲ್ಲಿ ಟೀಮ್ ಇಂಡಿಯಾದ ಜಿಂಬಾಬ್ವೆ ಪ್ರವಾಸ

ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಜುಲೈ 23 ರಂದು ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ. ಎರಡನೇ ಪಂದ್ಯ ಜುಲೈ 25 ರಂದು ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ ಜುಲೈ 26 ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಹರಾರೆಯಲ್ಲಿರುವ ಹರಾರೆ ಕ್ರೀಡಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಇದರರ್ಥ ತಂಡವು ಬೇರೆಡೆಗೆ ಪ್ರಯಾಣಿಸಬೇಕಾಗಿಲ್ಲ. ಅದಕ್ಕಾಗಿಯೇ ಕೊನೆಯ ಎರಡು ಪಂದ್ಯಗಳನ್ನು ಕೇವಲ ಎರಡು ದಿನಗಳಲ್ಲಿ ಆಯೋಜನೆ ಮಾಡಲಾಗಿದೆ.

ಅತೀ ವೇಗ… ಬೆನ್​ ಡಕೆಟ್​ಗೆ ಬರೋಬ್ಬರಿ 1,100 ಪೌಂಡ್ ಫೈನ್..!

ಭಾರತ vs ಜಿಂಬಾಬ್ವೆ 2026 ಟಿ20 ವೇಳಾಪಟ್ಟಿ:

  • ಮೊದಲ ಟಿ20ಐ: ಗುರುವಾರ, ಜುಲೈ 23, ಹರಾರೆ
  • ಎರಡನೇ ಟಿ20ಐ: ಶನಿವಾರ, ಜುಲೈ 25, ಹರಾರೆ
  • ಮೂರನೇ ಟಿ20ಐ: ಭಾನುವಾರ, ಜುಲೈ 26, ಹರಾರೆ

ಬಿಸಿಸಿಐ ಪ್ರಕಟಿಸಿದ ಭಾರತ-ಜಿಂಬಾಬ್ವೆ ವೇಳಾಪಟ್ಟಿಯ ಟ್ವೀಟ್:

ಈ ವರ್ಷ ಯಾವುದೇ ಪ್ರಮುಖ ಟಿ20 ಟೂರ್ನಿ ಇಲ್ಲ

ಈ ವರ್ಷ ಪ್ರಸ್ತುತ ಯಾವುದೇ ಪ್ರಮುಖ ಪಂದ್ಯಾವಳಿಗಳಿಲ್ಲ. ಆದ್ದರಿಂದ, ಭಾರತದ ಅಗ್ರ ಆಟಗಾರರು ಈ ಸರಣಿಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ಇದರರ್ಥ ಭಾರತದ ಕಿರಿಯ ಆಟಗಾರರು ಆಯ್ಕೆ ಆಗಬಹುದು. ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುವುದು ಅನುಮಾ. ಹೊಸ ಆಟಗಾರನನ್ನು ನಾಯಕನನ್ನಾಗಿ ನೇಮಿಸಬಹುದು. ಈ ವರ್ಷ ಅಥವಾ ಮುಂದಿನ ವರ್ಷ ಯಾವುದೇ ಪ್ರಮುಖ ಐಸಿಸಿ ಟಿ20 ಪಂದ್ಯಾವಳಿಗಳಿಲ್ಲ, ಆದರೆ ಹೊಸ ಆಟಗಾರರಿಗೆ ಅವಕಾಶ ನೀಡಲು ಮತ್ತು ಅವರನ್ನು ಪರೀಕ್ಷಿಸಲು ಟೀಮ್ ಇಂಡಿಯಾ ಇನ್ನೂ ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಮಧ್ಯಂತರವಾಗಿ ಆಡುತ್ತಿದೆ. ಇತ್ತೀಚೆಗೆ, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಮುಂದಿನ ಟಿ20 ವಿಶ್ವಕಪ್ 2028 ರಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link