All posts by nagaraj11081993

ವೈರಲ್ ಪೋಸ್ಟ್: ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಅಂದ್ರೆ ಏನು ಗೊತ್ತಾ? – Kannada News | Indira Gandhi in Turkish: Viral Post Reveals Surprising Meaning and Origin

ನವದೆಹಲಿ, ಜೂನ್ 19: ಒಂದೊಂದು ಪದಕ್ಕೆ ಒಂದೊಂದು ಭಾಷೆಯಲ್ಲಿ ಒಂದೊಂದು ಅರ್ಥವಿರುತ್ತದೆ. ಹಾಗೆಯೇ ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು ಗೊತ್ತಾ. ಸಂಪೂರ್ಣ ಮಾಹಿತಿ ಇಲ್ಲಿದೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅಭಿಜಿತ್ ಐಯ್ಯರ್ ಎಂಬುವವರು ಕೀರ್ತನಾ ಎಂಬುವವರ ಪೋಸ್ಟ್ ಹಂಚಿಕೊಂಡಿದ್ದು​ ವೈರಲ್ ಆಗಿದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಎಂದರೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು, ಕಳ್ಳತನ ಮಾಡುವುದು ಅಥವಾ ವಂಚಿಸುವುದು ಎಂದರ್ಥ ಎಂದು ಹೇಳಿದ್ದಾರೆ. ಈ ಪೋಸ್ಟ್ ರಾಜಕೀಯ ವಲಯ ಹಾಗೂ ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕೀರ್ತನಾ ಎಂಬುವವರು ತಮ್ಮ ಸ್ನೇಹಿತರ ಜತೆ ಮಾತನಾಡುವಾಗ ಇಂದಿರಾ ಗಾಂಧಿ ಎಂಬ ಪದ ಬಳಸಿದ್ದರಂತೆ, ಆಗ ಇಂದಿರಾ ಗಾಂಧಿ ಎನ್ನುವ ಪದದ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಆಕೆಯನ್ನು ಅವರು ಕೇಳಿದ್ದರಂತೆ, ಆಗ ಅವರು ಭಾರತದ ಮಾಜಿ ಪ್ರಧಾನಿ ಎಂದು ಹೇಳಿದಾಗ, ಇಲ್ಲ ಇಲ್ಲ ನಾವು ಮಾತನಾಡುತ್ತಿರುವುದು ವ್ಯಕ್ತಿ ಬಗ್ಗೆ ಅಲ್ಲ ವ್ಯವಸ್ಥೆ ಬಗ್ಗೆ ಇಂದಿರಾ ಗಾಂಧಿ ಎಂದರೆ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುವುದು ಎಂದರ್ಥ ಎಂದು ಹೇಳಿದ್ದರಂತೆ.

70 ಹಾಗೂ 80ನೇ ದಶಕದಲ್ಲಿ ಈ ಪದ ಬಳಕೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಪದ ಬಳಸುತ್ತಿದ್ದರೂ ಆ ಹೆಸರಿನ ವ್ಯಕ್ತಿ ಇದ್ದಾರೆ ಎಂದು ಟರ್ಕಿಯ ಬಹುತೇಕ ಜನರಿಗೆ ತಿಳಿದಿರಲಿಲ್ಲ. 2014ರಲ್ಲಿ ಟರ್ಕಿಯ ವಿಪಕ್ಷವು ಇಂಡಿರಾ ಗಾಂಧಿ ಮೆಮೋರಿಯಲ್ ವೀಕ್ ಅನ್ನು ಆರಂಭಿಸಿತ್ತು. ಆಗಿನ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ ಆಂದೋಲನ ಅದಾಗಿತ್ತು. ಪೊಲೀಸರು ಬಂದು ಬ್ಯಾನರ್​ ಅನ್ನು ಕಿತ್ತು ಹಾಕಿದ್ದರು. ಸಂಸತ್ತಿನಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಏನಿದು ಅಭಿಯಾನ ಎಂದು ಪ್ರಶ್ನೆ ಮಾಡಿದ್ದರು.

ವಿಡಿಯೋ

ಭಾಷಾ ತಜ್ಞರು ಮತ್ತು ಡಿಕ್ಷನರಿಗಳ ಪ್ರಕಾರ, ಈ ವೈರಲ್ ಪೋಸ್ಟ್‌ ಸುಳ್ಳಲ್ಲ, ಟರ್ಕಿಶ್ ಭಾಷೆಯ ಆಡುಭಾಷೆಯಲ್ಲಿ ನಿಜವಾಗಿಯೂ ‘ಇಂದಿರಾ ಗಾಂಧಿ’ ಎಂಬ ಪದವನ್ನು ಬಳಸಲಾಗುತ್ತದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರ್ಮೆಕ್’ (İndirmek) ಎಂದರೆ ಒಂದು ವಸ್ತುವನ್ನು ಕೆಳಗಿಳಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಎಂದರ್ಥ.

ಕಾಲಾನಂತರದಲ್ಲಿ ಟರ್ಕಿಯ ಯುವಕರು ಮತ್ತು ಅಲ್ಲಿನ ಆಡುಭಾಷೆಯಲ್ಲಿ, ಯಾರಾದರೂ ಹಣವನ್ನು ಲಪಟಾಯಿಸಿದರೆ ಅಥವಾ ಕಳ್ಳತನ ಮಾಡಿದರೆ ಅದನ್ನು ತಮಾಷೆಯಾಗಿ ‘ಇಂದಿರಾ ಗಾಂಧಿ’ (İndira gandi) ಎಂದು ಕರೆಯಲು ಆರಂಭಿಸಿದರು.

ಭಾರತದ ನಂಟಿದೆಯೇ?: ಇದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನೇ ಹೋಲುತ್ತದೆಯಾದರೂ, ಟರ್ಕಿಶ್ ಭಾಷೆಯ ಮೂಲ ಪದಕ್ಕೂ ಭಾರತದ ರಾಜಕಾರಣಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದರೆ, ಕೇವಲ ಉಚ್ಚಾರಣೆಯ ಹೋಲಿಕೆಯಿಂದಾಗಿ ಭಾರತೀಯ ನೆಟ್ಟಿಗರು ಇದನ್ನು ರಾಜಕೀಯ ವ್ಯಂಗ್ಯಕ್ಕೆ ವ್ಯಾಪಕವಾಗಿ ಬಳಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಧಾನ ಪರಿಷತ್​​ ಚುನಾವಣೆಯಲ್ಲಿ ಕ್ರಾಸ್​​ ವೋಟಿಂಗ್​​: ಬಿಜೆಪಿಯಿಂದ ಸತ್ಯಶೋಧನಾ ಸಮಿತಿ ರಚನೆ – Kannada News | Karnataka MLC Polls: BJP Forms CT Ravi Led Panel to Probe Cross Voting; Bhagwant Khuba Demands Strict Action

ಬೆಂಗಳೂರು, ಜೂನ್​​ 19: ವಿಧಾನ ಪರಿಷತ್​​ ಚುನಾವಣೆಯಲ್ಲಿ ಭಾರಿ ಅಡ್ಡಮತದಾನದ ಪರಿಣಾಮ ಕೂದಲೆಳೆ ಅಂತರದಲ್ಲಿ ಮುಖಭಂಗ ತಪ್ಪಿಸಿಕೊಂಡಿರುವ ಕರ್ನಾಟಕ ಬಿಜೆಪಿ ಕ್ರಾಸ್​​ ವೋಟಿಂಗ್​​ ವಿಚಾರವಾಗಿ ಸತ್ಯಶೋಧನಾ ಸಮಿತಿ ರಚನೆ ಮಾಡಿದೆ. ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಎನ್​.ಮಹೇಶ್, ಶಾಸಕ ಮಹೇಶ್ ಟೆಂಗಿನಕಾಯಿ ಒಳಗೊಂಡ ತ್ರಿಸದಸ್ಯ ಸಮಿತಿಗೆ ಜೂನ್ 25ರೊಳಗೆ ವರದಿ ನೀಡುವಂತೆ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದ್ದಾರೆ.

ಭಗವಂತ್ ಖೂಬಾ ಪತ್ರ

ಬಿಜೆಪಿ ಶಾಸಕರಿಂದ ಅಡ್ಡಮತದಾನ ಹಿನ್ನೆಲೆ ರಾಜ್ಯ ಬಿಜೆಪಿ ಅದ್ಯಕ್ಷ ಬಿ.ವೈ.ವಿಜಯೇಂದ್ರಗೆ ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಪತ್ರ ಬರೆದಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ರಾಜಾರೋಷವಾಗಿ ಕೆಲಸ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದರಿಂದಾಗಿಯೇ ಪರಿಷತ್​​ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿದೆ. ಎಷ್ಟೋ ಕಡೆ ಶಾಸಕರು ತಮ್ಮ ಬೆಂಬಲಿಗರಿಗೆ ಮುನ್ಸೂಚನೆ ನೀಡುತ್ತಿದ್ದಾರೆ ಕಾರ್ಯಕರ್ತರು ಸಂಘಟನೆಯಲ್ಲಿ ಕೆಲಸ ಮಾಡದೇ ದೂರ ಉಳಿಯುತ್ತಿದ್ದಾರೆ. ಹಣ ಕೊಟ್ಟು ಜನರನ್ನು ಕರೆತಂದು ಕಾರ್ಯಕರ್ತರು ಎಂದು ಬಿಂಬಿಸುವ ಕೆಲಸ ಆಗುತ್ತಿದ್ದರೂ ಇದ್ಯಾವುದನ್ನೂ ಪ್ರಶ್ನಿಸುತ್ತಿಲ್ಲ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಶಿಸ್ತು ಕ್ರಮ ಆಗಲೇಬೇಕು ಎಂದು ಗೌಪ್ಯ ಪತ್ರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಒತ್ತಾಯಿಸಿರುವ ಖೂಬಾ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೂ ಈ ಸಂಬಂಧ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲು; ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ

‘ಅಡ್ಡ ಮತದಾನದಿಂದ ಬೇಸರವಾಗಿದೆ’

ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಅಡ್ಡಮತದಾನದಿಂದ ನಮಗೂ ಬೇಸರ ಹಾಗೂ ನೋವಾಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಅಡ್ಡಮತದಾನ ಆಗಬಾರದಿತ್ತು, ಆದರೆ ದುರಾದೃಷ್ಟವಶಾತ್ ಆಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಈ ಬೆಳವಣಿಗೆಯಿಂದ ವಿಚಲಿತ ಆಗಿ ಓಡಿಹೋಗುವವನು ನಾನಲ್ಲ. ಇದನ್ನು ಅರಗಿಸಿಕೊಳ್ಳುವ ಶಕ್ತಿ ನನಗಿದೆ. ನಾನು ರಾಜ್ಯ ಬಿಜೆಪಿ ಅಧ್ಯಕ್ಷ, ಬಿ.ಎಸ್​.ಯಡಿಯೂರಪ್ಪನವರ ಮಗ. ಅಡ್ಡಮತದಾನ ಬಗ್ಗೆ ಯಾರಿಗೆ ಹೇಳಬೇಕೋ ಹೇಳುತ್ತೇನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:05 pm, Fri, 19 June 26

Source link

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ವಿದ್ಯಾರ್ಥಿ ಸಾವು – Kannada News | Tragedy in Mysore: Student’s Sudden Heart Attack at Marimallappa College Sparks Youth Health Fears

ಮೈಸೂರು ವಿದ್ಯಾರ್ಥಿ ಸಾವುImage Credit source: Tv9 kannada

ಮೈಸೂರು, ಜೂ.19: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚಾಗುತ್ತಿರುವುದು ತೀವ್ರ ಆತಂಕವೂ ಮೂಡಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು ಕ್ಯಾಂಪಸ್‌ನಲ್ಲೇ (Marimallappa College) ಹೃದಯಾಘಾತದಿಂದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೀಗ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗಿರುವುದು ಪೋಷಕರಲ್ಲಿ ಆಂತಕ ಉಂಟು ಮಾಡಿದೆ.

ಮೃತ ವಿದ್ಯಾರ್ಥಿಯನ್ನು ಮಾದೇಶ್ ಎಂದು ಗುರುತಿಸಲಾಗಿದೆ. ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೂಲದವರಾಗಿದ್ದು, ಸದ್ಯ ಮೈಸೂರಿನಲ್ಲಿ ತಮ್ಮ ಅಕ್ಕನ ಜೊತೆ ವಾಸವಿದ್ದುಕೊಂಡು ಮರಿಮಲ್ಲಪ್ಪ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಎಂದಿನಂತೆ ಕಾಲೇಜಿಗೆ ಬಂದಿದ್ದ ಮಾದೇಶ್, ಕ್ಯಾಂಪಸ್‌ನಲ್ಲಿ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೊಳಗಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾರೆ.

ವಿದ್ಯಾರ್ಥಿ ಕುಸಿದುಬೀಳುತ್ತಿದ್ದಂತೆ ಗಾಬರಿಗೊಂಡ ಕಾಲೇಜಿನ ಸಿಬ್ಬಂದಿ ಹಾಗೂ ಸಹಪಾಠಿಗಳು ತಕ್ಷಣವೇ ಕಾಲೇಜು ಮಂಡಳಿಯ ಸಿಬ್ಬಂದಿ ಮಾದೇಶ್​ ಅನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಪರೀಕ್ಷೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮಾದೇಶ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಸಣ್ಣ ವಯಸ್ಸಿನಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವುದು ಕಾಲೇಜು ಹಾಗೂ ಮೃತನ ಕುಟುಂಬದಲ್ಲಿ ನೋವು ಉಂಟು ಮಾಡಿದೆ.

ಇದನ್ನೂ ಓದಿ:ಶಿವಮೊಗ್ಗ: ಶಾಲೆಯಲ್ಲಿ ಆಟವಾಡುತ್ತಿದ್ದಾಗ ಆರು ವರ್ಷದ ಬಾಲಕ ಸಾವು, ಹೃದಯಾಘಾತ ಶಂಕೆ

ಕಾಲೇಜು ದಿನಗಳಲ್ಲೇ ಮಗನನ್ನು ಕಳೆದುಕೊಂಡ ಹೆತ್ತವರ ಹಾಗೂ ಅಕ್ಕನ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗಲೇ ಕುಸಿದುಬಿದ್ದು 1ನೇ ತರಗತಿ ವಿದ್ಯಾರ್ಥಿ ಸಾವು

ಶಾಲಾ ಆವರಣದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕನೊಬ್ಬ ಏಕಾಏಕಿ ಕುಸಿದುಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಾಳಸಸಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ತ್ರಿಲೋಕ್ ಜೈನ್ (6) ಎಂದು ಗುರುತಿಸಲಾಗಿದೆ. . ಕೊಡನವಳ್ಳಿಯ ಗೌತಮ್ ಮತ್ತು ಶಿಲ್ಪಾ ದಂಪತಿಯ ಪ್ರೀತಿಯ ಪುತ್ರನಾಗಿದ್ದ ತ್ರಿಲೋಕ್ ಜೈನ್ ಎಂದಿನಂತೆ ಶಾಲೆಗೆ ಬಂದಿದ್ದ ಬಾಲಕ ಬಿಡುವಿನ ವೇಳೆಯಲ್ಲಿ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾನೆ.

ಮಗು ದಿಢೀರನೆ ಕೆಳಗೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ತಕ್ಷಣವೇ ಮಗುವನ್ನು ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯದಲ್ಲೇ ಆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆಯ ವೈದ್ಯರು ಬಾಲಕನನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.ಪ್ರಾಥಮಿಕ ಮಾಹಿತಿಗಳ ಪ್ರಕಾರ ಬಾಲಕ ತ್ರಿಲೋಕ್ ತೀವ್ರ ಹೃದಯಾಘಾತದಿಂದಲೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಇಷ್ಟು ಸಣ್ಣ ವಯಸ್ಸಿನ ಮಗುವಿಗೆ ಹಠಾತ್ ಹೃದಯಾಘಾತ ಸಂಭವಿಸಲು ಕಾರಣವೇನು? ಅಥವಾ ಮಗುವಿಗೆ ಈ ಮೊದಲೇನಾದರೂ ಹೃದಯ ಸಂಬಂಧಿ ಕಾಯಿಲೆ ಇತ್ತೇ? ಎಂಬ ಅಸಲಿ ಸತ್ಯ ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿಯಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೇಕೆದಾಟು ಯೋಜನೆಯ ಇತಿಹಾಸ ಮತ್ತು ವಿವಾದ: ಕರ್ನಾಟಕದ ವರ್ಷಗಳ ಹೋರಾಟದ ಸಂಪೂರ್ಣ ವಿವರ ಇಲ್ಲಿದೆ – Kannada News | What is Mekedatu Project Dispute? History, Name Origin and Current Status of Karnataka’s Controversial Dam Explained

ಮೇಕೆದಾಟು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 19: ಕಾವೇರಿ ನದಿ ನೀರು (Cauvery Water)  ಹಂಚಿಕೆ ವಿಚಾರದಲ್ಲಿ ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ನಡುವಿನ ಹಗ್ಗಜಗ್ಗಾಟ ಇಂದು ನಿನ್ನೆಯದಲ್ಲ. ಕಾವೇರಿ ವಿವಾದಕ್ಕೂ ಸುದೀರ್ಘ ಇತಿಹಾಸವಿದೆ. ಇದೀಗ ಅದರೊಂದಿಗೆ, ಕರ್ನಾಟಕದ ಮೇಕೆದಾಟು ಡ್ಯಾಂ (Mekedatu Dam Project) ಯೋಜನೆ ಸಹ ಸೇರಿಕೊಂಡಿದೆ. ತಮಿಳುನಾಡು ನೂತನ ಮುಖ್ಯಮಂತ್ರಿ ಸಿಎಂ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಮೇಕೆದಾಟು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಮತ್ತೊಂದೆಡೆ, ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡಿನ ಮರುಪರಿಶೀಲನಾ ಅರ್ಜಿ ವಜಾಗೊಂಡಿರುವುದರಿಂದ ಕರ್ನಾಟಕ ಸರ್ಕಾರವು ಯೋಜನೆಯ ಅನುಷ್ಠಾನಕ್ಕೆ ವೇಗ ನೀಡುವುದಾಗಿ ಹೇಳಿದೆ. ಮೇಕೆದಾಟು ಯೋಜನೆ ಎಂದರೇನು, ಅದರ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಗತಿಗಳೇನು ಎಂಬ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು

  • ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಜಲಾಶಯ.
  • ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಗುರಿ.
  • ತಮಿಳುನಾಡು ಸರ್ಕಾರದ ತೀವ್ರ ವಿರೋಧ.

ಮೇಕೆದಾಟು ಯೋಜನೆ ಎಂದರೇನು?

ಮೇಕೆದಾಟು ಯೋಜನೆ ಎಂದರೆ ಕಾವೇರಿ ನದಿ ಮತ್ತು ಅದರ ಉಪನದಿಯಾದ ಅರ್ಕಾವತಿ ನದಿಗಳು ಸಂಗಮವಾಗುವ ಕನಕಪುರ ತಾಲೂಕಿನ ಗಡಿಭಾಗದಲ್ಲಿ ಸುಮಾರು 9,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹುಪಯೋಗಿ ಜಲಾಶಯ ಯೋಜನೆಯಾಗಿದೆ. ಈ ಯೋಜನೆಯ ಒಟ್ಟು ಸಂಗ್ರಹಣಾ ಸಾಮರ್ಥ್ಯ 67.16 ಟಿಎಂಸಿ (TMC). ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ, ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ 4.75 ಟಿಎಂಸಿ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಮಾಡುವುದಾಗಿದೆ.

ಕರ್ನಾಟಕದ ವಾದದ ಪ್ರಕಾರ, ಮುಂಗಾರು ಮಳೆಯು ಹೆಚ್ಚಾದಾಗ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಇಲ್ಲಿ ಸಂಗ್ರಹಿಸಿ, ಕಷ್ಟದ ದಿನಗಳಲ್ಲಿ ತಮಿಳುನಾಡಿಗೆ ಕೂಡ ನಿಯಮಿತವಾಗಿ ನೀರು ಹರಿಸಲು ಇದು ನೆರವಾಗುತ್ತದೆ.

ಮೇಕೆದಾಟು ಯೋಜನೆಗೆ ಯಾಕೆ ಆ ಹೆಸರು ಬಂತು?

‘ಮೇಕೆದಾಟು’ ಎಂದರೆ ಕನ್ನಡದಲ್ಲಿ ‘ಮೇಕೆ ಜಿಗಿದು ದಾಟಬಲ್ಲ ಜಾಗ (Goat’s Leap)’ ಎಂದರ್ಥ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದಟ್ಟ ಅರಣ್ಯ ಪ್ರದೇಶದಲ್ಲಿ ಕಾವೇರಿ ನದಿಯು ಅತ್ಯಂತ ಕಿರಿದಾದ, ಆಳವಾದ ಕಲ್ಲಿನ ಕಂದರಗಳ ಮೂಲಕ ಹರಿಯುತ್ತದೆ. ಈ ಜಾಗ ತುಂಬ ಕಿರಿದಾಗಿದೆ. ಒಂದು ಮೇಕೆ ಜಿಗಿದು ದಾಟಬಲ್ಲ ಜಾಗ ಎಂಬರ್ಥದಲ್ಲಿ ಈ ಸುಂದರ ಪ್ರಕೃತಿ ತಾಣಕ್ಕೆ ‘ಮೇಕೆದಾಟು’ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇದೇ ಜಾಗದಲ್ಲಿ ಜಲಾಶಯ ನಿರ್ಮಿಸಲು ಉದ್ದೇಶಿಸಿರುವುದರಿಂದ ಯೋಜನೆಗೂ ಇದೇ ಹೆಸರನ್ನು ಇಡಲಾಗಿದೆ.

ಮೇಕೆದಾಟು ಯೋಜನೆ ಈಗ ಯಾವ ಹಂತದಲ್ಲಿದೆ?

ಕರ್ನಾಟಕ ಸರ್ಕಾರವು ಈಗಾಗಲೇ ಯೋಜನೆಯ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿದ್ದು, ಕೇಂದ್ರ ಜಲ ಆಯೋಗ (CWC) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ತಾಂತ್ರಿಕ ಅನುಮೋದನೆಗಾಗಿ ಕಾಯುತ್ತಿದೆ. ಪರಿಸರ ಮತ್ತು ಅರಣ್ಯ ಇಲಾಖೆಯ (MoEF) ಅಂತಿಮ ಹಸಿರು ನಿಶಾನೆ ಸಿಕ್ಕ ತಕ್ಷಣವೇ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಜ್ಜಾಗಿದೆ.

ಆದರೆ, ಯೋಜನೆಯಿಂದ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಭೂಮಿ ಮುಳುಗಡೆಯಾಗುವುದರಿಂದ ಪರಿಸರ ಮೌಲ್ಯಮಾಪನ ಪ್ರಕ್ರಿಯೆಗಳು ಪ್ರಸ್ತುತ ಪ್ರಗತಿಯಲ್ಲಿವೆ.

ಸುಪ್ರೀಂಕೋರ್ಟ್ ತೀರ್ಪು ಮತ್ತು ತಮಿಳುನಾಡು ಸರ್ಕಾರದ ಕ್ಯಾತೆ

ಇತ್ತೀಚಿನ ಬೆಳವಣಿಗೆಯಲ್ಲಿ, ಕರ್ನಾಟಕದ ಮೇಕೆದಾಟು ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ತಜ್ಞರ ಸಮಿತಿಯಾದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಈ ಡಿಪಿಆರ್ ಅನ್ನು ಪರಿಶೀಲಿಸುತ್ತಿರುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ಇತ್ತೀಚೆಗೆ ವಜಾಗೊಂಡಿದೆ. ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್ ಸರ್ಕಾರ ಈಗ ರಾಜಕೀಯ ಒತ್ತಡ ತಂತ್ರಕ್ಕೆ ಮುಂದಾಗಿದೆ. ತಮಿಳುನಾಡು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಅಲ್ಲಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಭಾಷಣದ ಮೂಲಕ, ‘ಕರ್ನಾಟಕದ ಮೇಕೆದಾಟು ಯೋಜನೆ ತಮಿಳುನಾಡು ರೈತರ ಹಿತಾಸಕ್ತಿಗೆ ಧಕ್ಕೆ ತರಲಿದ್ದು, ಇದನ್ನು ಯಾವುದೇ ಕರಾರಿಲ್ಲದೆ ತಡೆಯಲಾಗುವುದು’ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ಮತ್ತೊಂದೆಡೆ, ತಮಿಳುನಾಡಿನ ವಾದಕ್ಕೆ ತಕ್ಕ ತಿರುಗೇಟು ನೀಡಿರುವ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್, ಕೋರ್ಟ್ ಆದೇಶದಂತೆ ತಮಿಳುನಾಡಿನ ಪಾಲಿನ ನೀರನ್ನು ಬಿಡಲು ನಾವು ಬದ್ಧರಾಗಿದ್ದು, ಬೆಂಗಳೂರಿನ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ನಿರ್ಮಿಸುವುದು ನಮ್ಮ ಹಕ್ಕು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:49 pm, Fri, 19 June 26

Source link

‘ರಾಖ್’ ವೆಬ್ ಸರಣಿಯಲ್ಲಿ ಗಮನ ಸೆಳೆದ ಸುಮನ್; ಯಾರು ಈ ದಿವ್ಯಾ ಶರ್ಮಾ? – Kannada News | Raakh Web Series: Divya Sharma’s Stardom Rises as ‘Suman’ on Amazon Prime

ಸೋನಾಲಿ ಬೇಂದ್ರೆ, ಅಲಿ ಫಜಲ್, ರಾಕೇಶ್ ಬೇಡಿ ಮತ್ತು ಆಮಿರ್ ಬಶೀರ್ ನಟಿಸಿರುವ ‘ರಾಖ್’ (Raakh Series) ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯು ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್ ಆದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಭಾರತೀಯ ಇತಿಹಾಸದಲ್ಲೇ ಅತ್ಯಂತ ಕುಖ್ಯಾತ ಎನಿಸಿಕೊಂಡಿದ್ದ ರಂಗ-ಬಿಲ್ಲಾ ಅಪರಾಧ ಪ್ರಕರಣವನ್ನು ಆಧರಿಸಿ ಈ ಸರಣಿಯ ಕಥೆಯನ್ನು ರೂಪಿಸಲಾಗಿದೆ. ಇಬ್ಬರು ಮಕ್ಕಳ ಅಪಹರಣ ಮತ್ತು ಕೊಲೆಯ ರೋಮಾಂಚಕ ಹಾಗೂ ನೈಜ ಘಟನೆಗಳ ಸುತ್ತ ಸಾಗುವ ಈ ಕಥೆಯಲ್ಲಿ, 16 ವರ್ಷದ ಬಾಲಕಿ ‘ಸುಮನ್ ಅರೋರಾ’ ಎಂಬ ಪಾತ್ರವು ಇಡೀ ಸರಣಿಯಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ವೆಬ್ ಸರಣಿಯಲ್ಲಿ ಅತ್ಯಂತ ಮಹತ್ವದ ಎನಿಸಿರುವ ಸುಮನ್ ಪಾತ್ರವನ್ನು ನಟಿ ದಿವ್ಯಾ ಶರ್ಮಾ ಅವರು ನಿರ್ವಹಿಸಿದ್ದಾರೆ. ಮೂಲತಃ ಮುಂಬೈನವರಾದ ದಿವ್ಯಾ ಶರ್ಮಾ ಅವರು ಈ ಹಿಂದೆ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಇದೀಗ ಬಿಡುಗಡೆಯಾಗಿರುವ ‘ರಾಖ್’ ವೆಬ್ ಸರಣಿಯ ಅಪಾರ ಯಶಸ್ಸು ಮತ್ತು ಅದರಲ್ಲಿನ ಅವರ ಅದ್ಭುತ ನಟನೆಯಿಂದಾಗಿ, ದಿವ್ಯಾ ಅವರ ಜನಪ್ರಿಯತೆ ಚಿತ್ರರಂಗದಲ್ಲಿ ಮತ್ತು ಪ್ರೇಕ್ಷಕರ ವಲಯದಲ್ಲಿ ಮತ್ತಷ್ಟು ಹೆಚ್ಚಾಗುತ್ತಿದೆ.

ನಟಿ ದಿವ್ಯಾ ಶರ್ಮಾ ಕೇವಲ ತಮ್ಮ ನಟನಾ ಕೌಶಲ್ಯದಿಂದ ಮಾತ್ರವಲ್ಲದೆ, ತಮ್ಮ ಅಪ್ರತಿಮ ಸೌಂದರ್ಯದಿಂದಲೂ ವೀಕ್ಷಕರನ್ನು ಸೆರೆಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು, ‘ಧುರಂಧರ್’ ಚಿತ್ರದ ಖ್ಯಾತ ನಟಿ ಸಾರಾ ಅರ್ಜುನ್ ಅವರ ಸೌಂದರ್ಯವನ್ನೂ ಕೂಡ ದಿವ್ಯಾ ಮೀರಿಸುತ್ತಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕಮೆಂಟ್ ಮಾಡುತ್ತಿದ್ದಾರೆ. ದಿವ್ಯಾ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಂತಹ ಅನೇಕ ಸುಂದರ ಮತ್ತು ಸ್ಟೈಲಿಶ್ ಫೋಟೋಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಒಟಿಟಿಯಲ್ಲಿ ಸದ್ದು ಮಾಡುತ್ತಿದೆ ‘ರಾಖ್’ ವೆಬ್ ಸರಣಿ; ಸರಣಿ ನೋಡಿದ್ರೆ ಮೈ ನಡುಗುತ್ತೆ

ದಿವ್ಯಾ ಶರ್ಮಾ ಅವರು ಕೇವಲ ‘ರಾಖ್’ ವೆಬ್ ಸರಣಿಯಲ್ಲಿ ಮಾತ್ರವಲ್ಲದೆ, ಈ ಹಿಂದೆ ಪ್ರಸಾರವಾಗಿದ್ದ ‘ಗ್ರಾಮ ಚಿಕಿತ್ಸಾಲಯ’ ಎಂಬ ಸರಣಿಯಲ್ಲಿಯೂ ನಟಿಸಿದ್ದರು. ಆ ಸರಣಿಯಲ್ಲಿ ಅವರು ನಿರ್ವಹಿಸಿದ್ದ ‘ಜೂಹಿ’ ಎಂಬ ಪಾತ್ರವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ‘ರಾಖ್’ ಸರಣಿಯ ದೊಡ್ಡ ಯಶಸ್ಸಿನ ನಂತರ, ಮುಂಬರುವ ದಿನಗಳಲ್ಲಿ ದಿವ್ಯಾ ಅವರಿಗೆ ಚಿತ್ರರಂಗದಿಂದ ಇನ್ನೂ ಹತ್ತಾರು ಅತ್ಯುತ್ತಮ ಮತ್ತು ದೊಡ್ಡ ಮಟ್ಟದ ಸಿನಿಮಾಗಳ ಆಫರ್‌ಗಳು ಹುಡುಕಿಕೊಂಡು ಬರುತ್ತವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆಗಳನ್ನು ಬಂದ್​​ ಮಾಡಿ ವಿಭಿನ್ನ ಪ್ರತಿಭಟನೆ – Kannada News | Upper Caste Families Block Dalit Land Access for Two Years in Yadgiri

ಯಾದಗಿರಿ, ಜೂನ್​​ 19: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗೂರನೂರು ಗ್ರಾಮದಲ್ಲಿ ಮೇಲ್ವರ್ಗದವರಿಂದ ದಲಿತರ ಮೇಲೆ ದಬ್ಬಾಳಿಕೆ ಆರೋಪ ಕೇಳಿಬಂದಿದೆ. ದಲಿತ ಕುಟುಂಬಗಳು ಜಮೀನುಗಳಿಗೆ ಹೋಗುವ ದಾರಿಯನ್ನು ಮೇಲ್ವರ್ಗದ ಎರಡು ಕುಟುಂಬಗಳು ಬಂದ್ ಮಾಡಿದ್ದು, ಕಳೆದ ಎರಡು ವರ್ಷಗಳಿಂದ ಇದೇ ಸ್ಥಿತಿ ಇಲ್ಲಿದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಲಾಗಿದ್ದು, ಇದರಿಂದ ಬೇಸತ್ತ ಗ್ರಾಮಸ್ಥರು, ದಲಿತರ ಜೊತೆ ಕೈಜೋಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ತಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದು, ರಸ್ತೆಗಳು ಬಂದ್ ಆಗಿರುವ ಕಾರಣ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಜಮೀನುಗಳ ಮೂಲಕ ಸಂಚರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Job Fair: ಜೂ. 22ಕ್ಕೆ ಮಂಗಳೂರಿನಲ್ಲಿ ಉದ್ಯೋಗ ಮತ್ತು ಅಪ್ರೆಂಟಿಸ್‌ಶಿಪ್ ಮೇಳ; ಐಟಿಐ ಅಭ್ಯರ್ಥಿಗಳಿಗೆ ಸುವರ್ಣಾವಕಾಶ! – Kannada News | Dakshina Kannada Job and Apprenticeship Fair: ITI Graduates, June 22nd Mangaluru Opportunity

ಮಂಗಳೂರಿನಲ್ಲಿ ಉದ್ಯೋಗ ಮೇಳImage Credit source: Pinterest

ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​​ ಇಲ್ಲಿದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶನದಂತೆ, ಮಂಗಳೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ವತಿಯಿಂದ ಇದೇ ಜೂನ್ 22ರಂದು ಬೃಹತ್ ಉದ್ಯೋಗ ಹಾಗೂ ಅಪ್ರೆಂಟಿಸ್‌ಶಿಪ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಮೇಳವು ಬೆಳಗ್ಗೆ 10 ಗಂಟೆಯಿಂದ ಮಂಗಳೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಆವರಣದಲ್ಲಿ ಜರುಗಲಿದೆ.

ವಿವಿಧ ಉದ್ಯಮ ಸಂಸ್ಥೆಗಳಿಂದ ನೇಮಕಾತಿ ಪ್ರಕ್ರಿಯೆ:

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಹಲವಾರು ಪ್ರಮುಖ ಉದ್ಯಮ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ. ಆಯಾ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಹಾಗೂ ಅಪ್ರೆಂಟಿಶಿಪ್ ತರಬೇತಿ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅಥವಾ ತರಬೇತಿ ಪಡೆಯಲು ಬಯಸುವ ಸ್ಥಳೀಯ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಐಟಿಐ ಉತ್ತೀರ್ಣ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ:

ಈ ಉದ್ಯೋಗ ಮೇಳದಲ್ಲಿ ಐಟಿಐ (ITI) ಕೋರ್ಸ್ ಮುಗಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಇದರೊಂದಿಗೆ ಪ್ರಸ್ತುತ ಐಟಿಐನಲ್ಲಿ ಅಂತಿಮ ವರ್ಷದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೂ ಸಹ ಮೇಳದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅರ್ಹ ಆಸಕ್ತರು ತಮ್ಮ ಎಲ್ಲಾ ಅಗತ್ಯ ಮೂಲ ದಾಖಲಾತಿಗಳು ಹಾಗೂ ಜೆರಾಕ್ಸ್ ಪ್ರತಿಗಳೊಂದಿಗೆ ಮೇಳಕ್ಕೆ ಹಾಜರಾಗಬೇಕಿದೆ.

ಪ್ರಾಚಾರ್ಯರಿಂದ ಸದುಪಯೋಗ ಪಡಿಸಿಕೊಳ್ಳಲು ಕರೆ:

ಅರ್ಹ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯೋಗ ಮತ್ತು ಅಪ್ರೆಂಟಿಶಿಪ್ ಮೇಳದಲ್ಲಿ ಭಾಗವಹಿಸಿ, ಈ ಉದ್ಯೋಗಾವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ಪ್ರಾಚಾರ್ಯರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ. ಸ್ಥಳೀಯ ಯುವಜನತೆಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ಮೇಳ ಮಹತ್ವದ ಪಾತ್ರ ವಹಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:59 pm, Fri, 19 June 26

Source link

Video: ಹೆತ್ತವರನ್ನು ತಾನು ಕೆಲಸ ಮಾಡುವ ಅಮೆಜಾನ್ ಆಫೀಸಿಗೆ ಕರೆತಂದ ಉದ್ಯೋಗಿ – Kannada News | Hyderabad: An employee brought his parents to the Hyderabad Amazon office where she works.

ಹೈದರಾಬಾದ್‌, ಜೂನ್ 19: ಹೊಟ್ಟೆ ಬಟ್ಟೆ ಕಟ್ಟಿ ನಾಲ್ಕು ಅಕ್ಷರ ಓದಿಸಿ ತಮ್ಮ ಕಾಲು ಮೇಲೆ ತಾವು ನಿಲ್ಲುವಂತೆ ಮಾಡಿದ ಹೆತ್ತವರಿಗೆ ತಾವೇನು ಮಾಡಿದರೂ ಕಡಿಮೆಯೇ. ಓದು ಮುಗಿಸಿ ಉದ್ಯೋಗ (job) ಗಿಟ್ಟಿಸಿಕೊಳ್ಳುತ್ತಿದ್ದಂತೆ ತನ್ನ ತಂದೆ ತಾಯಿಯನ್ನು ಊರು ಸುತ್ತಿಸಬೇಕು, ಆಫೀಸಿಗೆ ಒಮ್ಮೆಯಾದ್ರು ಕರೆದುಕೊಂಡು ಹೋಗ್ಬೇಕು. ಇಂತಹ ಸಾಕಷ್ಟು ಆಸೆ ಕನಸುಗಳಿರುತ್ತವೆ. ಹೌದು, ಹೈದರಾಬಾದ್‌ನಲ್ಲಿರುವ (Hyderabad) ಅಮೆಜಾನ್ ಆಫೀಸಿಗೆ ಮಗಳು ತನ್ನ ಹೆತ್ತವರನ್ನು ಕರೆದುಕೊಂಡು ಹೋಗಿದ್ದಾರೆ. ಮಗಳು ಕೆಲಸ ಮಾಡುವ ಜಾಗ ನೋಡಿ ಹೆತ್ತವರು ಹೆಮ್ಮೆ ಪಟ್ಟುಕೊಂಡಿದ್ದಾರೆ. ಈ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಸದ್ಯ ವೈರಲ್ ಆಗಿದೆ.

ಶ್ರೇಯಾಶಿ (Shreyashiii) ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈ ಪಯಣದಲ್ಲಿ ಇಲ್ಲಿಗೆ ತಲುಪಿದ್ದಷ್ಟೇ ಸಂತೋಷದ ಭಾಗವಲ್ಲ. ಪೋಷಕರ ಕಣ್ಣಲ್ಲಿ ಹೆಮ್ಮೆಯನ್ನು ನೋಡಿದಾಗ, ಪಟ್ಟ ಶ್ರಮವೆಲ್ಲಾ ಸಾರ್ಥಕ ಎನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರತಿಯೊಬ್ಬ ಮಗಳಿಗೂ ತನ್ನ ಕೆಲಸದ ಜಾಗವನ್ನು ಕುಟುಂಬಕ್ಕೆ ತೋರಿಸಬೇಕು ಎಂಬ ಕನಸಿರುತ್ತದೆ ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ತಂದೆ ತಾಯಿಗೆ ತಾನು ಕೆಲಸ ಮಾಡುವ ಅಮೆಜಾನ್ ಆಫೀಸನ್ನು ತೋರಿಸುವುದನ್ನು ಕಾಣಬಹುದು. ಕ್ಯಾಂಪಸ್ ನೋಡಿ ಪೋಷಕರ ಮುಖದಲ್ಲಿ ನಗು ಮೂಡಿದೆ. ಕಂಪನಿಯ ಕ್ಯಾಫೆಟೇರಿಯಾದಲ್ಲಿ ಹೆತ್ತವರೊಂದಿಗೆ ಉದ್ಯೋಗಿ ಊಟ ಮಾಡಿರುವ ಕ್ಷಣಗಳಿರುವುದನ್ನು ನೋಡಬಹುದು.

ಇದನ್ನೂ ಓದಿ: 25 ಸಾವಿರ ರೂ ಸಂಬಳದ ಉದ್ಯೋಗ ತೊರೆದು ಕ್ಯಾಬ್ ಚಾಲಕನಾದ ಯುವಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದಕ್ಕಿಂತ ದೊಡ್ಡ ಸಾಧನೆ ಇನ್ನೇನಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅವಕಾಶ ಪಡೆದ ನೀವೇ ಧನ್ಯರು, ಈ ವಿಡಿಯೋ ನೋಡಿ ಖುಷಿಯಾಯ್ತು ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರಿಗೆ ಹೆಮ್ಮೆ ಇದೆ, ಈ ದೃಶ್ಯ ನೋಡಿ ಕಣ್ಣೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ – Kannada News | CM D.K. Shivakumar and Wife Offer Prayers at Tirupati Timmappa Temple

ತಿರುಪತಿ, ಜೂ.19: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ತಿರುಪತಿಗೆ ಭೇಟಿ ನೀಡಿ, ಬೆಳ್ಳಂಬೆಳಿಗ್ಗೆ ತಿಮ್ಮಪ್ಪನ ದರ್ಶನ ಪಡೆದರು. ನೂತನ ಸಚಿವ ಸಂಪುಟದ ವಿಸ್ತರಣೆಯ ನಂತರ ಡಿ.ಕೆ. ಶಿವಕುಮಾರ್ ಅವರ ಈ ಭೇಟಿಯು ಮಹತ್ವ ಪಡೆದುಕೊಂಡಿದೆ. ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು, ಮುಂಜಾನೆಯ ದರ್ಶನದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿ.ಕೆ. ಶಿವಕುಮಾರ್ ಅವರ ಮೊದಲ ತಿರುಪತಿ ಭೇಟಿ ಇದಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೆಂಕಿ ಚಿತ್ರಕ್ಕೆ ಇಬ್ಬರು ಸ್ಟಾರ್ ಹೀರೋಯಿನ್ಸ್; ಮುಹೂರ್ತದ ಕಲರ್​​ಫುಲ್ ಫೋಟೋಸ್ – Kannada News | Venkatesh Anil Ravipudi Film Launched: Grand Pooja for Sankranti Release

ಖ್ಯಾತ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಅವರು ಚಿತ್ರದ ಅಧಿಕೃತ ಚಿತ್ರಕಥೆಯನ್ನು ತಂಡಕ್ಕೆ ಹಸ್ತಾಂತರಿಸಿದರು. ಮುಹೂರ್ತದ ಮೊದಲ ದೃಶ್ಯಕ್ಕೆ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಕ್ಲ್ಯಾಪ್ ಮಾಡಿದರು. ಈ ಸಿನಿಮಾದಲ್ಲಿ ಕೃತಿ ಶೆಟ್ಟಿ, ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

Source link