All posts by nagaraj11081993

Mars-Saturn Conjunction: ಮೀನ ರಾಶಿಯಲ್ಲಿ ಮಂಗಳ-ಶನಿ ಸಂಯೋಗ; ಈ ಯೋಗದಿಂದ ಹಲವೆಡೆ ಆತಂಕದ ಭೀತಿ

Mars-Saturn Conjunction: ಮೀನ ರಾಶಿಯಲ್ಲಿ ಮಂಗಳ-ಶನಿ ಸಂಯೋಗ; ಈ ಯೋಗದಿಂದ ಹಲವೆಡೆ ಆತಂಕದ ಭೀತಿ

ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಈ ಯೋಗವು ಏಪ್ರಿಲ್ 30ರಿಂದ ಮೇ 10 ರವೆಗೆ ಇರಲಿದ್ದು ಅನೇಕ ವಿಚಾರಗಳು ಜಾಗತಿಕ ಮಟ್ಟದಲ್ಲಿ ನಡೆಯಲಿವೆ. ಜನರಲ್ಲಿ ಆತಂಕ, ದೇಶ ವಿದೇಶಗಳಲ್ಲಿ ಉನ್ಮಾದದ ಸ್ಥಿತಿಯೂ ಎದುರಾಗಬಹುದು. ಮೀನದಲ್ಲಿರುವಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ.

​ಜಾಗತಿಕ ಮತ್ತು ಸಾಮಾಜಿಕ ಪ್ರಭಾವಗಳು:

​ಮೀನ ರಾಶಿಯು ಸಮುದ್ರ ಮತ್ತು ಜಲಮೂಲಗಳನ್ನು ಪ್ರತಿನಿಧಿಸುವುದರಿಂದ, ಈ ಯುತಿಯು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತದೆ.

  • ​ನೈಸರ್ಗಿಕ ಬದಲಾವಣೆ: ಸಮುದ್ರದಲ್ಲಿ ಚಂಡಮಾರುತ, ಸುನಾಮಿ ಅಥವಾ ಅನಿರೀಕ್ಷಿತ ಮಳೆ ಹೆಚ್ಚಾಗಬಹುದು. ನೌಕಾಪಡೆ ಅಥವಾ ಜಲಸಾರಿಗೆ ಕ್ಷೇತ್ರದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಬಹುದು.
  • ರಾಜಕೀಯ ಅಸ್ಥಿರತೆ: ಗಡಿ ವಿವಾದಗಳು ತಾರಕಕ್ಕೇರಬಹುದು. ವಿಶೇಷವಾಗಿ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ದೇಶಗಳಲ್ಲಿ ಆಂತರಿಕ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.
  • ​ಔಷಧೀಯ ಕ್ಷೇತ್ರ: ಹೊಸ ರೋಗಗಳ ಉಗಮ ಅಥವಾ ಇರುವ ರೋಗಗಳಿಗೆ ಹೊಸ ಔಷಧಗಳ ಸಂಶೋಧನೆಯಲ್ಲಿ ಈ ಗ್ರಹಗತಿಗಳು ವೇಗ ನೀಡುತ್ತವೆ.

​​ಲಾಭದಾಯಕ ಸ್ಥಿತಿ:

  • ​ಆರ್ಥಿಕ ಸ್ಥಿರತೆ: ಇವರಿಗೆ ಅನಿರೀಕ್ಷಿತವಾಗಿ ಸಿಗಬೇಕಾದ ಹಣಕಾಸು ಸೌಲಭ್ಯಗಳು ದೊರೆಯಲಿವೆ. ಹಳೆಯ ಆಸ್ತಿ ವಿವಾದಗಳು ಇವರ ಪರವಾಗಿ ತೀರ್ಪು ಬರಬಹುದು.
  • ​ಧೈರ್ಯ ಮತ್ತು ಸಾಹಸ: ಮಂಗಳನ ಪ್ರಭಾವದಿಂದ ಹೊಸ ಉದ್ಯಮ ಆರಂಭಿಸಲು ಬೇಕಾದ ಧೈರ್ಯ ಸಿಗುತ್ತದೆ, ಶನಿಯು ಅದಕ್ಕೆ ದೀರ್ಘಕಾಲದ ಭದ್ರತೆಯನ್ನು ನೀಡುತ್ತಾನೆ.

​ಸವಾಲಿನ ಸ್ಥಿತಿ

  • ಮಾನಸಿಕ ದ್ವಂದ್ವ: ಮಾಡಬೇಕೋ ಬೇಡವೋ ಎಂಬ ಗೊಂದಲ ಇವರನ್ನು ಕಾಡಬಹುದು. ಶನಿಯು ತಡೆಹಿಡಿದರೆ ಮಂಗಳನು ತಳ್ಳುತ್ತಾನೆ, ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.
  • ಅಪಘಾತದ ಭಯ: ವಾಹನ ಚಾಲನೆ ಮಾಡುವಾಗ ಅತೀವ ಜಾಗರೂಕತೆ ಇರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಕಾಯಿಲೆಗಳು ಬಾಧಿಸಬಹುದು.
  • ​ಸಂಬಂಧಗಳಲ್ಲಿ ಬಿರುಕು: ಕುಟುಂಬದಲ್ಲಿ ಹಿರಿಯರೊಂದಿಗೆ ವಾಗ್ವಾದ ಉಂಟಾಗಬಹುದು. ಮಾತಿನ ಮೇಲೆ ನಿಗಾ ಇಡುವುದು ಅನಿವಾರ್ಯ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ

  • ​ಕಬ್ಬಿಣ ಮತ್ತು ಯಂತ್ರೋಪಕರಣ: ಈ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಜೊತೆಗೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ.
  • ​ರಿಯಲ್ ಎಸ್ಟೇಟ್: ಭೂಮಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಯಲ್ಲಿ ಕಾನೂನು ತೊಡಕುಗಳು ಎದುರಾಗಬಹುದು. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ.
  • ​ಷೇರು ಮಾರುಕಟ್ಟೆ: ಪೆಟ್ರೋಲಿಯಂ, ರಾಸಾಯನಿಕ ಮತ್ತು ರಕ್ಷಣಾ ವಲಯದ ಷೇರುಗಳಲ್ಲಿ ಏರಿಳಿತ ಕಂಡುಬರಬಹುದು.

​ಆಧ್ಯಾತ್ಮಿಕ ಮತ್ತು ಮಾನಸಿಕ ಪರಿಣಾಮ

ಮೀನ ರಾಶಿಯು ಆಧ್ಯಾತ್ಮದ ನೆಲೆ. ಇಲ್ಲಿ ಈ ಎರಡು ಪಾಪ ಗ್ರಹಗಳ ಭೇಟಿಯು ವ್ಯಕ್ತಿಯಲ್ಲಿ ವೈರಾಗ್ಯ ಅಥವಾ ತೀವ್ರ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರವಿರಲು ಇದು ಸುಸಮಯ. ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮಂಗಳನ ಆವೇಶವನ್ನು ಶಾಂತಗೊಳಿಸಿ ಶನಿಯ ಸ್ಥಿರತೆಯನ್ನು ಪಡೆಯಬಹುದು.

​ಪರಿಣಾಮಕಾರಿ ಪರಿಹಾರಗಳು ​ಸುಬ್ರಹ್ಮಣ್ಯ ಆರಾಧನೆ: ಮಂಗಳನ ದೋಷ ನಿವಾರಣೆಗೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಅಥವಾ ಷಷ್ಠಿ ಪಾರಾಯಣ ಮಾಡುವುದು ಶ್ರೇಯಸ್ಕರ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶುಭ ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇಹದಲ್ಲಿ ವಿಟಮಿನ್ ಎ ಕೊರತೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನಿರ್ಲಕ್ಷಿಸಿದರೆ ಏನಾಗುತ್ತೆ?

ವಿಟಮಿನ್ ಎ (Vitamin A) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ದೇಹವನ್ನು ಆರೋಗ್ಯಕರವಾಗಿಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೂ ಮಿಗಿಲಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಎ ಕೊರತೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಪದೇಪದೇ ಸೋಂಕುಗಳು ಮತ್ತು ಚರ್ಮ ಒಣಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯುಳ್ಳವರಲ್ಲಿ ವಿಟಮಿನ್ ಎ ಕೊರತೆಯ ಅಪಾಯ ಹೆಚ್ಚಾಗಿರುತ್ತದೆ. ಸಮತೋಲನಯುತ ಆಹಾರದ ಕೊರತೆ, ಪೋಷಕಾಂಶಗಳ ಅಭಾವ ಮತ್ತು ಅಸ್ವಸ್ಥ ಜೀವನಶೈಲಿ ಇದರ ಪ್ರಮುಖ ಕಾರಣಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ವಿಟಮಿನ್ ಎ ಕೊರತೆಯ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ವಿಟಮಿನ್ ಎ ಕೊರತೆಯ ಲಕ್ಷಣಗಳು:

  • ರಾತ್ರಿ ವೇಳೆ ಸ್ಪಷ್ಟವಾಗಿ ಕಾಣಿಸದಿರುವುದು ಅಥವಾ ದೃಷ್ಟಿ ದುರ್ಬಲವಾಗುವುದು
  • ಕಣ್ಣುಗಳು ಒಣಗುವುದು ಅಥವಾ ಉರಿಯೂತ
  • ಚರ್ಮ ಒಣಗುವುದು
  • ತುಟಿಗಳು ಬಿರುಕು ಬೀಡುವುದು
  • ಕೂದಲು ದುರ್ಬಲವಾಗುವುದು
  • ಪದೇಪದೇ ಜ್ವರ, ಶೀತ ಅಥವಾ ಸೋಂಕುಗಳು ಕಂಡುಬರುವುದು
  • ಗಾಯಗಳು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು

ಇದನ್ನೂ ಓದಿ: ಮಾವಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ವಿಟಮಿನ್ ಎ ಕೊರತೆಯನ್ನು ತಡೆಗಟ್ಟಲು ಸಲಹೆಗಳು?

ಸಾಮಾನ್ಯವಾಗಿ ವಿಟಮಿನ್ ಎ ಕೊರತೆಯನ್ನು ನಿವಾರಿಸಲು ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಕ್ಯಾರೆಟ್, ಪಾಲಕ್ ಮತ್ತು ಹಸಿರು ತರಕಾರಿಗಳು ವಿಟಮಿನ್ ಎ ಯ ಉತ್ತಮ ಮೂಲಗಳಾಗಿವೆ. ಇದರ ಜೊತೆಗೆ ಹಾಲು, ಮೊಟ್ಟೆ ಮತ್ತು ಮೀನು ಕೂಡ ಉಪಯುಕ್ತವಾಗಿವೆ. ಪ್ರತಿದಿನ ಸಮತೋಲನಯುತ ಆಹಾರವನ್ನು ಸೇವಿಸುವುದು ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇರಿಸಿಕೊಳ್ಳುವುದರಿಂದ ಈ ಕೊರತೆಯನ್ನು ತಡೆಯಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆಯೊಂದಿಗೆ ಪೂರಕಗಳನ್ನು (ಸಪ್ಲಿಮೆಂಟ್ಸ್) ಕೂಡ ಬಳಸಬಹುದು.

ಸರಿಯಾದ ಆಹಾರ ಮಾತ್ರವಲ್ಲ, ಆರೋಗ್ಯಕರ ಜೀವನಶೈಲಿಯೂ ಅತ್ಯಂತ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಜಂಕ್ ಫುಡ್‌ಗಳಿಂದ ದೂರವಿರುವುದು ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಸರಿಯಾದ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೀರ್ಘಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಕಲೇಶಪುರ: ಅರಣ್ಯ ಇಲಾಖೆ ಸಿಬ್ಬಂದಿ ಕಂಡು ರೌದ್ರಾವತಾರ ತಾಳಿ ಬೈಕ್​ಗಳ ಮೆಟ್ಟಿ ಪುಡಿ ಮಾಡಿದ ಕಾಡಾನೆ! ವಿಡಿಯೋ ನೋಡಿ

ಹಾಸನ, ಏಪ್ರಿಲ್ 1: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮತ್ತೂರು ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ಮಾಡಿದೆ. ಈ ವೇಳೆ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಟಿಎಫ್ ಸಿಬ್ಬಂದಿಯಾದ ಪ್ರಸನ್ನ, ಯುವರಾಜ್ ಮತ್ತು ಧನಂಜಯ ಮತ್ತೂರು ಗ್ರಾಮದ ಬಳಿ ಕಾಡಾನೆಗಳ ಮೇಲೆ ನಿಗಾ ಇರಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಆನೆಯೊಂದು ಇವರತ್ತ ನುಗ್ಗಿ ಬಂದಿದೆ. ಆನೆ ದಾಳಿ ಮಾಡುತ್ತಿದ್ದಂತೆ ಗಾಬರಿಗೊಂಡ ಸಿಬ್ಬಂದಿ ತಮ್ಮ ಬೈಕ್‌ಗಳನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸಿಬ್ಬಂದಿ ಹೋದ ನಂತರ ಆನೆಯು ಅಲ್ಲಿದ್ದ ಬೈಕ್‌ಗಳನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.

ಈ ಘಟನೆಯಿಂದ ರೊಚ್ಚಿಗೆದ್ದಿರುವ ಸ್ಥಳೀಯರು, ಕಾಡಾನೆಗಳನ್ನು ಓಡಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗೇ ಸರಿಯಾದ ರಕ್ಷಣೆ ಇಲ್ಲದಂತಾಗಿದೆ. ಇನ್ನು ಸಾಮಾನ್ಯ ಜನರ ಕಥೆ ಏನು? ಎಂದು ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಡೌಟ್ ಕೇಳೋ ನೆಪದಲ್ಲಿ ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವಿಡಿಯೋ ಫುಲ್ ವೈರಲ್

ತಮಿಳುನಾಡು: ಕಛೇರಿಯಲ್ಲೇ ಡೌಟ್​ ಕೇಳೋ ನೆಪದಲ್ಲಿ ಬಂದು ಮಹಿಳಾ ಉದ್ಯೋಗಿಗೆ ತುಟಿಗೆ ಚುಂಬಿಸಲು ಮುಂದಾದ ಘಟನೆ ತಮಿಳುನಾಡಿದ ಕೊಯಮತ್ತೂರಿನಲ್ಲಿ ನಡೆದಿದೆ. ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. @rameshofficial0 ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಮಹಿಳೆ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಪುರುಷ ಸಹೋದ್ಯೋಗಿ ಕಂಪ್ಯೂಟರ್‌ನಲ್ಲಿ ಏನೋ ತೋರಿಸುತ್ತಾ ಏಕಾಏಕಿ ಆಕೆಯ ತುಟಿಗೆ ಚುಂಬಿಸಲು ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

 

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಬೆಂಗಳೂರು, (ಏಪ್ರಿಲ್ 01): ರಾಜ್ಯದಲ್ಲಿ (Karnataka) ಇಂದಿನಿಂದ ಜನಗಣತಿ (Census) ಆರಂಭಗೊಂಡಿದ್ದು, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನ ಗಣತಿ ನಡೆಯಲಿದ್ದು, ಇಂದಿನಿಂದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಏ.1ರಿಂದ ಏ.15ರವರೆಗೂ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ನಂತರ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಎರಡನೇ ಹಂತವಾಗಿ ಏ.16ರಿಂದ ಮೇ 15ರ ಅವಧಿಯಲ್ಲಿ ಗಣತಿದಾರರು ಮನೆ – ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ. ಸ್ವಯಂ ಗಣತಿಯಲ್ಲಿ ಸ್ವತಃವಾಗಿ ಜನರೇ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಗಣತಿಯ ವೆಬ್ ಪೋರ್ಟಲ್‌ನಲ್ಲಿ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಮನೆಯ ವಿವರಗಳನ್ನ ದಾಖಲಿಸಬಹುದು. ನೋಂದಾಣಿ ನಂತರ ಸ್ವಯಂಗಣತಿಯ ಐಡಿಯನ್ನ ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು. ಇನ್ನು ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು, ಏನೆಲ್ಲಾ ಮಾಡಬೇಕು ಎನ್ನುವುದನ್ನು ವಿವರಿಸಿದ್ದಾರೆ ಕೇಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ ನೀಡಿದ ಕಿಡಿಗೇಡಿಗಳು; ಎಲ್ಲಿ ಹೋಯ್ತು ಪೊಲೀಸರ ಭಯ?

ಸೆಂಧ್ವಾ, ಏ.1: ಮಧ್ಯಪ್ರದೇಶದ ಸೆಂಧ್ವಾ ಜಿಲ್ಲೆಯ ಜಾತ್ರೆಯೊಂದರಲ್ಲಿ ಕೆಲವು ಕಿಡಿಗೇಡಿಗಳು ಯುವತಿಯರಿಗೆ ಬಹಿರಂಗವಾಗಿ ಕಿರುಕುಳ ನೀಡುತ್ತಿರುವ ಭಯಾನಕ ಘಟನೆ ನಡೆದಿದೆ. ಯಾವುದೇ ಭಯವಿಲ್ಲದೆ ಸಾರ್ವಜನಿಕವಾಗಿ ಯುವತಿಯರನ್ನು ಹಿಂಬಾಲಿಸುವುದು, ಅವರನ್ನು ಅಪ್ಪಿಕೊಳ್ಳಲು ಪ್ರಯತ್ನಿಸುವುದು ಮತ್ತು ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆಯ ವೀಡಿಯೋ ಎಕ್ಸ್ (X) ನಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಧ್ಯಪ್ರದೇಶ ಪೊಲೀಸರನ್ನು (@MPPoliceDeptt) ಟ್ಯಾಗ್ ಮಾಡಿ ಈ “ಛಪ್ರಿ” (Chapris) ಕಿಡಿಗೇಡಿಗಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ಇಂತಹ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿಗಳ ಪ್ರಕಾರ, ಸ್ಥಳೀಯ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ವೀಡಿಯೋ ಆಧರಿಸಿ ಕಿಡಿಗೇಡಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ಜಾತ್ರಾ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುದ್ಧದಿಂದ ವೈದ್ಯಕೀಯ ಕ್ಷೇತ್ರಕ್ಕೂ ಹೊಡೆತ: ರಾಜ್ಯದ ಅತಿದೊಡ್ಡ ಸಿರಿಂಜ್ ಉತ್ಪಾದನಾ ಘಟಕ ಸ್ಥಗಿತ ಆತಂಕ

ಹುಬ್ಬಳ್ಳಿ, ಏಪ್ರಿಲ್​ 01: ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ದದಿಂದಾಗಿ ಈಗಾಗಲೇ ಕಮರ್ಷಿಯಲ್ ಸಿಲಿಂಡರ್ ಅಭಾವ ಉಂಟಾಗಿದೆ. ಆಮದು, ರಫ್ತು ಮೇಲೆ ಬೀರಿದ ಪರಿಣಾಮದಿಂದ ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗಿವೆ. ಇದೇ ರೀತಿ ಯುದ್ಧ ಮುಂದವರಿದರೆ ವೈದ್ಯಕೀಯ (Medical) ವಸ್ತುಗಳಿಗೆ ಕೂಡ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುವ ಇಂಜೆಕ್ಷನ್ ಸಿರಿಂಜ್, ಐವಿ ಕೆನಾಲ್ ಸೇರಿದಂತೆ ಇನ್ನಿತರ ವಸ್ತುಗಳ ಉತ್ಫಾದನೆಗೆ ಕಚ್ಚಾವಸ್ತುವಿನ ಕೊರತೆ ಆರಂಭವಾಗಿದೆ. ಬಹುತೇಕ ಘಟಕಗಳು ಕಚ್ಚಾವಸ್ತುಗಳಿಲ್ಲದೇ ಬಂದ್ ಆಗುವ ಸ್ಥಿತಿಗೆ ತಲುಪಿವೆ.

ಯುದ್ದದಿಂದ ಜಗತ್ತಿನ ಅನೇಕ ದೇಶಗಳು ಹತ್ತಾರು ರೀತಿಯ ತೊಂದರೆ ಅನುಭವಿಸುತ್ತಿವೆ. ಈಗಾಗಲೇ ದೇಶದಲ್ಲಿ ಕಮರ್ಷಿಯಲ್ ಸಿಲಿಂಡರ್ ಅಭಾವ, ಆಟೋ ಗ್ಯಾಸ್ ಸಿಗದೇ ಆಟೋ ಚಾಲಕರ ಪರದಾಟ, ಅನೇಕ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೆ, ಅನೇಕ ವಸ್ತುಗಳ ಬೆಲೆ ಕಡಿಮೆಯಾಗಿದ್ದರಿಂದ ರೈತರು ಪರದಾಡುತ್ತಿದ್ದಾರೆ. ಆದರೆ ಯುದ್ದ ಹೀಗೆ ಮುಂದವರಿದರೆ ಮತ್ತೊಂದು ದೊಡ್ಡ ಗಂಡಾಂತರ ಉಂಟಾಗುವ ಆತಂಕ ಇದೀಗ ಎದುರಾಗಿದೆ.

ಇದನ್ನೂ ಓದಿ: Karnataka LPG Crisis: ಬೆಂಗಳೂರಿನಲ್ಲಿ ಆಟೋ ಗ್ಯಾಸ್​ಗಾಗಿ ಕಿ.ಮೀ ದೂರ ಫುಲ್ ಕ್ಯೂ!

ಯುದ್ದ ಮುಂದುವರಿದರೆ ವೈದ್ಯಕೀಯ ಕ್ಷೇತ್ರದ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡಲಿದ್ದು, ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವುದು ಇಂಜೆಕ್ಷನ್ ಸಿರಿಂಜ್​ಗಳು, ಡ್ರಿಪ್​ಗೆ ಹಾಕುವ ಐವಿ ಕ್ಯಾನಲ್​ಗಳು ಸಿಗದಂತಹ ಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಿದ್ದಾರೆ ಫಾರ್ಮಾ ವಸ್ತುಗಳ ಉತ್ಪಾದನಾ ಕಂಪನಿಗಳು.

ಫಾರ್ಮಾ ಕಂಪನಿಗಳ ಆತಂಕ 

ಸಿರಿಂಜ್, ಐವಿ ಕ್ಯಾನಲ್​ಗಳ ಉತ್ಪಾದನೆಗೆ ಪೆಟ್ರೋಲಿಯಂ ಉಪ ಉತ್ಪನ್ನವಾಗಿರುವ ಪಾಲಿ ಪ್ರಿಪಲಿನ್  ಕಚ್ಚಾವಸ್ತುವಿನ ಅವಶ್ಯಕತೆ ಇದೆ. ಆದರೆ ಯುದ್ದದಿಂದಾಗಿ ಈ ಕಚ್ಚಾವಸ್ತುವಿನ ಕೊರತೆ ದೊಡ್ಡ ಮಟ್ಟದಲ್ಲಿ ಆರಂಭವಾಗಿದೆ. ಹುಬಳ್ಳಿ ಹೊರವಲಯದ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಗೆ ಪ್ರತಿ ತಿಂಗಳು 150 ಟನ್ ಪಾಲಿ ಪ್ರಿಪಲಿನ್ ಕಚ್ಚಾವಸ್ತುಬೇಕು. ಆದರೆ 20ಟನ್ ಮಾತ್ರ ಪೂರೈಕೆ ಆಗುತ್ತಿದೆ. ಹೀಗಾಗಿ ಪ್ರತಿ ದಿನ 18 ಲಕ್ಷ ಸಿರಿಂಜ್ ಉತ್ಪಾದನೆ ಮಾಡುತ್ತಿದ್ದ ಘಟಕದಲ್ಲಿ ಇದೀಗ ನಾಲ್ಕು ಲಕ್ಷ ಸಿರಿಂಜ್​ಗಳ ಉತ್ಪಾದನೆ ಮಾತ್ರ ಆಗುತ್ತಿದೆ. ಯುದ್ಧ ಹೀಗೆ ಮುಂದುವರಿದರೆ ಸಿಗುವ ಕಚ್ಚಾವಸ್ತುಗಳು ಸಿಗದಂತಾಗಬಹುದು ಎನ್ನುವ ಆತಂಕ ಇದೀಗ ಫಾರ್ಮಾ ಕಂಪನಿಗಳಿಗೆ ಎದುರಾಗಿದೆ.

ಸಿರಿಂಜ್​ ಬೆಲೆ ಏರಿಕೆ? 

ಹುಬ್ಬಳ್ಳಿ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಯಲ್ಲಿ ಮೂರು ಶಿಫ್ಟ್​ನಲ್ಲಿ 300ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಕಚ್ಚಾವಸ್ತುಗಳ ಪೂರೈಕೆ ಕಡಿಮೆ ಆಗಿದ್ದರಿಂದ ಎರಡು ಶಿಫ್ಟ್​ ಕ್ಯಾನ್ಸಲ್ ಮಾಡಿದ್ದು, ಕೇವಲ ಒಂದೇ ಒಂದು ಶಿಫ್ಟ್​ನಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಇದೀಗ ಬರುತ್ತಿರುವ ಕಚ್ಚಾವಸ್ತುವು ಬರದೇ ಇದರೆ ಸಿರಿಂಜ್ ತಯಾರಾಗುವ ಘಟಕವನ್ನು ಬಂದ್ ಮಾಡಬೇಕಾಗುತ್ತದಯಂತೆ. ಇದರಿಂದ ಮುಂದಿನ ದಿನಗಳಲ್ಲಿ ಸಿರಿಂಜ್​ ಬೆಲೆ ಏರಿಕೆ ಜೊತೆಗೆ ಅವುಗಳು ಸಿಗದಂತಾಗಬಹುದು. ರೋಗಿಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆಯಂತೆ.

ಸದ್ಯ ಎಲ್ಲರು ಕೇವಲ ಪೆಟ್ರೋಲ್, ಡಿಸೇಲ್, ಕಮರ್ಷಿಯಲ್ ಸಿಲಿಂಡರ್ ಕೊರತೆ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಆದರೆ ವೈದ್ಯಕೀಯ ಕ್ಷೇತ್ರದ ಮೇಲೆ ಉಂಟಾಗಲಿರುವ ಪರಿಣಾಮದ ಬಗ್ಗೆ ಯಾರು ಗಂಭೀರವಾಗಿಲ್ಲ. ವೈದ್ಯಕೀಯ ವಸ್ತುಗಳು ಸಿಗದಿದ್ದರೆ ಅನೇಕರ ಜೀವಕ್ಕೆ ಅಪಾಯವಾಗುವ ಆತಂಕ ಎದುರಾಗಿದೆ.

ಇದನ್ನೂ ಓದಿ: ಗ್ಯಾಸ್ ರೀಫಿಲ್ ಮಾಡುವಾಗ ಏಕಾಏಕಿ ಸಿಲಿಂಡರ್​ ಸ್ಫೋಟ: ಮನೆ ಛಿದ್ರಛಿದ್ರ

ಸದ್ಯ ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ವಸ್ತುಗಳು ತಯಾರಾಗಲು ಬೇಕಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡೋದರ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಇಲ್ಲದೇ ಇದರೆ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಯುದ್ದದ ದುಷ್ಪರಿಣಾಮಗಳು ದೊಡ್ಡಮಟ್ಟದಲ್ಲಿ ಆಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್’ ವಿರುದ್ಧ ಗರಂ ಆದ್ರಾ ಜಾನ್ ಅಬ್ರಹಾಂ ? ವೈರಲ್ ಸುದ್ದಿಯ ಅಸಲಿಯತ್ತು ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರ ಹೆಸರಿನಲ್ಲಿ ಒಂದು ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ಜಾನ್ ಅಬ್ರಹಾಂ (John Abraham) ಅವರು ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಧುರಂಧರ್ 2’ (Dhurandhar 2) ಬಗ್ಗೆ ಟೀಕೆ ಮಾಡಿದ್ದಾರೆ ಎಂದು ಬಿಂಬಿಸಲಾಗಿದೆ. ಆದರೆ, ಈ ಸುದ್ದಿಯನ್ನು ಪರಿಶೀಲಿಸಿದಾಗ ಇದು ಕೇವಲ ಒಂದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.

ವೈರಲ್ ಆಗಿರುವ ಮೀಮ್ ಒಂದರಲ್ಲಿ, ‘ಧುರಂಧರ್ ಮತ್ತು ದಿ ಕಾಶ್ಮೀರ್ ಫೈಲ್ಸ್‌ನಂತಹ ಚಿತ್ರಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತವೆ. ಇಂತಹ ಸಿನಿಮಾಗಳನ್ನು ಜನರು ಅದ್ದೂರಿಯಾಗಿ ಸ್ವಾಗತಿಸುತ್ತಿರುವುದು ಭಯ ಹುಟ್ಟಿಸುತ್ತದೆ. ನಾನು ಎಂದಿಗೂ ಇಂತಹ ಸಿನಿಮಾಗಳನ್ನು ನಿರ್ಮಾಣ ಮಾಡುವುದಿಲ್ಲ’ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಜಾನ್ ಪರವಾಗಿ ಮತ್ತು ಇನ್ನು ಕೆಲವರು ಅವರ ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಜಾನ್ ಅಬ್ರಹಾಂ ಅವರು ‘ಧುರಂಧರ್’ ಚಿತ್ರದ ಬಗ್ಗೆ ಸಾರ್ವಜನಿಕವಾಗಿಯಾಗಲಿ ಅಥವಾ ಮಾಧ್ಯಮಗಳ ಮುಂದಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಅಸಲಿಗೆ, ಅವರು 2025ರ ಆಗಸ್ಟ್ ತಿಂಗಳಲ್ಲಿ ‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ಛಾವಾ’ ಚಿತ್ರಗಳ ಬಗ್ಗೆ ಮಾತನಾಡುತ್ತಾ, ಇಂತಹ ಅತಿ-ರಾಷ್ಟ್ರೀಯತೆಯ ಚಿತ್ರಗಳನ್ನು ತಾವು ನಿರ್ಮಿಸುವುದಿಲ್ಲ ಎಂದು ಹೇಳಿದ್ದರು.

ಜಾನ್ ಅಬ್ರಹಾಂ ಈ ಹೇಳಿಕೆ ನೀಡಿದಾಗ ‘ಧುರಂಧರ್’ ಸಿನಿಮಾ ಇನ್ನು ಬಿಡುಗಡೆಯೇ ಆಗಿರಲಿಲ್ಲ. ಸಂದರ್ಶನ ನೀಡಿದ ನಾಲ್ಕು ತಿಂಗಳ ನಂತರ ಈ ಚಿತ್ರ ತೆರೆಕಂಡಿತು. ಹಳೆಯ ಸಂದರ್ಶನದ ಹೇಳಿಕೆಗೆ ಈಗಿನ ‘ಧುರಂಧರ್’ ಚಿತ್ರದ ಹೆಸರನ್ನು ಸೇರಿಸಿ ಕಿಡಿಗೇಡಿಗಳು ಮೀಮ್ ಸೃಷ್ಟಿಸಿದ್ದಾರೆ. ಜಾನ್ ಅಬ್ರಹಾಂ ನಿಜವಾಗಿಯೂ ಇಂತಹ ಹೇಳಿಕೆ ನೀಡಿದ್ದರೆ ದೊಡ್ಡ ಸುದ್ದಿಯಾಗುತ್ತಿತ್ತು. ಆದರೆ ಯಾವುದೇ ಅಧಿಕೃತ ಸುದ್ದಿ ಸಂಸ್ಥೆಗಳು ಇಂತಹ ವರದಿ ಪ್ರಕಟಿಸಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂತಹ ಆಧಾರರಹಿತ ಪೋಸ್ಟ್‌ಗಳನ್ನು ನಂಬುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಒಟ್ಟಾರೆ ಹೇಳುವುದಾದರೆ, ‘ಧುರಂಧರ್’ ಚಿತ್ರದ ಬಗ್ಗೆ ಜಾನ್ ಅಬ್ರಹಾಂ ಯಾವುದೇ ನಕಾರಾತ್ಮಕ ಹೇಳಿಕೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕುತೂಹಲ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೊಲೀಸ್​ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್​​ ಅರ್ಜಿ ವಜಾ

ಬೆಂಗಳೂರು, ಏಪ್ರಿಲ್​ 01: ರೌಡಿಶೀಟರ್‌ನಿಂದ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿನ ಟ್ರಸ್ಟ್‌ನಡಿ ನೈತಿಕ ಪೊಲೀಸ್‌ಗಿರಿ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಕಾರ ಎತ್ತಿರುವ ಕರ್ನಾಟಕ  ಹೈಕೋರ್ಟ್ (High Court), ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.

ತುಮಕೂರಿನ ತಿಲಕ್‌ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ  ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಮತ್ತು ಆಶಿಯಾ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿ ರೌಡಿಶೀಟರ್‌ ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ: ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರು ಯಾರು? ಈ ಟ್ರಸ್ಟ್‌ಗೆ ನಿಮಗೆ ಅಧಿಕಾರ ನೀಡಿದವರು ಯಾರು? ಈ ಟ್ರಸ್ಟ್‌ಗೆ ತಡೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಆ ಮೂಲಕ ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಲಾಗಿದೆ. ಅರ್ಜಿದಾರರ ಪರ ವಕೀಲ ಜಿ.ಎ ಪ್ರೇಮ್‌ ಕುಮಾರ್​​​ ಅವರು ವಾದ ಮಂಡಿಸಿದರು.

ಪ್ರಕರಣದ ಹಿನ್ನೆಲೆ

ರೌಡಿಶೀಟರ್​ಗಳು ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಎಂಬ ಟ್ರಸ್ಟ್ ಆರಂಭಿಸಿದ್ದರು. ಆ ಮೂಲಕ ಅಮಾಯಕ ಯುವಕರಿಗೆ ಪ್ರಚೋದನೆ ನೀಡುವುದು, ಜೊತೆಗೆ ಸದಾಶಿವನಗರದ ಕನ್ನಿಕಾ ಶಾಲೆಯ ಬಳಿ ಎಲ್ಲರನ್ನು ಸೇರಿಸುತ್ತಿದ್ದರು. ನಾವು ಪೊಲೀಸರು ನಿಮ್ಮ ಯಾವುದೇ ದೂರುಗಳನ್ನು ನಮ್ಮ ಸಂಸ್ಥೆಯ ಸದಸ್ಯರಿಗೆ ತಿಳಿಸಿದರೆ ನಾವು ಪರಿಹರಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದರು.

ಇದನ್ನೂ ಓದಿ: ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ: ಋತುಚಕ್ರ ರಜೆ ಆದೇಶ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮಹಿಳೆಯರು

ಇನ್ನು ಸಂಸ್ಥೆಯ ಸದಸ್ಯರು ತಾವು ಸಾರ್ವಜನಿಕ ನೌಕರರಂತೆ ವರ್ತಿಸುತ್ತಿದ್ದರು. ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಇಲಾಖೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ, ತುಮಕೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಬಿಎನ್‌ಎಸ್ ಸೆಕ್ಷನ್‌ 204, 353(1)(b), 190 ಅಡಿ ಪ್ರಕರಣ ದಾಖಲಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಳ್ಳತನದ ಆರೋಪದಲ್ಲಿ ಕೇರಳದಲ್ಲಿ ಅಸ್ಸಾಂ ಮೂಲದ ವ್ಯಕ್ತಿಯ ಬರ್ಬರ ಹತ್ಯೆ

ತಿರುವನಂತಪುರಂ, ಏಪ್ರಿಲ್ 1: ಕೇರಳದಲ್ಲಿ ಕಳ್ಳತನದ ಆರೋಪದ ಮೇಲೆ ಅಸ್ಸಾಂ ಮೂಲದ ವ್ಯಕ್ತಿಯೊಬ್ಬನನ್ನು ಇಂದು ಬೆಳಿಗ್ಗೆ ಪೆರುಂಬವೂರ್ ಬಳಿ ಕೇರಳದ (Kerala) 6 ಸಹೋದ್ಯೋಗಿಗಳು ಥಳಿಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು (ಬುಧವಾರ) ಬೆಳಿಗ್ಗೆ ಪೆರುಂಬವೂರ್ ಬಳಿ ಅದೇ ರಾಜ್ಯದವರಾದ 6 ಜನ ಸೇರಿ ಈ ಕೊಲೆ ಮಾಡಿದ್ದಾರೆ. ಅವರು ಆತ ತಮ್ಮ ಫೋನ್ ಕದಿಯಲು ಪ್ರಯತ್ನಿಸುತ್ತಿದ್ದಾನೆ ಎಂದು ಅನುಮಾನಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

6 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೆರುಂಬವೂರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿಲ್ಲ. ಅವರ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

“ನಾವು ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಗೆ 25 ವರ್ಷ ವಯಸ್ಸಾಗಿತ್ತು. ಆತ ಮತ್ತು ಇತರ 6 ಆರೋಪಿಗಳು ಪೆರುಂಬವೂರ್‌ನ ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ಆ ವ್ಯಕ್ತಿಯನ್ನು ಥಳಿಸಿದ ನಂತರ ಆರೋಪಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಆರಂಭಿಸುವ ಮೊದಲೇ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ತಕ್ಷಣ ಆಸ್ಪತ್ರೆಯ ಸಿಬ್ಬಂದು ನಮಗೆ ಮಾಹಿತಿ ನೀಡಿದರು” ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link