Headlines

nagaraj11081993

Times Square Shooting: ಅಮೆರಿಕದ ಟೈಮ್ಸ್​ ಸ್ಕ್ವೇರ್​ನಲ್ಲಿ ಗುಂಡಿನ ದಾಳಿ – Kannada News | Times Square Shooting: NYC Gun Violence Sparks Fear Amidst NBA Celebrations

ಗುಂಡಿನ ದಾಳಿ Image Credit source: X Account-World in last 24 hrs ನ್ಯೂಯಾರ್ಕ್​, ಜೂನ್ 19: ಅಮೆರಿಕದ ಅತ್ಯಂತ ಜನನಿಬಿಡ ಸ್ಥಳವಾದ ನ್ಯೂಯಾರ್ಕ್‌ನ ‘ಟೈಮ್ಸ್ ಸ್ಕ್ವೇರ್’ನಲ್ಲಿ ಗುಂಡಿನ  ದಾಳಿ(Firing) ನಡೆದಿದ್ದು, ಇಡೀ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಶಂಕಿತ ಬಂದೂಕುಧಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA) ಚಾಂಪಿಯನ್‌ಶಿಪ್‌ನಲ್ಲಿ ‘ನ್ಯೂಯಾರ್ಕ್ ನಿಕ್ಸ್’ ತಂಡ ಐತಿಹಾಸಿಕ ಜಯಗಳಿಸಿತ್ತು. ಇದನ್ನು ಆಚರಿಸಲು ಲೋವರ್ ಮ್ಯಾನ್‌ಹ್ಯಾಟನ್‌ನ ಬೀದಿಗಳಲ್ಲಿ ಸಾವಿರಾರು ಜನರು…

Read More

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ಗೆ ಸೋಲು: ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ – Kannada News | MLC Election Defeat: HD Kumaraswamy Reacts to JDS Cross Voting, Refuses to Comment on GT Devegowda

ಬೆಂಗಳೂರು, ಜೂನ್ 19: ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಸೋಲಿನ ನಂತರ ಕೇಂದ್ರ ಸಚಿವ ಹೆಚ್​ಡಿ ಮಾರಸ್ವಾಮಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಡ್ಡ ಮತದಾನ ನಡೆಯುತ್ತದೆ ಎಂಬುದು ತಮಗೆ ಮೊದಲೇ ತಿಳಿದಿತ್ತು ಎಂದು ಅವರು ತಿಳಿಸಿದ್ದಾರೆ. ಅತಿಯಾದ ನಂಬಿಕೆ ಆಘಾತವನ್ನು ತಂದಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಭವಿಷ್ಯದ ಕುರಿತು ಮಾತನಾಡಿದ ಕುಮಾರಸ್ವಾಮಿ, ಇನ್ನು ಮುಂದೆ ಯುವಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿರ್ಧಾರ ಮಾಡಿರುವುದಾಗಿ ಘೋಷಿಸಿದರು. ಯಾವುದೇ ನಿರ್ದಿಷ್ಟ ವ್ಯಕ್ತಿಯ…

Read More

ನೈಜರ್​ನ ಅಂತಾರಾಷ್ಟ್ರೀಯ ಏರ್​ಪೋರ್ಟ್​​ನಲ್ಲಿ ಗುಂಡಿನ ದಾಳಿ, 13 ಮಂದಿ ಸಾವು – Kannada News | Niger Airport Attack: 13 Dead in Al Qaeda Claimed Niamey Violence

ನೈಜರ್, ಜೂನ್ 19: ಪಶ್ಚಿಮ ಆಫ್ರಿಕಾದ ನೈಜರ್​ನ ನಿಯಾಮಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಗುಂಡಿನ ದಾಳಿ(Firing) ನಡೆದಿದ್ದು, ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಇಪ್ಪತ್ತೆರಡು ಶಸ್ತ್ರಸಜ್ಜಿತ ದಾಳಿಕೋರರು ಸಹ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 20 ಶಂಕಿತರನ್ನು ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ ಖೈದಾ ಉಗ್ರ ಗುಂಪು ನೈಜರ್ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣ ಮತ್ತು ಮಿಲಿಟರಿ ವಾಯುನೆಲೆಯ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಗುರುವಾರ ನಿಯಾಮಿಯಲ್ಲಿ ಬೆಳಗ್ಗೆ 6 ಗಂಟೆಗೆ ಗುಂಡಿನ…

Read More

ನಮ್ಮ ಮೆಟ್ರೋ ರೆಡ್ ಲೈನ್ ವೆಚ್ಚ ಕಡಿತಕ್ಕೆ ಒಂದು ಸ್ಟೇಷನನ್ನೇ ಕೈಬಿಡಲು ನಿರ್ಧರಿಸಿದ ಬಿಎಂಆರ್​ಸಿಎಲ್! – Kannada News | Bengaluru Metro Red Line: BMRCL Drops One Underground Station to Cut Costs by Rs 2,920 Crore for Central Approval

ರೆಡ್ ಲೈನ್ ಮೆಟ್ರೋ ಮಾರ್ಗImage Credit source: tv9 ಬೆಂಗಳೂರು, ಜೂನ್ 19: ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಲಿರುವ ಬಹುನಿರೀಕ್ಷಿತ ಸರ್ಜಾಪುರ-ಹೆಬ್ಬಾಳ ಮೆಟ್ರೋ ‘ರೆಡ್ ಲೈನ್’ (Red Line Metro) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆದುಕೊಳ್ಳಲು ಬಿಎಂಆರ್‌ಸಿಎಲ್ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. ಈ ಕಾರಿಡಾರ್‌ನ ವಿಸ್ತೃತ ಯೋಜನಾ ವರದಿಯ (DPR) ಅಂದಾಜು ವೆಚ್ಚ ಅತಿ ಹೆಚ್ಚಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಎರಡು ಬಾರಿ ಆಕ್ಷೇಪ…

Read More

Breaking News Today Live: ಅತಿಯಾದ ನಂಬಿಕೆಯೇ ಆಘಾತ ತಂದಿದೆ ಎಂದು ಹೆಚ್​.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.19: ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗಿದ್ದ, ವಿಧಾನ ಪರಿಷತ್​​ ಚುನಾವಣೆಗೆ ಕೊನೆಗೂ ತೆರೆಬಿದ್ದಿದೆ. ಆಡಳಿತ ಪಕ್ಷ ಕಾಂಗ್ರೆಸ್​​ಗೆ ಗೆಲುವಿನ ಸಂತಸ ತಂದರೆ, ವಿರೋಧ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದೆ. ಅದರಲ್ಲೂ ಕಾಂಗ್ರೆಸ್​​ ಹಾಗೂ ಜೆಡಿಎಸ್​ ನಡುವೆ ಇದ್ದ ಪೈಪೋಟಿಯಲ್ಲಿ ಜೆಡಿಎಸ್​​ ಸೋತಿದೆ. ಈ ಬಗ್ಗೆ ಕೇಂದ್ರ ಸಚಿವ ಹೆಚ್​​​​.ಡಿ ಕುಮಾರಸ್ವಾಮಿ ಆರೋಪಗಳನ್ನು ಮಾಡಿದ್ದಾರೆ. ಇನ್ನೊಂದು ಕಡೆ ಈ ಬಗ್ಗೆ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಚರ್ಚೆಗಳು ನಡೆದಿದೆ. ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ…

Read More

ಜೂನ್ 21ರ ರಹಸ್ಯ: ವರ್ಷದ ಅತಿ ಉದ್ದದ ದಿನದ ಖಗೋಳ ಮತ್ತು ಆಧ್ಯಾತ್ಮಿಕ ಮಹತ್ವ – Kannada News | June 21: Summer Solstice, Longest Day and International Yoga Day Significance Explained

ವರ್ಷದ ಅತಿ ಉದ್ದದ ದಿನImage Credit source: Pinterest ಪ್ರತಿ ವರ್ಷ ಜೂನ್ 21 ಬಂತೆಂದರೆ ಜಗತ್ತಿನಾದ್ಯಂತ ಒಂದು ವಿಶೇಷ ಸಂಚಲನ ಮೂಡುತ್ತದೆ. ಇದು ಸಾಮಾನ್ಯ ದಿನವಲ್ಲ, ಖಗೋಳ ವಿಜ್ಞಾನ ಮತ್ತು ಆಧ್ಯಾತ್ಮಿಕ ಜಗತ್ತುಗಳೆರಡರಲ್ಲೂ ಅತ್ಯಂತ ಪ್ರಮುಖ ತಿರುವು ನೀಡುವ ಅಪರೂಪದ ದಿನ. ಒಂದೆಡೆ ವಿಶ್ವಾದ್ಯಂತ ಈ ದಿನವನ್ನು ‘ಅಂತರರಾಷ್ಟ್ರೀಯ ಯೋಗ ದಿನ‘ ಎಂದು ಸಂಭ್ರಮದಿಂದ ಆಚರಿಸಿದರೆ, ಮತ್ತೊಂದೆಡೆ ಪ್ರಕೃತಿಯಲ್ಲಿ ದೊಡ್ಡ ಬದಲಾವಣೆಯೊಂದು ಸಂಭವಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ಹಗಲು ಮತ್ತು ಅತಿ ಕಡಿಮೆ…

Read More

‘3 ಇಡಿಯಟ್ಸ್’ ಸೀಕ್ವೆಲ್ ಕಥೆ ರಿವೀಲ್; ಮುಂದುವರಿಯಲಿದೆ ರಾಂಚೋ, ಫರ್ಹಾನ್ ಮತ್ತು ರಾಜು ಪಾತ್ರ – Kannada News | 3 Idiots 2 Confirmed Hirani Reveals Mid Life Crisis Plot and Aamir Khan’s Return

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ‘3 ಇಡಿಯಟ್ಸ್’ (3 Idiots) ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳ ಬಳಿಕ, ಅದರ ಮುಂದುವರಿದ ಭಾಗ ಬರುತ್ತಿದೆ. ಈ ಕುರಿತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅತ್ಯಂತ ಆಸಕ್ತಿದಾಯಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಶಿಕ್ಷಣ ಪದ್ಧತಿಯ ಮೇಲಿನ ವಿಡಂಬನೆ ಹಾಗೂ ‘ಆಲ್ ಈಸ್ ವೆಲ್’ ಎಂಬ ಐಕಾನಿಕ್ ಡೈಲಾಗ್ ಮೂಲಕ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಹಿರಾನಿ, ತಾವು ಮತ್ತು ಲೇಖಕ…

Read More

ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್ ಕನ್ನಡ – Kannada News | Bigg Boss Kannada Auditions: Last Date to Upload Videos Announced by Colors Kannada

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಹೊಸ ಸೀಸನ್‌ನ ಆಡಿಷನ್‌ ಪ್ರಕ್ರಿಯೆ ನಡೆಯುತ್ತಿದೆ. ಈಗ ವಾಹಿನಿಯು ಬಿಗ್ ಬಾಸ್ ಕಾಂಪಿಟೇಷನ್ ವಿಡಿಯೋ ಕಳುಹಿಸಲು ಕೊನೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಸುವರ್ಣ ಅವಕಾಶ ನೀಡಲಾಗಿದ್ದು, ಆಡಿಷನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಜೂನ್ 21 ಅಂತಿಮ ದಿನಾಂಕವಾಗಿದೆ. ‘ಇಷ್ಟು ದಿನ ಕೈತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು, ಈ ಬಾರಿ ನೀವೇ ಅಖಾಡಕ್ಕೆ…

Read More

ಕಾಕನಕೋಟೆ ಸಫಾರಿಯಲ್ಲಿ ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್ – Kannada News | Kakanakote Safari: Nagarhole’s Kabini Elephants and Adorable Calves Go Viral

ಮೈಸೂರು, ಜೂ.19: ವಿಶ್ವವಿಖ್ಯಾತ ಕಬಿನಿ ಹಿನ್ನೀರು (Kabini Backwaters) ವನ್ಯಜೀವಿ ಪ್ರೇಮಿಗಳಿಗೆ ಮತ್ತೊಮ್ಮೆ ದೃಶ್ಯ ವೈಭವವನ್ನು ಉಣಬಡಿಸಿದೆ. ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಬರುವ ಕಾಕನಕೋಟೆ ಸಫಾರಿಗೆ (Kakanakote Safari) ತೆರಳಿದ್ದ ಪ್ರವಾಸಿಗರಿಗೆ ಪ್ರಕೃತಿಯ ಅತ್ಯಂತ ಅಪರೂಪದ ಹಾಗೂ ಮನಸೂರೆಗೊಳ್ಳುವ ದೃಶ್ಯವೊಂದು ಕಣ್ಣಿಗೆ ಬಿದ್ದಿದೆ. ಕಾಕನಕೋಟೆ ಅರಣ್ಯ ವಲಯದಲ್ಲಿ ಎಂದಿನಂತೆ ಸಫಾರಿ ವಾಹನದಲ್ಲಿ ತೆರಳುತ್ತಿದ್ದ ಪ್ರವಾಸಿಗರಿಗೆ ಕಬಿನಿ ಹಿನ್ನೀರಿನ ಹಸಿರು ಹುಲ್ಲುಗಾವಲಿನಲ್ಲಿ ಸಾಲು ಸಾಲು ಆನೆಗಳ ದೊಡ್ಡ ಹಿಂಡು ಒಟ್ಟಿಗೆ ಕಾಣಿಸಿಕೊಂಡಿದೆ. ಕಾಡಿನ ದೈತ್ಯ ಜೀವಿಗಳು…

Read More

‘ಗೇಮ್ ಚೇಂಜರ್ ಚಿತ್ರದ ಸೋಲು ನನ್ನ ವೈಫಲ್ಯ, ವಿಷಾದವಿದೆ’; ಮುಕ್ತವಾಗಿ ಒಪ್ಪಿಕೊಂಡ ನಿರ್ಮಾಪಕ – Kannada News | Dil Raju’s Shocking Regret: ‘Game Changer’ Was a Mistake, Reveals Production Challenges

ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಚಿತ್ರರಂಗದಲ್ಲಿನ ತಮ್ಮ ದೀರ್ಘಕಾಲದ ಅನುಭವದಿಂದ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ‘ಗೇಮ್ ಚೇಂಜರ್’ ಚಿತ್ರದ ನಿರ್ಮಾಣದ ಸಮಯದಲ್ಲಿ ಎದುರಾದ ಬೆಳವಣಿಗೆಗಳು ಮತ್ತು ಸವಾಲುಗಳ ಕುರಿತು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಚಿತ್ರವು ಬರೋಬ್ಬರಿ ನಾಲ್ಕೂವರೆ ಗಂಟೆಗಳಷ್ಟು ಉದ್ದವಿತ್ತು ಮತ್ತು ಕೊನೆಯ ಕ್ಷಣದವರೆಗೂ ತಮಗೆ ಚಿತ್ರದ ಅಂತಿಮ ಕಟ್ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ವಿಷಯವನ್ನು ಅವರು ಬಹಿರಂಗಪಡಿಸಿದ್ದಾರೆ. ದೊಡ್ಡ ನಿರ್ದೇಶಕರು ಮತ್ತು ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡುವಾಗ…

Read More