Headlines

nagaraj11081993

ಡೊನಾಲ್ಡ್ ಟ್ರಂಪ್ ಭೇಟಿಗೆ ‘ಒಪ್ಪಿದ’ ನಟ ಬೊಮನ್ ಇರಾನಿ, ಆದರೆ ಇದೆ ಕೆಲ ಷರತ್ತು

ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಮುಂದುವರಿಯುತ್ತಿದೆ. ಈ ಯುದ್ಧದಿಂದ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಸಮಸ್ಯೆ ಅನುಭವಿಸುತ್ತಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನಿಗಳೊಂದಿಗೆ ‘ಶಾಂತಿ ಮಾತುಕತೆ’ ನಡೆಸುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ, ಅದಕ್ಕೆ ಕೆಲವು ಷರತ್ತುಗಳನ್ನು ಸಹ ಹಾಕಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬೆಳವಣಿಗೆಯನ್ನು ಗಮನಿಸಿದ ಬಾಲಿವುಡ್ (Boman Irani) ನಟ ಬೋಮನ್ ಇರಾನಿ, ಟ್ರಂಪ್ ಅವರಿಗೆ ಅತ್ಯಂತ ತಮಾಷೆಯಾಗಿ ತಿರುಗೇಟು ನೀಡಿದ್ದಾರೆ. ಟ್ರಂಪ್ ಅವರು ‘ಇರಾನಿ’ಗಳೊಟ್ಟಿಗೆ…

Read More

ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಬೆಂಗಳೂರು, ಮಾರ್ಚ್ 26: ಇವತ್ತು ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಲ್ತ್ ಇನ್ಷೂರೆನ್ಸ್ (Health Insurance) ಸೌಲಭ್ಯ ಒದಗಿಸುತ್ತವೆ. ಈ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಬಳಿ ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ಇದೆ ಎಂದು ಹೇಳಿ ವೈಯಕ್ತಿಕ ಇನ್ಷೂರೆನ್ಸ್ ಪಾಲಿಸಿ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು ಎಂದು ಬಹಳ ಹಣಕಾಸು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅನಿಸಿಕೆಗೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ಧ್ವನಿಗೂಡಿಸಿದ್ದಾರೆ. ‘ಬಹಳ ಜನರು ತಮ್ಮ ಕಂಪನಿಯ ಗ್ರೂಪ್ ಇನ್ಷೂರೆನ್ಸ್…

Read More

ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್​​ಗೆ ಚಪ್ಪಲಿ ಏಟು

ಬೆಂಗಳೂರು, ಮಾ.26: ನೆಲಮಂಗಲ ತಾಲೂಕಿನ ಬೇಗೂರು ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲೇ ಪ್ರಪೋಸ್ ಮಾಡಿರುವ ಘಟನೆ ನಡೆದಿದೆ. ಪ್ರಾಧ್ಯಾಪಕ ಅಬ್ದುಲ್ ಎಂಬಾತ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರೀತಿ ನಿವೇದನೆ ಮಾಡಿದ್ದಾನೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಪ್ರಾಂಶುಪಾಲರೊಂದಿಗೆ ಮಾತನಾಡುವಂತೆ ತಿಳಿಸಿದ್ದಾಳೆ. ಈ ಘಟನೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರಾಧ್ಯಾಪಕ ಅಬ್ದುಲ್‌ನನ್ನು ಕಾಲೇಜು ಆವರಣದಲ್ಲಿ ಅಟ್ಟಾಡಿಸಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಬ್ದುಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪ್ರಸ್ತುತ ಪ್ರಾಧ್ಯಾಪಕ ಅಬ್ದುಲ್ ತಲೆಮರೆಸಿಕೊಂಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸರು…

Read More

ಐಪಿಎಲ್ ಆಡಲು ಪಾಕಿಸ್ತಾನ ಸೂಪರ್​ ಲೀಗ್​​ಗೆ ಶಾಕ್ ಮೇಲೆ ಶಾಕ್ ಕೊಟ್ಟ ವಿದೇಶಿ ಆಟಗಾರರು

ಪಾಕಿಸ್ತಾನ ಸೂಪರ್ ಲೀಗ್ ಇಂದಿನಿಂದ (ಮಾರ್ಚ್ 26) ಆರಂಭ ಆಗುತ್ತಿದೆ. ಅದೇ ರೀತಿ ಶನಿವಾರದಿಂದ (ಮಾರ್ಚ್ 28) ಐಪಿಎಲ್ ಆರಂಭ ಆಗಲಿದೆ. ಪಿಎಸ್​​ಎಲ್​​ಗೆ ಹೋಲಿಕೆ ಮಾಡಿದರೆ ಐಪಿಎಲ್ ಜನಪ್ರಿಯತೆ ತುಂಬಾನೇ ಹೆಚ್ಚಿದೆ. ಈಗ ಐಪಿಎಲ್ ಆಡಬೇಕು ಎಂದು ಅನೇಕ ಆಟಗಾರರು ಪಿಎಸ್​​​ಎಲ್​​ನ ತೊರೆಯುತ್ತಿದ್ದಾರೆ. ಇದು ಪಾಕಿಸ್ತಾನ್ ಪ್ರೀಮಿಯರ್ ಲೀಗ್​​​ಗೆ ಶಾಕಿಂಗ್ ಎನಿಸಿದೆ. ಐಪಿಎಲ್​ ಸೇರಲು ಅವರು ಪಿಎಸ್​ಎಲ್ ತೊರೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಜಿಂಬಾಬ್ವೆ ಆಟಗಾರ ಬ್ಲೆಸ್ಸಿಂಗ್ ಮುಜರಬಾನಿ ಅವರು ಇತ್ತೀಚೆಗೆ ಪಿಎಸ್​​ಎಲ್​ ತೊರೆದು ಐಪಿಎಲ್ ಆಡಲು ಬಂದಿದ್ದರು….

Read More

RCB vs SRH: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್! ಅಭಿಮಾನಿಗಳೇ ಈ ವಿಚಾರ ತಿಳಿದಿರಿ

ಬೆಂಗಳೂರು, ಮಾರ್ಚ್ 26: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಮುಂಬರುವ ಐಪಿಎಲ್ ಪಂದ್ಯಗಳಿಗೆ ಭದ್ರತೆ ಮತ್ತು ಪ್ರವೇಶ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು, ಪಿಡಬ್ಲ್ಯುಡಿ, ವೈದ್ಯಕೀಯ ಸೇವೆಗಳು, ಅಗ್ನಿಶಾಮಕ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಈ ಹೊಸ ವ್ಯವಸ್ಥೆಗಳ ಕುರಿತು ಪೂರ್ವಭಾವಿ ತರಬೇತಿ ನೀಡಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ, ಹಿಂದಿನಂತೆ ಕ್ವೀನ್ಸ್ ರೋಡ್ ಬದಲು ಕಬ್ಬನ್ ರೋಡ್ ಮತ್ತು ಲಿಂಕ್ ರೋಡ್ ಮೂಲಕ ಗರಿಷ್ಠ ಸಂಖ್ಯೆಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗೇಟ್‌ಗಳನ್ನು ವಿಸ್ತರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ…

Read More

Ram Navami 2026: ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ

ಅಯೋಧ್ಯೆ, ಮಾರ್ಚ್ 26: ಅಯೋಧ್ಯೆಯಲ್ಲಿ ರಾಮ ನವಮಿ (Ram Navami) ಹಿನ್ನೆಲೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ನವರಾತ್ರಿಯ ಮೊದಲ ದಿನದಿಂದ ಇಂದಿನವರೆಗೆ ಹಲವು ಆಚರಣೆಗಳನ್ನು ನಡೆಸಲಾಯಿತು. ಭಾರತ ಮತ್ತು ವಿದೇಶಗಳಾದ್ಯಂತ ಭಕ್ತರು ಶ್ರೀರಾಮನ ಪವಿತ್ರ ಜನ್ಮಭೂಮಿಯಲ್ಲಿ ರಾಮ ನವಮಿಗೆ ಆಗಮಿಸಿದ್ದಾರೆ. ಅಲಂಕೃತವಾದ ರಾಮನನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ತೈಲ ಅವಲಂಬನೆ ತಗ್ಗಿಸಲು ಚೀನಾ ಸೂಪರ್ ಐಡಿಯಾ; 55 ಲಕ್ಷ ಕೋಟಿ ರೂ ವೆಚ್ಚದಲ್ಲಿ ಸೂಪರ್​ಗ್ರಿಡ್

ನವದೆಹಲಿ, ಮಾರ್ಚ್ 26: ತಂತ್ರಜ್ಞಾನ ಮತ್ತು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಚೀನಾ (China) ಬಹಳ ವೇಗವಾಗಿ ಸಾಗುತ್ತಿದೆ. ಇಡೀ ಜಗತ್ತು ತೈಲ ಬಿಕ್ಕಟ್ಟಿನಲ್ಲಿ ತಲೆ ಮೇಲೆ ಕೈಹೊತ್ತು ಕೂತರೆ, ಚೀನಾ ಸದ್ದಿಲ್ಲದೆ ಮಹಾ ಕ್ರಾಂತಿಯಲ್ಲಿ ತೊಡಗಿದೆ. ಭಾರತವು ಎಲ್​ಪಿಜಿ ಬಿಕ್ಕಟ್ಟಿನಲ್ಲಿ ಪಿಎನ್​ಜಿ ಇನ್​ಫ್​ರಾಸ್ಟ್ರಕ್ಚರ್ ಅನ್ನು ಸಮರೋಪಾದಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವಂತೆ, ಚೀನಾ ಬಹಳ ಹಿಂದೆಯೇ ತೈಲ ಅವಲಂಬನೆ ತಗ್ಗಿಸಲು ಸೂಪರ್ ಐಡಿಯಾ ಹಾಕಿತ್ತು. ಇದೀಗ ಅದು ಕಾರ್ಯಗತಗೊಳ್ಳುತ್ತಿದೆ. ಇದು ಚೀನಾದ್ಯಂತ ಎಲೆಕ್ಟ್ರಿಕ್ ಹೈವೇ ನಿರ್ಮಿಸುವ ಭಾರೀ ಯೋಜನೆ. ಏನಿದು ಎಲೆಕ್ಟ್ರಿಕ್…

Read More

ಭಯೋತ್ಪಾದಕರ ನಂಟು ಆರೋಪ: ಬಳ್ಳಾರಿಯ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

ಬಳ್ಳಾರಿ, ಮಾರ್ಚ್​​ 26: ಮೂಲಭೂತವಾದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಹಾಗೂ ಭಯೋತ್ಪಾದಕರ ನಂಟು ಶಂಕೆ ಹಿನ್ನೆಲೆ ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯದ 12 ಮಂದಿಯನ್ನು ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ರಾಜ್ಯದಲ್ಲಿ ಅರೆಸ್ಟ್​​ ಆಗಿರುವ ಆರೋಪಿ. ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಒಳಗೊಂಡು ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ…

Read More

‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್: ಕಾಲ ಭೈವರವ ಅವತಾರ ರಿವೀಲ್

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾದ ಹಾಡು ಇತ್ತೀಚೆಗೆ ಭಾರಿ ವಿವಾದ ಸೃಷ್ಟಿಸಿತು. ಲೋಕಸಭೆಯಲ್ಲಿ ಸಹ ಈ ಬಗ್ಗೆ ಚರ್ಚೆಗಳು ನಡೆದವು. ಸಿನಿಮಾದ ಹಾಡನ್ನು ಸಹ ಹಿಂಪಡೆಯಲಾಯ್ತು. ಇದು ಸಿನಿಮಾಕ್ಕೆ ದೊಡ್ಡ ಹಿನ್ನಡೆ ಎಂಬ ಚರ್ಚೆಗಳು ನಡೆದವು. ಇದೀಗ ‘ಕೆಡಿ’ ಸಿನಿಮಾದಿಂದ ಹೊಸ ಅಪ್​​ಡೇಟ್ ಹೊರಬಿದ್ದಿದೆ. ‘ಕೆಡಿ’ ಸಿನಿಮಾನಲ್ಲಿ ಕಿಚ್ಚ ಸುದೀಪ್ ನಟಿಸಿದ್ದು, ಇದೀಗ ಅವರ ಪೋಸ್ಟರ್ ಒಂದನ್ನು ಹೊರಬಿಡಲಾಗಿದೆ. ಸುದೀಪ್ ಅವರು ‘ಕೆಡಿ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಪಾತ್ರದ ಹೆಸರು…

Read More

ಬಿಜೆಪಿ ಚಪ್ಪಲಿ ವಿವಾದ; ದೇವಿಯನ್ನು 101 ಲೀಟರ್ ಹಾಲು, 25 ಲೀಟರ್ ಮೊಸರು, ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ

ದಾವಣಗೆರೆ, ಮಾ,26: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣಕ್ಕೆ ಬಿಜೆಪಿ ಮುಖಂಡರು ಚಪ್ಪಲಿ ಧರಿಸಿ ಪ್ರವೇಶಿಸಿದ್ದಾರೆ ಎಂಬ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ದೇವಸ್ಥಾನ ಅಪವಿತ್ರಗೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ದೇವಿಗೆ ವಿಶೇಷ ಹಾಲಿನ ಅಭಿಷೇಕ ಮಾಡುವ ಮೂಲಕ ‘ಶುದ್ಧೀಕರಣ’ ನಡೆಸಿದ್ದಾರೆ. ಮಾರ್ಚ್ 24ರಂದು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ…

Read More