Headlines

nagaraj11081993

ಹೋಟೆಲ್, ರೆಸ್ಟೋರೆಂಟ್ ಬಿಲ್​​​ನಲ್ಲಿ ಎಲ್​ಪಿಜಿ ಚಾರ್ಜ್ ಹಾಕಿದರೆ ನೀವು ಏನು ಮಾಡಬೇಕು?

ನವದೆಹಲಿ, ಮಾರ್ಚ್ 25: ಕಮರ್ಷಿಯಲ್ ಎಲ್​ಪಿಜಿಯ ಬಿಕ್ಕಟ್ಟು (LPG Crisis)  ಶುರುವಾದಾಗಿನಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್​​ಗಳು ಅಡುಗೆ ಮಾಡಲು ಪರದಾಡುತ್ತಿವೆ. ಕೆಲವು ರೆಸ್ಟೋರೆಂಟ್​​ಗಳು ಬಾಯ್ಲರ್, ಎಲೆಕ್ಟ್ರಿಕ್ ಸ್ಟೌವ್​ಗಳನ್ನು ಬಳಸುತ್ತಿವೆ. ಕೆಲವು ಹೋಟೆಲ್​ಗಳಲ್ಲಿ ಗ್ಯಾಸ್​ ಅಭಾವದ ನೆಪ ಹೇಳಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ (CCPA) ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಒಂದುವೇಳೆ ನೀವು ಹೋಗುವ ಹೋಟೆಲ್ ಬಿಲ್​​ಗಳಲ್ಲಿ ಗ್ಯಾಸ್ ಚಾರ್ಜ್​ ಅಥವಾ ಎಲ್​ಪಿಜಿ ಚಾರ್ಜ್ ಎಂದು ನಮೂದಿಸಿದ್ದರೆ ಅವರ…

Read More

ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್​​ನಲ್ಲಿ 6 ಲಕ್ಷ‌ ಹಣ ಪತ್ತೆ: ದುಡ್ಡು ತಂದಿದ್ಯಾಕೆ?

ಬೆಂಗಳೂರು, (ಮಾರ್ಚ್ 25): ಇತ್ತೀಚೆಗಷ್ಟೇ ವಿಧಾನಸೌಧದಲ್ಲಿ (Vidhan Soudha) ಲಕ್ಷಾಂತರ ಹಣ ಮತ್ತು ಚಿನ್ನಾಭರಣ ಕಳ್ಳತನವಾಗಿತ್ತು ಪ್ರಕರಣ ನಡೆದಿದ್ದು, ಈ ಪ್ರಕರಣ ಮಾಸುವ ಮುನ್ನವೇ ವಿಧಾನಸೌಧದಲ್ಲಿ ಮತ್ತೊಂದು ಮನಿ ಬ್ಯಾಗ್ ಕೇಸ್ ಬೆಳಕಿಗೆ ಬಂದಿದೆ. ಹೌದು… ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ ಬ್ಯಾಗ್​​ನಲ್ಲಿ 6 ಲಕ್ಷ ರೂಪಾಯಿ ಪತ್ತೆಯಾಗಿದೆ. ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಆಗಮನಿಸಿದ್ದು, ಈ ವೇಳೆ ಪೊಲೀಸರು ಯುವಕನ ಬ್ಯಾಗ್ ಪರಿಶೀಲನೆ ವೇಳೆ ಬರೋಬ್ಬರಿ ಆರು ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ….

Read More

RCB: ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು

ಜೂನ್ 4, 2025.. ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ ದಿನ. ಬರೋಬ್ಬರಿ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ್ದ ಆರ್​ಸಿಬಿ, ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು. ಆರ್​ಸಿಬಿಯ ಮೊದಲ ಗೆಲುವನ್ನು ಅದರ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಬೀದಿ ಬೀದಿಗಳಲ್ಲಿ ಆರ್​ಸಿಬಿ ಪರ ಘೋಷಣೆಗಳು ಮೊಳಗಿದ್ದವು. ಆದರೆ ಈ ಗೆಲುವಿನ ಸಂಭ್ರಮ ಸರಿಯಾಗಿ ಒಂದು ದಿನವೂ ಇರಲಿಲ್ಲ. ಟ್ರೋಫಿ ಗೆಲುವಿನ ಸಂಭ್ರಮದಲ್ಲಿದ್ದ ಆರ್​ಸಿಬಿ ಮ್ಯಾನೇಜ್​ಮೆಂಟ್ ಚಿನ್ನಸ್ವಾಮಿ ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಈ ಸಂಭ್ರಮವನ್ನು ಹಂಚಿಕೊಳ್ಳಲು ಬಯಸಿತ್ತು. ಇತ್ತ…

Read More

ಹೈಕಮಾಂಡ್ ಮಾತು ಯಾರು ಕೇಳಬೇಕು? : ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ

ಬೆಂಗಳೂರು, ಮಾ.25: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತೀವ್ರ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ನಿರ್ಧಾರಗಳ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪಕ್ಷ ನಿಷ್ಠೆ ಮತ್ತು ರಾಜಕೀಯ ತತ್ವಗಳನ್ನು ಹೆಚ್ಚು ಗೌರವಿಸುತ್ತೇನೆ. ನೀವು ಮೋದಿ ಅವರನ್ನು ಕೇಳಿ ಎಲ್ಲ ಮಾಡುತ್ತೀರಾ? ಎಂದು ಸಿಎಂ ಹೇಳದಾಗ, ಶಾಸಕ ಸುನಿಲ್ ಕುಮಾರ್ “ನಾನು ಮೋದಿಯವರ ಭಕ್ತ, ನಾನು ಹೈಕಮಾಂಡ್​ನ ಭಕ್ತ, ನಾನು ಒಬ್ಬ…

Read More

‘ಧುರಂಧರ್ 2’ ಸಿನಿಮಾ ನೋಡಿ ‘ಬ್ರಿಲಿಯಂಟ್’ ಎಂದು ಹೊಗಳಿದ ಶಿವರಾಜ್​ಕುಮಾರ್

ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದಾರೆ. ಈಗಾಗಲೇ ರಜನಿಕಾಂತ್, ರಿಷಬ್ ಶೆಟ್ಟಿ ಮುಂತಾದವರು ಹೊಗಳಿದ್ದಾರೆ. ಈಗ ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shivarajkumar) ಕೂಡ ಈ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ. ಶಿವಣ್ಣ ಅವರು ಈ ಸಿನಿಮಾವನ್ನು ಬ್ರಿಲಿಯಂಟ್ ಎಂದು ಬಣ್ಣಿಸಿದ್ದಾರೆ. ರಣವೀರ್ ಸಿಂಗ್ (Ranveer Singh) ಅವರ ಅಭಿನಯಕ್ಕೆ ಶಿವರಾಜ್​ಕುಮಾರ್ ಫುಲ್​ ಮಾರ್ಕ್ಸ್ ನೀಡಿದ್ದಾರೆ. ‘ಧುರಂಧರ್: ದಿ ರಿವೇಂಜ್’ ಸಿನಿಮಾ…

Read More

IND vs SA: ಭಾರತ- ದಕ್ಷಿಣ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ; ವೇಳಾಪಟ್ಟಿ ಪ್ರಕಟ

2025 ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಬಳಿಕ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ ಮಹಿಳಾ ತಂಡ ಟಿ20 ಸರಣಿ ಗೆದ್ದು, ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಸೋತಿತ್ತು. ಇದೀಗ ಹೊಸ ಪ್ರವಾಸಕ್ಕೆ ಸಜ್ಜಾಗಿರುವ ವನಿತಾ ಪಡೆ, ಐದು ಪಂದ್ಯಗಳ ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಾಡಲಿದೆ. ಈ ಪ್ರವಾಸಕ್ಕಾಗಿ ಇದೀಗ ಬಿಸಿಸಿಐ, ತಂಡವನ್ನು ಸಹ ಪ್ರಕಟಿಸಿದೆ. ಈ ಪ್ರವಾಸಕ್ಕೆ 15 ಆಟಗಾರ್ತಿಯರ ತಂಡವನ್ನು ಘೋಷಿಸಿದ್ದು, ಎಂದಿನಂತೆ ಹರ್ಮನ್ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಇಬ್ಬರು ಆಟಗಾರ್ತಿಯರಿಗೆ…

Read More

ಒಡಿಶಾದಲ್ಲಿ ಬೇಗ ಪೆಟ್ರೋಲಿಯಂ ಮೀಸಲು ಯೋಜನೆ ಪೂರ್ಣಗೊಳಿಸಲು ಸಚಿವ ಧರ್ಮೇಂದ್ರ ಪ್ರಧಾನ್ ಒತ್ತಾಯ

ನವದೆಹಲಿ, ಮಾರ್ಚ್ 25: ಜಾಗತಿಕ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan), ಒಡಿಶಾದ ಜಾಜ್‌ಪುರ ಜಿಲ್ಲೆಯ ಚಾಂಡಿಖೋಲ್‌ನಲ್ಲಿ 4 ಮಿಲಿಯನ್ ಮೆಟ್ರಿಕ್ ಟನ್ (MMT) ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು (SPR) ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಕಾರ್ಯಗತಗೊಳಿಸಲು ಒತ್ತಾಯಿಸಿದ್ದಾರೆ. ಒಡಿಶಾದ ಚಾಂಡಿಖೋಲ್‌ನಲ್ಲಿ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿರುವ ಪೆಟ್ರೋಲಿಯಂ ಮೀಸಲು ಪ್ರದೇಶವನ್ನು ತ್ವರಿತವಾಗಿ ಪೂರ್ಣಗೊಳಿಸಲು…

Read More

30 ಕೋಟಿ ರೂ. ಇದ್ದರೂ ಹಾಳಾಯ್ತು ಯೂಟ್ಯೂಬರ್ ಜೀವನ; ನಡೆಯಲು ಆಗದ ಸ್ಥಿತಿ

‘ನನಗೆ ಮತ್ತೆ ನಡೆಯಲು ಸಾಧ್ಯವಿಲ್ಲವೇ ಅಂತ ಆತಂಕವಾಗುತ್ತಿದೆ’ ಎಂದು ಬಿಗ್ ಬಾಸ್ ಖ್ಯಾತಿಯ ಅನುರಾಗ್ ದೊಭಾಲ್ (Anurag Dobhal) ಅವರು ಕಣ್ಣೀರು ಹಾಕುತ್ತಿದ್ದಾರೆ. ಯೂಟ್ಯೂಬರ್ ಆಗಿ ಖ್ಯಾತಿ ಪಡೆದಿದ್ದ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿ ಭೀಕರ ಕಾರು ಅಪಘಾತಕ್ಕೀಡಾಗಿದ್ದರು. ಬಿಗ್ ಬಾಸ್ 17ರ ಸ್ಪರ್ಧಿಯಾಗಿದ್ದ ಅನುರಾಗ್ ದೊಭಾಲ್ ಅವರ ಜೀವನ ಈಗ ನರಕ ಆಗಿದೆ. 30 ಕೋಟಿ ರೂಪಾಯಿ ಆಸ್ತಿ ಇದ್ದರೂ ಕೂಡ ಅವರು ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಅವರ ಆರೋಗ್ಯದ ಅಪ್‌ಡೇಟ್…

Read More

ಸದ್ದಿಲ್ಲದೆ 2ನೇ ಮದುವೆ: ತಾಳಿ ಕಟ್ಟೋ ಟೈಮಿಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು?

ಬೆಂಗಳೂರು (ಮಾರ್ಚ್ 25): ಮೊದಲ ಹೆಂಡ್ತಿ ಬದುಕಿರುವಾಗಲೇ, ವಿಚ್ಛೇದನವನ್ನೂ ಕೊಡದೆ ಎರಡನೇ ಮದುವೆಯಾಗಲು (Second Marriage) ಹೋಗಿದ್ದ ಪತಿರಾಯನಿಗೆ ಮೊದಲ ಪತ್ನಿ ಮಂಟಪದಲ್ಲೇ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ (Kodagurki Village) ಮುನೇಶ್ವರ ದೇಗುಲದ ಬಳಿ ಸುರೇಶ್ ಎಂಬಾತ ಕದ್ದು ಮುಚ್ಚಿ ಎರಡನೇ ಮದುವೆಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಹೌದು…ವಿಚ್ಚೇದನ ನೀಡದೆ ಮತ್ತೊಂದು ವಿವಾಹವಾಗುತ್ತಿರುವ ವಿಚಾರ ತಿಳಿದು ಮೊದಲ ಪತ್ನಿ ಪೊಲೀಸರ ಜೊತೆಯಲ್ಲೇ ಆಗಮಿಸಿ ಮದುವೆ ನಿಲ್ಲಿಸಿದ್ದಾಳೆ. 19…

Read More

ನೆಲಮಂಗಲದ ಹೈವೇಯಲ್ಲಿ ಯುವಕರ ಸ್ಟಂಟ್! ಇದಕ್ಕೆ ಬ್ರೇಕ್ ಹಾಕುವವರು ಯಾರು?

ನೆಲಮಂಗಲ, ಮಾ.25: ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ರಸ್ತೆಯ ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅತ್ಯಂತ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ಸ್ಟಂಟ್ ಮಾಡುವ ಮೂಲಕ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಜನನಿಬಿಡ ರಸ್ತೆಯಲ್ಲೇ ಈ ಕಿರಾತಕ ಕೃತ್ಯ ನಡೆದಿದ್ದು, ಇತರ ವಾಹನ ಸವಾರರು ಮತ್ತು ಪಾದಚಾರಿಗಳು ಭಯಭೀತರಾಗಿದ್ದಾರೆ. ಇಬ್ಬರು ಯುವಕರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಜನನಿಬಿಡ ರಸ್ತೆಯಲ್ಲೇ ಮುಂದಿನ ಚಕ್ರವನ್ನು ಗಾಳಿಯಲ್ಲಿ ಎತ್ತಿ (Wheelie) ಚಲಿಸುವ ಮೂಲಕ ಜೀವದ ಹಂಗು ತೊರೆದು ಸ್ಟಂಟ್ ಮಾಡಿದ್ದಾರೆ….

Read More