All posts by nagaraj11081993

ನಾಚಿಕೆಯಾಗುವುದಿಲ್ಲವೇ?; 4 ವರ್ಷದ ಮಗು ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ

ನಾಚಿಕೆಯಾಗುವುದಿಲ್ಲವೇ?; 4 ವರ್ಷದ ಮಗು ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ತರಾಟೆ

ನವದೆಹಲಿ, ಮಾರ್ಚ್ 25: ಹರಿಯಾಣದ ಗುರುಗ್ರಾಮದಲ್ಲಿ 4 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದ ತನಿಖೆ ವೇಳೆ ಹರಿಯಾಣ ಪೊಲೀಸರು ಸೂಕ್ಷ್ಮತೆಯಿಲ್ಲದೆ ವರ್ತಿಸಿದ್ದಾರೆ, ಮಗುವಿನ ಬಳಿ ಯಾವುದೇ ಪುರಾವೆಗಳಿಲ್ಲವೆಂದು ನಿರೂಪಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಹರಿಯಾಣ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. 4 ವರ್ಷದ ಮಗುವಿನ ಮೇಲಿನ ಅತ್ಯಾಚಾರದಲ್ಲಿ ಸಾಕ್ಷಿಗಳು ಸ್ಪಷ್ಟವಾಗಿದ್ದರೂ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ. ಹಾಗೇ, ಅತ್ಯಾಚಾರಕ್ಕೊಳಗಾದ ಮಗು ಮತ್ತು ಆಕೆಯ ಪೋಷಕರೊಂದಿಗೆ ಪೊಲೀಸ್ ಅಧಿಕಾರಿಗಳ ನಡವಳಿಕೆಯನ್ನು ನ್ಯಾಯಾಲಯವು ಟೀಕಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣದ ತನಿಖೆಗೆ ಎಸ್​ಐಟಿ ರಚಿಸಲು ಆದೇಶಿಸಿದೆ. “ಸಂಪೂರ್ಣ ಮನುಷ್ಯ ಸಂವೇದನೆ”ಯೊಂದಿಗೆ ಈ ಪ್ರಕರಣವನ್ನು ಹೊಸದಾಗಿ ತನಿಖೆ ಮಾಡಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಆದೇಶಿಸಲಾಗಿದೆ. ಹಾಗೇ, ಗುರುಗ್ರಾಮ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅರೋರಾ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಕೂಡ ನೀಡಿದೆ. ಮಗುವಿನ ವೈದ್ಯಕೀಯ ವರದಿಯನ್ನು ಬದಲಾಯಿಸಿದ ವೈದ್ಯರ ವಿರುದ್ಧವೂ ನ್ಯಾಯಾಲಯವು ದೋಷಾರೋಪಣೆ ಮಾಡಿದೆ.

“ಕಮಿಷನರ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಇಡೀ ಪೊಲೀಸ್ ಪಡೆ ಅತ್ಯಾಚಾರಕ್ಕೊಳಗಾದ ಆ ಮಗುವಿನ ಬಳಿ ಯಾವುದೇ ಪುರಾವೆಗಳಿಲ್ಲ ಅಥವಾ ಪೋಷಕರ ಬಳಿ ಯಾವುದೇ ಸಾಕ್ಷಿಗಳಿಲ್ಲ ಎಂದು ಸಾಬೀತುಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಇಂತಹ ಕೃತ್ಯ ಮಾಡಲು ನಿಮಗೆ ನಾಚಿಕೆಯಾಗಬೇಕು. ಸ್ವಲ್ಪವೂ ಮನುಷ್ಯತ್ವವಿಲ್ಲದೆ ಆ ಕುಟುಂಬದೊಂದಿಗೆ ವರ್ತಿಸಲಾಗಿದೆ” ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

ಗುರುಗ್ರಾಮದ ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿ ಮಗುವಿನ ಪೋಷಕರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಪ್ರಯತ್ನ ಪಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದಿದೆ. ಇದಕ್ಕೂ ಮೊದಲು, ಆರೋಪಿಯ ಸಮ್ಮುಖದಲ್ಲಿ ಮ್ಯಾಜಿಸ್ಟ್ರೇಟ್ ಮಗುವನ್ನು ಹೇಗೆ ಪ್ರಶ್ನಿಸಿದರು ಎಂಬುದರ ಕುರಿತು ನ್ಯಾಯಾಲಯವು ಪೊಲೀಸರು ಮತ್ತು ಜಿಲ್ಲಾ ನ್ಯಾಯಾಂಗದಿಂದ ಉತ್ತರಗಳನ್ನು ಕೇಳಿತ್ತು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್ 6ರಿಂದ ಸೆಕ್ಷನ್ 10ಕ್ಕೆ ಅಪರಾಧವನ್ನು ಏಕೆ ಇಳಿಸಲಾಗಿದೆ? ಎಂದು ನ್ಯಾಯಪೀಠ ಕೇಳಿತು. ಸೆಕ್ಷನ್ 6 ಅಪರಾಧ ಸಾಬೀತಾದರೆ ಕನಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಸೆಕ್ಷನ್ 10ರ ಅಡಿಯಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ಮಾತ್ರ ನೀಡಲಾಗುತ್ತದೆ. ಇಲ್ಲಿಯೂ ಮಗುವಿನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ. “ನೀವು ಆ 4 ವರ್ಷದ ಮಗುವಿನ ಮುಗ್ಧತೆಯನ್ನು ಕೂಡ ನಂಬಿಲ್ಲ. ಆ ಮಗುವಿಗೆ ಸುಳ್ಳು ಹೇಳಲು ಕೂಡ ಬರುವುದಿಲ್ಲ. ಆದರೂ ಆ ಮಗುವಿಗೆ ಹಾಗೂ ಅವರ ಪೋಷಕರಿಗೆ ಹಿಂಸೆ ನೀಡಿದ್ದೀರಿ. ನಿಮಗೆ ಬೇಕಾದಂತೆ ಹೇಳಿಕೆ ಪಡೆಯಲು ಯತ್ನಿಸಿದ್ದೀರಿ. ಇದು ನಾಚಿಕೆಗೇಡು. ರಾಜ್ಯಕ್ಕೆ ಕಾನೂನಿನ ಬಗ್ಗೆ ಗೌರವವಿದ್ದರೆ ಆ ಅಧಿಕಾರಿಗಳನ್ನು ತಕ್ಷಣ ವರ್ಗಾಯಿಸಬೇಕು. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ ಎಂದು ನೀವು ಹೇಳುತ್ತೀರಿ. 15 ದಿನಗಳಿಂದ ನೀವು ಏನನ್ನೂ ಮಾಡಿಲ್ಲ. ಈ ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣ ನೀವು ಬಂಧಿಸಲು ಪ್ರಾರಂಭಿಸಿದಿರಿ. ಪೊಲೀಸರು ಈ ರೀತಿ ಸಂವೇದನಾರಹಿತರಾಗಿ ಕೆಲಸ ಮಾಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ಇದನ್ನೂ ಓದಿ: ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ

“ಅಫಿಡವಿಟ್‌ನಲ್ಲಿ ಎಲ್ಲೆಡೆ ಮಗುವಿನ ಹೆಸರನ್ನು ಉಲ್ಲೇಖಿಸಲಾಗಿದೆ. ಸಂತ್ರಸ್ತರ ಹೆಸರನ್ನು ಬಹಿರಂಗಪಡಿಸಬಾರದು ಎಂಬ ಕಿಂಚಿತ್ ತಿಳುವಳಿಕೆಯೂ ಪೊಲೀಸರಿಗೆ, ವಕೀಲರಿಗೆ ಇಲ್ಲವೇ? ಇದುವರೆಗೂ ಆ ಮಗುವಿನ ಮನೆಗೆ ಪೊಲೀಸರು ಭೇಟಿ ನೀಡಿಲ್ಲ. ಪೊಲೀಸರು ಮಹಾರಾಜರೇ? ಅವರು ಯಾಕೆ ಮಗುವಿನ ಮನೆಗೆ ತೆರಳಿ ಮಾಹಿತಿ ಪಡೆಯಲಿಲ್ಲ? ಪೊಲೀಸರು ಪದೇಪದೆ ಪೊಲೀಸ್ ಠಾಣೆಗೆ ಕರೆಸಿ ಇನ್ನಿಲ್ಲದ ರೀತಿ ಪ್ರಶ್ನಿಸಿ ಮಗುವಿಗೆ ಮಾನಸಿಕ ಹಿಂಸೆ ನೀಡಿದ್ದೀರಿ. ಇದರಿಂದ ಮಗುವಿನ ಆಘಾತ ಇನ್ನಷ್ಟು ಹೆಚ್ಚಾಗಿದೆ. ಇಂತಹ ಬೇಜವಾಬ್ದಾರಿ ವರ್ತನೆಯನ್ನು ಕೋರ್ಟ್ ಸಹಿಸುವುದಿಲ್ಲ” ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

“ಈ ಪ್ರಕರಣದಲ್ಲಿ ಇನ್ನೂ ಆಳವಾದ ತನಿಖೆಯ ಅಗತ್ಯವಿದೆ. ಮಗು ಮತ್ತು ಆಕೆಯ ಪೋಷಕರ ಘನತೆಯನ್ನು ಕಾಪಾಡುವ ಸಂಪೂರ್ಣ ಮಾನವೀಯ ವಿಧಾನದೊಂದಿಗೆ ಈ ಘಟನೆಯನ್ನು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ನಮಗೆ ತೋರುತ್ತದೆ. ಇದು ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಲಾದ ಒಂದು ಸ್ಪಷ್ಟ ಪ್ರಕರಣವಾಗಿದೆ. ಹೀಗಾಗಿ, ಹೊಸದಾದ ಎಸ್​ಐಟಿ ರಚನೆಯಾಬೇಕು. ಹೊಸದಾಗಿ ತನಿಖೆ ನಡೆಯಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಏನಿದು ಪ್ರಕರಣ?:

ಗುರುಗ್ರಾಮದ ಸೆಕ್ಟರ್ 54ರಲ್ಲಿರುವ ಅಪಾರ್ಟ್​ಮೆಂಟ್​​ನಲ್ಲಿ ಸುಮಾರು 2 ತಿಂಗಳ ಕಾಲ 4 ವರ್ಷದ ಮಗುವಿನ ಮೇಲೆ ಮನೆಕೆಲಸದಾಕೆಯ ಜೊತೆಗೆ ಬರುತ್ತಿದ್ದ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಬಗ್ಗೆ ಮಗುವಿನ ಪೋಷಕರು ಮಾಡಿದ ಆರೋಪಗಳ ನಂತರ, ಫೆಬ್ರವರಿ 4ರಂದು ಸೆಕ್ಟರ್ 53 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ಪೋಕ್ಸೊ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಪೊಲೀಸರ ಪ್ರಕಾರ, ಈ ಘಟನೆ ಡಿಸೆಂಬರ್ 2025 ಮತ್ತು ಜನವರಿ 2026ರ ನಡುವೆ ನಡೆದಿದ್ದರೂ ಆ ಬಾಲಕಿ ತನ್ನ ತಾಯಿಗೆ ತನ್ನ ಮೇಲಿನ ದೌರ್ಜನ್ಯದ ಬಗ್ಗೆ ತಿಳಿಸಿದ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಮಗು ಮೊದಮೊದಲು ತನ್ನ ಅಪ್ಪ-ಅಮ್ಮನ ಬಳಿ ಯಾವ ವಿಚಾರವನ್ನೂ ಹೇಳಿರಲಿಲ್ಲ. ಯಾರಿಗೂ ಹೇಳಬಾರದೆಂದು ಮನೆಕೆಲಸದಾಕೆ ಆ ಮಗುವಿಗೆ ಹೆದರಿಸಿದ್ದಳು. ಮನೆಯಲ್ಲಿ ಆ ಮಗುವಿನ ಪೋಷಕರು ಇಲ್ಲದಿದ್ದಾಗ ಈ ಅತ್ಯಾಚಾರ ನಡೆಸಲಾಗುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ಪೆದ್ದಿ’ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ; ಕಣ್ಣಿನ ಮೇಲ್ಭಾಗ 4 ಹೊಲಿಗೆ

ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ ಅವರು ‘ಪೆದ್ದಿ’ (Peddi) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬೇಸರದ ವಿಷಯ ಏನೆಂದರೆ, ಈ ಸಿನಿಮಾದ ಚಿತ್ರೀಕರಣದ ವೇಳೆ ರಾಮ್ ಚರಣ್ ಅವರು ಗಾಯಗೊಂಡಿದ್ದಾರೆ. ಮಂಗಳವಾರ (ಮಾರ್ಚ್ 24) ಹೈದರಾಬಾದ್‌ನಲ್ಲಿ ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಈ ಘಟನೆ ನಡೆದಿದೆ. ರಾಮ್ ಚರಣ್ (Ram Charan) ಕಣ್ಣಿಗೆ ಗಾಯವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ. ಆದ್ದರಿಂದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ದೊಡ್ಡ ಗಾಯ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ರಾಮ್ ಚರಣ್ ಅವರ ಆಪ್ತ ಮೂಲಗಳು, ನಟನ ಕಣ್ಣಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿವೆ. ‘ಮಂಗಳವಾರ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ರಾಮ್ ಚರಣ್ ಅವರ ಕಣ್ಣಿನ ಮೇಲ್ಭಾಗದಲ್ಲಿ ಸಣ್ಣ ಗಾಯವಾಗಿದೆ. ಇದಕ್ಕಾಗಿ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಆದರೆ ಅವರ ಕಣ್ಣು ಸುರಕ್ಷಿತವಾಗಿದೆ. ಇದು ಸಣ್ಣ ಗಾಯವಾದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಅವರ ತಂಡ ಸ್ಪಷ್ಟಪಡಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಗಾಯವಾದರೂ ಸಹ ರಾಮ್ ಚರಣ್ ಅವರು ಕೆಲಸಕ್ಕೆ ವಿರಾಮ ನೀಡಿಲ್ಲ. ವೈದ್ಯಕೀಯ ಚಿಕಿತ್ಸೆಯ ನಂತರ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ವಿಶ್ರಾಂತಿ ಪಡೆಯದೆ ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದೆ. ಅವರ ವೃತ್ತಿಪರತೆಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಸಿನಿಮಾಗೆ ‘ಉಪ್ಪೇನಾ’ ಖ್ಯಾತಿಯ ಬುಚ್ಚಿಬಾಬು ಸನಾ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ನಾಯಕಿಯಾಗಿ ನಟಿಸುತ್ತಿದ್ದು, ‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಕುತೂಹಲ ಮೂಡಿಸಿದೆ. ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಎ.ಆರ್. ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇದನ್ನೂ ಓದಿ: ಸಾಕಿದ ಹಕ್ಕಿಯೊಂದಿಗೆ ರಾಮ್ ಚರಣ್ ಮಾತುಕತೆ: ವಿಡಿಯೋ

‘ವೃದ್ಧಿ ಸಿನಿಮಾಸ್’ ಮೂಲಕ ‘ಪೆದ್ದಿ’ ಸಿನಿಮಾ ನಿರ್ಮಾಣ ಆಗುತ್ತಿದೆ. ಮೊದಲು ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಬಳಿಕ ರಿಲೀಸ್ ದಿನಾಂಕ ಮುಂದೂಡಲಾಯಿತು. ಏಪ್ರಿಲ್ 30ರಂದು ವಿಶ್ವದಾದ್ಯಂತ ಈ ಚಿತ್ರ ಅದ್ದೂರಿಯಾಗಿ ತೆರೆಕಾಣಲಿದೆ. ರಾಮ್ ಚರಣ್ ಅವರ ಜನ್ಮದಿನದ (ಮಾರ್ಚ್ 27) ಪ್ರಯುಕ್ತ ಚಿತ್ರದ ವಿಶೇಷ ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊಬೈಲ್ ಕೊಡಲ್ಲ, ನಾನೇ ಸೆಲ್ಫೀ ತೆಗೀತೀನಿ! ಮಹಿಳೆಯ ಫೋನ್ ಕಸಿದ ಮಂಗನ ಕೆಲಸಕ್ಕೆ ನೆಟ್ಟಿಗರು ಫಿದಾ; ವಿಡಿಯೋ ವೈರಲ್!

ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಮಾಹಿತಿಯ ಪ್ರಕಾರ, ಪಠಾಣ್ ಬಳಿಯ ಅಘರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೊಬೈಲ್ ಫೋನ್‌ನೊಂದಿಗೆ ನಿಂತಿದ್ದಾಗ ಇದ್ದಕ್ಕಿದ್ದಂತೆ ಮುಸುವಗಳ (ಕೋತಿಗಳ ಒಂದು ಪ್ರಭೇದ) ಗುಂಪು ಅಲ್ಲಿಗೆ ಬಂದಿದೆ. ಈ ಸಮಯದಲ್ಲಿ, ಒಂದು ಕೋತಿ ಮಹಿಳೆಯ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡಿದೆ. ನಂತರ ನಡೆದ ಘಟನೆ ಅಲ್ಲಿದ್ದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಕೋತಿ ಮೊಬೈಲ್ ಅನ್ನು ಒಂದು ಬದಿಯಲ್ಲಿ ಹಿಡಿದುಕೊಂಡು ಸ್ಕ್ರೀನ್​ನೊಂದಿಗೆ ಆಟವಾಡಲು ಪ್ರಾರಂಭಿಸಿದೆ. ಅದು ಮೊಬೈಲ್ ಬಳಕೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಒಂದು ಹಂತದಲ್ಲಿ, ಕೋತಿ ಸೆಲ್ಫೀ ತೆಗೆಯಲು ಯತ್ನಿಸಿದಂತೆ ಕಾಣಿಸಿದೆ.

ಗುಂಪಿನಲ್ಲಿದ್ದ ಇತರ ಮಂಗಗಳು ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿವೆ. ಆದರೆ ಈ ಮಂಗ ಮುಸುವ ಕೊಡಲು ನಿರಾಕರಿಸಿದೆ. ಈ ಎಲ್ಲ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕ ಪ್ರದೀಪ್ ಈಶ್ವರ್​​​ಗೆ ಮಾನಸಿಕ ತಪಾಸಣೆ ಮಾಡಿಸಿ, ಚುನಾವಣಾ ಆಯೋಗಕ್ಕೆ ಮನವಿ

ಮಂಡ್ಯ, ಮಾ.25: ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಅಸಂವಿಧಾನಿಕ ಪದಬಳಕೆ ಹಾಗೂ ಲಘುವಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಗಳು ಸಂಸ್ಕಾರಯುತವಾಗಿಲ್ಲ. ಆದ್ದರಿಂದ ಅವರನ್ನು ತಕ್ಷಣವೇ ನಿಮಾನ್ಸ್ (NIMHANS) ಆಸ್ಪತ್ರೆಗೆ ಸೇರಿಸಿ ಮಾನಸಿಕ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮಾನಸಿಕವಾಗಿ ಸದೃಢರಾಗಿದ್ದಾರೆ ಎಂಬ ಪ್ರಮಾಣಪತ್ರ ತರುವವರೆಗೆ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂಬ ವಿಲಕ್ಷಣ ಬೇಡಿಕೆಯನ್ನು ಇಡಲಾಗಿದೆ.

ಇದನ್ನೂ ಓದಿ: ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ, ಕಾಮಗಾರಿ ಸ್ಥಗಿತಗೊಳಿಸಲು ಕಾರಣವೇನು?

ಇಲ್ಲಿದೆ ನೋಡಿ ವಿಡಿಯೋ:

ಬಹಿರಂಗ ಸಭೆಗಳಲ್ಲಿ ಭಾಗವಹಿಸಿ ಶಾಂತಿ ಕದಡುತ್ತಿದ್ದಾರೆ ಎಂಬ ಕಾರಣ ನೀಡಿ, ಅವರನ್ನು ದಾವಣಗೆರೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಬಹುವಚನ ಬಳಕೆ ಮತ್ತು ಸಂವಿಧಾನಿಕ ಪದಗಳ ಬಗ್ಗೆ ಪಾಠ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

456 ಕೋಟಿಯಿಂದ 16,600 ಕೋಟಿವರೆಗೆ; 18 ವರ್ಷಗಳಲ್ಲಿ ಆರ್​ಸಿಬಿಯನ್ನು ಆಳಿದವರಿವರು

ಕಳೆದ ನವೆಂಬರ್​ನಿಂದ ಕೇಳಿಬರುತ್ತಿದ್ದ ಸುದ್ದಿ ಇದೀಗ ನಿಜವಾಗಿದೆ. ಐಪಿಎಲ್​ನ ಅತ್ಯಂತ ಜನಪ್ರಿಯ ತಂಡ ಹಾಗೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಹೊಸ ಮಾಲೀಕರ ಕೈಸೇರಿದೆ. ಸತತ 18 ವರ್ಷಗಳ ಬಳಿಕ ಐಪಿಎಲ್​ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್​ಸಿಬಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಬರೋಬ್ಬರಿ 16,600 ಕೋಟಿ ರೂಗಳಿಗೆ ಆರ್​ಸಿಬಿಯನ್ನು ಖರೀದಿ ಮಾಡಲಾಗಿದೆ. ವರದಿಯ ಪ್ರಕಾರ, ಆರ್​ಸಿಬಿ ಪ್ರಸ್ತುತ ಮಾಲೀಕತ್ವ ನಾಲ್ಕು ಕಂಪನಿಗಳ ಒಕ್ಕೂಟದ ಕೈಸೇರಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಆರ್​ಸಿಬಿಯ ಮಾಲೀಕತ್ವ ಹೊಂದಿವೆ. ಈ 18 ವರ್ಷಗಳಲ್ಲಿ ಆರ್​ಸಿಬಿ ಮೂರನೇ ಬಾರಿಗೆ ಹೊಸ ಮಾಲೀಕರನ್ನು ಪಡೆದುಕೊಂಡಿದೆ. ಹಾಗಿದ್ದರೆ, ಈ ಹಿಂದೆ ಆರ್​ಸಿಬಿ ಎಷ್ಟು ವರ್ಷ ಯಾರ ಒಡೆತನದಲ್ಲಿತ್ತು ಎಂಬುದನ್ನು ನೋಡುವುದಾದರೆ..

456 ಕೋಟಿ ರೂ.ಗೆ ಆರ್​ಸಿಬಿ ಖರೀದಿ

2008 ರಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ರಾರಂಭವಾಗುವ ಮೊದಲು ಬಿಸಿಸಿಐ ಒಟ್ಟು ಎಂಟು ಫ್ರಾಂಚೈಸಿಗಳನ್ನು ಮಾರಾಟ ಮಾಡಿತ್ತು. ಈ ವೇಳೆ ಕನ್ನಡಿಗ ಹಾಗೂ ಕಿಂಗ್‌ಫಿಷರ್ ಮಾಲೀಕ ವಿಜಯ್ ಮಲ್ಯ ಬೆಂಗಳೂರು ತಂಡವನ್ನು ಸರಿಸುಮಾರು 456 ಕೋಟಿ ರೂ.ಗೆ ಖರೀದಿಸಿದ್ದರು. ಈ ಮೂಲಕ ಆರ್​ಸಿಬಿ ಎರಡನೇ ಅತ್ಯಂತ ದುಬಾರಿ ಫ್ರಾಂಚೈಸಿ ಎನಿಸಿಕೊಂಡಿತ್ತು. ಮೊದಲ ಸ್ಥಾನದಲ್ಲಿ ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿತ್ತು. ಇದೀಗ ಹೊಸ ಮಾಲೀಕರ ಕೈಸೇರಿರುವ ಆರ್​ಸಿಬಿ ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ತಂಡ ಎನಿಸಿಕೊಂಡಿದೆ.

2008 ರಲ್ಲಿ ಆರ್​ಸಿಬಿ ತಂಡವನ್ನು ಖರೀದಿಸಿದ್ದರ ಹಿಂದಿದ್ದ ಉದ್ದೇಶವನ್ನು ವಿವರಿಸಿದ್ದ ಅಂದಿನ ಮಾಲೀಕ ವಿಜಯ್ ಮಲ್ಯ, ‘ಆರ್‌ಸಿಬಿಯನ್ನು ಖರೀದಿಸುವ ಹಿಂದಿನ ನನ್ನ ಏಕೈಕ ಉದ್ದೇಶ ನನ್ನ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅನ್ನು ಪ್ರಚಾರ ಮಾಡುವುದೇ ಹೊರತು, ಅದರ ಹಿಂದೆ ಯಾವುದೇ ಕ್ರಿಕೆಟ್ ಪ್ರೀತಿ ಇರಲಿಲ್ಲ’ ಎಂದಿದ್ದರು.

2016 ರಲ್ಲಿ ಡಿಯಾಜಿಯೊ ಪಾಲಾದ ಆರ್​ಸಿಬಿ

ಆದಾಗ್ಯೂ ಉದ್ಯಮಿ ವಿಜಯ್ ಮಲ್ಯ ಸಾಮ್ರಾಜ್ಯ ನಷ್ಟದಿಂದ ದಿವಾಳಿಯಾದಾಗ 2012 ರಲ್ಲಿ ಬ್ರಿಟನ್ ಮೂಲಕ ಡಿಯಾಜಿಯೊ ಸಂಸ್ಥೆ, ಮಲ್ಯ ಒಡೆತನದಲ್ಲಿದ್ದ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಅನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ನಂತರ ಆರ್ಥಿಕ ಮತ್ತು ಕಾನೂನು ತೊಂದರೆಗೆ ಸಿಲುಕಿದ ವಿಜಯ್ ಮಲ್ಯ, ದೇಶ ತೊರೆದಿದ್ದು ಮಾತ್ರವಲ್ಲದೆ 2016 ರಲ್ಲಿ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್ ಮಂಡಳಿಯಿಂದ ಹೊರಬಂದರು. ಪರಿಣಾಮವಾಗಿ ಡಿಯಾಜಿಯೊ ಸಂಸ್ಥೆ, ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್ ಜೊತೆಗೆ ಆರ್​ಸಿಬಿಯ ಮಾಲೀಕತ್ವವನ್ನು ಅಧಿಕೃತವಾಗಿ ಪಡೆದುಕೊಂಡಿತು.

ಹೆಸರು ಬದಲಿಸಿದ ಬಳಿಕ ಟ್ರೋಫಿ ಗೆದ್ದಿದ್ದ ಆರ್​ಸಿಬಿ

ನಂತರ 2023 ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್​ನಲ್ಲೂ ತನ್ನ ಸಾಮ್ರಾಜ್ಯ ವಿಸ್ತರಿಸಿದ ಡಿಯಾಜಿಯೊ ಸಂಸ್ಥೆ, ಆರ್​ಸಿಬಿ ಮಹಿಳಾ ತಂಡವನ್ನು ಖರೀದಿ ಮಾಡಿತು. ಬಳಿಕ 2024 ರಲ್ಲಿ ತಂಡದ ಹೆಸರನ್ನು ಬದಲ್ಲಿಸಿದ್ದ ಡಿಯಾಜಿಯೊ, ‘Royal Challengers Bangalore’ ಎಂದಿದ್ದ ಹೆಸರನ್ನು ‘Royal Challengers Bengaluru’ ಎಂದು ಬದಲಿಸಿತ್ತು. ಇದಕ್ಕೆ ಶುಭ ಸೂಚಕವೆಂಬಂತೆ ಹೆಸರು ಬದಲಿಸಿದ್ದ ಒಂದು ವರ್ಷದ ಬಳಿಕ ಅಂದರೆ 2025 ರಲ್ಲಿ ಆರ್​ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಇದೀಗ 2026 ರ ಸೀಸನ್ ಆರಂಭಕ್ಕೂ ಮುನ್ನ ಹೊಸ ಮಾಲೀಕರನ್ನು ಬಡೆದುಕೊಂಡಿರುವ ಆರ್​ಸಿಬಿ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್​ಗೆ ಹೊಸ ಸಂಕಷ್ಟ, ದೆಹಲಿಯ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ನೋಟಿಸ್

ನವದೆಹಲಿ, ಮಾರ್ಚ್​ 25: ಕಾಂಗ್ರೆಸ್​​(Congress)ಗೆ ಹೊಸ ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಮಾಡಲಾಗಿದೆ. ಖಾಲಿ ಮಾಡಲು ಮಾರ್ಚ್​ 28ರವರೆಗೆ ಅವಕಾಶ ನೀಡಲಾಗಿದೆ. ಪಕ್ಷವು ತನ್ನ ಕಾರ್ಯಾಚರಣೆಯನ್ನು ಈಗಾಗಲೇ ಐಟಿಒ ಬಳಿಯ ಇಂದಿರಾ ಭವನದಲ್ಲಿರುವ ತನ್ನ ಹೊಸ ಪ್ರಧಾನ ಕಚೇರಿಗೆ ಸ್ಥಳಾಂತರಿಸಿದ್ದರೂ ಸಹ,  ಪ್ರಮುಖ ನಿರ್ಧಾರಗಳನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗುತ್ತಿತ್ತು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಕ್ರಮವನ್ನು ಟೀಕಿಸಿ, ಇದನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ ಮತ್ತು ಪಕ್ಷವು ಲಭ್ಯವಿರುವ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ ಎಂದಿದ್ದಾರೆ.

ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್‌ನ ಕೇಂದ್ರ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತ್ತು. ಪಕ್ಷವು ಕಳೆದ ವರ್ಷ ತನ್ನ ಹೊಸ ಪ್ರಧಾನ ಕಚೇರಿಯಾದ ಇಂದಿರಾ ಭವನಕ್ಕೆ ಸ್ಥಳಾಂತರಗೊಂಡರೂ, ಪಕ್ಷದ ಚಟುವಟಿಕೆಗಳು ಹಳೆಯ ಕಚೇರಿಯಲ್ಲಿಯೇ ಮುಂದುವರೆದಿತ್ತು.

ಮತ್ತಷ್ಟು ಓದಿ: ಕಾಂಗ್ರೆಸ್ ಮುಖಂಡನ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಈ ನೋಟಿಸ್ ಬಗ್ಗೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವ ಸರ್ಕಾರವಲ್ಲ. ಇದು ದುರದೃಷ್ಟಕರ. ನಾವು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.

ಬುಧವಾರ ಹೊರಡಿಸಲಾದ ನೋಟಿಸ್‌ನಲ್ಲಿ, ಎಸ್ಟೇಟ್ ಇಲಾಖೆಯು 24 ಅಕ್ಬರ್ ರಸ್ತೆಯ ಜೊತೆಗೆ, 5 ರೈಸಿನಾ ರಸ್ತೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿಯನ್ನು ಸಹ ಮಾರ್ಚ್ 28 ರೊಳಗೆ ಖಾಲಿ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಬಂಗಲೆಯನ್ನು ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದ್ದು, ಅದರ ಅಂಗಸಂಸ್ಥೆ ಘಟಕವು ಅದನ್ನು ಬಳಸುತ್ತಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಅಕ್ಬರ್ ರಸ್ತೆ ಕಚೇರಿ ಮತ್ತು ಯುವ ಕಾಂಗ್ರೆಸ್ ಕಚೇರಿಗೆ ನೋಟಿಸ್ ಬಂದಿದೆ. ಈಗ ದೇಶದ ಆದ್ಯತೆ ಏನು ಎಂಬ ಪ್ರಶ್ನೆ ಮೂಡಿದೆ. ಎಲ್​ಪಿಜಿಯನ್ನು ಯಾವುದೇ ಅಡೆತಡೆ ಇಲ್ಲದೆ ದೇಶಕ್ಕೆ ತರುವುದು, ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಗರಂ ಮಸಾಲ, ಬಾಳೆಹಣ್ಣು, ದ್ರಾಕ್ಷಿ, ಅರಿಶಿನ, ಬಾಸ್ಮರಿ ಅಕ್ಕಿ ಎಲ್ಲವೂ ಈಗ ಸಿಲುಕಿಕೊಂಡಿದೆ. ಇದು ನಮ್ಮ ದೇಶದ ಆದ್ಯತೆಯಾಗಬೇಕು ಎಂದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಈಗ ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡಲು ಸಾಧ್ಯವಿಲ್ಲ, ಕಾಮಗಾರಿ ಸ್ಥಗಿತಗೊಳಿಸಲು ಕಾರಣವೇನು?

ಬೆಂಗಳೂರು, ಮಾ.25: ಇಸ್ರೇಲ್-ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ಈಗ ಬೆಂಗಳೂರಿನ ರಸ್ತೆಗಳ ಮೇಲೂ ಬಿದ್ದಿದೆ. ಯುದ್ಧದ ಹಿನ್ನೆಲೆಯಲ್ಲಿ ಬಿಟುಮೆನ್ (Bitumen) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಡಾಂಬರು ಮಿಶ್ರಣಕ್ಕೆ ಅತ್ಯಗತ್ಯವಾಗಿರುವ ‘ಬಿಟುಮೆನ್’ ಕಚ್ಚಾ ತೈಲದ ಉಪ ಉತ್ಪನ್ನವಾಗಿದೆ. ಭಾರತಕ್ಕೆ ಇದರ ಬಹುಪಾಲು ಪೂರೈಕೆ ಕೊಲ್ಲಿ ರಾಷ್ಟ್ರಗಳಿಂದ ಆಗುತ್ತದೆ. ಯುದ್ಧದಿಂದಾಗಿ ಹಡಗುಗಳ ಸಂಚಾರ ಮತ್ತು ಪೂರೈಕೆಗೆ ಪೆಟ್ಟು ಬಿದ್ದಿದೆ. ಬೆಂಗಳೂರಿನ ಗುತ್ತಿಗೆದಾರರು ಮಂಗಳೂರು ರಿಫೈನರೀಸ್ (MRPL) ಮತ್ತು ಮದ್ರಾಸ್ ರಿಫೈನರೀಸ್ ಮೂಲಕ ಬಿಟುಮೆನ್ ಪಡೆಯುತ್ತಿದ್ದರು. ಆದರೆ ಈಗ ಅಲ್ಲಿಯೂ ಪೂರೈಕೆ ಕಡಿಮೆಯಾಗಿದೆ. ಪೂರೈಕೆ ಕಡಿಮೆ ಇರುವುದರಿಂದ ಬಿಟುಮೆನ್ ಬೆಲೆ ಗಗನಕ್ಕೇರಿದೆ. ಹಿಂದೆ ಒಂದು ಟನ್ ಬಿಟುಮೆನ್‌ಗೆ 45,000 ರೂ. ಇದ್ದ ದರ, ಈಗ 60,000 ರೂ.ಗೆ ಏರಿಕೆಯಾಗಿದೆ. ದರ ಏರಿಕೆಯಿಂದಾಗಿ ಗುತ್ತಿಗೆದಾರರ ವೆಚ್ಚ ವಿಪರೀತ ಹೆಚ್ಚಾಗಿದ್ದು, ಹಳೆಯ ದರದಲ್ಲಿ ಕಾಮಗಾರಿ ಮುಂದುವರಿಸುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ವರದಿ: ಅರುಣ್​ ಕುಮಾರ್​​​​ ಟಿವಿ9 ಮೆಟ್ರೋ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ಶಾಲು ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಮಾತು!

ಬೆಂಗಳೂರು, (ಮಾರ್ಚ್ 25): ವಿಧಾನಸಭೆಯಲ್ಲಿ ಬಜೆಟ್​ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಕೆಲ ಸ್ವಾರಸ್ಯಕರ ಪ್ರಸಂಗಗಳು ಜರುಗಿವೆ. ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಶಾಲ್ ಹಾಕುತ್ತಿರುವ ಬಗ್ಗೆ ಚರ್ಚೆಯಾಗಿದ್ದು, ಬಿಜೆಪಿ ಶಾಸಕ ಸುನೀಲ್​ಕುಮಾರ್​ ಮಧ್ಯಪ್ರವೇಶಿಸಿ, ನೀವು ಶಾಲು ಹಾಕಿದ‌ಮೇಲೆ ಮುಖ್ಯಮಂತ್ರಿ ಆಗಿದ್ದೀರಿ. ಅದಕ್ಕೆ‌ ಡಿಕೆ ಕೂಡ ಶಾಲು ಹಾಕ್ತಿದ್ದಾರೆಂದು ಸಿದ್ದರಾಮಯ್ಯನವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಟವೆಲ್ ಹಾಕುತ್ತಿದ್ದೆ. ಅದು ಯಾವಾಗಲೂ ಬಿದ್ದು ಹೋಗುತ್ತಿತ್ತು. ಅವತ್ತಿನಿಂದ ನಾನು ಶಾಲು ಹಾಕ್ತಿರೋದು, ಬೇರೆ ಅರ್ಥ ಬೇಡ. ನಾನು ದೇವರಿದ್ದಾನೆ ಎನ್ನುಉದನ್ನು ಒಪ್ಪುತ್ತೇನೆ. ಆದರೆ ದೇವಸ್ಥಾನದಲ್ಲಿಲ್ಲ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಯ್ಯ, ಈ ಬಗ್ಗೆ ಬಸವಣ್ಣ ಅವರು ಹೇಳಿದ್ರು ಎಂದು ಬಸವಣ್ಣನ ವಚನದ ಮೂಲಕ, ಸುನೀಲ್ ಕುಮಾರ್ ಹೆ ಟಾಂಗ್ ಕೊಟ್ಟರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದ ಮಾಜಿ ಶಾಸಕನ ಪುತ್ರನ ಸಾವಿಗೆ ಬಿಗ್ ಟ್ವಿಸ್ಟ್! ಮಹಿಳೆಯೊಂದಿಗಿನ ಅಕ್ರಮ ಸಂಬಂಧಕ್ಕೆ ನಡೀತಾ ಕೊಲೆ?

ಧಾರವಾಡ, ಮಾರ್ಚ್​ 25: ಜಿಲ್ಲೆಯಲ್ಲಿ ಮಾಜಿ ಶಾಸಕನ ಪುತ್ರನ ಹತ್ಯೆ ಪ್ರಕರಣ ಭಾರೀ ತಿರುವು ಪಡೆದಿದ್ದು, ಘಟನೆ ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ಮತ್ತಷ್ಟು ಗಾಢವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವ ಧಾರವಾಡ (Dharwad) ತಾಲೂಕಿನ ರಾಮಾಪುರ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು.  ಈ ಪ್ರಕರಣದಲ್ಲಿ ಮೂವರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಗೆ ಸಾಲದ ರೂಪದಲ್ಲಿ ಹಣ ನೀಡಿದ್ದ ರಾಜು

ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಗುರುತು ಸಿಗದಷ್ಟು ಸ್ಥಿತಿಯಲ್ಲಿ ಸುಟ್ಟು ಕರಕಲಾದ ರಾಜುನ ಶವ ಸಿಕ್ಕಿತ್ತು. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆಯಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಮೃತನಿಗಿದ್ದ ಅನೈತಿಕ ಸಂಬಧದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದೆ.

ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಾಜು ಬೋಳಶೆಟ್ಟಿ, ದೈಹಿಕ ಸಂಪರ್ಕಕ್ಕೆ ಬಂದಾಗ ಆಕೆಗೆ ಹಣ ನೀಡುತ್ತಿದ್ದ. ಸಾಲದ ರೂಪದಲ್ಲಿಯೇ ಮಹಿಳೆಗೆ ಹಣ ನೀಡುತ್ತದ್ದ ರಾಜು, 2 ಲಕ್ಷ ರೂ. ಗೂ ಹೆಚ್ಚು ಹಣ ಕೊಟ್ಟಿದ್ದ. ಇದೇ ವಿಚಾರಕ್ಕೆ ಮಹಿಳೆ ಹಾಗೂ ರಾಜು ನಡುವೆ ಮನಸ್ತಾಪ ಆಗಿತ್ತು. ನಿನ್ನೆಯೂ ಆತ ದೈಹಿಕ ಸಂಪರ್ಕಕ್ಕಾಗಿ ಹೊಲಕ್ಕೆ ಮಹಿಳೆಯನ್ನು ಕರೆದಿದ್ದ. ಇದೇ ವೇಳೆ ಮಹಿಳೆ, ಆಕೆಯ ಮಗ ಹಾಗೂ ಆಕೆಯ ಪ್ರಿಯಕರ ಸೇರಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ

ಶವವನ್ನು ಕಾರು ಸಮೇತ ಸುಟ್ಟ ಆರೋಪಿಗಳು

ರಾಜು ಬೋಳಶೆಟ್ಟಿಯ ಕಾರಿನಲ್ಲೇ ರಾಮಾಪುರ ಅರಣ್ಯಕ್ಕೆ ಆತನ ಶವವನ್ನು ತಂದ ಈ ಮೂವರು, ಹಿಂದಿನ ಸೀಟಿನಲ್ಲಿ ಶವವಿಟ್ಟು, ತಾವು ತಂದಿದ್ದ 10 ಲೀ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಘಟನೆ ಬಳಿಕ ಮೂವರೂ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಕೆಲವೇ ಘಂಟೆಗಳಲ್ಲಿ ಮೂವರನ್ನೂ ಸೆರೆ ಹಿಡಿಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತದಲ್ಲಿ ಪಿಎನ್​ಜಿ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್​ಪಿಜಿ ಬಿಕ್ಕಟ್ಟು

ನವದೆಹಲಿ, ಮಾರ್ಚ್ 25: ಎಲ್​ಪಿಜಿ ಪೂರೈಕೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಈಗ ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಹೆಚ್ಚಿಸಲು ಅನಿವಾರ್ಯವಾಗಿಸಿದೆ. ಸರ್ಕಾರವು ನೈಸರ್ಗಿಕ ಅನಿಲ (Natural Gas) ಸೌಕರ್ಯಗಳಾದ ಪಿಎನ್​ಜಿ ಮತ್ತು ಸಿಎನ್​ಜಿ ಲಭ್ಯತೆ ಹೆಚ್ಚಿಸಲು ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬೇಕಾದ ಸುಧಾರಣೆಗಳನ್ನು ತರುತ್ತಿದೆ. ಪಿಎನ್​ಜಿ ಸೌಕರ್ಯವನ್ನು ವೇಗವಾಗಿ ಹೆಚ್ಚಿಸಲು ಈ ಸುಧಾರಣೆ ತರಲಾಗಿದೆ. ಈ ಸಂಬಂಧ ಸರ್ಕಾರವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಆದೇಶ 2026 ಅನ್ನು ಹೊರಡಿಸಿದೆ.

ವಿವಿಧ ಪ್ರದೇಶಗಳಿಗೆ ನ್ಯಾಚುರಲ್ ಗ್ಯಾಸ್ ಪೈಪ್​ಲೈನ್ ಹಾಕಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್​ಗಳಿಗೆ ಅನೇಕ ತಡೆಗಳು, ಸಮಸ್ಯೆಗಳಿವೆ. ಭೂಮಿ ಸಿಗದೇ ಇರುವುದು, ಅನುಮೋದನೆ ದೊರಕದೇ ಇರುವುದು, ಅಧಿಕ ಶುಲ್ಕ ಇರುವುದು ಇತ್ಯಾದಿ ತಡೆಗಳನ್ನು ನಿವಾರಿಸಿ, ನ್ಯಾಚುರಲ್ ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಪೈಪ್​ಲೈನ್ ಅಳವಡಿಸುವ ಕಾರ್ಯಗಳನ್ನು ಸುಗಮಗೊಳಿಸಲು ಸರ್ಕಾರವು ಏಕರೀತಿಯ ಒಂದು ಫ್ರೇಮ್​ವರ್ಕ್ ರೂಪಿಸುವುದು ಅಗತ್ಯ ಇದೆ ಎಂದು ಪೆಟ್ರೋಲಿಯಂ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಖರೀದಿಸಿದ ಭಾರತ

ಎಲ್​ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ಸರಿದೂಗಿಸಲು ಸರ್ಕಾರವು ನೈಸರ್ಗಿಕ ಅನಿಲದತ್ತ ಗಮನ ಹರಿಸಿದೆ. ನ್ಯಾಚುರಲ್ ಗ್ಯಾಸ್​ಗೆ ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಕಡಿಮೆ ಇದೆ. ಹೀಗಾಗಿ, ಎಲ್​ಪಿಜಿಗೆ ಹೋಲಿಸಿದರೆ ಎಲ್​ಎನ್​ಜಿ ಮತ್ತು ಪಿಎನ್​ಜಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ಪಿಎನ್​ಜಿ ಅಥವಾ ಪೈಪ್ಡ್ ಗ್ಯಾಸ್ ನೆಟ್ವರ್ಕ್ ಎಲ್ಲೆಡೆ ಸಾಕಷ್ಟು ಮಟ್ಟದಲ್ಲಿ ಲಭ್ಯ ಇಲ್ಲದಿರುವುದು ಪ್ರಮುಖ ಹಿನ್ನಡೆಯಾಗಿದೆ.

ಭಾರತದಲ್ಲಿ ಒಂದೂವರೆ ಕೋಟಿಗೂ ಸ್ವಲ್ಪ ಹೆಚ್ಚು ಮನೆಗಳಿಗೆ ಪಿಎನ್​ಜಿ ಕನೆಕ್ಷನ್ ಇದೆ. ಹೆಚ್ಚಿನ ನಗರಗಳಲ್ಲಿ ಪಿಎನ್​ಜಿ ಪೂರೈಕೆ ಇದೆಯಾದರೂ ವ್ಯಾಪಕವಾಗಿ ಪೈಪ್​ಲೈನ್ ಅಳವಡಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಕೆಲ ಪ್ರದೇಶಗಳಲ್ಲಿ ಪೈಪ್​ಲೈನ್ ಇದ್ದರೆ, ಮತ್ತಷ್ಟು ಪ್ರದೇಶಗಳಲ್ಲಿ ಅಳವಡಿಕೆಯೇ ಆಗಿಲ್ಲ. ಹೀಗಾಗಿ, ಹೆಚ್ಚಿನ ಮನೆಗಳಿಗೆ ಪಿಎನ್​ಜಿ ಸಂಪರ್ಕವೇ ಲಭ್ಯ ಇಲ್ಲದಂತಾಗಿದೆ. ಈ ಸಮಸ್ಯೆ ನೀಗಿಸಲು ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಈ ಆದೇಶವು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ಸಿಗಲಿದೆ. ತ್ವರಿತವಾಗಿ ಪೈಪ್​ಲೈನ್​ಗಳನ್ನು ಅಳವಡಿಸಲು ಸಾಧ್ಯವಾಗಬಹುದು. ಇದರಿಂದ ಜನರನ್ನು ಎಲ್​ಪಿಜಿಯಿಂದ ಪಿನ್​ಜಿ ಸಂಪರ್ಕಕ್ಕೆ ವರ್ಗಾಯಿಸುವುದು ಸುಲಭವಾಗುತ್ತದೆ. ಎಲ್​ಪಿಜಿ ತಂದಿರುವ ಬಿಕ್ಕಟ್ಟು ಈಗ ಪಿಎನ್​ಜಿ ಸೌಕರ್ಯ ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link