Daily Devotional: ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಾಯುವ ಮುನ್ನ ಕೊನೇ ಗಳಿಗೆಯಲ್ಲಿಗಂಗಾಜಲವನ್ನ ಬಿಡುವುದು ಯಾಕೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಹಿಂದೂ ಸನಾತನ ಸಂಪ್ರದಾಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಅಂತಿಮ ಘಟ್ಟದಲ್ಲಿದ್ದಾಗ, ದೇಹಕ್ಕೆ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸುವ ಪ್ರಾಚೀನ ಪದ್ಧತಿಯಿದೆ. ಈ ಸಂಪ್ರದಾಯವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ತುಳಸಿಯನ್ನು ವಿಷ್ಣುಪ್ರಿಯೆ ಎಂದು ಪರಿಗಣಿಸಲಾಗುತ್ತದೆ, ಇದು ಪವಿತ್ರತೆ ಮತ್ತು ವಿಷ್ಣುವಿನ ಪ್ರೀತಿಯ ಸಂಕೇತವಾಗಿದೆ. ಗಂಗಾಜಲವನ್ನು ಪಾಪನಾಶಕ ಮತ್ತು ಕರ್ಮನಾಶಕ ಎಂದು ನಂಬಲಾಗುತ್ತದೆ. ದೇಹವು ಅಸಹನೀಯ…