Headlines

nagaraj11081993

ಆರ್‌ಸಿಬಿ ಇತಿಹಾಸದಲ್ಲಿ ಹೊಸ ಯುಗ: ಬಿರ್ಲಾ ಗ್ರೂಪ್​​​ಗೆ 16,600 ಕೋಟಿ ರೂ.ಗೆ ಮಾರಾಟವಾಯ್ತು ಬೆಂಗಳೂರು ತಂಡ!

ಬೆಂಗಳೂರು: ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು ₹16,600 ಕೋಟಿ) ಮೊತ್ತಕ್ಕೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಸ್ತುತ ಮಾಲೀಕರಾದ ಡಿಯಾಜಿಯೊ (United Spirits) ಸಂಸ್ಥೆಯಿಂದ ಈ ತಂಡವನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟವು ಖರೀದಿಸಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ (Blackstone) ಈ ತಂಡವನ್ನು ಜಂಟಿಯಾಗಿ ಖರೀದಿಸಿವೆ.  …

Read More

ಮಹೇಶ್ ಬಾಬು ನಟನೆಯ ‘ಪೋಕಿರಿ’ ಮರು ಬಿಡುಗಡೆಗೆ ತೊಂದರೆ; ವಿಲನ್ ಆದ ಪುರಿ ಜಗನ್ನಾಥ್

ತೆಲುಗು ಚಿತ್ರರಂಗದಲ್ಲಿ ಹಳೆಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಮರು-ಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಸಿನಿಮಾಗಳಿಗೆ ರೀ-ರಿಲೀಸ್ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇದೇ ಕಾರಣಕ್ಕೆ ಮೇ ತಿಂಗಳಲ್ಲಿ ‘ಪೋಕಿರಿ’ (Pokiri) ಸಿನಿಮಾವನ್ನು ಮತ್ತೆ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಈಗ ಈ ಬಿಡುಗಡೆಗೆ ಅನಿರೀಕ್ಷಿತ ವಿಘ್ನ ಎದುರಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ನಿರ್ದೇಶಕ, ನಿರ್ಮಾಪಕ ಪುರಿ ಜಗನ್ನಾಥ್. ಮಹೇಶ್ ಬಾಬು ಸಿನಿಮಾ ಬಿಡುಗಡೆಗೂ ಪುರಿ ಜಗನ್ನಾಥ್…

Read More

ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಕೀಳಾಗಿ ಕಾಣುತ್ತಿದೆ; ಟಿವಿ9 ಶೃಂಗಸಭೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪ

ನವದೆಹಲಿ, ಮಾರ್ಚ್ 24: ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ (WITT Summit 2026) ಭಾಗವಹಿಸಿದ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ತೋರಿಸುತ್ತಿರುವ ತಾರತಮ್ಯವನ್ನು ಟೀಕಿಸಿದರು. ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳನ್ನು ಕೀಳಾಗಿ ಕಾಣುತ್ತಿದೆ. ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ಕೇಂದ್ರದಲ್ಲಿ ಸರಿಯಾದ ಪ್ರಾತಿನಿಧ್ಯವಿಲ್ಲ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಕ್ಷೇತ್ರಗಳ ಮರುವಿಂಗಡಣೆ ನಡೆದರೆ, ಉತ್ತರ ಮತ್ತು ದಕ್ಷಿಣ ಭಾರತದ…

Read More

ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ

ಬೆಂಗಳೂರು, ಮಾ.24: ವಿಧಾನಸಭೆಯ ಅಧಿವೇಶನದಲ್ಲಿ ಇಂದು ಶಿಷ್ಟಾಚಾರ ಉಲ್ಲಂಘನೆಯ ವಿಷಯ ಭಾರಿ ಚರ್ಚೆಗೆ ಕಾರಣವಾಯಿತು. ಚುನಾಯಿತ ಶಾಸಕರನ್ನು ಕಡೆಗಣಿಸಿ, ಪರಾಜಿತ ಅಭ್ಯರ್ಥಿಗಳಿಗೆ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಸದನದಲ್ಲಿ ಪ್ರತಿಧ್ವನಿಸಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. “ನಾನು ಬಂಟ್ವಾಳದ ಶಾಸಕ ಎಂಬುದು ಅಧಿಕಾರಿಗಳಿಗೆ ಗೊತ್ತೇ ಇಲ್ಲದಂತಿದೆ. ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇನ್ನೂ ಸಚಿವ ಎಂದೇ ಭಾವಿಸಿದ್ದಾರೆ. ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಮಾಜಿ ಶಾಸಕರ ಹೆಸರನ್ನು…

Read More

‘ಧುರಂಧರ್ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ

‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ಅದರ ಜೊತೆಗೆ ವಿವಾದಕ್ಕೂ ಸಿಲುಕಿದೆ. ಚಿತ್ರದ ದೃಶ್ಯವೊಂದರಲ್ಲಿ ಸಿಖ್ (Sikh) ಧರ್ಮದ ಪವಿತ್ರ ಗ್ರಂಥದ ಸಾಲುಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಚಿತ್ರದ ನಾಯಕ ನಟ ರಣವೀರ್ ಸಿಂಗ್, ಆರ್. ಮಾಧವನ್ (R Madhavan) ಮತ್ತು ನಿರ್ದೇಶಕ ಆದಿತ್ಯ ಧರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜೋತ್ ಸಿಂಗ್ ಕೀರ್ ಅವರು ಮುಂಬೈನಲ್ಲಿ ಈ ದೂರು ದಾಖಲಿಸಿದ್ದಾರೆ. ನಟ ಆರ್….

Read More

ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಬೆಂಗಳೂರು ಮಾ.24: ಜನವರಿ 28ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ ( Ajit Pawar) ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದು, ಇದು ಆಕಸ್ಮಿಕ ಸಾವಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ವಿಮಾನದ ಸುರಕ್ಷಿತ ಮಿತಿ 5,000…

Read More

ಭೀಮ್ ಯುಪಿಐ ಆ್ಯಪ್​ನಲ್ಲಿ ಪೇಮೆಂಟ್​ಗೆ ಪಿನ್ ಕೋಡ್ ಬದಲು ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್​ಲಾಕ್ ಸಿಸ್ಟಂ

ನವದೆಹಲಿ, ಮಾರ್ಚ್ 24: ಭೀಮ್ (BHIM) ಪೇಮೆಂಟ್ ಆ್ಯಪ್​ನಲ್ಲಿ ಯುಪಿಐ ಪಾವತಿಗೆ ಪಿನ್ ಕೋಡ್ ಜೊತೆಗೆ ಬಯೋಮೆಟ್ರಿಕ್ ದೃಢೀಕರಣದ ಅವಕಾಶವನ್ನೂ ಕೊಡಲಾಗುತ್ತಿದೆ. ಯುಪಿಐ ಸಿಸ್ಟಂ ರೂಪಿಸಿದ ಎನ್​ಪಿಸಿಐನ ಅಂಗಸಂಸ್ಥೆಯಾದ ಭೀಮ್ ಸರ್ವಿಸಸ್ ಲಿಮಿಟೆಡ್ (BHIM Payments App) ಈ ಹೊಸ ಫೀಚರ್ ಅನಾವರಣಗೊಳಿಸಿರುವುದನ್ನು ಇಂದು ಘೋಷಿಸಿದೆ. ಭೀಮ್ ಆ್ಯಪ್ ಬಳಕೆದಾರರು 5,000 ರೂವರೆಗಿನ ಯುಪಿಐ ಟ್ರಾನ್ಸಾಕ್ಷನ್​ಗಳಿಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ನೀಡಬಹುದು ಫಿಂಗರ್ ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್ ಸೌಲಭ್ಯ ಇರುವಂತಹ ಸ್ಮಾರ್ಟ್​ಫೋನ್​ಗಳಲ್ಲಿ ಭೀಮ್ ಆ್ಯಪ್ ಬಳಕೆದಾರರು ಈ…

Read More

WITT Summit 2026: ಪಂಜಾಬ್​ನಲ್ಲಿ ದ್ವೇಷದ ಬೀಜ ಮೊಳಕೆಯೊಡುವುದಿಲ್ಲ; ವಿಟ್ ಶೃಂಗಸಭೆಯಲ್ಲಿ ಸಿಎಂ ಭಗವಂತ್ ಮಾನ್

ನವದೆಹಲಿ, ಮಾರ್ಚ್ 24: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟಿವಿ9ನ WITT ಶೃಂಗಸಭೆಯಲ್ಲಿ (WITT Summit 2026) ರಾಜ್ಯ ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಮಾತನಾಡಿದರು. ಪಂಜಾಬ್ ನಿರಂತರ ನಗು, ಮಿಲಿಟರಿ ಸೇವೆ ಮತ್ತು ಹಚ್ಚ ಹಸಿರಿನ ಹೊಲಗಳಿಗೆ ಹೆಸರುವಾಸಿಯಾದ ರಾಜ್ಯ. ಜಗತ್ತಿನಲ್ಲಿ ಎಲ್ಲಿಯಾದರೂ ವಿಪತ್ತು ಸಂಭವಿಸಿದರೂ ರೆಡ್ ಕ್ರಾಸ್ ಸಹಾಯ ಮಾಡಲು ಬರಬಹುದು ಅಥವಾ ಬರದೆಯೂ ಇರಬಹುದು. ಪ್ರತಿಯೊಂದು ಬೀಜವು ಪಂಜಾಬ್‌ನಲ್ಲಿ ಬೆಳೆಯುತ್ತದೆ, ಆದರೆ ದ್ವೇಷದ ಬೀಜ ಮಾತ್ರ ಮೊಳಕೆಯೊಡೆಯುವುದಿಲ್ಲ. ಭಾರತವು ಉಂಗುರವಾಗಿದ್ದರೆ, ಪಂಜಾಬ್ ಒಂದು…

Read More

ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಟಿವಿ9 ಶೃಂಗಸಭೆಯಲ್ಲಿ ಡಿಕೆ ಶಿವಕುಮಾರ್​ ಮಾತು

ನವದೆಹಲಿ, ಮಾರ್ಚ್​ 24: ನಾನು ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಮಾತನಾಡಿದ ಅವರು, ನಾನು ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಬಂದವನು. ಎದುರಾಳಿಗಳ ಅಜೆಂಡಾ ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಪರ ಯಾರೂ ಮಾತನಾಡುವ ಅಗತ್ಯವಿಲ್ಲ. ನನ್ನ ಪರವಾಗಿ 140 ಶಾಸಕರು ಇದ್ದಾರೆ. ಬೆಂಗಳೂರು, ಕರ್ನಾಟಕ ರಾಜ್ಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source…

Read More

ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಕ್ರೆಡಿಟ್ ಕಾರ್ಡ್​ನಲ್ಲಿ ಶಾಪಿಂಗ್ ಮಾಡಿ ಅಭ್ಯಾಸ ಇದ್ದವರಲ್ಲಿ ಹೆಚ್ಚಿನವರು ಇಎಂಐ ಆಯ್ಕೆಗಳನ್ನು ಬಳಸಿರುತ್ತಾರೆ, ಅಥವಾ ಅದರ ಬಗ್ಗೆ ಗೊತ್ತಿರುತ್ತದೆ. ಅಧಿಕ ಮೌಲ್ಯದ ವಸ್ತುವನ್ನು ಖರೀದಿಸಿದಾಗ ಮುಂದಿನ ಬಿಲ್​ನಲ್ಲಿ ಅಷ್ಟೂ ಹಣ ಕಟ್ಟಲಾಗದಿದ್ದರೆ, ಜನರು ಸುಲಭವೆನಿಸುವ ಇಎಂಐ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಅದರಲ್ಲೂ ನೋ ಕಾಸ್ಟ್ ಅಥವಾ ಝೀರೋ ಕಾಸ್ಟ್ ಇಎಂಐ ತಲೆಬರಹ ನೋಡಿ ಮಾರುಹೋಗುವುದುಂಟು. ಈ ಕ್ರೆಡಿಟ್ ಕಾರ್ಡ್ ಇಎಂಐ ಮೇಲ್ನೋಟಕ್ಕೆ ಕಾಣುವಷ್ಟು ಸರಳವಿಲ್ಲ. ನೀವು 80,000 ರೂ ಮೊತ್ತದ ವಾಷಿಂಗ್ ಮೆಷೀನ್ ಶಾಪಿಂಗ್ ಮಾಡುತ್ತೀರಿ. ಅದಕ್ಕೆ 12…

Read More