All posts by nagaraj11081993

ಅನುವಾದಿನಿ AIನಿಂದ ಸಿಮ್ ಆಧಾರಿತ ಸಂವಾದಿನಿ ಮೆಸೇಜಿಂಗ್ ಆ್ಯಪ್ ಬಿಡುಗಡೆ

ಅನುವಾದಿನಿ AIನಿಂದ ಸಿಮ್ ಆಧಾರಿತ ಸಂವಾದಿನಿ ಮೆಸೇಜಿಂಗ್ ಆ್ಯಪ್ ಬಿಡುಗಡೆ

ನವದೆಹಲಿ, ಮಾರ್ಚ್ 24: ಭಾರತದಲ್ಲಿ ಡಿಜಿಟಲ್ ಜಗತ್ತು ವೇಗವಾಗಿ ಬದಲಾಗುತ್ತಿದೆ. ಡೇಟಾ ಸುರಕ್ಷತೆ ಮತ್ತು ವಿದೇಶಿ ಸರ್ವರ್‌ಗಳ ಮೇಲಿನ ಅವಲಂಬನೆಯಂತಹ ವಿಷಯಗಳು ತೀವ್ರವಾದ ಚರ್ಚೆಗಳಿಗೆ ಕಾರಣವಾಗುತ್ತಿವೆ. ದೇಶದಲ್ಲಿ 800 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಳಸುವ ಸಂವಹನ ಅಪ್ಲಿಕೇಶನ್‌ಗಳು ಹೆಚ್ಚಾಗಿ ವಿದೇಶಿ ಕಂಪನಿಗಳ ಒಡೆತನದಲ್ಲಿವೆ. ಹೀಗಾಗಿ ಸ್ಥಳೀಯ ಪರಿಹಾರಗಳ ಅಗತ್ಯ ಹೆಚ್ಚಾಗಿದೆ. ಇತ್ತೀಚೆಗೆ ಡಿಜಿಟಲ್ ವಂಚನೆಗಳು ಮತ್ತು ಹೊಸ ರೀತಿಯ ಸೈಬರ್ ಅಪರಾಧಗಳು ಜನರನ್ನು ಚಿಂತೆಗೀಡು ಮಾಡುತ್ತಿವೆ.

ರಾಷ್ಟ್ರೀಯ ಭದ್ರತೆ ಮತ್ತು ವೈಯಕ್ತಿಕ ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸುವ ಕ್ರಮದಲ್ಲಿ ಅನುವಾದಿನಿ AI ಭಾರತೀಯ ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ಹೊಸ ಪರಿಕರಗಳ ಸೂಟ್ ಅನ್ನು ಪರಿಚಯಿಸಿದೆ. ಇವುಗಳಲ್ಲಿ ಹೈಪ್ಡ್ ಸಂವಾದಿನಿ ಮೆಸೆಂಜರ್ ಮತ್ತು ದೇಸಿ AI GenZ ಕೀಬೋರ್ಡ್ ಕೂಡ ಸೇರಿವೆ. ಭಾರತೀಯ ಜನರ ಭಾಷಾ ಅಗತ್ಯತೆಗಳು ಮತ್ತು ಭದ್ರತಾ ಅವಶ್ಯಕತೆಗಳ ಮೇಲೆ ಕೇಂದ್ರೀಕರಿಸುವ ವಿಶ್ವಾಸಾರ್ಹ, ಸಾರ್ವಭೌಮ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು ಈ ಅಪ್ಲಿಕೇಶನ್‌ಗಳನ್ನು ನಿರ್ಮಿಸಲಾಗಿದೆ ಎಂದು ಆ್ಯಪ್ ಡೆವಲಪರ್‌ಗಳು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗ ನೇಮಕಾತಿಗೂ AI ಸಂಕಷ್ಟ! ಕಾಪಿ ಪೇಸ್ಟ್ ಅರ್ಜಿಗಳಿಂದ ರಿಕ್ರೂಟರ್​ಗೆ ತಲೆನೋವು

ಸಂವಾದಿನಿ ಆ್ಯಪ್ ವಿಶೇಷತೆ:

ವಿದೇಶಿ ಅಪ್ಲಿಕೇಶನ್‌ಗಳಿಗೆ ಪರ್ಯಾಯವಾಗಿ “ವಿದೇಶದಿಂದ ದೇಸಿಗೆ” ಎಂಬ ಪರಿಕಲ್ಪನೆಯೊಂದಿಗೆ ಈ ಪ್ರಯೋಗ ಮಾಡಲಾಗಿದೆ. ಜನಪ್ರಿಯವಾದ ಸಂವಾದಿನಿ ಅಪ್ಲಿಕೇಶನ್ ಅನ್ನು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಿಗೆ ಸುರಕ್ಷಿತ ಪರ್ಯಾಯವೆಂದು ಹೇಳಲಾಗುತ್ತಿದೆ. ಇದು ನಿಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೆ ಚಾಟ್ ಮಾಡಲು ಮತ್ತು ವೀಡಿಯೊ ಕರೆ ಮಾಡಲು ಅನುಮತಿಸುವ ಡೈನಾಮಿಕ್ ಚಾಟ್ ಐಡಿ ವ್ಯವಸ್ಥೆಯನ್ನು ಹೊಂದಿದೆ.

ಇದು ‘ರಿಕ್ವೆಸ್ಟ್ ಮಾಡ್ಯೂಲ್’ ಅನ್ನು ಸಹ ಹೊಂದಿದೆ. ಆದ್ದರಿಂದ ನಿಮ್ಮ ಅನುಮತಿಯಿಲ್ಲದೆ ಯಾರೂ ನಿಮಗೆ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ. ಹಳೆಯ ಚಾಟ್‌ಗಳನ್ನು ಕಳೆದುಕೊಳ್ಳದೆ ವಾಟ್ಸಾಪ್‌ನಿಂದ ಡೇಟಾವನ್ನು ವರ್ಗಾಯಿಸುವ ಸೌಲಭ್ಯವನ್ನು ಸಹ ಇದು ಒದಗಿಸುತ್ತದೆ. ತುರ್ತು ಸಂದರ್ಭದಲ್ಲಿ ಟ್ಯಾಪ್ ಮೂಲಕ ಸಹಾಯ ಪಡೆಯಲು SOS ವೈಶಿಷ್ಟ್ಯವನ್ನು ಸಹ ಲಭ್ಯವಾಗುವಂತೆ ಮಾಡಲಾಗಿದೆ. ಇದು ರೈತರಿಗೆ ಮಾರುಕಟ್ಟೆ ಬೆಲೆಗಳು ಮತ್ತು ವೃದ್ಧರಿಗೆ ಅಗತ್ಯವಿರುವ ಮಾಹಿತಿಯಂತಹ ವಿಶೇಷ ವಿಭಾಗಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ: WITT Summit 2026: ಸ್ಟಾರ್ಟಪ್​ನಲ್ಲಿ ಮೌಲ್ಯ ಮತ್ತು ಮೌಲ್ಯಮಾಪನ ಸಂಬದ್ಧವಾಗಿರಬೇಕು ಎಂದ ತಜ್ಞರು

ಇನ್ನೊಂದು ವಿಶೇಷವೆಂದರೆ, ದೇಸಿ AI GenZ ಕೀಬೋರ್ಡ್ 22 ಭಾರತೀಯ ಭಾಷೆಗಳಲ್ಲಿ ಮತ್ತು 70ಕ್ಕೂ ಹೆಚ್ಚು ಇತರ ಭಾಷೆಗಳಲ್ಲಿ ಟೈಪಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಯುವಕರಿಗಾಗಿ ಟ್ರೆಂಡಿಂಗ್ ಪದಗಳಿಗಾಗಿ ವಿಶೇಷ ‘GenZ ಕೀ’ ಅನ್ನು ಸಹ ಒದಗಿಸಲಾಗಿದೆ. ಈ ಕೀಬೋರ್ಡ್ ಕ್ಯಾಲ್ಕುಲೇಟರ್ ಮತ್ತು ಕರೆನ್ಸಿ ಕನ್ವರ್ಟರ್​​ನಂತಹ ಸೌಲಭ್ಯಗಳನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಪಕ್ಷಕ್ಕೆ ನಾನು ಯೋಧನಂತೆ: ಟಿವಿ9 ಶೃಂಗಸಭೆಯಲ್ಲಿ ಡಿಕೆ ಶಿವಕುಮಾರ್​ ಮಾತು

ನವದೆಹಲಿ, ಮಾರ್ಚ್​ 24: ಸೈನಿಕ ತನ್ನ ದೇಶಕ್ಕಾಗಿ ಹೋರಾಡುವಂತೆ, ರಾಜಕಾರಣಿಯೂ ತನ್ನ ಪಕ್ಷಕ್ಕಾಗಿ ನಿರಂತರವಾಗಿ ಹೋರಾಡಬೇಕು. ನನ್ನ ಪಕ್ಷಕ್ಕೆ ನಾನು ಯೋಧನಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜಕಾರಣಿಗಳು ತಮ್ಮ ಕುಟುಂಬ ಮತ್ತು ವೈಯಕ್ತಿಕ ಜೀವನಕ್ಕಿಂತ ಪಕ್ಷದ ಕೆಲಸಕ್ಕೆ ಆದ್ಯತೆ ನೀಡಬೇಕಾಗುತ್ತದೆ ಎಂದಿದ್ದಾರೆ.

ತಮ್ಮ ರಾಜಕೀಯ ಜೀವನ ಬಗ್ಗೆ ಮಾತನಾಡಿ ಡಿಕೆ ಶಿವಕುಮಾರ್​, ಕೆಲವೊಮ್ಮೆ ರಾತ್ರಿ 2 ಗಂಟೆಯವರೆಗೆ ಕೆಲಸ ಮಾಡುತ್ತೇನೆ. ವೈಯಕ್ತಿಕ ಸಮಯಕ್ಕೆ ಅವಕಾಶವಿಲ್ಲ. ದೇಶ, ರಾಜ್ಯಗಳಿಂದ ನನ್ನನ್ನು ಭೇಟಿ ಮಾಡಲು ಬರುವ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸುವುದು ನನ್ನ ಜವಾಬ್ದಾರಿ. ವ್ಯವಸ್ಥೆಯಲ್ಲಿ ಸಮಸ್ಯೆಗಳು ಬಗೆಹರಿಯದಿದ್ದಾಗ ಜನರು ರಾಜಕಾರಣಿಗಳ ಬಳಿ ಬರುತ್ತಾರೆ, ಅವರನ್ನು ತೃಪ್ತಿಪಡಿಸುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕೆಲಸ ಎಂದು ಹೇಳಿದ್ದಾರೆ.

ಕಾಲವೇ ಉತ್ತರಿಸಲಿದೆ

ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಯಾವಾಗ ಎಂಬ ಪ್ರಶ್ನೆಗೆ ಅದಕ್ಕೆ ಕಾಲವೇ ಉತ್ತರಿಸಲಿದೆ. ಮುಖ್ಯಮಂತ್ರಿಯಾಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಈ ನೆಲದ ಕಾನೂನು ನನ್ನನ್ನು ರಕ್ಷಣೆ ಮಾಡಿತು

ರಾಜಕೀಯ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತು. ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಗುಜರಾತ್ ಶಾಸಕರ ರಕ್ಷಣೆಗೆ ನಿಂತಿದ್ದಕ್ಕೆ ನನ್ನ ಮೇಲೆ ದಾಳಿ ಮಾಡಲಾಯಿತು. ನನ್ನ ಮನೆ ಸೇರಿದಂತೆ 16 ಸ್ಥಳಗಳ ಮೇಲೆ ಐಟಿ ದಾಳಿಯಾಗಿತ್ತು. ರಾಜಕೀಯ ಕಾರಣಕ್ಕೆ ಐಟಿ, ಇಡಿ ದಾಳಿ ನಡೆಸಿತ್ತು. ನನ್ನ ತಾಯಿ, ಪತ್ನಿ, ಮಗಳಿಗೆ ಇಡಿ ನೋಟಿಸ್ ನೀಡಿತ್ತು. ವ್ಯವಹಾರಿಕ ಪಾಲುದಾರರಿಗೂ ನೋಟಿಸ್ ಜಾರಿಮಾಡಿದ್ದರು, ಆದರೆ ಈ ನೆಲದ ಕಾನೂನು ನನ್ನನ್ನು ರಕ್ಷಣೆ ಮಾಡಿತು ಎಂದರು.

ಬಿಜೆಪಿಯವರು ಹಿಂದುತ್ವದ ಮೇಲೆ ನಂಬಿಕೆಯಿಟ್ಟಿದ್ದಾರೆ

ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅಸ್ಸಾಂ ರಾಜ್ಯದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ತನ್ನದೇ ಆದ ಇತಿಹಾಸ, ಸಿದ್ಧಾಂತವಿದೆ. ಬಿಜೆಪಿಯವರು ಹಿಂದುತ್ವದ ಮೇಲೆ ನಂಬಿಕೆಯಿಟ್ಟಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರನ್ನು ಒಳಗೊಂಡಿದೆ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಕೊರತೆಯ ಬಗ್ಗೆ ಮಾತನಾಡಿದ ಅವರು, ಕಳೆದ 30-40 ವರ್ಷಗಳಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಹಿಂದೆ ವಾಜಪೇಯಿ ಮತ್ತು ಅಡ್ವಾಣಿ ಸಂಸತ್ತಿನಲ್ಲಿ ಇಬ್ಬರು ನಾಯಕರಾಗಿದ್ದರು. ಈಗ, ಅವರಿಗೆ ದೊಡ್ಡ ಅನುಯಾಯಿಗಳಿದ್ದಾರೆ. ಅವರಿಗೆ ನೈತಿಕ ಮೌಲ್ಯಗಳಿಲ್ಲ. ಅವರು ಆಪರೇಷನ್ ಕಮಲವನ್ನು ನಂಬುತ್ತಾರೆ. ಕರ್ನಾಟಕ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಅವರು ಏನು ಮಾಡಿದರು? ಅವರು ಮಹಾರಾಷ್ಟ್ರದಲ್ಲಿ ಹಿಂದೆಂದೂ ಬಹುಮತವನ್ನು ಗಳಿಸಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಟಿವಿ9 ಶೃಂಗಸಭೆಯಲ್ಲಿ ಡಿಕೆ ಶಿವಕುಮಾರ್​ ಮಾತು

ದೇಶ ಮತ್ತು ರಾಜ್ಯದ ಜನರು ನೀಡಿದ ಜನಾದೇಶವನ್ನು ನಾನು ನಂಬುತ್ತೇನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಸೂರ್ಯ ಉದಯಿಸುತ್ತಾನೆ ಮತ್ತು ಮುಳುಗುತ್ತಾನೆ. ಹಗಲು-ರಾತ್ರಿಗಳು ಬರುತ್ತವೆ ಹೋಗುತ್ತವೆ. ಬಿಜೆಪಿ ಕೂಡ ಕಣ್ಮರೆಯಾಗುತ್ತದೆ. ಈ ರಾತ್ರಿಗೆ ಒಂದು ಬೆಳಗು ಇರುತ್ತದೆ. ಹಿಂದೆ ಕಾಂಗ್ರೆಸ್‌ಗೆ ಬಹುಮತವಿತ್ತು. ದೇಶದ ಜನರು ಬದಲಾವಣೆಯನ್ನು ಬಯಸುತ್ತಾರೆ ಮತ್ತು ಆ ಸಮಯ ಬರುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್‌ಸಿಬಿ ಇತಿಹಾಸದಲ್ಲಿ ಹೊಸ ಯುಗ: ಬಿರ್ಲಾ ಗ್ರೂಪ್​​​ಗೆ 16,600 ಕೋಟಿ ರೂ.ಗೆ ಮಾರಾಟವಾಯ್ತು ಬೆಂಗಳೂರು ತಂಡ!

ಬೆಂಗಳೂರು: ಐಪಿಎಲ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು ₹16,600 ಕೋಟಿ) ಮೊತ್ತಕ್ಕೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಸ್ತುತ ಮಾಲೀಕರಾದ ಡಿಯಾಜಿಯೊ (United Spirits) ಸಂಸ್ಥೆಯಿಂದ ಈ ತಂಡವನ್ನು ಪ್ರಮುಖ ಹೂಡಿಕೆದಾರರ ಒಕ್ಕೂಟವು ಖರೀದಿಸಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ (Blackstone) ಈ ತಂಡವನ್ನು ಜಂಟಿಯಾಗಿ ಖರೀದಿಸಿವೆ.

 

Source link

ಮಹೇಶ್ ಬಾಬು ನಟನೆಯ ‘ಪೋಕಿರಿ’ ಮರು ಬಿಡುಗಡೆಗೆ ತೊಂದರೆ; ವಿಲನ್ ಆದ ಪುರಿ ಜಗನ್ನಾಥ್

ತೆಲುಗು ಚಿತ್ರರಂಗದಲ್ಲಿ ಹಳೆಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಮರು-ಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಸಿನಿಮಾಗಳಿಗೆ ರೀ-ರಿಲೀಸ್ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇದೇ ಕಾರಣಕ್ಕೆ ಮೇ ತಿಂಗಳಲ್ಲಿ ‘ಪೋಕಿರಿ’ (Pokiri) ಸಿನಿಮಾವನ್ನು ಮತ್ತೆ ಅದ್ದೂರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಈಗ ಈ ಬಿಡುಗಡೆಗೆ ಅನಿರೀಕ್ಷಿತ ವಿಘ್ನ ಎದುರಾಗಿದೆ. ಅದಕ್ಕೆಲ್ಲ ಕಾರಣ ಆಗಿರುವುದು ನಿರ್ದೇಶಕ, ನಿರ್ಮಾಪಕ ಪುರಿ ಜಗನ್ನಾಥ್. ಮಹೇಶ್ ಬಾಬು ಸಿನಿಮಾ ಬಿಡುಗಡೆಗೂ ಪುರಿ ಜಗನ್ನಾಥ್ (Puri Jagannadh) ಅವರಿಗೂ ಏನು ಸಂಬಂಧ? ಇಲ್ಲಿದೆ ಉತ್ತರ..

‘ಪೋಕಿರಿ’ ಸಿನಿಮಾದ ಹಕ್ಕುಗಳು ನಿರ್ದೇಶಕ ಪುರಿ ಜಗನ್ನಾಥ್ ಅವರ ಬಳಿ ಇವೆ. ಮೂಲಗಳ ಪ್ರಕಾರ, ಈ ಚಿತ್ರದ ಓವರ್‌ಸೀಸ್ ಹಕ್ಕುಗಳನ್ನು ಅಮೆರಿಕದ ಸಂಸ್ಥೆಯೊಂದು ಭಾರಿ ಮೊತ್ತಕ್ಕೆ ಖರೀದಿಸಿತ್ತು. ಆದರೆ, ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದಾಗ ವಿತರಕರಿಗೆ ಭಾರಿ ನಷ್ಟವಾಗಿತ್ತು. ಆ ಸಮಯದಲ್ಲಿ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಪುರಿ ಜಗನ್ನಾಥ್ ಇನ್ನೂ ಪೂರ್ಣವಾಗಿ ತೀರಿಸಿಲ್ಲ ಎನ್ನಲಾಗಿದೆ.

‘ಡಬಲ್ ಇಸ್ಮಾರ್ಟ್’ ಸಿನಿಮಾ ಬಿಡುಗಡೆಯ ಸಮಯದಲ್ಲಿ ಪುರಿ ಜಗನ್ನಾಥ್ ಸ್ವಲ್ಪ ಹಣವನ್ನು ಪಾವತಿಸಿ, ಉಳಿದ ಹಣವನ್ನು ನಂತರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರದ ಕಾರಣ, ಸುನಿಲ್ ನಾರಂಗ್ ನೇತೃತ್ವದ ವಿತರಕರ ಸಂಘವು ಪುರಿ ಜಗನ್ನಾಥ್ ಅವರ ಯಾವುದೇ ಸಿನಿಮಾ ಅಥವಾ ಅವರ ಬಳಿ ಇರುವ ಹಕ್ಕುಗಳ ಸಿನಿಮಾಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವಿತರಕರ ಈ ಕಠಿಣ ನಿರ್ಧಾರದಿಂದಾಗಿ ‘ಪೋಕಿರಿ’ ಸಿನಿಮಾದ ರೀ-ರಿಲೀಸ್ ಸದ್ಯಕ್ಕೆ ಸ್ಥಗಿತಗೊಂಡಿದೆ. ‘ಪೋಕಿರಿ’ ಬಿಡುಗಡೆ ಆಗಬೇಕಿದ್ದ ಜಾಗದಲ್ಲಿ ಈಗ ಮಹೇಶ್ ಬಾಬು ಅವರದ್ದೇ ಆದ ‘ಅತಿಥಿ’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇತ್ತ ಹಣ ನೀಡಿ ಹಕ್ಕು ಖರೀದಿಸಿದ ಓವರ್‌ಸೀಸ್ ಸಂಸ್ಥೆಯು ಈ ಬಗ್ಗೆ ಚರ್ಚಿಸಲು ಚಾರ್ಮಿ ಕೌರ್ ಅವರಿಗೆ ಕರೆ ಮಾಡಿದರೆ, ಅವರು ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ಮಹೇಶ್ ಬಾಬು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಪವನ್ ಕಲ್ಯಾಣ್ ಆಪ್ತ ನಿರ್ದೇಶಕ

ಈ ಹಣಕಾಸಿನ ವಿವಾದ ಹೀಗೆಯೇ ಮುಂದುವರಿದರೆ, ಪುರಿ ಜಗನ್ನಾಥ್ ನಿರ್ದೇಶನದ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಸ್ಲಮ್‌ಡಾಗ್’ ಚಿತ್ರದ ಬಿಡುಗಡೆಯೂ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ವಿತರಕರ ಬಾಕಿ ಹಣ ತೀರಿಸುವವರೆಗೂ ಅವರ ಮುಂದಿನ ಹಾದಿ ಸುಗಮವಾಗುವಂತೆ ಕಾಣುತ್ತಿಲ್ಲ. ಈ ವಿವಾದಕ್ಕೆ ಪುರಿ ಜಗನ್ನಾಥ್ ಅವರು ಪ್ರತಿಕ್ರಿಯೆ ನೀಡುವುದು ಬಾಕಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದಕ್ಷಿಣ ಭಾರತವನ್ನು ಕೇಂದ್ರ ಸರ್ಕಾರ ಕೀಳಾಗಿ ಕಾಣುತ್ತಿದೆ; ಟಿವಿ9 ಶೃಂಗಸಭೆಯಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪ

ನವದೆಹಲಿ, ಮಾರ್ಚ್ 24: ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ (WITT Summit 2026) ಭಾಗವಹಿಸಿದ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ತೋರಿಸುತ್ತಿರುವ ತಾರತಮ್ಯವನ್ನು ಟೀಕಿಸಿದರು. ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳನ್ನು ಕೀಳಾಗಿ ಕಾಣುತ್ತಿದೆ. ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ಕೇಂದ್ರದಲ್ಲಿ ಸರಿಯಾದ ಪ್ರಾತಿನಿಧ್ಯವಿಲ್ಲ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದಾರೆ.

ಕ್ಷೇತ್ರಗಳ ಮರುವಿಂಗಡಣೆ ನಡೆದರೆ, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಈಗಿರುವಂತೆ ಸಂಖ್ಯೆಯಲ್ಲಿ ವ್ಯತ್ಯಾಸವಾಗಬೇಕು. ಅದು ಆಗದಿದ್ದರೆ ದಕ್ಷಿಣದ ರಾಜ್ಯಗಳು ತಮ್ಮ ಪ್ರಭಾವ ಕಳೆದುಕೊಳ್ಳುತ್ತವೆ. ಬಿಜೆಪಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ತಾರತಮ್ಯ ಮಾಡುತ್ತಿದೆ. ಕೇಂದ್ರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೋಡಿಕೊಳ್ಳುವವರು ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ದಕ್ಷಿಣದ ರಾಜ್ಯಗಳಿಂದ ಯಾರಾದರೂ ಇದ್ದಾರೆಯೇ? ಕೇಂದ್ರ ಬಯಸಿದಂತೆ ಕ್ಷೇತ್ರಗಳ ಮರುವಿಂಗಡಣೆ ನಡೆದರೆ ದಕ್ಷಿಣ ಭಾರತದ ರಾಜ್ಯಗಳು ಅತ್ಯಲ್ಪವಾಗುತ್ತವೆ ಎಂದು ರೇವಂತ್ ರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: WITT Summit 2026: ಬಂಗಾಳದಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆ ಖಚಿತ; WITT ಶೃಂಗಸಭೆಯಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಭವಿಷ್ಯ

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ನೀತಿಗಳನ್ನು ಟೀಕಿಸಿದ  ಅವರು ಮೋದಿ ಅನುಸರಿಸುತ್ತಿರುವ ತ್ರಿ-ಡಿ ನೀತಿಯನ್ನು ಎದುರಿಸಲು ದಕ್ಷಿಣದ ಎಲ್ಲಾ ರಾಜ್ಯಗಳು ಒಂದಾಗುವ ಅಗತ್ಯದ ಕರೆ ನೀಡಿದರು. “ಬಿಜೆಪಿಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರನ್ನು ಅವಮಾನಿಸಲಾಗಿದೆ. ವೆಂಕಯ್ಯ ನಾಯ್ಡು ಅವರನ್ನು ದೆಹಲಿಯಿಂದ ಏಕೆ ಸ್ಥಳಾಂತರಿಸಲಾಯಿತು? ಅವರನ್ನು ರಾಷ್ಟ್ರಪತಿಯನ್ನಾಗಿ ಏಕೆ ಮಾಡಲಿಲ್ಲ? ಮೊದಲಿನಿಂದಲೂ ಬಿಜೆಪಿಯಲ್ಲಿದ್ದ ಆ ವ್ಯಕ್ತಿಯನ್ನು ಏಕೆ ಕಡೆಗಣಿಸಲಾಯಿತು?” ದಕ್ಷಿಣದ ನಾಯಕರಿಗೆ ಕೇಂದ್ರ ಗೃಹ ಸಚಿವಾಲಯದಂತಹ ಪ್ರಮುಖ ಹುದ್ದೆಗಳನ್ನು ಏಕೆ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: PM Modi in WITT Summit 2026: ಯುದ್ಧದ ಸಮಯದಲ್ಲೂ ಭಾರತದ ಆರ್ಥಿಕ ಸ್ಥಿರತೆ ಕಂಡು ಜಗತ್ತು ಬೆರಗಾಗಿದೆ; ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಕೆಸಿಆರ್​ ಕುಟುಂಬದ ಬಗ್ಗೆ ಟೀಕೆ:

ರಾವಣನಿಂದಾಗಿಯೇ ರಾಮನಿಗೆ ಹೀರೋ ಎಂಬ ಹೆಸರು ಬಂದಿತು. ತೆಲಂಗಾಣದಲ್ಲಿಯೂ ಖಳನಾಯಕರಿಂದಾಗಿಯೇ ನಾನು ನಾಯಕನಾದೆ ಎಂದು ಮಾರ್ಮಿಕವಾಗಿ ರೇವಂತ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ತೆಲಂಗಾಣದ ಡಿಎನ್ಎ ಭಿನ್ನವಾಗಿದೆ. ಇಲ್ಲಿನ ಬಡವರು ಮತ್ತು ದಲಿತರು ನಿಜಾಮನ ವಿರುದ್ಧ ವೀರೋಚಿತವಾಗಿ ಹೋರಾಡಿದರು. ರಾಮನ ಖ್ಯಾತಿಗೆ ರಾವಣ ಹೇಗೆ ಕಾರಣನಾದನೋ ಹಾಗೇ ತೆಲಂಗಾಣದಲ್ಲಿ ಕೆಲವು ಖಳನಾಯಕರಿಂದಾಗಿ ಜನರು ನನ್ನನ್ನು ನಾಯಕನನ್ನಾಗಿ ಮಾಡಿದ್ದಾರೆ ಎಂದು ಅವರು ಕೆಸಿಆರ್ ಕುಟುಂಬದ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ

ಬೆಂಗಳೂರು, ಮಾ.24: ವಿಧಾನಸಭೆಯ ಅಧಿವೇಶನದಲ್ಲಿ ಇಂದು ಶಿಷ್ಟಾಚಾರ ಉಲ್ಲಂಘನೆಯ ವಿಷಯ ಭಾರಿ ಚರ್ಚೆಗೆ ಕಾರಣವಾಯಿತು. ಚುನಾಯಿತ ಶಾಸಕರನ್ನು ಕಡೆಗಣಿಸಿ, ಪರಾಜಿತ ಅಭ್ಯರ್ಥಿಗಳಿಗೆ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಸದನದಲ್ಲಿ ಪ್ರತಿಧ್ವನಿಸಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ. “ನಾನು ಬಂಟ್ವಾಳದ ಶಾಸಕ ಎಂಬುದು ಅಧಿಕಾರಿಗಳಿಗೆ ಗೊತ್ತೇ ಇಲ್ಲದಂತಿದೆ. ಮಾಜಿ ಸಚಿವ ರಮಾನಾಥ್ ರೈ ಅವರನ್ನು ಅಧಿಕಾರಿಗಳು ಇನ್ನೂ ಸಚಿವ ಎಂದೇ ಭಾವಿಸಿದ್ದಾರೆ. ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಮಾಜಿ ಶಾಸಕರ ಹೆಸರನ್ನು ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಾಮಗಾರಿ ಏಜೆನ್ಸಿಗಳನ್ನು ಗುರುತಿಸುವಂತೆ ಮಾಜಿ ಶಾಸಕರಿಗೇ ಅಧಿಕಾರಿಗಳು ಪತ್ರ ಬರೆಯುತ್ತಿದ್ದಾರೆ,” ಎಂದು ರಾಜೇಶ್ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರಿ ಆದೇಶದ ಮಂಜೂರಾತಿ ನೀಡುವಾಗ ಶಿಷ್ಟಾಚಾರದ ಉಲ್ಲಂಘನೆ ಆಗುತ್ತಿಲ್ಲವೇ? ಪರಾಜಿತ ಅಭ್ಯರ್ಥಿಗಳ ಹೆಸರಿನಲ್ಲಿ ಅಧಿಕಾರಿಗಳು ಹಣ ಮಂಜೂರು ಮಾಡುತ್ತಿದ್ದಾರೆ ಎಂದರೆ ಇದರ ಅರ್ಥವೇನು? ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಪರಾಜಿತ ಅಭ್ಯರ್ಥಿಗಳ ಶಿಫಾರಸಿನ ಮೇಲೆ ಪತ್ರ ಬರೆಯುತ್ತಿವೆ. ಹೀಗಾದರೆ ಚುನಾಯಿತ ಶಾಸಕರಿಗೆ ಬೆಲೆ ಎಲ್ಲಿದೆ? ಇದು ಶಾಸಕರ ಹಕ್ಕುಚ್ಯುತಿಯಲ್ಲವೇ?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

“ನನ್ನ ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ಇದೆ. ಪರಾಜಿತ ಅಭ್ಯರ್ಥಿಯ ಪತ್ರದ ಆಧಾರದ ಮೇಲೆ ಹಣ ಬಿಡುಗಡೆಯಾಗುತ್ತಿದೆ. ಶಾಸಕರು ಕೇವಲ ಹೆಸರಿಗಷ್ಟೇ ಇರಬೇಕೇ?” ಎಂದು ಪ್ರಶ್ನಿಸಿದರು.ಈ ವಿಷಯದ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಎಲ್ಲ ಕ್ಷೇತ್ರಗಳಲ್ಲೂ ಪರಾಜಿತ ಅಭ್ಯರ್ಥಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂಬುದು ವಿರೋಧ ಪಕ್ಷದ ಶಾಸಕರ ಒಮ್ಮತದ ಆರೋಪವಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಚಿತ್ರಕ್ಕೆ ಸಂಕಷ್ಟ: ಆ ಒಂದು ದೃಶ್ಯದಿಂದ ಸಿಖ್ ಧರ್ಮದ ಭಾವನೆಗೆ ಧಕ್ಕೆ

‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಎಲ್ಲ ಕಡೆಗಳಲ್ಲಿ ಧೂಳೆಬ್ಬಿಸುತ್ತಿದೆ. ಅದರ ಜೊತೆಗೆ ವಿವಾದಕ್ಕೂ ಸಿಲುಕಿದೆ. ಚಿತ್ರದ ದೃಶ್ಯವೊಂದರಲ್ಲಿ ಸಿಖ್ (Sikh) ಧರ್ಮದ ಪವಿತ್ರ ಗ್ರಂಥದ ಸಾಲುಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಚಿತ್ರದ ನಾಯಕ ನಟ ರಣವೀರ್ ಸಿಂಗ್, ಆರ್. ಮಾಧವನ್ (R Madhavan) ಮತ್ತು ನಿರ್ದೇಶಕ ಆದಿತ್ಯ ಧರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಾರಾಷ್ಟ್ರ ಸಿಖ್ ಸಂಘಟನೆಯ ಅಧ್ಯಕ್ಷ ಗುರ್ಜೋತ್ ಸಿಂಗ್ ಕೀರ್ ಅವರು ಮುಂಬೈನಲ್ಲಿ ಈ ದೂರು ದಾಖಲಿಸಿದ್ದಾರೆ.

ನಟ ಆರ್. ಮಾಧವನ್ ಅವರು ‘ಧುರಂಧರ್ 2’ ಚಿತ್ರದ ದೃಶ್ಯವೊಂದರಲ್ಲಿ ಸಿಗರೇಟ್ ಸೇದುತ್ತಾ, ಗುರು ಗೋಬಿಂದ್ ಸಿಂಗ್ ರಚಿಸಿದ ಪವಿತ್ರ ‘ದಶಮ್ ಗ್ರಂಥ’ದ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಇದು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಗುರ್ಬಾನಿ ಎಂಬುದು ಕೇವಲ ಸಂಭಾಷಣೆಯಲ್ಲ, ಅದು ದೈವಿಕ ಮತ್ತು ಪವಿತ್ರವಾದದ್ದು. ಸಿಗರೇಟ್ ಸೇದುತ್ತಾ ಅದನ್ನು ಹೇಳುವುದು ಅಕ್ಷಮ್ಯ ಅಪರಾಧ’ ಎಂದು ಗುರ್ಜೋತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದ ತಾರಕಕ್ಕೇರುತ್ತಿದ್ದಂತೆಯೇ ನಟ ಆರ್. ಮಾಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ. ‘ಯಾರ ಮನಸ್ಸಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಚಿತ್ರದಲ್ಲಿ ಶ್ಲೋಕ ಹೇಳುವ ಮುನ್ನವೇ ನಾನು ಸಿಗರೇಟ್ ಆರಿಸಿದ್ದೆ. ಪರದೆಯ ಮೇಲೆ ಎಲ್ಲಿಯೂ ಧೂಮಪಾನ ಮಾಡುತ್ತಾ ಶ್ಲೋಕ ಹೇಳುವ ದೃಶ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಿರ್ದೇಶಕ ಆದಿತ್ಯ ಧರ್ ಅವರು ಇಂತಹ ವಿಷಯಗಳಲ್ಲಿ ತುಂಬಾ ಜಾಗರೂಕರಾಗಿದ್ದಾರೆ. ಸಿಖ್ ಸಮುದಾಯದ ಮೇಲೆ ನಮಗೆ ಅಪಾರ ಗೌರವವಿದೆ. ಚಿತ್ರ ಬಿಡುಗಡೆಗೆ ಮುನ್ನ ನಾನು ಯಾವಾಗಲೂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತೇನೆ. ಉದ್ದೇಶಪೂರ್ವಕವಾಗಿ ಈ ತಪ್ಪು ನಡೆದಿಲ್ಲ’ ಎಂದು ಆರ್. ಮಾಧವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ‘ಧುರಂಧರ್ 2’ ಬಗ್ಗೆ ರಜನಿಕಾಂತ್ ಮೆಚ್ಚುಗೆ

ಸದ್ಯಕ್ಕೆ ವಿವಾದ ತಣ್ಣಗಾಗಿಲ್ಲ. ಚಿತ್ರತಂಡ ಬೇಷರತ್ ಕ್ಷಮೆ ಕೇಳದಿದ್ದರೆ ನಿರ್ದೇಶಕ ಆದಿತ್ಯ ಧರ್, ನಟರಾದ ರಣವೀರ್ ಸಿಂಗ್ ಮತ್ತು ಮಾಧವನ್ ಅವರು ಎಲ್ಲೇ ಕಾಣಿಸಿಕೊಂಡರೂ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಸಿಖ್ ಸಂಘಟನೆಗಳು ಎಚ್ಚರಿಕೆ ನೀಡಿವೆ. ಸದ್ಯ ಈ ಎಲ್ಲ ಕಾರಣಗಳಿಂದ ‘ಧುರಂಧರ್ 2’ ಸಿನಿಮಾ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಬೆಂಗಳೂರು ಮಾ.24: ಜನವರಿ 28ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಡಿಸಿಎಂ ಅಜಿತ್ ಪವಾರ್ ( Ajit Pawar) ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದು, ಇದು ಆಕಸ್ಮಿಕ ಸಾವಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂದು ಗಂಭೀರವಾಗಿ ಆರೋಪಿಸಿದ್ದಾರೆ.ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ವಿಮಾನದ ಸುರಕ್ಷಿತ ಮಿತಿ 5,000 ಗಂಟೆಗಳಿದ್ದರೂ, ಸುಮಾರು 8,000 ಗಂಟೆ ಹಾರಾಟ ನಡೆಸಿದ್ದ ದಾಖಲೆಗಳನ್ನು ತಿದ್ದಿ ವಾಣಿಜ್ಯ ಬಳಕೆಗೆ ಬಳಸಲಾಗಿತ್ತು.

ವಿಮಾನದ ಪೈಲಟ್ ಸುಮಿತ್ ಕಪೂರ್ ಈ ಹಿಂದೆ ಎರಡು ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದರು. ಇಂತಹ ಇತಿಹಾಸವಿದ್ದ ವ್ಯಕ್ತಿಯನ್ನು ಉಪಮುಖ್ಯಮಂತ್ರಿಗಳ ವಿಮಾನಕ್ಕೆ ಪೈಲಟ್ ಆಗಿ ನೇಮಿಸಿದ್ದು ಯಾಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.ಮೊದಲು ನಿಗದಿಯಾಗಿದ್ದ ಪೈಲಟ್‌ಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಿ, ಕಪೂರ್ ಮತ್ತು ತಂಡವನ್ನು ನೇಮಿಸಲಾಗಿತ್ತು. ಇದು ಉದ್ದೇಶಪೂರ್ವಕ ಸಂಚಿನ ಭಾಗವೇ ಎಂಬ ಅನುಮಾನ ಮೂಡಿಸಿದೆ.

ಅಜಿತ್ ಪವಾರ್ ಅವರು ರಸ್ತೆ ಮೂಲಕ ಹೋಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅದು ವಿಮಾನ ಪ್ರಯಾಣವಾಗಿ ಬದಲಾಗಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ತನಿಖೆ ನಡೆಯಬೇಕಿದೆ. ವಿಮಾನ ಪತನವಾಗುವ ಮುನ್ನ ಕೋ-ಪೈಲಟ್ “ಓ ಶಿಟ್” ಎಂದು ಕಿರುಚಿದ್ದಾರೆ. ಆದರೆ ಮುಖ್ಯ ಪೈಲಟ್ ಕಪೂರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೈಲಟ್ ಅಮಲಿನಲ್ಲಿದ್ದರೇ ಅಥವಾ ಉದ್ದೇಶಪೂರ್ವಕವಾಗಿ ಸುಮ್ಮನಿದ್ದರೇ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ: ಅಜಿತ್ ಪವಾರ್ ಇದ್ದ ವಿಮಾನ ಪತನಗೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾರಾಮತಿಯಲ್ಲಿ ದಟ್ಟ ಮಂಜು ಕವಿದಿದ್ದು, ಕನಿಷ್ಠ 5 ಕಿ.ಮೀ ವಿಸಿಬಿಲಿಟಿ ಇಲ್ಲದಿದ್ದರೂ ಲ್ಯಾಂಡಿಂಗ್‌ಗೆ ಅವಕಾಶ ನೀಡಿದ್ದು ಯಾರು? ಟೇಬಲ್‌ಟಾಪ್ ರನ್‌ವೇ ಆಗಿದ್ದರೂ ಅಪಾಯಕಾರಿ ನಿರ್ಧಾರ ಕೈಗೊಳ್ಳಲು ಕಾರಣವೇನು? ಡಿಜಿಸಿಎ (DGCA) ತನಿಖೆಯಲ್ಲಿ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಎಂದು ತಿಳಿದಿದ್ದರೂ ವಿಎಸ್ಆರ್ ವೆಂಚರ್ಸ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸಿದೆ ಎಂದು ಆರೋಪಗಳು ಕೇಳಿ ಬಂದಿದೆ. ಇದೀಗ ಈ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪವಾರ್ ಅವರು ದೂರು ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಭೀಮ್ ಯುಪಿಐ ಆ್ಯಪ್​ನಲ್ಲಿ ಪೇಮೆಂಟ್​ಗೆ ಪಿನ್ ಕೋಡ್ ಬದಲು ಫಿಂಗರ್ ಪ್ರಿಂಟ್ ಮತ್ತು ಫೇಸ್ ಅನ್​ಲಾಕ್ ಸಿಸ್ಟಂ

ನವದೆಹಲಿ, ಮಾರ್ಚ್ 24: ಭೀಮ್ (BHIM) ಪೇಮೆಂಟ್ ಆ್ಯಪ್​ನಲ್ಲಿ ಯುಪಿಐ ಪಾವತಿಗೆ ಪಿನ್ ಕೋಡ್ ಜೊತೆಗೆ ಬಯೋಮೆಟ್ರಿಕ್ ದೃಢೀಕರಣದ ಅವಕಾಶವನ್ನೂ ಕೊಡಲಾಗುತ್ತಿದೆ. ಯುಪಿಐ ಸಿಸ್ಟಂ ರೂಪಿಸಿದ ಎನ್​ಪಿಸಿಐನ ಅಂಗಸಂಸ್ಥೆಯಾದ ಭೀಮ್ ಸರ್ವಿಸಸ್ ಲಿಮಿಟೆಡ್ (BHIM Payments App) ಈ ಹೊಸ ಫೀಚರ್ ಅನಾವರಣಗೊಳಿಸಿರುವುದನ್ನು ಇಂದು ಘೋಷಿಸಿದೆ. ಭೀಮ್ ಆ್ಯಪ್ ಬಳಕೆದಾರರು 5,000 ರೂವರೆಗಿನ ಯುಪಿಐ ಟ್ರಾನ್ಸಾಕ್ಷನ್​ಗಳಿಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ನೀಡಬಹುದು

ಫಿಂಗರ್ ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್ ಸೌಲಭ್ಯ ಇರುವಂತಹ ಸ್ಮಾರ್ಟ್​ಫೋನ್​ಗಳಲ್ಲಿ ಭೀಮ್ ಆ್ಯಪ್ ಬಳಕೆದಾರರು ಈ ಫೀಚರ್ ಅನ್ನು ಬಳಸಬಹುದು.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇಎಂಐ, ಝೀರೋ ಕಾಸ್ಟ್ ಇಎಂಐ ಹಿಂದಿರುವ ಸೀಕ್ರೆಟ್ ವಿಚಾರಗಳು ಏನು ಗೊತ್ತಾ?

ಬಯೋಮೆಟ್ರಿಕ್ ಫೀಚರ್ ಎನೇಬಲ್ ಆಗಿದ್ದರೆ, 5,000 ರೂವರೆಗಿನ ಪಾವತಿಗೆ ಪಿನ್ ಹಾಕುವ ಅವಶ್ಯಕತೆ ಇರುವುದಿಲ್ಲ. ಅದಕ್ಕೂ ಮೇಲ್ಪಟ್ಟ ಮೊತ್ತದ ಪಾವತಿಗೆ ಮಾತ್ರ ಪಿನ್ ಬೇಕಾಗುತ್ತದೆ. ಉಳಿದಂತೆ, ಫಿಂಗರ್ ಪ್ರಿಂಟ್ ಅಥವಾ ಮುಖ ಚಹರೆ ಕಾಣಿಸಿದರೆ ಸಾಕಾಗುತ್ತದೆ.

ಯುಪಿಐ ಪಾವತಿ ಸಿಸ್ಟಂಗೆ ಬಯೋಮೆಟ್ರಿಕ್ ಅಥೆಂಟಿಕೇಶನ್ ಹೆಚ್ಚುವರಿ ಭದ್ರತೆ ಒದಗಿಸುತ್ತದೆ. ಫಿಂಗರ್​ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಶನ್​ನ ದತ್ತಾಂಶವು ಸ್ಮಾರ್ಟ್​ಫೋನ್​ನಲ್ಲಿ ಮಾತ್ರವೇ ಸಂಗ್ರಹವಾಗಿರುತ್ತದೆ. ಹೀಗಾಗಿ, ಬೇರೆಯವರು ನಿಮ್ಮ ಐಡೆಂಟಿಟಿಯನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಪಾವತಿ ಕಾರ್ಯವೂ ಸುಲಭವಾಗಿರುತ್ತದೆ.

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ಭೀಮ್ ಪೇಮೆಂಟ್ಸ್ ಆ್ಯಪ್​ನಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್ ಸಕ್ರಿಯಗೊಳಿಸುವ ಕ್ರಮ

  • ಭೀಮ್ ಪೇಮೆಂಟ್ಸ್ ಆ್ಯಪ್ ತೆರೆಯಿರಿ
  • ಪ್ರೊಫೈಲ್​ಗೆ ಹೋಗಿ
  • ನಿಮ್ಮ ಬ್ಯಾಂಕ್ ಅಕೌಂಟ್ ಆಯ್ದುಕೊಳ್ಳಿ
  • ಬಯೋಮೆಟ್ರಿಕ್ ಟ್ರಾನ್ಸಾಕ್ಷನ್ಸ್ ಸಕ್ರಿಯಗೊಳಿಸಿ
  • ಫಿಂಗರ್ ಪ್ರಿಂಟ್ ಮೂಲಕ 5,000 ರೂವರೆಗಿನ ಹಣವನ್ನು ಪಾವತಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

WITT Summit 2026: ಪಂಜಾಬ್​ನಲ್ಲಿ ದ್ವೇಷದ ಬೀಜ ಮೊಳಕೆಯೊಡುವುದಿಲ್ಲ; ವಿಟ್ ಶೃಂಗಸಭೆಯಲ್ಲಿ ಸಿಎಂ ಭಗವಂತ್ ಮಾನ್

ನವದೆಹಲಿ, ಮಾರ್ಚ್ 24: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟಿವಿ9ನ WITT ಶೃಂಗಸಭೆಯಲ್ಲಿ (WITT Summit 2026) ರಾಜ್ಯ ಮತ್ತು ರಾಷ್ಟ್ರೀಯ ವಿಷಯಗಳ ಕುರಿತು ಮಾತನಾಡಿದರು. ಪಂಜಾಬ್ ನಿರಂತರ ನಗು, ಮಿಲಿಟರಿ ಸೇವೆ ಮತ್ತು ಹಚ್ಚ ಹಸಿರಿನ ಹೊಲಗಳಿಗೆ ಹೆಸರುವಾಸಿಯಾದ ರಾಜ್ಯ. ಜಗತ್ತಿನಲ್ಲಿ ಎಲ್ಲಿಯಾದರೂ ವಿಪತ್ತು ಸಂಭವಿಸಿದರೂ ರೆಡ್ ಕ್ರಾಸ್ ಸಹಾಯ ಮಾಡಲು ಬರಬಹುದು ಅಥವಾ ಬರದೆಯೂ ಇರಬಹುದು. ಪ್ರತಿಯೊಂದು ಬೀಜವು ಪಂಜಾಬ್‌ನಲ್ಲಿ ಬೆಳೆಯುತ್ತದೆ, ಆದರೆ ದ್ವೇಷದ ಬೀಜ ಮಾತ್ರ ಮೊಳಕೆಯೊಡೆಯುವುದಿಲ್ಲ. ಭಾರತವು ಉಂಗುರವಾಗಿದ್ದರೆ, ಪಂಜಾಬ್ ಒಂದು ವಜ್ರ ಎಂದು ಹೇಳಿದ್ದಾರೆ.

“ರಾಷ್ಟ್ರೀಯ ರಾಜಕೀಯದಲ್ಲಿ 4 ವರ್ಷಗಳಲ್ಲಿ ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿರುವುದು ಇದೇ ಮೊದಲು. ನಾವು 19 ಟೋಲ್ ಪ್ಲಾಜಾಗಳನ್ನು ಮುಚ್ಚಿದ್ದೇವೆ. ಪಂಜಾಬ್‌ನಲ್ಲಿ ರಸ್ತೆಗಳಲ್ಲಿ ಉಳಿಯುವ ಹೊಸ ಪೊಲೀಸ್ ಪಡೆ (SSF) ಅನ್ನು ನಾವು ರಚಿಸಿದ್ದೇವೆ. ಈ ತಂಡವು ಅಪಘಾತದ ಸ್ಥಳಕ್ಕೆ ಆಗಮಿಸಿ ಸಹಾಯವನ್ನು ಒದಗಿಸುತ್ತದೆ. ಹಿಂದೆ, ಪ್ರತಿದಿನ 15 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದರು. ಇಂದು SSF ಸಹಾಯದಿಂದ ಸಾವಿನ ಪ್ರಮಾಣವು ಶೇ. 48ರಷ್ಟು ಕಡಿಮೆಯಾಗಿದೆ. ನಾವು ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುತ್ತೇವೆ” ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: PM Modi in WITT Summit 2026: ಯುದ್ಧದ ಸಮಯದಲ್ಲೂ ಭಾರತದ ಆರ್ಥಿಕ ಸ್ಥಿರತೆ ಕಂಡು ಜಗತ್ತು ಬೆರಗಾಗಿದೆ; ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಬಿಜೆಪಿ ವಿರುದ್ಧವೂ ಸಿಎಂ ಭಗವಂತ್ ಮಾನ್ ತೀವ್ರ ವಾಗ್ದಾಳಿ ನಡೆಸಿದರು. ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾದರೆ ಕೇಜ್ರಿವಾಲ್ ಸೂಪರ್ ಸಿಎಂ ಎಂಬ ಬಿಜೆಪಿ ಆರೋಪಕ್ಕೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ಮೊದಲನೆಯದಾಗಿ, ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷ ಎಂದು ಬಿಜೆಪಿ ಒಪ್ಪಿಕೊಳ್ಳಬೇಕು. ನಮ್ಮ ವಿರುದ್ಧ ಈ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಗಳು ಯಾರು ಎಂಬುದನ್ನು ಬಹಿರಂಗಪಡಿಸಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ: WITT Summit 2026: ಪ್ರಧಾನಿ ನರೇಂದ್ರ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ

ಕೇಜ್ರಿವಾಲ್ ನಮ್ಮ ಪಕ್ಷದ ಮುಖ್ಯಸ್ಥರು. ಕೇಜ್ರಿವಾಲ್ ದೆಹಲಿಯಿಂದ ಪಂಜಾಬ್‌ಗೆ ಬಂದರೆ ಅಮಿತ್ ಶಾ ಎಲ್ಲಿಂದ ಬರುತ್ತಾರೆ? ಇಡೀ ದೇಶ ನಮ್ಮದು. ದೆಹಲಿ ರಾಜಧಾನಿ. ದೇಶವನ್ನು ನಡೆಸುವವರು ಅಹಮದಾಬಾದ್‌ನಿಂದ ಏಕೆ ಬರಬೇಕು? ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಅವರು ರಾಜ್ಯಪಾಲರಿಗೆ ಕಿರುಕುಳ ನೀಡುತ್ತಾರೆ. ಅವರು ನಮ್ಮ ಹಿಂದೆ ಬಿಳಿ ಆನೆಯನ್ನು (ಗವರ್ನರ್) ಬಿಟ್ಟಿದ್ದಾರೆ ಎಂದು ಭಗವಂತ್ ಮಾನ್ ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link