ಭೀಮಾ ನದಿ ತೀರದಲ್ಲಿ ಮತ್ತೆ ರಕ್ತಚರಿತ್ರೆ: 6 ಜನರ ಭೀಕರ ಕೊಲೆ!

ವಿಜಯಪುರ, ಮೇ,30: ಜಿಲ್ಲೆಯ ಚಡಚನ ತಾಲೂಕಿನ ಗೋವಿಂದಪುರ ಗ್ರಾಮದ ಬಳಿ ಭೀಮಾ ನದಿ ತಟದಲ್ಲಿ ಭೀಕರ ಕೊಲೆಯೊಂದು ನಡೆದಿದ್ದು, ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಹಾಗೂ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರು ದಾರುಣವಾಗಿ ಹತ್ಯೆಯಾಗಿದ್ದಾರೆ. ನಿರಾಳೆ ಕುಟುಂಬದ ದುಂಡಪ್ಪ ಶಿವಪುತ್ರ, ಚಂದ್ರಕಾಂತ್, ರಾಹುಲ್, ಸಮರ್ಥ್ ಹಾಗೂ ಅವರ ಜೊತೆಗಿದ್ದ ಶಬ್ಬೀರ್ ಅತ್ತಾರ್ ಎಂಬುವರು ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ನಡೆದ ಜಮೀನನ್ನು ನಿರಾಳೆ ಕುಟುಂಬದವರು ಇತ್ತೀಚೆಗೆ ಖರೀದಿಸಿದ್ದರು. 15ರಿಂದ 20 ಮಂದಿ ಯುವಕರ ತಂಡ ಬೈಕ್‌ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು ಹಾರಿಸಿ ಹತ್ಯೆ ನಡೆಸಿದೆ. ಈ ಘಟನೆಯಿಂದ ವಿಜಯಪುರ ಜಿಲ್ಲೆಯ ಜನತೆ ತಲ್ಲಣಗೊಂಡಿದ್ದಾರೆ. ಚಡಚನ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ಕುರಿತು ತನಿಖೆ ಮುಂದುವರಿದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *