ನಿಮ್ಮ ನಿಯಂತ್ರಣದಲ್ಲಿ ಇರುವಂಥ ವಿಷಯಗಳನ್ನು ಮಾತ್ರ ಕಾಳಜಿ ಮಾಡಿ. ಕೈ ಅಳತೆ ಮೀರಿದ ವಿಚಾರಗಳ ತಲೆ ಕೆಡಿಸಿಕೊಳ್ಳಬೇಡಿ. ನೀವು ಸಮಸ್ಯೆಗಳು ಅಂತ ಏನನ್ನು ಅಂದುಕೊಂಡಿರುತ್ತೀರೋ ವಾಸ್ತವಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಿಕೊಳ್ಳುತ್ತಿದ್ದೀರಿ ಎಂಬುದು ಗಮನಕ್ಕೆ ಬರಲಿದೆ. ಮದುವೆಗೆ ಪ್ರಯತ್ನಿಸುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ದುಡ್ಡಿನ ಖರ್ಚು ಮಾಡುವಾಗ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ ಎಂಬ ಸ್ಪಷ್ಟತೆ ಇರಲಿ.
ಇತರರು ನಿಮಗೆ ನೀಡುವ ಗೌರವವನ್ನು ಸಾಧನೆ ಎಂದುಕೊಳ್ಳುವ ಮುನ್ನ ಅದರಿಂದ ನಿಮ್ಮ ಮೇಲೆ ಆಗುವ ಪ್ರಭಾವ ಏನು ಎಂಬುದನ್ನು ಆಲೋಚಿಸಿ. ಈ ದಿನ ಸಾಧ್ಯವಾದಷ್ಟೂ ಕೋಪವನ್ನು ಮಾಡಿಕೊಳ್ಳಬೇಡಿ ಹಾಗೂ ಅಹಂಕಾರ ನಿಮ್ಮ ತಲೆಗೆ ಏರದಂತೆ ನೋಡಿಕೊಳ್ಳಿ. ಈ ಎರಡೂ ನೋಡಿಕೊಂಡರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ದೇವತಾ ಕಾರ್ಯಗಳಿಗಾಗಿ ಸ್ನೇಹಿತರು- ಸಂಬಂಧಿಗಳ ಮನೆಗೆ ಆಹ್ವಾನ ಬರಲಿದೆ.
ಈ ದಿನ ನಿಮ್ಮ ಮಾತು ಮತ್ತು ನಿರ್ಧಾರಗಳು ಉದ್ಯೋಗ ಸ್ಥಳದಲ್ಲಿ ಆಗಬೇಕಾದ ಕೆಲಸದ ಗತಿಯನ್ನೇ ಬದಲಿಸಲಿದೆ. ವ್ಯಾಪಾರ- ವ್ಯವಹಾರ ಅಂತ ಬಂದಲ್ಲಿ ಭವಿಷ್ಯವನ್ನು ಗಮನ ಇಟ್ಟುಕೊಂಡು ಜಾಣ್ಮೆಯಿಂದ ಮಾತನಾಡಿ. ಸಹೋದ್ಯೋಗಿಗಳು ಸಹ ನಿಮ್ಮ ಅಭಿಪ್ರಾಯಕ್ಕೆ ಸಮ್ಮತ ನೀಡುವ ಸಾಧ್ಯತೆಯಿದೆ. ಹಣಕಾಸಿನ ನಿರ್ಧಾರಗಳಲ್ಲಿ ಸಂಯಮದಿಂದ ವರ್ತಿಸಿದರೆ ಲಾಭ ತಂದು ಕೊಡಲಿದೆ. ಕುಟುಂಬ ಸದಸ್ಯರಿಗೆ ನೀವು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ.
ನೀವು ಇತರರ ಜೊತೆಗೆ ಸ್ಪರ್ಧಿಸಬೇಕಿಲ್ಲ, ಆದರೆ ನಿಮ್ಮ ಸ್ಪರ್ಧೆ ಇರುವುದು ಈ ಹಿಂದೆ ಮಾಡಿದ ತಪ್ಪುಗಳಿಂದ ಆಚೆ ಬರುವುದರಲ್ಲಿ, ನಿರ್ಧಾರ ಮಾಡಿದಂತೆಯೇ ಬದುಕುವುದರಲ್ಲಿ ಎಂಬ ವಿಷಯ ಈ ದಿನ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನೀವು ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಆಗಿದ್ದರೂ ಹೆಚ್ಚಿನ ಶ್ರಮವನ್ನು ಹಾಕಲೇಬೇಕಾಗುತ್ತದೆ. ದಂಪತಿಗಳು- ಪ್ರೀತಿ, ಪ್ರೇಮದಲ್ಲಿ ಇರುವವರು ನಿಮ್ಮ ಒಳಗಿನ ಪ್ರೀತಿಯನ್ನು ಸಾಬೀತು ಮಾಡುವುದಕ್ಕೆ ಅಂತಲೇ ಹೆಚ್ಚು ಸಮಯವನ್ನು ಮೀಸಲಿಡುತ್ತೀರಿ.
ಉದ್ಯಮಿಗಳಿಗೆ ಹಾಗೂ ಉದ್ಯೋಗಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮ ಯೋಜನೆಗಳು ಹಾಗೂ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಏನು ಮಾಡಬೇಕು ಎಂಬುದನ್ನು ಹೇಳುವ ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ. ನಿಮ್ಮ ಜಡ್ಜ್ ಮೆಂಟ್ ಬಹಳ ಚೆನ್ನಾಗಿರುತ್ತದೆ. ಆದ್ದರಿಂದ ಅನಿಸಿದ್ದನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಷೇರು ಮಾರುಕಟ್ಟೆ- ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಸಣ್ಣ ಹೂಡಿಕೆ ಒಳ್ಳೆ ಲಾಭ ತಂದುಕೊಡಲಿದೆ.
ಮನೆಯಲ್ಲಿನ ವಾತಾವರಣ ಪ್ರಶಾಂತವಾಗಿ ಇರುವಂತೆ ನೋಡಿಕೊಳ್ಳಿ. ನೀವು ಪ್ರೀತಿಸುವವರು ಏನು ಹೇಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೋ ಅದನ್ನು ಅರ್ಥ ಮಾಡಿಕೊಂಡಲ್ಲಿ ಸಂಬಂಧ ಗಾಢವಾಗುತ್ತದೆ- ಪರಸ್ಪರ ವಿಶ್ವಾಸ ಹೆಚ್ಚಾಗುತ್ತದೆ. ಸೂರ್ಯನ ಬೆಳಕಲ್ಲಿ ಸ್ವಲ್ಪವಾದರೂ ಸಮಯವನ್ನು ಕಳೆಯಿರಿ. ಉದ್ಯೋಗ ಸ್ಥಳದಲ್ಲಿ ತೋರಿದ ಬುದ್ಧಿವಂತಿಕೆಗೆ ಗೌರವವನ್ನು ಪಡೆಯಲಿದ್ದೀರಿ. ಬೇರೆಯವರು ಮಾಡಿದ ತಪ್ಪನ್ನು ದೊಡ್ಡದು ಮಾಡುವುದಕ್ಕೆ ಹೋಗಬೇಡಿ. ಇತರರ ಮಿತಿಯನ್ನು ಅರಿತು, ಕ್ಷಮಿಸಿ- ನಿಮ್ಮಿಂದ ಸಾಧ್ಯವಾಗುವ ಸಹಾಯ ಮಾಡುವುದಕ್ಕೆ ಪ್ರಯತ್ನಿಸಿ.
ನಿಮ್ಮ ಸಂಗಾತಿಯ ಬಗ್ಗೆ ಇರುವಂಥ ಕಾಳಜಿಯನ್ನು ವ್ಯಕ್ತಿಪಡಿಸುವಾಗ ಅದು ಪೊಸೆಸಿವ್ ನೆಸ್ ಅನಿಸದಂತೆ ನೋಡಿಕೊಳ್ಳಿ. ಬಾಯಿರುಚಿಗೆ ಬಿದ್ದು, ಅಧಿಕ ಪ್ರಮಾಣದ ಆಹಾರ ಸೇವನೆ ಮಾಡುವುದಕ್ಕೆ ಹೋಗಬೇಡಿ. ದೇಹದ ತೂಕ ಮತ್ತು ನಿಮ್ಮ ಆರೋಗ್ಯ ಪರಿಸ್ಥಿತಿಯ ಕಡೆಗೂ ಲಕ್ಷ್ಯವನ್ನು ನೀಡಿ. ಅಧ್ಯಾತ್ಮದ ಕಡೆಗೆ ಮನಸ್ಸು ವಾಲಲಿದೆ. ಮೌನ- ಧ್ಯಾನಕ್ಕೆ ಒತ್ತು ನೀಡಲಿದ್ದೀರಿ.
ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂಥ ಹಾಗೂ ಒಳಿತು ಆಗುವಂಥ ಹೊಸ ವಿಚಾರಗಳನ್ನು ಹೊಸ ಜನರು ತೆಗೆದುಕೊಂಡು ಬರಲಿದ್ದಾರೆ. ಇಷ್ಟು ಸಮಯ ನಿಮ್ಮ ಮಾತನ್ನು ಯಾರು ಕೇಳಿಸಿಕೊಳ್ಳುತ್ತಾರೆ ಅಂತೇನಾದರೂ ನೀವು ಅಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ಇಂಥ ಸಂದರ್ಭದಲ್ಲಿ ನೀವು ಮಾತನಾಡುವ ವಿಷಯ ಹಾಗೂ ಬಳಸುವ ಪದಗಳ ಕಡೆಗೆ ಗಮನವನ್ನು ನೀಡಿ.
ಕೆಲಸಗಳು ನಿಧಾನ ಗತಿಯಲ್ಲಿಯೇ ಸಾಗಿದರೂ ಫಲಗಳು ಉತ್ತಮ ರೀತಿಯಲ್ಲಿ ದೊರೆಯಲಿದೆ. ಆರ್ಥಿಕ ವಿಷಯಗಳಲ್ಲಿ ನಿಮ್ಮ ಬುದ್ಧಿವಂತಿಕೆ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಅನುಕೂಲಕ್ಕೆ- ಲಾಭಕ್ಕೆ ಕಾರಣ ಆಗಲಿವೆ. ನಿಮ್ಮ ಸಹನೆ ಹಾಗೂ ಎಷ್ಟು ಮಾತನಾಡಬೇಕೋ ಅಷ್ಟನ್ನು ಮಾತ್ರ ಮಾತನಾಡುವ ರೀತಿಯಿಂದಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸಿರುತ್ತದೆ. ಎಲ್ಲರ ಬಗ್ಗೆ ನೀವು ತೋರುವ ಗೌರವ ಹಾಗೂ ತೆಗೆದುಕೊಳ್ಳುವ ಕಾಳಜಿಯಿಂದ ಇತರರಿಗೆ ನಿಮ್ಮ ಮೇಲೆ ಪ್ರೀತಿ- ಗೌರವ ಹೆಚ್ಚಿಸುತ್ತದೆ.
ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಬುಧವಾರದಂದು ನಿರ್ದಿಷ್ಟ ಕಾರ್ಯ, ಮಾತಿಗೆ ತಪ್ಪುವುದು, ಅನ್ಯರ ಉನ್ನತಿಯಲ್ಲಿ ಈರ್ಷೆ, ಕಡಿಮೆ ಆದಾಯ, ಖರೀದಿ ಗೊಂದಲ, ಬಂಧುಗಳಿಂದ ಅಸಮಾಧಾನ ಇವೆಲ್ಲ ಈ ದಿನದ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಆಯುಷ್ಮಾನ್, ಕರಣ : ತೈತಿಲ, ಸೂರ್ಯೋದಯ – 06 – 26 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:30 – 14:01, ಯಮಗಂಡ ಕಾಲ 07:57 – 09:28, ಗುಳಿಕ ಕಾಲ 10:59 – 12:30
ಮೇಷ ರಾಶಿ :
ನೀವು ಎಂದೋ ಆರಂಭಿಸಬೇಕೆಂದುಕೊಂಡ ಯೋಜನೆಗಳನ್ನು ಇಂದು ಪ್ರಾರಂಭಿಸಬಹುದು. ವಾಹನಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಪುಣ್ಯ ಪ್ರದೇಶಗಳಿಗೆ ಪ್ರಯಾಣಿಸಿ ದಾನ-ಧರ್ಮದಲ್ಲಿ ಭಾಗಿಯಾಗಿಯಾಗುವಿರಿ. ನಿಮ್ಮ ಸಹೋದ್ಯೋಗಿಗಳು ನಿಮ್ಮ ಬಗ್ಗೆ ಅಸೂಯೆ ಪಡಬಹುದು. ಆದರೆ ನಿಮ್ಮ ಉತ್ತಮ ನಡವಳಿಕೆಯನ್ನು ನೋಡಿ, ಜನರು ನಿಮ್ಮನ್ನು ಒಲಿಸಿಕೊಳ್ಳಲು ಬಯಸುತ್ತಾರೆ.
ವೃಷಭ ರಾಶಿ :
ತಾಯಿಯ ಕಡೆಯಿಂದ ಸಂಬಂಧಗಳು ಸುಧಾರಿಸುತ್ತವೆ. ವ್ಯಾಪಾರ, ವ್ಯವಹಾರದಲ್ಲಿ ಡೋಲಾಯಮಾನವಾದ ಸ್ಥಿತಿ ಇರುವುದು. ವೈವಾಹಿಕ ಜೀವನವನ್ನು ಇಂದು ಕೂಡ ಅತ್ಯಂತ ಸಂತೋಷದಿಂದ ಕಳೆಯುವಿರಿ. ಅತಿಥಿ ಸತ್ಕಾರದಿಂದ ಒತ್ತಡ ದೂರ. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳ್ಳಬಹುದು. ಕೃಷಿಯ ಬಗ್ಗೆ ಅಧಿಕ ಆಸಕ್ತಿ. ಇಂದು ನೀವು ಸಂತೋಷವಾಗಿರುವುದರಿಂದ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತೀರಿ.
ಮಿಥುನ ರಾಶಿ :
ನೀವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಈ ಸಮಯದಲ್ಲಿ, ಹೊರಗೆ ಏನನ್ನಾದರೂ ತಿನ್ನುವುದನ್ನು ತಪ್ಪಿಸಿ. ಮದುವೆಯಾಗಲು ಪ್ರಯತ್ನಿಸುವವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಉದ್ಯೋಗಿಗಳಿಗೆ ಉದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿವೆ. ಮೌಲ್ಯಯುತವಾದ ಏನನ್ನಾದರೂ ಪಡೆಯುವ ಬಯಕೆಯನ್ನು ಇಂದು ಪೂರೈಸಬಹುದು.
ಕರ್ಕಾಟಕ ರಾಶಿ :
ವ್ಯವಹಾರವನ್ನು ಹೆಚ್ಚಿಸಲು ಕುಟುಂಬದ ಜೊತೆ ಸಮಾಲೋಚನೆ ಮಾಡಬೇಕಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶಗಳು ಸಿಗುತ್ತವೆ. ವೃತ್ತಿರಂಗದಲ್ಲಿ ಪ್ರತಿಷ್ಠಿತರ ಸಹಯೋಗದಿಂದ ಕಾರ್ಯಸಿದ್ಧಿ. ಗೊತ್ತಿದ್ದೂ ತಪ್ಪು ಮಾಡುವ ಮೂರ್ಖತನಕ್ಕೆ ಅನುಭವಿಸುವುದೊಂದೇ ದಾರಿ. ಭಾವನಾತ್ಮಕವಾಗಿ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಸ್ಥಾನವನ್ನು ದುರ್ಬಲಗೊಳಿಸಬಹುದು.
ಸಿಂಹ ರಾಶಿ :
ಪ್ರೇಮ ಅನುಭವಗಳು ಕಹಿಯಾದ ಕಾರಣ ಪ್ರೇಮದ ಕೊಡು ಕೊಳ್ಳುವಿಕೆಯಿಂದ ದೂರ. ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಲಾಭ ಪಡೆಯುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ವಾಸಿಸುವ ಸ್ಥಳದಲ್ಲಿ ನೆಮ್ಮದಿ ದೂರಾದ ಅನುಭವವಾಗಬಹುದು. ಕೊಡು ಕೊಳ್ಳುವ ವ್ಯವಹಾರಗಳಲ್ಲಿ ಲಾಭ ಕಂಡು ಬಂದರೂ, ಜಾಗರೂಕತೆ ವಹಿಸುವುದು ಅಗತ್ಯ. ಬಲಗಣ್ಣಿನ ತೊಂದರೆ ಕಾಣಿಸುವುದು.
ಕನ್ಯಾ ರಾಶಿ :
ಕೈಯಲ್ಲಿ ಸಾಕಷ್ಟು ಹಣವನ್ನು ಹೊಂದಿರುವ ನೀವು ನೆಮ್ಮದಿಯಿಂದ ಇರುವಿರಿ. ಕೆಲವು ಕೆಲಸದ ಭರದಲ್ಲಿ ಇಂದು ಸಮಯವು ನಿಮ್ಮದಾಗಿರದು. ವಾತಾವರಣವು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಂಗಾತಿಯ ಸಾಕಷ್ಟು ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ಶುಭ ಕಾರ್ಯದ ಚಿಂತನೆ ಅನಿರೀಕ್ಷಿತವಾಗಿ ನಡೆಯಲಿದೆ. ಉದ್ಯಮ, ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯಲಿದೆ. ಹೂಡಿಕೆ ವಿಸ್ತರಣೆಗೆ ಅವಸರ ಬೇಡ.
ತುಲಾ ರಾಶಿ :
ಉದ್ಯೋಗ ಮತ್ತು ವ್ಯವಹಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಂದ ಊಹಿಸಲಾಗದ ಯಶಸ್ಸನ್ನು ಸಾಧಿಸುವಿರಿ. ಯಾವುದೇ ಆರ್ಥಿಕ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ. ಇಂದು ತಪ್ಪಾದ ಹೂಡಿಕೆಯಿಂದ ಹಣೆಕಳೆದುಕೊಳ್ಳುವಿರಿ. ವ್ಯಾಪಾರ, ವ್ಯವಹಾರಗಳ ಮುನ್ನಡೆಗಾಗಿ ಪ್ರಯಾಣದ ಮಾತುಕತೆಯ ಸಾಧ್ಯತೆ ಇರುತ್ತದೆ. ದಾಯಾದಿಗಳ ಆಗಮನ ಕಿರಿಕಿರಿ ತರಲಿದೆ.
ವೃಶ್ಚಿಕ ರಾಶಿ :
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಒಂದರ ಆಳ ತಪ್ಪಿದರೂ ಮತ್ತೊಂದರಲ್ಲಿ ಬೀಳಬೇಕಾಗುವುದು. ವಾಹನ ಬಳಕೆಯಲ್ಲಿ ಎಚ್ಚರಿಕೆಯಿಂದ ಬಳಸಿ, ಆಕಸ್ಮಿಕ ವಾಹನ ವೈಫಲ್ಯದಿಂದಾಗಿ ವೆಚ್ಚಗಳು ಹೆಚ್ಚಾಗಬಹುದು. ಚಿಂತಿತ ವ್ಯವಹಾರಗಳು ಹಂತ ಹಂತವಾಗಿ ಬಲಗೊಳ್ಳಲಿವೆ. ಅದೃಷ್ಟ ಬಲದಿಂದ ಹೂಡಿಕೆಗಳು ಲಾಭದಾಯಕವಾಗಲಿವೆ. ನಿಮ್ಮ ಸ್ಥಾನವು ಆರ್ಥಿಕವಾಗಿ ಸದೃಢವಾಗಿರುತ್ತದೆ.
ಧನು ರಾಶಿ :
ಹೊಸ ಉದ್ಯಮಿಗಳು ಪ್ರಯೋಜನ ಪಡೆಯಲಿದ್ದಾರೆ. ಪ್ರಾಣಿಗಳಿಂದ ಆಪತ್ತು ಬರಬಹುದು. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಾಯಕತ್ವದಲ್ಲಿ ನಡೆಯುತ್ತಿರುವ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಸಮಯವನ್ನು ಕಳೆಯಲಾಗುವುದು. ಇಂದು ಲೌಕಿಕ ಆನಂದದ ವಿಧಾನಗಳು ಹೆಚ್ಚಾಗುತ್ತವೆ. ಇಂದು ಸಹೋದರ ಸಹೋದರಿಯ ಜೊತೆಗಿನ ನಿಮ್ಮ ವಾತ್ಸಲ್ಯವು ತೃಪ್ತಿಯನ್ನು ಕೊಡುವುದು.
ಮಕರ ರಾಶಿ :
ದಾಂಪತ್ಯದ ಕಲಹದಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ವಿಪರೀತ ಪರಿಣಾಮವುಂಟು ಮಾಡಲಿದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸದ ಕಾರಣ ನಿಮ್ಮ ಮನಸ್ಸು ಕೂಡ ತೊಂದರೆಗೊಳಗಾಗಬಹುದು. ಉದ್ಯೋಗಿಗಳು ಕ್ಷೇತ್ರದಲ್ಲಿ ಬಡ್ತಿ ಸುದ್ದಿಗಳನ್ನು ಕೇಳಬಹುದು. ಆದ್ದರಿಂದ ವ್ಯಾಪಾರಿಗಳು ಸಹ ಲಾಭ ಪಡೆಯಬಹುದು. ನಿಮ್ಮನ್ನು ವಶಪಡಿಸಿಕೊಳ್ಳುವ ತಂತ್ರಗಾರಿಕೆ ನಡೆಯುವುದು. ವ್ಯವಹಾರ ರೂಪಾಂತರವನ್ನು ಯೋಜಿಸಲಾಗುತ್ತದೆ.
ಕುಂಭ ರಾಶಿ :
ಉದ್ಯೋಗ ಕ್ಷೇತ್ರದಲ್ಲಿ ಅರ್ಹತೆಯನ್ನು ಹೆಚ್ಚಿಸುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬದ ವಿಚಾರದಲ್ಲಿ ವಿರೋಧಿಗಳು ಜಯ ಸಾಧಿಸುವರು. ಹೊಸ ಒಪ್ಪಂದದ ಬಾಗಿಲು ಮತ್ತು ಸ್ಥಾನ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಚಿಂತೆ ಕಡಿಮೆಯಾಗಲಿದೆ. ಆಸ್ತಿಯ ವಿಚಾರದಲ್ಲಿ ಅಧಿಕ ಲಾಭ ಸಿಗಲಿದೆ. ಹುಚ್ಚುನತನದ ಸಾಹಸದಿಂದ ನಿಮ್ಮವರು ಬಲಿ. ಇಂದು ನಿಮಗೆ ಕೆಲವು ತೊಂದರೆಗಳಾಗುವ ಸಾಧ್ಯತೆಯಿದೆ.
ಮೀನ ರಾಶಿ :
ಕುಟುಂಬ ಜೀವನವು ಒತ್ತಡವನ್ನುಂಟು ಮಾಡುತ್ತದೆ. ಆದರೆ ಪ್ರೀತಿಪಾತ್ರರ ಜೊತೆ ಸಮಯ ಕಳೆಯಲಾಗುತ್ತದೆ. ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಪಡೆಯುವಿರಿ. ಶುಭ ಕಾರ್ಯದ ನಿರ್ಧಾರವು ಪ್ರಯತ್ನ ಬಲದಿಂದ ಫಲ ನೀಡಲಿದೆ. ಇಂದು ನಿಮ್ಮ ವೈವಾಹಿಕ ಜೀವನವು ಸಂತೋಷಕರವಾಗಿರುತ್ತದೆ. ಇದರೊಂದಿಗೆ, ನೀವು ಇಂದು ದಿನದ ಶುಭವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿನ ವಿಸ್ತರಣೆ ನಿಮಗೆ ಸಂತೋಷವನ್ನು ನೀಡುತ್ತದೆ.
ಚೆನ್ನೈ, ಮಾರ್ಚ್ 24: ತಮಿಳುನಾಡು ವಿಧಾನಸಭಾ ಚುನಾವಣೆಗೆ (Tamil Nadu Assembly Elections) ಕೇವಲ ಒಂದು ತಿಂಗಳು ಬಾಕಿ ಇರುವಾಗ ಚುನಾವಣಾ ಪ್ರಚಾರ ಭರದಿಂದ ಆರಂಭವಾಗಿದೆ. ರಾಜಕೀಯ ಪಕ್ಷಗಳು ಚುನಾವಣಾ ಕೆಲಸಗಳನ್ನು ಸಕ್ರಿಯವಾಗಿ ನಡೆಸುತ್ತಿವೆ. ಇಂದು ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ AIADMK (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ತಮಿಳುನಾಡಿನ ಜನರಿಗೆ 297 ಭರವಸೆಗಳನ್ನು ನೀಡಲಾಗಿದೆ.
ತಮಿಳುನಾಡಿನ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವ ಗುರಿಯೊಂದಿಗೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಾರ್ವಜನಿಕ ಕಲ್ಯಾಣದ ಆಧಾರದ ಮೇಲೆ ಈ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಮಹಿಳೆಯರು, ರೈತರು, ಯುವಕರು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಘೋಷಿಸಲಾಗಿದೆ.
ಬೆಂಗಳೂರು, ಮಾರ್ಚ್ 24: ನಮ್ಮ ಮೆಟ್ರೋ (namma-metro) 3ನೇ ಹಂತ ಆರೆಂಜ್ ಲೈನ್ ಯೋಜನೆಗಾಗಿ ಜಪಾನ್ನಿಂದ ಸಾಲ ಪಡೆದಿದೆ. ಎರಡು ಹಂತದಲ್ಲಿ 6,775 ಕೋಟಿ ರೂ ಸಾಲ ಒಪ್ಪಂದಕ್ಕೆ ಜಪಾನ್ ಸಂಸ್ಥೆ ಜತೆ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಿದೆ. ಜಪಾನ್ ಇಂಟರ್ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿಯಿಂದ 30 ವರ್ಷ ಅವಧಿಗೆ ಸಾಲ ಪಡೆಯಲಾಗಿದೆ. 2032ಕ್ಕೆ ಆರೆಂಜ್ ಮಾರ್ಗ ಸಂಚಾರಕ್ಕೆ ಮುಕ್ತ ಸಾಧ್ಯತೆ ಇದೆ.
ನಮ್ಮ ಮೆಟ್ರೋ 3ನೇ ಹಂತಕ್ಕಾಗಿ ಜಪಾನ್ನಿಂದ ಸಾಲ
ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೆಟ್ರೋ 3ನೇ ಹಂತದ ಯೋಜನೆಗೆ ಸಾಲದ ಒಪ್ಪಂದಕ್ಕೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಪರವಾಗಿ, ಭಾರತದ JICA ಕಚೇರಿಯ ಮುಖ್ಯ ಪ್ರತಿನಿಧಿ ಟಕೆಉಚಿ ತಕುರು ಮತ್ತು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಅಲೋಕ್ ತಿವಾರಿ 24ನೇ ಮಾರ್ಚ್ 2026ರಂದು ನವದೆಹಲಿಯಲ್ಲಿ ಸಹಿ ಹಾಕಿದ್ದಾರೆ. ಈ ವೇಳೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ. ರವಿಶಂಕರ್ ಹಾಗೂ ಹಣಕಾಸು ನಿರ್ದೇಶಕರು ಎಸ್. ಶಿವಮಾಥನ್ ಉಪಸ್ಥಿತರಿದ್ದರು.
ಬಿಎಂಆರ್ಸಿಎಲ್ ಟ್ವೀಟ್
ಬೆಂಗಳೂರು ಮೆಟ್ರೋ ರೈಲು ಹಂತ-3ರ ಯೋಜನೆ ಸಾಲದ ಒಪಂದಕ್ಕೆ ಸಹಿ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.
Signing of Loan agreement for Bangalore Metro Rail Project Phase-3. For further details please check the media release. pic.twitter.com/LBEwxm1mxl
ಭಾರತ ಸರ್ಕಾರ ಅನುಮೋದಿಸಿರುವ ಒಟ್ಟು ರೂ. 6,775 ಕೋಟಿ ಸಾಲದಲ್ಲಿ, JICA ಎರಡು ಹಂತಗಳಲ್ಲಿ ಸಾಲವನ್ನು ನೀಡಲು ಒಪ್ಪಿಕೊಂಡಿದೆ. ಮೊದಲ ಹಂತವಾಗಿ 6,100 ಕೋಟಿ ರೂ ಮತ್ತು ಉಳಿದ ಮೊತ್ತವನ್ನು ದ್ವಿತೀಯ ಹಂತದಲ್ಲಿ ನೀಡಲಾಗುತ್ತದೆ.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3 ಒಟ್ಟು 44.65 ಕಿಮೀ ಉದ್ದವನ್ನು ಹೊಂದಿದ್ದು, ಇದರಲ್ಲಿ ಎರಡು ಕಾರಿಡಾರುಗಳು ಒಳಗೊಂಡಿವೆ. ಮೊದಲನೇ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ (ಹೊರ ವರ್ತುಲ ರಸ್ತೆ ಪಶ್ಚಿಮ ಭಾಗದ ಮೂಲಕ) 32.15 ಕಿಮೀ. ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆವರೆಗೆ (ಮಗಡಿ ರಸ್ತೆಯ ಮೂಲಕ) 12.5 ಕಿಮೀ ಇದೆ.
ಭಾರತ ಸರ್ಕಾರವು ಈ ಯೋಜನೆಗೆ 13ನೇ ಸೆಪ್ಟೆಂಬರ್ 2024 ರಂದು ಅನುಮೋದನೆ ನೀಡಿದ್ದು, ಒಟ್ಟು 15,611 ಕೋಟಿ ರೂ ವೆಚ್ಚ ತಗುಲುವುದಾಗಿ ನಿಗದಿಪಡಿಸಲಾಗಿದೆ. JICA ಸಂಸ್ಥೆಯು, 5 ಸಿವಿಲ್ ಪ್ಯಾಕೇಜುಗಳು, ಪರ್ಮನೆಂಟ್ ವೇ, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ (S&T), ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ (AFC), ಟ್ರ್ಯಾಕ್ಷನ್ ಹಾಗೂ ಸಲಹಾ ಸೇವೆಗಳಿಗೆ ಹಣಕಾಸು ನೆರವು ನೀಡುತ್ತಿದ್ದು, 30 ವರ್ಷ ಅವಧಿಯ ಸಾಲ ಇದಾಗಿದೆ.
ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರು ‘ಲವ್ ಮಾಕ್ಟೇಲ್ 3’ (Love Mocktail 3) ಚಿತ್ರತಂಡದ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ಚಿತ್ರತಂಡದಿಂದ ಕೃತಿಚೌರ್ಯ ಆಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ರಿಲೀಸ್ ಆದ ದಿನವೇ ಯಾಕೆ ಈ ಬಗ್ಗೆ ಪೋಸ್ಟ್ ಮಾಡಿಲ್ಲ ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ. ‘ಯಾವುದೇ ಸಿನಿಮಾಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ತುಂಬಾ ಮುಖ್ಯ. ನಾನು ಡಾರ್ಲಿಂಗ್ ಕೃಷ್ಣ (Darling Krishna) ಅವರ ಉತ್ತಮ ಸ್ನೇಹಿತ. ಅವರ ಬಿಸ್ನೆಸ್ ಹಾಳು ಮಾಡುವ ಇಷ್ಟ ನನಗೆ ಇಲ್ಲ. ಪ್ರಚಾರಕ್ಕಾಗಿ ನಾವು ಇಲ್ಲಿಗೆ ಬಂದಿಲ್ಲ. ನನ್ನ ಕೋ-ರೈಟರ್ ರಾಘವೇಂದ್ರ ನಾಯ್ಕ್ ಅವರಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ನಾವು ವಾಣಿಜ್ಯ ಮಂಡಳಿಗೆ ಬಂದಿದ್ದೇವೆ’ ಎಂದು ಗುರು ದೇಶಪಾಂಡೆ (Guru Deshpande) ಅವರು ಹೇಳಿದ್ದಾರೆ.
ಸರ್ಕಾರದಿಂದ ನಡೆಸಲಾಗುವ ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ (Small Saving Schemes) ಹೆಚ್ಚು ಬಡ್ಡಿ ಕೊಡುವುದು ಸುಕನ್ಯಾ ಸಮೃದ್ಧಿ ಸ್ಕೀಮ್ (Sukanya Samriddhi Yojana). 2014-15ರಲ್ಲಿ ಆರಂಭವಾದ ಈ ಯೋಜನೆಯನ್ನು ಬಾಲಕಿಯರ ಭವಿಷ್ಯದ ಭದ್ರತೆಗೆಂದು ರೂಪಿಸಲಾಗಿದೆ. 10 ವರ್ಷದೊಳಗಿನ ವಯಸ್ಸಿನ ಬಾಲಕಿಯರ ಹೆಸರಿನಲ್ಲಿ ಸುಕನ್ಯಾ ಸಮೃದ್ದಿ ಸ್ಕೀಮ್ನ ಅಕೌಂಟ್ ತೆರೆಯಬಹುದು. ಯಾವುದಾದರೂ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಅಕೌಂಟ್ ಆರಂಭಿಸಬಹುದು.
ಹೂಡಿಕೆ ಅವಧಿ 15 ವರ್ಷ ಇರುತ್ತದೆ. 21 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಅಂದರೆ, ಇವತ್ತು ನೀವು ಅಕೌಂಟ್ ತೆರೆದರೆ, 2031ರವರೆಗೆ ಪ್ರತೀ ವರ್ಷ ನೀವು ಒಂದೂವರೆ ಲಕ್ಷ ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ. ಅದಾದ ಬಳಿಕ ಹೂಡಿಕೆ ನಿಲ್ಲಿಸಬೇಕು. ಆದರೆ, ಆ ಅಕೌಂಟ್ 21 ವರ್ಷದವರೆಗೂ ಚಾಲನೆಯಲ್ಲಿರುತ್ತದೆ. ಅಂದರೆ 2037ಕ್ಕೆ ಮೆಚ್ಯೂರ್ ಆಗುತ್ತದೆ. ಅಲ್ಲಿಯವರೆಗೆ ವಾರ್ಷಿಕ ಬಡ್ಡಿ ಜಮೆ ಆಗುತ್ತಾ ಹೋಗುತ್ತದೆ.
ಸುಕನ್ಯಾ ಸಮೃದ್ದಿ ಯೋಜನೆ 2014-15ರಲ್ಲಿ ಆರಂಭವಾಗಿದೆ. ಆ ವರ್ಷ 4.2 ಲಕ್ಷ ಮಂದಿ ಹೂಡಿಕೆ ಮಾಡಿದ್ದರು. 2024-25ರಲ್ಲಿ 4.25 ಕೋಟಿ ಅಕೌಂಟ್ಗಳು ಆರಂಭಗೊಂಡಿವೆ. ಹೆಚ್ಚೂಕಡಿಮೆ 3 ಲಕ್ಷ ಕೋಟಿ ರೂ ಹಣದ ಹೂಡಿಕೆ ಆಗಿದೆ.
2014-15ರಲ್ಲಿ ಸುಕನ್ಯಾ ಸಮೃದ್ಧಿ ಸ್ಕೀಮ್ನಲ್ಲಿ ಶೇ. 9.1 ಬಡ್ಡಿ ನೀಡಲಾಗುತ್ತಿತ್ತು. 2015ರ ಏಪ್ರಿಲ್ 1ರಂದು ಅದು ಶೇ. 9.2ಕ್ಕೆ ಏರಿಸಲಾಯಿತು. ಅದಾದ ಬಳಿಕ ಬಡ್ಡಿಯಲ್ಲಿ ಏರುಪೇರುಗಳಾಗಿವೆ. 2020ರ ಏಪ್ರಿಲ್ 1ರಂದು ಶೇ. 7.6 ಬಡ್ಡಿ ಕನಿಷ್ಠ ಮಟ್ಟದ್ದಾಗಿದೆ. 2024ರ ಜನವರಿ 1ರಿಂದ ಶೇ. 8.2 ಬಡ್ಡಿ ನಿಗದಿ ಮಾಡಲಾಗಿದೆ.
ಒಂದು ವೇಳೆ 2014-15ರಲ್ಲಿ ನೀವು ಈ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಗರಿಷ್ಠ ಒಂದೂವರೆ ಲಕ್ಷ ರೂ ವಾರ್ಷಿಕ ಹೂಡಿಕೆ ಮಾಡಿದ್ದರೆ ನಿಮಗೆ ಎಷ್ಟು ರಿಟರ್ನ್ ಸಿಗಬಹುದು? ಅಲ್ಲಿಂದ ಇಲ್ಲಿಯವರೆಗೆ ಚಾಲ್ತಿಯಲ್ಲಿದ್ದ ಬಡ್ಡಿದರಗಳನ್ನು ಪರಿಗಣಿಸುತ್ತಾ, ಮತ್ತು ಈಗಿರುವ ಶೇ. 8.2ರ ಬಡ್ಡಿದರವೇ ಮುಂದುವರಿಯುತ್ತದೆ ಎಂದು ಭಾವಿಸುತ್ತಾ ಲೆಕ್ಕ ಹಾಕಿ ನೋಡಿ.
2014-15ರಲ್ಲಿ ಹೂಡಿಕೆ ಆರಂಭಿಸಿದರೆ 2035-36ಕ್ಕೆ ಅದು ಮೆಚ್ಯೂರ್ ಆಗುತ್ತದೆ. 15 ವರ್ಷದ ಪಾವತಿ ಅವಧಿಯಲ್ಲಿ ನೀವು ಮಾಡಿರುವ ಒಟ್ಟು ಹೂಡಿಕೆ 22.50 ಲಕ್ಷ ರೂ ಆಗಿರುತ್ತದೆ. ಅದು ವಾರ್ಷಿಕ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದಾಗ. 2035-36ರಲ್ಲಿ ನಿಮ್ಮ ಅಕೌಂಟ್ ಮೆಚ್ಯೂರ್ ಆದಾಗ ನಿಮಗೆ ಸಿಗುವ ಒಟ್ಟು ರಿಟರ್ನ್ 76 ಲಕ್ಷ ರೂ ಆಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 24: ಭಾರತದಲ್ಲಿ ಡಿಜಿಟಲ್ ಜಗತ್ತು ವೇಗವಾಗಿ ಬದಲಾಗುತ್ತಿದೆ. ಡೇಟಾ ಸುರಕ್ಷತೆ ಮತ್ತು ವಿದೇಶಿ ಸರ್ವರ್‌ಗಳ ಮೇಲಿನ ಅವಲಂಬನೆಯಂತಹ ವಿಷಯಗಳು ತೀವ್ರವಾದ ಚರ್ಚೆಗಳಿಗೆ ಕಾರಣವಾಗುತ್ತಿವೆ. ದೇಶದಲ್ಲಿ 800 ಮಿಲಿಯನ್‌ಗಿಂತಲೂ ಹೆಚ್ಚು ಜನರು ಬಳಸುವ ಸಂವಹನ ಅಪ್ಲಿಕೇಶನ್‌ಗಳು ಹೆಚ್ಚಾಗಿ ವಿದೇಶಿ ಕಂಪನಿಗಳ ಒಡೆತನದಲ್ಲಿವೆ. ಹೀಗಾಗಿ ಸ್ಥಳೀಯ ಪರಿಹಾರಗಳ ಅಗತ್ಯ ಹೆಚ್ಚಾಗಿದೆ. ಇತ್ತೀಚೆಗೆ ಡಿಜಿಟಲ್ ವಂಚನೆಗಳು ಮತ್ತು ಹೊಸ ರೀತಿಯ ಸೈಬರ್ ಅಪರಾಧಗಳು ಜನರನ್ನು ಚಿಂತೆಗೀಡು ಮಾಡುತ್ತಿವೆ.
ರಾಷ್ಟ್ರೀಯ ಭದ್ರತೆ ಮತ್ತು ವೈಯಕ್ತಿಕ ಸುರಕ್ಷತಾ ಸಮಸ್ಯೆಗಳನ್ನು ಪರಿಹರಿಸುವ ಕ್ರಮದಲ್ಲಿ ಅನುವಾದಿನಿ AI ಭಾರತೀಯ ಜನಸಾಮಾನ್ಯರನ್ನು ಗುರಿಯಾಗಿಟ್ಟುಕೊಂಡು ಹೊಸ ಪರಿಕರಗಳ ಸೂಟ್ ಅನ್ನು ಪರಿಚಯಿಸಿದೆ. ಇವುಗಳಲ್ಲಿ ಹೈಪ್ಡ್ ಸಂವಾದಿನಿ ಮೆಸೆಂಜರ್ ಮತ್ತು ದೇಸಿ AI GenZ ಕೀಬೋರ್ಡ್ ಕೂಡ ಸೇರಿವೆ. ಭಾರತೀಯ ಜನರ ಭಾಷಾ ಅಗತ್ಯತೆಗಳು ಮತ್ತು ಭದ್ರತಾ ಅವಶ್ಯಕತೆಗಳ ಮೇಲೆ ಕೇಂದ್ರೀಕರಿಸುವ ವಿಶ್ವಾಸಾರ್ಹ, ಸಾರ್ವಭೌಮ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಚಿಸಲು ಈ ಅಪ್ಲಿಕೇಶನ್‌ಗಳನ್ನು ನಿರ್ಮಿಸಲಾಗಿದೆ ಎಂದು ಆ್ಯಪ್ ಡೆವಲಪರ್‌ಗಳು ಹೇಳಿದ್ದಾರೆ.
ವಿದೇಶಿ ಅಪ್ಲಿಕೇಶನ್‌ಗಳಿಗೆ ಪರ್ಯಾಯವಾಗಿ “ವಿದೇಶದಿಂದ ದೇಸಿಗೆ” ಎಂಬ ಪರಿಕಲ್ಪನೆಯೊಂದಿಗೆ ಈ ಪ್ರಯೋಗ ಮಾಡಲಾಗಿದೆ. ಜನಪ್ರಿಯವಾದ ಸಂವಾದಿನಿ ಅಪ್ಲಿಕೇಶನ್ ಅನ್ನು ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಿಗೆ ಸುರಕ್ಷಿತ ಪರ್ಯಾಯವೆಂದು ಹೇಳಲಾಗುತ್ತಿದೆ. ಇದು ನಿಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೆ ಚಾಟ್ ಮಾಡಲು ಮತ್ತು ವೀಡಿಯೊ ಕರೆ ಮಾಡಲು ಅನುಮತಿಸುವ ಡೈನಾಮಿಕ್ ಚಾಟ್ ಐಡಿ ವ್ಯವಸ್ಥೆಯನ್ನು ಹೊಂದಿದೆ.
ಇದು ‘ರಿಕ್ವೆಸ್ಟ್ ಮಾಡ್ಯೂಲ್’ ಅನ್ನು ಸಹ ಹೊಂದಿದೆ. ಆದ್ದರಿಂದ ನಿಮ್ಮ ಅನುಮತಿಯಿಲ್ಲದೆ ಯಾರೂ ನಿಮಗೆ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ. ಹಳೆಯ ಚಾಟ್‌ಗಳನ್ನು ಕಳೆದುಕೊಳ್ಳದೆ ವಾಟ್ಸಾಪ್‌ನಿಂದ ಡೇಟಾವನ್ನು ವರ್ಗಾಯಿಸುವ ಸೌಲಭ್ಯವನ್ನು ಸಹ ಇದು ಒದಗಿಸುತ್ತದೆ. ತುರ್ತು ಸಂದರ್ಭದಲ್ಲಿ ಟ್ಯಾಪ್ ಮೂಲಕ ಸಹಾಯ ಪಡೆಯಲು SOS ವೈಶಿಷ್ಟ್ಯವನ್ನು ಸಹ ಲಭ್ಯವಾಗುವಂತೆ ಮಾಡಲಾಗಿದೆ. ಇದು ರೈತರಿಗೆ ಮಾರುಕಟ್ಟೆ ಬೆಲೆಗಳು ಮತ್ತು ವೃದ್ಧರಿಗೆ ಅಗತ್ಯವಿರುವ ಮಾಹಿತಿಯಂತಹ ವಿಶೇಷ ವಿಭಾಗಗಳನ್ನು ಸಹ ಒಳಗೊಂಡಿದೆ.
ಇನ್ನೊಂದು ವಿಶೇಷವೆಂದರೆ, ದೇಸಿ AI GenZ ಕೀಬೋರ್ಡ್ 22 ಭಾರತೀಯ ಭಾಷೆಗಳಲ್ಲಿ ಮತ್ತು 70ಕ್ಕೂ ಹೆಚ್ಚು ಇತರ ಭಾಷೆಗಳಲ್ಲಿ ಟೈಪಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಯುವಕರಿಗಾಗಿ ಟ್ರೆಂಡಿಂಗ್ ಪದಗಳಿಗಾಗಿ ವಿಶೇಷ ‘GenZ ಕೀ’ ಅನ್ನು ಸಹ ಒದಗಿಸಲಾಗಿದೆ. ಈ ಕೀಬೋರ್ಡ್ ಕ್ಯಾಲ್ಕುಲೇಟರ್ ಮತ್ತು ಕರೆನ್ಸಿ ಕನ್ವರ್ಟರ್ನಂತಹ ಸೌಲಭ್ಯಗಳನ್ನು ಹೊಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 24: ಸೈನಿಕ ತನ್ನ ದೇಶಕ್ಕಾಗಿ ಹೋರಾಡುವಂತೆ, ರಾಜಕಾರಣಿಯೂ ತನ್ನ ಪಕ್ಷಕ್ಕಾಗಿ ನಿರಂತರವಾಗಿ ಹೋರಾಡಬೇಕು. ನನ್ನ ಪಕ್ಷಕ್ಕೆ ನಾನು ಯೋಧನಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜಕಾರಣಿಗಳು ತಮ್ಮ ಕುಟುಂಬ ಮತ್ತು ವೈಯಕ್ತಿಕ ಜೀವನಕ್ಕಿಂತ ಪಕ್ಷದ ಕೆಲಸಕ್ಕೆ ಆದ್ಯತೆ ನೀಡಬೇಕಾಗುತ್ತದೆ ಎಂದಿದ್ದಾರೆ.
ತಮ್ಮ ರಾಜಕೀಯ ಜೀವನ ಬಗ್ಗೆ ಮಾತನಾಡಿ ಡಿಕೆ ಶಿವಕುಮಾರ್, ಕೆಲವೊಮ್ಮೆ ರಾತ್ರಿ 2 ಗಂಟೆಯವರೆಗೆ ಕೆಲಸ ಮಾಡುತ್ತೇನೆ. ವೈಯಕ್ತಿಕ ಸಮಯಕ್ಕೆ ಅವಕಾಶವಿಲ್ಲ. ದೇಶ, ರಾಜ್ಯಗಳಿಂದ ನನ್ನನ್ನು ಭೇಟಿ ಮಾಡಲು ಬರುವ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸುವುದು ನನ್ನ ಜವಾಬ್ದಾರಿ. ವ್ಯವಸ್ಥೆಯಲ್ಲಿ ಸಮಸ್ಯೆಗಳು ಬಗೆಹರಿಯದಿದ್ದಾಗ ಜನರು ರಾಜಕಾರಣಿಗಳ ಬಳಿ ಬರುತ್ತಾರೆ, ಅವರನ್ನು ತೃಪ್ತಿಪಡಿಸುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕೆಲಸ ಎಂದು ಹೇಳಿದ್ದಾರೆ.
ಕಾಲವೇ ಉತ್ತರಿಸಲಿದೆ
ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಯಾವಾಗ ಎಂಬ ಪ್ರಶ್ನೆಗೆ ಅದಕ್ಕೆ ಕಾಲವೇ ಉತ್ತರಿಸಲಿದೆ. ಮುಖ್ಯಮಂತ್ರಿಯಾಗುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಈ ನೆಲದ ಕಾನೂನು ನನ್ನನ್ನು ರಕ್ಷಣೆ ಮಾಡಿತು
ರಾಜಕೀಯ ಕಾರಣಕ್ಕೆ ನನ್ನನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತು. ಅಹ್ಮದ್ ಪಟೇಲ್ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಗುಜರಾತ್ ಶಾಸಕರ ರಕ್ಷಣೆಗೆ ನಿಂತಿದ್ದಕ್ಕೆ ನನ್ನ ಮೇಲೆ ದಾಳಿ ಮಾಡಲಾಯಿತು. ನನ್ನ ಮನೆ ಸೇರಿದಂತೆ 16 ಸ್ಥಳಗಳ ಮೇಲೆ ಐಟಿ ದಾಳಿಯಾಗಿತ್ತು. ರಾಜಕೀಯ ಕಾರಣಕ್ಕೆ ಐಟಿ, ಇಡಿ ದಾಳಿ ನಡೆಸಿತ್ತು. ನನ್ನ ತಾಯಿ, ಪತ್ನಿ, ಮಗಳಿಗೆ ಇಡಿ ನೋಟಿಸ್ ನೀಡಿತ್ತು. ವ್ಯವಹಾರಿಕ ಪಾಲುದಾರರಿಗೂ ನೋಟಿಸ್ ಜಾರಿಮಾಡಿದ್ದರು, ಆದರೆ ಈ ನೆಲದ ಕಾನೂನು ನನ್ನನ್ನು ರಕ್ಷಣೆ ಮಾಡಿತು ಎಂದರು.
ಬಿಜೆಪಿಯವರು ಹಿಂದುತ್ವದ ಮೇಲೆ ನಂಬಿಕೆಯಿಟ್ಟಿದ್ದಾರೆ
ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅಸ್ಸಾಂ ರಾಜ್ಯದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸ, ಸಿದ್ಧಾಂತವಿದೆ. ಬಿಜೆಪಿಯವರು ಹಿಂದುತ್ವದ ಮೇಲೆ ನಂಬಿಕೆಯಿಟ್ಟಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರನ್ನು ಒಳಗೊಂಡಿದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಕೊರತೆಯ ಬಗ್ಗೆ ಮಾತನಾಡಿದ ಅವರು, ಕಳೆದ 30-40 ವರ್ಷಗಳಲ್ಲಿ ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಹಿಂದೆ ವಾಜಪೇಯಿ ಮತ್ತು ಅಡ್ವಾಣಿ ಸಂಸತ್ತಿನಲ್ಲಿ ಇಬ್ಬರು ನಾಯಕರಾಗಿದ್ದರು. ಈಗ, ಅವರಿಗೆ ದೊಡ್ಡ ಅನುಯಾಯಿಗಳಿದ್ದಾರೆ. ಅವರಿಗೆ ನೈತಿಕ ಮೌಲ್ಯಗಳಿಲ್ಲ. ಅವರು ಆಪರೇಷನ್ ಕಮಲವನ್ನು ನಂಬುತ್ತಾರೆ. ಕರ್ನಾಟಕ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಅವರು ಏನು ಮಾಡಿದರು? ಅವರು ಮಹಾರಾಷ್ಟ್ರದಲ್ಲಿ ಹಿಂದೆಂದೂ ಬಹುಮತವನ್ನು ಗಳಿಸಿರಲಿಲ್ಲ ಎಂದು ಹೇಳಿದ್ದಾರೆ.
ದೇಶ ಮತ್ತು ರಾಜ್ಯದ ಜನರು ನೀಡಿದ ಜನಾದೇಶವನ್ನು ನಾನು ನಂಬುತ್ತೇನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಸೂರ್ಯ ಉದಯಿಸುತ್ತಾನೆ ಮತ್ತು ಮುಳುಗುತ್ತಾನೆ. ಹಗಲು-ರಾತ್ರಿಗಳು ಬರುತ್ತವೆ ಹೋಗುತ್ತವೆ. ಬಿಜೆಪಿ ಕೂಡ ಕಣ್ಮರೆಯಾಗುತ್ತದೆ. ಈ ರಾತ್ರಿಗೆ ಒಂದು ಬೆಳಗು ಇರುತ್ತದೆ. ಹಿಂದೆ ಕಾಂಗ್ರೆಸ್‌ಗೆ ಬಹುಮತವಿತ್ತು. ದೇಶದ ಜನರು ಬದಲಾವಣೆಯನ್ನು ಬಯಸುತ್ತಾರೆ ಮತ್ತು ಆ ಸಮಯ ಬರುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.