All posts by nagaraj11081993

ಹಾವೇರಿಯಲ್ಲಿ ಭೀಕರ ದುರಂತ: ನಿಲ್ದಾಣದಲ್ಲಿದ್ದ ಜನರ ಮೇಲೆ ನುಗ್ಗಿದ ಬಸ್, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ

ಹಾವೇರಿಯಲ್ಲಿ ಭೀಕರ ದುರಂತ: ನಿಲ್ದಾಣದಲ್ಲಿದ್ದ ಜನರ ಮೇಲೆ ನುಗ್ಗಿದ ಬಸ್, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ

ಹಾವೇರಿ, ಏಪ್ರಿಲ್ 1: ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಇಂದು (ಏಪ್ರಿಲ್ 1) ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದ್ದು, ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.

ಘಟನೆಯಲ್ಲಿ 2 ವರ್ಷದ ಪುಟ್ಟ ಮಗು ಹಜರತ್ ಅಲಿಗೆ ತೀವ್ರವಾಗಿ ಗಾಯಗಳಾಗಿದ್ದು, ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಉಳಿದ ಗಾಯಾಳುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ, ವಿಡಿಯೋ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಂಡರ್​​ಗಳಿಗಾಗಿ ಜನ ಕ್ಯೂ ನಿಲ್ಲುತ್ತಿರುವ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಸಚಿವ ಮುನಿಯಪ್ಪ!

ದಾವಣಗೆರೆ, ಏಪ್ರಿಲ್​​ 01: ಆಹಾರ ಸಚಿವ ಕೆ.ಹೆಚ್​. ಮುನಿಯಪ್ಪ ರಾಜ್ಯದಲ್ಲಿ ಎಲ್​ಪಿಜಿ ಸಿಲಿಂಡರ್‌ಗಳ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನಗತ್ಯವಾಗಿ ಗ್ರಾಹಕರು ಕ್ಯೂ ನಿಲ್ಲುವ ಅಗತ್ಯವಿಲ್ಲ, ಏಕೆಂದರೆ ಬೇಕಾದಷ್ಟು ಎಲ್​ಪಿಜಿ ಸಿಲಿಂಡರ್‌ಗಳು ಲಭ್ಯವಿವೆ ಎಂದು ಅವರು ತಿಳಿಸಿದ್ದಾರೆ. ವಿಶೇಷವಾಗಿ ಎಲ್​ಪಿಜಿ ಆಟೋರಿಕ್ಷಾಗಳಿಗೆ ಪ್ರತಿದಿನ 3000 ಸಿಲಿಂಡರ್‌ಗಳು ಖರ್ಚಾಗುತ್ತಿದ್ದು, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಿಪಿಎಲ್ ಮತ್ತು ಎಚ್‌ಪಿಸಿಎಲ್ ಕಂಪನಿಗಳಿಂದ ಸಮರ್ಪಕವಾಗಿ ಪೂರೈಕೆಯಾಗುತ್ತಿವೆ. ಎಲ್ಲಿಯೂ ಯಾವುದೇ ಕೊರತೆ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಖಾಸಗಿ ಗ್ಯಾಸ್ ಏಜೆನ್ಸಿಗಳು ಗೊಂದಲಕ್ಕೆ ಕಾರಣವಾಗಿದ್ದು, ಅವು ಎಲ್​ಪಿಜಿ ದರವನ್ನು ಹೆಚ್ಚಿಸಿವೆ. ಈ ಸಂಬಂಧ ಪೆಟ್ರೋಲಿಯಂ ಸಚಿವರಿಗೆ ಮನವಿ ಮಾಡಿದ್ದು, ಖಾಸಗಿಯವರೂ ಸಹ ಸರ್ಕಾರ ನಿಗದಿಪಡಿಸಿದ ದರದಲ್ಲೇ ಎಲ್​ಪಿಜಿ ಪೂರೈಸಬೇಕು ಎಂದು ಮುನಿಯಪ್ಪ ಒತ್ತಾಯಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

‘ಪಾಕಿಸ್ತಾನ ಒಳ್ಳೆಯ ನೆರೆ ರಾಷ್ಟ್ರ, ಕಸಬ್ ಜೆಂಟಲ್‌ಮನ್’: ಶಾರುಖ್ ಖಾನ್ ಹೇಳಿಕೆಗೆ ನೆಟ್ಟಿಗರು ಫುಲ್ ​​ ಗರಂ

ಮುಂಬೈ ,ಏ.1: ‘ಧುರಂಧರ್ 2’ ಸಿನಿಮಾ ಯಶಸ್ಸು ಆಗುತ್ತಿದ್ದಂತೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಹಳೆಯ ಸಂದರ್ಶನದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. ಪಾಕಿಸ್ತಾನವನ್ನು “ಉತ್ತಮ ನೆರೆಹೊರೆಯ ರಾಷ್ಟ್ರ” ಎಂದು ಕರೆದಿರುವ ಮತ್ತು ಉಗ್ರ ಅಜ್ಮಲ್ ಕಸಬ್ ಬಗ್ಗೆ ಮಾತನಾಡಿರುವ ವೀಡಿಯೊಗಳು ಈಗ ದೊಡ್ಡ ವಿವಾದವನ್ನೇ ಸೃಷ್ಟಿಸಿವೆ. ಸೋಶಿಯಲ್​ ಮೀಡಿಯಾದಲ್ಲಿ ಈ ಹೇಳಿಕೆಗೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿದೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಶಾರುಖ್ ಖಾನ್ ಪಾಕಿಸ್ತಾನದೊಂದಿಗಿನ ಸಂಬಂಧದ ಕುರಿತು ಮಾತನಾಡುತ್ತಾ, ಆ ದೇಶವನ್ನು ಶ್ಲಾಘಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ವೀಡಿಯೊದಲ್ಲಿ 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನನ್ನು “ಜೆಂಟಲ್‌ಮನ್” ಎಂದು ಉಲ್ಲೇಖಿಸಿರುವ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಎಲ್ಲರಿಗೂ ಶಾರುಖ್ ಖಾನ್​​ ಅವರ ಉಗ್ರ ಅಜ್ಮಲ್ ಕಸಬ್‌ನನ್ನು “ಜೆಂಟಲ್‌ಮನ್” ಎಂದಿರುವುದೇ ದೊಡ್ಡ ಅಚ್ಚರಿಯಾಗಿದೆ. ಉಗ್ರಗಾಮಿಗಳ ಸಿದ್ಧಾಂತವನ್ನು ಕಟುವಾಗಿ ಟೀಕಿಸುತ್ತಾ, “ಜೈಲಿನಲ್ಲಿರುವ ಆ ವ್ಯಕ್ತಿ (ಕಸಬ್)… ಅವನು ಯಾವ ತರ್ಕದ ಮೇಲೆ ಜನರನ್ನು ಕೊಂದಿದ್ದಾನೆ? ಅವನಿಗೆ ಶಿಕ್ಷಣ ಎಲ್ಲಿದೆ?” ಎಂದು ಪ್ರಶ್ನಿಸಿದ್ದರು. ಆದರೆ, ಕಸಬ್‌ನನ್ನು ‘Gentleman’ (ಸಂಭಾವಿತ ವ್ಯಕ್ತಿ) ಎಂಬ ಪದವನ್ನು ಬಳಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪದವನ್ನೇ ಈಗ ಕೆಲವರು ಗುರಿಯಾಗಿಸಿಕೊಂಡು, “ಶಾರುಖ್ ಒಬ್ಬ ಉಗ್ರನನ್ನು ಸಂಭಾವಿತ ಎಂದು ಕರೆದಿದ್ದಾರೆ” ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

ಇಲ್ಲಿದೆ ನೋಡಿ ವಿಡಿಯೋ:

ಈ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಅನೇಕರು ಶಾರುಖ್ ಖಾನ್ ಅವರನ್ನು “ದೇಶವಿರೋಧಿ” ಎಂದು ಕರೆದು ಟೀಕಿಸುತ್ತಿದ್ದಾರೆ. “ಸಿನಿಮಾ ಯಶಸ್ವಿಯಾಗುತ್ತಿರುವಾಗ ಇಂತಹ ಹೇಳಿಕೆಗಳು ಹೊರಬರುತ್ತಿರುವುದು ಆಘಾತಕಾರಿ” ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಶಾರುಖ್ ಅಭಿಮಾನಿಗಳು ಇದು ಹಳೆಯ ವೀಡಿಯೊ ಮತ್ತು ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ ಎಂದು ನಟನ ಬೆಂಬಲಕ್ಕೆ ನಿಂತಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka LPG Crisis: ಬೆಂಗಳೂರಿನಲ್ಲಿ ಆಟೋ ಗ್ಯಾಸ್​ಗಾಗಿ ಕಿ.ಮೀ ದೂರ ಫುಲ್ ಕ್ಯೂ!

ಬೆಂಗಳೂರು, ಏಪ್ರಿಲ್ 01: ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದ್ದು, ಚಾಲಕರು ಅಭೂತಪೂರ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಹೆಬ್ಬಾಳದ ಗುಡ್ಡದಹಳ್ಳಿ ವೃತ್ತ ಮತ್ತು ನವರಂಗ್ ಸೇರಿದಂತೆ ವಿವಿಧ ಎಲ್‌ಪಿಜಿ ಬಂಕ್‌ಗಳಲ್ಲಿ ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಬೆಳಗ್ಗಿನ ಜಾವ 4-6 ಗಂಟೆಗಳಿಂದಲೇ ಚಾಲಕರು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ.

ಅನೇಕ ಗ್ಯಾಸ್ ಏಜೆನ್ಸಿಗಳು ಸ್ಟಾಕ್ ಇಲ್ಲ ಎನ್ನುತ್ತಿದ್ದರೆ ಲಭ್ಯವಿರುವ ಕೆಲವು ಬಂಕ್‌ಗಳಲ್ಲೂ, ಪೂರ್ಣ ಟ್ಯಾಂಕ್ ಬದಲಾಗಿ ಪ್ರತಿ ಆಟೋಗೆ 400 ರೂ. ಮೌಲ್ಯದ ಸೀಮಿತ ಪ್ರಮಾಣದ ಗ್ಯಾಸ್ ಮಾತ್ರ ತುಂಬಲಾಗುತ್ತಿದೆ. ಒಂದು ವಾರದ ಸ್ಟಾಕ್ ಕೇವಲ ಒಂದು ದಿನದಲ್ಲಿ ಖಾಲಿಯಾಗುತ್ತಿದೆ ಎಂದು ಬಂಕ್ ಮಾಲೀಕರು ಹೇಳಿದ್ದಾರೆ. ಇದರಿಂದಾಗಿ ಆಟೋ ಚಾಲಕರು ದಿನದ ದುಡಿಮೆಯನ್ನು ಕಳೆದುಕೊಳ್ಳುತ್ತಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಏಪ್ರಿಲ್ ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ

ಏಪ್ರಿಲ್ 1ರಂದು ಮೂರ್ಖರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಇಂದು ಆಗುತ್ತದೆ. ಆದರೆ, ಈ ದಿನವನ್ನು ಬುದ್ಧಿವಂತರ ದಿನವನ್ನಾಗಿ ಆಚರಿಸಬೇಕು ಎಂದು ಉಪೇಂದ್ರ ಹೇಳಿದ್ದಾರೆ. ‘ಪ್ರಜಾಕೀಯ’ ಪಕ್ಷದ ಆ್ಯಪ್ ಲಾಂಚ್ ಮಾಡುವ ಸಂದರ್ಭದಲ್ಲಿ ಅವರು ಈ ಮಾತನ್ನು ಹೇಳಿದರು. ‘ಮಾತನಾಡುವಾಗ ಎಚ್ಚರಿಕೆ ಬೇಕು. ಇಲ್ಲವಾದರೆ, ಇವರು ಎಡ, ಬಲ ಎಂದು ನಿರ್ಧರಿಸಿ ಬಿಡುತ್ತಾರೆ’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಪ್ರಜಾಕೀಯ’ ಆಪ್ ಬಿಡುಗಡೆ ಮಾಡಿದ ಉಪ್ಪಿ, ವಿಶೇಷತೆಯೇನು? ವಿಡಿಯೋ ನೋಡಿ

ಉಪೇಂದ್ರ (Upendra) ಅವರು ನಟ, ನಿರ್ದೇಶಕ ಆಗಿರುವ ಜೊತೆಗೆ ರಾಜಕಾರಣಿಯೂ ಸಹ. ರಾಜಕೀಯದಲ್ಲಿ ಭಿನ್ನತೆ, ಹೊಸತನ ತರಬೇಕೆಂದು ತಮ್ಮ ಪ್ರಜಾಕೀಯ ಪಕ್ಷದಿಂದ ಹೊಸ-ಹೊಸ ರೀತಿಯ ಐಡಿಯಾಗಳನ್ನು ತರುತ್ತಲೇ ಇರುತ್ತಾರೆ. ಇದೀಗ ‘ದಿ ರಿಯಲ್ ಪ್ರಜಾಕೀಯ’ ಆನ್​​ಲೈನ್ ಆಪ್​ ಬಿಡುಗಡೆ ಮಾಡಿರುವ ಉಪೇಂದ್ರ, ಜನ ಹೇಗೆ ತಮ್ಮ ಆಳುವ ನಾಯಕನನ್ನು ಆಯ್ಕೆ ಮಾಡಬೇಕು, ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು, ಹೇಗೆ ಆಯ್ಕೆ ಮಾಡಬೇಕು, ಪ್ರಜಾಕೀಯ ಟಿಕೆಟ್ ಬೇಕಾದವರು ಹೇಗೆ ಆಪ್ ಬಳಸಿ ಟಿಕೆಟ್ ಪಡೆಯಬಹುದು ಇತ್ಯಾದಿಗಳನ್ನು ವಿವರಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಖಾಸಗಿ ಶಾಲಾ ಬಸ್ ಕೆಳಗೆ ಸಿಲುಕಿ ಎರಡೂವರೆ ವರ್ಷದ ಮಗು ಸಾವು!

ಶಿವಮೊಗ್ಗ, ಏಪ್ರಿಲ್ 01: ಜಿಲ್ಲೆಯಲ್ಲಿ ಮನಕಲುಕುವ ಘಟನೆಯೊಂದು ಸಂಭವಿಸಿದೆ. ನಗರದ ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಸಮೀಪ ಮಾರ್ಚ್ 31ರ ಮಧ್ಯಾಹ್ನ ಒಂದೂವರೆ ವರ್ಷದ ಪುಟ್ಟ (Toddler Death) ಮಗು ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದೆ. ಮಗು ಶಾಲೆಯಿಂದ ಬಂದ ತನ್ನ ಅಣ್ಣನನ್ನು ಕರೆತರಲು ಪೋಷಕರೊಂದಿಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಅಣ್ಣನಿಗಾಗಿ ಕಾಯುತ್ತಿದ್ದ ಮಗು

18 ತಿಂಗಳ ಮಗು ಆರ್ಯನ್, ತನ್ನ ಅಣ್ಣನನ್ನು ಕರೆತರಲು ಪೋಷಕರೊಂದಿಗೆ ಸ್ಥಳಕ್ಕೆ ಬಂದಿದ್ದ. ಖಾಸಗಿ ಶಾಲಾ ಬಸ್‌ನಲ್ಲಿ ಅಣ್ಣನ ಬರುವಿಕೆಗೆ ಕುಟುಂಬದೊಂದಿಗೆ ಆರ್ಯನ್ ಕೂಡ ಕಾಯುತ್ತಿದ್ದ. ಈ ವೇಳೆ ಏಕಾಏಕಿ ರಸ್ತೆಯತ್ತ ಓಡಿದ ಮಗುವನ್ನು ಬಸ್ ಚಾಲಕ ಗಮನಿಸದ ಕಾರಣ ಮಗು ಬಸ್ ಚಕ್ರಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ಮಧ್ಯರಾತ್ರಿ ಸುರಿದ ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ

ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಪರಿಶೀಲಿಸಿದಾಗ ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ತಿಳಿದ ಕೂಡಲೇ ಪಶ್ಚಿಮ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಲಕನ ನಿರ್ಲಕ್ಷ್ಯವೇ ಕಾರಣವೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಕ್ತರು ತಿಂದುಂಡ ತಟ್ಟೆ-ಲೋಟ ತೊಳೆದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಪ್ರಸ್ತುತ ಹಾಲಿವುಡ್​​ನಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್​​ನೊಂದಿಗೆ ಸಂಬಂಧ ಕಡಿದುಕೊಂಡು ಹಲವು ವರ್ಷಗಳಾಗಿದ್ದು ಇದೀಗ ‘ವಾರಣಾಸಿ’ ಸಿನಿಮಾ ಮೂಲಕ ಭಾರತೀಯ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಸ್ಟಾರ್ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಅವರ ಜೀವನ ಶೈಲಿಯೂ ಸ್ಟಾರ್ ಮಾದರಿಯಲ್ಲಿಯೇ ಇದೆ. ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕದ ಪ್ರತಿಷ್ಠಿತ ಬೆವರ್ಲಿ ಹಿಲ್ಸ್​​ನ ಐಶಾರಾಮಿ ಮನೆಯಲ್ಲಿ ವಾಸಿಸುತ್ತಾರೆ. ಆದರೆ ಇದೀಗ ಪ್ರಿಯಾಂಕಾ ಚೋಪ್ರಾ, ಸಾಮಾನ್ಯರಂತೆ, ಸಾಮಾನ್ಯ ಜನ ತಿಂದುಂಡು ಬಿಟ್ಟು ಹೋದ ತಟ್ಟೆ-ಲೋಟಗಳನ್ನು ತೊಳೆದಿದ್ದು, ಆ ವಿಡಿಯೋ ವೈರಲ್ ಆಗಿದೆ.

ಪ್ರಿಯಾಂಕಾ ಚೋಪ್ರಾ, ಹಾಲಿವುಡ್​​ನಲ್ಲಿ ನೆಲೆಸಿದ್ದರೂ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಮರೆತಿಲ್ಲ. ಹಾಲಿವುಡ್​​ನಲ್ಲಿ ನೆಲೆಸಿದ್ದರೂ ಅಲ್ಲಿಯೂ ಸಹ ತಪ್ಪದೇ ಭಾರತೀಯ ಸಂಪ್ರದಾಯದ ಹಬ್ಬಗಳ ಆಚರಣೆಗಳನ್ನು ಸಹ ಮಾಡುತ್ತಲೇ ಇರುತ್ತಾರೆ. ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಭಾರತಕ್ಕೆ ಬಂದಾಗೆಲ್ಲ ಇಲ್ಲಿನ ಕೆಲ ದೇವಾಲಯಗಳಿಗೆ ಸಹ ಭೇಟಿ ನೀಡುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದರು. ಈ ಭೇಟಿಯ ಸಂದರ್ಭದಲ್ಲಿ ಅವರು ಅಮೃತಸರದ ಗೋಲ್ಡನ್ ಟೆಂಪಲ್​​ಗೆ ಭೇಟಿ ನೀಡಿದ್ದರು.

ದರ್ಬಾರ್ ಸಾಹೀಬ್ ಎಂದು ಕರೆಯಲಾಗುವ ಸಿಖ್ಖರ ಈ ಪವಿತ್ರ ದೇವಾಲಯದಲ್ಲಿ ಭಕ್ತರು ಸೇವೆ ಮಾಡುತ್ತಾರೆ. ಕಸ ಗುಡಿಸುವುದು, ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು, ಬಡಿಸುವುದು ಹೀಗೆ ನಾನಾ ರೀತಿಯ ಸೇವೆಗಳನ್ನು ಭಕ್ತರು ಮಾಡುತ್ತಾರೆ. ದೇವಾಲಯಕ್ಕೆ ಭೇಟಿ ನೀಡಿದ್ದ ನಟಿ ಪ್ರಿಯಾಂಕಾ ಚೋಪ್ರಾ ಸಹ ಸೇವೆ ಸಲ್ಲಿಸಿದ್ದು, ದೇವಾಲಯಕ್ಕೆ ಬಂದ ಭಕ್ತರು ಊಟ ತಿಂದ ತಟ್ಟೆಗಳು, ಲೋಟಗಳನ್ನು ತೊಳೆದಿದ್ದಾರೆ. ನಟಿ ಪ್ರಿಯಾಂಕಾ ಅವರು ಈ ‘ಬರ್ತನ್ ಸೇವಾ’ (ಪಾತ್ರೆಗಳ್ನು ತೊಳೆಯುವ ಸೇವೆ) ಮಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಪ್ರಿಯಾಂಕಾ ಚೋಪ್ರಾ ಅವರ ಈ ಸೇವೆಯ ವಿಡಿಯೋಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ಪ್ರಿಯಾಂಕಾರ ಸೇವೆಯನ್ನು ಮೆಚ್ಚಿ ಕಮೆಂಟ್ ಮಾಡಿದ್ದು, ‘ಗ್ಲೋಬಲ್ ಸ್ಟಾರ್ ಆದರೂ ಸಹ ತಮ್ಮ ಮೂಲವನ್ನು ಪ್ರಿಯಾಂಕಾ ಮರೆತಿಲ್ಲ’ ಎಂದಿದ್ದಾರೆ. ಇನ್ನು ಕೆಲವರು, ‘ವಿದೇಶಿಗನ ಮದುವೆಯಾಗಿ, ವಿದೇಶದಲ್ಲಿ ನೆಲೆಸಿದ್ದರೂ ಸಹ ಭಾರತೀಯ ಸಂಸ್ಕೃತಿಗೆ ಗೌರವ ಕೊಡುವುದು ಪ್ರಶಂಸನಾರ್ಹ’ ಎಂದಿದ್ದಾರೆ. ಆದರೆ ಕೆಲವರು ಇದರಲ್ಲೂ ಕೊಂಕು ಹುಡುಕುವ ಕೆಲಸವನ್ನೂ ಸಹ ಮಾಡಿದ್ದಾರೆ. ‘ತಮ್ಮ ಮುಂದಿನ ಸಿನಿಮಾದ ಪ್ರಚಾರಕ್ಕಾಗಿ ಹೀಗೆ ಪೂರ್ವ ಸಿದ್ಧತೆ ಮಾಡುತ್ತಿದ್ದಾರೆ’ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಆಕ್ಷನ್ ಸಿನಿಮಾ ‘ದಿ ಬ್ಲಫ್’ ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಇದೀಗ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್​ಮೆಂಟ್ ಡೇ’ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಆ ಸಿನಿಮಾ ಸಹ ಇದೇ ವರ್ಷ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೆಎಸ್‌ಆರ್‌ಟಿಸಿಗೆ ಮತ್ತೊಂದು ಗರಿ: ‘ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್’ನ ಪ್ರತಿಷ್ಠಿತ ಪ್ರಶಸ್ತಿ ಮುಡಿಗೆ!

ಬೆಂಗಳೂರು/ಕೊಚ್ಚಿನ್, ಏಪ್ರಿಲ್ 1: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತರಬೇತಿ ಮತ್ತು ಸಾಂಸ್ಥಿಕ ಅಭಿವೃದ್ಧಿ (Training and Organisation Development) ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಪ್ರತಿಷ್ಠಿತ ‘ವರ್ಲ್ಡ್ ಹೆಚ್‌ಆರ್‌ಡಿ ಕಾಂಗ್ರೆಸ್’ನ (World HRD Congress Award) ‘ಕೇರಳ ಲೀಡರ್‌ಶಿಪ್ ಪ್ರಶಸ್ತಿ-2026’ ಅನ್ನು ತನ್ನದಾಗಿಸಿಕೊಂಡಿದೆ. ಕೇರಳದ ಕೊಚ್ಚಿನ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು.

ತರಬೇತಿ ಕ್ಷೇತ್ರದಲ್ಲಿ KSRTC ಕ್ರಾಂತಿ

ನಿಗಮದ ವ್ಯಾಪ್ತಿಯ ಐದು ತರಬೇತಿ ಕೇಂದ್ರಗಳಲ್ಲಿ ಕಳೆದ 6 ತಿಂಗಳ ಅವಧಿಯಲ್ಲಿ 12,000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಪರಿಣಾಮಕಾರಿ ತರಬೇತಿ ನೀಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇಂಧನ ಕ್ಷಮತೆ, ಅಪಘಾತ ರಹಿತ ಚಾಲನೆ, ಸಿಮ್ಯುಲೇಟರ್ ತರಬೇತಿ ಹಾಗೂ ರಸ್ತೆ ಸುರಕ್ಷತೆಯಂತಹ ಪ್ರಮುಖ ವಿಷಯಗಳಲ್ಲಿ ಸಿಬ್ಬಂದಿಗಳನ್ನು ಸಜ್ಜುಗೊಳಿಸಿರುವುದು ನಿಗಮದ ಈ ಸಾಧನೆಗೆ ಕಾರಣವಾಗಿದೆ.

ಇದರೊಂದಿಗೆ ಸಾರಿಗೆ ಇಲಾಖೆ ಮತ್ತು ಅಲ್ಪಸಂಖ್ಯಾತ ನಿರ್ದೇಶನಾಲಯದ ಸಹಯೋಗದೊಂದಿಗೆ ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಉಚಿತ ಭಾರಿ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ ವಿತರಿಸುವಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳೂ ಸಹ ಈ ಪ್ರಶಸ್ತಿಗೆ ಪೂರಕವಾಗಿವೆ.

ಕೊಚ್ಚಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಶಿಪ್ ಟೆಕ್ನಾಲಜಿ ಕಾಲೇಜಿನ ನಿರ್ದೇಶಕ ಕ್ಯಾಪ್ಟನ್ ಎಸ್.ಟಿ. ಶ್ರೀಧರನ್ ಅವರಿಂದ ಕೆಎಸ್‌ಆರ್‌ಟಿಸಿ ಪರವಾಗಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಲತಾ ಟಿ.ಎಸ್. ಹಾಗೂ ಹಾಸನ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎ.ಎಸ್. ಗೀತಾಂಜಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕೆಎಸ್​ಆರ್​ಟಿಸಿ!

ಐದು ದಿನಗಳ ಹಿಂದಷ್ಟೇ ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಪ್ರಶಸ್ತಿಗಳಲ್ಲಿ ಧ್ವನಿ ಸ್ಪಂದನ ಮತ್ತು AWATAR 4.0 ಯೋಜನೆಗಳಿಗಾಗಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೆಎಸ್​ಆರ್​ಟಿಸಿ ತನ್ನ ಮುಡಿಗೇರಿಸಿಕೊಂಡಿತ್ತು. ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಧ್ವನಿ ಸ್ಪಂದನ ಯೋಜನೆಗೆ ಪ್ರಶಸ್ತಿ ಲಭಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ರಿಯಾಲಿಟಿ ಶೋ ಒಪ್ಪಿಕೊಂಡ ನಯನಾ ನಾಗರಾಜ್

ನಯನಾ ನಾಗರಾಜ್ ಅವರು ‘ಗಿಣಿ ರಾಮ’ ಧಾರಾವಾಹಿಯಲ್ಲಿ ನಟಿಸಿದ್ದರು. ತಮ್ಮದೇ ಕಾರಣಕ್ಕೆ ಅವರು ಧಾರಾವಾಹಿ ತೊರೆದಿದ್ದರು. ಆ ಬಳಿಕ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟರು. ಅವರು ಹಲವು ಆರೋಪಗಳನ್ನು ಮಾಡಿದ್ದರು. ಈಗ ನಯನಾ ನಾಗರಾಜ್ ಅವರು ಜೀ ಕನ್ನಡದ ಜೋಡಿ ನಂಬರ್ 1 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪ್ರೋಮೋನ ಜೀ ಕನ್ನಡ ಹಂಚಿಕೊಂಡಿದೆ. ಪತಿ ಸುಹಾಸ್ ಜೊತೆ ನಯನಾ ಈ ಶೋಗೆ ಬರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link