All posts by nagaraj11081993

ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ಬೆಂಗಳೂರು, ಮಾರ್ಚ್​ 23: ನಗರದಲ್ಲಿ ಡಿಜಿಟಲ್ ಅರೆಸ್ಟ್   (Digital Arrest) ಹೆಸರಿನ ವಂಚನೆ ಜಾಲ ಬೆಳೆಯುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ ವೃದ್ಧ ಉದ್ಯಮಿಗೆ ಇದೇ ರೀತಿ 15 ಕೋಟಿ ರೂ. ವಂಚಿಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಸೈಬರ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ನಗರದ ನಿವೃತ್ತ ಸಂಶೋಧಕರೊಬ್ಬರಿಗೆ ಬರೋಬ್ಬರಿ 5 ಕೋಟಿ ರೂ. ಸೈಬರ್ ವಂಚನೆ ಮಾಡಿದ್ದು, ವೃದ್ಧನನ್ನು ಬೆದರಿಸಿ ಹಣ ವರ್ಗಾಯಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಮಾನವ ಕಳ್ಳಸಾಗಾಣಿಗೆ ಮಾಡಿದ್ದೀರೆಂದು ನಕಲಿ ಎಫ್​ಐಆರ್​ ಕಳಿಸಿದ ವಂಚಕರು

94 ವರ್ಷದ ನಿವೃತ್ತ ಸಂಶೋಧಕರಿಗೆ ಅಪರಿಚಿತ ವ್ಯಕ್ತಿಯೊಬ್ಬ ಲ್ಯಾಂಡ್ ಲೈನ್‌ಗೆ ಕರೆ ಮಾಡಿ, ನಿಮ್ಮ ವಿರುದ್ಧ ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದೆ ಎಂದು ಹೇಳಿ ಬೆದರಿಕೆ ಹಾಕಿದ್ದಾನೆ. ನಂತರ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡ ಮತ್ತೊಬ್ಬ ವ್ಯಕ್ತಿ ‘ಸಂದೀಪ್ ರಾವ್’ ಎಂಬ ಹೆಸರಿನಲ್ಲಿ ಕರೆ ಮಾಡಿ, ಆಧಾರ್ ಕಾರ್ಡ್ ವಿವರಗಳನ್ನು ವಾಟ್ಸಪ್ ಮೂಲಕ ಪಡೆದಿದ್ದಾನೆ. ಬಳಿಕ ನಕಲಿ ಎಫ್‌ಐಆರ್ ಕಳುಹಿಸಿ, ಸಿಬಿಐ ಅಧಿಕಾರಿಗಳಂತೆ ವೇಷ ಹಾಕಿಕೊಂಡು ವಿಡಿಯೋ ಕಾಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ.

ಇದನ್ನೂ ಓದಿ ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!

ಕೇಸ್ ಕೈ ಬಿಡಲು ಹಣ ನೀಡಬೇಕು ಎಂದು ಒತ್ತಾಯಿಸಿದ ಆರೋಪಿಗಳು, ಜನವರಿ 17ರಿಂದ ಫೆಬ್ರವರಿ 23ರವರೆಗೆ ಹಂತ ಹಂತವಾಗಿ ಒಟ್ಟು 4.91 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಇನ್ನಷ್ಟು ಹಣ ಕೇಳಿದಾಗ ಅನುಮಾನಗೊಂಡ ವೃದ್ಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ಸಂಬಂಧ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮನೆಯಲ್ಲಿ ಶಿಶುವನ್ನು ಬಿಟ್ಟು ಭಿಕ್ಷೆ ಬೇಡಲು ಹೋದ ಪೋಷಕರು, ಹಸಿವಿನಿಂದ ಒಂದು ತಿಂಗಳ ಮಗು ಸಾವು

ಬರೇಲಿ, ಮಾರ್ಚ್​ 23: ನವಜಾತ ಶಿಶುವನ್ನು ಮನೆಯಲ್ಲಿ ಬಿಟ್ಟು ಪೋಷಕರು ಭಿಕ್ಷೆ ಬೇಡಲೆಂದು ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಮಗು(Baby) ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಮನೆಯೊಳಗೆ ಒಂದು ತಿಂಗಳ ಮಗುವೊಂದು ಶವವಾಗಿ ಪತ್ತೆಯಾಗಿದ್ದು, ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಿಲಾ ಪ್ರದೇಶದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸುಭಾಷ್ ಯಾದವ್ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಶಿಶು ಅನಾರೋಗ್ಯ ಮತ್ತು ದೌರ್ಬಲ್ಯದಿಂದ ಸಾವನ್ನಪ್ಪಿದೆ ಎಂದು ದೃಢಪಡಿಸಲಾಗಿದೆ ಎಂದು ಅಧಿಕಾರಿ ದೃಢಪಡಿಸಿದ್ದಾರೆ. ಮಗುವಿನ ಪೋಷಕರಾದ ಶಾದಾಬ್ ಮತ್ತು ಆತನ ಪತ್ನಿ ಹಿನಾ ಅಲಿಯಾಸ್ ಸೈನಾ ಮತ್ತು ಇತರ ಕುಟುಂಬ ಸದಸ್ಯರು ಭಿಕ್ಷೆ ಬೇಡುವ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು.

ಕಳೆದ ನಾಲ್ಕು ತಿಂಗಳಿನಿಂದ ಕುಟುಂಬವು ಆ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು ಎಂದು ಅವರು ಹೇಳಿದರು. ದಂಪತಿಗೆ ನಾಲ್ಕು ಅಪ್ರಾಪ್ತ ಮಕ್ಕಳಿದ್ದು, ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು ಒಂದೂವರೆ ತಿಂಗಳ ಹಿಂದೆ  ಜನಿಸಿದ ಶಿಶು ಹುಟ್ಟಿನಿಂದಲೇ ದುರ್ಬಲವಾಗಿತ್ತು.

ಮತ್ತಷ್ಟು ಓದಿ: ವಿಜಯನಗರ: ತಂದೆ ಕಣ್ಣೆದುರೇ ಜಲ ಸಮಾಧಿಯಾದ ಇಬ್ಬರು ಪುತ್ರರು; ಮತ್ತೊಬ್ಬ ಮಗ ಬಚಾವ್​

ಶುಕ್ರವಾರ ಬೆಳಗ್ಗೆ, ಪೋಷಕರು ತಮ್ಮ ಮಕ್ಕಳನ್ನು ಮನೆಯೊಳಗೆ ಇರಿಸಿ ಬೀಗ ಹಾಕಿ ಭಿಕ್ಷೆ ಬೇಡಲು ಹೊರಗೆ ಹೋಗಿದ್ದರು. ರಾತ್ರಿ ಹಿಂತಿರುಗಿದಾಗ, ಒಳಗೆ ಶಿಶು ಮೃತಪಟ್ಟಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಟುಂಬವು ಯಾರ ವಿರುದ್ಧವೂ ಯಾವುದೇ ಆರೋಪಗಳನ್ನು ಹೊರಿಸಿಲ್ಲ ಮತ್ತು ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯನ್

ನಟ ಶಿವಕಾರ್ತಿಕೇಯನ್ ಅವರು ‘ಸಿಎಸ್​​ಕೆ’ ಅನ್  ಬಾಕ್ಸಿಂಗ್ ಈವೆಂಟ್​​ಗೆ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಧೋನಿ ಹಾಗೂ ಸಿಎಸ್​​ಕೆ ಚಾರ್ಮ್​ ಅನ್ನು ಅವರು ಹಾಡಿ ಹೊಗಳಿದ್ದಾರೆ. ಚೆನ್ನೈ ಸ್ಟೇಡಿಯಂನಿಂದ ತಮ್ಮ ಮನೆ 25 ಕಿ.ಮೀ ದೂರ ಇದೆ ಎಂದು ಅವರು ಹೇಳಿದ್ದಾರೆ. ಅಷ್ಟೆಲ್ಲ ದೂರ ಇದ್ದರೂ ಸ್ಟೇಡಿಯಂನಲ್ಲಿ ನಡೆಯುವ ಸೆಲೆಬ್ರೇಷನ್ ಶಬ್ದ ತಮ್ಮ ಮನೆಯವರಿಗೂ ಕೇಳುತ್ತದೆ ಎಂದು ಹೇಳಿದರು ಶಿವಕಾರ್ತಿಕೇಯನ್.  ಧೋನಿ ಲೀಡರ್​​ಶಿಪ್​ನ ಹೊಗಳಿದರು ಶಿವಕಾರ್ತಿಕೇಯನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ

ತೆಲಂಗಾಣ, ಮಾ.23: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ಬಾಲಕ ಓಡುತ್ತಾ ರಸ್ತೆ ದಾಟಲು ಯತ್ನಿಸುವಾಗ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ಅವನು ಸ್ಪಲ್ಪ ದೂಎಕ್ಕೆ ಹೋಗಿ ಬಿದ್ದಿರುವ ದೃಶ್ಯ ಸೆರೆಯಾಗಿದೆ. ಇನ್ನು ಈ ವಿಡಿಯೋವನ್ನು @KarnatakaPortfolio ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ವರದಿಗಳ ಪ್ರಕಾರ, ಈ ಬಾಲಕ 11 ವರ್ಷದ ಅನಿರುದ್ಧ ಎಂದು ಹೇಳಲಾಗುತ್ತಿದ್ದು, ಘಟನೆ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆಯ ಪಾಲಾಡುಗು ಗ್ರಾಮದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಈ ಬಾಲಕನ್ನು ಯಾವ ಊರಿನವರು ಹಾಗೂ ಆತನ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇನ್ನು ಆ ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಲವರು ಬಾಲಕನ ನಿರ್ಲಕ್ಷ್ಯವನ್ನು ಹೊಣೆಮಾಡಿದರೆ, ಇನ್ನೂ ಕೆಲವರು ಕಾರಿನ ಅತಿವೇಗ (ಸುಮಾರು 109 ಕಿಮೀ/ಗಂ)ವೇ ಪ್ರಮುಖ ಕಾರಣ ಎಂದು ವಾದಿಸುತ್ತಿದ್ದಾರೆ. ಈ ದುರ್ಘಟನೆ ರಸ್ತೆ ಸುರಕ್ಷತೆ ಎಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ಮತ್ತೆ ನೆನಪಿಸುತ್ತದೆ. ಚಾಲಕರು ವೇಗ ನಿಯಂತ್ರಿಸಿಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಪಾದಚಾರಿಗಳು, ವಿಶೇಷವಾಗಿ ಮಕ್ಕಳು, ರಸ್ತೆ ದಾಟುವಾಗ ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂಯಾರ್ಕ್​​ ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ

ನ್ಯೂಯಾರ್ಕ್​, ಮಾರ್ಚ್​ 23:ನ್ಯೂಯಾರ್ಕ್​ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ವಿಮಾನ ಟ್ರಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ. ವಿಮಾನ ನಿಲ್ದಾಣದ ರನ್‌ವೇ 4 ರಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ಮತ್ತು ಅಗ್ನಿಶಾಮಕ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.ವಿಮಾನ ನಿಲ್ದಾಣದಲ್ಲಿ ಸ್ಥಳಾಂತರಿಸುವಿಕೆ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದನ್ನು ತೋರಿಸುವ ಡಿಕ್ಕಿಯ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Martyrs Day 2026: ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನದ ಮಹತ್ವವೇನು ಗೊತ್ತಾ?

ಮಾರ್ಚ್‌ 23 ರಂದು ಆಚರಿಸಲಾಗುವ ಹುತಾತ್ಮರ ದಿನವು (Martyrs’ Day) ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದೆ. ಮಾರ್ಚ್ 23, 1931 ರಂದು, ಬ್ರಿಟಿಷ್ ಸರ್ಕಾರವು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಿತು. ಸಣ್ಣ ವಯಸ್ಸಿನಲ್ಲಿಯೇ  ಈ ಮೂವರು ಕ್ರಾಂತಿಕಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ತಮ್ಮ ಧೈರ್ಯ ಮತ್ತು ದೇಶಭಕ್ತಿಯ ಮೂಲಕ, ಈ ಮೂವರು ಕ್ರಾಂತಿಕಾರಿಗಳು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದ ಹೊಸ ಚೈತನ್ಯವನ್ನು ಜಾಗೃತಗೊಳಿಸಿದರು. ಇವರ ಈ ತ್ಯಾಗ ಮತ್ತು ಬಲಿದಾನವನ್ನು ಹಾಗೂ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಪುತ್ರರು, ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಲು ಮಾರ್ಚ್‌ 23 ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

ಹುತಾತ್ಮರ ದಿನದ ಇತಿಹಾಸವೇನು?

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಭಾರತೀಯ ಸ್ವಾತಂತ್ರ್ಯ ಹೋರಾಟದ ಪ್ರಮುಖ ಕ್ರಾಂತಿಕಾರಿಗಳಾಗಿದ್ದಾರೆ.  ಅವರು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ನಡೆಸಿದ್ದಲ್ಲದೆ, ತಮ್ಮ ಆಲೋಚನೆಗಳ ಮೂಲಕ ದೇಶದ ಯುವಕರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಪ್ರೇರೇಪಿಸಿದರು. ಭಗತ್ ಸಿಂಗ್ ಸ್ವಾತಂತ್ರ್ಯವನ್ನು ತನ್ನ ಜೀವನದ ಗುರಿಯಾಗಿಸಿಕೊಂಡರು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹಲವಾರು ಕ್ರಮಗಳನ್ನು ಕೈಗೊಂಡರು, ಅದು ಬ್ರಿಟಿಷ್ ಆಳ್ವಿಕೆಯ ಅಡಿಪಾಯವನ್ನು ಅಲುಗಾಡಿಸಿತು. ನಂತರ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ 1929 ರಲ್ಲಿ ಸೆಂಟ್ರಲ್‌ ಜೆಜಿಸ್ಲೇಟಿವ್‌ ಅಸೆಂಬ್ಲಿಯ ಮೇಲೆ ಬಾಂಬ್‌ ದಾಳಿ ಮಾಡಿದ ನಂತರ ಇವರನ್ನು ಜೈಲಿಗೆ ಕಳುಹಿಸಲಾಯಿತು. ಬಳಿಕ ಈ ಮೂವರು ಭಾರತ ಮಾತೆಯ ವೀರ ಪುತ್ರರಿಗೆ ಮರಣ ದಂಡಣೆಯನ್ನು ವಿಧಿಸಲಾಯಿತು ಮತ್ತು ಮಾರ್ಚ್‌ 23, 1931 ರಂದು ಈ ಮೂವರು ವೀರ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಗಲ್ಲಿಗೇರಿಸಿದಾಗ ಭಗತ್ ಸಿಂಗ್ ಮತ್ತು ಸುಖದೇವ್ ಕೇವಲ 23 ವರ್ಷ ವಯಸ್ಸಿನವರಾಗಿದ್ದರು,ರಾಜಗುರು ಅವರು ಕೇವಲ 22 ವರ್ಷದವರಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಇವರು ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಪ್ರತಿವರ್ಷ ಮಾರ್ಚ್‌ 23 ರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ನೀರನ್ನು ಮಿತವಾಗಿ ಬಳಸುವ ಮೂಲಕ ಜೀವಜಲವನ್ನು ಸಂರಕ್ಷಿಸೋಣ

ಹುತಾತ್ಮರ ದಿನದ ಮಹತ್ವವೇನು?

  • ಹುತಾತ್ಮರ ದಿನದ ಮಹತ್ವ ಕೇವಲ ಭಾರತ ಮಾತೆಯ ವೀರ ಪುತ್ರರನ್ನು ನೆನಪಿಸಿಕೊಳ್ಳುವುದಲ್ಲ, ಬದಲಾಗಿ ಅವರ ಆದರ್ಶಗಳು ಮತ್ತು ಕನಸುಗಳನ್ನು ನನಸಾಗಿಸಲು ನಮ್ಮನ್ನು ಪ್ರೇರೇಪಿಸುವುದೂ ಆಗಿದೆ.
  • ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರು ತಮ್ಮ ದೇಶಕ್ಕಾಗಿ ಮಾಡಿದ ತ್ಯಾಗಗಳು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯ ಮೂಲವಾಗಿದೆ. ಈ ದಿನವು ಸ್ವಾತಂತ್ರ್ಯವು ಎಷ್ಟು ದುಬಾರಿ ಬೆಲೆಗೆ ಸಿಕ್ಕಿತು ಎಂಬುದನ್ನು ನೆನಪಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು! ವಿಡಿಯೋ ವೈರಲ್

ಮೈಸೂರು, ಮಾರ್ಚ್ 23: ನಾಗರಹೊಳೆ ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಕಾಡಾನೆ ಹಿಂಡೊಂದು ಶಿಸ್ತಿನಿಂದ ಗುಂಪಾಗಿ ರಸ್ತೆ ದಾಟಿದ ದೃಶ್ಯ ಈಗ ಎಲ್ಲರ ಗಮನ ಸೆಳೆದಿದೆ. ಯಾವುದೇ ಗದ್ದಲವಿಲ್ಲದೆ, ಯಾರಿಗೂ ತೊಂದರೆ ಮಾಡದೆ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟಿದ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಕಿರಣ್ ಮೆಟೊಯ್ ರೆಕಾರ್ಡ್ ಮಾಡಿದ್ದಾರೆ. ​ಆನೆಗಳ ಆಗಮನ ಕಂಡು ವಾಹನ ಸವಾರರು ಕೂಡ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸಿ ಸುಮ್ಮನಾಗಿ, ಅವು ರಸ್ತೆ ದಾಟುವ ವರೆಗೆ ಮೌನವಾಗಿ ಕಾಯುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೆ,. ಸದ್ಯ ಕಾಡಾನೆಗಳು ಶಿಸ್ತಿನಿಂದ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಗನ ಕೊಲ್ಲಲು ಸುಪಾರಿ ಕೊಟ್ಟಿದ್ದ ಮಹಿಳೆಯನ್ನೇ ಕೊಂದು ಹಣ ದೋಚಿದ್ದ ವ್ಯಕ್ತಿ ಅರೆಸ್ಟ್​

ರಾಯ್​ಪುರ್, ಮಾರ್ಚ್​ 23: ತಾನು ಬಿಟ್ಟ ಬಾಣ ತನಗೇ ಮುಳುವಾಯ್ತು, ಸ್ವಂತ ಮಗನನ್ನು ಕೊಲ್ಲಲು ಸುಪಾರಿಕೊಟ್ಟಿದ್ದ ಮಹಿಳೆಯನ್ನೇ ಕೊಲೆ(Murder) ಮಾಡಿ ಹಣ ದೋಚಿದ್ದ ಹಿಟ್​ಮ್ಯಾನ್​ ಅನ್ನು ಐದು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ 2021 ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಅಜಯ್ ಮಿಶ್ರಾ ಎಂಬಾತನನ್ನು ಅಹಮದಾಬಾದ್ ಅಪರಾಧ ವಿಭಾಗವು ನರೋಡಾ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಶಕುಂತಲಾ ಯಾದವ್ ಮತ್ತು ಅವರ ಕಿರಿಯ ಮಗ ಅಮಿತ್ ಯಾದವ್, ತಮ್ಮ ಹಿರಿಯ ಮಗನನ್ನು ಕೊಲ್ಲಲು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮಿಶ್ರಾ ಅವರನ್ನು ನೇಮಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. 4 ಲಕ್ಷ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು, ಅದರಲ್ಲಿ 1 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು.

ಆದರೆ, ಮಿಶ್ರಾ ಮಗನನ್ನು ಕೊಲೆ ಮಾಡಲಿಲ್ಲ. ಬದಲಾಗಿ, ಅವನು ಹಣದೊಂದಿಗೆ ತನ್ನ ಹಳ್ಳಿಗೆ ಓಡಿಹೋಗಿದ್ದ. ಶಕುಂತಲಾ ಮತ್ತು ಅಮಿತ್ ಅವನನ್ನು ಪತ್ತೆಹಚ್ಚಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಅವನು ಅದನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದ.

ಮತ್ತಷ್ಟು ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!; ಕಾರಣ ನಿಗೂಢ

ತಿಂಗಳುಗಳ ನಂತರ, ಮಿಶ್ರಾ ಹಿಂತಿರುಗಿದ್ದ ಆದರೆ ಹಣವನ್ನು ವಾಪಸ್ ಕೊಟ್ಟಿರಲಿಲ್ಲ. ಪೊಲೀಸರ ಪ್ರಕಾರ, ಮಿಶ್ರಾ ತನ್ನ ಸಹಚರ ಕೇತನ್ ತಿವಾರಿ ಜೊತೆ ರಾಯ್‌ಪುರದಲ್ಲಿರುವ ಶಕುಂತಲಾ ಇದ್ದ ಆಕೆಯ ಮನೆಗೆ ಹೋಗಿದ್ದ. ಆ ಮಹಿಳೆಯನ್ನೇ ಕೊಂದ.

ಮಹಿಳೆಯನ್ನು ಹಗ್ಗದಿಂದ ಕತ್ತು ಹಿಸುಕಿ ಕೊಂದು ಸುಮಾರು 10 ಲಕ್ಷ ರೂ. ನಗದು ಮತ್ತು ಸುಮಾರು 350-450 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕದ್ದ ಚಿನ್ನವನ್ನು ನಂತರ ಮಾರಾಟ ಮಾಡಿದ್ದ.

ಬಂಧನದಿಂದ ತಪ್ಪಿಸಿಕೊಳ್ಳಲು, ಮಿಶ್ರಾ ತನ್ನ ಮೊಬೈಲ್ ಫೋನ್ ಬಿಟ್ಟು, ಪ್ಯಾನ್ ಮತ್ತು ಆಧಾರ್‌ನಂತಹ ಗುರುತಿನ ದಾಖಲೆಗಳನ್ನು ಬಳಸುವುದನ್ನು ತಪ್ಪಿಸಿದ್ದ, 2022 ರಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶಕ್ಕೆ ಹೋಗುವ ಮೊದಲು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಲೇ ಇದ್ದ, ಆದರೆ ಅದು ಯಾರ ಗಮನಕ್ಕೂ ಬಂದಿರಲಿಲ್ಲ.

ವರ್ಷಗಳ ತನಿಖೆ ಮತ್ತು ಹೊಸ ಮಾಹಿತಿಗಳ ನಂತರ, ಅಹಮದಾಬಾದ್ ಅಪರಾಧ ವಿಭಾಗವು ಆತನನ್ನು ಪತ್ತೆಹಚ್ಚಿ ಬಂಧಿಸಿದೆ, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ಮುಂದುವರೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

​​

Source link

‘ಧುರಂಧರ್ 2’ ಚಿತ್ರದಲ್ಲಿ ಆದಿತ್ಯ ಧಾರ್​ ಮಾಡಿದ್ರು ದೊಡ್ಡ ತಪ್ಪು; ವೈರಲ್ ಆಯ್ತು ಪೋಸ್ಟ್

‘ಧುರಂಧರ್ 2’ ಸಿನಿಮಾನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ (Aditya Dhar) ನಿರ್ದೇಶನದ ಈ ಚಿತ್ರದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಆದಿತ್ಯಧಾರ್ ಅವರು ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇದು ಸಿನಿಮಾದಲ್ಲಿ ಸ್ಪಷ್ಟವಾಗಿದೆ. ಈ ಕಾರಣಕ್ಕೆ ಎಲ್ಲರೂ ಆದಿತ್ಯಧಾರ್ ಅವರನ್ನು ಹೊಗಳುತ್ತಿದ್ದಾರೆ. ಆದರೆ, ಈಗ ಅವರು ಮಾಡಿದ ತಪ್ಪೊಂದು ಎದ್ದು ಕಾಣಿಸಿದೆ.

ಆದಿತ್ಯಧಾರ್ ಅವರು ಸಣ್ಣ ಸಣ್ಣ ವಿಷಯಗಳನ್ನೂ ಗಮನ ಇಟ್ಟು ಸಿನಿಮಾ ಮಾಡುತ್ತಾರೆ. ಇದೇ ಕಾರಣಕ್ಕೆ ‘ಪೀಕ್ ಡೀಟೇಲಿಂಗ್ ಆಫ್ ಆದಿತ್ಯಧಾರ್’ ಎಂಬು ಚರ್ಚೆ ಆಗುತ್ತಿದೆ. ಅಂದರೆ ಆದಿತ್ಯ ಧಾರ್ ಅವರು ಸಣ್ಣ ಸಣ್ಣ ವಿಷಯವನ್ನೂ ಹೆಚ್ಚು ಗಮನದಲ್ಲಿಟ್ಟು ಸಿನಿಮಾ ಮಾಡುತ್ತಾರೆ ಎಂಬುದು ಇದರ ಅರ್ಥ ಆಗಿತ್ತು. ಆದಾಗ್ಯೂ ‘ಧುರಂಧರ್ 2’ ಚಿತ್ರದಲ್ಲಿ ಒಂದು ದೊಡ್ಡ ಎಡವಟ್ಟು ನಡೆದು ಹೋಗಿದೆ. ಈ ವಿಡಿಯೋನ ಸಿನಿಮಾ ನೋಡಿದವರು ವೈರಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕ್ರಿಕೆಟರ್ ಆಗಬೇಕಿದ್ದ ‘ಧುರಂಧರ್’ ನಿರ್ದೇಶಕ ಆದಿತ್ಯ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ?

ಹಮ್ಜಾ ಹಾಗೂ ಅವನ ಗೆಳೆಯನ ಮಧ್ಯೆ ಕಿತ್ತಾಟ ನಡೆಯೋ ದೃಶ್ಯ ಇದೆ. ಈ ದೃಶ್ಯ ಪ್ರಸಾರ ಕಾಣುವಾಗ ಕನ್ನಡಿಯಲ್ಲಿ ಕ್ಯಾಮೆರಾಮೆನ್​ ಕೂಡ ಕಾಣುತ್ತಾರೆ. ಇದನ್ನು ಆದಿತ್ಯ ಧಾರ್ ನೋಡದೇ ಹೇಗೆ ಮಿಸ್ ಮಾಡಿದರು ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್​ದಾರೆ. ಇನ್ನೂ ಕೆಲವರು ಆದಿತ್ಯ ಅವರನ್ನು ಬೆಂಬಲಿಸಿದ್ದಾರೆ.

‘ಇದು ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್. ಅವರ ತಂಡ ಬಹುಶಃ ಆ್ಯಕ್ಷನ್ ಮೇಲೆ ಗಮನ ಹರಿಸಿತ್ತು ಎನ್ನಲಾಗಿದೆ’ ಎಂದು ಅವರು ಹೇಳಿದ್ದಾರೆ. ಇನ್ನೂ ಕೆಲವರು ಕ್ರಿಸ್ಟೋಫರ್ ನೋಲನ್ ಕೂಡ ಇದೇ ತಪ್ಪು ಮಾಡಿದ್ದರು ಎಂದಿದ್ದರು. ‘ಆದಿತ್ಯ ಧಾರ ಕೂಡ ಮನುಷ್ಯ. ಅವರಿಂದಲೂ ತಪ್ಪಾಗುತ್ತದೆ’ ಎಂದು ಆದಿತ್ಯ ಧಾರ್ ಪರ ಬ್ಯಾಟ್ ಬೀಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

World Meteorological Day 2026: ಹವಾಮಾನ ದಿನವನ್ನು ಆಚರಿಸುವುದೇಕೆ? ಏನಿದರ ಉದ್ದೇಶ ತಿಳಿಯಿರಿ

ಹವಾಮಾನ ವೈಪರಿತ್ಯಗಳು ನಿಸರ್ಗ ಸಹಜ ಪ್ರಕ್ರಿಯೆಯಾಗಿದ್ದು, ಹವಾಮಾನ (climate) ಬದಲಾವಣೆಯ ಕಾರಣದಿಂದಾಗಿ ಪ್ರಕೃತಿಯಲ್ಲಿ ಏನೆಲ್ಲಾ ನೈಸರ್ಗಿಕ ವಿಕೋಪಗಳು ಸಂಭವಿಸುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಬದಲಾಗುವಂತಹ ಹವಾಮಾನ ಪರಿಸ್ಥಿತಿಗಳು ಮಾನವ ಜೀವನ, ಕೃಷಿ, ಆರೋಗ್ಯ ಮತ್ತು ಪರಿಸರದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಹವಾಮಾನ ಬದಲಾವಣೆಯಿಂದ ಏನೆಲ್ಲಾ ಅಪಾಯಗಳು ಸಂಭವಿಸಬಹುದು ಎಂಬುದನ್ನು ಮುನ್ಸುಚಿಸಲು ಮತ್ತು ಸಾರ್ವಜನಿಕರು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಕ್ತ ಮಾಹಿತಿಯನ್ನು ಹವಾಮಾನ ಶಾಸ್ತ್ರ, ಹವಾಮಾನ ಇಲಾಖೆ ಒದಗಿಸುತ್ತವೆ. ಪ್ರಪಂಚದಾದ್ಯಂತ ಇರುವ ಈ ಹವಾಮಾನ ಸಂಸ್ಥೆಗಳ ಸೇವೆಗಳನ್ನು ಶ್ಲಾಘಿಸಲು ಹಾಗೂ ಪರಿಸರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 23 ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ವಿಶ್ವ ಹವಾಮಾನ ದಿನದ ಇತಿಹಾಸವೇನು?

ವಿಶ್ವ ಹವಾಮಾನ ಸಂಸ್ಥೆ (WMO) ಸ್ಥಾಪನೆಯ ಸ್ಮರಣಾರ್ಥವಾಗಿ ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ಸಂಸ್ಥೆಯನ್ನು ಮಾರ್ಚ್ 23, 1950 ರಂದು ಸ್ಥಾಪಿಸಲಾಯಿತು ಮತ್ತು 1961 ರಿಂದ ಈ ಸಂಸ್ಥೆಯ ಸ್ಥಾಪನೆಯ ಸ್ಮರಣಾರ್ಥವಾಗಿ ಪ್ರತಿವರ್ಷ ವಿಶ್ವ ಹವಾಮಾನ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಜನರ ಯೋಗಕ್ಷೇಮ, ಸುರಕ್ಷತೆಗೆ ಹವಾಮಾನ ಸಂಸ್ಥೆಗಳು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಹವಾಮಾನ ಸಂಸ್ಥೆ (WMO):

WMO ಹವಾಮಾನ, ಮತ್ತು ಜಲ ಸಂಪನ್ಮೂಲಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾಗಿದೆ. ಇದರ ಪ್ರಧಾನ ಕಚೇರಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.  WMO 1951 ರಲ್ಲಿ ವಿಶ್ವಸಂಸ್ಥೆಯ (UN) ವಿಶೇಷ ಸಂಸ್ಥೆಯಾಯಿತು.  ಇದು ಹವಾಮಾನ, ಮತ್ತು ನೀರಿಗೆ ಸಂಬಂಧಿಸಿದ ಜಾಗತಿಕ ದತ್ತಾಂಶ, ಸಂಶೋಧನೆ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆ. ಅಲ್ಲದೆ ದೇಶಗಳು ಹವಾಮಾನ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ನೈಸರ್ಗಿಕ ವಿಕೋಪಗಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನೀರನ್ನು ಮಿತವಾಗಿ ಬಳಸುವ ಮೂಲಕ ಜೀವಜಲವನ್ನು ಸಂರಕ್ಷಿಸೋಣ

ವಿಶ್ವ ಹವಾಮಾನ ದಿನದ ಮಹತ್ವವೇನು?

  • ಈ ದಿನವು ಹವಾಮಾನ ಮುನ್ಸೂಚನೆಯ ಮಹತ್ವವನ್ನು ಎತ್ತಿ ತೋರಿಸುವುದಲ್ಲದೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆ ಮತ್ತು ವೈಜ್ಞಾನಿಕ ಸಂಶೋಧನೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.
  • ವಿಶ್ವ ಹವಾಮಾನ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಹವಾಮಾನಶಾಸ್ತ್ರ ಮತ್ತು ಹವಾಮಾನ ಸೇವೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ಪರಿಸರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳನ್ನು ತೆಗೆದುಕೊಂಡರೆ, ಭೂಮಿಯ ಮೇಲಿನ ಅನೇಕ ಜೀವಗಳನ್ನು ಉಳಿಸಬಹುದು ಎಂಬುದನ್ನು ಈ ದಿನ ನೆನಪಿಸುತ್ತದೆ.

ಹವಾಮಾನ ಸಂಸ್ಥೆಗಳ ಮಹತ್ವವೇನು?

ವಿಪತ್ತು ನಿರ್ವಹಣೆಯಲ್ಲಿ ಸಹಾಯ: ಹವಾಮಾನ ಸಂಸ್ಥೆಗಳು ನೀಡುವ ಮುನ್ಸೂಚನೆಯು ಸರ್ಕಾರಗಳು ಮತ್ತು ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ.

ಸಾರ್ವಜನಿಕ ಸುರಕ್ಷತೆ: ಚಂಡಮಾರುತ, ಪ್ರವಾಹ ಅಥವಾ ಶಾಖದ ಅಲೆಯಂತಹ ಸಂದರ್ಭಗಳಲ್ಲಿ ಜನರಿಗೆ ಮುಂಚಿತವಾಗಿ ಎಚ್ಚರಿಕೆ ನೀಡುತ್ತದೆ.

ಆರ್ಥಿಕ ಸ್ಥಿರತೆ: ಕೃಷಿ, ವಾಯುಯಾನ ಮತ್ತು ಕಡಲ ಉದ್ಯಮದಂತಹ ವಲಯಗಳು ಹವಾಮಾನವನ್ನು ಅವಲಂಬಿಸಿವೆ. ನಿಖರವಾದ ಮಾಹಿತಿಯು ನಷ್ಟವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link