ಬೆಂಗಳೂರು ಮೆಟ್ರೋಗೆ ‘ಬಂಗಾಳ ಎಲೆಕ್ಷನ್ ಶಾಕ್’: 10 ಸಾವಿರ ಕಾರ್ಮಿಕರು ನಾಪತ್ತೆ, ಪಿಂಕ್-ಬ್ಲೂ ಲೈನ್ ಕಾಮಗಾರಿ ಬಂದ್!
ಬೆಂಗಳೂರು, ಮೇ 28: ನಗರದ ಜನತೆಯ ಬಹುನಿರೀಕ್ಷಿತ ನಮ್ಮ ಮೆಟ್ರೋ (BMRCL) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆಗೆ ಪಶ್ಚಿಮ ಬಂಗಾಳದ ಚುನಾವಣೆ ದೊಡ್ಡ ಮಟ್ಟದ ಬ್ರೇಕ್ ಹಾಕಿದೆ. ಮತದಾನ ಮಾಡಲು ಸ್ವಗ್ರಾಮಗಳಿಗೆ ತೆರಳಿದ ಸುಮಾರು 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಇನ್ನು ಬೆಂಗಳೂರಿಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ. ಮುಖ್ಯಾಂಶಗಳು ಬಂಗಾಳ ಎಲೆಕ್ಷನ್‌ಗೆ ಹೋದ ಹತ್ತು ಸಾವಿರ ಮೆಟ್ರೋ ಕಾರ್ಮಿಕರು ಮರಳಿ ಬಂದಿಲ್ಲ. ಕೆಲಸಗಾರರಿಲ್ಲದೆ ಪಿಂಕ್…