Headlines

nagaraj11081993

ತುಮಕೂರು: ಏ 1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ತುಮಕೂರು, ಮಾರ್ಚ್​ 21: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರ 119ನೇ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಹಿನ್ನಲೆ ಏಪ್ರಿಲ್​ 1ರಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಗಮನ ಹಿನ್ನಲೆಯಲ್ಲಿ ತುಮಕೂರಿನ ಕ್ಯಾತಸಂದ್ರ ಸಮೀಪದ ಸಿದ್ದಗಂಗಾ ಮಠದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಮಠದ ಪೀಠಾಧಿಪತಿ ಸಿದ್ದಲಿಂಗ ಶ್ರೀಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕೇಂದ್ರ ಸಚಿವ…

Read More

IPL 2026: 10 ತಂಡಗಳಲ್ಲಿ 31 ಗೇಮ್ ಫಿನಿಷರ್ಸ್; ಯಾವ ತಂಡದಲ್ಲಿ ಯಾರ್ಯಾರು?

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಮಾಡುವ ತಂಡದ ಪರ ಇನ್ನಿಂಗ್ಸ್ ಪ್ರಾರಂಭಿಸುವವರನ್ನು ಓಪನರ್ ಎಂದು ಕರೆದರೆ, ಪಂದ್ಯವನ್ನು ಮುಗಿಸುವವರನ್ನು ಫಿನಿಷರ್ ಎಂದು ಕರೆಯಲಾಗುತ್ತದೆ. ಇಂತಹ ಗೇಮ್ ಫಿನಿಷರ್​ಗಳು ಐಪಿಎಲ್​ನಲ್ಲಿಯೂ (IPL 2026) ಇದ್ದಾರೆ. 10 ತಂಡಗಳು ಪಾಲ್ಗೊಳ್ಳುವ ಈ ಲೀಗ್​ನಲ್ಲಿ ಪಂದ್ಯಗಳನ್ನು ಮುಗಿಸುವಲ್ಲಿ ಪ್ರವೀಣರಾದ 31 ಆಟಗಾರರಿದ್ದಾರೆ. ಹಾಗಿದ್ದರೆ ಈ 10 ತಂಡಗಳಲ್ಲಿರುವ ಆ 31 ಗೇಮ್ ಫಿನಿಷರ್‌ಗಳು ಯಾರ್ಯಾರು ಎಂಬುದು ಪ್ರಶ್ನೆ. ಇದರ ಜೊತೆಗೆ ಪ್ರತಿ ತಂಡವು ಎಷ್ಟು ಫಿನಿಷರ್‌ಗಳನ್ನು ಹೊಂದಿದೆ? ಎಂಬುದನ್ನು ವಿವರವಾಗಿ ನೋಡುವುದಾದರೆ.. 10 ತಂಡಗಳಲ್ಲಿರುವ…

Read More

WITT Summit 2026: ರಾಜಕೀಯದಿಂದ ಕ್ರೀಡೆಯವರೆಗೆ; ವಿಟ್ ಶೃಂಗಸಭೆಯ 2ನೇ ದಿನದ ಆಕರ್ಷಣೆಗಳಿವು

ನವದೆಹಲಿ, ಮಾರ್ಚ್ 21: ದೆಹಲಿಯಲ್ಲಿ ಮಾರ್ಚ್ 23 ಮತ್ತು 24ರಂದು ನಡೆಯಲಿರುವ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit) ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಮತ್ತು ಕಾರ್ಪೊರೇಟ್ ನಾಯಕರನ್ನು ಒಟ್ಟುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಮುಖ್ಯ ಅತಿಥಿಯಾಗಿ ಈ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಈ ಬಾರಿ ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ ಇಂಧನ, ಮೂಲಸೌಕರ್ಯ ಮತ್ತು ಭಾರತದ ಕೈಗಾರಿಕಾ ಭವಿಷ್ಯದ ಕುರಿತು…

Read More

ಪುನೀತ್ ರಾಜ್​​ಕುಮಾರ್ ಪುತ್ಥಳಿ ಅನಾವರಣ: ಅಶ್ವಿನಿ ಪುನೀತ್​​ರಾಜ್​ಕುಮಾರ್ ಮಾತು

ಬೆಂಗಳೂರಿನ ಸ್ಯಾಂಕಿ ಟ್ಯಾಂಕ್ ಬಳಿ ಪುನೀತ್ ರಾಜ್​​ಕುಮಾರ್ (Puneeth Rajkumar) ಅವರ 800 ಕೆಜಿ ತೂಕದ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಶಾಸಕ ಅಶ್ವಥ್ ನಾರಾಯಣ್, ಅಶ್ವಿನಿ ಪುನೀತ್ ರಾಜ್​​ಕುಮಾರ್ ಮತ್ತು ಅವರ ಪುತ್ರಿ ಧೃತಿ, ಚಲನಚಿತ್ರ ನಿರ್ದೇಶಕರಾದ ಡಾ ರಾಜೇಂದ್ರ ಸಿಂಗ್ ಬಾಬು ಇನ್ನೂ ಹಲವರು ಭಾಗಿ ಆಗಿದ್ದರು. ಕಾರ್ಯಕ್ರದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 6 ಬಿಜೆಡಿ ಶಾಸಕರ ಅಮಾನತು

ಒಡಿಶಾ, ಮಾರ್ಚ್ 21: ಇತ್ತೀಚೆಗೆ ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯ (Rajya Sabha Elections) ಸಂದರ್ಭದಲ್ಲಿ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜು ಜನತಾದಳ (ಬಿಜೆಡಿ) ತನ್ನ 6 ಶಾಸಕರನ್ನು ಅಮಾನತುಗೊಳಿಸಿದೆ. ಶಾಸಕರು ಅಡ್ಡ ಮತದಾನದಲ್ಲಿ ತೊಡಗಿದ್ದಾರೆ ಎಂದು ಪತ್ತೆಯಾದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಶೋಕಾಸ್ ನೋಟಿಸ್‌ಗೆ ಅವರು ನೀಡಿದ ಉತ್ತರಗಳ ಪರಿಶೀಲನೆ ಮತ್ತು ಬಿಜೆಡಿ ಶಿಸ್ತು ಸಮಿತಿಯ ಸಂಪೂರ್ಣ ಪರಿಶೀಲನೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಒಡಿಶಾದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗಮನಾರ್ಹ ಅಡ್ಡ ಮತದಾನ…

Read More

ಸಿನಿಮಾ ರಂಗದಿಂದ ದೂರಾಗಲು ನಿರ್ಧರಿಸಿದ್ದರು ಶ್ರೀಲೀಲಾ: ಕಾರಣ ಏನು?

ಶ್ರೀಲೀಲಾ (Sreeleela), ಕನ್ನಡದ ನಟಿ. ಈಗ ಅವರು ಪ್ಯಾನ್ ಇಂಡಿಯಾ ನಟಿಯಾಗಿ ಸಖತ್ ಮಿಂಚುತ್ತಿದ್ದಾರೆ. ತೆಲುಗಿನಲ್ಲಂತೂ ನಂಬರ್ 1 ನಟಿ ಎನಿಸಿಕೊಂಡಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಇನ್ನೂ ಕೆಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ. ತಮಿಳಿನಲ್ಲೂ ಸಹ ಸ್ಟಾರ್ ನಟರುಗಳೊಟ್ಟಿಗೆ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಗಲೇ ಮೂರು ಸಿನಿಮಾಕ್ಕೆ ಎಸ್ ಹೇಳಿದ್ದು, ಒಂದು ಸಿನಿಮಾದ ಚಿತ್ರೀಕರಣವನ್ನೂ ಮುಗಿಸಿದ್ದಾರೆ. ಸ್ಟಾರ್ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ. ಇಷ್ಟು ಯಶಸ್ವಿ ನಟಿ ಆಗಿರುವ ಶ್ರೀಲೀಲಾ, ಕೆಲ ವರ್ಷಗಳ ಹಿಂದೆ ನಟನೆಯನ್ನು ತ್ಯಜಿಸಿ,…

Read More

ಕಾರವಾರ: ಪ್ರವಾಸಿಗರು ಹೆಚ್ಚಳದ ಮಧ್ಯೆ ದರ ಸಮರ: ಏಜೆಂಟರು ಮತ್ತು ಕಂಪನಿಗಳ ನಡುವೆ ಬಿಗ್ ಫೈಟ್

ಕಾರವಾರ, ಮಾರ್ಚ್​ 21: ಸಾಲು ಸಾಲು ರಜೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಟ್ರಾವೆಲ್ ಏಜೆಂಟ್ಸ್​ ಮತ್ತು ಜಲಸಾಹಸ ಕ್ರಿಡಾ ಕಂಪನಿಗಳ ನಡುವೆ ದರ ನಗದಿ ವಿಚಾರವಾಗಿ ಭಾರೀ ಜಟಾಪಟಿ ನಡೆದಿದ್ದು, ಪ್ರವಾಸಿಗರು (Tourists) ಜಾಸ್ತಿ ಬಂದರೂ ನಿರೀಕ್ಷಿಸಿದಷ್ಟು ಲಾಭ ಸಿಗದೆ ಎಜೆಂಟರು ಒದ್ದಾಡುತ್ತಿದ್ದಾರೆ. ಸದ್ಯ ಒಂದು ಕಡೆ ಸಾಲು ಸಾಲು ಹಬ್ಬ ಹಿನ್ನೆಲೆ ರಜೆ. ಮತ್ತೊಂದು ಕಡೆ ಮಕ್ಕಳ ಪರೀಕ್ಷೆ ಮುಗಿದಿದ್ದು, ಜಾಲಿ ಮಾಡುವ ಸಂದರ್ಭ. ಹೀಗಾಗಿ…

Read More

ಈ ರಾಶಿಯವರು ಒಂದು ಧೈರ್ಯದ ನಿರ್ಧಾರ ತೆಗೆದುಕೊಳ್ಳಿ, ಜೀವನವೇ ಬದಲಾಗುತ್ತದೆ

ಮಾರ್ಚ್ 22ರಿಂದ 28ರವರೆಗೆ ನಾಲ್ಕನೇ ವಾರ. ದಶಮಾಧಿಪತಿಗಳ ಸಂಚಾರದಲ್ಲಿ ವ್ಯತ್ಯಾಸ ಆಗುವ ಕಾರಣ ಉದ್ಯೋಗದಲ್ಲಿ ಉದ್ಯಮದಲ್ಲಿ ಏರಿಳಿತಗಳು ಇರಲಿವೆ. ಸೂಕ್ಷ್ಮಮತಿಗಳಾಗಿ ನಿರ್ವಹಣೆ ಮಾಡುವುದು ಇರುತ್ತದೆ. ​ ​ಮೇಷ ​ಅಧಿಪತಿ ಮಂಗಳ ಲಾಭ ಸ್ಥಾನದಲ್ಲಿದ್ದಾನೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಶನಿ ಪ್ರಭಾವದಿಂದ ಕೆಲಸದಲ್ಲಿ ವಿಳಂಬ ಸಾಧ್ಯತೆ ಇದೆ. ​ ವೃಷಭ ​ಶುಕ್ರನ ಬಲದಿಂದ ಸುಖ, ಸಂತೋಷ ಹೆಚ್ಚಲಿದೆ. ದಶಮಾಧಿಪತಿ ಶನಿ ಹತ್ತನೇ…

Read More

ಎಸಿಯಿಂದ ಹೊರಬಂದ ತಕ್ಷಣ ತಲೆನೋವು, ಸುಸ್ತಾದಂತೆ ಅನಿಸುವುದಕ್ಕೆ ಕಾರಣವೇನು?

ಬೇಸಿಗೆ ಕಾಲದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಅನೇಕರು ಎಸಿ (AC) ಬಳಕೆ ಮಾಡುತ್ತಾರೆ. ಆದರೆ ಕೆಲವರಿಗೆ ಎಸಿ ಇದ್ದಲ್ಲಿಂದ ಹೊರಬಂದ ಕೂಡಲೇ ತಲೆನೋವು, ಒಂದು ರೀತಿಯ ಸುಸ್ತಾದಂತೆ ಅನುಭವವಾಗುತ್ತದೆ. ಕೆಲವರಿಗೆ ತಲೆಸುತ್ತು, ಕಣ್ಣಿನಲ್ಲಿ ನೋವು, ಮೂಗು ಬ್ಲಾಕ್ ಆಗುವುದು, ಗಂಟಲು ಒಣಗುವುದು ಮತ್ತು ದೇಹದಲ್ಲಿ ಸ್ವಲ್ಪ ದುರ್ಬಲತೆ ಕೂಡ ಕಾಣಿಸಬಹುದು. ತಣ್ಣನೆಯ ವಾತಾವರಣದಿಂದ ಏಕಾಏಕಿ ಬಿಸಿ ವಾತಾವರಣಕ್ಕೆ ಬರುವಾಗ ದೇಹಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಇದರಿಂದ ಅಸಹಜತೆ ಹೆಚ್ಚಾಗುತ್ತದೆ. ಹಲವರು ಈ ರೀತಿ ಆಗುವುದನ್ನು ನಿರ್ಲಕ್ಷಿಸುತ್ತಾರೆ, ಆದರೆ…

Read More

IPL 2026: 42 ಎಸೆತಗಳಲ್ಲಿ 94 ರನ್ ಬಾರಿಸಿದ ಅಭಿಷೇಕ್ ಶರ್ಮಾ

ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 2026 ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲದಿರಬಹುದು, ಆದರೆ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ 2026 ರ ಐಪಿಎಲ್​ನಲ್ಲೂ (IPL 2026) ಅದೇ ಆಟವನ್ನು ಮುಂದುವರೆಸಲು ಅಭಿಷೇಕ್ ಶರ್ಮಾ ಸಜ್ಜಾಗಿದ್ದಾರೆ. ಲೀಗ್​ನ ಮೊದಲ ಪಂದ್ಯದಲ್ಲೇ ಆರ್​ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ (RCB vs SRH) ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ…

Read More