ತಂದೆ ಧೂಮಪಾನ ಮಾಡುತ್ತಿದ್ದರೆ ಮಕ್ಕಳಿಗೆ ಬರುತ್ತೆ ಈ ಗಂಭೀರ ರೋಗಗಳು: ಅಧ್ಯಯನದಿಂದ ಬಹಿರಂಗ
ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದು ಧೂಮಪಾನ ಮಾಡುವವರಿಗೂ, ಅವರ ಸುತ್ತಮುತ್ತ ಇರುವವರಿಗೂ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಇತ್ತೀಚಿನ ಒಂದು ಅಧ್ಯಯನವು ಹೊಸ ಆತಂಕಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ. ಹೌದು, ತಂದೆಯಲ್ಲಿರುವ ಧೂಮಪಾನದ ಅಭ್ಯಾಸವು ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವೈದ್ಯರು ನಡೆಸಿದ ಈ ಅಧ್ಯಯನವನ್ನು “ಜರ್ನಲ್ ಆಫ್ ದ ಎಂಡೋಕ್ರೈನ್ ಸೋಸೈಟಿ”ಯಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ ತಿಳಿಸಿರುವ ಮಾಹಿತಿ ಅನುಸಾರ, ತಂದೆ ಧೂಮಪಾನ…