All posts by nagaraj11081993

ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು! – Kannada News | Bizarre Incident in Bengaluru: Mobile Snatcher Fleeing on Scooter Suffers Sudden Heart Attack and Dies

ಬೆಂಗಳೂರು, ಜೂನ್​​ 19: ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ ವ್ಯಕ್ತಿ ಕ್ಷಣ ಮಾತ್ರದಲ್ಲಿ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜುನೈದ್ ಎಂಬಾತ ವ್ಯಕ್ತಿಯೋರ್ವರ ಮೊಬೈಲ್​​ ಕಸಿದು ಸ್ಕೂಟಿಯಲ್ಲಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರ್ಮಿಕ ಈತನತ್ತ ಮೂಟೆಯನ್ನು ಎಸೆದಿದ್ದು, ನಿಯಂತ್ರಣ ತಪ್ಪಿ ಬಿದ್ದ ಜುನೈದ್​​ ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆದರೆ ಫುಟ್​​ಪಾತ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಹೃದಯ ಸಂಬಂಧಿ ಸಮಸ್ಯೆಯಿಂದ ಜುನೈದ್ ಬಳಲುತ್ತಿದ್ದ ಎನ್ನಲಾಗಿದ್ದು, ಮತ್ತೋರ್ವ ಆರೋಪಿ ಅರ್ಬಾಜ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನಾ ಹೆಲಿಕಾಪ್ಟರ್‌ ಬಳಕೆ – Kannada News | NEET UG 2026: Re Examination Details, Security Measures, and Student Concerns

ಜೂನ್ 21ರಂದು ದೇಶಾದ್ಯಂತ ನೀಟ್ ಯುಜಿ (NEET UG) ಮರು ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಜ್ಜಾಗಿದೆ. ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ, ಈ ಬಾರಿ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ 2:30 ರಿಂದ ಸಂಜೆ 5:15 ರವರೆಗೆ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ 15 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ.

552 ನಗರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸೇನೆಯ ಹೆಲಿಕಾಪ್ಟರ್‌ ಮತ್ತು ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಸಿಆರ್‌ಪಿಎಫ್ (CRPF) ಮತ್ತು ಸಿಐಎಸ್‌ಎಫ್ (CISF) ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಾಗಿಸಿ, ಅವುಗಳನ್ನು ಸಂಗ್ರಹಿಸುವ ಸ್ಥಳಗಳಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ. ನಕಲಿ ಅಭ್ಯರ್ಥಿಗಳನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಭಾಗಿಯಾದ ಪ್ರೊಫೆಸರ್‌ಗಳಿಗೆ ಪರೀಕ್ಷೆ ಮುಗಿಯುವವರೆಗೆ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಈ ಎಲ್ಲಾ ಕ್ರಮಗಳು ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶ ಹೊಂದಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾ ಇಂಟಿ ಬಂಗಾರಂ’ ಮ್ಯಾಜಿಕ್ ಮಾಡಿದರಾ ಸಮಂತಾ, ನೆಟ್ಟಿಗರು ಹೇಳಿದ್ದೇನು? – Kannada News | Samantha Ruth Prabhu starrer Maa Inti Bangaram movie twitter review

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣದ ಕೆಲವೆಡೆ ಬೆಳಿಗ್ಗೆ ಶೋಗಳು ಪ್ರದರ್ಶನಗೊಂಡಿವೆ. ವಿದೇಶದಲ್ಲೂ ಸಹ ಭಾರತಕ್ಕಿಂತಲೂ ಮುಂಚಿತವಾಗಿ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೆಟ್ಟಿಗರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಹೇಗನ್ನಿಸಿತು, ಅವರಿಗೆ ಇಷ್ಟವಾಯ್ತಾ? ಇಲ್ಲವಾ? ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ….

ವೆಂಕಿ ರಿವ್ಯೂಸ್ ಎಂಬ ಟ್ವಿಟ್ಟರ್ ಚಾನೆಲ್ ‘ಮಾ ಇಂಟಿ ಬಂಗಾರಂ’ ಒಂದು ಸಾಧಾರಣ ಸಿನಿಮಾ ಎಂದಿದೆ. ‘ಫ್ಯಾಮಿಲಿ ಸ್ಟೋರಿಯನ್ನು ಕೆಟ್ಟದಾಗಿ ತೆರೆ ತರಲಾಗಿದೆ. ಆರಂಭದಿಂದ ಅಂತ್ಯದವರೆಗೆ ಬಹಳ ಸಾಧಾರಣ ರೀತಿಯಲ್ಲಿ ನಿರೂಪಿತವಾದ ಹಾಗೂ ಸುಲಭವಾಗಿ ಊಹಿಸಬಹುದಾದ ಕತೆಯನ್ನು ಸಿನಿಮಾ ಒಳಗೊಂಡಿದೆ. ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ವೇಗ ಪಡೆದುಕೊಂಡರೂ, ಪರಿಣಾಮಕಾರಿಯಲ್ಲದ ಬ್ಯಾಕ್ ಸ್ಟೋರಿ, ದುರ್ಬಲ ಖಳನಾಯಕನ ಪಾತ್ರ ಮತ್ತು ಟ್ವಿಸ್ಟ್​​ಗಳ ಕೊರತೆ ಸಿನಿಮಾನಲ್ಲಿದೆ. ಸಿನಿಮಾದ ಎಮೋಷನ್ ಸೀನ್​​ಗಳು ಸಹ ಸರಿಯಾಗಿ ಟಚ್ ಆಗುವುದಿಲ್ಲ, ಸಮಂತಾ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕಳಪೆ ಹಿನ್ನೆಲೆ ಸಂಗೀತ ಮತ್ತು ಕಳಪೆ ನಿರೂಪಣೆಯು ಚಿತ್ರವು ಹೆಚ್ಚಿನ ಪ್ರಭಾವ ಬೀರದಂತೆ ತಡೆಯುತ್ತದೆ’ ಎಂದಿದ್ದಾರೆ.

ದೀಪಕ್​ಸಿಂಗ್ ಅವರಿಗೆ ‘ಮಾ ಇಂಟಿ ಬಂಗಾರಂ’ ಸಿನಿಮಾ ಇಷ್ಟವಾಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ವಿಮರ್ಶೆಯನ್ನು ಅವರು ನೀಡಿದ್ದಾರೆ. ‘ಟಾಲಿವುಡ್​​ಗೆ ಅಗತ್ಯವಾಗಿದ್ದ ಹಿಟ್ ಅನ್ನು ಸಮಂತಾ ನೀಡಿದ್ದಾರೆ. ಸಮಂತಾ ಅವರು ರಾಣಿಯಂತೆ ಸಿನಿಮಾನಲ್ಲಿ ಮಿಂಚಿದ್ದಾರೆ. ಇಡೀ ಸಿನಿಮಾದ ಹೈಲೆಟ್ ಸಮಂತಾ ಅವರೇ ಎಂದಿದ್ದಾರೆ.

ಐತೇ ಎಂಟಿ ಎಂಬ ಟ್ವಿಟ್ಟರ್ ಪೇಜ್​​ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ‘ಸಿನಿಮಾದ ಮೊದಲಾರ್ಧ ಚೆನ್ನಾಗಿದೆ ಒಳ್ಳೆಯ ಕಾಮಿಡಿ ಇದೆ. ಆದರೆ ಇಂಟರ್ವೆಲ್ ಬಳಿಕ ಸಿನಿಮಾ ಸಪ್ಪೆಯಾಗಿದೆ. ಸಿನಿಮಾದ ಎಡಿಟಿಂಗ್ ಅಂತೂ ಬಹಳ ಕೆಟ್ಟದಾಗಿದೆ. ತಮ್ಮ ಮನಸ್ಸಿಗೆ ಬಂದಂತೆ ದೃಶ್ಯಗಳನ್ನು ಕಟ್ ಮಾಡಿ ಜೋಡಿಸಿದ್ದಾರೆ. ಒಂದು ನಿಯಮಿತ ಕ್ರಮವೇ ಇಲ್ಲ’ ಎಂದು ಅವರು ದೂರಿದ್ದಾರೆ.

ದಿಲೀಪ್ ಕುಮಾರ್ ಎಂಬುವರು ಟ್ವೀಟ್ ಮಾಡಿ, ಕುಟುಂಬ ಪ್ರೇಕ್ಷಕರು ಆರಾಮವಾಗಿ ಬಂದು ನೋಡಬಹುದಾದ ಸಿನಿಮಾ ‘ಮಾ ಇಂಟಿ ಬಂಗಾರಂ’. ಸಿನಿಮಾದ ಕತೆ ಹಿಡಿದಿಟ್ಟುಕೊಳ್ಳುತ್ತದೆ. ವಿಶೇಷವಾಗಿ ಸಿನಿಮಾದ ಆಕ್ಷನ್ ಸೀನ್​​ಗಳು ಅದ್ಭುತವಾಗಿವೆ. ಸಮಂತಾ ಅದ್ಭುತವಾಗಿ ಆಕ್ಷನ್ ಮಾಡಿದ್ದಾರೆ. ಈ ಸಿನಿಮಾದ ಬಳಿಕ ಸಮಂತಾಗೆ ಲೇಡಿ ಸೂಪರ್ ಸ್ಟಾರ್ ಟ್ಯಾಗ್ ಕೊಡಬಹುದು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಟಾಗಿ ಮದುವೆ ಆದ್ರಾ ಸಾರಾ ಅಲಿ ಖಾನ್? ವೈರಲ್ ಆಯ್ತು ಫೋಟೋ – Kannada News | Did Sara Ali Khan Get Married Secretly? Truth Behind Her Viral Photo With Henry Cavill

ವೈರಲ್ ಆಗಿರುವ ಫೋಟೋದಲ್ಲಿ ಇಬ್ಬರ ಉಡುಪುಗಳು ಪ್ರೇಕ್ಷಕರಲ್ಲಿ ದೊಡ್ಡ ಗೊಂದಲ ಮೂಡಿಸಿವೆ. ಸಾರಾ ಅಲಿ ಖಾನ್ ಬಿಳಿ ಬಣ್ಣದ ಫಾರ್ಮಲ್ ಸ್ಕರ್ಟ್ ಸೂಟ್ ಧರಿಸಿ, ತಲೆಗೆ ನೆಟ್ ಮಾದರಿಯ ಬಿಳಿ ಹ್ಯಾಟ್ ಧರಿಸಿದ್ದರೆ, ಹೆನ್ರಿ ಕ್ಯಾವಿಲ್ ಸೂಟ್ ಮತ್ತು ಹ್ಯಾಟ್ ಧರಿಸಿ ಕ್ಲಾಸಿಕ್ ಬ್ಲ್ಯಾಕ್ ಅಂಡ್ ವೈಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕ್ರಿಶ್ಚಿಯನ್ ಸಂಪ್ರದಾಯದ ವಧು-ವರರಂತೆ ಕಾಣಿಸುತ್ತಿರುವುದರಿಂದ, ಅನೇಕ ಅಭಿಮಾನಿಗಳು ಸಾರಾ ಅಲಿ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದೇ ತಪ್ಪಾಗಿ ಭಾವಿಸಿದರು.

Source link

ಟ್ರಾಫಿಕ್ ಫೈನ್ ರಿಯಾಯಿತಿ: ಬೆಂಗಳೂರಿನಲ್ಲಿ 12 ವಿಶೇಷ ಕೌಂಟರ್ ತೆರೆಯಲಿದೆ ಆರ್​ಟಿಒ! ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ – Kannada News | Karnataka Traffic Fine Rebate: Over 5 Crore E Challan Cases Pending; 50 percent Discount Scheme to begin from June 21

ಸಾಂದರ್ಭಿಕ ಚಿತ್ರ (ಕೃಪೆ: ಹೆಚ್​ಎಎಲ್ ಏರ್ಪೋರ್ಟ್ ಟ್ರಾಫಿಕ್ ಪೊಲೀಸ್)Image Credit source: @halairporttrfps

ಬೆಂಗಳೂರು, ಜೂನ್ 19: ಕರ್ನಾಟಕದಲ್ಲಿ (Karnataka) ವಾಹನ ಸವಾರರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಒಂದೆಡೆಯಾದರೆ, ನಿಯಮ ಉಲ್ಲಂಘನೆಗೆ ವಿಧಿಸಲಾದ ದಂಡದ (Traffic Fine) ಹಣವನ್ನು ಪಾವತಿಸದೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥಕ್ಕಾಗಿ ರಾಜ್ಯ ಸರ್ಕಾರ ಈಗಾಗಲೇ ಐದು ಬಾರಿ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆಯನ್ನು ಪ್ರಕಟಿಸಿದ್ದರೂ ಸಹ, ಕೋಟ್ಯಂತರ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಇವೆ. ಪ್ರಸ್ತುತ ರಾಜ್ಯಾದ್ಯಂತ 5 ಕೋಟಿಗೂ ಅಧಿಕ ಇ-ಚಲನ್ ಪ್ರಕರಣಗಳು ಬಾಕಿ ಇದ್ದು, ಸವಾರರಿಂದ ಬರೋಬ್ಬರಿ 2,727.38 ಕೋಟಿ ರೂಪಾಯಿ ದಂಡದ ಬಾಕಿ ಹಣ ವಸೂಲಾಗಬೇಕಿದೆ.

ಮುಖ್ಯಾಂಶಗಳು

  • 5 ಕೋಟಿಗೂ ಅಧಿಕ ಟ್ರಾಫಿಕ್ ಇ-ಚಲನ್ ಬಾಕಿ.
  • 2,727 ಕೋಟಿ ರೂ. ದಂಡ ಕಟ್ಟದ ಸವಾರರು.
  • ಬೆಂಗಳೂರಿನಲ್ಲಿ ಜೂನ್ 21 ರಿಂದ 12 ವಿಶೇಷ ಕೌಂಟರ್.

ದಂಡ ರಿಯಾಯಿತಿ ಯೋಜನೆಗೆ ತಜ್ಞರ, ಐಪಿಎಸ್ ಅಧಿಕಾರಿಗಳ ತೀವ್ರ ವಿರೋಧ

ಸರ್ಕಾರ ಪದೇ ಪದೇ ದಂಡದಲ್ಲಿ ರಿಯಾಯಿತಿ ನೀಡುತ್ತಿರುವುದಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಸಾರಿಗೆ ತಜ್ಞರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ವಿಳಂಬ ಮಾಡುವವರಿಗೆ ಹೆಚ್ಚುವರಿ ದಂಡ ವಿಧಿಸುವ ಬದಲು, ಪದೇ ಪದೇ ರಿಯಾಯಿತಿ ನೀಡುವುದು ತಪ್ಪು. ಇದು ತಪ್ಪು ಮಾಡಿದವರಿಗೆ ಬಹುಮಾನ ನೀಡಿದಂತಾಗುತ್ತದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಆಕ್ರೋಶ ಹೊರಹಾಕಿರುವುದಾಗಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇಂತಹ ರಿಯಾಯಿತಿ ಯೋಜನೆಗಳು ಸಾರ್ವಜನಿಕರಲ್ಲಿ ದಂಡ ಮತ್ತು ಕಾನೂನಿನ ಮೇಲಿರುವ ಭಯವನ್ನು ಕಡಿಮೆ ಮಾಡುತ್ತವೆ. ಇದು ಪರೋಕ್ಷವಾಗಿ ನಿಯಮ ಉಲ್ಲಂಘನೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸಾರಿಗೆ ತಜ್ಞ ಹಾಗೂ ಐಐಎಸ್‌ಸಿ (IISc) ಪ್ರೊಫೆಸರ್ ಆಶಿಶ್ ವರ್ಮಾ ಅಭಿಪ್ರಾಯಪಟ್ಟಿರುವುದನ್ನೂ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಉಲ್ಲೇಖಿಸಿದೆ. ಕಳೆದ 8 ವರ್ಷಗಳಲ್ಲಿ ರಾಜ್ಯದಲ್ಲಿ ರಸ್ತೆ ಅಪಘಾತಗಳಿಗೆ 83,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂಬ ಕಠೋರ ವಾಸ್ತವದ ನಡುವೆಯೂ ಈ ಉದಾಸೀನತೆ ಮುಂದುವರಿದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದಂಡ ಪಾವತಿ ಬಾಕಿಯಲ್ಲಿ ಬೆಂಗಳೂರೇ ನಂಬರ್ 1

ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, 2019 ರಿಂದ 2026 ರ ಏಪ್ರಿಲ್ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 7.46 ಕೋಟಿಗೂ ಅಧಿಕ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 3,605.93 ಕೋಟಿ ರೂ. ದಂಡ ವಿಧಿಸಲಾಗಿತ್ತು. ಇದರಲ್ಲಿ ಕೇವಲ 878.55 ಕೋಟಿ ರೂ. ಮಾತ್ರ ವಸೂಲಾಗಿದೆ. ಇನ್ನುಳಿದ 5,05,74,348 ಪ್ರಕರಣಗಳ ದಂಡದ ಹಣ ಇನ್ನೂ ಬಾಕಿ ಉಳಿದಿದೆ. ಈ ಪೈಕಿ ರಾಜಧಾನಿ ಬೆಂಗಳೂರು ನಗರವೊಂದರಲ್ಲೇ ಅತ್ಯಧಿಕ ಅಂದರೆ 3,37,79,608 ಪ್ರಕರಣಗಳು ಬಾಕಿ ಇದ್ದು, 1,843 ಕೋಟಿ ರೂಪಾಯಿ ದಂಡ ವಸೂಲಾಗಬೇಕಿದೆ. ಬೆಂಗಳೂರಿನ ನಂತರ ಮೈಸೂರು ಹಾಗೂ ಬೆಳಗಾವಿ ನಗರಗಳು ಅತಿ ಹೆಚ್ಚು ಬಾಕಿ ಹೊಂದಿರುವ ಪಟ್ಟಿಯಲ್ಲಿ ಮುಂದಿವೆ. ಜಿಲ್ಲಾವಾರು ಪಟ್ಟಿಯಲ್ಲಿ ಮೈಸೂರು, ಬೆಂಗಳೂರು ಗ್ರಾಮಾಂತರ (ಹಳೆಯ ರಾಮನಗರ) ಹಾಗೂ ಮಂಡ್ಯ ಜಿಲ್ಲೆಗಳು ಮುಂಚೂಣಿಯಲ್ಲಿವೆ.

ಜೂನ್ 21 ರಿಂದ ಮತ್ತೆ ರಿಯಾಯಿತಿ: ಬೆಂಗಳೂರಲ್ಲಿ 12 ವಿಶೇಷ ಕೌಂಟರ್

ರಾಜ್ಯ ಸರ್ಕಾರವು ಜೂನ್ 21 ರಿಂದ ಜುಲೈ 10, 2026 ರವರೆಗೆ ಆರನೇ ಬಾರಿಗೆ ಶೇಕಡಾ 50 ರಷ್ಟು ದಂಡ ರಿಯಾಯಿತಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಬೆಂಗಳೂರು ಸಂಚಾರಿ ಪೊಲೀಸರು (BTP) ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ 12 ಜಂಕ್ಷನ್‌ಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸುತ್ತಿದ್ದಾರೆ. ಅವುಗಳ ವಿವರ ಇಲ್ಲಿದೆ;

  1. ಹೆಣ್ಣೂರು ಜಂಕ್ಷನ್, ರಿಂಗ್ ರೋಡ್
  2. ದೇವಸಂದ್ರ ಜಂಕ್ಷನ್, ಹಳೇ ಮದ್ರಾಸ್ ರಸ್ತೆ
  3. ಕುಂದಲಹಳ್ಳಿ ಜಂಕ್ಷನ್, ಹಳೇ ವಿಮಾನ ನಿಲ್ದಾಣ ರಸ್ತೆ
  4. ಮೈಸೂರು ಬ್ಯಾಂಕ್ ಜಂಕ್ಷನ್, ಕೆ.ಜಿ. ರಸ್ತೆ
  5. ಸುಮ್ಮನಹಳ್ಳಿ ಜಂಕ್ಷನ್, ಮಾಗಡಿ ರಸ್ತೆ
  6. ಮೆಟ್ರೋ (BHEL), ಮೈಸೂರು ರಸ್ತೆ
  7. ಆರ್‌ಟಿಒ ಕಚೇರಿ ಹತ್ತಿರ, 12ನೇ ಮುಖ್ಯ ರಸ್ತೆ (ರಾಜಾಜಿನಗರ)
  8. ಜಾಲಹಳ್ಳಿ ಕ್ರಾಸ್ ಜಂಕ್ಷನ್, ತುಮಕೂರು ರಸ್ತೆ
  9. ಹೆಬ್ಬಾಳ ಜಂಕ್ಷನ್, ಬಳ್ಳಾರಿ ರಸ್ತೆ
  10. ಸಾಗರ್ ಜಂಕ್ಷನ್, ಕೆ.ಜಿ. ರಸ್ತೆ
  11. ಹೊಸ ರಸ್ತೆ ಜಂಕ್ಷನ್, ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆ
  12. ಗೊಟ್ಟಿಗೆರೆ ಜಂಕ್ಷನ್, ಬನ್ನೇರುಘಟ್ಟ ರಸ್ತೆ

ಸವಾರರು ಈ ಕೌಂಟರ್‌ಗಳಲ್ಲದೆ, ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್, ಬಿಟಿಪಿ ಆಸ್ಟ್ರಾಂ (BTP ASTraM) ಆ್ಯಪ್, ಹತ್ತಿರದ ಸಂಚಾರಿ ಪೊಲೀಸ್ ಠಾಣೆ, ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ ಹಾಗೂ ಕರ್ನಾಟಕ ಒನ್ ವೆಬ್‌ಸೈಟ್ ಮತ್ತು ಕೇಂದ್ರಗಳ ಮೂಲಕ ಅರ್ಧದಷ್ಟು ದಂಡ ಪಾವತಿಸಿ ಪ್ರಕರಣಗಳನ್ನು ಖುಲಾಸೆಗೊಳಿಸಿಕೊಳ್ಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:01 am, Fri, 19 June 26

Source link

ಅಕ್ಷಯ್ ಕುಮಾರ್, ಹಣದಾಸೆ ಇರುವ ನಟರೇ? ಇತಿಹಾಸ ಏನು ಹೇಳುತ್ತದೆ? – Kannada News | Akshay Kumar said he is not money minded actor gives examples

ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್​​ನ ಬಲು ಬ್ಯುಸಿ ನಟ. ಸ್ಟಾರ್ ನಟ ಆಗಿರುವವರು ವರ್ಷಕ್ಕೆ ಒಂದು ಸಿನಿಮಾ ಸಹ ಮಾಡುತ್ತಿಲ್ಲ, ಆದರೆ ಅಕ್ಷಯ್ ಕುಮಾರ್ ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಾರೆ. ಸ್ಟಾರ್ ನಟರಾಗಿಯೂ ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಏಕೈಕ ವ್ಯಕ್ತಿ ಅಕ್ಷಯ್ ಕುಮಾರ್. ಆದರೆ ಅಕ್ಷಯ್ ಕುಮಾರ್ ಬಗ್ಗೆ ಚಿತ್ರರಂಗದಲ್ಲಿ ಒಂದು ಋಣಾತ್ಮಕ ಅಭಿಪ್ರಾಯವೂ ಇದೇ. ಅಕ್ಷಯ್ ಕುಮಾರ್ ಕೇವಲ ಹಣದ ಬಗ್ಗೆ ಮಾತ್ರ ಯೋಚಿಸುತ್ತಾರೆ. ಕತೆಯ ಕಾರಣಕ್ಕಾಗಿ ಅಲ್ಲದೆ ಹಣಕ್ಕಾಗಿಯೇ ಅವರು ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಾರೆ. ಶೂಟಿಂಗ್, ಅಡ್ವಾನ್ಸ್ ಇನ್ನಿತರೆ ವಿಷಯಗಳಲ್ಲಿಯೂ ಸಹ ಅವರು ಪ್ರತಿ ಗಂಟೆಗೆ ಕೋಟ್ಯಂತರ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂಬೆಲ್ಲ ಸುದ್ದಿ ಚಾಲ್ತಿಯಲ್ಲಿದೆ.

ಸ್ವತಃ ಅಕ್ಷಯ್ ಕುಮಾರ್ ಸಹ ಕೆಲ ಸಂದರ್ಶನಗಳಲ್ಲಿ ತಮಾಷೆಯಾಗಿ ತಮಗೆ ಹಣ ಮುಖ್ಯ, ಹಣ ಬಾಕಿ ಉಳಿಸಿಕೊಂಡಿದ್ದ ನಿರ್ಮಾಪಕನ ಮನೆಗೆ ನುಗ್ಗಿ ದೊಡ್ಡ ಮ್ಯೂಸಿಕ್ ಸಿಸ್ಟಮ್ ಎತ್ತಿಕೊಂಡು ಬಂದಿದ್ದ ಘಟನೆಗಳನ್ನು ಹೇಳಿಕೊಂಡಿದ್ದರು. ಅಕ್ಷಯ್ ಕುಮಾರ್ ಅವರು ಸೆಟ್​​ಗೆ ಕಾಲಿಡುತ್ತಿದ್ದಂತೆ ಅವರ ಸಂಭಾವನೆಯ ಮೀಟರ್ ಶುರು ಆಗುತ್ತದೆ. ಸಂಜೆ ಐದು ಗಂಟೆ ಆಗುತ್ತಿದ್ದಂತೆ ಮೀಟರ್ ನಿಲ್ಲುತ್ತದೆ ಎಂದೆಲ್ಲ ಅವರ ಸಹ ನಟರು ಸಹ ಕೆಲವು ಬಾರಿ ಹೇಳಿದ್ದಿದೆ. ಇದೆಲ್ಲ ಕಾರಣಗಳಿಂದ ಅಕ್ಷಯ್ ಕುಮಾರ್ ಅವರನ್ನು ಮನಿ ಮೈಂಡೆಂಡ್ ನಟ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು.

ಆದರೆ ಆ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಅದು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ‘ನನ್ನನ್ನು ನೆಗೆಟಿವ್ ಆಗಿ ಬಿಂಬಿಸಲಾಗಿದೆ. ನಾನು ನನ್ನ ವೃತ್ತಿ ಜೀವನದಲ್ಲಿ ನನ್ನ ಸಿನಿಮಾಗಳಿಗೆ ನಾನೇ ಹಣ ಕೊಟ್ಟು ಸಿನಿಮಾ ಪೂರ್ತಿಗೊಳಿಸಲು ಸಹಾಯ ಮಾಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದು ದಶಕಗಳಾಯ್ತು. ನನ್ನ ಒಂದೇ ಒಂದು ಸಿನಿಮಾ ಸಹ ಶುರುವಾದ ಬಳಿಕ ನಿಂತಿದ್ದೇ ಇಲ್ಲ. ರಿಲೀಸ್ ಮಾಡಲು ನಿರ್ಮಾಪಕರ ಬಳಿ ಹಣ ಇಲ್ಲ ಎಂದಾಗ ನಾನೇ ಹಣ ಕೊಟ್ಟು ರಿಲೀಸ್ ಮಾಡಿಸಿದ್ದೀನಿ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ:1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಮುಂದುವರೆದು ಮಾತನಾಡಿ, ‘ನಾನು ಈ ವರೆಗೆ ಹಲವಾರು ಸಿನಿಮಾ ನಿರ್ಮಾಪಕರುಗಳ ಜೊತೆಗೆ ಕೆಲಸ ಮಾಡಿದ್ದೀನಿ. ನನ್ನ ಸಿನಿಮಾಗಳು ಸೋತಾಗ ಖುದ್ದು ನಾನೇ ನಿರ್ಮಾಪಕರಿಗೆ ಕರೆ ಮಾಡಿ ಮಾತನಾಡುತ್ತೇನೆ. ಹೆದರಬೇಡಿ, ಮತ್ತೆ ಸಿನಿಮಾ ಮಾಡೋಣ ಎನ್ನುತ್ತೇನೆ ಮಾತ್ರವಲ್ಲದೆ ಸಿನಿಮಾ ಫ್ಲಾಪ್ ಆದರೆ ಬಾಕಿ ಹಣ ಕೊಡಬೇಡಿ ಎಂದು ಹೇಳುವ ಏಕೈಕ ನಟ ನಾನೇ. ನೀವು ಯಾವ ನಿರ್ಮಾಪಕರನ್ನಾದರೂ ಕೇಳಬಹುದು’ ಎಂದು ಅಕ್ಷಯ್ ಕುಮಾರ್ ಸವಾಲು ಹಾಕಿದ್ದಾರೆ.

ಅಕ್ಷಯ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಭೂತ್ ಬಂಗ್ಲ’ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇದೀಗ ‘ವೆಲ್​​ಕಮ್ ಟು ಜಂಗಲ್’ ಸಿನಿಮಾ ಬಿಡುಗಡೆ ಹಂತದಲ್ಲಿದೆ. ‘ಹೈವಾನ್’ ಹೆಸರಿನ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ಗೋಲ್​​ಮಾಲ್ 5’ ಸಿನಿಮಾನಲ್ಲಿ ನಟಿಸಲಿದ್ದಾರೆ. ಮಹಾರಾಜ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಜೀಮ್ ಬಾಜ್ಮಿ ನಿರ್ದೇಶನದ ಹೊಸ ಸಿನಿಮಾನಲ್ಲಿಯೂ ಅಕ್ಷಯ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 3,550 ರೂ ಇಳಿಕೆ; ಬೆಳ್ಳಿಯೂ ಅಗ್ಗ – Kannada News | Gold Price Today on 19th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 19: ಚಿನ್ನದ ಬೆಲೆ ಶುಕ್ರವಾರ ಭರ್ಜರಿ ಇಳಿಕೆ ಕಂಡಿದೆ. ಹತ್ತು ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ (Gold Rates) 3,550 ರೂನಷ್ಟು ಕುಸಿತ ಆಗಿದೆ. ಅಪರಂಜಿ ಚಿನ್ನದ ಬೆಲೆ 15,000 ರೂಗಿಂತ ಕೆಳಗೆ ಇಳಿದಿದೆ. 18 ಕ್ಯಾರಟ್ ಚಿನ್ನದ ಬೆಲೆ 11,000 ರೂ ಗಡಿಯೊಳಗೆ ಬಂದಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ತಗ್ಗಿದೆ. ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಕುಸಿದಿದೆ. ನಿನ್ನೆ 5 ರೂ ಇಳಿದಿದ್ದ ಇದರ ಬೆಲೆ ಇವತ್ತು 10 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,33,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,45,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,33,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,586 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,370 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,939 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,586 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,370 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,370 ರೂ
  • ಚೆನ್ನೈ: 13,570 ರೂ
  • ಮುಂಬೈ: 13,370 ರೂ
  • ದೆಹಲಿ: 13,385 ರೂ
  • ಕೋಲ್ಕತಾ: 13,370 ರೂ
  • ಕೇರಳ: 13,370 ರೂ
  • ಅಹ್ಮದಾಬಾದ್: 13,375 ರೂ
  • ಜೈಪುರ್: 13,385 ರೂ
  • ಲಕ್ನೋ: 13,385 ರೂ
  • ಭುವನೇಶ್ವರ್: 13,370 ರೂ

ಇದನ್ನೂ ಓದಿ: ಕ್ಯಾರಿ ಬ್ಯಾಗ್​ಗೆ ₹10 ವಸೂಲಿ; ಶೂ ಕಂಪನಿಗೆ ಬಿತ್ತು ₹8,000 ದಂಡ; ಇದು ವ್ಯಾಪಾರಿಗಳು, ಗ್ರಾಹಕರಿಗೆ ಕಣ್ತೆರೆಸುವ ಪ್ರಕರಣ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 568 ರಿಂಗಿಟ್ (12,954 ರುಪಾಯಿ)
  • ದುಬೈ: 509.25 ಡಿರಾಮ್ (13,080 ರುಪಾಯಿ)
  • ಅಮೆರಿಕ: 140 ಡಾಲರ್ (13,206 ರುಪಾಯಿ)
  • ಸಿಂಗಾಪುರ: 184.80 ಸಿಂಗಾಪುರ್ ಡಾಲರ್ (13,488 ರುಪಾಯಿ)
  • ಕತಾರ್: 513 ಕತಾರಿ ರಿಯಾಲ್ (13,275 ರೂ)
  • ಸೌದಿ ಅರೇಬಿಯಾ: 527 ಸೌದಿ ರಿಯಾಲ್ (13,247 ರುಪಾಯಿ)
  • ಓಮನ್: 53.55 ಒಮಾನಿ ರಿಯಾಲ್ (13,121 ರುಪಾಯಿ)
  • ಕುವೇತ್: 43.49 ಕುವೇತಿ ದಿನಾರ್ (13,354 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೀಟ್ ಮರು ಪರೀಕ್ಷೆಗೂ ಮುನ್ನ ‘ಟೆಲಿಗ್ರಾಮ್’ ನಿಷೇಧ ಮುಂದುವರಿಕೆ: ಕೇಂದ್ರದ ನಿರ್ಧಾರ ಎತ್ತಿಹಿಡಿದ ದೆಹಲಿ ಹೈಕೋರ್ಟ್ – Kannada News | NEET Re Exam 2026: Delhi HC Upholds Telegram Ban to Prevent Paper Leaks

ನವದೆಹಲಿ, ಜೂನ್ 19: ಜೂನ್ 21 ರಂದು ದೇಶಾದ್ಯಂತ ನಡೆಯಲಿರುವ ನೀಟ್-ಯುಜಿ (NEET-UG 2026) ಮರು ಪರೀಕ್ಷೆಗೆ ಕೇವಲ ಐದು ದಿನಗಳ ಮುನ್ನ, ಜನಪ್ರಿಯ ಆ್ಯಪ್ ಆದ ‘ಟೆಲಿಗ್ರಾಮ್’ (Telegram)ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಜೂನ್ 22 ರವರೆಗೆ ಟೆಲಿಗ್ರಾಮ್ ಆ್ಯಪ್ ಅನ್ನು ದೇಶದಲ್ಲಿ ನಿರ್ಬಂಧಿಸಿರುವ ಕೇಂದ್ರದ ಆದೇಶವನ್ನು ಪ್ರಶ್ನಿಸಿ ಟೆಲಿಗ್ರಾಮ್ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಹೈಕೋರ್ಟ್ ಟೆಲಿಗ್ರಾಮ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಬ್ರೇಕ್: ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಪರೀಕ್ಷಾ ಸಾಮಗ್ರಿಗಳ ಸಂಭಾವ್ಯ ಸೋರಿಕೆ ಅಥವಾ ಸಂದೇಶ ವೇದಿಕೆಯ ದುರುಪಯೋಗವನ್ನು ತಡೆಗಟ್ಟಲು ಈ ತಾತ್ಕಾಲಿಕ ನಿಷೇಧದ ಕ್ರಮವು ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಮತ್ತಷ್ಟು ಓದಿ: NEET UG Re Exam 2026 Date: ಜೂನ್ 21 ನೀಟ್ ಯುಜಿ ಮರು ಪರೀಕ್ಷೆ, ವಿದ್ಯಾರ್ಥಿಗಳಿಗೆ 15 ನಿಮಿಷ ಹೆಚ್ಚುವರಿ ಸಮಯ

ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.

ಮುಂದಿನ ನಡೆ ಏನು?
ಜೂನ್ 22 ರವರೆಗೆ ನಿಷೇಧ: ಈ ತಾತ್ಕಾಲಿಕ ನಿಷೇಧದ ಕಾನೂನುಬದ್ಧತೆ ಮತ್ತು ಅಗತ್ಯತೆಯ ಕುರಿತು ಉಭಯ ಪಕ್ಷಗಳ ಸುದೀರ್ಘ ವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದೆ. ಇದರ ಅನ್ವಯ ನೀಟ್ ಮರು ಪರೀಕ್ಷೆ ಮುಗಿಯುವವರೆಗೆ ಅಂದರೆ ಜೂನ್ 22 ರವರೆಗೆ ದೇಶದಲ್ಲಿ ಟೆಲಿಗ್ರಾಮ್ ಸೇವೆಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನೀಟ್ ಪರೀಕ್ಷೆಯ ಭದ್ರತೆಗಾಗಿ ಸರ್ಕಾರ ಕೈಗೊಂಡಿರುವ ಈ ಕಠಿಣ ಹೆಜ್ಜೆಗೆ ಈಗ ಕಾನೂನಿನ ಬಲ ಸಿಕ್ಕಂತಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ – Kannada News | The elephant imitated its owner who was limping, video goes viral

ಪ್ರಾಣಿಗಳ (Animals) ಪ್ರೀತಿ ನಿಷ್ಕಲ್ಮಷವಾದದ್ದು. ತಮ್ಮನ್ನು ಸಾಕಿದ ಮಾಲೀಕರಿಗೆ ಪ್ರೀತಿಯನ್ನು ತೋರಿಸುತ್ತವೆ. ಆಟ ತುಂಟಾಟಗಳ ಜತೆಗೆ ತನ್ನನ್ನು ಕಾಳಜಿ ವಹಿಸುವವರ ಜತೆಗೆ ಮಕ್ಕಳಾಗಿ ಬಿಡುತ್ತವೆ. ಈ ದೃಶ್ಯ ನೋಡಿದ್ರೆ ನಿಮಗೂ ಹಾಗೆ ಅನಿಸುವುದು ಸಹಜ. ಆನೆಯೊಂದು (elephant) ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಿಸಿದೆ. ಗಜರಾಜನ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಇಂಡಿಯಾ ಟ್ರೆಂಡ್ಸ್ (India Trends) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆನೆಯೊಂದು ಮಾಲಕಿಯನ್ನು ಅನುಕರಿಸುವುದನ್ನು ಕಾಣಬಹುದು. ಈ ಕ್ಲಿಪಿಂಗ್ ನಲ್ಲಿ ಮಾಲಕಿ ಕುಂಟುತ್ತಾ ನಡೆಯುತ್ತಿದ್ದರೆ ಆನೆಯೂ ಆಕೆಯನ್ನು ಹಿಂಬಾಲಿಸುತ್ತಿದೆ. ಈ ವಿಡಿಯೋದ ಕೊನೆಗೆ ಮಾಲಕಿ ನೆಲದ ಮೇಲೆ ಮೆಲ್ಲನೆ ಕುಳಿತುಕೊಂಡಿದ್ದು ಆನೆಯೂ ಆಕೆಯಂತೆ ಮಾಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿನಗೆ ಬಿಸ್ಕೆಟ್ ಬೇಕಾ, ಇರು ತಂದು ಕೊಡ್ತೇನೆ: ಶ್ವಾನದ ಜತೆಗೆ ಪುಟಾಣಿಯ ಕ್ಯೂಟ್‌ ಸಂಭಾಷಣೆ

ಈ ವಿಡಿಯೋ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮತ್ತೆ ಮತ್ತೆ ನೋಡಬೇಕಾದ ದೃಶ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಸ್ವೀಟ್ ಎಂದಿದ್ದಾರೆ. ಮತ್ತೊಬ್ಬರು, ಆಕ್ಟಿಂಗ್ ಕಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Trinetra Ganesh Temple: ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪದ ಗಣೇಶ; ಈ ದೇವಸ್ಥಾನ ಎಲ್ಲಿದೆ ಗೊತ್ತಾ? – Kannada News | Ranthambore Trinetra Ganesh Temple: India’s Unique Three Eyed Ganesha and Family Shrine

ರಾಜಸ್ಥಾನದ ರಣಥಂಬೋರ್‌ನಲ್ಲಿರುವ ‘ತ್ರಿನೇತ್ರ ಗಣಪತಿ’Image Credit source: Pinterest

ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯವಿರಲಿ, ಮೊದಲು ಪೂಜಿಸಲ್ಪಡುವುದು ವಿಘ್ನನಿವಾರಕ ಗಣೇಶ. ಸಾಮಾನ್ಯವಾಗಿ ದೇಶದ ಬಹುತೇಕ ದೇವಾಲಯಗಳಲ್ಲಿ ಗಣಪತಿಯನ್ನು ಒಬ್ಬಂಟಿಯಾಗಿ ಅಥವಾ ಮೂಷಿಕ ವಾಹನದೊಂದಿಗೆ ನೋಡಿರುತ್ತೀರಿ. ಆದರೆ ರಾಜಸ್ಥಾನದ ಪುರಾತನ ಹಾಗೂ ಐತಿಹಾಸಿಕ ಕೋಟೆಯೊಂದರಲ್ಲಿ ಗಣೇಶನು ತನ್ನ ಇಡೀ ಕುಟುಂಬದೊಂದಿಗೆ ನೆಲೆಸಿದ್ದಾನೆ. ಅಷ್ಟೇ ಅಲ್ಲದೆ, ಇಲ್ಲಿ ಭಕ್ತರು ಮೂರು ಕಣ್ಣುಗಳನ್ನು ಹೊಂದಿರುವ ವಿನಾಯಕನ ಅತ್ಯಂತ ಅಪರೂಪದ ರೂಪವನ್ನು ಕಣ್ತುಂಬಿಕೊಳ್ಳಬಹುದು. ಈ ಭವ್ಯವಾದ ಧಾರ್ಮಿಕ ಕೇಂದ್ರವೇ ರಣಥಂಬೋರ್‌ನ ಪ್ರಸಿದ್ಧ ‘ತ್ರಿನೇತ್ರ ಗಣಪತಿ ದೇವಾಲಯ’.

ರಣಥಂಬೋರ್ ಕೋಟೆಯ ಒಡಲಲ್ಲಿರುವ ಆಧ್ಯಾತ್ಮಿಕ ವೈಭವ:

ಈ ಅದ್ಭುತ ದೇವಾಲಯವು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಐತಿಹಾಸಿಕವಾಗಿ ಪ್ರಸಿದ್ಧವಾದ ರಣಥಂಬೋರ್ ಕೋಟೆಯ ಆವರಣದಲ್ಲಿದೆ. ಬೆಟ್ಟದ ಮೇಲಿರುವ ಈ ದೇವಸ್ಥಾನವು ದೇಶಾದ್ಯಂತದ ಪ್ರವಾಸಿಗರನ್ನು ಮತ್ತು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಸುತ್ತಲೂ ಹರಡಿರುವ ಪ್ರಕೃತಿ ಸೌಂದರ್ಯ ಮತ್ತು ಕೋಟೆಯ ಗಾಂಭೀರ್ಯದ ನಡುವೆ ನೆಲೆಸಿರುವ ಈ ಗಣಪತಿ ಸನ್ನಿಧಿ, ಆಧ್ಯಾತ್ಮಿಕತೆ ಮತ್ತು ಇತಿಹಾಸದ ಅಪೂರ್ವ ಸಂಗಮವಾಗಿ ಕಂಗೊಳಿಸುತ್ತಿದೆ.

ರಾಜ ಹಮೀರ್ ದೇವ್ ಮತ್ತು ಖಿಲ್ಜಿ ಯುದ್ಧದ ಕಥೆ:

ಈ ದೇವಾಲಯದ ನಿರ್ಮಾಣದ ಹಿಂದೆ 13ನೇ ಶತಮಾನದ ಒಂದು ಕುತೂಹಲಕಾರಿ ಇತಿಹಾಸವಿದೆ. ಆಗ ರಣಥಂಬೋರ್ ಅನ್ನು ಆಳುತ್ತಿದ್ದ ರಾಜ ಹಮೀರ್ ದೇವ್ ಗಣೇಶನ ಪರಮ ಭಕ್ತನಾಗಿದ್ದನು. ಆ ಸಮಯದಲ್ಲಿ ದೆಹಲಿಯ ಸುಲ್ತಾನ ಅಲಾವುದ್ದೀನ್ ಖಿಲ್ಜಿ ಈ ಕೋಟೆಯ ಮೇಲೆ ದಾಳಿ ಮಾಡಿದ್ದರಿಂದ ಸುದೀರ್ಘ ಯುದ್ಧ ನಡೆಯಿತು. ಯುದ್ಧ ಮುಂದುವರೆದಂತೆ ಕೋಟೆಯಲ್ಲಿದ್ದ ಧಾನ್ಯ ಮತ್ತು ಅಗತ್ಯ ಸಾಮಗ್ರಿಗಳ ದಾಸ್ತಾನು ಖಾಲಿಯಾಗತೊಡಗಿತು. ಇದರಿಂದ ಚಿಂತಿತನಾದ ರಾಜನು ಗಣೇಶನಿಗೆ ಶರಣಾಗಿ ಪ್ರಾರ್ಥಿಸಿದಾಗ, ಅರಸನ ಕನಸಿನಲ್ಲಿ ಬಂದ ವಿಘ್ನೇಶ್ವರನು “ಚಿಂತಿಸಬೇಡ, ಎಲ್ಲವೂ ಸರಿಯಾಗುತ್ತದೆ” ಎಂದು ಅಭಯ ನೀಡಿದನಂತೆ.

ಗೋಡೆಯ ಮೇಲೆ ಪ್ರತ್ಯಕ್ಷನಾದ ಮೂರು ಕಣ್ಣುಗಳ ಗಣಪತಿ:

ಸ್ಥಳೀಯ ನಂಬಿಕೆಗಳ ಪ್ರಕಾರ, ಮರುದಿನ ಮುಂಜಾನೆ ಕೋಟೆಯ ಗೋಡೆಯ ಮೇಲೆ ಮೂರು ಕಣ್ಣುಗಳಿರುವ ಗಣೇಶನ ಆಕೃತಿ ಪವಾಡ ಸದೃಶವಾಗಿ ಮೂಡಿಬಂದಿತ್ತು. ಅದರ ಬೆನ್ನಲ್ಲೇ ಯುದ್ಧದ ಪರಿಸ್ಥಿತಿಯೂ ಬದಲಾಗಿ ಶತ್ರು ಪಡೆಗಳು ಹಿಮ್ಮೆಟ್ಟಿದವು. ಅಚ್ಚರಿಯೆಂದರೆ ಖಾಲಿಯಾಗುತ್ತಿದ್ದ ಕೋಟೆಯ ಧಾನ್ಯದ ಉಗ್ರಾಣಗಳು ಕೂಡ ಮತ್ತೆ ಭರ್ತಿಯಾಗಿದ್ದವು. ಈ ದೈವಿಕ ಮಹಿಮೆಗೆ ಕೃತಜ್ಞತೆ ಸಲ್ಲಿಸಲು ರಾಜ ಹಮೀರ್ ದೇವ್ ಗಣೇಶನು ಪ್ರತ್ಯಕ್ಷನಾದ ಅದೇ ಜಾಗದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು ಎಂದು ಇತಿಹಾಸ ಹೇಳುತ್ತದೆ.

ಇಡೀ ಕುಟುಂಬದೊಂದಿಗೆ ನೆಲೆಸಿರುವ ವಿನಾಯಕನ ವಿಶೇಷತೆ:

ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪವನ್ನು ನಾವು ಇಲ್ಲಿ ನೋಡಬಹುದು. ಇಲ್ಲಿ ಗಣೇಶನು ಕೇವಲ ತ್ರಿನೇತ್ರಧಾರಿಯಾಗಿ ಮಾತ್ರವಲ್ಲದೆ, ತನ್ನ ಇಡೀ ಕುಟುಂಬದೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಾನೆ. ವಿಘ್ನರಾಜನ ಪಕ್ಕದಲ್ಲೇ ಆತನ ಪತ್ನಿಯರಾದ ಸಿದ್ಧಿ ಮತ್ತು ಬುದ್ಧಿ ದೇವತೆಗಳು ಕುಳಿತಿದ್ದರೆ, ಅವರ ಮುದ್ದಿನ ಪುತ್ರರಾದ ಶುಭ್ ಮತ್ತು ಲಾಭ್ ಕೂಡ ಜೊತೆಯಲ್ಲಿದ್ದಾರೆ. ಇಡೀ ಪರಿವಾರದೊಂದಿಗೆ ನೆಲೆಸಿರುವ ಈ ಗಣಪತಿಯನ್ನು ದರ್ಶನ ಮಾಡುವುದರಿಂದ ಕೌಟುಂಬಿಕ ಸಂತೋಷ, ಸಂಪತ್ತು, ಬುದ್ಧಿಶಕ್ತಿ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ಭಕ್ತರ ದೃಢ ನಂಬಿಕೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮದುವೆಯ ಮೊದಲ ಆಮಂತ್ರಣ ಪತ್ರಿಕೆ ನೇರ ಗಣಪತಿಗೆ:

ಈ ದೇವಾಲಯದಲ್ಲಿ ಒಂದು ಅತ್ಯಂತ ವಿಶಿಷ್ಟ ಮತ್ತು ಸುಂದರವಾದ ಸಂಪ್ರದಾಯ ರೂಢಿಯಲ್ಲಿದೆ. ದೇಶದ ಯಾವುದೇ ಮೂಲೆಯಲ್ಲಿ ಹಿಂದೂ ಕುಟುಂಬಗಳಲ್ಲಿ ಮದುವೆ ಅಥವಾ ಯಾವುದೇ ಶುಭ ಕಾರ್ಯ ನಿಶ್ಚಯವಾದರೂ, ಭಕ್ತರು ತಮ್ಮ ಮೊದಲ ಆಮಂತ್ರಣ ಪತ್ರಿಕೆಯನ್ನು (ಲಗ್ನ ಪತ್ರಿಕೆ) ಈ ತ್ರಿನೇತ್ರ ಗಣೇಶನ ವಿಳಾಸಕ್ಕೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸುತ್ತಾರೆ. ತಮ್ಮ ಮನೆಗೆ ಬಂದು ಆಶೀರ್ವದಿಸಲಿ ಎಂದು ಭಕ್ತರು ಕಳುಹಿಸುವ ಸಾವಿರಾರು ಮದುವೆ ಪತ್ರಿಕೆಗಳು ಪ್ರತಿದಿನ ಈ ದೇವಾಲಯಕ್ಕೆ ಬಂದು ತಲುಪುತ್ತವೆ.

ರಣಥಂಬೋರ್ ದೇವಾಲಯ ತಲುಪುವುದು ಹೇಗೆ?

ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಲು ಬಯಸುವವರಿಗೆ ಸವಾಯಿ ಮಾಧೋಪುರ್ ಜಂಕ್ಷನ್ ಅತ್ಯಂತ ಹತ್ತಿರದ ರೈಲು ನಿಲ್ದಾಣವಾಗಿದೆ. ಭಾರತದ ಪ್ರಮುಖ ನಗರಗಳಿಂದ ಇಲ್ಲಿಗೆ ರೈಲು ಸೌಲಭ್ಯವಿದೆ. ರೈಲು ನಿಲ್ದಾಣದಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ರಣಥಂಬೋರ್ ಕೋಟೆಗೆ ತಲುಪಲು ಖಾಸಗಿ ವಾಹನಗಳು, ಟ್ಯಾಕ್ಸಿಗಳು ಮತ್ತು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಅತ್ಯಂತ ವಿಶೇಷ ಮತ್ತು ಪವಿತ್ರ ಆಧ್ಯಾತ್ಮಿಕ ತಾಣವಿದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link