ಗುಜರಾತ್‌ನಲ್ಲಿ ಎಬೋಲಾ ಭೀತಿ; ಕಾಂಗೋದಿಂದ ಬಂದ ವ್ಯಕ್ತಿ ಅಹಮದಾಬಾದ್‌ನಲ್ಲಿ ಕ್ವಾರಂಟೈನ್
ಅಹಮದಾಬಾದ್, ಮೇ 27: ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ ಎಬೋಲಾ (Ebola) ವೈರಸ್ ಭಾರತಕ್ಕೂ ಎಂಟ್ರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ ಗುಜರಾತ್‌ಗೆ ಮರಳಿದ್ದ 37 ವರ್ಷದ ಬ್ಯಾಂಕರ್ ಒಬ್ಬರಲ್ಲಿ ಎಬೋಲಾ ರೋಗದ ಲಕ್ಷಣಗಳು ಕಂಡುಬಂದಿವೆ. ಇದು ಗುಜರಾತ್ ರಾಜ್ಯದಲ್ಲೇ ವರದಿಯಾಗಿರುವ ಮೊದಲ ಶಂಕಿತ ಪ್ರಕರಣವಾಗಿದೆ. ಈ ವ್ಯಕ್ತಿ ಕಾಂಗೋದಿಂದ ಮುಂಬೈ ಮಾರ್ಗವಾಗಿ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ವಡೋದರಾದಲ್ಲಿದ್ದಾಗ ಅವರಿಗೆ ತೀವ್ರ ಜ್ವರ ಸೇರಿದಂತೆ ಎಬೋಲಾ ಮಾದರಿಯ ಲಕ್ಷಣಗಳು ಕಾಣಿಸಿಕೊಂಡಿವೆ. ತಕ್ಷಣವೇ…