ಬಕ್ರೀದ್ ಹಬ್ಬ: ಕುರಿ, ಮೇಕೆಗಳ ವ್ಯಾಪಾರ ಜೋರು; ಮಾರುಕಟ್ಟೆಯಲ್ಲಿ ಅಮೀನಗಡ ಟಗರುಗಳದ್ದೇ ಹವಾ!
ಬೆಂಗಳೂರು, ಮೇ 27: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್‌ಗೆ (Bakrid) ಕ್ಷಣಗಣನೆ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕುರಿ ಮತ್ತು ಮೇಕೆಗಳ ವ್ಯಾಪಾರ ವಹಿವಾಟು ಭರ್ಜರಿಯಾಗಿ ಕಳೆಗಟ್ಟಿದೆ. ಬೆಂಗಳೂರಿನ (bangaluru) ಐತಿಹಾಸಿಕ ಚಾಮರಾಜಪೇಟೆ ಈದ್ಗಾ ಮೈದಾನದ ಮುಖ್ಯರಸ್ತೆಗಳು ಇದೀಗ ಸಂಪೂರ್ಣವಾಗಿ ಕುರಿ ಸಂತೆಯಾಗಿ ಬದಲಾಗಿದೆ. ಹಬ್ಬಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಇರುವುದರಿಂದ, ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುರಿ ಮತ್ತು ಮೇಕೆಗಳನ್ನು ಮಾರಾಟಕ್ಕೆ ತರಲಾಗಿದೆ. ವಿಶೇಷವಾಗಿ ಈ…