Trinetra Ganesh Temple: ದೇಶದ ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ರೂಪದ ಗಣೇಶ; ಈ ದೇವಸ್ಥಾನ ಎಲ್ಲಿದೆ ಗೊತ್ತಾ? – Kannada News | Ranthambore Trinetra Ganesh Temple: India’s Unique Three Eyed Ganesha and Family Shrine
ರಾಜಸ್ಥಾನದ ರಣಥಂಬೋರ್‌ನಲ್ಲಿರುವ ‘ತ್ರಿನೇತ್ರ ಗಣಪತಿ’Image Credit source: Pinterest ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯವಿರಲಿ, ಮೊದಲು ಪೂಜಿಸಲ್ಪಡುವುದು ವಿಘ್ನನಿವಾರಕ ಗಣೇಶ. ಸಾಮಾನ್ಯವಾಗಿ ದೇಶದ ಬಹುತೇಕ ದೇವಾಲಯಗಳಲ್ಲಿ ಗಣಪತಿಯನ್ನು ಒಬ್ಬಂಟಿಯಾಗಿ ಅಥವಾ ಮೂಷಿಕ ವಾಹನದೊಂದಿಗೆ ನೋಡಿರುತ್ತೀರಿ. ಆದರೆ ರಾಜಸ್ಥಾನದ ಪುರಾತನ ಹಾಗೂ ಐತಿಹಾಸಿಕ ಕೋಟೆಯೊಂದರಲ್ಲಿ ಗಣೇಶನು ತನ್ನ ಇಡೀ ಕುಟುಂಬದೊಂದಿಗೆ ನೆಲೆಸಿದ್ದಾನೆ. ಅಷ್ಟೇ ಅಲ್ಲದೆ, ಇಲ್ಲಿ ಭಕ್ತರು ಮೂರು ಕಣ್ಣುಗಳನ್ನು ಹೊಂದಿರುವ ವಿನಾಯಕನ ಅತ್ಯಂತ ಅಪರೂಪದ ರೂಪವನ್ನು ಕಣ್ತುಂಬಿಕೊಳ್ಳಬಹುದು. ಈ ಭವ್ಯವಾದ ಧಾರ್ಮಿಕ ಕೇಂದ್ರವೇ ರಣಥಂಬೋರ್‌ನ ಪ್ರಸಿದ್ಧ…