ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?
ನವದೆಹಲಿ, ಮಾರ್ಚ್ 20: ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಿರುವ ಬೆನ್ನಲ್ಲೇ ಇಂಡಿಯನ್ ಆಯಿಲ್ ಸಂಸ್ಥೆಯು ಕೈಗಾರಿಕಾ ಡೀಸಲ್ ಬೆಲೆಯನ್ನು (Industrial Diesel prices) ಹೆಚ್ಚಿಸಿದೆ. ಒಂದು ಲೀಟರ್ಗೆ 87.57 ರೂ ಇದ್ದ ಡೀಸಲ್ ಬೆಲೆ 109.59 ರೂಗೆ ಏರಿಸಲಾಗಿದೆ. ಬೆಲೆಯಲ್ಲಿ ಬರೋಬ್ಬರಿ ಶೇ. 25ರಷ್ಟು ಹೆಚ್ಚಳ ಆಗಿದೆ. ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಮತ್ತು ಅನಿಲಗಳ ಹಡಗುಗಳ ಸಾಗಣೆಗೆ ನಿರ್ಬಂಧ ಇರುವುದರಿಂದ ಜಾಗತಿಕವಾಗಿ ಇವುಗಳ ಸರಬರಾಜು…