All posts by nagaraj11081993

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 21ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 21ರ ದಿನಭವಿಷ್ಯ

ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲೆ ಪಕ್ಷಿಗಳಿಗೆ ನೀರು ಮತ್ತು ಧಾನ್ಯವನ್ನು ಇಡಿ. ಇದು ವೃತ್ತಿಜೀವನದ ಅಡೆತಡೆಗಳನ್ನು ದೂರ ಮಾಡುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಏನು ಅಂದುಕೊಂಡಿದ್ದರೂ ಚರ್ಚಿಸಿದ್ದರೂ ಅದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ನಿಮಗೆ ಸಮಸ್ಯೆ ಮಾಡುತ್ತಿರುವವರು ಯಾರು, ವ್ಯವಹಾರಗಳಲ್ಲಿ ಅಡೆತಡೆಗಳನ್ನು ಒಡ್ಡುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂದು ಆಲೋಚಿಸುವುದಕ್ಕೇ ಅಂತ ಬಹಳ ಸಮಯ ಹೋಗಿಬಿಡುತ್ತದೆ. ನಿಮ್ಮ ಜತೆಗಿರುವವರು ಹಾಗೂ ಆಪ್ತರಾಗಿರುವವರು, ಕಡೆಗೆ ಕುಟುಂಬ ಸದಸ್ಯರ ಬಗ್ಗೆಯೇ ನಾನಾ ರೀತಿಯಲ್ಲಿ ಆಲೋಚನೆಗಳು ಮೂಡಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಬರುವಂಥ ಕೆಲಸಗಳು, ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡುವುದು ಉತ್ತಮ. ಒಮ್ಮೆ ಹೂಂ ಎಂದು ಒಪ್ಪಿಕೊಂಡ ಮೇಲೆ ಹಲವು ಬದಲಾವಣೆಗಳನ್ನು ಹೇಳುವ ಮೂಲಕ ಒತ್ತಡವನ್ನು ಹೇರಬಹುದು. ದಿನಂಪ್ರತಿ ನೋಡುವಂಥ ಹಾಗೂ ವ್ಯವಹರಿಸುವಂಥ ವ್ಯಕ್ತಿಗಳಲ್ಲೇ ದೊಡ್ಡ ಬದಲಾವಣೆಗಳನ್ನು ನೋಡುವಂತಾಗುತ್ತದೆ. ಹಣಕಾಸಿನ ವ್ಯವಹಾರ ಎಂದಾದರೆ ಮೈ ತುಂಬ ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಯಾವುದನ್ನು ಹೊಂದಾಣಿಕೆ ಮಾಡಬೇಕಿರುತ್ತದೆ ಅದು ಸಾಧ್ಯವಾಗಲಿದೆ ಎಂಬುದು ನಿಮಗೆ ಈ ದಿನ ಬಹಳ ಸಮಾಧಾನ ದೊರೆಯುವಂಥ ದಿನವಾಗಿರುತ್ತದೆ. ಒಂದು ವೇಳೆ ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನಿಮಗೆ ತೃಪ್ತಿ ದೊರೆಯುವಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಬಹುದು. ಇತರರು ಬಹಳ ಕಷ್ಟಪಟ್ಟು ಮಾಡುತ್ತಿರುವ ಅಥವಾ ಮಾಡುವಂಥ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 21ರ ದಿನಭವಿಷ್ಯ

ಮನೆಯಲ್ಲಿರುವ ತುಳಸಿ ಅಥವಾ ಇತರ ಹಸಿರು ಗಿಡಗಳಿಗೆ ನೀರು ಹಾಕುವುದರಿಂದ ನಿಮ್ಮ ಮಾತಿನ ಬಲ ಹೆಚ್ಚಿ ಸಂವಹನ ಉತ್ತಮವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸೋಷಿಯಲ್ ಕಾಂಟ್ಯಾಕ್ಟ್ ಬಹಳ ಮುಖ್ಯ ಎಂದು ಬಲವಾಗಿ ಅನಿಸಲಿದೆ. ನಿಮಗೆ ಬಹಳ ಇಷ್ಟವಾಗುವಂಥ ವ್ಯಕ್ತಿಯ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಕಿರು ಪ್ರವಾಸಕ್ಕಾದರೂ ತೆರಳುವಂಥ ಯೋಗ ಇದೆ. ಇಲ್ಲದಿದ್ದಲ್ಲಿ ಹೋಟೆಲ್, ರೆಸ್ಟೋರೆಂಟ್ ಇಂಥ ಕಡೆಗಳಲ್ಲಿಯಾದರೂ ಒಟ್ಟಿಗೆ ಸಮಯ ಕಳೆಯುವ ಯೋಗ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಈಗಾಗಲೇ ಪ್ರೀತಿ- ಪ್ರೇಮದಲ್ಲಿ ಒಡುಕು ಮೂಡಿ, ಸಣ್ಣ- ಪುಟ್ಟ ಮನಸ್ತಾಪ- ಅಭಿಪ್ರಾಯ ಭೇದಗಳು ಏನಾದರೂ ಕಾಣಿಸಿಕೊಂಡಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ನೀವಾಗಿಯೇ ತೆಗೆದುಕೊಂಡಂಥ ಜವಾಬ್ದಾರಿಗಳನ್ನು ತುಂಬ ಚೆನ್ನಾಗಿ ನಿರ್ವಹಣೆ ಮಾಡಲಿದ್ದೀರಿ. ನಿಮ್ಮೆದುರಿಗೆ ನಿಂತು ವ್ಯವಹಾರದ ವಿಚಾರಕ್ಕೆ ದಾರಿ ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂಬಷ್ಟು ಕಟ್ಟುನಿಟ್ಟಾಗಿ ನೀವು ನಡೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸಂಕೋಚ ಪಟ್ಟು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದೆನಿಸಲಿದೆ. ನಿಮ್ಮ ಎಲ್ಲ ವಿಚಾರಗಳಿಗೆ, ಸಂಗತಿಗಳಿಗೆ ಮೂಗು ತೂರಿಸಿಕೊಂಡು ಬರುತ್ತಿದ್ದ ಅಥವಾ ಬರುತ್ತಿರುವ ವ್ಯಕ್ತಿಯೊಬ್ಬರಿಗೆ ಮುಲಾಜಿಲ್ಲದೆ ಎಚ್ಚರಿಕೆಯನ್ನು ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಯಾವುದೋ ಸಂಕೋಚದಿಂದ ಹೇಳದೇ ಉಳಿದ ಸಂಗತಿಗಳನ್ನು ಏಕಾಏಕಿ ಹೇಳಿ ಮುಗಿಸಲಿದ್ದೀರಿ. ಕಫ- ಶೀತ ಮೊದಲಾದ ಸಮಸ್ಯೆಗಳು ಕಾಡಬಹುದು, ಜಾಗ್ರತೆ.

ಲೇಖನ- ಸ್ವಾತಿ ಎನ್.ಕೆ.

Source link

ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್

ಶಿವಪುರ, ಮಾರ್ಚ್ 20: ಮಧ್ಯಪ್ರದೇಶದ ಶಿವಪುರಿ ನಗರದ ಬೀದಿಗಳಲ್ಲಿ ಮೊಸಳೆಗಳು ಓಡಾಡುವುದು ಹೊಸದೇನಲ್ಲ. ಆದರೆ ಯಾರೂ ಅವುಗಳ ತಂಟೆಗೆ ಹೋಗುತ್ತಿರಲಿಲ್ಲ. ಇದೀಗ ಈ ಊರಿನ ಯುವಕನೊಬ್ಬ ರಾತ್ರಿಯ ಕತ್ತಲೆಯಲ್ಲಿ ಬೀದಿಯಲ್ಲಿ ಅಡ್ಡಾಡುತ್ತಿದ್ದ ಮೊಸಳೆಯ (Crocodile Video) ಬಾಲವನ್ನು ಹಿಡಿದು ತಮಾಷೆ ಮಾಡುತ್ತಾ ರೀಲ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆಯು ಆ ಯುವಕನ ವೈರಲ್ ವೀಡಿಯೊವನ್ನು ಆಧರಿಸಿ ತನಿಖೆಯನ್ನು ಪ್ರಾರಂಭಿಸಿದೆ. ಶಿವಪುರಿಯ ಚಿಂತಹಾರ್ ದೇವಾಲಯದ ಬಳಿ ಇರುವ ಭುಜಾರಿಯಾ ಕೊಳದಿಂದ ಬೃಹತ್ ಮೊಸಳೆ ಹೊರಬಂದಿತ್ತು. ಮೊಸಳೆ ಕೊಳದಿಂದ ಹೊರಬಂದು ರಸ್ತೆಗೆ ಬಿದ್ದಿದ್ದರಿಂದ ಸುತ್ತಮುತ್ತಲಿನ ವಸತಿ ಪ್ರದೇಶದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಯಿತು. ರಸ್ತೆಯಲ್ಲಿ ಬೃಹತ್ ಮೊಸಳೆಯನ್ನು ನೋಡಿ ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು. ಆಗ ಒಬ್ಬ ಯುವಕ ಮೊಸಳೆಯ ಬಾಲವನ್ನು ಹಿಡಿದನು. ಆ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆಗಳು ನಡೆಯುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಿನಿ ಕುರುಕ್ಷೇತ್ರ: ಸುರ್ಜೇವಾಲ ಜೊತೆಗಿನ ಹೈವೋಲ್ಟೇಜ್​​​ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು

ಬೆಂಗಳೂರು, ಮಾರ್ಚ್​ 20: ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಕೌಂಟ್​ಡೌನ್ ಶುರುವಾಗಿದ್ದು, ಈಗಾಗಲೇ ಅಖಾಡ ರಂಗೇರಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿರೋದು ಕಾಂಗ್ರೆಸ್​ಗೆ ತಲೆನೋವಾಗಿದೆ. ಬಿಕ್ಕಟ್ಟು ಬಗೆಹರಿಸಲು ರಾಜ್ಯ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇವಾಲ ಅಖಾಡಕ್ಕಿಳಿದಿದ್ದು, ಸಿಎಂ, ಡಿಸಿಎಂ ಜೊತೆ ಸಭೆ ಮಾಡಿದ್ದಾರೆ. ಸದ್ಯ ಸಭೆ ಬಳಿಕ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್​ ಮಾತನಾಡಿದ್ದು, ನಾನು, ಸಿಎಂ, ರಾಜ್ಯ ಉಸ್ತುವಾರಿ ಸಭೆ ಮಾಡಿದ್ದೇವೆ. ಸಭೆಯಲ್ಲಿ ಎಲ್ಲ ಮುಖಂಡರ ಅಭಿಪ್ರಾಯ ಹೇಳಿದ್ದೇವೆ. ಒಮ್ಮತದ ನಿರ್ಧಾರ ಆಗಿದೆ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್​ಗೆ ಕಳಿಸುತ್ತೇವೆ. S.S.ಮಲ್ಲಿಕಾರ್ಜುನ್ ಜೊತೆಗೆ ಕೂಡ ಮಾತನಾಡಿದೆ. ಒಳ್ಳೇ ದಿನ ಅನ್ನೋ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದಾನೆ ಎಂದಿದ್ದಾರೆ. ಅಗತ್ಯಬಿದ್ರೆ ಹಿಂಪಡೆಯುತ್ತೇನೆ ಅಂತಾನೂ ಹೇಳಿದ್ದಾರೆ. ಅಲ್ಪಸಂಖ್ಯಾತರು ಪಕ್ಷ ಹೇಳಿದ್ದು ಮಾಡುತ್ತೇವೆ ಅಂದಿದ್ದಾರೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಅಂತ ಎಲ್ಲಾ ಹೇಳಿದ್ದಾರೆ. ಶೀಘ್ರವೇ ಅಭ್ಯರ್ಥಿ ಆಯ್ಕೆ ಮಾಡಿ ಘೋಷಿಸುತ್ತೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?

ನವದೆಹಲಿ, ಮಾರ್ಚ್ 20: ಬಸ್​​ನಲ್ಲಿಯೋ, ರೈಲಿನಲ್ಲಿಯೋ ಹೋಗುವಾಗ ಸ್ಟಾಪ್ ಬಂದಾಗ ಪಕ್ಕದ ಅಂಗಡಿಯಲ್ಲಿ ಅಥವಾ ಬುಟ್ಟಿ ಹೊತ್ತು ಬರುವ ವ್ಯಾಪಾರಿಗಳಲ್ಲಿ ಏನಾದರೂ ಕೊಂಡು ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ಕೆಲವರು ಹಸಿವು ನೀಗಿಸಿಕೊಳ್ಳಲು ತಿಂಡಿಗಳನ್ನು ತಿಂದರೆ ಇನ್ನು ಕೆಲವರು ಟೈಂಪಾಸ್​ಗಾಗಿ ತಿನ್ನುತ್ತಾರೆ. ಅದೇರೀತಿ ಬಸ್​​ನೊಳಗೆ ಕುಳಿತಿದ್ದ ಯುವಕನೊಬ್ಬನಿಗೆ ಹಸಿವಾಗಿತ್ತು. ಚಲಿಸುವ ಬಸ್ಸಿನಲ್ಲಿ ಕುಳಿತಿದ್ದ ಆ ಯುವಕ ತಿಂಡಿಗಾಗಿ ಪಕ್ಕದಲ್ಲೇ ನಿಂತಿದ್ದ ಮಾರಾಟಗಾರನಿಗೆ ಕಿಟಕಿಯಿಂದ ಹಣ ಕೊಟ್ಟನು. ಆದರೆ ಮಾರಾಟಗಾರ ಅವನಿಗೆ ಏನನ್ನೂ ಕೊಡಲಿಲ್ಲ. ದುಡ್ಡನ್ನೂ ತಾನೇ ಇಟ್ಟುಕೊಂಡು, ತಿಂಡಿಯನ್ನೂ ಕೊಡದೆ ಆತ ಯಾಮಾರಿಸಿದ. ಬಸ್ ಚಲಿಸುವಾಗ ಆ ಹುಡುಗ ಕೂಗುತ್ತಾ ಇದ್ದ. ಆದರೆ, ವ್ಯಾಪಾರಿ ಮಾತ್ರ ಮೋಸ ಮಾಡಿದ್ದೇ ಸಾಧನೆಯೆಂದು ನಗುತ್ತಿದ್ದ. ಇದೆಲ್ಲವನ್ನೂ ಪಕ್ಕದಲ್ಲಿ ನಿಂತಿದ್ದವನು ವಿಡಿಯೋ ಮಾಡುತ್ತಿದ್ದನೇ ವಿನಃ ಆ ಹುಡುಗನಿಗಾದ ಅನ್ಯಾಯವನ್ನು ತಡೆಯಲಿಲ್ಲ ಎಂಬುದು ಇನ್ನೊಂದು ವಿಪರ್ಯಾಸ!

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ಸರ್ಕಾರಿ ಅಧಿಕಾರಿಗಳಿಂದ ಮೂರು ವರ್ಷದಲ್ಲಿ 95 ವಿದೇಶ ಪ್ರವಾಸ; ಸರ್ಕಾರಕ್ಕೆ ವೆಚ್ಚ ಆಗಿದ್ದು ಎಷ್ಟು?

ಬೆಂಗಳೂರು, ಮಾರ್ಚ್ 20: ರಾಜ್ಯ ಸರ್ಕಾರಿ ಅಧಿಕಾರಿಗಳು 2023ರಿಂದೀಚೆ ಮಾಡಿರುವ ವಿದೇಶೀ ಪ್ರವಾಸಗಳ (Foreign Trips) ಸಂಖ್ಯೆ 95 ಎನ್ನಲಾಗಿದೆ. ವಿಧಾನಸಭಾ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಡಿಸಿದ ವರದಿಯಲ್ಲಿ ಈ ಮಾಹಿತಿ ಇದೆ. ಸರ್ಕಾರಿ ಅಧಿಕಾರಿಗಳ ಈ ವಿದೇಶ ಪ್ರವಾಸಗಳಲ್ಲಿ ಹೆಚ್ಚಿನವಕ್ಕೆ ಸರ್ಕಾರದಿಂದಲೇ ವೆಚ್ಚ ಭರಿಸಲಾಗಿದೆ. ತೆರಿಗೆ ಪಾವತಿದಾರರ ಹಣವನ್ನು ಈ ಪ್ರವಾಸಗಳಿಗೆ ಬಳಕೆ ಮಾಡಲಾಗಿದೆ.

ದತ್ತಾಂಶ ಪ್ರಕಾರ 95 ವಿದೇಶ ಪ್ರವಾಸಗಳ ಪೈಕಿ 58 ಪ್ರವಾಸಗಳಿಗೆ ಸರ್ಕಾರದಿಂದ 20.28 ಕೋಟಿ ರೂ ವೆಚ್ಚವಾಗಿದೆ. ಪ್ರತೀ ಪ್ರವಾಸಕ್ಕೆ ಸರಾಸರಿಯಾಗಿ ಆಗಿರುವ ವೆಚ್ಚ 21.35 ಲಕ್ಷ ರೂ. ಉಳಿದ 37 ಪ್ರವಾಸಗಳನ್ನು ಅಧಿಕಾರಿಗಳು ತಮ್ಮ ವೈಯಕ್ತಿಕ ಖರ್ಚಿನಲ್ಲಿ ಪೂರೈಸಿದ್ದಾರೆ.

ಇದನ್ನೂ ಓದಿ: ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಸರ್ಕಾರಿ ಅಧಿಕಾರಿಗಳು ಅಂತಾರಾಷ್ಟ್ರೀಯ ಸಮ್ಮೇಳನ, ಸಭೆ, ಅಧ್ಯಯನ ಇತ್ಯಾದಿ ಕಾರ್ಯಕ್ರಮಗಳಿಗೆ ಭಾಗವಹಿಸಲು ವಿದೇಶ ಪ್ರವಾಸಗಳಿಗೆ ಹೋಗಿದ್ದಾರೆ. ಆದರೆ, ಇಂಥ ಪ್ರವಾಸಗಳನ್ನು ಮಾಡಿ ಬರುವ ಹೆಚ್ಚಿನ ಅಧಿಕಾರಿಗಳು ಅಧ್ಯಯನ ವರದಿಯನ್ನು ಸಲ್ಲಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಹೊರಡಿಸಿದ ಸುತ್ತೋಲೆಯು, 2024ರ ಆಗಸಟ್​ನಿಂದ 2025ರ ಜುಲೈವರೆಗೆ ಫಾರೀನ್ ಟ್ರಿಪ್​ಗೆ ಹೋದ ಅಧಿಕಾರಿಗಳು ಸ್ಟಡಿ ರಿಪೋರ್ಟ್ ಸಲ್ಲಿಸಿಲ್ಲ ಎಂಬುದನ್ನು ಎತ್ತಿ ತೋರಿಸಿತು. ಹೀಗಾಗಿ, 2025ರ ಸೆಪ್ಟೆಂಬರ್​ನಲ್ಲಿ ಅಧಿಕಾರಿಗಳ ವಿದೇಶ ಪ್ರವಾಸಗಳನ್ನು ನಿಷೇಧಿಸಲಾಯಿತು.

ಸರ್ಕಾರದಿಂದ ಪ್ರಾಯೋಜಿತವಾದ ವಿದೇಶ ಪ್ರವಾಸಗಳ ಪೈಕಿ ಅತಿ ದುಬಾರಿ ಪ್ರವಾಸವೆಂದರೆ 2024ರಲ್ಲಿ ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂ ಸಭೆಗೆ ಅಧಿಕೃತ ನಿಯೋಗ ಹೋಗಿದ್ದು. ಆ ಪ್ರವಾಸಕ್ಕೆ 4.7 ಕೋಟಿ ರೂ ಹಣ ವ್ಯಯವಾಗಿತ್ತೆನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್​​ ಎಚ್ಚರಿಕೆ

ಹೂಡಿಕೆಗಳನ್ನು ಆಕರ್ಷಿಸಲು 2023ರಲ್ಲಿ ಮೂವರು ಉನ್ನತ ಅಧಿಕಾರಿಗಳ ತಂಡವು 11 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿತ್ತು. ಅದಕ್ಕೆ 2.2 ಕೋಟಿ ರೂ ವೆಚ್ಚವಾಗಿತ್ತು. ರಷ್ಯಾ, ಬ್ರಿಟನ್, ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ಇತ್ಯಾದಿ 27ಕ್ಕೂ ಹೆಚ್ಚು ದೇಶಗಳಿಗೆ ರಾಜ್ಯ ಅಧಿಕಾರಿಗಳು ಈ ಅವಧಿಯಲ್ಲಿ ಪ್ರವಾಸ ಹೋಗಿ ಬಂದಿದ್ದಾರೆ. ಇವೆಲ್ಲವೂ ಅಧಿಕೃತ ಪ್ರವಾಸಗಳೇ ಆಗಿವೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ

ಹಂಸಲೇಖ (Hamsalekha) ಮತ್ತು ರವಿಚಂದ್ರನ್ ಅವರದ್ದು ಎವರ್​ಗ್ರೀನ್ ಕಾಂಬಿನೇಷನ್. ಅವರಿಬ್ಬರು ಜೋಡಿಯಾಗಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಅವರ ನಡುವೆ ಮುನಿಸು ಉಂಟಾಗಿತ್ತು. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ‘ಸೋನೆ ಸೋನೆ’ ಹಾಡು ರಚಿಸುವಾಗ ಹಂಸಲೇಖ ಮತ್ತು ರವಿಚಂದ್ರನ್ ನಡುವೆ ವೈಮನಸ್ಸು ಉಂಟಾಗಿತ್ತು. ಆ ಸಂದರ್ಭವನ್ನು ರವಿಚಂದ್ರನ್ (Ravichandran) ಅವರು ಈಗ ವಿವರಿಸಿದ್ದಾರೆ. ‘ಆಗಲೇ ನನ್ನ ಮತ್ತು ಇವರ ನಡುವೆ ಚಿಕ್ಕ ಬೆಂಕಿ ಶುರುವಾಗಿತ್ತು. ಹಾಡಿಗೆ ಹಂಸಲೇಖ ಅವರು 40 ಪಲ್ಲವಿ ಬರೆದರು. ನಾನು ಎಲ್ಲವನ್ನೂ ತಿರಸ್ಕರಿಸಿದೆ. ಕೊನೆಗೆ ಮೊದಲು ಬರೆದಿದ್ದನ್ನೆ ಒಪ್ಪಿಕೊಂಡೆ. ನಮ್ಮ ಸ್ನೇಹ ನಮ್ಮ ಕೆಲಸದಲ್ಲಿ ಕಾಣಿಸುತ್ತದೆ’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಗೆರೆ ದಾಟುವುದರಲ್ಲಿ ಜಸ್ಪ್ರೀತ್ ಬುಮ್ರಾರನ್ನು ಮೀರಿಸುವವರಿಲ್ಲ

Source link

ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

ವಾಷಿಂಗ್ಟನ್, ಮಾರ್ಚ್ 20: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಹಿಡಿತವನ್ನು ಕಡಿಮೆ ಮಾಡಲು ಸೈನ್ಯವನ್ನು ಕಳುಹಿಸಬೇಕೆಂಬ ತನ್ನ ಮನವಿಗೆ ಬೆಂಬಲ ನೀಡದ NATO ಮಿತ್ರರಾಷ್ಟ್ರಗಳ ವಿರುದ್ಧ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನ್ಯಾಟೋ ರಾಷ್ಟ್ರಗಳನ್ನು “ಹೇಡಿಗಳು, ಪೇಪರ್ ಟೈಗರ್​ಗಳು” ಎಂದು ಟೀಕಿಸಿದ್ದಾರೆ.

ಟ್ರೂತ್ ಸೋಷಿಯಲ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಟ್ರಂಪ್, ಅಮೆರಿಕ ಇಲ್ಲದೆ NATO “ಕಾಗದದ ಹುಲಿ” ಎಂದು ಹೇಳಿದರು. ಈ ಸಂಘರ್ಷವನ್ನು ಈಗಾಗಲೇ ಮಿಲಿಟರಿ ದಾಳಿಯ ಮೂಲಕ ನಾವು ಗೆದ್ದಿದ್ದೇವೆ. ನಮಗೆ ಯಾವುದೇ ಅಪಾಯವಿಲ್ಲ. ಪರಮಾಣು ಚಾಲಿತ ಇರಾನ್ ಅನ್ನು ನಿಲ್ಲಿಸುವ ಹೋರಾಟಕ್ಕೆ ನ್ಯಾಟೋ ರಾಷ್ಟ್ರಗಳು ಸೇರಲು ಬಯಸಲಿಲ್ಲ. ಈಗ ಹೋರಾಟವು ಮಿಲಿಟರಿಯ ದಾಳಿಯಾಗಿ ಗೆದ್ದಿದೆ. ಈಗ ಅವರು ಹೆಚ್ಚಿನ ತೈಲ ಬೆಲೆಗಳ ಬಗ್ಗೆ ದೂರು ನೀಡುತ್ತಿದ್ದಾರೆ. ಅವರಿಂದಲೇ ತೈಲ ಬೆಲೆ ಹೆಚ್ಚಳವಾಗಿದ್ದು. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಹಾಯ ಮಾಡಲು ಅವರು ಬಯಸಲಿಲ್ಲ. ಅವರ ಈ ವರ್ತನೆಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳುತ್ತೇನೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಹಾರ್ಮುಜ್ ಜಲಸಂಧಿಯ ಮೂಲಕ ಸಮುದ್ರ ಸಂಚಾರವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಮುಖ ಮಿತ್ರರಾಷ್ಟ್ರಗಳನ್ನು ಒತ್ತಾಯಿಸಿದ್ದರು. ಆದರೆ, ನ್ಯಾಟೋ ರಾಷ್ಟ್ರಗಳು ಇದಕ್ಕೆ ಬೆಂಬಲ ನೀಡಿರಲಿಲ್ಲ. ಫೆಬ್ರವರಿ 28ರಂದು ಯುಎಸ್-ಇಸ್ರೇಲ್ ದಾಳಿಯೊಂದಿಗೆ ಪ್ರಾರಂಭವಾದ ಯುದ್ಧವು ಜಾಗತಿಕ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ದೊಡ್ಡ ಪ್ರಮಾಣದ ಸಾವುನೋವುಗಳಿಗೆ ಕಾರಣವಾಯಿತು ಮತ್ತು ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

Source link

ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾಲ

ಬೆಂಗಳೂರು, ಮಾರ್ಚ್​ 20: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ. ಟಿಕೆಟ್​ ಬೇಕೆಂದು ಎಲ್ಲರಿಗೂ ಆಸೆ, ಆಸಕ್ತಿ ಇದ್ದೇ ಇರುತ್ತೆ. ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತದೆ. ಕರ್ನಾಟಕ ಜನ ನಮ್ಮ ಪರ ಇದ್ದಾರೆ. ಹಿಂದೆಯೂ ಚುನಾವಣೆ ಗೆದ್ದಿದ್ದೇವೆ, ಈಗಲೂ ಗೆಲ್ಲುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link