All posts by nagaraj11081993

ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಟ್ರಂಪ್​ಗೆ ಮುಖಭಂಗ; ಅಮೆರಿಕದ ಯುದ್ಧವಿಮಾನಕ್ಕೆ ನೋ ಎಂಟ್ರಿ ಎಂದ ಶ್ರೀಲಂಕಾ

ಕೊಲಂಬೊ, ಮಾರ್ಚ್ 20: ಶ್ರೀಲಂಕಾ ಮಾರ್ಚ್ ಆರಂಭದಲ್ಲಿ ದ್ವೀಪ ರಾಷ್ಟ್ರದ ಮಟ್ಟಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ (United States) ತನ್ನ 2 ಯುದ್ಧ ವಿಮಾನಗಳನ್ನು ಇಳಿಸಲು ಅನುಮತಿ ನಿರಾಕರಿಸಿದೆ. ಈ ಬಗ್ಗೆ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಶ್ರೀಲಂಕಾದ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಜಿಬೌಟಿಯಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಯುದ್ಧವಿಮಾನಗಳು ಮಾರ್ಚ್‌ನಲ್ಲಿ 2 ಬಾರಿ ಇಳಿಯಲು ಅನುಮತಿ ಕೋರಿದ್ದವು. ಆದರೆ ಎರಡೂ ಮನವಿಗಳನ್ನು ತಿರಸ್ಕರಿಸಲಾಯಿತು.

“ಹಲವು ಒತ್ತಡಗಳ ಹೊರತಾಗಿಯೂ ನಾವು ನಮ್ಮ ತಟಸ್ಥತೆಯನ್ನು ಕಾಪಾಡಿಕೊಳ್ಳಲು ಬಯಸುತ್ತೇವೆ. ನಾವು ಯಾವುದಕ್ಕೂ ಮಣಿಯುವುದಿಲ್ಲ. ಮಧ್ಯಪ್ರಾಚ್ಯ ಯುದ್ಧವು ಸವಾಲುಗಳನ್ನು ಒಡ್ಡುತ್ತದೆ. ಆದರೆ ಈ ವಿಷಯದಲ್ಲಿ ತಟಸ್ಥವಾಗಿರಲು ನಾವು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ” ಎಂದು ಶ್ರೀಲಂಕಾದ ಅಧ್ಯಕ್ಷ ಹೇಳಿದ್ದಾರೆ.

ಇದನ್ನೂ ಓದಿ: ಇರಾನ್​ಗೆ ಮತ್ತೊಂದು ಹೊಡೆತ; ಅಮೆರಿಕ- ಇಸ್ರೇಲ್ ದಾಳಿಯಲ್ಲಿ ಐಆರ್‌ಜಿಸಿ ವಕ್ತಾರ ಅಲಿ ನೈನಿ ಹತ್ಯೆ

ಅಮೆರಿಕದ ವಿಮಾನವು ತಲಾ 8 ಹಡಗು ವಿರೋಧಿ ಕ್ಷಿಪಣಿಗಳನ್ನು ಹೊಂದಿರುವ 2 ಯುದ್ಧವಿಮಾನಗಳನ್ನು ತರಲು ಪ್ರಯತ್ನಿಸಿದೆ. ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ವಿಶೇಷ ರಾಯಭಾರಿ ಸೆರ್ಗಿಯೊ ಗೋರ್ ಅವರೊಂದಿಗಿನ ಅನುರ ಕುಮಾರ ದಿಸಾನಾಯಕೆ ಅವರ ಸಭೆಯ ನಂತರ ಈ ಘೋಷಣೆ ಮಾಡಲಾಯಿತು. ಪ್ರಮುಖ ಸಮುದ್ರ ಮಾರ್ಗಗಳನ್ನು ರಕ್ಷಿಸುವುದು, ಬಂದರು ಭದ್ರತೆಯನ್ನು ಬಲಪಡಿಸುವುದು, ವ್ಯಾಪಾರ ಸಹಕಾರವನ್ನು ಹೆಚ್ಚಿಸುವುದು ಮತ್ತು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಮುನ್ನಡೆಸುವುದರ ಮೇಲೆ ಈ ಚರ್ಚೆಗಳು ಕೇಂದ್ರೀಕೃತವಾಗಿತ್ತು.

ಇದನ್ನೂ ಓದಿ: ನೀವಾಗೇ ಅಮೆರಿಕ ಬಿಟ್ಟು ಹೋಗಿ; ಫ್ಲೈಟ್ ಟಿಕೆಟ್ ಕೊಡ್ತೀವಿ, ಎರಡೂವರೆ ಲಕ್ಷ ರೂ ಹಣ ಕೊಡ್ತೀವಿ: ವಲಸಿಗ ಭಾರತೀಯರಿಗೆ ಅಮೆರಿಕ ಆಫರ್

ಮಾರ್ಚ್ 4 ಮತ್ತು 8ರಂದು ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯ ನಡುವಿನ ನಿರ್ಣಾಯಕ ಸಮುದ್ರ ದ್ವಾರವಾದ ಜಿಬೌಟಿಯಲ್ಲಿ ಅಮೆರಿಕದ ಯುದ್ಧವಿಮಾನಗಳನ್ನು ಇಳಿಸಲು ಮನವಿ ಮಾಡಲಾಗಿತ್ತು. ಆದರೆ, ಇವೆರಡನ್ನೂ ನಿರಾಕರಿಸಲಾಯಿತು. ಅಮೆರಿಕಾದ ಮಿಲಿಟರಿ ವಿಮಾನಗಳಿಗೆ ಆತಿಥ್ಯ ವಹಿಸದಿರುವ ಶ್ರೀಲಂಕಾದ ನಿರ್ಧಾರವು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸಿಲುಕಿಕೊಳ್ಳುವ ಅಥವಾ ಅಮೆರಿಕದ ಕೆಂಗಣ್ಣಿಗೆ ತುತ್ತಾಗುವ ಅಪಾಯವನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆಫೀಸ್ ಕಾರ್ಡ್ ಬಳಕೆ, ಪ್ಯಾನ್ ಕಡ್ಡಾಯ, ಅಡ್ರೆಸ್ ಪ್ರೂಫ್ ಇತ್ಯಾದಿ ಗಮನಿಸಬೇಕಾದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು

ನವದೆಹಲಿ, ಮಾರ್ಚ್ 20: ಹೊಸ ಆದಾಯ ತೆರಿಗೆ ಕಾಯ್ದೆ (New Income Tax Rules) ಮುಂಬರುವ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ. ಏಪ್ರಿಲ್ 1ರಿಂದ ಬರುವ ಈ ಕಾಯ್ದೆಯಿಂದಾಗಿ ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ಕೆಲ ನಿಯಮಗಳ ಬದಲಾವಣೆ ಆಗಲಿದೆ. ಕಾರ್ಡ್ ಸ್ವೈಪ್ ಮೂಲಕ ಅಧಿಕ ಮೌಲ್ಯದ ವಹಿವಾಟುಗಳಿಗೆ (High value transactions) ಮಾಡುವ ಪಾವತಿ ಮೇಲೆ ಆದಾಯ ತೆರಿಗೆ ಇಲಾಖೆ ಗಮನ ಹರಿಸುವುದರಿಂದ ಹಿಡಿದು, ತೆರಿಗೆ ಅನ್ವಯ ಆಗುವವರೆಗೂ ಕೆಲ ಹೊಸ ನಿಯಮಗಳು ಜಾರಿಗೆ ಬರಲಿವೆ. ತೆರಿಗೆ ವಂಚನೆ ತಪ್ಪಿಸಲು ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಅನುವು ಮಾಡಿಕೊಡುವಂತಹ ಕೆಲ ನಿಯಮಗಳು ಇದರಲ್ಲಿ ಒಳಗೊಂಡಿರುತ್ತವೆ.

ಅಧಿಕ ಮೌಲ್ಯದ ವಹಿವಾಟುಗಳ ಮೇಲೆ ಕಣ್ಣು

ಕ್ರೆಡಿಟ್ ಕಾರ್ಡ್ ಮೂಲಕ ಅಧಿಕ ಮೊತ್ತದ ಪಾವತಿ ಮಾಡಿದರೆ ಅದು ಆದಾಯ ಇಲಾಖೆ ಗಮನಕ್ಕೆ ಹೋಗುತ್ತದೆ. ಒಂದು ವರ್ಷದಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದ್ದರೆ, ಅದರ ವಿವರವನ್ನು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಸಂಸ್ಥೆ ಆದಾಯ ತೆರಿಗೆ ಇಲಾಖೆಗೆ ಕೊಡಬಹುದು.

ಇದನ್ನೂ ಓದಿ: ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿರುವುದು ಯಾಕೆ? ಮತ್ತೆ ಯಾವಾಗ ಏರಿಕೆಯಾಗುತ್ತೆ?

ಒಂದು ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಕ್ಯಾಷ್ ಪಾವತಿಯಾದಾಗಲೂ ಬ್ಯಾಂಕುಗಳು ಅದನ್ನು ಐಟಿ ಇಲಾಖೆಯ ಗಮನಕ್ಕೆ ತರುತ್ತದೆ. ಹಿಂದೆಯೂ ಇಂಥ ನಿಯಮ ಇತ್ತಾದರೂ ಈಗ ಈ ನಿಯಮವನ್ನು ಬಿಗಿಗೊಳಿಸಲಾಗಿದೆ, ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.

ಪ್ಯಾನ್​ಗೆ ಅಡ್ರೆಸ್ ಪ್ರೂಫ್ ಆಗಿ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್

ಪ್ಯಾನ್ ಕಾರ್ಡ್ ಮಾಡಿಸಲು ಆಧಾರ್ ಜೊತೆಗೆ ಬೇರೆ ಕೆಲ ದಾಖಲೆಗಳನ್ನು ಕೊಡಬೇಕು. ಅಡ್ರೆಸ್ ಪ್ರೂಫ್ ದಾಖಲೆಯಾಗಿ ಇತ್ತೀಚಿನ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಕೊಡಲು ಅನುಮತಿಸಲಾಗಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿ

ಆದಾಯ ತೆರಿಗೆ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲು ಅನುಮತಿಸಲಾಗಿದೆ. ಸದ್ಯ ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್ ಮೂಲಕ ತೆರಿಗೆ ಪಾವತಿಗೆ ಅವಕಾಶ ಇತ್ತು. ಏಪ್ರಿಲ್ 1ರಿಂದ ಕ್ರೆಡಿಟ್ ಕಾರ್ಡ್ ಮೂಲಕವೂ ಪಾವತಿ ಮಾಡಬಹುದು.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಕಂಪನಿ ಕ್ರೆಡಿಟ್ ಕಾರ್ಡ್ ಅನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿದರೆ ಟ್ಯಾಕ್ಸ್

ಕೆಲ ಕಂಪನಿಗಳು ಉದ್ಯೋಗಿಗಳಿಗೆ ಅಧಿಕೃತ ಕೆಲಸಗಳಿಗೆ ಬಳಕೆ ಮಾಡಲು ಕ್ರೆಡಿಟ್ ಕಾರ್ಡ್ ನೀಡುತ್ತವೆ. ಇದನ್ನು ವೈಯಕ್ತಿಕ ವೆಚ್ಚಕ್ಕೆ ಬಳಸಿದರೆ ಅದಕ್ಕೆ ಟ್ಯಾಕ್ಸ್ ಹಾಕಲಾಗುತ್ತದೆ. ಇಂಥ ಆಫೀಸ್ ಕ್ರೆಡಿಟ್ ಕಾರ್ಡ್​ಗಳನ್ನು ಬ್ಯುಸಿನೆಸ್ ಟ್ರಾವಲ್, ಕ್ಲಯಂಟ್ ಮೀಟಿಂಗ್ ಇತ್ಯಾದಿ ಕಂಪನಿ ಸಂಬಂಧಿಸಿದ ವೆಚ್ಚಗಳಿಗೆ ಮಾತ್ರ ಉಪಯೋಗಿಸಬೇಕು.

ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಕಡ್ಡಾಯ

ಕ್ರೆಡಿಟ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಅನ್ನು ನೀಡುವುದು ಕಡ್ಡಾಯ ಎನ್ನುವ ನಿಯಮ ಮಾಡಲಾಗುತ್ತಿದೆ. ನೀವು ಪ್ಯಾನ್ ನೀಡದಿದ್ದರೆ ಕ್ರೆಡಿಟ್ ಕಾರ್ಡ್ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಾಪಕರಿಗೆ ನಿರಾಳ ತಂದ ಸುಪ್ರೀಂ ಕೋರ್ಟ್ ತೀರ್ಪು: ಪ್ರಕರಣ ಏನು?

ಚಲನಚಿತ್ರ (Movie) ನಿರ್ಮಾಣ ಅತ್ಯಂತ ಏರಿಳಿತ ಇರುವ ವ್ಯವಹಾರ. ಸಿನಿಮಾ ನಿರ್ಮಾಣ ಎನ್ನುವುದು ಅಲುಗಿನ ಮೇಲಿನ ನಡುಗೆ, ಅಲ್ಲಿ ಲಾಭ ಆಗುವುದಕ್ಕಿಂತಲೂ ನಷ್ಟ ಆಗುವ ಸಾಧ್ಯತೆಗಳು ಬಹಳ ಹೆಚ್ಚು. ಸಿನಿಮಾಗಳ ಗೆಲುವಿನ ಸರಾಸರಿ ಸಹ ಬಹಳ ಕಡಿಮೆ. ವರ್ಷಕ್ಕೆ ಚಿತ್ರರಂಗವೊಂದರಲ್ಲಿ 1000 ಸಿನಿಮಾಗಳು ಬಿಡುಗಡೆ ಆದರೆ ಗೆಲ್ಲುವುದು ಬೆರಳೆಣಿಕೆಯಷ್ಟು ಮಾತ್ರ. ಸಿನಿಮಾ ಗೆದ್ದರೆ ನಟ, ನಿರ್ದೇಶಕರ ಗೆಲುವಾಗುತ್ತದೆ, ಆದರೆ ಸೋತರೆ ನಷ್ಟ ನಿರ್ಮಾಪಕನಿಗೆ ಮಾತ್ರ. ನಿರ್ಮಾಪಕರು, ಫೈನ್ಯಾನ್ಶಿಯರ್​ಗಳು, ವಿತರಕರು, ಚಿತ್ರಮಂದಿರ ಮಾಲೀಕರು ಹೀಗೆ ಹಲವರೊಟ್ಟಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುತ್ತಾರೆ. ಸಿನಿಮಾ ಸೋತರೆ ಎಲ್ಲರೂ ಮುಗಿಬೀಳುತ್ತಾರೆ. ಕೇಸುಗಳು ಸಹ ಹಾಕುವುದು ಸಾಮಾನ್ಯ. ಆದರೆ ಇದೀಗ ಅಂಥಹುದೇ ಒಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಿರ್ಮಾಪಕರಿಗೆ ಸಣ್ಣ ನಿರಾಳತೆ ಒದಗಿಸಿದೆ.

ಚಲನಚಿತ್ರವೊಂದರ ನಿರ್ಮಾಣಕ್ಕಾಗಿ ಹೂಡಿಕೆ ಮಾಡಿದ್ದ ಹಣವನ್ನು ಮರಳಿ ನೀಡಲಿಲ್ಲ ಎಂಬ ಕಾರಣಕ್ಕೆ ಚಿತ್ರ ನಿರ್ಮಾಪಕರೊಬ್ಬರ ವಿರುದ್ಧ ಕ್ರಿಮಿನಲ್ ವಂಚನೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿರ್ಮಾಪಕನ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ರದ್ದುಗೊಳಿಸಿದೆ. ಸಿನಿಮಾ ನಿರ್ಮಾಣದ ವ್ಯವಹಾರದ ಸ್ವರೂಪದ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಅವಲೋಕನ ಮಾಡಿದ್ದು. ಚಿತ್ರವೊಂದು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದರೆ ಅಥವಾ ನಷ್ಟ ಅನುಭವಿಸಿದರೆ, ಅದನ್ನು ವಂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರ ಪೀಠವು, ‘ಚಲನಚಿತ್ರ ನಿರ್ಮಾಣವು ಮೂಲಭೂತವಾಗಿ ಹೆಚ್ಚಿನ ಅಪಾಯವನ್ನು ಹೊಂದಿರುವ ವ್ಯವಹಾರವಾಗಿದೆ. ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?

ಸಿನಿಮಾ ಸೋತು ಹಣ ಕಳೆದುಕೊಂಡರೆ ಅದನ್ನು ‘ಕ್ರಿಮಿನಲ್ ವಂಚನೆ’ ಎಂದು ಕರೆಯಲಾಗದು. ಹೂಡಿಕೆದಾರರು ಲಾಭದ ನಿರೀಕ್ಷೆಯಲ್ಲಿ ಹಣ ಹಾಕುತ್ತಾರೆ, ಆದರೆ ವ್ಯವಹಾರದಲ್ಲಿ ನಷ್ಟ ಉಂಟಾದಾಗ ಅದು ಕೇವಲ ಸಿವಿಲ್ ವಿವಾದವಾಗುತ್ತದೆಯೇ ಹೊರತು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ನಿರ್ಮಾಪಕನು ಮೊದಲಿನಿಂದಲೇ ಹೂಡಿಕೆದಾರರಿಗೆ ವಂಚಿಸುವ ಉದ್ದೇಶ ಹೊಂದಿದ್ದನೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲದ ಕಾರಣ, ಕೇವಲ ಹಣಕಾಸಿನ ನಷ್ಟದ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಬಾಲಿವುಡ್ ಮತ್ತು ಇತರ ಚಿತ್ರರಂಗದ ನಿರ್ಮಾಪಕರಿಗೆ ದೊಡ್ಡ ಸಮಾಧಾನ ತಂದಿದೆ. ಸಿನಿಮಾ ವಿತರಣೆ ಅಥವಾ ಹೂಡಿಕೆಯಲ್ಲಿ ನಷ್ಟ ಉಂಟಾದಾಗ ನಿರ್ಮಾಪಕರನ್ನು ಗುರಿಯಾಗಿಸಿ ದಾಖಲಿಸಲಾಗುವ ಅನಗತ್ಯ ಕ್ರಿಮಿನಲ್ ಪ್ರಕರಣಗಳಿಗೆ ಇದು ತಡೆ ಒಡ್ಡುವ ಸಾಧ್ಯತೆಯಿದೆ. ಸಿನಿಮಾ ಉದ್ಯಮದಲ್ಲಿ ಹಣಕಾಸಿನ ವಹಿವಾಟುಗಳು ಹೆಚ್ಚಾಗಿರುವುದರಿಂದ, ಈ ತೀರ್ಪು ಸಿವಿಲ್ ಒಪ್ಪಂದಗಳು ಮತ್ತು ಕ್ರಿಮಿನಲ್ ಹೊಣೆಗಾರಿಕೆಗಳ ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು

ಬೆಳಗಾವಿ, ಮಾರ್ಚ್​ 20: ಹೆಣ್ಣುಮಗು ಎನ್ನುವ ಕಾರಣಕ್ಕೆ 15 ದಿನದ ಹಿಂದೆ ಜನಸಿದ್ದ ಹಸುಗೂಸಿಗೆ ವಿಷವುಣಿಸಿ ಕೊಲೆ ಮಾಡಿದ್ದ ತಂದೆಯನ್ನು ಇದೀಗ ಪೊಲೀಸರು. ಭೀಮರಾಯ ಬಂಧಿತ ಆರೋಪಿ. ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಘಟನೆ ಬಗ್ಗೆ ಭೀಮರಾಯನ ಸಂಬಂಧಿಕರು ಪ್ರತಿಕ್ರಿಯಿಸಿದ್ದು, ಆತನ ಕ್ರೂರತೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸದ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ

ಡಾಗ್ ಸತೀಶ್ (Dog Satish) ಅಲಿಯಾಸ್ ಕ್ಯಾಡಬಾಮ್ ಸತೀಶ್ ಅವರು ಬಿಗ್​​ಬಾಸ್ ಗೆ ಹೋಗಿ ಬಂದ ಬಳಿಕ ಹೆಚ್ಚು ಜನಪ್ರಿಯರಾಗಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿಯೂ ಸಖತ್ ಜನಪ್ರಿಯತೆ ಪಡೆದಿರುವ ಸತೀಶ್ ಅವರು ಪಾರ್ಟಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಅಂಥಹುದೇ ವಿಡಿಯೋ ಒಂದು ಸತೀಶ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇತ್ತೀಚೆಗೆ ಸತೀಶ್ ಅವರ ವಿಡಿಯೋ ಒಂದನ್ನು ಫೇಸ್​​ಬುಕ್​​ನಲ್ಲಿ ಹಂಚಿಕೊಂಡಿದ್ದರು. ಆರ್​​ಟಿ ನಗರದಲ್ಲಿ ನಡೆದ ಪಾರ್ಟಿಯ ವಿಡಿಯೋ ಇದಾಗಿತ್ತು. ವಿಡಿಯೋನಲ್ಲಿ ಸತೀಶ್ ಅವರು ರೌಡಿ ಶೀಟರ್ ಪಿ ಮೂರ್ತಿ ಜೊತೆಗೆ ಕಾಣಿಸಿಕೊಂಡಿದ್ದರು. ಇದೀಗ ವಿಡಿಯೋ ಸತೀಶ್ ಅವರ ಸಂಕಷ್ಟಕ್ಕೆ ಕಾರಣವಾಗಿದೆ. ವಿಡಿಯೋ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸತೀಶ್ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಇದೀಗ ಸತೀಶ್ ಅವರು ವಿಡಿಯೋ ಡಿಲೀಟ್ ಮಾಡಿದ್ದಾರೆ. ಪ್ರಕರಣದ ಬಗ್ಗೆ ವಿಡಿಯೋನಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಸಿಐ ಮೇಲೆ ವರ್ಣ ತಾರತಮ್ಯ ಆರೋಪ; ಕಾಮೆಂಟ್ರಿಗೆ ಶಿವರಾಮಕೃಷ್ಣನ್ ವಿದಾಯ

2026 ರ ಐಪಿಎಲ್ ಆರಂಭಕ್ಕೆ ಸರಿಯಾಗಿ 8 ದಿನಗಳು ಬಾಕಿ ಉಳಿದಿವೆ. ಈ ಲೀಗ್​ಗಾಗಿ ಬಿಸಿಸಿಐ ಕೂಡ ಸರ್ವ ತಯಾರಿ ಮಾಡಿಕೊಂಡಿದೆ. ಆದರೆ ಇದರ ನಡುವೆ ಬಿಸಿಸಿಐ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐ ಮೇಲೆ ವರ್ಣ ತಾರತಮ್ಯದಂತಹ ಗಂಭೀರ ಆರೋಪವನ್ನು ಹೊರಿಸಿರುವ ಟೀಂ ಇಂಡಿಯಾದ ಲೆಜೆಂಡರಿ ಆಟಗಾರರೊಬ್ಬರು ಕಾಮೆಂಟರಿ ಪ್ಯಾನಲ್​ಗೆ ನಿವೃತ್ತಿ ಘೋಷಿಸಿದ್ದಾರೆ. 1983 ರಿಂದ 1987 ರ ನಡುವೆ ಟೀಂ ಇಂಡಿಯಾ ಪರ ಆಡಿದ್ದ ತಮಿಳುನಾಡು ಮೂಲದ ಲಕ್ಷ್ಮಣ್ ಶಿವರಾಮಕೃಷ್ಣನ್ ಇದೀಗ ಬಿಸಿಸಿಐ ವಿರುದ್ಧ ಈ ಗಂಭೀರ ಆರೋಪವನ್ನು ಹೊರಿಸಿದ್ದು, ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

ಶಿವರಾಮಕೃಷ್ಣನ್ ಆರೋಪದಲ್ಲಿರುವುದೇನು?

ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಬಳಿಕ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬಿಸಿಸಿಐ ವಿರುದ್ಧ ಗಂಭೀರ ಆರೋಪವನ್ನು ಹೊರಿಸಿ ಬರೆದುಕೊಂಡಿರುವ ಶಿವರಾಮಕೃಷ್ಣನ್, ‘ನಾನು ಬಿಸಿಸಿಐನ ಕಾಮೆಂಟರಿ ಪ್ಯಾನಲ್​ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ಕಳೆದ 23 ವರ್ಷಗಳ ನನ್ನ ಕಾಮೆಂಟರಿ ವೃತ್ತಿಜೀವನದಲ್ಲಿ ನನ್ನನ್ನು ಎಂದಿಗೂ ಪಂದ್ಯ ಪ್ರಸ್ತುತಿಗಳಿಗೆ ಬಳಸಲಾಗಿಲ್ಲ. ಇನ್ನು ಈ ಕ್ಷೇತ್ರಕ್ಕೆ ನಗಿಂತ ತಡವಾಗಿ ಬಂದವರಿಗೆ ಮತ್ತು ಯುವ ವೀಕ್ಷಕ ವಿವರಣೆಗಾರರಿಗೆ ಪಿಚ್ ವರದಿ ನೀಡುವುದಕ್ಕೆ ಮತ್ತು ಟಾಸ್ ಮತ್ತು ಪಂದ್ಯ ಪ್ರಸ್ತುತಿ ನಡೆಸಿಕೊಡುವುದಕ್ಕೆ ಅವಕಾಶ ನೀಡಲಾಯಿತು. ಆದರೆ ನನಗೆ ಆ ಅವಕಾಶ ಸಿಗಲಿಲ್ಲ. ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್ ಆಗಿದ್ದಾಗಲೂ ಇದು ನಡೆಯುತ್ತಿತ್ತು’ ಎಂದು ಬರೆದುಕೊಂಡಿದ್ದಾರೆ.

ಶಿವರಾಮಕೃಷ್ಣನ್ ಅವರ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ. ಟೀಂ ಇಂಡಿಯಾ ಅಭಿಮಾನಿಗಳು ಮತ್ತು ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರು ಶಿವರಾಮಕೃಷ್ಣನ್ ಅವರ ಈ ಆರೋಪಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶಿವರಾಮಕೃಷ್ಣನ್ ಅವರ ಪೋಸ್ಟ್​ಗೆ ನೆಟ್ಟಿಗರೊಬ್ಬರು ‘ಬಹುಶಃ ನಿಮ್ಮ ಮೈಬಣ್ಣದ ಕಾರಣದಿಂದಾಗಿ ನಿಮ್ಮನ್ನು ಕಡೆಗಣಿಸಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಶಿವರಾಮಕೃಷ್ಣನ್ ‘ಖಂಡಿತ’ ಎಂದು ಉತ್ತರಿಸಿರುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಶಿವರಾಮಕೃಷ್ಣನ್ ಅವರ ಈ ಕಾಮೆಂಟ್ ಅವರು ಬಿಸಿಸಿಐ ಮೇಲೆ ವರ್ಣ ತಾರತಮ್ಯದ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ತಿರುಗೇಟು ನೀಡಿದ ಆರ್​. ಅಶ್ವಿನ್

ಶಿವರಾಮಕೃಷ್ಣನ್ ಅವರ ನಿವೃತ್ತಿಯ ಪೋಸ್ಟ್​ಗೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ‘ನೀವು ಐಪಿಎಲ್‌ನಲ್ಲಿಯೂ ಕಾಮೆಂಟ್ ಮಾಡುವುದನ್ನು ಏಕೆ ಬಿಡಬಾರದು?’ ಎಂದು ಕಾಮೆಂಟ್ ಮಾಡಿದ್ದು, ಈ ವಿವಾದಕ್ಕೆ ಮತ್ತೊಂದು ಆಯಾಮ ನೀಡಿದ್ದಾರೆ. ವಾಸ್ತವವಾಗಿ ಇವರಿಬ್ಬರ ನಡುವೆ ವೈಮನಸ್ಸು ಬಹಳ ಹಿಂದಿನಿಂದಲೂ ಇದೆ. ಈ ಹಿಂದೆ ಶಿವರಾಮಕೃಷ್ಣನ್, ಆರ್. ಅಶ್ವಿನ್ ಅವರನ್ನು ಕಳಪೆ ಬೌಲರ್ ಎಂದು ಜರಿದಿದ್ದರು. ಮಾತ್ರವಲ್ಲದೆ, ಭಾರತೀಯ ಪಿಚ್‌ಗಳಲ್ಲಿ ಮೂರ್ಖ ಕೂಡ ವಿಕೆಟ್ ಪಡೆಯಬಹುದು ಎಂದಿದ್ದರು. ಹಾಗೆಯೇ ಅಶ್ವಿನ್ 100ನೇ ಟೆಸ್ಟ್ ಪಂದ್ಯವನ್ನು ಆಡಿದಾಗ ನಾನು ಅವರನ್ನು ಅಭಿನಂದಿಸಲು ಸಾಕಷ್ಟು ಬಾರಿ ಫೋನ್ ಮಾಡಿದ್ದೆ. ಆದರೆ ಅಶ್ವಿನ್ ನನ್ನ ಫೋನ್​ಗೆ ಉತ್ತರಿಸುವ ಬದಲು ಕರೆಯನ್ನು ಕಟ್ ಮಾಡಿದ್ದರು ಎಂತಲೂ ಆರೋಪ ಮಾಡಿದ್ದರು.

ಶಿವರಾಮಕೃಷ್ಣನ್ ವೃತ್ತಿಜೀವನ

17 ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಲ್. ಶಿವರಾಮಕೃಷ್ಣನ್​ಗೆ ಟೀಂ ಇಂಡಿಯಾ ಪರ ದೀರ್ಘ ಕಾಲ ಆಡಲು ಸಾಧ್ಯವಾಗಲಿಲ್ಲ. ಅವರ ಅಲ್ಪ ವೃತ್ತಿಜೀವನದಲ್ಲಿ ಅವರು ಕೇವಲ ಒಂಬತ್ತು ಟೆಸ್ಟ್ ಪಂದ್ಯಗಳು ಮತ್ತು 16 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಟೆಸ್ಟ್‌ನಲ್ಲಿ 26 ವಿಕೆಟ್ ಕಬಳಿಸಿರುವ ಎಲ್. ಶಿವರಾಮಕೃಷ್ಣನ್ ಏಕದಿನ ಪಂದ್ಯಗಳಲ್ಲಿ 15 ವಿಕೆಟ್‌ ಪಡೆದಿದ್ದಾರೆ. ಆದಾಗ್ಯೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 154 ವಿಕೆಟ್‌ಗಳನ್ನು ಕಬಳಿಸಿರುವ ಅವರು ಐದು ಶತಕಗಳನ್ನು ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂಪಾದ ನೀರು ನಿಜವಾಗಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜಾಂಶವನ್ನು ತಜ್ಞರಿಂದಲೇ ತಿಳಿದುಕೊಳ್ಳಿ

ಬಿಸಿಲಿನ ಧಗೆಯಿಂದ ಮುಕ್ತಿ ಪಡೆಯಲು ಹೆಚ್ಚಿನವರು ತಂಪಾದ ನೀರು (Cold Water) ಕುಡಿಯುವುದಕ್ಕೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಬಿಸಿಲು ಮತ್ತು ಬೆವರಿನಿಂದ ದಣಿದಿದ್ದವರಿಗೆ ತಣ್ಣೀರು ತಕ್ಷಣ ತಂಪು ಮತ್ತು ಆರಾಮವನ್ನು ನೀಡುತ್ತದೆ. ಹಾಗಾಗಿ ಫ್ರಿಜ್‌ನ ನೀರು ಅಥವಾ ಐಸ್ ಹಾಕಿದ ನೀರು ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಪ್ರತಿಯೊಂದು ಅಭ್ಯಾಸವೂ ದೇಹದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ತಣ್ಣೀರು ಕೂಡ ಇದಕ್ಕೆ ಹೊರತಾಗಿಲ್ಲ. ಅದರಲ್ಲಿಯೂ ಕೆಲವರು ಪದೇ ಪದೇ ತಂಪಾಗಿರುವ ನೀರನ್ನು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ವಿಶೇಷವಾಗಿ ದೇಹ ಹೆಚ್ಚು ಬಿಸಿಯಾಗಿರುವಾಗ ಏಕಾಏಕಿ ತಣ್ಣೀರು ಕುಡಿಯುವುದರಿಂದ ಲಾಭಕ್ಕಿಂತ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇದು ಮುಂದೆ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಬಹುದು. ಹಾಗಾದರೆ ತಂಪಾದ ನೀರು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತವೆ, ಯಾರು ಇದರಿಂದ ದೂರವಿರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತಂಪಾದ ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:

ತಜ್ಞರ ಪ್ರಕಾರ, ತುಂಬಾ ತಂಪಾದ ನೀರು ಅಥವಾ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಭಾರವಾಗುವುದು ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಂಡುಬರಬಹುದು. ಜೊತೆಗೆ, ತಣ್ಣೀರಿನಿಂದ ಗಂಟಲಿನಲ್ಲಿ ಕೆರೆತ ಅಥವಾ ಶೀತಕ್ಕೆ ಕಾರಣವಾಗಬಹುದು, ಅದರಲ್ಲಿಯೂ ಬೇಸಿಗೆಯಲ್ಲಿ ದೇಹ ಬಿಸಿಯಾಗಿರುವುದರಿಂದ ಒಮ್ಮೆಲೇ ತಣ್ಣೀರು ಕುಡಿದಾಗ ದೇಹದ ತಾಪಮಾನದಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ. ಕೆಲವರಿಗೆ ತಲೆನೋವು ಅಥವಾ ಸುಸ್ತು ಕಾಣಿಸಿಕೊಳ್ಳಬಹುದು. ಮಾತ್ರವಲ್ಲ, ಇದು ರಕ್ತ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. ನಿರಂತರವಾಗಿ ತಣ್ಣೀರು ಕುಡಿಯುವ ಅಭ್ಯಾಸ ದೇಹದ ಸಹಜ ಪ್ರಕ್ರಿಯೆಗಳನ್ನು ನಿಧಾನಗೊಳಿಸಬಹುದು, ಇದರಿಂದ ದೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

ಇದನ್ನೂ ಓದಿ: ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದರಿಂದ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆಗಳಾಗುತ್ತೆ ಗೊತ್ತಾ?

ತಂಪಾದ ನೀರು ಯಾರಿಗೆ ಒಳ್ಳೆಯದಲ್ಲ?

  • ಜೀರ್ಣಕ್ರಿಯೆ ಸರಿಯಾಗಿ ಆಗದವರು ತಣ್ಣೀರು ಕುಡಿಯಬಾರದು.
  • ಗಂಟಲು ಅಥವಾ ಸೈನಸ್ ಸಮಸ್ಯೆ ಇರುವವರಿಗೆ ಇದು ಹಾನಿಕಾರವಾಗಬಹುದು.
  • ಆಗಾಗ ಶೀತ ಆಗುತ್ತಿದ್ದರೆ ನೀವು ತಂಪಾದ ನೀರಿನಿಂದ ದೂರವಿರುವುದು ಉತ್ತಮ.
  • ಸಣ್ಣ ಮಕ್ಕಳು ಮತ್ತು ವೃದ್ಧರಿಗೆ ತಣ್ಣೀರು ಒಳ್ಳೆಯದಲ್ಲ.
  • ಹೃದಯ ಅಥವಾ ರಕ್ತದ ಒತ್ತಡ (ಬ್ಲಡ್ ಪ್ರೆಶರ್) ಸಮಸ್ಯೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು.

ತಣ್ಣೀರು ಕುಡಿಯುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:

  • ತುಂಬಾ ಐಸ್ ಅಥವಾ ಅತಿಯಾಗಿ ತಂಪಾಗಿರುವ ನೀರನ್ನು ಕುಡಿಯುವುದು ಒಳ್ಳೆಯದಲ್ಲ.
  • ಬಿಸಿಲಿನಿಂದ ಬಂದ ತಕ್ಷಣವೇ ನೀರು ಕುಡಿಯದೆ, ಕೆಲವು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು.
  • ದಿನವಿಡೀ ನೀರನ್ನು ಸ್ವಲ್ಪಸ್ವಲ್ಪವೇ ಕುಡಿಯಬೇಕು.
  • ಗಂಟಲು ನೋವು ಅಥವಾ ಇತರ ಸಮಸ್ಯೆಗಳಿದ್ದರೆ ತಣ್ಣೀರು ಕುಡಿಯಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ: 50 ಸಾವಿರ ಸಿಲಿಂಡರ್ ಬೇಡಿಕೆ ಬಗ್ಗೆ ಪ್ರಸ್ತಾಪ

ಬೆಂಗಳೂರು, ಮಾರ್ಚ್​ 20: ದೇಶದಲ್ಲಿ ಸಿಲಿಂಡರ್ (Cylinder) ಅಭಾವದ ಸರಣಿ ಸಮಸ್ಯೆ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲೂ ಎಲ್​​​ಪಿಜಿಗಾಗಿ ಹೋಟೆಲ್ ಮಾಲೀಕರು ನಿತ್ಯ ಪರದಾಡುತ್ತಿದ್ದಾರೆ. ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಸಿಲಿಂಡರ್ ಇಲ್ಲದೆ ಹಲವು ಉದ್ಯಮಗಳು ಬಂದ್ ಆಗುತ್ತಿವೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (cm Siddaramaiah) ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಸಿಎಂ ಪತ್ರ

ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನ ಬರೆದಿದ್ದರು. ಈಗ ಸಿಲಿಂಡರ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಬರೆದ ಪತ್ರದಲ್ಲಿ ರಾಜ್ಯದ ಸಿಲಿಂಡರ್​ಗಳ ಅಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. 50 ಸಾವಿರ ಸಿಲಿಂಡರ್​ಗಳು ಬೇಕು. ಭಾರತಕ್ಕೆ ಬಂದಿರುವ ತೈಲ ಹಡಗುಗಳ ತೈಲವನ್ನ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಟ್ವೀಟ್​

ರೆಸ್ಟೋರೆಂಟ್​ಗಳು, ಹೋಟೆಲ್​ಗಳು, ಅಡುಗೆ ತಯಾರಿಸುವ ಸಂಸ್ಥೆಗಳು ಹಾಗೂ ಪಿಜಿಗಳಲ್ಲಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಹೀಗಾಗಿ 50 ಸಾವಿರ LPG ಸಿಲಿಂಡರ್​ಗಳ ಬೇಡಿಕೆಗೆ ಇದೆ. ನಾವು ದಿನಕ್ಕೆ 1000 ಸಿಲಿಂಡರ್​ಗಳನ್ನು ಮಾತ್ರ ಪೂರೈಸಲು ಸಮರ್ಥರಾಗಿದ್ದೇವೆ. ಈ ಕಾರಣಕ್ಕೆ ಹೋಟೆಲ್, ಪಿಜಿಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನ ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಇದೇ ರೀತಿ ಎಲ್​ಪಿಜಿ ಇಲ್ಲದೇ ಆಟೋ ರೀಕ್ಷಗಳಿಗೂ ಸಂಕಷ್ಟ ಶುರುವಾಗಿದೆ. ಭಾರತ 2 ಟ್ಯಾಂಕರ್​ಗಳನ್ನ ಸ್ವೀಕರಿಸಿದೆ. ಇದು ಸಮಸ್ಯೆಗಳನ್ನ ನಿವಾರಿಸುತ್ತದೆ. ಹೀಗಾಗಿ ಕರ್ನಾಟಕಕ್ಕೆ ಸಮರ್ಪಕ ಹಂಚಿಕೆ ಮಾಡಿ. ನಮ್ಮ ಲಭ್ಯತೆ ಚಿತಪಡಿಸಿಕೊಳ್ಳಲು ನೀವು ಹಸ್ತಕ್ಷೇಪ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಭರದ ಸಿದ್ಧತೆ: ನಾಳೆಯಿಂದ ಪರಿಶೀಲನಾ ಕಾರ್ಯ ಶುರು

ಬೆಂಗಳೂರು, ಮಾರ್ಚ್​​ 20: ಕಾಳೇನ ಅಗ್ರಹಾರ ಟು ತಾವರೆಕೆರೆ ನಡುವಿನ ಪಿಂಕ್ ಲೈನ್ ಎತ್ತರಿಸಿದ ಮೆಟ್ರೋ ಮಾರ್ಗವನ್ನು ಈ ವರ್ಷ ಮೇ ತಿಂಗಳಿನಲ್ಲಿ ಓಪನ್ ಮಾಡಲು ಬಿಎಂಆರ್ಸಿಎಲ್ ಭರದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ನಾಳೆಯಿಂದ ಏಪ್ರಿಲ್ 5ರ ವರೆಗೆ 16 ದಿನಗಳ ಕಾಲ RDSO ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪರಿಶೀಲನಾ ಕಾರ್ಯಗಳು ನಡೆಯಲಿವೆ. ರೈಲಿನ ಸ್ಪೀಡ್ ಮತ್ತು ಲೋಡ್ ಟೆಸ್ಟ್ ಜೊತೆಗೆ ಟ್ರ್ಯಾಕ್ ಟೆಸ್ಟ್, ಸ್ಟೇಷನ್​​ಗಳ ತಪಾಸಣೆ, ಪವರ್ ಚೆಕ್ಕಿಂಗ್ ಸೇರಿ ಹಲವು ಬಗೆಯ ಪರೀಕ್ಷೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಇನ್ನು ಈ ಪಿಂಕ್​​ ಲೈನ್​​ಗೆ ಅದಾಗಲೇ 4 ರೈಲುಗಳು ಆಗಮಿಸಿವೆ. ಇವುಗಳ ಜೊತಗೆ ಈ ತಿಂಗಳ ಕೊನೆಯಲ್ಲಿ ಒಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿವೆ. ಆ ಮೂಲಕ ‌ಮೊದಲ ಹಂತದಲ್ಲಿ ಪಿಂಕ್ ಲೈನ್​​ನಲ್ಲಿ 6 ಡ್ರೈವರ್ಲೆಸ್ ರೈಲುಗಳು ಸಂಚರಿಸಲಿದ್ದು, ಕಾಳೇನ ಅಗ್ರಹಾರ ಟು ನಾಗವಾರ ನಡುವೆ ಇವು ಸಂಪರ್ಕ ಕಲ್ಪಿಸಲಿವೆ. ಪಿಂಕ್ ಲೈನ್ ಒಟ್ಟು 21.25 ಕಿ.ಮೀ. ವಿಸ್ತೀರ್ಣ ಹೊಂದಿದ್ದು 18 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ. ಆ ಪೈಕಿ 12 ಅಂಡರ್ ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್​​ಗಳಾಗಿವೆ. ಈ ವರ್ಷ ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಓಪನ್ ಮಾಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದ್ದು, ಉಳಿದ 13.76.ಕಿ.ಮೀ ವಿಸ್ತೀರ್ಣದ 12 ಅಂಡರ್ ಗ್ರೌಂಡ್ ಸ್ಟೇಷನ್​​ ಮಾರ್ಗದ ಕಾಮಗಾರಿ ನಡೆಯುತ್ತಿವೆ. ಇವು ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಪೂರ್ತಿ ಮಾರ್ಗ ಓಪನ್​​ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋಗೆ ಬಂತು ನಾಲ್ಕನೇ ರೈಲು, ಮೇನಲ್ಲಿ ಸಂಚಾರ ನಿರೀಕ್ಷೆ

ಪಿಂಕ್​​ ಲೈನ್​​ಗಾಗಿ ಬಿಇಎಂಎಲ್​​ನಲ್ಲಿ ಒಟ್ಟು 23 ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, ಈ ಮಾರ್ಗದ ಆರಂಭದಿಂದಾಗಿ ಪ್ರತಿನಿತ್ಯ ವಿಪರೀತ ವಾಹನ ದಟ್ಟಣೆಯಿಂದ ಕೂಡಿರುವ ಬನ್ನೇರುಘಟ್ಟ ರಸ್ತೆಯ ಸಂಚಾರ ಸುಧಾರಿಸುವ ನಿರೀಕ್ಷೆಯೂ ಮೂಡಿದೆ. ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಕೊನೆಯದಾಗಿ ಕಮಿಷನರ್​​ ಆಫ್​​ ಮೆಟ್ರೋ ರೈಲ್ವೇ ಸೇಫ್ಟಿಯಿಂದಲೂ ಅನುಮತಿ ಸಿಗುತ್ತಿದ್ದಂತೆ ಪಿಂಕ್​​ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಶುರುವಾಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಐಪಿಒಗೆ ಮುನ್ನ ಫ್ಲಿಪ್​ಕಾರ್ಟ್ ಗ್ರೂಪ್ ಸಿಎಫ್​ಒ ಸ್ಥಾನ ಬಿಟ್ಟ ಶ್ರೀರಾಮ್ ವೆಂಕಟರಾಮ್

ನವದೆಹಲಿ, ಮಾರ್ಚ್ 20: ಅಮೆರಿಕದ ಎಂಎನ್​ಸಿ ಕಂಪನಿಯಾದ ವಾಲ್ಮಾರ್ಟ್​ನ ಒಡೆತನದ ಫ್ಲಿಪ್​ಕಾರ್ಟ್ ಸಂಸ್ಥೆಯ (Flipkart) ಎಕ್ಸಿಕ್ಯೂಟಿವ್ ಸ್ಥಾನಪಲ್ಲಟವಾಗುತ್ತಿದೆ. ಫ್ಲಿಪ್​ಕಾರ್ಟ್ ಗ್ರೂಪ್ ಚೀಫ್ ಫೈನಾನ್ಷಿಯಲ್ ಆಫೀಸರ್ ಸ್ಥಾನದಿಂದ ಶ್ರೀರಾಮ್ ವೆಂಕಟರಾಮ್ (Sriram Venkatram) ಅವರು ಕೆಳಗಿಳಿಯಲಿದ್ದಾರೆ. ಭಾರತದ ಅತಿದೊಡ್ಡ ಇಕಾಮರ್ಸ್ ಕಂಪನಿಗಳಲ್ಲಿ ಒಂದೆನಿಸಿರುವ ಫ್ಲಿಪ್​ಕಾರ್ಟ್ ಈ ಸಂಗತಿಯನ್ನು ಶುಕ್ರವಾರ ಪ್ರಕಟಿಸಿದೆ.

ಶ್ರೀರಾಮ್ ವೆಂಕಟರಾಮ್ ಅವರು 2015ರಲ್ಲಿ ಫ್ಲಿಪ್​ಕಾರ್ಟ್ ಸೇರಿದ್ದರು. ಹಲವು ಮುಂಚೂಣಿ ಹುದ್ದೆಗಳನ್ನು ನಿಭಾಯಿಸುತ್ತಾ ಹೋಗಿದ್ದ ಅವರು 2018ರಲ್ಲಿ ಗ್ರೂಪ್​ನ ಸಿಎಫ್​ಒ ಆಗಿ ಕಂಪನಿಯ ಹಣಕಾಸು ವಿಭಾಗದ ಚುಕ್ಕಾಣಿ ಹಿಡಿದು ಜವಾಬ್ದಾರಿ ನಿಭಾಯಿಸಿದ್ದರು.

ಇದನ್ನೂ ಓದಿ: ಶುಕ್ರವಾರ ಗರಿಗೆದರಿದ ಷೇರು ಬಜಾರು; ನಿನ್ನೆ ನೆಲಕಚ್ಚಿದ್ದ ಮಾರುಕಟ್ಟೆ ಇವತ್ತು ಚೇತರಿಸಿಕೊಂಡಿದ್ದು ಯಾಕೆ?

ರವಿ ಅಯ್ಯರ್ ಅವರು ಫ್ಲಿಪ್​ಕಾರ್ಟ್​ನ ನೂತನ ಸಿಎಫ್​ಒ

ಫ್ಲಿಪ್​ಕಾರ್ಟ್​ನ ಮಾರ್ಕೆಟ್​ಪ್ಲೇಸ್ ವಿಭಾಗದ ಸಿಎಫ್​ಒ ಆಗಿರುವ ರವಿ ಅಯ್ಯರ್ ಅವರು ಗ್ರೂಪ್ ಸಿಎಫ್​ಒ ಆಗಿ ಶ್ರೀರಾಮ್ ವೆಂಕಟರಾಮ್ ಸ್ಥಾನವನ್ನು ತುಂಬಲಿದ್ದಾರೆ. ಅಯ್ಯರ್ ಅವರು 2014ರಿಂದಲೂ ಫ್ಲಿಪ್​ಕಾರ್ಟ್​ನಲ್ಲಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಇವರನ್ನು ಉನ್ನತ ಹುದ್ದೆಗೆ ಅಣಿಗೊಳಿಸುವ ಕೆಲಸ ಕಂಪನಿಯಲ್ಲಿ ನಡೆದಿದೆ. ಆ ನಿಟ್ಟಿನಲ್ಲಿ ಮಾರ್ಕೆಟ್​ಪ್ಲೇಸ್ ಬ್ಯುಸಿನೆಸ್​ನ ಸಿಎಫ್​ಒ ಆಗಿ ಅವರಿಗೆ ಬಡ್ತಿ ಕೊಡಲಾಗಿತ್ತು. ಗ್ರೂಪ್ ಸಿಎಫ್​ಒ ಆಗಲು ಬೇಕಾದ ಪ್ರತ್ಯಕ್ಷ ಅನುಭವ ಗಳಿಸಲು ಅವರಿಗೆ ಆ ಸ್ಥಾನ ಕೊಡಲಾಗಿದ್ದಿರಬಹುದು.

ಅದೇ ವೇಳೆ, ಶ್ರೀರಾಮ್ ವೆಂಕಟರಾಮ್ ಅವರೂ ಕೂಡ ಆರು ತಿಂಗಳಿಂದ ಕಂಪನಿಯ ಕಾರ್ಯಗಳಲ್ಲಿ ಮತ್ತು ನಿರ್ಧಾರಗಳಲ್ಲಿ ತೀರಾ ಸಕ್ರಿಯವಾಗಿ ತೊಡಗಿಸಿಕೊಳ್ಳುವುದನ್ನು ಕಡಿಮೆಗೊಳಿಸಿದ್ದರು. ರವಿ ಅಯ್ಯರ್ ಅವರನ್ನು ಆ ಸ್ಥಾನಕ್ಕೆ ಅಣಿಗೊಳಿಸುವ ಪ್ರಯತ್ನ ಅದಾಗಿದ್ದಿರಬಹುದು.

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್ ಬೆಲೆ 2 ರೂ ಹೆಚ್ಚಳ; ಮಾಮೂಲಿ ಪೆಟ್ರೋಲ್ ದರದಲ್ಲಿ ಇಲ್ಲ ಬದಲಾವಣೆ

ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಫ್ಲಿಪ್​ಕಾರ್ಟ್ ಭಾರತದ ಮುಖ್ಯ ಇಕಾಮರ್ಸ್ ಕಂಪನಿ. ಬನ್ಸಾಲ್ ಸಹೋದರರು ಸ್ಥಾಪಿಸಿದ ಕಂಪನಿ ಇದು. ಅಮೆರಿಕದ ರೀಟೇಲ್ ಮಾರಾಟ ಕಂಪನಿಯಾದ ವಾಲ್ಮಾರ್ಟ್ ಫ್ಲಿಪ್​ಕಾರ್ಟ್ ಅನ್ನು ಖರೀದಿಸಿತ್ತು. ಸದ್ಯ ಕಲ್ಯಾಣ್ ಕೃಷ್ಣಮೂರ್ತಿ ಅವರು ಗ್ರೂಪ್ ಸಿಇಒ ಆಗಿದ್ದಾರೆ. ಫ್ಲಿಪ್​ಕಾರ್ಟ್ ಈ ವರ್ಷ ಐಪಿಒ ಆಫರ್ ಮಾಡುತ್ತಿದ್ದು ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link