‘ಬ್ಲೂ ಡ್ರಮ್’ ಕೊಲೆ ಬೆದರಿಕೆ: ಪ್ರಾಣಭಯಕ್ಕೆ ಹೆಂಡತಿಯನ್ನು ಪ್ರೇಮಿಯ ಜೊತೆ ಕಳಿಸಿಕೊಟ್ಟ ಗಂಡ!
ಬುಲಂದ್‌ಶಹರ್, ಮಾ.20 : ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ‘ನೀಲಿ ಡ್ರಮ್’ (Blue Drum) ಎನ್ನುವ ಪದವೊಂದು ಕ್ರೌರ್ಯದ ಸಂಕೇತವಾಗಿ ಪ್ರಚಾರವಾಗುತ್ತಿದೆ. ಕಳೆದ ವರ್ಷ ಮೀರತ್‌ನಲ್ಲಿ ನಡೆದ ಭೀಕರ ಕೊಲೆಯ ನೆನಪು ಮಾಸುವ ಮುನ್ನವೇ, ಅದೇ ಮಾದರಿಯ ಬೆದರಿಕೆಗೆ ಹೆದರಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆಗೇ ಕಳುಹಿಸಿಕೊಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶದ ದೌಲತ್‌ಪುರ ಗ್ರಾಮದ ದಿನಗೂಲಿ ಕಾರ್ಮಿಕ ರಾಜಕುಮಾರ್, ಕಳೆದ ಏಳು ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು. ಈ ದಂಪತಿಗೆ…