Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್ ಸಿಲಿಂಡರ್ ದರ 195ರೂ. ಹೆಚ್ಚಳ
ನವದೆಹಲಿ, ಏಪ್ರಿಲ್ 01: ಕಮರ್ಷಿಯಲ್ ಸಿಲಿಂಡರ್ ಅಭಾವದ ನಡುವೆ ಬಳಕೆದಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವ ಕಾರಣ, ಇಂದಿನಿಂದ (ಏಪ್ರಿಲ್ 1) ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 195.50 ರೂ. ಹೆಚ್ಚಳವಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು 19 ಕೆ.ಜಿ. ಸಿಲಿಂಡರ್ ಬೆಲೆ 114.5 ರೂ. ಏರಿಕೆಯಾಗಿತ್ತು. ಯುದ್ಧದ ಕಾರಣಕ್ಕೆ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ LPG ಪೂರೈಕೆ…