ಪಠಾಣ್, ಮಾರ್ಚ್ 19: ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿ ಓಡಿಸಿರುವ ಆತಂಕಕಾರಿ ಘಟನೆ ಗುಜರಾತ್ನಲ್ಲಿ ನಡೆದಿದೆ. ಮಾರ್ಚ್ 15ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ ಹಳ್ಳಿಯಲ್ಲಿರುವ ತೋಟದ ಮನೆಗೆ ನುಗ್ಗಿತ್ತು. ಎರಡು ಪೊಲೀಸ್ ವ್ಯಾನ್ಗಳು ಸ್ಥಳದಲ್ಲಿ ನಿಂತು ಅಲ್ಲಿಂದ ಹೊರಟುಹೊದವು, ನಂತರ ನಡೆದಿದ್ದು ಹಿಂಸಾಚಾರ.
ಕೆಲವು ದಿನಗಳ ನಂತರ ಅದೇ ಗುಂಪಿನಲ್ಲಿರುವ ಜನರನ್ನು ಬೀದಿಗೆ ಎಳೆದುಕೊಂಡು ಹೋಗಿ ಲಾಠಿ ಏಟು ಕೊಟ್ಟು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. ಚನಸ್ಮಾ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎಂಟು ವಾಹನಗಳಲ್ಲಿ 15 ರಿಂದ 20 ಜನರು ಬಂದು ಭವೇಶ್ ದೇಸಾಯಿ ಅವರ ತೋಟದ ಮನೆಯನ್ನು ಗುರಿಯಾಗಿಸಿಕೊಂಡಿದ್ದರು. ಗೇಟ್‌ಗಳನ್ನು ಬೀಳಿಸಿ, ಅಲ್ಲಿರುವ ವಸ್ತುಗಳೆಲ್ಲವನ್ನೂ ಧ್ವಂಸಗೊಳಿಸಿ, ಕೊಲೆ ಬೆದರಿಕೆ ಹಾಕಿದ್ದರು.ಜಿತುಭಾ, ಜಹುಭಾ, ದಲ್ಪುಜಿ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ದೇವಾಲಯದ ದೇಣಿಗೆ ಸಂಬಂಧಿಸಿದ ವಿವಾದವೇ ಹಿಂಸಾಚಾರದ ಮೂಲವಾಗಿತ್ತು.
‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ರಿಲೀಸ್ ಆಗಿ ವಿವಾದ ಸೃಷ್ಟಿ ಮಾಡಿತು. ಈ ಹಾಡಿನ ಸಾಲುಗಳು ಚರ್ಚೆಯನ್ನು ಹುಟ್ಟುಹಾಕಿದವು. ಇದರಿಂದ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್, ಹಾಡಲ್ಲಿ ಡ್ಯಾನ್ಸ್ ಮಾಡಿದ ನೋರಾ ಫತೇಹಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಈ ಘಟನೆ ಬಳಿಕ ಹಾಡಿನ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ಸೋಶಿಯಲ್ ಮೀಡಿಯಾದಿಂದ ಮಾಯವಾಗಿದ್ದಾರೆ.
‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಶನಿವಾರ (ಮಾರ್ಚ್ 14) ರಿಲೀಸ್ ಆಯಿತು. ಹಾಡು ಬಿಡುಗಡೆ ಆದ ಕೆಲವೇ ದಿನಕ್ಕೆ ವಿವಾದದ ಹೊಗೆ ಕಾಣಿಸಿಕೊಂಡಿತು. ಕನ್ನಡದಿಂದ ಹಿಡಿದು ಬಾಲಿವುಡ್ವರೆಗೆ ಈ ಚಿತ್ರದ ಹಾಡನ್ನು ಟೀಕಿಸಿದರು. ಸಾಹಿತ್ಯ ಅಶ್ಲೀಲವಾಗಿದೆ ಎಂದು ಟೀಕಿಸಲಾಯಿತು. ಈಗ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡನ್ನು ಯೂಟ್ಯೂಬ್ನಿಂದ ತೆಗೆಯಲಾಗಿದೆ.
‘ಸರ್ಸೆ’ ಹಾಡಿಗೆ ಕನ್ನಡದಲ್ಲಿ ಸಾಂಗ್ ಬರೆದಿದ್ದು ಜೋಗಿ ಪ್ರೇಮ್ ಅವರು. ಈ ಹಾಡನ್ನು ಹಾಡಿದ್ದು ಐಶ್ವರ್ಯಾ ಅವರು. ಈ ಕಾರಣಕ್ಕೆ ಅವರ ಇನ್ಸ್ಟಾ ಖಾತೆಗೆ ಸಾಕಷ್ಟು ಸಂದೇಶ ಹಾಗೂ ಕಮೆಂಟ್ಗಳು ಬಂದಿರಬಹುದು. ಈ ಕಾರಣದಿಂದ ಇನ್ಸ್ಟಾಗ್ರಾಮ್ನಿಂದ ದೂರ ಉಳಿದರೇ ಎನ್ನುವ ಪ್ರಶ್ನೆ ಮೂಡಿದೆ. ವಿವಾದ ತಣ್ಣಗಾದ ಬಳಿಕ ಅವರು ಕಂಬ್ಯಾಕ್ ಮಾಡಬಹುದು ಎಂಬ ನಿರೀಕ್ಷೆ ಇದೆ.
ಇನ್ಸ್ಟಾಗ್ರಾಮ್ ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಲು ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈಗ ಹಾಡಿನ ವಿವಾದ ಸಂದರ್ಭದಲ್ಲೇ ಅವರು ಡಿ ಆ್ಯಕ್ಟಿವೇಟ್ ಮಾಡಿರುವುದರಿಂದ ಸಾಕಷ್ಟು ಚರ್ಚೆ ಆಗಿದೆ. ಇದು ಕಾಕತಾಳೀಯ ಕೂಡ ಇರಬಹುದು ಎಂದು ಹೇಳಲಾಗುತ್ತಾ ಇದೆ.
‘ಸರ್ಸೆ ನಿನ್ನ ಸೆರಗ ಸರ್ಸೆ’ ಸಾಂಗ್ನ ಲಿರಿಕ್ಸ್ನ ಸಂಪೂರ್ಣವಾಗಿ ಬದಲಿಸಿ ಹೊಸ ಹಾಡಿನ ಮೂಲಕ ಬರೋದಾಗಿ ಜೋಗಿ ಪ್ರೇಮ್ ಹೇಳಿದ್ದಾರೆ. ಸಿನಿಮಾ ರಿಲೀಸ್ಗೆ ಕೆಲವೇ ವಾರಗಳು ಬಾಕಿ ಇರುವಾಗ ವಿವಾದ ಜೋರಾಗಿದೆ.
ಮಕರ ರಾಶಿಯವರಿಗೆ ಯುಗಾದಿ 2026 ಶುಭಕರವಾಗಿದ್ದು, ಕಳೆದ ಎಂಟು ವರ್ಷಗಳಿಂದ ಅನುಭವಿಸಿದ ತೊಂದರೆಗಳಿಗೆ ಪರಿಹಾರ ದೊರೆಯಲಿದೆ. ಜೂನ್‌ನಿಂದ ಮಕರ ರಾಶಿಯವರಿಗೆ ರಾಜಯೋಗ ಆರಂಭವಾಗಲಿದೆ ಎಂದು ಜ್ಯೋತಿಷಿ ಕೆ ವೆಂಕಟೇಶ್ ಶರ್ಮಾ ಭವಿಷ್ಯ ನುಡಿದಿದ್ದಾರೆ. ವ್ಯಾಪಾರದಲ್ಲಿ ನಿಧಾನಗತಿಯ ಬೆಳವಣಿಗೆ ಕಂಡುಬರಲಿದ್ದು, ಹಣಕಾಸು ಉಳಿತಾಯ ಉತ್ತಮವಾಗಲಿದೆ. ಕುಟುಂಬದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಆರೋಗ್ಯದ ವಿಚಾರದಲ್ಲಿ ಸಂಧಿ ನೋವುಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಜೂನ್ ಎರಡರಂದು ಗುರು ಉಚ್ಚ ಸ್ಥಾನಕ್ಕೆ ಬರುವುದರಿಂದ ಹಣಕಾಸು, ಮದುವೆ ಆಗದವರಿಗೆ, ವಿದ್ಯಾರ್ಥಿಗಳಿಗೆ, ಹೊಸ ಕೆಲಸ ಹುಡುಕುವವರಿಗೆ ಇದು ಉತ್ತಮ ಸಮಯವಾಗಿದೆ.
ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಕೆಲವು ಸವಾಲುಗಳೂ ಇವೆ. ರಾಹುವಿನಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು, ಇದಕ್ಕೆ ಸುಬ್ರಹ್ಮಣ್ಯೇಶ್ವರ ಮತ್ತು ಲಕ್ಷ್ಮೀನರಸಿಂಹನ ಆರಾಧನೆ ಸೂಚಿಸಲಾಗಿದೆ. ಕೇತುವಿನಿಂದ ಮೃತ್ಯುಭಯ ಇರಬಹುದು, ಗಣಪತಿಯ ಆರಾಧನೆ ಮಾಡುವುದು ಉತ್ತಮ. ಶನಿ ಸ್ತೋತ್ರ ಪಠಿಸುವುದು, ಕಪ್ಪು ಬಟ್ಟೆಯಲ್ಲಿ ಉಪ್ಪು, ಬೆಲ್ಲ, ಒಣಮೆಣಸಿನಕಾಯಿ ಕಟ್ಟಿ ಮೂರು ಸುತ್ತು ತಿರುಗಿಸಿ ನದಿ ಅಥವಾ ನೀರಿನಲ್ಲಿ ಬಿಡುವುದರಿಂದ ದೃಷ್ಟಿ ದೋಷಗಳು ನಿವಾರಣೆಯಾಗಿ ಉತ್ತಮ ಫಲ ಸಿಗಲಿದೆ.
ತಾಯಿ ಮಗಳಿಬ್ಬರು ಲಿಫ್ಟ್ ಒಳಗೆ ಪ್ರವೇಶಿಸಿದ್ದಾರೆ, ಕ್ಲೋಸ್ ಬಟನ್ ಒತ್ತಿದ್ದಾರೆ, ಆ ಸಮಯಕ್ಕೆ ಸರಿಯಾಗಿ ಮಹಿಳೆ ಏನೋ ಮರೆತು ಹೋಗಿದ್ದೀನೆಂದು ಲಿಪ್ಟ್ನಿಂದ ಆಚೆ ಹೋಗಿದ್ದಾಳೆ. ಆ ಬಾಲಕಿ ಲಿಫ್ಟ್ ಒಳಗೆ ಇರುವ ಸಮಯದಲ್ಲಿ ಬಾಗಿಲು ಮುಚ್ಚಿದೆ. ಆಗ ಬಾಲಕಿ ಗಾಬರಿಗೊಂಡು ಅಳುವುದರ ಜತೆಗೆ ಲಿಫ್ಟ್ ಬಟನ್ ಪ್ರೆಸ್ ಮಾಡುತ್ತಿತ್ತು. ಒಮ್ಮೆ ಲಿಫ್ಟ್ ಬಾಗಿಲು ತೆರೆಯಿತು ಆದರೆ ಅದು ತನ್ನ ಫ್ಲೋರ್ ಅಲ್ಲ ಎಂಬ ಅರಿವು ಮಗುವಿಗಿದ್ದ ಕಾರಣ ಅದು ಹೊರಗೆ ಹೋಗಲಿಲ್ಲ, ಅಂತಿಮವಾಗಿ ತಾಯಿ ಇದ್ದ ಫ್ಲೋರ್ಗೆ ಲಿಫ್ಟ್ ಬಂದು ಬಾಗಿಲು ತೆರೆದಾಗ ಆ ಬಾಲಕಿಗೆ ಆದ ಖುಷಿ ಅಷ್ಟಿಷ್ಟಲ್ಲ.
ಧನು ರಾಶಿಯವರಿಗೆ 2026ರ ಯುಗಾದಿ ವರ್ಷವು ಉದ್ಯೋಗ ಮತ್ತು ವ್ಯಾಪಾರದಲ್ಲಿ ಮಿಶ್ರಫಲಗಳನ್ನು ನೀಡಲಿದೆ. ನಾಲ್ಕನೇ ಶನಿಯ ಪ್ರಭಾವದಿಂದ ಕುಟುಂಬದಲ್ಲಿ ಮಿಶ್ರಫಲಗಳಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲು ನೋವು ಮತ್ತು ಇತರ ದೈಹಿಕ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ. ಬುಧನ ಪ್ರಭಾವದಿಂದ ಬುದ್ಧಿ ಕ್ಲೇಶ, ರಾಹುವಿನಿಂದ ಹಣಕಾಸಿನ ವ್ಯವಸ್ಥೆ, ರವಿಯಿಂದ ಶತ್ರು ಭಯ, ಕುಜನಿಂದ ವಿರೋಧ, ಹಾಗೂ ಶನಿಯಿಂದ ಭಯ ಮತ್ತು ಕಾರ್ಯನಷ್ಟ ಉಂಟಾಗಬಹುದು. ಆದಾಗ್ಯೂ, ಐದರಲ್ಲಿರುವ ಶುಕ್ರ ದ್ರವ್ಯ ಲಾಭ ತರಲಿದ್ದು, ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ನಡೆಯುತ್ತವೆ. ಕೇತುವಿನಿಂದ ಕಲಹ ಸಾಧ್ಯತೆಯಿದ್ದು, ಗಣಪತಿ ಆರಾಧನೆ ಅಗತ್ಯ. ರೋಗ ವೃದ್ಧಿಗೆ ಕಾರಣವಾಗುವ ಎಂಟನೇ ಚಂದ್ರನ ಪ್ರಭಾವವೂ ಇರುತ್ತದೆ. ಆಂಜನೇಯ ಸ್ವಾಮಿ ಪೂಜೆ, ಗುರು ಮಂತ್ರ ಮತ್ತು ಶನಿ ದೋಷ ನಿವಾರಣೆಗೆ ಎಳ್ಳು ದಾನದಂತಹ ಪರಿಹಾರಗಳನ್ನು ಅನುಸರಿಸಲು ಜ್ಯೋತಿಷಿ ಕೆ. ವೆಂಕಟೇಶ್ ಶರ್ಮಾ ಸಲಹೆ ನೀಡಿದ್ದಾರೆ.
ಬೆಂಗಳೂರು, ಮಾ.19: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬಿಎಂಟಿಸಿ ಚಾಲಕರ ಅಟ್ಟಹಾಸ ಮುಂದುವರಿದಿದೆ. ನಿನ್ನೆ ರಾತ್ರಿ ಸುಮಾರು 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಳಿ ಮದ್ಯದ ಅಮಲಿನಲ್ಲಿ ಬಸ್ ಚಲಾಯಿಸುತ್ತಿದ್ದ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾನೆ. KA 57 F 3660 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್ ಚಾಲಕ ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿ ಬಸ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸುತ್ತಿದ್ದುದನ್ನು ಕಂಡು ಪ್ರಯಾಣಿಕರು ಭೀತಿಗೊಳಗಾಗಿದ್ದರು. ಚಾಲಕನ ವರ್ತನೆಯಿಂದ ಗಾಬರಿಗೊಂಡ ಮಹಿಳೆಯೊಬ್ಬರು ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಬಸ್ ನಿಲ್ಲಿಸದ ಚಾಲಕ, ಮಹಿಳೆಯ ಜೊತೆ ಉದ್ಧಟತನದಿಂದ ವಾಗ್ವಾದಕ್ಕಿಳಿದಿದ್ದಾನೆ. ಚಾಲಕನ ಅಸಭ್ಯ ವರ್ತನೆ ಮತ್ತು ಆತ ಮದ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಲು ಮಹಿಳೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು, ಮಾರ್ಚ್ 19: ಬೆಂಗಳೂರು (Bangalore) ಸೇರಿದಂತೆ ಕರ್ನಾಟಕದ ಹಲವೆಡೆ ಬುಧವಾರ ರಾತ್ರಿ ಭಾರಿ ಮಳೆ ಸುರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಆವರಣದಲ್ಲಿಯೂ ಭಾರಿ ಮಳೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಕೆಲವು ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿದ ಹಾಗೂ ಪೈಪ್ ಒಡೆದು ನೀರು ಚಿಮ್ಮಿದ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕ ಪೋರ್ಟ್ಫೋಲಿಯೋ ಎಂಬ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಲಾಗಿರುವ ವಿಡಿಯೋದಲ್ಲಿ, ಏರ್‌ಪೋರ್ಟ್ ಟರ್ಮಿನಲ್‌ನ ಮೇಲ್ಛಾವಣಿಯಿಂದ ನೀರು ಸುರಿಯುತ್ತಿರುವುದು ಕಾಣುತ್ತದೆ. ಹೊರಭಾಗದಲ್ಲೂ ಪೈಪ್‌ಗಳಿಂದ ನೀರು ಹೊರಬಂದು ಸುತ್ತಮುತ್ತ ಪ್ರದೇಶದಲ್ಲಿ ನೀರು ತುಂಬಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಈ ಕಾರಣದಿಂದ ಪ್ರಯಾಣಿಕರಿಗೆ ಅಸೌಕರ್ಯ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕರ್ನಾಟಕ ಪೋರ್ಟ್ಫೋಲಿಯೋ ಎಕ್ಸ್ ವಿಡಿಯೋ
Today’s rainfall turned parts of Kempegowda International Airport into what felt like a mini waterfall, with water dripping from the ceiling and even coming out of drainage pipes to the outside of the airport. It caused inconvenience for passengers—raising questions like, is… pic.twitter.com/dURYIyoK50
‘ಮಳೆಯ ಪರಿಣಾಮ ಏರ್‌ಪೋರ್ಟ್‌ನಲ್ಲಿ ಮಿನಿ ಜಲಪಾತದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ವಹಣೆ ಎಲ್ಲಿದೆ’ ಎಂದು ಕರ್ನಾಟಕ ಪೋರ್ಟ್ಫೋಲಿಯೋ ಎಕ್ಸ್ ತಾಣದಲ್ಲಿ ಪ್ರಶ್ನಿಸಲಾಗಿದೆ.
ಮೂಲಗಳ ಪ್ರಕಾರ, ಟರ್ಮಿನಲ್ 1 ರ ಹೊರಭಾಗದಲ್ಲಿ ಛಾವಣಿ ಸೋರಿಕೆ, ಪೈಪ್ ಒಡೆದು ನೀರು ಚಿಮ್ಮಿದೆ ಎನ್ನಲಾಗಿದೆ. ಆದರೆ, ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಬೆಂಗಳೂರು ವಿಮಾನ ನಿಲ್ದಾಣವು ಇಂತಹ ದೃಶ್ಯಗಳಿಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವಿಮಾನ ನಿಲ್ದಾಣದ ಛಾವಣಿ ಸೋರುತ್ತಿರುವ ಮತ್ತು ನೀರು ಟರ್ಮಿನಲ್ನಲ್ಲಿ ನೀರು ಸಂಗ್ರಹವಾಗುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. 2024 ರ ಮೇ ತಿಂಗಳಲ್ಲಿಯೂ ಸಹ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಛಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಇದರಿಂದಾಗಿ ಮಳೆ ನೀರು ಸೋರಿಕೆಯಾಗಿತ್ತು. ಇದೀಗ ಮತ್ತೆ ಅಂಥದ್ದೇ ವಿಡಿಯೋ ವೈರಲ್ ಆಗಿರುವುದು ಮಹಾನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಾಗಲಕೋಟೆ, ಮಾರ್ಚ್ 19:ಉಪ ಚುನಾವಣೆಯ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮಾರ್ಚ್ 23ರ ಸೋಮವಾರದಂದು ತಮ್ಮ ನಾಮಪತ್ರವನ್ನು ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಸೇರಿ ರಾಜ್ಯಾದ್ಯ ಪ್ರಮುಖ ನಾಯಕರು ಮತ್ತು ಮಾಜಿ ಮಂತ್ರಿಗಳು ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿಗಳ ಸೂಚನೆಯಂತೆ ಚುನಾವಣೆಯನ್ನು ಹಬ್ಬದಂತೆ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ಶಾಸಕ ಯತ್ನಾಳ್ ಕೂಡ ವೈಯಕ್ತಿಕ ಸಂಬಂಧಗಳ ಆಧಾರದ ಮೇಲೆ ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿರೋದು ಅಚ್ಚರಿ ಮೂಡಿಸಿದೆ.
ಬೆಂಗಳೂರು. ಮಾ.19: ಕೆ. ವೆಂಕಟೇಶ್ ಶರ್ಮಾ ಅವರು ಯುಗಾದಿ ಭವಿಷ್ಯ 2026ರಂದು ಸಿಂಹ ರಾಶಿಯ ಫಲಗಳ ಬಗ್ಗೆ ವಿವರಿಸಿದ್ದಾರೆ. ಈ ವರ್ಷ ಸಿಂಹ ರಾಶಿಯವರಿಗೆ ಗೌರವ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉನ್ನತ ಸ್ಥಿತಿ ದೊರೆಯುತ್ತದೆ. ಹಣಕಾಸು ಹೂಡಿಕೆಯಲ್ಲಿ ಲಾಭ ನಿರೀಕ್ಷಿಸಬಹುದು. ಕುಟುಂಬ ಮತ್ತು ಮಕ್ಕಳಿಂದ ಸಂತೋಷವಿರುತ್ತದೆ. ಆರೋಗ್ಯದ ವಿಷಯದಲ್ಲಿ, ಸಿಂಹ ರಾಶಿಯವರು ತಮ್ಮ ಹೃದಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜಿಡ್ಡಿನ ಪದಾರ್ಥಗಳನ್ನು ತ್ಯಜಿಸಿ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಉತ್ತಮ. ಗ್ರಹಣದ ಪ್ರಭಾವದಿಂದ ಎಚ್ಚರಿಕೆ ಅಗತ್ಯ. ಕೆಲವು ಗ್ರಹಗಳ ಪ್ರಭಾವಗಳು ಸವಾಲುಗಳನ್ನು ತರಬಹುದು. ಮೊದಲನೇ ಕೇತು ಬುದ್ಧಿ ಕ್ಲೇಶ, ಎರಡನೇ ಚಂದ್ರ ಧನಹಾನಿ, ಎರಡನೇ ಬುಧ ಶೋಕ ನೀಡಬಹುದು. ಏಳನೇ ರಾಹು ಭಯ ಮತ್ತು ಕಲಹಕ್ಕೆ ಕಾರಣನಾಗಬಹುದು. ಇವುಗಳಿಗೆ ಪರಿಹಾರವಾಗಿ ಗಣಪತಿ ಮತ್ತು ದಶ ಲಕ್ಷ್ಮೀನರಸಿಂಹ ಸ್ವಾಮಿಯನ್ನು ಆರಾಧಿಸುವುದು ಸೂಕ್ತ. ಎಂಟನೇ ರವಿ ಶರೀರ ಪೀಡೆ, ಎಂಟನೇ ಕುಜ ಗಾಡಿಗಳಿಂದ ಎಚ್ಚರಿಕೆ, ಎಂಟನೇ ಶನಿ ಭಯ ನೀಡಬಹುದು. ಒಂಬತ್ತನೇ ಶುಕ್ರ ದ್ರವ್ಯಲಾಭ, ಹನ್ನೊಂದನೇ ಗುರು ಹಣದ ಹರಿವನ್ನು ಹೆಚ್ಚಿಸಲಿದ್ದಾರೆ. ಒಟ್ಟಾರೆ, ಈ ಯುಗಾದಿ ವರ್ಷವು ಸಿಂಹ ರಾಶಿಯವರಿಗೆ ಅದೃಷ್ಟದ ವರ್ಷವಾಗಿದ್ದು, ಉತ್ತಮ ಫಲಗಳನ್ನು ನೀಡಲಿದೆ ಎಂದು ಶರ್ಮಾ ಅವರು ತಿಳಿಸಿದ್ದಾರೆ.
ಗಣೇಶ್ ಅವರು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಪಿನಾಕ’ ಹೆಸರಿನ ಸಿನಿಮಾ ಒಪ್ಪಿಕೊಂಡರು. ಈಗ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾನ ಅವರು ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ‘ತಮ್ಮ ಸುಖಾಗಮನ ಬಯಸುವ’ ಹೆಸರಿನ ಹೊಸ ಚಿತ್ರವನ್ನು ಗಣೇಶ್ ಅನೌನ್ಸ್ ಮಾಡಿದ್ದರು. ಈಗ ಅವರು ‘ಬೃಂದಾವಿಹಾರಿ’ ಹೆಸರಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಯುಗಾದಿಗೆ ಈ ಚಿತ್ರ ಅನೌನ್ಸ್ ಆಗಿದೆ.
ಶ್ರೀನಿವಾಸ್ ರಾಜು ಅವರು ‘ಬೃಂದಾವಿಹಾರಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಮೃದ್ಧಿ ಮಂಜುನಾಥ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಣೇಶ್ ಅವರ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ.
‘ಬೃಂದಾವಿಹಾರಿ’ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಈ ಸಿನಿಮಾದ ಟೈಟಲ್ ಯುಗಾದಿ ಅನೌನ್ಸ್ ಆಗಲಿದೆ ಎಂಬ ವಿಷಯವನನು ಗಣೇಶ್ ಇತ್ತೀಚೆಗೆ ರಿವೀಲ್ ಮಾಡಿದ್ದರು. ಫನ್ ವಿಡಿಯೋ ಮೂಲಕ ವಿಷಯವನ್ನು ತಿಳಿಸಲಾಗಿತ್ತು.
ಕಳೆದ ವರ್ಷ ಗಣೇಶ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಈ ವರ್ಷ ಅವರ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಲಿವೆಯೇ ಎಂಬ ಪ್ರಶ್ನೆ ಮೂಡಿದೆ.