30 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ನಟಿ ಮೀನಾಕ್ಷಿ ಶೇಷಾದ್ರಿ; ಚಿತ್ರರಂಗಕ್ಕೆ ಕಮ್ಬ್ಯಾಕ್ – Kannada News | Meenakshi Seshadri returns to Mumbai announces acting comeback after 30 years
ಬಾಲಿವುಡ್‌ನ (Bollywood) ಹಿರಿಯ ಹಾಗೂ ಜನಪ್ರಿಯ ನಟಿ ಮೀನಾಕ್ಷಿ ಶೇಷಾದ್ರಿ ಅವರು ಸುಮಾರು ಮೂರು ದಶಕಗಳ ಕಾಲ ವಿದೇಶದಲ್ಲಿ ನೆಲೆಸಿದ ನಂತರ ಕಡೆಗೂ ಭಾರತಕ್ಕೆ ಮರಳಿದ್ದಾರೆ. 1990ರ ದಶಕದ ವೇಳೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗದಿಂದ ದೂರ ಸರಿದಿದ್ದ ನಟಿ, ಇದೀಗ ಸಿನಿಮಾ ಮತ್ತು ಒಟಿಟಿ ಶೋಗಳ ಮೂಲಕ ಹೊಸ ಅವಕಾಶಗಳೊಂದಿಗೆ ತಮ್ಮ ನಟನಾ ಪ್ರಯಾಣವನ್ನು ಪುನರಾರಂಭಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಮೀನಾಕ್ಷಿ ಶೇಷಾದ್ರಿ (Meenakshi Seshadri) ಅವರು ಈ ಬಗ್ಗೆ…