ಚಿನ್ನದ ನೆಲದಲ್ಲಿ ಮತ್ತೆ ಮರುಕಳಿಸಲಿದೆ ಕ್ರೀಡಾ ಗತವೈಭವ: 100 ವರ್ಷ ಇತಿಹಾಸವಿರುವ ಕ್ರೀಡಾಂಗಣಕ್ಕೆ ಪುನಶ್ಚೇತನ ಭಾಗ್ಯ – Kannada News | Kolar Gold Fields Sports Revival: 100 Year Old Gymkhana Stadium Set for a Comeback
ಕೋಲಾರ, ಮೇ 25: ಚಿನ್ನದ ನೆಲದಲ್ಲಿ ನೂರಾರು ಯುವಕರಿಗೆ ಕ್ರೀಡೆಯ (Sports) ಮೂಲಕ ಜೀವನ ರೂಪಿಸಿಕೊಟ್ಟಿದ್ದ ಐತಿಹಾಸಿಕ ಕ್ರೀಡಾಂಗಣ. ಆದರೆ, ಚಿನ್ನದ ಗಣಿಗೆ ಬೀಗ ಬಿದ್ದ ಬೆನ್ನಲ್ಲೇ ಆ ಬೃಹತ್ ಮೈದಾನಕ್ಕೂ ಗ್ರಹಣ ಹಿಡಿದಿತ್ತು. ಆದರೆ ಇದೀಗ ಹತ್ತಾರು ವರ್ಷಗಳಿಂದ ಮೂಲೆಗುಂಪಾಗಿದ್ದ ಆ ಕ್ರೀಡಾಂಗಣಕ್ಕೆ ಕೊನೆಗೂ ಪುನರ್ಜನ್ಮ ಸಿಕ್ಕಿದೆ. ಕೋಲಾರ (kolar) ಜಿಲ್ಲೆಯ ಕೆಜಿಎಫ್‌ನಲ್ಲಿ ಕ್ರೀಡಾಂಗಣಗಳ ಪುನಶ್ಚೇತನ ಕಾರ್ಯ ಭರದಿಂದ ಸಾಗುತ್ತಿದ್ದು, ಚಿನ್ನದ ನೆಲದ ಕ್ರೀಡಾಭಿಮಾನಿಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಮುಖ್ಯಾಂಶಗಳು ಕೆಜಿಎಫ್‌ನಲ್ಲಿ ಮತ್ತೆ ಕ್ರೀಡಾ ಸುಗ್ಗಿ…