ಗಣೇಶ್ ಅವರು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಪಿನಾಕ’ ಹೆಸರಿನ ಸಿನಿಮಾ ಒಪ್ಪಿಕೊಂಡರು. ಈಗ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾನ ಅವರು ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ‘ತಮ್ಮ ಸುಖಾಗಮನ ಬಯಸುವ’ ಹೆಸರಿನ ಹೊಸ ಚಿತ್ರವನ್ನು ಗಣೇಶ್ ಅನೌನ್ಸ್ ಮಾಡಿದ್ದರು. ಈಗ ಅವರು ‘ಬೃಂದಾವಿಹಾರಿ’ ಹೆಸರಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಯುಗಾದಿಗೆ ಈ ಚಿತ್ರ ಅನೌನ್ಸ್ ಆಗಿದೆ.
ಶ್ರೀನಿವಾಸ್ ರಾಜು ಅವರು ‘ಬೃಂದಾವಿಹಾರಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಮೃದ್ಧಿ ಮಂಜುನಾಥ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಣೇಶ್ ಅವರ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ.
‘ಬೃಂದಾವಿಹಾರಿ’ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಈ ಸಿನಿಮಾದ ಟೈಟಲ್ ಯುಗಾದಿ ಅನೌನ್ಸ್ ಆಗಲಿದೆ ಎಂಬ ವಿಷಯವನನು ಗಣೇಶ್ ಇತ್ತೀಚೆಗೆ ರಿವೀಲ್ ಮಾಡಿದ್ದರು. ಫನ್ ವಿಡಿಯೋ ಮೂಲಕ ವಿಷಯವನ್ನು ತಿಳಿಸಲಾಗಿತ್ತು.
ಕಳೆದ ವರ್ಷ ಗಣೇಶ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಈ ವರ್ಷ ಅವರ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಲಿವೆಯೇ ಎಂಬ ಪ್ರಶ್ನೆ ಮೂಡಿದೆ.
ಯುಗಾದಿ 2026ರ ವೃಶ್ಚಿಕ ರಾಶಿ ಭವಿಷ್ಯದ ಪ್ರಕಾರ, ಈ ರಾಶಿಯವರು ದೃಢ ಸಂಕಲ್ಪದಿಂದ ಮುನ್ನಡೆಯಬೇಕಾಗುತ್ತದೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹಠದಿಂದ ಯಶಸ್ಸು ಸಾಧಿಸುವ ಅವಕಾಶಗಳಿವೆ. ಆರ್ಥಿಕ ವಿಷಯದಲ್ಲಿ ಗುಪ್ತ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಕುಟುಂಬದಲ್ಲಿನ ಹಳೆಯ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ವಿಶೇಷ ಜಾಗ್ರತೆ ವಹಿಸಬೇಕು, ವಿಶೇಷವಾಗಿ ರಕ್ತದೊತ್ತಡದ ಬಗ್ಗೆ ಗಮನ ಹರಿಸುವುದು ಉತ್ತಮ.
ಗ್ರಹಗತಿಗಳ ಪ್ರಭಾವದಿಂದ ನಾಲ್ಕನೇ ಮನೆಯಲ್ಲಿರುವ ಬುಧ ಜ್ಞಾನ ವೃದ್ಧಿಗೆ ಕಾರಣನಾದರೆ, ರಾಹು ಕೆಲವು ವಿರೋಧಗಳನ್ನು ತರಬಹುದು. ರವಿ ರೋಗ ತಂದರೆ, ಕುಜ ಕಷ್ಟಗಳನ್ನು ನೀಡಬಹುದು. ಶನಿಯು ಉದ್ಯೋಗದಲ್ಲಿ ಭಯ ತರಬಹುದಾದರೂ, ಸೂಕ್ತ ಆರಾಧನೆಗಳಿಂದ ದೋಷ ನಿವಾರಣೆ ಸಾಧ್ಯ. ಇಷ್ಟಾರ್ಥ ಸಿದ್ಧಿಗಾಗಿ ಚಂದ್ರನ ಅನುಕೂಲವೂ ಇದೆ. ರಾಹು ದೋಷ ನಿವಾರಣೆಗೆ ನಿಂಬೆಹಣ್ಣು ಅಥವಾ ಬೆಲ್ಲದ ದೀಪ, ಕುಜನ ಪ್ರಭಾವಕ್ಕೆ ಸುಬ್ರಹ್ಮಣ್ಯ ಅಥವಾ ಲಕ್ಷ್ಮೀನರಸಿಂಹ ಆರಾಧನೆ, ಶನಿ ದೋಷಕ್ಕೆ ಆಂಜನೇಯ ಸ್ವಾಮಿ ದರ್ಶನ ಮತ್ತು ಹನುಮಾನ್ ಚಾಲೀಸಾ ಪಠಣ, ಕೇತು ಬಾಧೆಗೆ ಗಣಪತಿ ಆರಾಧನೆ ಮತ್ತು ಸಂಕಷ್ಟ ಚತುರ್ಥಿ ವ್ರತಗಳನ್ನು ಸೂಚಿಸಲಾಗಿದೆ. ವೃಶ್ಚಿಕ ರಾಶಿಯವರ ಶುಭ ದಿನಾಂಕಗಳು 1, 10, 27 ಆಗಿದ್ದು, ಈ ದಿನಗಳಲ್ಲಿ ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗೆ ಅಗತ್ಯ ವಸ್ತುಗಳ ಸಾಗಾಟಕ್ಕೂ ವಾಹನಗಳ ದಟ್ಟಣೆ ಅಡ್ಡಗಾಲಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್ ಮತ್ತು ಡ್ರೋನ್ ಸ್ಟಾರ್ಟ್ಅಪ್ Airbound ಒಟ್ಟಾಗಿ ಆರಂಭಿಸಿರುವ ಪೈಲಟ್ ಯೋಜನೆ, ಟ್ರಾಫಿಕ್ ಸಮಸ್ಯೆ ಮೀರಿ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮತ್ತು ಪರೀಕ್ಷಾ ಮಾದರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಜೀವಗಳನ್ನು ಉಳಿಸುವ ಹೊಸ ಮಾರ್ಗವನ್ನು ತೋರಿಸಿದೆ.
ಈ ಪೈಲಟ್ ಯೋಜನೆ ಚಂದ್ರಾಪುರದ ಕ್ಲಿನಿಕ್ನಿಂದ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಪ್ರಯೋಗಾಲಯದವರೆಗೆ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯವಾಗಿ 4 ಕಿಮೀ ಪ್ರಯಾಣಕ್ಕೆ ಟ್ರಾಫಿಕ್ ಸಮಯದಲ್ಲಿ ಸುಮಾರು ಒಂದು ಗಂಟೆ ಸಮಯ ಬೇಕು. ಆದರೆ ಡ್ರೋನ್ ಮೂಲಕ ಇದು ಕೇವಲ 10 ನಿಮಿಷಗಳಲ್ಲಿ ಸಾಧ್ಯವಾಗುತ್ತಿದೆ. ಇದರಿಂದ ರೋಗಿಗಳಿಗೆ ಪರೀಕ್ಷಾ ಫಲಿತಾಂಶಗಳು ಹಾಗೂ ಚಿಕಿತ್ಸೆ ಬಹಳ ವೇಗವಾಗಿ ಲಭ್ಯವಾಗಲಿವೆ.
2026ರ ಆರಂಭದಿಂದಲೇ ಈ ಸೇವೆ ಪ್ರಾರಂಭವಾಗಿದ್ದು, 54 ದಿನಗಳ ಪ್ರಯೋಗಾವಧಿಯಲ್ಲಿ 700ಕ್ಕೂ ಹೆಚ್ಚು ಬಾರಿ ಡ್ರೋನ್ ಹಾರಾಟ ಯಶಸ್ವಿಯಾಗಿ ನಡೆದಿದೆ. ಪ್ರತಿ ಹಾರಾಟದಲ್ಲಿ ಸುಮಾರು 40 ಪರೀಕ್ಷಾ ಮಾದರಿಗಳನ್ನು ಸಾಗಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನದಲ್ಲಿ ಮತ್ತೊಂದು ವಿಶೇಷವೆಂದರೆ ಅದರ ಕಡಿಮೆ ವೆಚ್ಚ. ಪ್ರತಿ ಡ್ರೋನ್ ಡೆಲಿವರಿಗೆ ಕೇವಲ 1 ರೂಪಾಯಿ ಮಾತ್ರ ಖರ್ಚಾಗುತ್ತದೆ. ಇದು ವಾಹನಗಳ ಮೂಲಕ ಸಾಗಾಟಕ್ಕಿಂತ ಬಹಳ ಕಡಿಮೆ ವೆಚ್ಚವಾಗಿದೆ.
ಈ ಯೋಜನೆಯ ಯಶಸ್ಸಿಗೆ ಡ್ರೋನ್ ಮಾದರಿಯೂ ಪ್ರಮುಖ ಪಾತ್ರ ವಹಿಸಿದೆ. ಇದು ವರ್ಟಿಕಲ್ ಟೆಕ್ಆಫ್ ಸಾಮರ್ಥ್ಯ ಮತ್ತು ಫಿಕ್ಸ್ಡ್-ವಿಂಗ್ ಹಾರಾಟದ ದಕ್ಷತೆಯನ್ನು ಒಟ್ಟಿಗೆ ಹೊಂದಿದ್ದು, ನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಬಾರಿ ಹಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿದೆ.
ಈ ಯೋಜನೆಗೆ Directorate General of Civil Aviation (DGCA) ಅನುಮೋದನೆಯೂ ದೊರೆತಿದೆ ಎನ್ನಲಾಗಿದ್ದು, ಈಗ ಇದನ್ನು ನಗರಾದ್ಯಂತ ವಿಸ್ತರಿಸಲು ಅನುಮತಿ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿರುವುದರಿಂದ, ಭಾರತದೆಲ್ಲೆಡೆಯೂ ಯೋಜನೆ ವಿಸ್ತರಣೆ ಹೊಂದಿ 10 ನಿಮಿಷಗಳಲ್ಲಿ ವೈದ್ಯಕೀಯ ವಿತರಣೆ ಸಾಮಾನ್ಯವಾಗಬಹುದೆಂದ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ.
ಬೆಂಗಳೂರು, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಯುಗಾದಿ ಹಬ್ಬದ ದಿನವಾದ ಇಂದು ಗುರುವಾರ ಚಿನ್ನದ ಬೆಲೆ (Gold Rates) ಒಂದು ಗ್ರಾಮ್ಗೆ 265 ರೂಗಳಷ್ಟು ಇಳಿಕೆ ಆಗಿದೆ. ಕಳೆದ 10 ದಿನದಲ್ಲಿ ಅದರ ಬೆಲೆ ಗ್ರಾಮ್ಗೆ 700 ರೂಗೂ ಅಧಿಕ ಮೊತ್ತದಷ್ಟು ಕಡಿಮೆಗೊಂಡಿದೆ. ಮಾರ್ಚ್ ತಿಂಗಳ ಈ 19 ದಿನದಲ್ಲಿ ಇದರ ಬೆಲೆಯಲ್ಲಿ ಬರೋಬ್ಬರಿ 1,700 ರೂಗಳಷ್ಟು ತಗ್ಗಿದೆ. ಅಂದರೆ 10 ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ 17,000 ರೂಗಳಷ್ಟು ತಗ್ಗಿರುವುದು ಗಮನಾರ್ಹ. ಬೆಳ್ಳಿ ಬೆಲೆಯೂ ಸತತವಾಗಿ ಇಳಿದಿದೆ. ಈ ಮಾರ್ಚ್ ತಿಂಗಳಲ್ಲಿ ಅದರ ಬೆಲೆ 315 ರೂನಿಂದ 260 ರೂಗೆ ಇಳಿದಿರುವುದು ವಿಶೇ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,41,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,54,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,41,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 19ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,464 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,175 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,598 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,464 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,175 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಬೆಂಗಳೂರು, ಮಾ.19: ಯುಗಾದಿ ಭವಿಷ್ಯ 2026 ರ ಪ್ರಕಾರ, ಕನ್ಯಾ ರಾಶಿಯವರಿಗೆ ಈ ವರ್ಷ ಶ್ರಮದಿಂದ ಸಾಧನೆ ಲಭಿಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಕಲಿಕೆ ಸಿಗಲಿದ್ದು, ಹಣಕಾಸು ಹಾಗೂ ಲೆಕ್ಕಪತ್ರಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಮನೆಯ ದಾಖಲೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯ. ಕುಟುಂಬದಲ್ಲಿ ಸಹೋದರರ ನೆರವು ದೊರೆಯುತ್ತದೆ. ಆರೋಗ್ಯದ ದೃಷ್ಟಿಯಿಂದ ಚರ್ಮದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ. ಉಷ್ಣ ಪದಾರ್ಥಗಳ ಸೇವನೆಯಿಂದ ದೂರವಿರುವುದು ಒಳಿತು. ಗ್ರಹಗತಿಗಳ ಬಗ್ಗೆ ನೋಡುವುದಾದರೆ, ಚಂದ್ರನ ಸ್ಥಾನ ದೇಹ ಸೌಖ್ಯವನ್ನು ನೀಡಿದರೆ, ಬುಧ ಮತ್ತು ರಾಹುವಿನ ಸ್ಥಾನಗಳು ದ್ರವ್ಯಲಾಭ ಮತ್ತು ಲಕ್ಷ್ಮಿಕರ ಯೋಗವನ್ನು ತರುತ್ತವೆ. ಆದಾಗ್ಯೂ, ರವಿ, ಕುಜ, ಶನಿ, ಗುರು ಮತ್ತು ಕೇತುಗಳ ಸ್ಥಾನಗಳು ಸ್ಥಾನಚಲನೆ, ಭಯ, ಕಲಹ, ಸ್ಥಾನನಾಶ ಮತ್ತು ಶತ್ರುಭಯವನ್ನು ಸೂಚಿಸುತ್ತವೆ. ಈ ಪ್ರತಿಕೂಲ ಪ್ರಭಾವಗಳನ್ನು ಕಡಿಮೆ ಮಾಡಲು ದೇವರ ಆರಾಧನೆ ಮತ್ತು ಧಾನ್ಯ ದಾನಗಳಂತಹ ಪರಿಹಾರಗಳನ್ನು ಕೈಗೊಳ್ಳುವುದು ಸೂಕ್ತ. ಇದರಿಂದ ಒಂಬತ್ತು ಗ್ರಹಗಳ ಶಾಂತಿ ನೆಲೆಸಲಿದ್ದು, ಉತ್ತಮ ಫಲಿತಾಂಶಗಳು ಸಿಗುತ್ತವೆ.
2026ರ ಯುಗಾದಿ ತುಲಾ ರಾಶಿಯವರಿಗೆ ಸಮತೋಲನದ ವರ್ಷವಾಗಿರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಉತ್ತಮ ಫಲಿತಾಂಶಗಳು ಸಿಗುವ ಸಾಧ್ಯತೆಯಿದೆ. ಆದಾಯ ಮತ್ತು ಖರ್ಚು ಸಮನಾಗಿರುವುದರಿಂದ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬ ಮತ್ತು ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಹಾಗೂ ಅನ್ಯೋನ್ಯತೆ ಹೆಚ್ಚುತ್ತದೆ. ಕಳೆದ ವರ್ಷದ ಕಲಹಗಳು ದೂರವಾಗಿ ಸಂಬಂಧಗಳಲ್ಲಿ ಸಾಮರಸ್ಯ ಮೂಡಲಿದೆ.
ಆರೋಗ್ಯದ ವಿಷಯದಲ್ಲಿ ಬೆನ್ನುನೋವು ಕುರಿತು ಎಚ್ಚರ ವಹಿಸುವುದು ಅಗತ್ಯ. ಐದನೇ ರಾಹುವಿನ ಪ್ರಭಾವದಿಂದ ಕಷ್ಟಪ್ರಾಪ್ತಿಯಾಗುವ ಸಾಧ್ಯತೆಗಳಿದ್ದು, ಇದನ್ನು ನಿವಾರಿಸಲು ಸ್ವಾತಿ ನಕ್ಷತ್ರದ ದಿನ ಬೆಲ್ಲದ ಅಥವಾ ನಿಂಬೆಹಣ್ಣಿನ ದೀಪ ಹಚ್ಚುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಆರನೇ ಕುಜ, ಬುಧ ಮತ್ತು ಶನಿ ಗ್ರಹಗಳು ಲಕ್ಷ್ಮೀಕರರಾಗಿರುವುದರಿಂದ ಧನಲಾಭವಾಗುವ ಸೂಚನೆಗಳಿವೆ. ದೋಷ ಪರಿಹಾರಕ್ಕಾಗಿ ಹಿಮಕುಂದಮೃಣಾಲಾಭಂ ಶ್ಲೋಕ ಪಠಣ ಹಾಗೂ ಶುಕ್ರಾಯ ನಮಃ ಜಪದಿಂದ ಶುಭ ಫಲಗಳನ್ನು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಬಾಗಲಕೋಟೆ, ಮಾರ್ಚ್ 19: ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆಯ ವೇಳೆ, ಕೆಎ-28 ಎಎ-4833 ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಕುಷ್ಟಗಿ ಕಡೆಗೆ ತೆರಳುತ್ತಿದ್ದ ಈ ಕಾರಿನಲ್ಲಿ ವಿಜಯ್ ಮೇಲಗಡೆ ಹಾಗೂ ಕುಮಾರ ಹಿರೇಮಠ ಎಂಬುವರು ಪ್ರಯಾಣಿಸುತ್ತಿದ್ದರು.
ಚುನಾವಣೆ ಹಿನ್ನಲೆಯಲ್ಲಿ ನಿಯೋಜಿಸಲಾದ ಫ್ಲೈಯಿಂಗ್ ಸ್ಕ್ವಾಡ್ ತಂಡವು ಬುಧವಾರ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ವಾಹನ ತಪಾಸಣೆ ನಡೆಸಿದಾಗ, ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ನಗದು ಪತ್ತೆಯಾಯಿತು. ತಕ್ಷಣವೇ ಹಣವನ್ನು ವಶಕ್ಕೆ ಪಡೆದು ಮುಂದಿನ ಪರಿಶೀಲನೆಗೆ ಒಪ್ಪಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 19: ದಾವಣೆಗೆರೆ ದಕ್ಷಿನ ಮತ್ತು ಬಾಗಲಕೋಟೆ ಉಪ ಚುನಾವಣೆಗಳಿಗೆ ವಿಪಕ್ಷ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಈ ಬಗ್ಗೆ ಗೊಂದಲ ಮುಂದುವರಿದಿದ್ದು ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿ ಮಾರ್ಪಟ್ಟಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಸ್ಥರಿಗೇ ಟಿಕೆಟ್ ಪಕ್ಕಾ ಎನ್ನಲಾಗಿದ್ದರೂ ನಾಲ್ವರು ಮಕ್ಕಳ ಪೈಕಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಕ್ಕ್ಷೆತ್ರದಲ್ಲಿ ಟಿಕೆಟ್ಗಾಗಿ ಕೈಮನೆಯ ಒಳಗೆಯೇ ಭಾರಿ ಗುದ್ದಾಟ ನಡೆಯುತ್ತಿರುವ ಕಾರಣ ಅಭ್ಯರ್ಥಿ ಯಾರಾಗಬಹುದೆಂಬ ಬಗ್ಗೆ ಸ್ವಪಕ್ಷ ನಾಯಕರಿಗೇ ಸ್ಪಷ್ಟತೆ ಸಿಕ್ಕಿಲ್ಲ.
ಮೇಟಿ ಮಕ್ಕಳ ನಡುವೆಯೇ ವಾರ್
ಬಾಗಲಕೋಟೆ ಉಪಚುನಾವಣೆ ಟಿಕೆಟ್ ವಿಚಾರವಾಗಿ ಹೆಚ್.ವೈ. ಮೇಟಿ ಅವರ ಮಕ್ಕಳ ನಡುವೆಯೇ ದಂಗಲ್ ಶುರುವಾಗಿದೆ. ಈ ಕುಟುಂಬದರೇ ಪಕ್ಕಾ ಕಾಂಗ್ರೆಸ್ ಕ್ಯಾಂಡಿಡೇಟ್ ಎನ್ನಲಾಗಿದ್ದರೂ ಮೇಟಿ ಮಕ್ಕಳ ಪೈಕಿ ಯಾರನ್ನು ಪಕ್ಷ ಆಯ್ಕೆ ಮಾಡಲಿದೆ ಎಂಬ ಗೊಂದಲ ಉದ್ಭವಿಸಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮೇಟಿ ಮಕ್ಕಳಿಗೆ ಸಿಎಂ ಸಲಹೆ, ಸೂಚನೆಯನ್ನು ಅದಾಗಲೇ ನೀಡಿದ್ದಾರೆ. ಹೀಗಿದ್ದರೂ ಟಿಕೆಟ್ ಕೊಡದಿದ್ದರೆ ಬಂಡಾಯ ಸ್ಪರ್ಧೆ ಎಂದು ಮೇಟಿಯವರ ಕಿರಿಯ ಪುತ್ರಿ ಮಹಾದೇವಿ ಮೇಟಿ ಹೇಳುತ್ತಿರೋದು ತಲೆನೋವಾಗಿ ಮಾರ್ಪಟ್ಟಿದೆ. ಮಲ್ಲಿಕಾರ್ಜುನ ಮೇಟಿ ಅಥವಾ ಉಮೇಶ್ ಮೇಟಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಕೈ ನಾಯಕರು ಚರ್ಚೆ ನಡೆಸಿದ್ದು, ಆ ಪೈಕಿ ಉಮೇಶ್ ಮೇಟಿಗೆ ಬಹುತೇಕ ಟಿಕೆಟ್ ಸಿಗುವ ಸಾಧ್ಯತೆ ಇದೆ. ಒಂದೊಮ್ಮೆ ಹೀಗೇ ಆದಲ್ಲಿ ಮಹಾದೇವಿ ಮೇಟಿ ನಡೆ ಏನು ಎಂಬ ಬಗ್ಗೆಯೂ ಕುತೂಹಲ ಹೆಚ್ಚಿದೆ.
ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ಗಾಗಿ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರೇ ಅಭ್ಯರ್ಥಿ ಆಗಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದ್ದರೆ, ಮತ್ತೊಂದೆಡೆ ತಮ್ಮ ಪುತ್ರ ಸಮರ್ಥ್ನನ್ನು ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಹಠ ಹಿಡಿದಿದ್ದಾರೆ. ಕಳೆದ ಮೂರು ದಿನಗಳಿಂದ ವಿಧಾನಸಭಾ ಅಧಿವೇಶನಕ್ಕೂ ಹಾಜರಾಗದ ಮಲ್ಲಿಕಾರ್ಜುನ್, ಉಸ್ತುವಾರಿ ಸಮಿತಿ ಸಭೆಗೂ ಗೈರಾಗಿದ್ದಾರೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ. ಶಾಮನೂರು ಕುಟುಂಬಸ್ಥರ ಪರ ಕೆಲವು ಸಚಿವರು ಬ್ಯಾಟಿಂಗ್ ಮಾಡಿದ್ದರೆ, ಇನ್ನು ಕೆಲವರು ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಆಗ್ರಹಿಸಿದ್ದಾರೆ. ಉಸ್ತುವಾರಿ ಸಮಿತಿ ಸಭೆಯಲ್ಲೂ ಎಂಟು ಮಂದಿಯ ಹೆಸರು ಪ್ರಸ್ತಾಪವಾಗಿದ್ದು, ಆ ಪೈಕಿ ಐವರ ಹೆಸರು ಅಲ್ಪಸಂಖ್ಯಾತ ಸಮುದಾಯದವರದ್ದಾಗಿದೆ.
2026ರ ಯುಗಾದಿ ಮಿಥುನ ರಾಶಿಯವರಿಗೆ ಹಲವು ಬದಲಾವಣೆಗಳನ್ನು ತರಲಿದೆ ಎಂದು ಜ್ಯೋತಿಷಿ ಕೆ. ವೆಂಕಟೇಶ್ ಶರ್ಮಾ ತಿಳಿಸಿದ್ದಾರೆ. ಈ ವರ್ಷ ಹೊಸ ಅವಕಾಶಗಳು ಮಿಥುನ ರಾಶಿಯವರನ್ನು ಹುಡುಕಿಕೊಂಡು ಬರಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ನಿರೀಕ್ಷಿತವಾಗಿವೆ. ಹಣಕಾಸಿನ ವಿಚಾರದಲ್ಲಿ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಕುಟುಂಬದಲ್ಲಿ ಸಹೋದರ, ಸಹೋದರಿಯರಿಂದ ಬೆಂಬಲ ಸಿಗಲಿದೆ.
ಆರೋಗ್ಯದ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಬೇಕು, ವಿಶೇಷವಾಗಿ ನರ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ. ಗುರು ಗ್ರಹದ ಪ್ರಭಾವದಿಂದ ಮನಸ್ಸಿಗೆ ಕಷ್ಟವಾಗಬಹುದು. ಇದಕ್ಕೆ ದತ್ತಾತ್ರೇಯ ಸ್ವಾಮಿಯ ಪ್ರಾರ್ಥನೆ ಉತ್ತಮ ಪರಿಹಾರ. ಕೇತು ಗ್ರಹವು ಹಣಕಾಸಿನ ಲಾಭವನ್ನು ತಂದರೆ, ಚಂದ್ರನು ರೋಗಭಯವನ್ನು ಉಂಟುಮಾಡಬಹುದು. ಈಶ್ವರನಿಗೆ ಅಭಿಷೇಕ ಮಾಡಿಸುವುದು ಶುಭ. ಬುಧ ಮತ್ತು ರಾಹು ಗ್ರಹಗಳು ಕಾರ್ಯ ನಷ್ಟಕ್ಕೆ ಕಾರಣವಾಗಬಹುದು. ಲಕ್ಷ್ಮಿ ನರಸಿಂಹ ಮತ್ತು ಸುಬ್ರಮಣ್ಯ ಸ್ವಾಮಿಯನ್ನು ಸ್ವಾತಿ ನಕ್ಷತ್ರದಂದು ದರ್ಶನ ಮಾಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ. ರವಿ ಧನಲಾಭವನ್ನು ತಂದರೆ, ಶನಿ ಮತ್ತು ಕುಜ ದ್ರವ್ಯ ನಷ್ಟಕ್ಕೆ ಕಾರಣರಾಗಬಹುದು. 11ನೇ ಶುಕ್ರನು ಸುಖ ಭೋಜನ ಮತ್ತು ಉತ್ತಮ ಅನುಕೂಲಗಳನ್ನು ತರಲಿದ್ದಾನೆ. ಎಳ್ಳು, ಹೆಸರು ಕಾಳು, ಉದ್ದಿನ ಕಾಳುಗಳನ್ನು ದೇವಸ್ಥಾನಗಳಿಗೆ ದಾನ ಮಾಡುವುದು ಮತ್ತು “ಓಂ ಬುಧಾಯ ನಮಃ” ಮಂತ್ರ ಜಪಿಸುವುದು ಉತ್ತಮ ಪರಿಹಾರಗಳಾಗಿವೆ.
ಬೆಂಗಳೂರು, ಮಾ.19: 2026ರ ಯುಗಾದಿ ದಿನದಂದು ಕರ್ಕಾಟಕ ರಾಶಿಗೆ ಇರುವ ಫಲಗಳ ಬಗ್ಗೆ ಕೆ. ವೆಂಕಟೇಶ್ ಶರ್ಮಾ ಅವರು ವಿವರಿಸಿದ್ದಾರೆ. ಈ ವರ್ಷ ಕರ್ಕಾಟಕ ರಾಶಿಯವರಿಗೆ ಭಾವನಾತ್ಮಕ ಸ್ಥಿರತೆ ಮತ್ತು ಉದ್ಯೋಗ, ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ಜವಾಬ್ದಾರಿಗಳು ಅಧಿಕವಾಗುವ ಸಾಧ್ಯತೆಗಳಿವೆ. ಹಣಕಾಸು ವಿಚಾರದಲ್ಲಿ ಪ್ರಗತಿ ಕಂಡುಬರಲಿದ್ದು, ಮನೆ ಅಥವಾ ಭೂಮಿ ಖರೀದಿಯ ಸಾಧ್ಯತೆಗಳು ಸಹ ಇವೆ. ಆರೋಗ್ಯದ ವಿಚಾರದಲ್ಲಿ ಕುಟುಂಬದ ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಸ್ವಂತ ಆರೋಗ್ಯದಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಎರಡನೇ ಮನೆಯ ಕೇತು ಸ್ವಲ್ಪ ವ್ಯಾಧಿಯನ್ನು ತರಬಹುದಾಗಿದ್ದು, ಗಣಪತಿ ಆರಾಧನೆ ಮಾಡುವುದು ಅನುಕೂಲಕರವಾಗಿದೆ. ಎಂಟನೇ ಮನೆಯ ರಾಹು ಮೃತ್ಯುಭಯವನ್ನು ಸೂಚಿಸುವುದರಿಂದ, ವಾಹನ ಚಾಲನೆಯಲ್ಲಿ ಎಚ್ಚರ ವಹಿಸುವುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಪರಿಹಾರಗಳಾಗಿ “ಓಂ ಚಂದ್ರಾಯ ನಮಃ” ಮಂತ್ರ ಪಠಣ ಹಾಗೂ ಕಪ್ಪು ಉದ್ದು, ಎಳ್ಳು ಮತ್ತು ಅಕ್ಕಿ ದಾನ ಮಾಡುವುದು ಸೂಕ್ತ. ಸೋಮವಾರ, ಮಂಗಳವಾರ, ಗುರುವಾರಗಳು ಶುಭ ದಿನಗಳಾಗಿದ್ದು, ಬಿಳಿ, ಕೆಂಪು, ಹಳದಿ ಶುಭ ವರ್ಣಗಳಾಗಿವೆ. ವಾಯುವ್ಯ ದಿಕ್ಕು ಹಾಗೂ 2, 3, 9 ಶುಭ ಸಂಖ್ಯೆಗಳಾಗಿವೆ. ಯಾವುದೇ ಶುಭ ಕಾರ್ಯಗಳನ್ನು 2, 7, 11, 16, 20, 23, 25ನೇ ತಾರೀಖುಗಳಲ್ಲಿ ಕೈಗೊಂಡರೆ ಶುಭ ಫಲಗಳು ಪ್ರಾಪ್ತವಾಗುತ್ತವೆ ಎಂದು ಕೆ. ವೆಂಕಟೇಶ್ ಶರ್ಮಾ ಅವರು ತಿಳಿಸಿದ್ದಾರೆ.