Headlines

nagaraj11081993

ಉಪಚುನಾವಣೆ ಪ್ರಚಾರಕ್ಕೆ ಉಚ್ಛಾಟಿತ ಶಾಸಕ? ಬಾಗಲಕೋಟೆ ಬಿಜೆಪಿ ಅಭ್ಯರ್ಥಿಯ ಸ್ಫೋಟಕ ಹೇಳಿಕೆ

ಬಾಗಲಕೋಟೆ, ಮಾರ್ಚ್​​ 19: ಉಪ ಚುನಾವಣೆಯ ಬಾಗಲಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮಾರ್ಚ್ 23ರ ಸೋಮವಾರದಂದು ತಮ್ಮ ನಾಮಪತ್ರವನ್ನು ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಸೇರಿ ರಾಜ್ಯಾದ್ಯ ಪ್ರಮುಖ ನಾಯಕರು ಮತ್ತು ಮಾಜಿ ಮಂತ್ರಿಗಳು ಭಾಗವಹಿಸಲಿದ್ದಾರೆ.  ಪ್ರಧಾನಮಂತ್ರಿಗಳ ಸೂಚನೆಯಂತೆ ಚುನಾವಣೆಯನ್ನು ಹಬ್ಬದಂತೆ ಆಚರಿಸುವ ನಿಟ್ಟಿನಲ್ಲಿ ಎಲ್ಲರೂ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ಶಾಸಕ ಯತ್ನಾಳ್​​ ಕೂಡ ವೈಯಕ್ತಿಕ ಸಂಬಂಧಗಳ ಆಧಾರದ ಮೇಲೆ ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆ…

Read More

ಸಿಂಹ ರಾಶಿಯವರಿಗೆ ಈ ವರ್ಷ ರಾಜಯೋಗ! ಪ್ರತಿಷ್ಠೆ, ಹಣ ಎಲ್ಲವೂ ನಿಮ್ಮ ಕೈಯಲ್ಲಿ

ಬೆಂಗಳೂರು. ಮಾ.19: ಕೆ. ವೆಂಕಟೇಶ್ ಶರ್ಮಾ ಅವರು ಯುಗಾದಿ ಭವಿಷ್ಯ 2026ರಂದು ಸಿಂಹ ರಾಶಿಯ ಫಲಗಳ ಬಗ್ಗೆ ವಿವರಿಸಿದ್ದಾರೆ. ಈ ವರ್ಷ ಸಿಂಹ ರಾಶಿಯವರಿಗೆ ಗೌರವ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಉನ್ನತ ಸ್ಥಿತಿ ದೊರೆಯುತ್ತದೆ. ಹಣಕಾಸು ಹೂಡಿಕೆಯಲ್ಲಿ ಲಾಭ ನಿರೀಕ್ಷಿಸಬಹುದು. ಕುಟುಂಬ ಮತ್ತು ಮಕ್ಕಳಿಂದ ಸಂತೋಷವಿರುತ್ತದೆ. ಆರೋಗ್ಯದ ವಿಷಯದಲ್ಲಿ, ಸಿಂಹ ರಾಶಿಯವರು ತಮ್ಮ ಹೃದಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜಿಡ್ಡಿನ ಪದಾರ್ಥಗಳನ್ನು ತ್ಯಜಿಸಿ, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಉತ್ತಮ. ಗ್ರಹಣದ ಪ್ರಭಾವದಿಂದ…

Read More

‘ಬೃಂದಾವಿಹಾರಿ’ ಆದ ಗೋಲ್ಡನ್ ಸ್ಟಾರ್ ಗಣೇಶ್; ಹೊಸ ಸಿನಿಮಾ ಟೈಟಲ್ ಅನೌನ್ಸ್

ಗಣೇಶ್ ಅವರು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಪಿನಾಕ’ ಹೆಸರಿನ ಸಿನಿಮಾ ಒಪ್ಪಿಕೊಂಡರು. ಈಗ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾನ ಅವರು ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ‘ತಮ್ಮ ಸುಖಾಗಮನ ಬಯಸುವ’ ಹೆಸರಿನ ಹೊಸ ಚಿತ್ರವನ್ನು ಗಣೇಶ್ ಅನೌನ್ಸ್ ಮಾಡಿದ್ದರು. ಈಗ ಅವರು ‘ಬೃಂದಾವಿಹಾರಿ’ ಹೆಸರಿನ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಯುಗಾದಿಗೆ ಈ ಚಿತ್ರ ಅನೌನ್ಸ್ ಆಗಿದೆ. ಶ್ರೀನಿವಾಸ್ ರಾಜು ಅವರು ‘ಬೃಂದಾವಿಹಾರಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಮೃದ್ಧಿ ಮಂಜುನಾಥ್ ಅವರು…

Read More

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಅಗತ್ಯ

ಯುಗಾದಿ 2026ರ ವೃಶ್ಚಿಕ ರಾಶಿ ಭವಿಷ್ಯದ ಪ್ರಕಾರ, ಈ ರಾಶಿಯವರು ದೃಢ ಸಂಕಲ್ಪದಿಂದ ಮುನ್ನಡೆಯಬೇಕಾಗುತ್ತದೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹಠದಿಂದ ಯಶಸ್ಸು ಸಾಧಿಸುವ ಅವಕಾಶಗಳಿವೆ. ಆರ್ಥಿಕ ವಿಷಯದಲ್ಲಿ ಗುಪ್ತ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಕುಟುಂಬದಲ್ಲಿನ ಹಳೆಯ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ವಿಶೇಷ ಜಾಗ್ರತೆ ವಹಿಸಬೇಕು, ವಿಶೇಷವಾಗಿ ರಕ್ತದೊತ್ತಡದ ಬಗ್ಗೆ ಗಮನ ಹರಿಸುವುದು ಉತ್ತಮ. ಗ್ರಹಗತಿಗಳ ಪ್ರಭಾವದಿಂದ ನಾಲ್ಕನೇ…

Read More

4 ಕಿ.ಮೀಗೆ 1 ರೂ ವೆಚ್ಚ, 10 ನಿಮಿಷಗಳಲ್ಲಿ ಡೆಲಿವರಿ: ರೋಗಿಗಳ ಜೀವ ಉಳಿಸುತ್ತಿವೆ ಈ ಡ್ರೋನ್​​ ಸೇವೆ

ಬೆಂಗಳೂರಿನ ಟ್ರಾಫಿಕ್​​ ಸಮಸ್ಯೆಯಿಂದಾಗಿ ತುರ್ತು ಚಿಕಿತ್ಸೆ ಅಗತ್ಯವಿರುವ ಅದೆಷ್ಟೋ ಮಂದಿ ಪ್ರಾಣ ತೆತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಔಷಧ, ಚಿಕಿತ್ಸೆಗೆ ಅಗತ್ಯ ವಸ್ತುಗಳ ಸಾಗಾಟಕ್ಕೂ ವಾಹನಗಳ ದಟ್ಟಣೆ ಅಡ್ಡಗಾಲಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಾರಾಯಣ ಹೆಲ್ತ್​​ ಮತ್ತು ಡ್ರೋನ್ ಸ್ಟಾರ್ಟ್‌ಅಪ್ Airbound ಒಟ್ಟಾಗಿ ಆರಂಭಿಸಿರುವ ಪೈಲಟ್ ಯೋಜನೆ, ಟ್ರಾಫಿಕ್ ಸಮಸ್ಯೆ ಮೀರಿ ಅಗತ್ಯ ವೈದ್ಯಕೀಯ ಸಾಮಗ್ರಿಗಳು ಮತ್ತು ಪರೀಕ್ಷಾ ಮಾದರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಜೀವಗಳನ್ನು ಉಳಿಸುವ ಹೊಸ ಮಾರ್ಗವನ್ನು ತೋರಿಸಿದೆ. ಈ ಪೈಲಟ್…

Read More

Gold Rates: ಚಿನ್ನದ ಬೆಲೆ ಗುರುವಾರವೂ ಕುಸಿತ; ಈ ತಿಂಗಳು 10 ಗ್ರಾಮ್ ಬೆಲೆ 17,000 ರೂ ಇಳಿಕೆ

ಬೆಂಗಳೂರು, ಮಾರ್ಚ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಸತತ ಇಳಿಕೆ ಮುಂದುವರಿದಿದೆ. ಯುಗಾದಿ ಹಬ್ಬದ ದಿನವಾದ ಇಂದು ಗುರುವಾರ ಚಿನ್ನದ ಬೆಲೆ (Gold Rates) ಒಂದು ಗ್ರಾಮ್​ಗೆ 265 ರೂಗಳಷ್ಟು ಇಳಿಕೆ ಆಗಿದೆ. ಕಳೆದ 10 ದಿನದಲ್ಲಿ ಅದರ ಬೆಲೆ ಗ್ರಾಮ್​ಗೆ 700 ರೂಗೂ ಅಧಿಕ ಮೊತ್ತದಷ್ಟು ಕಡಿಮೆಗೊಂಡಿದೆ. ಮಾರ್ಚ್ ತಿಂಗಳ ಈ 19 ದಿನದಲ್ಲಿ ಇದರ ಬೆಲೆಯಲ್ಲಿ ಬರೋಬ್ಬರಿ 1,700 ರೂಗಳಷ್ಟು ತಗ್ಗಿದೆ. ಅಂದರೆ 10 ಗ್ರಾಮ್ ಆಭರಣ ಚಿನ್ನದ ಬೆಲೆಯಲ್ಲಿ 17,000 ರೂಗಳಷ್ಟು…

Read More

ಕನ್ಯಾ ರಾಶಿಯವರಿಗೆ ‘ಲಕ್ಷ್ಮೀ’ ಯೋಗ ಇದ್ರೂ ಆಸ್ತಿ ಕಳೆದುಕೊಳ್ಳವ ಸಾಧ್ಯತೆ!

ಬೆಂಗಳೂರು, ಮಾ.19: ಯುಗಾದಿ ಭವಿಷ್ಯ 2026 ರ ಪ್ರಕಾರ, ಕನ್ಯಾ ರಾಶಿಯವರಿಗೆ ಈ ವರ್ಷ ಶ್ರಮದಿಂದ ಸಾಧನೆ ಲಭಿಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಕಲಿಕೆ ಸಿಗಲಿದ್ದು, ಹಣಕಾಸು ಹಾಗೂ ಲೆಕ್ಕಪತ್ರಗಳ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಮನೆಯ ದಾಖಲೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯ. ಕುಟುಂಬದಲ್ಲಿ ಸಹೋದರರ ನೆರವು ದೊರೆಯುತ್ತದೆ. ಆರೋಗ್ಯದ ದೃಷ್ಟಿಯಿಂದ ಚರ್ಮದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ. ಉಷ್ಣ ಪದಾರ್ಥಗಳ ಸೇವನೆಯಿಂದ ದೂರವಿರುವುದು ಒಳಿತು. ಗ್ರಹಗತಿಗಳ ಬಗ್ಗೆ ನೋಡುವುದಾದರೆ, ಚಂದ್ರನ ಸ್ಥಾನ ದೇಹ ಸೌಖ್ಯವನ್ನು ನೀಡಿದರೆ,…

Read More

Ugadi Bhavishya 2026: ಯುಗಾದಿ ವರ್ಷ ಭವಿಷ್ಯ; ತುಲಾ ರಾಶಿಯವರ ಸಮಗ್ರ ಭವಿಷ್ಯ ಮತ್ತು ಪರಿಹಾರಗಳು

2026ರ ಯುಗಾದಿ ತುಲಾ ರಾಶಿಯವರಿಗೆ ಸಮತೋಲನದ ವರ್ಷವಾಗಿರಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತುತಜ್ಞ ವೇದಬ್ರಹ್ಮ ಕೆ. ವೆಂಕಟೇಶ್ ಶರ್ಮಾ ಅವರು ಭವಿಷ್ಯ ನುಡಿದಿದ್ದಾರೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪಾಲುದಾರಿಕೆಯಿಂದ ಉತ್ತಮ ಫಲಿತಾಂಶಗಳು ಸಿಗುವ ಸಾಧ್ಯತೆಯಿದೆ. ಆದಾಯ ಮತ್ತು ಖರ್ಚು ಸಮನಾಗಿರುವುದರಿಂದ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬ ಮತ್ತು ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಹಾಗೂ ಅನ್ಯೋನ್ಯತೆ ಹೆಚ್ಚುತ್ತದೆ. ಕಳೆದ ವರ್ಷದ ಕಲಹಗಳು ದೂರವಾಗಿ ಸಂಬಂಧಗಳಲ್ಲಿ ಸಾಮರಸ್ಯ ಮೂಡಲಿದೆ. ಆರೋಗ್ಯದ ವಿಷಯದಲ್ಲಿ ಬೆನ್ನುನೋವು ಕುರಿತು ಎಚ್ಚರ ವಹಿಸುವುದು…

Read More

ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕಂತೆ ಕಂತೆ ಹಣ ನಾಯನೇಗಲಿ ಚೆಕ್ ಪೋಸ್ಟ್​ನಲ್ಲಿ ಸೀಜ್

ಬಾಗಲಕೋಟೆ, ಮಾರ್ಚ್ 19: ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15.50 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ನಡೆದ ವಾಹನ ತಪಾಸಣೆಯ ವೇಳೆ, ಕೆಎ-28 ಎಎ-4833 ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಕುಷ್ಟಗಿ ಕಡೆಗೆ ತೆರಳುತ್ತಿದ್ದ ಈ ಕಾರಿನಲ್ಲಿ ವಿಜಯ್ ಮೇಲಗಡೆ ಹಾಗೂ ಕುಮಾರ ಹಿರೇಮಠ…

Read More

ಉಪ ಚುನಾವಣೆ: ಕಾಂಗ್ರೆಸ್​​ನಲ್ಲಿ ಬಗೆಹರಿಯದ ಟಿಕೆಟ್​​ ಕಗ್ಗಂಟು; ಮುಂದುವರಿದ ಗೊಂದಲ

ಬೆಂಗಳೂರು, ಮಾರ್ಚ್​​ 19: ದಾವಣೆಗೆರೆ ದಕ್ಷಿನ ಮತ್ತು ಬಾಗಲಕೋಟೆ ಉಪ ಚುನಾವಣೆಗಳಿಗೆ ವಿಪಕ್ಷ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್​​ನಲ್ಲಿ ಈ ಬಗ್ಗೆ ಗೊಂದಲ ಮುಂದುವರಿದಿದ್ದು ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿ ಮಾರ್ಪಟ್ಟಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬಸ್ಥರಿಗೇ ಟಿಕೆಟ್​​ ಪಕ್ಕಾ ಎನ್ನಲಾಗಿದ್ದರೂ ನಾಲ್ವರು ಮಕ್ಕಳ ಪೈಕಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂಬ ಪ್ರಶ್ನೆ ಸದ್ಯ ಉದ್ಭವಿಸಿದೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಕ್ಕ್ಷೆತ್ರದಲ್ಲಿ ಟಿಕೆಟ್​​ಗಾಗಿ ಕೈಮನೆಯ ಒಳಗೆಯೇ ಭಾರಿ ಗುದ್ದಾಟ ನಡೆಯುತ್ತಿರುವ…

Read More