Headlines

nagaraj11081993

ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್

ಬೆಂಗಳೂರು, ಮಾ.17: “ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ” ಎಂಬ ಮಾತನ್ನು ಕೇವಲ ಮಾತಾಗಿ ಉಳಿಸದೆ, ಪ್ರಾಯೋಗಿಕವಾಗಿ ಅಮೂಲ್ಯ ಜೀವವೊಂದನ್ನು ಉಳಿಸುವ ಮೂಲಕ ಯಲಹಂಕ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಮೂರ್ತಿ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಶಾನ್ಯ ವಿಭಾಗದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಹಳಿಯ ಮೇಲೆ ವ್ಯಕ್ತಿಯೊಬ್ಬರು ಮಲಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ತುರ್ತು ಕರೆ ಪೊಲೀಸ್ ನಿಯಂತ್ರಣ ಕೊಠಡಿಗೆ (Namma 112) ಬಂದಿತ್ತು. ಈ ಮಾಹಿತಿಯನ್ನು ಸ್ವೀಕರಿಸಿದ ಕೂಡಲೇ ಗಸ್ತು ವಾಹನದಲ್ಲಿದ್ದ ಶ್ರೀ…

Read More

ದಳಪತಿಯಿಂದ ಬಿಜೆಪಿ ದೂರ ಉಳಿದಿದ್ದು ಯಾಕೆ? ರಜನೀ ವಿರುದ್ಧ ಟಿವಿಕೆ ಆಡಿದ ಆ ಒಂದು ಮಾತು ಕಾರಣವಾ?

ಚೆನ್ನೈ, ಮಾರ್ಚ್ 17: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಕಟ್ಟಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಜೊತೆ ಎನ್​ಡಿಎ ಮೈತ್ರಿ ಮಾಡಿಕೊಳ್ಳಬಹುದು ಎಂದು ಹಲವು ದಿನಗಳ ಕಾಲ ಹರಿದಾಡಿದ್ದ ಸುದ್ದಿ, ಹಾಗೆಯೇ, ತಣ್ಣಗಾಗಿ ಹೋಗಿದೆ. ಯಾಕೆ ಈ ಮೈತ್ರಿ ಸಾಧ್ಯತೆಯ ಸುದ್ದಿ ನಿಂತು ಹೋಯಿತು ಎನ್ನುವುದು ಕುತೂಹಲದ ಸಂಗತಿ ಎನಿಸಿದೆ. ವರದಿಗಳ ಪ್ರಕಾರ, ಟಿವಿಕೆ ಪಕ್ಷದ ಮುಖಂಡರೊಬ್ಬರು ಸೂಪರ್​ಸ್ಟಾರ್ ರಜನೀಕಾಂತ್ ವಿಚಾರದಲ್ಲಿ ಆಡಿದ ಆ ಒಂದು ಮಾತು ಎನ್​ಡಿಎ ಪಾಳಯಕ್ಕೆ ಅಸಮಾಧಾನ ತಂದಿತು ಎನ್ನಲಾಗಿದೆ. ರಜನೀಕಾಂತ್…

Read More

ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಲ್ಲು ತಂದೆ ಸಲೀಂ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಹಾಗೂ ಹಿರಿಯ ಕಥೆ ಬರಹಗಾರ ಸಲೀಮ್ ಖಾನ್ (Salim Khan) ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ತಿಂಗಳು ಮಿದುಳಿನಲ್ಲಿ ಉಂಟಾದ ರಕ್ತಸ್ರಾವದಿಂದ ಅವರು ಆಸ್ಪತ್ರೆ ಸೇರಿದ್ದರು. ಇಂದು ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದರಿಂದ ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರುವ ಬಿಡುವಂತಾಗಿದೆ. ಸಲೀಮ್ ಖಾನ್ ಅವರಿಗೆ 90 ವರ್ಷ. ಚಿತ್ರರಂಗದಲ್ಲಿ ಸಲೀಮ್-ಜಾವೇದ್ ಜೋಡಿ ಎಂದೇ ಇದು ಫೇಮ್ ಆಗಿತ್ತು. ಶೋಲೆ, ದೀವಾರ್, ‘ಡಾನ್’…

Read More

ಸಂಸತ್ ಹೊರಗೆ ರಾಹುಲ್ ಗಾಂಧಿಯ ಚಹಾ-ಪಕೋಡ ಪ್ರತಿಭಟನೆಗೆ ಮಾಜಿ ಅಧಿಕಾರಿಗಳ ವಿರೋಧ; ಕ್ಷಮೆ ಯಾಚನೆಗೆ ಒತ್ತಾಯ

ನವದೆಹಲಿ, ಮಾರ್ಚ್ 17: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮಾರ್ಚ್ 12ರಂದು ಅಧಿವೇಶನದ (Parliament Session) ವೇಳೆ ಸಂಸತ್ತಿನ ಪ್ರವೇಶದ್ವಾರದಲ್ಲಿ ಕುಳಿತು ವಿಪಕ್ಷದ ಸಂಸದರೊಂದಿಗೆ ಚಹಾ ಮತ್ತು ಪಕೋಡ ಸೇವಿಸಿ ಪ್ರತಿಭಟನೆ ನಡೆಸಿದ ಘಟನೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು 204 ಮಾಜಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. “ಮಾರ್ಚ್ 12ರ ಘಟನೆ ತೀವ್ರ ಕಳವಳಕಾರಿ ಮತ್ತು ಉದ್ದೇಶಪೂರ್ವಕವಾಗಿ ಸಂಸದೀಯ ಅಧಿಕಾರದ ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಸಹಿದಾರರು ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು…

Read More

ಬಮೂಲ್​​ ಬೆನ್ನಲ್ಲೇ ಕೋಮುಲ್​​ನಿಂದ ಹಾಲು ಉತ್ಪಾದಕರಿಗೆ ಯುಗಾದಿ ಗಿಫ್ಟ್‌

ಕೋಲಾರ, ಮಾರ್ಚ್​​ 17: ಇತ್ತೀಚೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆ ನೀಡಿತ್ತು. ಇದೀಗ ಅದರಂತೆ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (komul) ಕೂಡ ಹಾಲು ಉತ್ಪಾದಕರಿಗೆ ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವ ಮೂಲಕ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ನೀಡಿದೆ. ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳ ಯುಗಾದಿ ಹಬ್ಬಕ್ಕೆ ಕೋಲಾರ ಜಿಲ್ಲಾ ಹಾಲು ಉತ್ಪಾದಕರಿಗೆ…

Read More

ಭಾರತದಲ್ಲಿ ಹಾರ್ಡ್ ರಾಕ್ ಕೆಫೆ ಯುಗ ಅಂತ್ಯ: ಬೆಂಗಳೂರು ಸೇರಿದಂತೆ 10 ನಗರಗಳ ಔಟ್‌ಲೆಟ್ ಬಂದ್, ಕಾರಣವೇನು?

ಬೆಂಗಳೂರು, ಮಾ.17: ದಶಕಗಳ ಕಾಲ ರಾಕ್ ಸಂಗೀತ ಮತ್ತು ಅಮೇರಿಕನ್ ಶೈಲಿಯ ಆಹಾರಕ್ಕೆ ಹೆಸರಾಗಿದ್ದ ‘ಹಾರ್ಡ್ ರಾಕ್ ಕೆಫೆ’ (HRC) ಭಾರತಕ್ಕೆ ಗುಡ್‌ಬೈ ಹೇಳುತ್ತಿದೆ. ಭಾರತದಲ್ಲಿ ಈ ಕೆಫೆಗಳನ್ನು ನಡೆಸುತ್ತಿದ್ದ JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಜೊತೆಗಿನ ಒಪ್ಪಂದವನ್ನು ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಅಧಿಕೃತವಾಗಿ ಕೊನೆಗೊಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ ತನ್ನದೇ ಆಗಿರುವ ರುಚಿಯನ್ನು ಹಾಗೂ ವೈಶಿಷ್ಟವನ್ನು ಹೊಂದಿದ್ದ ಇದು, ಇದೀಗ ಬೆಂಗಳೂರಿಗರಿಗೆ ದೊಡ್ಡ ನಿರಾಶಿಯನ್ನು ಮೂಡಿಸಿದೆ. ಇನ್ನು ಈ ನಿರ್ಧಾರದಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿದ್ದ 10 ಕೆಫೆಗಳು…

Read More

SSLC ವಿದ್ಯಾರ್ಥಿಗಳೇ ಗಮನಿಸಿ: ಶಿಕ್ಷಣ ಇಲಾಖೆಯಿಂದ ಮಹತ್ವದ ಸಲಹೆ; ಇಲ್ಲಿದೆ ಮಾಹಿತಿ

ಬೆಂಗಳೂರು, ಮಾರ್ಚ್​​ 17: ನಾಳೆಯಿಂದ ರಾಜ್ಯಾದ್ಯಂತ ಎಸ್​ಎಸ್​ಎಲ್​​ಸಿ ಪರೀಕ್ಷೆ ಆರಂಭವಾಗಲಿದ್ದು, ಒಟ್ಟು 2871 ಕೇಂದ್ರಗಳಲ್ಲಿ ಎಕ್ಸಾಂ ನಡೆಯಲಿದೆ. ಈ ವರ್ಷ 9,02,889 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಆ ಪೈಕಿ 8,12,855 ಹೊಸಬರು ಪರೀಕ್ಷೆ ಬರೆಯಲಿದ್ದಾರೆ. 62,845 ರಿಪೀಟರ್ಸ್​ ಮತ್ತು 27,189 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕದ ಹಿನ್ನೆಲೆ ತಡೆಗೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಇರೋದೇನು? ಪರೀಕ್ಷಾ ಕೇಂದ್ರಗಳಲ್ಲಿ…

Read More

‘ಕೆಡಿ’ ಹಾಡಿನ ಪರ ವಹಿಸಿ ರಕ್ಷಿತಾ ಪೋಸ್ಟ್: ಬೇರೆ ಭಾಷೆ ಹಾಡುಗಳ ಉದಾಹರಣೆ

ಪ್ರೇಮ್ (prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ಕನ್ನಡದಲ್ಲಿ ಮಾತ್ರವೇ ಅಲ್ಲದೆ ಹಿಂದಿ ಸೇರಿದಂತೆ ಇನ್ನೂ ಹಲವು ಭಾಷೆಗಳಲ್ಲಿ ಸಿನಿಮಾದ ಹಾಡು ಬಿಡುಗಡೆ ಆಗಿದೆ. ಆದರೆ ಈ ಹಾಡಿನ ಸಾಹಿತ್ಯ ತೀರ ಅಶ್ಲೀಲವಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ದೆಹಲಿ, ಮುಂಬೈ ನಗರಗಳಲ್ಲಿ ಹಾಡಿನ ವಿರುದ್ಧ, ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡದ ಇತರೆ ಸದಸ್ಯರ ವಿರುದ್ಧ ದೂರುಗಳು ದಾಖಲಾಗಿವೆ. ಇದೀಗ ಪ್ರೇಮ್ ಅವರ ಪತ್ನಿ…

Read More

ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು? ಹೊರ ದೇಶಕ್ಕೆ ಎಷ್ಟು ರಫ್ತು ಆಗ್ತಿತ್ತು?

ಬೆಂಗಳೂರು, (ಮಾರ್ಚ್ 17): ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮೊಟ್ಟೆ ವ್ಯಾಪಾರಿಗಳಿಗೆ ಇದೀಗ ಸಂಕಷ್ಟ ಎದುರಾಗಿವೆ. ಯುದ್ಧದ ಪರಿಣಾಮ, ಗ್ಯಾಸ್ ದರ ಏರಿಕೆ, ಹಾಗೂ ರಂಜಾನ್ ಸಮಯದಲ್ಲಿ ಹೋಟೆಲ್‌ಗಳ ಕಾರ್ಯಾಚರಣೆ ಕಡಿಮೆಯಾಗಿರುವುದು ಮೊಟ್ಟೆ ಮಾರುಕಟ್ಟೆಗೆ ನೇರ ಹೊಡೆತ ನೀಡಿದೆ. ಇದರಿಂದ ಮೊಟ್ಟೆ ಬೇಡಿಕೆ ಕುಸಿತ ಕಂಡಿದ್ದು, ಮೊಟ್ಟೆಯ ದರ ಕುಸಿತವಾಗಿದೆ. ಇದರಿಂದ ವ್ಯಾಪಾರಸ್ಥರು ಆತಂಕದಲ್ಲಿ ಮುಳುಗಿದ್ದಾರೆ. ಇನ್ನು ಈ ಬಗ್ಗೆ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗರಾಜ್ ಅವರು ಟಿವಿ9 ಜೊತೆ ಮಾತನಾಡಿ, ಕೋಳಿ ಮೊಟ್ಟೆ ಬೆಳೆಯ…

Read More

IPL 2026: ಯಾರಾಗಲಿದ್ದಾರೆ SRH ತಂಡದ ಹೊಸ ನಾಯಕ?

IPL 2026: ಐಪಿಎಲ್​ 2026ರ ಆರಂಭಿಕ ಪಂದ್ಯಗಳಲ್ಲಿ ಸನ್​ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಅವರು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆರಂಭಿಕ ನಾಲ್ಕು ಪಂದ್ಯಗಳಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ. ಇತ್ತ ನಾಯಕತ್ವದ ರೇಸ್​ನಲ್ಲಿ ಯುವ ದಾಂಡಿಗರಿಬ್ಬರು ಮುಂಚೂಣಿಯಲ್ಲಿರುವುದು ವಿಶೇಷ. ಅವರೆಂದರೆ ಇಶಾನ್ ಕಿಶನ್ ಹಾಗೂ ಅಭಿಷೇಕ್ ಶರ್ಮಾ. ಇಶಾನ್ ಕಿಶನ್ ಈ ಹಿಂದೆ…

Read More